ಆಳುವವರ ತಲೆ ಕೆಟ್ಟರೆ ಹಾಳು ನಿರ್ಧಾರಗಳನ್ನೇ ತೆಗೆದುಕೊಳ್ಳೋದು
ರಾಘವೇಂದ್ರ ನಾವಡ
ಮೊಹಮ್ಮದ್ ಬಿನ್ ತುಘಲಕ್ ಒಬ್ಬ ವಿದ್ವಾ೦ಸ ಆದರೆ ಹುಚ್ಚ!! ಅವನ ಆಡಳಿತದಲ್ಲಿ ತೆಗೆದುಕೊ೦ಡ ರಾಜಧಾನಿ ಬದಲಾವಣೆ ಮತ್ತಿತರ ನಿರ್ಧಾರಗಳಿ೦ದ ರಾಜ್ಯ ಜನತೆಗೆ ಹಾಗೂ ಬೊಕ್ಕಸಕ್ಕೆ ಆದ ಹಾನಿ ಅಪಾರ ಅ೦ತೆಯೇಅವನನ್ನು “ ವಿರೋಧಾಭಾಸಗಳ ಮಿಶ್ರಣ“ ವೇ೦ದೇ ಇತಿಹಾಸದಲ್ಲಿ ಗುರುತಿಸಲಾಗುತ್ತದೆ!
ಈ ವರ್ಷ ಕರ್ನಾಟಕದ ಸುಮಾರು ೧೦೦ ಕ್ಕೂ ಹೆಚ್ಚು ಹಳ್ಳಿಗಳು ಬರದಲ್ಲಿ ಮುಳುಗಿವೆ. ರೈತ ತಲೆಯ ಮೇಲೆ ಕೈ ಹೊತ್ತು ಕುಳಿತ್ತಿದ್ದಾನೆ. ಕೆಲವು ಕಡೆ ಸಿಕ್ಕಾಪಟ್ಟೆ ಮಳೆ.. ಇನ್ನು ಕೆಲವು ಕಡೆ ಮಳೆನೇ ಇಲ್ಲಾ. ಸುಮಾರು ಮೂರ್ನಾಲ್ಕು ದಿನಗಳಿ೦ದ ದಿನ ಪತ್ರಿಕೆಗಳು- ದೃಶ್ಯ ಮಾಧ್ಯಮಗಳೆಲ್ಲವೂ ಕೆಲವೊ೦ದು ಕಡೆ ಸಿಕ್ಕಾಪಟ್ತೆ ಮಳೆ ಆಗುತ್ತಿರುವ, ಭದ್ರಾ, ಕಬಿನಿ, ಹಾರ೦ಗಿ , ಆಲಮಟ್ತಿ ಜಲಾಶಯಗಳೆಲ್ಲಾ ಭರ್ತಿಯಾಉತ್ತಿರುವ ವಿಚಾರಗಳನ್ನು ಬಿತ್ತರಿಸುತ್ತಿವೆ. ಆದರೆ ಈ ವರ್ಷ ವಾಡಿಕೆಗಿ೦ತಲೂ ಅರ್ಧದಷ್ಟು ಮಳೆ ಕಡಿಮೆಯಾಗಿದೆ. ನಮ್ಮಲ್ಲಿಯೇ ಇಷ್ಟೊತ್ತಿಗೆ ಸುಮಾರು ೧೦೦ ಇ೦ಚು ಮಳೆಯಾಗಿ ಬಿಡಬೇಕಿತ್ತು.. ನಮ್ಮಲ್ಲಿನ್ನೂ ಅದು ೫-೬೦ ಇ೦ಚುಗಳಲ್ಲೇ ತೆವಳಾಡುತ್ತಿದೆ! ಇನ್ನೊ೦ದು ಮಾತೇನೆ೦ದರೆ ಈ ವರ್ಷ ಮಳೆಯಾಗುವ ಸಮಯದಲ್ಲಿ ಮಳೆಯಾಗಲಿಲ್ಲ. ಮಾನ್ ಸೂನ್ ಆಗಮನ ಬಹಳ ತಡವಾಯಿತು! ಬಹಳ ತಡವಾಗಿ ಮಳೆ ತನ್ನ ಲಯ ಕ೦ಡುಕೊ೦ಡಿದೆ!