-ಮಧುಚಂದ್ರ ಭದ್ರಾವತಿ

ಆಗಸ್ಟ್ ೧೫ರ ಸಂಭ್ರಮ ನೋಡಿ ಏನಾದ್ರು ಬರೆಯಲೇ ಬೇಕೆನಿಸಿತು. ೧೪ನೆ ತಾರಿಖು ಮಧ್ಯರಾತ್ರಿ ೧೧.೫೯ ರಿಂದ ೧೨.೦೦ಗೆ ಸರಿಯಾಗಿ ಗಡಿಯಾರದ ಮುಳ್ಳು ತಿರುಗಿದಾಗ ಮನೆಯ ಹೊರಗೆ ಪಟಾಕಿ ಶಬ್ಧದ ಅಬ್ಬರ ಕೇಳಿಸಿತು. ಒಂದರ್ಥದಲ್ಲಿ ಭಾರತ ಯಾವುದಾದರು ಕ್ರೀಡೆಯಲ್ಲಿ(ಕೇವಲ ಕ್ರಿಕೆಟ್ ಮಾತ್ರ) ವಿಜಯಿ ಆದರೆ ಆಚರಿಸುವ ಪಟಾಕಿಯ ಸಂಭ್ರಮ ಅದು. ಭಾರತೀಯರಿಗೆ ಭಾರತೀಯತೆ ಅರಿವು ಮೂಡುವುದು ಎರಡು ಸಂದರ್ಭದಲ್ಲಿ ಮಾತ್ರ ಒಂದು ಸ್ವತಂತ್ರ ದಿವಸದಂದು ಮತ್ತೊಂದು ಕ್ರಿಕೆಟ್ನಲ್ಲಿ ಗೆದ್ದಾಗ ಬಿಟ್ಟರೆ, ಸತ್ – ಪ್ರಜೆಗಳು ಉಳಿದ ೩೬೩ ದಿನ ಬೇರೆಯವರ ಗುಲಾಮರಗಿರುತ್ತಾರೆ. ಒಂದೆಡೆ ಮಾಹಿತಿ ತಂತ್ರಜ್ಞಾನವೆಂಬ ಗುಲಾಮ ಗಿರಿಯಲ್ಲಿ ಜ್ಞಾನಿಗಳು ಮತ್ತೊಂದೆಡೆ ಗಣಿಗಾರಿಕೆ,ಬ್ರಷ್ಟಚಾರ,ಸ್ವಜನ ಪಕ್ಷಪಾತ ಹೆಸರಿನಲ್ಲಿ ಅಜ್ಞಾನಿಗಳು.ಇಂತಹವರನ್ನು ತನ್ನ ಮಡಿಲಲ್ಲಿಟ್ಟು ಸಲಹುತ್ತಿರುವ ಕರುಣಾ ಮಾಯಿ ಭಾರತ ಮಾತೆ ಎಷ್ಟು ದಿನ ಸಹಿಸಿಯಾಳು?
ಅಂದು ಒಂದೇ ಒಂದು ದಾಳಿಗೆ ಜಪಾನ್ , ಇರಾಕ್, ಜರ್ಮನಿಗಳು ನುಚ್ಚು ನೋರಾದವು. ಆದರೆ ಅಂದು ಅಲೆಗ್ಸಾಂಡರ್, ಘೋರಿ, ಘಜನಿ, ಮೊಘಲರು, ಪೋರ್ಚುಗೀಸರು, ಡಚ್ಚರು, ಆಂಗ್ಲರು, ಫ್ರೆಂಚರು ಹೀಗೆ ಸಾಲು ಸಾಲು ಕೊಳ್ಳೆ ಹೊಡೆದು ಲೂಟಿ ಮಾಡಿ ಭಾರತ ಮಾತೆಯನ್ನು ಬೆತ್ತಲಾಗಿಸುವ ಪ್ರಯತ್ನ ಮಾಡಿದರೂ , ಭಾರತಾಂಬೆ ಕರುಣಾಮಯಿ ಅವರನೆಲ್ಲ ತನ್ನ ಮಕ್ಕಳೆಂದು ಕ್ಷಮಿಸಿ ಶಾಂತಿಯ ಮಂತ್ರ ಭೋದಿಸಿ, ತಾನು ವಿಶ್ವಕ್ಕೆಲ್ಲ ಮಾದರಿಯಾದಳು. ಅದರೂ ಲೂಟಿ ಅಲ್ಲಿಗೆ ನಿಲ್ಲದೆ ರಾಜಕಾರಣ ಎಂಬ ನೀಚ ಧರ್ಮದ ತಳಹದಿಯಲ್ಲಿ ಪ್ರಜಾತಂತ್ರ ವ್ಯವಸ್ಥೆ ಎಂಬ ನೆಪವೊಡ್ಡಿ ಇಂದಿಗೋ ಅದೇ ಭಾರತ ಮಾತೆಯನ್ನು ಬೆತ್ತಲಾಗಿಸುವ ಪ್ರಯತ್ನ ನಡೆಯುತ್ತಲೇ ಇದೆ. ನಮ್ಮ ಧರ್ಮವೇ ಶ್ರೇಷ್ಟ ನಾವು ಮೇಲು , ನಮ್ಮವರಿಗಿಂತ ಮೇಲೆ ಯಾರು ಇಲ್ಲ , ಎಲ್ಲರು ನಮ್ಮ ಧರ್ಮವನ್ನು ಒಪ್ಪಿರಿ ಎಂದು ಸಾರಿ ಧರ್ಮದ ಹೆಸರಲ್ಲಿ ಭಯೋತ್ಪಾದನೆ ಎಂಬ ಅಸ್ತ್ರದಿಂದ ದೇಶವನ್ನು ಅಸ್ಥಿರಗೊಳಿಸುವ ಯತ್ನಗಳು ಒಂದೆಡೆಯಾದರೆ, ಸ್ವಜನ ಪಕ್ಷಪಾತ, ಬ್ರಷ್ಟಚಾರ, ಮರ್ಯಾದೆ ಹತ್ಯೆಗಳು, ವೋಟು ರಾಜಕಾರಣಗಳು ಮತ್ತೊಂದಡೆ.
Like this:
Like ಲೋಡ್ ಆಗುತ್ತಿದೆ...