ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 24, 2012

20

ಹೈದರಾಬಾದ್ ನಲ್ಲಿರುವ ಕನ್ನಡಿಗರೂ, ಬೆಂಗಳೂರಿನಲ್ಲಿರುವ ತೆಲುಗರೂ….

‍ನಿಲುಮೆ ಮೂಲಕ

– ಬಿಂದುಮಾಧವಿ ಪಿ

ಈಗ ನಾನು ಯಾವ ವಿಷಯದ ಬಗ್ಗೆ ಬರೆಯಲಿ? ಮೊದಲಿಗೆ ಕನ್ನಡ ಚಲನಚಿತ್ರಗಳು ಇತರ ರಾಜ್ಯಗಳಲ್ಲಿ ಭಿತ್ತರವಾಗದಿರುವ ಬಗ್ಗೆ ಬರೆಯಲೋ ಅಥವಾ, ಕೊನೆಗೂ ತೆಲುಗು ಚಿತ್ರಕ್ಕೇ ಶರಣಾಗಬೇಕಾದ ನನ್ನ ಸ್ಥಿತಿಯ ಬಗ್ಗೆ ಬರೆಯಲೋ?

ನೋಡಿ ನಮಗಂತೂ ನಮ್ಮ ದೇಶ ಭಾಷೇ ಎರಡರ ಮೇಲೂ ಅಪಾರ ಪ್ರೀತಿ. ಆದರೆ ಏನು ಮಾಡುವುದು? ಬೆಂಗಳೂರಿನಲ್ಲಿ ಎಲ್ಲ ಭಾಷೆಗಳೂ ಯಾರ ಹಂಗಿಲ್ಲದೆ, ರಾರಾಜಿಸುತ್ತಿರುತ್ತವೆ, ಆದರೆ, ಇತರ ರಾಜ್ಯಗಳಲ್ಲಿ, ಅದೂ ನೆರೆ ರಾಜ್ಯಗಳಲ್ಲೂ ನಮಗೆ ಕನ್ನಡದ ಇರುವಿಕೆ ಭೂತಗನ್ನಡಿ ಹಿಡಿದು ಹುಡುಕಿದರೂ ಸಿಗುವುದಿಲ್ಲ. ಏಕೆ ಹೀಗೆ?

ನಾವೂ ಹೈದರಾಬಾದಿಗೆ ಬಂದು ನಾಲ್ಕು ವರ್ಷಗಳಾಗುತ್ತಾ ಬಂತು. ಚಿತ್ರರಂಗದಲ್ಲಿ ಕನ್ನಡ ಚಿತ್ರ ನೋಡುವ ಆಸೆ ಬಿಡಿ, ಟಿವಿಯಲ್ಲಿ ಕನ್ನಡ ಚಾನಲ್ ಹುಡುಕೋಣವೆಂದರೆ, ಒಂದಾರೂ ಸಿಗಬೇಡವೆ? ಇಲ್ಲವೇ ಇಲ್ಲ.  ಹಾಗಂತ ಇಲ್ಲಿ ಕನ್ನಡಿಗರು ಇಲ್ಲವೆಂದಿಲ್ಲ. ನನಗೆ ಎಲ್ಲಿ ಹೋದರೂ ಕನ್ನಡಿಗರು ಸಿಗುತ್ತಿರುತ್ತಾರೆ. ನಮ್ಮ ಮಗಳ ಶಾಲೆಯಲ್ಲಿ ಪ್ರಾಂಶುಪಾಲರು ಕನ್ನಡಿಗರು, ಅವಳ ತರಗತಿಯ ಉಪಾಧ್ಯಾಯಿನಿ ಕನ್ನಡಿಗರು, ಇಲ್ಲಿ ವಿಧ್ಯಾರ್ಥಿಗಳಲ್ಲಿ ಕನ್ನಡಿಗರು ಯಾರು ಎಂದು ಕೇಳಿ ಅವರ ಪರಿಚಯವನ್ನೂ ಮಾಡಿಕೊಂಡು ಆಯಿತು. ಆದರೆ ಕನ್ನಡ ನ್ಯೂಸ್ ಪೇಪರ್ ಆಗಲಿ, ಕನ್ನಡದ ಪುಸ್ತಕಗಳಾಗಲಿ, ಕನ್ನಡದ CD ಗಳಾಗಲಿ ಇಲ್ಲಿ ದೊರಕುವುದಿಲ್ಲ. ಅದೇ ಬೆಂಗಳೂರಿನಲ್ಲಿ, ಅಲ್ಲಿ ಕೂಡ ಅನೇಕ ಪ್ರದೇಶಗಳಲ್ಲಿ ಕನ್ನಡ ಪೇಪರ್, ಕನ್ನಡ ಚಿತ್ರದ CD ಗಳು ದೊರಕುವುದಿಲ್ಲ!! ಆದರೆ ಇತರ ಭಾಷೆಯ ಪತ್ರಿಕೆಗಳು, cd ಗಳು, ಜನರು ಎಲ್ಲಾ ಸಿಗುತ್ತಾರೆ.

ನಮ್ಮ cable operator ಗೆ, ಒಂದಾರು ಕನ್ನಡ ಚಾನೆಲ್ ಕೊಡು ಇಲ್ಲದೇ ಹೋದರೆ ನಿನ್ನ connection ಬೇಡ ಎಂದಿದ್ದಕ್ಕೆ, ಸರಿ ಎಂದು ಕೊಟ್ಟ, ನಾವೂ ಈ ಟಿವಿ ಕನ್ನಡ, TV9 ಎಲ್ಲಾ ಬರುತ್ತಿದೆ ಎಂದು ನೋಡಿ, ಅವನಿಗೆ ಆ ತಿಂಗಳ ಹಣವನ್ನು ಪಾವತಿ ಮಾಡಿದೆವು. ಅವನು ಹೋಗಿ ಅರ್ಧ ಗಂಟೆಯಾಗಿಲ್ಲ ಮತ್ತೆ ಆ ಕನ್ನಡ ಚಾನೆಲ್ ಗಳು ಮಾಯ!!

ಸರಿ, ಇನ್ನೇನು ಮಾಡುವುದು? ಕೊನೆಗೆ RELIANCE DISH ನಲ್ಲಿ ಕನ್ನಡ ಪ್ಯಾಕೇಜ್ ತೆಗೆದುಕೊಂಡೆವು. ಅದು ಕೊಂಡ ತಕ್ಷಣ ಮನಸ್ಸಿಗೆ ನೆಮ್ಮದಿ ಸಿಕ್ಕಿತಾ? ಇಲ್ಲ. ಏಕೆಂದರೆ ನೀವು TV9 ನೋಡಿ, ಯಾವಾಗಲೂ ಆಂಧ್ರಪ್ರದೇಶದ ಸುದ್ದಿ, ತೆಲುಗು ಸಿನಿಮಾದ ಬಗ್ಗೆ ಗಂಟೆಗಟ್ಟಲೆ ಪ್ರಸಾರ. ಯಾರಿಗೆ ಬೇಕು ಈ ರೀತಿಯ ಕನ್ನಡ ಚಾನೆಲ್? ಅಷ್ಟು ಸಾಲದಕ್ಕೆ ಪರ ರಾಜ್ಯದಲ್ಲಿರುವ ಕನ್ನಡಿಗರ ಹೊಟ್ಟೆ ಉರಿಸಲು ಇವರು, ಬೆಂಗಳೂರಿನ ಚಿತ್ರಮಂದಿರಗಳಿಗೆ ಹೋಗಿ, ಅಲ್ಲಿ ತೆಲುಗು ಸಿನಿಮಾ ನೋಡಿ ಬಂದ ಜನರನ್ನು ಮಾತಾಡಿಸಿ, ಅಭಿಪ್ರಾಯ ಕೇಳುತ್ತಾರೆ. ಅವರು ಆ ಭಾಷೆಯ ಚಿತ್ರಗಳನ್ನು, ಆ ಹೀರೊಗಳನ್ನು ಹಾಡಿ ಹೊಗಳುತ್ತಾರೆ. ನಮಗೂ ಇಲ್ಲಿ ಅಂತ ಅವಕಾಶವಿದ್ದರೆ, ನಮಗೂ ಏನು ದು:ಖವಾಗುವುದಿಲ್ಲ. ಆದರೆ ಹಾಗಿಲ್ಲವಲ್ಲ. ಏನೋ ಎಂದೂ ಮಾಡಿರದಂತ ಈಗ, ರೋಬೋ ಅಂತ ಚಿತ್ರಗಳ ಬಗ್ಗೆ ಹೇಳಿದರೆ ಪರವಾಗಿಲ್ಲ, ಆದರೆ tv9 ನೋಡಿ, ಅವರು ’ದಮ್ಮು’, ’ಪಂಜಾ’ ಇನ್ನೂ ಹೀಗೆ ಇರೋ ಬರೋ ಎಲ್ಲಾ ತೆಲುಗು ಚಿತ್ರಗಳ ಬಗ್ಗೆ ಕೂಡ ಪ್ರೋಗ್ರಾಮ್ ಕೊಡುತ್ತಲೇ ಇರುತ್ತಾರೆ.

ನಮಗೆ ಇಲ್ಲಿ ಇಡೀ ಹೈದರಾಬಾದ್ ನಲ್ಲಿ ಒಂದು ಚಿತ್ರಮಂದಿರದಲ್ಲೂ ಕೂಡ ಒಂದು ದಿನಕ್ಕಾದರೂ ಒಂದು ವಾರಕ್ಕಾದರೂ ಒಂದು ಕನ್ನಡ ಚಿತ್ರ ನೋಡಲು ಸಿಗುವುದಿಲ್ಲ. ಪುನೀತ್ ರಾಜ್ ಕುಮಾರ್, ಉಪೆಂದ್ರ ನಿಮಗೆಲ್ಲಾ ನನ್ನ ಅಳಲು ಕೇಳುತ್ತಿದೆಯಾ? ಕನ್ನಡದ superhit ಚಿತ್ರಗಳೆಲ್ಲಾ ಇಲ್ಲಿ dub ಆಗಿ ಬರುತ್ತವೆ. ಹಾಗಾಗಿ ತೆಲುಗು ಜನಕ್ಕೆ ಏನೂ miss ಆಗುವುದಿಲ್ಲ.

ಹೀಗಾಗಿ ನನಗೆ ತೆಲುಗು ಚಿತ್ರಗಳನ್ನು ಚಿತ್ರಮಂದಿರಕ್ಕೆ ಹೋಗಿ ನೋಡಲು ಮನಸೇ ಒಪ್ಪುತ್ತಿರಲಿಲ್ಲ. ನಾನು ನೋಡಿದ ಮೊದಲ ತೆಲುಗು ಚಿತ್ರ ’ಶ್ರೀರಾಮ ರಾಜ್ಯಂ’ ನನ್ನ ನಾಲ್ಕು ವರ್ಷದ ಮಗಳಿಗೆ ಇಷ್ಟವಾಗಬಹುದೆಂದು. ಅವಳಿಗೆ ಲವಕುಶರು ಬಂದ ನಂತರ ಇಷ್ಟವಾಯಿತು. ಅದು ಬಿಟ್ಟರೆ, ಮೊನ್ನೆ ಅವಳ ಗೆಳತಿ, ಅನಘ ನಾನು ಈಗ ’ಈಗ’ ಚಿತ್ರಕ್ಕೆ ಹೋಗುತ್ತಿದೇನೆ, ನನ್ನ ಅಪ್ಪ ticket ತಂದಿದಾರೆ ಅಂತ ಹೇಳಿ ಹೋದಾಗ ಇವಳು ಅಳಲು ಶುರು ಮಾಡಿದಳು. ನಮ್ಮ ಮನೆ ಕೆಲಸದವಳು ಕೂಡ ’ಅನಘ ತೀಸ್ಕೊಂಡ್ ವೆಳ್ಳಂಡಿ’ ಎಂದು ಹೇಳುತ್ತಿದ್ದಳು. ಇಲ್ಲಿಗೆ ಬಂದು ನಾನೂ ತೆಲುಗು ಕಲಿತಿದ್ದೇನೆ, ಏಕೆಂದರೆ ಕೆಲಸವರಿಗಂತೂ ತೆಲುಗು ಬಿಟ್ಟು ಬೇರೆ ಭಾಷೆ ಬರುವುದಿಲ್ಲ, ಅದು ಬಿಡಿ ಅಕ್ಕ ಪಕ್ಕದಲ್ಲೂ ಯಾರೂ ಆಂಗ್ಲಭಾಷೆಯಲ್ಲಿ ಮಾತನಾಡುವುದಿಲ್ಲ. ಹಾಗಾಗಿ ತೆಲುಗು ಕಲಿಯಬೇಕು. ಬೆಂಗಳೂರಿನಲ್ಲಿ ಇಂತ ಪರಿಸ್ಥಿತಿಯೇ ಇಲ್ಲ. ನಮಗೆ ತೆಲುಗು ತಮಿಳು ಬರದಿದ್ದರೂ, ಇಂಗ್ಲಿಷ್, ಹಿಂದಿ ಬರುವುದರಿಂದ ತಕ್ಷಣ ಆ ಭಾಷೆಯಲ್ಲಿ ಉತ್ತರಿಸುತ್ತೇವೆ. ಆ ಭಾಷೆ ಬಂದರೂ ಬರದೇ ಇರುವತರ ನಟನೆ ಮಾಡಲು ನಮಗೆ ಬರುವುದಿಲ್ಲ. ನಮ್ಮ ಒಳ್ಳೆ ಬುದ್ದಿ, ನಮ್ಮ ಭಾಷೇಗೇ ಕಂಟಕವಾಗಿದೆ.

ಸರಿ, ಮಗಳು ಅತ್ತು ಕರೆದು ಮಾಡಿದ್ದರಿಂದ ನಾವು ಕೂಡ ಮಾರನೆ ದಿನವೇ ’ಈಗ’ ಚಿತ್ರಕ್ಕೆ ಹೋದೆವು. ಅವಳಂತೂ ಮನಸ್ಸಿಟ್ಟು ನೋಡಲಿಲ್ಲ. ನಮಗಂತೂ ನಮ್ಮ ಸುದೀಪನ ನಟನೆ ಮೋಡಿ ಮಾಡಿತು. The success of Ega film is niether because of story, nor because of concept, but because of Sudeep, our Sudeep 🙂

ನಾವು ಬೆಂಗಳೂರಿನಲ್ಲಿರುವ ಪರಭಾಷಿಗರನ್ನೂ ಇಲ್ಲಿರುವ ಪರಭಾಷಿಗರನ್ನೂ ತಾಳೆ ಹಾಕಿ ನೋಡುತ್ತಿದ್ದರೆ, ಒಂದು ದಿನವೂ ನೆಮ್ಮದಿ ಸಿಗುವುದಿಲ್ಲ. ಆದರೆ ಬೆಂಗಳೂರಿನಲ್ಲಿ ಸಿಗದ ಆತ್ಮೀಯತೆ ಇಲ್ಲಿ ಸಿಕ್ಕಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಿಂದು ನೀನು ಮಾತ್ರ ತೆಲುಗು ಕಲಿತು ಬಿಟ್ಟೆ, ನಮಗೆ ಕನ್ನಡ ಕಲಿಸಲಿಲ್ಲ ಎಂದು ಹೇಳುತ್ತಾರೆ, ನಾನು ನೀವು ಕನ್ನಡ ಕಲಿಯುವುದಾದರೆ, ಒಬ್ಬೊಬ್ಬರಿಗೂ ಸ್ಪೆಷಲ್ ಕ್ಲಾಸ್ ತೆಗೆದುಕೊಂಡು ಕಲಿಸುತ್ತೇನೆ ಉಚಿತವಾಗಿ, ನೀವು ಅರ್ಧರಾತ್ರಿಯಲ್ಲಿ ಬಂದು ಪಾಠ ಮಾಡು ಎಂದರೂ ನಾನು ರೆಡಿ ಎಂದು ಹೇಳೀದ್ದೇನೆ.

ನಮ್ಮ ಪಕ್ಕದ ಮನೆಯ ಚಿಕ್ಕ ಹುಡುಗಿ, ಆಂಟಿ ನಿಮಗೆ ಸುದೀಪ್ ಗೊತ್ತಂತೆ ಹೌದಾ ಎಂದು ಕೇಳಿದಳು, ನಾನೇನೋ ಸುದೀಪ್ ನನ್ನ ಆಪ್ತ ಮಿತ್ರನಂತೆ, ’ಹೌದು ನನಗೆ ಸುದೀಪ್ ಗೊತ್ತು, ಅವರು ಮಾತಾಡುವುದೂ ಕನ್ನಡ, ನನ್ನ ಭಾಷೆಯೂ ಕನ್ನಡ, ನಾನೂ ಅವರು ಹುಟ್ಟಿದ್ದು ಕೂಡ ಒಂದೇ ಊರು, ಶಿವಮೊಗ್ಗ ಅಂತ’ ಎಂದು ಹೇಳಿದೆ, ನನ್ನ beginner ತೆಲುಗು, ಅವಳಿಗೆ ಎಷ್ಟರ ಮಟ್ಟಿಗೆ ಅರ್ಥವಾಯಿತೋ ಗೊತ್ತಿಲ್ಲ. ಇಷ್ಟಕ್ಕೇ ಹೆಮ್ಮೆ ಪಟ್ಟ ನಾನು, ಇನ್ನು ಕನ್ನಡ ಚಿತ್ರ ಹೈದರಾಬಾದ್ ನಲ್ಲೂ ಓಡಿ, ಜನ ಕನ್ನಡ ಚಿತ್ರ ನೋಡಿ ಬಂದು ಹೊಗಳಿದರೆ, ನಾನು ಎಷ್ಟು ಉಬ್ಬಿ ಹೋಗಬಹುದು? ಅದೇನೂ ಅಸಾಧ್ಯವಲ್ಲ, ಬೆಂಗಳೂರಿನಲ್ಲಿರುವ ತೆಲುಗರಿಗೆ, ತಮಿಳರಿಗೆ ಅದು ದಿನ ನಿತ್ಯದ ಅನುಭವ ಅಲ್ಲವೇ?

ಚಿತ್ರ ಕೃಪೆ : ಗಾಂಚಲಿ ಬಿಡಿ ಕನ್ನಡ ಮಾತಾಡಿ

20 ಟಿಪ್ಪಣಿಗಳು Post a comment
 1. Supreeth
  ಆಗಸ್ಟ್ 24 2012

  Nice article. I had planned to write about this topic over this weekend 🙂 Now i’m skeptical what to do 🙂

  ಉತ್ತರ
 2. ಆಗಸ್ಟ್ 24 2012

  Thank you Supreet, first of all I am so happy to see my first article in Nilume, above that your comment is like double dhamaka, I am so happy Thanks for reading and posting comment.

  ಉತ್ತರ
 3. Santhosh Gowda
  ಆಗಸ್ಟ್ 24 2012

  good article….
  what u are expressing is true fact…myself also experiencing same thing with kannada films. our producers, at the time of film release they use to tell we are release in America & world wide but not able to release in neighbor states (& also in North Karnataka).
  I am lucky enough to getting Kannada paper prajavani and Sudha magzine in my place

  ಉತ್ತರ
  • ಆಗಸ್ಟ್ 24 2012

   Yes Santhosh, you must be near some border city, so you might be getting Kannada paper. Even in Bangalore if you look for newspapers near Old airport road, Marathhalli, you dont find Kannada paper!!

   ಉತ್ತರ
 4. geethaprasanna
  ಆಗಸ್ಟ್ 24 2012

  channagi bareddiddiya ,vastustithi hageye ide

  ಉತ್ತರ
 5. PRAKASH
  ಆಗಸ್ಟ್ 24 2012

  Very good article on present situation.
  Prakash KN Bhatta, Somavarasanthe.

  ಉತ್ತರ
  • ಆಗಸ್ಟ್ 24 2012

   ಧನ್ಯವಾದಗಳು ಪ್ರಕಾಶ್ ಮಾಮ , ನನ್ನ ಬರಹ ಓದಿದ್ದಕ್ಕೆ 🙂

   ಉತ್ತರ
 6. ಆಗಸ್ಟ್ 24 2012

  ಈ ಕನ್ನಡ ಚಿತ್ರರಂಗದ ಮಂದಿಗೆ ಮಾರ್ಕೆಟಿಂಗ್ ಅನ್ನೋದೆ ಗೊತ್ತಿಲ್ಲ. ಇನ್ನು ನ್ಯೂಸ್ ಚಾನೆಲ್ಗಳಿಗೆ ನಾವು ಬೈಯ್ದು ಸಾಕಾಗಿ ಹೋಗಿದೆ.ತಿದ್ದಿಕೊಳ್ಳೋ ಪೈಕಿ ಇವರಲ್ಲ ಬಿಡಿ.

  ಬೇರೆ ಭಾಷೆ ಮಾತಾಡೋ ನಮ್ಮ ತೆವಲಿಗೋ ಅಥವಾ ಅತಿಯಾದ ಒಳ್ಳೆತನಕ್ಕೋ ನಮಗೇ ಈ ಸ್ಥಿತಿ ಬಂದಿದೆ. ಲೇಖನ ಚೆನ್ನಾಗಿದೆ. ಹೀಗೆ ಬರೆಯುತ್ತಿರಿ

  ಉತ್ತರ
  • Bindu
   ಆಗಸ್ಟ್ 25 2012

   ರಾಕೇಶ್ ಶೆಟ್ಟಿಯವರೇ ನಿಮ್ಮೆಲ್ಲರ ಪ್ರತಿಕ್ರಿಯೆಯಿಂದ ನನಗಂತೂ ವಾರಕ್ಕೊಂದು ಲೇಖನ ಬರೆಯುವಷ್ಟು ಹುರುಪು ಬಂದಿದೆ. ಧನ್ಯವಾದಗಳು

   ಉತ್ತರ
 7. Dinesh Madiwala
  ಆಗಸ್ಟ್ 25 2012

  Hi Bindu Madam. Really you are correct. Namma olle thana namage Kantaka. Kannadiga speak all languages. But all are not ready to speak Kannada. If they knows Kannada also. In Bangalore also other languages shows their presence. I am staying in Bangalore alone. So at home I come and stand in my coridor I am hearing only Tamil (neighbours all tamilians). In office English. If I went market they speak Telugu. If I go Near to my home Bakery or Provisional store they speak Malayalam. No Kannada any where. Totally karnatakadha Rajadhani bangalore nalli Kannada illa madam.

  ಉತ್ತರ
  • Bindu
   ಆಗಸ್ಟ್ 25 2012

   @Dinesh Madiwala

   ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ನಾವು ಶಿರಸಾ ವಹಿಸಿ ಪಾಲಿಸುತ್ತಿದ್ದೇವೆ ಆದರೆ ಅದೇ ಜನ್ಮ ಕೊಟ್ಟ ತಾಯಿಗೆ ಸಂಕಟ ಒದಗಿ ಬಂದಾಗ ಸೆಡ್ಡು ಹೊಡೆದು ನಿಲ್ಲುವ ಧೈರ್ಯ ಸ್ಥೈರ್ಯ ನಮಗೆ ಬರಲಿಲ್ಲ.

   ನಿಮಗೆ ಆದಂತಹ ಅನುಭವಗಳು ನನಗೆ ಕೂಡ ಬೆಂಗಳೂರಿನಲ್ಲಿ ಆಗಿದೆ. ಬೆಂಗಳೂರಿನಲ್ಲಿ ಕನ್ನಡವಿಲ್ಲ ಎಂದು ಕೊರಗುವುದಕ್ಕಿಂತ ಹೈದರಾಬಾದ್ನಲ್ಲಿ ಕನ್ನಡವಿಲ್ಲ ಎಂದು ಕೊರಗುವುದು ಎಷ್ಟೋ ವಾಸಿ. ಇದೇನು ಕರ್ನಾಟಕ ಅಲ್ಲವಲ್ಲ ಎಂದಾದರೂ ಸಮಾಧಾನ ತಂದು ಕೊಳ್ಳಬಹುದು.

   ಉತ್ತರ
 8. rajuvinay
  ಆಗಸ್ಟ್ 25 2012

  ನಾವು ಕನ್ನಡಿಗರು ಎಂತಾ ದಡ್ಡರು, ಎನ್ನುವುದಕ್ಕೆ ನಿಮ್ಮ ಲೇಖನವೇ ಸಾಕ್ಷಿ. ನಾವು ಎಲ್ಲವನ್ನು ಒಪ್ಪಿಕೊಳ್ಳುತ್ತೇವೆ. ಧಿಕ್ಕರಿಸುವ ಧೈರ್ಯವಂತೂ ಇಲ್ಲವೇ ಇಲ್ಲ. ನಮ್ಮ ಕಣ್ಣ ಮುಂದೆನೇ ಕನ್ನಡ ಅಕ್ಷರಗಳು ತಪ್ಪು ತಪ್ಪುಗಳಾಗಿದ್ದರೂ ಸಹ ಸುಮ್ಮನೆ ನೋಡ್ತಾನೇ ಇರ್ತೇವೆ.
  ನಮ್ಮ ಕರ್ನಾಟಕದಲ್ಲಿ ಅರ್ಧದಷ್ಟು ಜನ ಪರಭಾಷಿಕರು ವಲಸೆ ಬರುತ್ತಿದ್ದರೂ ಬಾಡಿಗೆಯ ಆಸೆಗೆ, ದುಬಾರಿ ಜಮೀನು ಮಾರಾಟದ ಆಸೆಗೆ ಸ್ವಾಗತಿಸಿ, ರತ್ನಗಂಬಳಿ ಹಾಸಿ ಕೊಟ್ಟು ನಾವು ಬೀದಿಯಲ್ಲಿ ಚಾಪೆಯ ಮೇಲೆ ಮಲಗುವ ಸ್ಥಿತಿಯಲ್ಲಿ ನಾವಿದ್ದೇವೆ.
  ನಾವು ಕನ್ನಡಿಗರು ಕನ್ನಡ ಮಾತಾನಾಡುವುದಿಲ್ಲ. ಬದಲಿಗೆ ಪರಭಾಷಿಕರ ಭಾಷೆಯನ್ನೇ ಕಲಿತಿಕೊಂಡು ಕೊನೆಯವರೆವಿಗೂ ಅವರಿಗೆ ಕನ್ನಡವನ್ನೇ ಕಲಿಸುವುದಿಲ್ಲ. ಇದು ನಮ್ಮ ಔದಾರ್ಯವಾ?? ಇಲ್ಲ ಮುಠ್ಠಾಳತನ.

  ಕನ್ನಡಿಗರು ಇಂದು ಪರಭಾಷಿಕರ ಮುಂದೆ ಕೈಕಟ್ಟಿ ಕೆಲಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

  ಮುಂದೊಂದು ದಿನ :
  ಮೊದಲು ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಭಾಷೆ ಶೇಕಡ 20ರ ಗಡಿಗೆ ತಂದು ನಿಲ್ಲುವ ದಿನಗಳು ದೂರವಿಲ್ಲ.

  “ಕನ್ನಡ ಪರ ಸಂಘಟನೆಗಳು, ಹೋರಾಟಗಾರರು ಆಗಾಗ ಎದ್ದು, ಮಲಗುತ್ತಾರೆ”

  ನಮ್ಮ ವಾಹಿನಿಗಳೋ “ಕನ್ನಡವನ್ನು ಹಂತ ಹಂತವಾಗಿ ನೇಣಿಗೆ ಹಾಕುತ್ತಿವೆ.”

  ಯಾರಿಗೆ ಹೇಳೋದು ಹೀಗೇನೇ ಸಮಾಧಾನ ಪಟ್ಟುಕೊಳ್ಳುತ್ತಾ ಜೀವನ ನಡೆಸೋದು.
  ಬೆಂಗಳೂರನ್ನು “ತಮಿಳುನಾಡಿಗೆ ಸೇರಿಸಿ” ಎಂಬ ಕೂಗು, “ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನು ಮಾಡಿ” ಎಂಬ ಕೂಗು.. ಈ ಎರಡು ಕೂಗುಗಳಲ್ಲಿ ಒಂದಾಗುವುದರಲ್ಲಿ ಸಂದೇಹವೇ ಇಲ್ಲ.

  “ನಾವು ಮಾತ್ರ “ಜೈ ಭುವನೇಶ್ವರಿ” “ಸಿರಿಗನ್ನಡಂ ಗೆಲ್ಗೆ” “ಸಿರಿಗನ್ನಡಂ ಬಾಳ್ಗೆ” ಅಂತ ಹೇಳ್ತಾನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡು ಖುಷಿ ಪಡುತ್ತೇವೆ.
  ———ರಾಜು ವಿನಯ್ ದಾವಣಗೆರೆ.

  ಉತ್ತರ
  • ಆಗಸ್ಟ್ 25 2012

   ತುಂಬಾ ಸರಿಯಾಗಿ ಹೇಳಿದಿರಿ ವಿನಯ್ ಅವರೇ. ನಾವುಗಳು ಪ್ರತಿಯೊಬ್ಬರೂ ಕರ್ನಾಟಕದಲ್ಲಿ ಕನ್ನಡದಲ್ಲೇ ಮಾತನಾಡುತ್ತೇವೆ ಎಂಬ ನಿರ್ಧಾರ ಮಾಡಬೇಕು. ಬೇರೆಯವರು ಏನು ಮಾಡದಿದ್ದರೂ ನಾವು ನಮ್ಮ ಅಳಿಲು ಸೇವೆಯನ್ನು ಮಾಡುತ್ತಾ ಇರಬೇಕು.

   ಉತ್ತರ
 9. makara
  ಆಗಸ್ಟ್ 26 2012

  . ಬಿಂಧುಮಾಧವಿಯವರೆ,
  ಬಹಳ ಚೆನ್ನಾಗಿ ಕರ್ನಾಟಕದ ಬೆಂಗಳೂರು ಹಾಗೂ ಆಂಧ್ರ ಪ್ರದೇಶದ ಕನ್ನಡಿಗರ ಬಗ್ಗೆ ಬರೆದಿದ್ದೀರ. ಇದಕ್ಕೆಲ್ಲಾ ಕಾರಣ ಕನ್ನಡಿಗರ ಬಹುಭಾಷಾಪ್ರಿಯತೆ ಮತ್ತು ದಿವ್ಯ ನಿರ್ಲಕ್ಷ ಮತ್ತು ನಿರಭಿಮಾನವೇ ಕಾರಣ. ಹೋಗಲಿ ಕನ್ನಡಿಗರೂ ಕನ್ನಡ ಮಾತನಾಡಲು ಹಿಂದೇಟು ಹಾಕುತ್ತಾರೆ. ಯಾರಾದರೂ ಇಬ್ಬರು ಕನ್ನಡಿಗರು ಒಂದೆಡೆ ಸೇರಿದರೆ ಅವರು ಇಂಗ್ಲೀಷ್/ಹಿಂದಿಯಲ್ಲಿ ಮಾತನಾಡಿಕೊಳ್ಳುತ್ತಾರೆ; ಆದರೆ ಬೇರೆ ಭಾಷೆಯವರ ವಿಷಯದಲ್ಲಿ ಹಾಗಲ್ಲ.
  ನಾನೂ ಈಗ ಹೈದರಾಬಾದಿನಲ್ಲಿ ಸ್ಥಿರಗೊಂಡು ೬-೭ ವರ್ಷಗಳಾದವು. ಇಲ್ಲಿಗೆ ಬಂದಾಗ ಹೊಸದರಲ್ಲಿ ನಮ್ಮ ಪಕ್ಕದ ಮನೆಯಾಕೆ ಅವರ ಅಜ್ಜಿಯ ತೌರುಮನೆ ಕರ್ನಾಟಕವಂತೆ ಹಾಗಾಗಿ ತನಗೆ ಕನ್ನಡ ಕಲಿಸಿ ಕೇಳಿದಳು. ಆಗ ನಮ್ಮಾಕೆ ಅವಳಿಗೆ ಇಬ್ಬರು ಮಕ್ಕಳಿದ್ದಾರೆ, ಅದನ್ನು ನೋಡಿ “ನೀಕು ಇದ್ದರು ಪಿಲ್ಲಲುನ್ನಾರು ಗಾ ಇಂಕ ನೇನು ನೀಕು ಕನಡಮು ನೇರ್ಪಾಲಾ” ಎಂದು ತಮಾಷೆ ಮಾಡಿದಳು. (ನಿನಗೆ ಇಬ್ಬರು ಮಕ್ಕಳಿದ್ದಾರಲ್ಲ ಇನ್ನು ನಾನು ನಿನಗೆ ಕನಡಮು (ತೆಲುಗಿನಲ್ಲಿ ಹೆರುವುದು) ಹೇಳಿಕೊಡಬೇಕಾ?” ಎಂದು ತಮಾಷೆ ಮಾಡಿದಳು. ಅದಕ್ಕೆ ಆಕೆ ಒಂದು ರೀತಿ ವಿಚಿತ್ರವಾಗಿ ನಕ್ಕು ಮತ್ತೆ ಕನ್ನಡದ ಸಹವಾಸಕ್ಕೆ ಬಂದರೆ ಕೇಳಿ. ಹೀಗಿದೆ ನಮ್ಮ ಕನ್ನಡಾಭಿಮಾನ :((

  ಉತ್ತರ
  • ಆಗಸ್ಟ್ 26 2012

   ಏನೆಂದು ಹೇಳಲಿ ಮಕರ ಅವರೇ!! ನಾನು ಒಮ್ಮೆ ಬೆಳಗಾಂ ಗೆ ಹೋಗಿದ್ದಾಗ ನನಗೆ ಮರಾಠಿ ಬರುತ್ತಿರಲಿಲ್ಲ, ನನ್ನ ಗೆಳತಿಯ ಸಹಾಯದಿಂದ ನಾನು ಬಸ್ ಹಿಡಿದು ಹತ್ತಿ ಬರಬೇಕಾಯಿತು. ಅವರೆಲ್ಲಾ ಮರಾಠಿ ಕಲಿತು ಮಾತಾಡುವುದರಿಂದ ವ್ಯಾಪಾರಿಗಳು ಕೂಡ ಗ್ರಾಹಕನಿಗಾಗಿ ಕೂಡ ಕನ್ನಡ ಮಾತಾಡುವುದಿಲ್ಲ.

   ಏನೋ ನಮ್ಮ ಅಪಾರ್ಟ್ ಮೆಂಟ್ ನಲ್ಲಿ ನನ್ನ ಮಕ್ಕಳ ಗೆಳತಿಯರಿಗೆ ಈಗ ಅಲ್ಪ ಸ್ವಲ್ಪ ಕನ್ನಡ ಬರುತ್ತದೆ. ಅದೇ ನನಗೆ ಖುಷಿ.

   ಆದರೆ ನನ್ನ ಮಗಳು ಕೇವಲ ಕನ್ನಡ ತೆಲುಗು ಕಲಿತರೆ, ಬೆಂಗಳೂರಿಗೆ ವರ್ಗವಾದರೆ ನಿಭಾಯಿಸುವುದು ಹೇಗೆ ಎಂದು ಈಗ ಅವಳೊಡನೆ english, hindi ಯಲ್ಲಿ ಮಾತಾಡುತ್ತ್ತಿದ್ದೇನೆ!!

   ಉತ್ತರ
 10. Hypocrite
  ಆಗಸ್ಟ್ 27 2012

  “ಆದರೆ ನನ್ನ ಮಗಳು ಕೇವಲ ಕನ್ನಡ ತೆಲುಗು ಕಲಿತರೆ, ಬೆಂಗಳೂರಿಗೆ ವರ್ಗವಾದರೆ ನಿಭಾಯಿಸುವುದು ಹೇಗೆ ಎಂದು ಈಗ ಅವಳೊಡನೆ english, hindi ಯಲ್ಲಿ ಮಾತಾಡುತ್ತ್ತಿದ್ದೇನೆ!!”

  😀 !

  ಉತ್ತರ
 11. BLAM
  ಜುಲೈ 15 2016

  ​​
  ​ಬಿಂದುಮಾಧವಿಯವರಿಗೆ ನಮಸ್ಕಾರಗಳು.

  ಕನ್ನಡ ಚಲನಚಿತ್ರಗಳು, ನ್ಯೂಸ್ ಪೇಪರ್, ಪುಸ್ತಕಗಳು ಅಥವಾ CD ಗಳನ್ನು ವ್ಯಾಪಾರದ ದೃಷ್ಟಿಯಿಂದ ನೋಡಬೇಕೇ ಹೊರತು ಭಾವನಾತ್ಮಕ ವಿಷಯವನ್ನಾಗಿ ಏಕೆ ಮಾಡಿಕೊಳ್ಳಬೇಕು ?
  ಕರ್ಣಾಟಕದಲ್ಲಿರುವ ಕನ್ನಡಿಗರು ಎಲ್ಲಾ ಕನ್ನಡ ಚಲನಚಿತ್ರಗಳನ್ನು ಸೂಪರ್ ಹಿಟ್ ಮಾಡುತ್ತಿದ್ದಾರೆಯೇ ? ಎಲ್ಲಾ ಪುಸ್ತಕಗಳು ವಾರಕ್ಕೊಮ್ಮೆ ಮರುಮುದ್ರಣಕ್ಕೊಳಗಾಗುತ್ತಿವೆಯೇ ? ಕನ್ನಡ ವೃತ್ತ ಪತ್ರಿಕೆಗಳು ಮತ್ತು ಸಿಡಿ ಮಾರಾಟ ವಿಶ್ವದಾಖಲೆಯನ್ನು ಸ್ಥಾಪಿಸಿದಿವೆಯೇ ? ​ಉತ್ತರ, “ಇಲ್ಲ”ವಾಗಿರುವಾಗ ಹೈದರಾಬಾದನ್ನು ದೂಷಿಸುವುದು ಸರಿಯೇ ?

  ಮೊದಲನೆಯದಾಗಿ, 2016 ಮತ್ತು 2015ರಲ್ಲಿ ಹೈದರಾಬಾದ್ ನಲ್ಲಿ ತೆರೆ ಕಂಡ ಕನ್ನಡ ಚಲನಚಿತ್ರಗಳ ಪಟ್ಟಿ ಹೀಗಿದೆ:

  U Turn Kannada movie @Prasads, daily 9.15 am from 28th May
  Tithi Kannada Movie @PVR Sujana mall Kukkatpally, daily 2.50 pm frOm 13th May.
  Chakrvyuha Kannada movie @Prasad & PVR Inorbit Mall, Hitechcity daily 5 pm show from 29th April
  Chakrvyuha @Prasad multiplex, 9 am show on 30th Apr(Saturday) & 1st May(Sunday)
  Shivalinga @PVR Sujana mall Kukkatpalli, daily 5.30pm from 12th Feb Friday
  Shivalinga @Prasad multiplex, 9 am on 13th, 14th & 16th Feb,
  Master Piece @Sujana Mall Kukkatpalli, daily 1.10pm 25th &26th Dec
  Master Peice @Prasad (2nd & 3rd Jan 8.45 am)
  Rangi Taranga @PVR Sujana Mall kukkatpally, 4th & 5th 4th & 5th Sept at 2pm
  Buguri @Prasad 5th & 6th sept
  Vajrakaaya @Hyd-Prasad – 13 & 14th June at 9 am
  Ranna @Prasad 6 & 7th June at 10 am
  Mr & Mrs.Ramachary @Hyderabad Prasad Multiplex. Shows at 9.0am on 9th & 10th May (Sat & Sunday)
  Rana Vikrama kannada movie @Prasad multiplx on 11th & 12th (Sat & Sunday) at 9am

  ಈ ಪಟ್ಟಿಯಲ್ಲಿರುವ ಅನೇಕ ಚಿತ್ರಗಳು, ಎರಡು ವಾರಗಳು ಅಥವಾ ಅದಕ್ಕಿಂತ ಹೆಚ್ಚು ಪ್ರದರ್ಶನಗಳನ್ನು ಕಂಡಿವೆ. ನಾನಿಲ್ಲಿ ಕೊಟ್ಟಿರುವುದು ಬರೀ ಮಲ್ಟಿಪ್ಲೆಕ್ಸ್ ಗಳ ಪಟ್ಟಿ ಮಾತ್ರ. ಹಲವಾರು ಚಿತ್ರಮಂದಿರಗಳಲ್ಲಿ ಕನ್ನಡದ ಹಿಟ್ ಚಿತ್ರಗಳು ಆಗಾಗ ಪ್ರದರ್ಶನಗೊಳ್ಳುತ್ತಲೇ ಇರುತ್ತವೆ. 2007 ರಿಂದ ನಾನು ಹಲವಾರು ಕನ್ನಡ ಚಿತ್ರಗಳನ್ನು ನೋಡಿದ್ದೇನೆ. ಇಷ್ಟರಲ್ಲೇ ಕಲ್ಪನಾ-2, ನನ್ನ ನಿನ್ನ ಪ್ರೇಮಕಥೆ, ಭುಜಂಗ, ಕಬೀರ, ಇತ್ಯಾದಿ ಚಿತ್ರಗಳು ತೆರೆಕಾಣಲಿವೆ.

  ಎರಡನೆಯದಾಗಿ, ಕನ್ನಡದ ವೃತ್ತಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಹೈದರಾಬಾದಿನ ಎಲ್ಲಾ ಕಡೆ ಏಕೆ ಸಿಗುವುದಿಲ್ಲ ಅಂತ ನೀವು ನಿಮಗೆ ಇಷ್ಟವಾದ ಪತ್ರಿಕೆಯ ಸಂಪಾದಕರಿಗೆ ನೇರವಾಗಿ ಕೇಳುವುದು ಒಳಿತು. ಕಾಚಿಗುಡ, ಬಂಜಾರ ಹಿಲ್ಸ್ ಮುಂತಾದ ಪ್ರದೇಶಗಳಲ್ಲಿ ಕನ್ನಡದ ಪತ್ರಿಕೆಗಳನ್ನು ನಾನು ನೋಡಿದ್ದೇನೆ.

  ಮೂರನೆಯದಾಗಿ, ಪುಸ್ತಕಗಳು ಅಥವಾ CD ಗಳ ಲಭ್ಯತೆ, ಅವುಗಳ ಮಾರಾಟಗಾರರ ಮೇಲೆ ಅವಲಂಬಿಸಿರುತ್ತದಲ್ಲವೇ ?

  ಇನ್ನು ಕೇಬಲ್ ಟಿವಿಯಲ್ಲಿ ಕನ್ನಡವಾಹಿನಿಗಳ ಪ್ರಸಾರದ ವಿಷಯ. ಇದು ಕೂಡ ಲಾಭ ನಷ್ಟದ ಲೆಕ್ಕಾಚಾರ. ಡಿಟಿಎಚ್ ನಿಂದಾಗಿ ಸಣ್ಣ ಪುಟ್ಟ ಕೇಬಲ್ ಟಿವಿ ಆಪರೇಟರ್ ಗಳು ಒಬ್ಬೊಬ್ಬರಾಗಿ ಮುಚ್ಚಿಹೋಗುತ್ತಿದ್ದಾರೆ. ಅವರ ಜಾಗದಲ್ಲಿ ದೈತ್ಯ ಸಂಸ್ಥೆಗಳು ಬಂದು ಕೂತಿವೆ. ಹಾಗಾಗಿ ಈ ಮುಂಚೆ ಬರುತ್ತಿದ್ದ ಕನ್ನಡದ ಚಾನೆಲ್ ಗಳ ಸಂಖ್ಯೆ ಕಡಿಮೆಯಾಗಿದೆ. ಒಂದೆರಡು ಚಾನೆಲ್ ಗಳಿಗೆ ಚೌಕಾಶಿ ಮಾಡುತ್ತಾ ಕೂತರೆ ಡಿಟಿಎಚ್ ನಲ್ಲಿ ಸಿಗುವ ಹಲವಾರು ಕನ್ನಡ ಚಾನೆಲ್ ಗಳನ್ನು ತಪ್ಪಿಸಿಕೊಳ್ಳುತ್ತೇವೆಯಲ್ಲವೇ ?

  ನಾಲ್ಕನೆಯದಾಗಿ, ಹೈದರಾಬಾದಿನಲ್ಲಿ ಕನ್ನಡ ಸಮಾರಂಭಗಳು ಆಗಾಗ ನಡೆಯುತ್ತಿರುತ್ತವೆ. ಕರ್ನಾಟಕ ಸಾಹಿತ್ಯ ಮಂದಿರವು 80 ವರ್ಷಗಳನ್ನು ಪೂರೈಸಿರುವುದು ಕೂಡ ಹೆಮ್ಮೆಯ ವಿಷಯವೇ. ಅದರ ವಿಳಾಸ:

  ಕರ್ನಾಟಕ ಸಾಹಿತ್ಯ ಮಂದಿರ
  # 3-4-168, Sahitya Mandira Road,
  Lingampalli, Kachiguda, HYDERABAD 500 027
  Website :- http://sahityamandira.in/
  Email :- sahityamandira@gmail.com

  ಸೋಷಿಯಲ್ ಮೀಡಿಯಾದಲ್ಲಿ:
  1. http://www.meetup.com/HyderabadKannadigas-Meetup-KSM/
  2. https://www.facebook.com/KSM80thYear

  ಹೈದರಾಬಾದ್ ಕನ್ನಡಿಗರ ಗುಂಪಿನ ಈ-ಮೇಲ್ hyderabadkannadigaru@gmail.com ಗೆ ಒಂದು ಪರಿಚಯದ ಈ-ಮೇಲ್ ಕಳುಹಿಸಿ. ಆಗಾಗ ಕೆಲವು ಮಾಹಿತಿಗಳು ಸಿಗುತ್ತಿರುತ್ತದೆ.
  ಫೇಸ್ ಬುಕ್ ಗ್ರೂಪ್ ನ ವಿಳಾಸ: https://www.facebook.com/groups/594888420547907/

  ಹೈದರಾಬಾದ್ ಅನ್ನುವುದು ಒಂದು ಜಾತ್ರೆಯಂತೆ. ಇಲ್ಲಿರುವ ತೆಲುಗರು, ಕನ್ನಡಿಗರ “ಭಾಷಾಪ್ರೇಮ”ವನ್ನು ಕಂಡು ಹೊಟ್ಟೆಕಿಚ್ಚು ಪಡುತ್ತಾರೆ. “ಆಂಧ್ರ ರಾಷ್ಟ್ರ ಅವತರಣ ದಿನೋತ್ಸವಮ್” ಅನ್ನುವುದನ್ನು ಅವರು ಭಾವನಾತ್ಮಕ ವಿಷಯವನ್ನಾಗಿ ಮಾಡದ ಕಾರಣ, ರಾಜ್ಯ ವಿಭಜನೆಗೆ ಭಾಷೆ ಸ್ವಲ್ಪವೂ “ಅಡ್ಡಿ”ಯಾಗಲಿಲ್ಲ. ಕನ್ನಡ ರಾಜ್ಯೋತ್ಸವದ ಬಗ್ಗೆ, ಬೆಂಗಳೂರಿನ ಬಗ್ಗೆ, ಅದರಲ್ಲೂ ಕನ್ನಡಿಗರ ಬಗ್ಗೆ ತುಂಬಾ ಅಭಿಮಾನದಿಂದ ಮಾತನಾಡುತ್ತಾರೆ. ಹೈದರಾಬಾದಿನಲ್ಲಿ ನನಗೆ ಎಂದೂ ಪರಕೀಯತೆ ಉಂಟಾಗಿಲ್ಲ. ಬೆಂಗಳೂರಿಗಿಂತ “ಸೇಫ್” ಅನ್ನಿಸಿರುವುದೂ ಉಂಟು. ಕನ್ನಡಿಗನೆಂದು ವಿಶೇಷ ಉಪಚಾರಗಳನ್ನು ಅನುಭವಿಸಿದ್ದೇನೆ. ಕನ್ನಡಿಗನೆಂದು ಪರಿಚಯವಾದ ನೂರಾರು ಜನರನ್ನು ನಾನು ಮಾತನಾಡಿಸುವುದು ಕನ್ನಡದಲ್ಲೇ… ನಾನು ಕನ್ನಡದವನೆಂದು ತಿಳಿದಾಗ, ತಮಗೆ ಗೊತ್ತಿರೋ ಕನ್ನಡವನ್ನು ನನ್ನ ಮುಂದೆ ಮಾತನಾಡುವ ಅನೇಕ ತೆಲುಗರನ್ನು ನಾನು ನೋಡಿದ್ದೇನೆ. ದೂರದ ಒರಿಸ್ಸಾದಲ್ಲೂ ನನಗೆ ಕನ್ನಡದಲ್ಲಿ ಮಾತನಾಡಿಸಿದ ಒಡಿಸ್ಸಿಗಳಿದ್ದಾರೆ.

  ಒಬ್ಬೊಬ್ಬರಿಗೆ ಒಂದೊಂದು ಅನುಭವಾಗಿರುತ್ತದೆ. ಅದನ್ನು ಸಾರ್ವತ್ರೀಕರಿಸುವುದು ನನ್ನ ದೃಷ್ಟಿಕೋನವಲ್ಲ. ನಿಮಗೆ ಹೈದರಾಬಾದಿನಲ್ಲಿ ಪರಕೀಯತೆ ಅನುಭವವಾಗುತ್ತಿದ್ದರೆ, ಅದು ನಗರೀಕರಣದ ಮತ್ತು ಹಣದ ಬೆಂಬತ್ತಿ ನಡೆಯುತ್ತಿರುವ ಜನರ ವ್ಯಾಪಾರಿ ಬುದ್ಧಿಯ ಪರಿಣಾಮವೇ ಹೊರತು ಅದಕ್ಕೆ ಭಾಷೆಯನ್ನು ನಂಟು ಹಾಕುವುದು ಎಷ್ಟರ ಮಟ್ಟಿಗೆ ಸರಿ ?

  ಉತ್ತರ
 12. ಸಂತೋಷ್ ಬೈಲು
  ಜುಲೈ 16 2016

  ಕನ್ನಡಿಗರಲ್ಲಿ ಭಾಷಾ ಸ್ವಾಭಿಮಾನದ ಕೊರತೆ ಇದೆ. ಕನ್ನಡವೆಂದರೆ ಕೀಳು ಅಥವಾ ಕೆಳಮಟ್ಟದ ಭಾಷೆ ಅನ್ನೋ ಕೀಳರಿಮೆ ಇದೆ. ಈ ಕಾರಣಕ್ಕಾಗಿಯೇ ಪರ/ನೆರೆ ರಾಜ್ಯಗಳಲ್ಲಿ ಕನ್ನಡದ ಗಂಧ ಗಾಳಿಯಿಲ್ಲ. ಎಷ್ಟೇ ಭಾಷೆ ಬಂದರೂ ಬರುವುದೊಂದೇ ಭಾಷೆ ಕನ್ನಡ ಅನ್ನೋ ತತ್ವಕೊಂ ಡರೆ ಕನ್ನಡದ ಏಳಿಗೆ ಸಾಧ್ಯ. ಎದ್ದೇಳಿ ಕನ್ನಡಿಗರೆ ಎದ್ದೇಳಿ. ಕನ್ನಡ ಕಟ್ಟುವ ಕೆಲಸ ಮಾಡಿ.

  ಉತ್ತರ
 13. ಆನಂದ
  ಜುಲೈ 16 2016

  ಒಳ್ಳಯ ಬರವಣಿಗೆ ಅಡ್ಮಿನ್ ರವರೆ..

  ಇವೇಲ್ಲಾ ಓದಿ ನಾವು ಕನ್ನಡಿಗರು ಆಗಿದ್ದು ಸಾಕು ಇನ್ನು ಅಪ್ಪಟ ಕನ್ನಡಿಗರು ಆಗೋಣ.

  ಮೊದಲು ನಾವು ಸರಿ ಹೋಗಬೇಕು ಮೂಲ ಕನ್ನಡಿಗರು ನಮ್ಮ ಬೆಂಗಳುರಿನಲ್ಲಿ, ನಿಮಗೆ ಎಷ್ಟೇ ಬಾಷೆಗಳು ಬಂದರು ಅವು ಇನ್ನೂ ಮೇಲೆ ಕಡ್ಡಾಯವಾಗಿ ಮಾತನಾಡೋದು ಉತ್ತರಿಸೋದು ಇತ್ಯಾದಿಗಳು ನಿಲ್ಲಿಸಿ, ಕನ್ನಡಿಗರ ಮನೆಯಲ್ಲಿ ಕನ್ನಡ ಚಾನಲ್ ಒಂದು ಬಿಟ್ಟು ಎಲ್ಲಾ ಪರಭಾಷೆ ಚಾನಲ್ ವೀಕ್ಷಸುತ್ತ ಇರುತ್ತಾರೆ , ಇದರೋಂದಿಗೆ ಎಲ್ಲಾ ರಾಷ್ಟ್ರೀಯ (ಡೆಲ್ಲಿ ) ಚಾನಲ್ ಗಳು, ಮಕ್ಕಳ ಜೊತೆ ಇಂಗ್ಲಿಷ್ ಮಾತನಾಡೋದು, ಇನ್ನು ಎಲ್ಲಿ ಮಕ್ಕಳಿಗೆ ನಮ್ಮತನ, ಕನ್ನಡದ ಗಂಧ ಗಾಳಿ ಬಿಸುತ್ತದೆ, ದಯವಿಟ್ಟು ಇವೇಲ್ಲ ಕಡ್ಡಾಯವಾಗಿ ಬಿಡಿ ಮೊದಲು ಕನ್ನಡತನ ಇರಲಿ ಎಲ್ಲಾ ವಿಷಯದಲ್ಲಿ ಇದರೊಂದಿಗೆ ಡೈವರ್ಸಿಟಿ ಮಾಡರ್ನ್ ಮಿತಿಲಿ ಇರಲಿ, ಒಬ್ಬ ವಲಸಿಗ/ಅನ್ಯಬಾಷಿಕ ಮನೆಯಲ್ಲಿ ನೋಡಿ ಅವನು ಅವರ ಬಾಷೆ ಚಾನಲ್ ಬಿಟ್ಟು ಬೇರೆ ಬಾಷೆ ಚಾನಲ್ ನೋಡೋಲ್ಲ ಅದು ಕರ್ನಾಟಕದಲ್ಲಿ ನಮಗೆ ಏನಾಗಿದೆ??? ನಾವು ಅವರಂತೆ ಆಗೋಣ ಮಕ್ಕಳುಗೆ ಹೀಗೆ ಬೇಳೆಸಿ, ಮನೇಲಿ ಕನ್ನಡ ಪೇಪರ್ ಪತ್ರಿಕೆಗಳು ತರಿಸಿ ಓದಿಸಿ ಮಕ್ಕಳಿಗೆ ಇವೇಲ್ಲಾ ಮಾಡಿ, ಇಂಗ್ಲಿಷ್ ಉದ್ದರಿಸಿದ್ದು ಸಾಕು, ನಮ್ಮಲ್ಲಿ ಇರೋ ಕೆಟ್ಟ ಚಾಳಿ ವಲಸಿಗರು / ಅನ್ಯಭಾಷಿಕರ ಜೊತೆ ಇಂಗ್ಲಿಷ್ ನಲ್ಲಿ ಮಾತನಾಡೋಕೆ ಶುರು ಮಾಡ್ತೇವೆ ಇದನ್ನು ಕಡ್ಡಾಯವಾಗಿ ಬಿಟ್ಟು ಹೆಚ್ಚು ಕನ್ನಡದೊಂದಿಗೆ ಸೊಲ್ಪ ಇಂಗ್ಲಿಷ್ ಬಳಸಿ ಮಾತನಾಡಿ ಉತ್ತರಿಸಿ ಮತ್ತು ಹಿಂದಿ ಬಳಸಲೇಬೇಡಿ ಕರ್ನಾಟಕಲ್ಲಿ, ಹಿಂದಿ ರಾಷ್ಟ್ರೀಯ ಬಾಷೆ ಅಂತ ಸುಳ್ಳು ಪ್ರಚಾರ ಮಾಡ್ತಾ ಇದ್ದಾರೆ ಇದರಿಂದ ಕನ್ನಡಿಗರು ದೂರವಿರಿ, ಈ ಪರಬಾಷೆ ಚಾನಲ್ ಗಳು ಮತ್ತು ಹಿಂದಿ ಬಾಷೆ ಪರಿಣಾಮ ತುಂಬಾ ಬೀರುತ್ತ ಇದೆ ಕನ್ನಡಿಗರು / ಕನ್ನಡದ ಮಕ್ಕಳ‌ ಮೇಲೆ, ದಯವಿಟ್ಟು ಗಮನಿಸಿ ಈ ದೇಶಕ್ಕೆ ಯಾವುದೇ ರಾಷ್ಟ್ರೀಯ ಬಾಷೆ ಅನ್ನೊದಿಲ್ಲ ಭಾರತದ ಸಂವಿದಾನ ಓದಿ ಕನ್ನಡಿಗರು, ಈಗ ವಿಷಯಕ್ಕೆ ಬರುತ್ತೇನೆ ನನ್ನು ರೇಶಿಸ್ಟ್ ಅಂದರು ಪರವಾಗಿಲ್ಲ ಪರಭಾಷೆ ಚಾನಲ್ ಗಳು , ಸಿನೆಮಾಗಳು, ಏಫ್ ಎಂ ಗಳು ಇತ್ಯಾದಿ ನೊಡಬೇಡಿ ವೀಕ್ಷಿಸಬೇಡಿ ಇವೇಲ್ಲಾ ಮಾಡಲೇಬೇಕಾದ ಅನಿವಾರ್ಯ ನಮ್ಮ ಐಡೆಂಟಿಟಿ ನಮ್ಮ ಬಾಷೆ ಉಳಿಸಿಕೊಳ್ಳಲು ಕರ್ನಾಟಕದಲ್ಲಿ, ಈ ಪಾಲಸಿ ಅನುಸರಿಸಿ ಇಂದಿನ ಮುಂದಿನ ಕನ್ನಡ ಪೀಳಿಗೆಗಳಿಗೆ ಹೀಗೆ ಬೇಳೆಸಿ ಮೊದಲು ಕನ್ನಡ ಮತ್ತು ಜಗತ್ತಿನ ಜೊತೆ ಸಂಪರ್ಕದಲ್ಲಿ ಇರಲಿ ಇಂಗ್ಲಿಶ್ MTGL -> , Mother Tongue + Global Language ೨ ಲ್ಯಾಗ್ಯುಯಜ್ ಮಾತ್ರ ಕಡ್ಡಾಯವಾಗಿ ಪಾಲಿಸಿ ಇನ್ನೂ ಮೇಲೆ, ಪರಭಾಷೆ ಚಾನಲ್ ಗಳು, ಸಿನೆಮಾಗಳು, ಏಫ್ ಎಂ, ಸುಳ್ಳು ಹಿಂದಿ ರಾಷ್ಟ್ರೀಯ ಪ್ರಚಾರ ಅವರ ಸಿನಾಮಾಗಳು ಹಾಡಿನಿಂದ ನೇ ನಮಗೆ ಮನರಂಜನೆ ಸಿಗಬೇಕಿಲ್ಲ ಅಲ್ಲವೇ??? ಮಕ್ಕಳಿಗೆ ಕನ್ನಡನೇ ಎಲ್ಲಾ ಕನ್ನಡನೇ ಸರ್ವಸ್ವ ಅನ್ನೋ ರೀತಿಯಲ್ಲಿ ಬೇಳೆಸಿ, ಅವರು ಯಾವುದೇ ಮಾಧ್ಯಮದಲ್ಲಿ ಓದಿದರು ಅವರಿಗೆ ಸಾರ್ವಜನಿಕ ಸ್ಥಳದಲ್ಲಿ ಕನ್ನಡಿಗರಾಗಿ ಇರಬೇಕು ವರ್ತಿಸಬೇಕು, ವಲಸಿಗರು ತಮ್ಮ ಮಕ್ಕಳಿಗೆ ಹೀಗೆ ಬೆಳೆಸುತ್ತ ಉದ್ದಾರ ಅದಕ್ಕೆ ಅವರಿಗೆ ಸ್ವಾಭಿಮಾನ ಜಾಸ್ತಿ ನಮ್ಮ ಹೀನಾಯ ಕೆಲಸಕ್ಕೆ ಬಾರದ ಹೃದಯ ವಿಷಾಲತೆ ಅವತಾರಗಳು ನೋಡಿ ಬರೆಯುತ್ತಾ ಇದ್ದೇನೆ ದಯವಿಟ್ಟು ಪಾಲಿಸಿ.

  ತಪ್ಪುಗಳು ಇದ್ದರೆ ತಿದ್ದುಕೊಳ್ಳಿ

  ಅಪ್ಪಟ ಕನ್ನಡಿಗ


  ಂಂಂ

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments