ಅಧಿಕಾರ ಸಿಗುವುದಾದರೆ ಇವರು ಕಸಬ್ ಗೂ ಸ್ಮಾರಕ ಕಟ್ಟಲಾರರೆ?
-ಎ ಕೆ ಕುಕ್ಕಿಲ
1984 ಜೂನ್ 5ರಂದು ಭಾರತೀಯ ಸೇನೆಯು ಆಪರೇಶನ್ ಬ್ಲೂಸ್ಟಾರ್ (Operation Blue Star) ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳುತ್ತದೆ. ಪ್ರತ್ಯೇಕತಾವಾದಿಗಳ ಹಿಡಿತದಿಂದ ಸಿಕ್ಖರ ಪವಿತ್ರ ಕ್ಷೇತ್ರ ಸ್ವರ್ಣ ಮಂದಿರವನ್ನು ಬಿಡುಗಡೆಗೊಳಿಸುವುದು ಕಾರ್ಯಾಚರಣೆಯ ಉದ್ದೇಶವೆಂದು ಪ್ರಧಾನಿ ಇಂದಿರಾ ಗಾಂಧಿ ಘೋಷಿಸುತ್ತಾರೆ. ಜನರಲ್ ಎ.ಎಸ್. ವೈದ್ಯ ಮತ್ತು ಲೆಫ್ಟಿನೆಂಟ್ ಜನರಲ್ ಕುಲ್ ದೀಪ್ ಸಿಂಗ್ ಬ್ರಾರ್‍ರ ನೇತೃತ್ವದಲ್ಲಿ ನೂರಾರು ಯೋಧರು ಕಾರ್ಯಾಚರಣೆಗಿಳಿಯುತ್ತಾರೆ. ಜರ್ನೈಲ್ ಸಿಂಗ್ ಬಿಂದ್ರನ್‍ವಾಲೆ ಮತ್ತು ನಿವೃತ್ತ ಮೇಜರ್ ಜನರಲ್ ಶಾಹೆಬ್ ಸಿಂಗ್‍ರ ನೇತೃತ್ವದಲ್ಲಿ ಸ್ವರ್ಣ ಮಂದಿರದೊಳಗೆ ಅಡಗಿ ಕೂತಿದ್ದ ಪ್ರತ್ಯೇಕತಾವಾದಿಗಳು, ಸೇನೆಗೆ ತೀವ್ರ ಪ್ರತಿರೋಧ ಒಡ್ಡುತ್ತಾರೆ. ಟ್ಯಾಂಕ್, ಹೆಲಿಕಾಪ್ಟರ್, ಶಸ್ತ್ರಾಸ್ತ್ರ ವಾಹನಗಳು, ಆರ್ಟಿಲರಿಗಳನ್ನು ಕಾರ್ಯಾಚರಣೆಯ ವೇಳೆ ಸೇನೆ ಬಳಸಿಕೊಂಡರೆ, ಪ್ರತ್ಯೇಕತಾವಾದಿಗಳು ಮೆಶಿನ್ ಗನ್, ಕ್ಷಿಪಣಿಗಳು, ರಾಕೆಟ್ ಲಾಂಚರುಗಳನ್ನು ಬಳಸುತ್ತಾರೆ. ಒಂದು ರೀತಿಯಲ್ಲಿ ಸ್ವರ್ಣ ಮಂದಿರದೊಳಗೆ ಯುದ್ಧವೇ ನಡೆಯುತ್ತದೆ. ಜೂನ್ 3ರಿಂದ 36 ಗಂಟೆಗಳ ಕಾಲ ಇಡೀ ಪಂಜಾಬ್‍ನಲ್ಲೇ ಕಫ್ರ್ಯೂ ವಿಧಿಸಲಾಗಿದ್ದರೂ ಸಂಚಾರ, ವ್ಯಾಪಾರ-ವಹಿವಾಟುಗಳನ್ನು ನಿಷೇಧಿಸಲಾಗಿದ್ದರೂ ವಿದ್ಯುತ್ ಕಡಿತಗೊಳಿಸಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಸಿಕ್ಖರು ಚೌಕ್ ಮೆಹ್ತಾದಲ್ಲಿ, ಹರಿಕ್ ಪಟನ್‍ನಲ್ಲಿ ನೆರೆಯುತ್ತಾರೆ. ಈ ಮಧ್ಯೆ ಸ್ವರ್ಣ ಮಂದಿರದ ಆಸುಪಾಸಿನ ಹೊಟೆಲ್‍ಗಳಲ್ಲಿ ಉಳಕೊಂಡಿದ್ದ ಎಲ್ಲ ಪತ್ರಕರ್ತರನ್ನೂ ಜೂನ್ 5ರ ಬೆಳಿಗ್ಗೆ 5 ಗಂಟೆಗೆ ಮಿಲಿಟರಿ ವಾಹನದಲ್ಲಿ ಹರ್ಯಾಣಕ್ಕೆ ಸಾಗಿಸಿ ಅಲ್ಲಿ ಬಂಧಿಸಿಡಲಾಗುತ್ತದೆ. ಮಾಧ್ಯಮಗಳನ್ನು ಸಂಪೂರ್ಣ ಸೆನ್ಸಾರ್‍ಶಿಪ್‍ಗೆ ಒಳಪಡಿಸಲಾಗುತ್ತದೆ. ಹೀಗೆ ಹೊರ ಜಗತ್ತಿನಿಂದ ಪಂಜಾಬನ್ನು ಸಂಪೂರ್ಣ ಪ್ರತ್ಯೇಕಿಸಿ ನಡೆಸಲಾದ ಆ ಕಾರ್ಯಾಚರಣೆ ಜೂನ್ 7ರಂದು ಕೊನೆಗೊಳ್ಳುವಾಗ 700ರಷ್ಟು ಯೋಧರೇ ಸಾವಿಗೀಡಾಗಿರುತ್ತಾರೆ. ಬಿಂದ್ರನ್‍ವಾಲೆ, ಶಾಹೆಬ್ ಸಿಂಗ್ ಸಹಿತ 400ರಷ್ಟು ಉಗ್ರವಾದಿಗಳು ಹತ್ಯೆಗೊಳಗಾಗುತ್ತಾರೆ. ಇಷ್ಟಕ್ಕೂ ಸಾವಿಗೀಡಾದ ಸಿಕ್ಖರ ನಿಖರ ಸಂಖ್ಯೆ ಎಷ್ಟು, ಎಷ್ಟು ಮಂದಿ ಗಾಯ ಗೊಂಡರು, ಆ ಕಾರ್ಯಾಚರಣೆ ಹೇಗಿತ್ತು ಎಂಬುದನ್ನೆಲ್ಲಾ ಹೇಳುವುದಕ್ಕೆ ಅಲ್ಲಿ ಅಸೋಸಿಯೇಟೆಡ್ ಪ್ರೆಸ್‍ನ (AP) ವರದಿಗಾರ ಬ್ರಹ್ಮ ಚಲ್ಲಾನಿಯ ಹೊರತು ಇನ್ನಾರೂ ಇದ್ದರಲ್ಲವೇ? ಮಿಲಿಟರಿಯ ಕಣ್ತಪ್ಪಿಸಿ ಅವರು ಮಾಡಿದ ಅಷ್ಟಿಷ್ಟು ವರದಿಯನ್ನು ಮುಂದೆ ನ್ಯೂಯಾರ್ಕ್ ಟೈಮ್ಸ್, ದಿ ಟೈಮ್ಸ್ ಆಫ್ ಲಂಡನ್, ದಿ ಗಾರ್ಡಿಯನ್ ಪತ್ರಿಕೆಗಳೆಲ್ಲಾ ಮುಖಪುಟದಲ್ಲಿ ಪ್ರಕಟಿಸುತ್ತವೆ. ಶವಸಂಸ್ಕಾರ ಮಾಡಿದವರ ಪ್ರಕಾರ, ಒಟ್ಟು 3,300 ಮಂದಿ ಆ ಕಾರ್ಯಾಚರಣೆಯಲ್ಲಿ ಸಾವಿಗೀಡಾಗಿದ್ದಾರೆ. ಇಂದಿರಾ ಗಾಂಧಿಯವರ ಕುರಿತಂತೆ ಪುಸ್ತಕ ಬರೆದಿರುವ ಮಾರ್ಕ್ ಟುಲಿಯ ಪ್ರಕಾರ ಸತ್ತವರ ಸಂಖ್ಯೆ 2,093. ಆದರೂ,
ಅಭಿವೃದ್ಧಿಯ ಸೋಗಿನಲ್ಲಿ ನಶಿಸುತ್ತಿರುವ ನನ್ನೂರು !!
ಅಶೋಕ್ ಕುಮಾರ್ ವಳದೂರು (ಅಕುವ)
ಉಡುಪಿ ಜಿಲ್ಲೆಯ ಕಾಪು ವ್ಯಾಪ್ತಿಯಲ್ಲಿ ಬರುವ ಪಾದೂರು ಈಗ ಜನಜನಿತ. ಪಾದೂರು ಮಜೂರು ರಸ್ತೆಯಲ್ಲಿ ಇಂದು ಜನರಿಗಿಂತ ಟಿಪ್ಪರ್ ಗಳ ಓಡಾಟವೇ ಜಾಸ್ತಿಯಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಧೂಳೆಬ್ಬಿಸಿ, ಕೆಸರು ರಟ್ಟಿಸಿ ಓಡುವ ಟಿಪ್ಪರ್ ಗಳ ರೋಷದೆದುರು ನಾಗರಿಕರ ಜೀವನದ ಗತಿ ಕ್ಷಿಣಿಸಿದೆ.ಪಾದೂರು ಸುತ್ತಮುತ್ತಲ ಊರವರಿಗೆ ತಾವು ಎನೋ ಕಳೆದುಕೊಂಡ ಕಳವಳ.ಪಾದೂರಿನ ಗುಡ್ಡೆಯಲ್ಲಿ ಕುಪ್ಪಳಿಸಿದ ಆ ದಿನಗಳು ಇನ್ನು ಕೇವಲ ನೆನಪು ಮಾತ್ರ. ಆ ಅಡ್ಡ ಪಾದೆಯ ಜಾರು ಬಂಡಿಯು ಇನ್ನು ಇತಿಹಾಸ. “ಪೆಚ್ಚು ಗಟ್ಟಿಸುವ ಹುಲಿ ಗುಹೆ ” ಮಾಯವಾಗಿದೆ. ಆಶಾಡ (ಆಟಿ ತಿಂಗಳು)ದಲ್ಲಿ ಆ ಬಿರುಸು ಮಳೆಗೆ ಹಸಿರು ಸೊಪ್ಪಿಗಾಗಿ ಜಾತ್ರೆಯಂತೆ ಪಾದೂರಿನ ಗುಡ್ದೆಯಲ್ಲಿ ಸೇರುತ್ತಿದ್ದ ಜನಜಾತ್ರೆ ಯಾವತ್ತೊ ಮಾಯವಾಗಿದೆ.ದನ,ಕೋಣ,ಜಾನುವಾರುಗಳ ಮೇವು ಹುಲ್ಲಿನ ಆಗಾಧ ಪಾದೂರು ಗುಡ್ದೆ ಅಭಿವೃದ್ಧಿಯ ಕರಡಾತನದಲ್ಲಿ ಬರಡಾಗುತ್ತಿದೆ. ಚಿಕ್ಕಂದಿನಿಂದ ಗುಡ್ಡೆಯ ಸಂದು ಬಿಡದೆ ಓಡಾಡಿದ, ನಲಿದಾಡಿದ,ಕೇಕೆ ಹಾಕಿ ಕುಣಿದ ನಮಗೆ ನಮ್ಮ ಮೌಂಟ್ ಎವರೆಸ್ಟ್ ಆಗಿದ್ದ “ಉಕ್ಕುಡ” ಅತಿ ಎತ್ತರದ ಬಂಡೆಯಾಗಿತ್ತು.ಈ ಉಕ್ಕುಡ ಬಂಡೆಯ ನೆತ್ತಿ ಏರುವುದು ಸಾಹಸದ ಕೆಲಸವೇ ಆಗಿತ್ತು. ಅದರ ತುತ್ತ ತುದಿಯಿಂದ ಪಶ್ಚಿಮಕ್ಕೆ ಕಾಪು ದೀಪ ಸ್ಥಂಬ, ಉತ್ತರಕ್ಕೆ ಶ್ರೀಕ್ಷೇತ್ರ ಕುಂಜಾರು ಗಿರಿಯ ದರ್ಶನವಾಗುತಿತ್ತು.ಮಳೆಯ ನೀರು ರಭಸದಿಂದ ಹರಿದು ನರ್ಸಿಕೆರೆಯೇ ಮಹಾಸಾಗರವಾಗುತಿತ್ತು. ಈಗ ಎಲ್ಲಾ ಮಾಯವಾಗಿದೆ. ನರ್ಸಿಕೆರೆ ಮಣ್ಣು ತುಂಬಿ ಹೇಳಹೆಸರಿಲ್ಲದಂತಾಗಿದೆ. ಕೃಷಿಕಾರ್ಯದಲ್ಲಿ ಸದಾ ಮಗ್ನವಾಗುತ್ತಾ ನೆಮ್ಮದಿಯಿಂದ ಉತ್ತದ್ದನ್ನು ಸಂತೋಷವಾಗಿ ಸಂಭ್ರಮಿಸುತ್ತಿದ್ದ ನನ್ನ ಊರಿನ(ವಳದೂರಿನ) ಜನರಿಗೆ ಪ್ರಾಣಸಂಕಟವಾಗಿ ಮಾರಕವಾಗಿದೆ ಪಾದೂರಿನಲ್ಲಿ ಸ್ಥಾಪನೆಯಾಗುತ್ತಿರುವ ತೈಲ ಸಂಗ್ರಹಣ ಘಟಕ.





