ವಿಷಯದ ವಿವರಗಳಿಗೆ ದಾಟಿರಿ

Archive for

11
ಆಕ್ಟೋ

ಮಾನವಿಯತೆಯ ಮತ್ತೊಂದು ಮುಖ

– ಮಧು ಚಂದ್ರ ಭದ್ರಾವತಿ

ಸುಮಾರು ಎರಡು ತಿಂಗಳ ಹಿಂದೆ ನಡೆದ ನೈಜ ಘಟನೆ  ಇದು. ಮಳೆಗಾಲವಾದರೂ ಅಂದು ಮಧ್ಯಾನ್ಹ ಆಗಸದಲ್ಲಿ ರವಿ ತನ್ನ ಉಗ್ರ ಪ್ರತಾಪವನ್ನು ತೋರಿಸುತ್ತಿದ್ದ.  ವಿಜಯ ನಗರದಿಂದ ನಾನು ಕಾರ್ಯ ನಿಮಿತ್ತ ಮೇಲೆ ಜಯನಗರಕ್ಕೆ ಹೋಗುತ್ತಿದ್ದೆ. ದಾರಿಯಲ್ಲಿ ಹೋಗುತ್ತಿರುವಾಗ  ಅಲ್ಲೊಂದು ಶವದ ಮೆರವಣಿಗೆ ಇದಿರಾಯಿತು. ಶವದ ಮುಂದೆ ಪಟಾಕಿ ಸಿಡಿಸುತ್ತ ಅವರ ಸಂಬಂಧಿಕರು, ಹಿಂದೆ ಶವವನ್ನು ತಮ್ಮ ಭುಜದ ಮೇಲೆ ಹೊತ್ತು ಕೊಂಡು ಶವದ ಸಂಬಂಧಿಕರು ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದರು. ಏನಾಯಿತು ಗೊತ್ತಿಲ್ಲ ಇದ್ದಕಿದ್ದ ಹಾಗೆ ಅವರೆಲ್ಲ ಶವವನ್ನು ರಸ್ತೆಯಲ್ಲಿ ಬಿಟ್ಟು ಜಗಳವಾಡ ತೊಡಗಿದರು. ಅವರ ಜಗಳದಲ್ಲಿ ಪಾಪ ಶವ ಅನಾಥವಾಯಿತು ಅ ದಾರುಣ ದೃಶ್ಯವನ್ನು ನೋಡಿದರೆ ಎಂತವರಿಗೂ ಅಯ್ಯೋ ಪಾಪ ಎಂದು ಕನಿಕರ ಉಕ್ಕಿ ಬರುತಿತ್ತು

ಎದ್ದೇಳು ಮಂಜುನಾಥ ಚಿತ್ರದ ಒಂದು ದೃಶ್ಯದಲ್ಲಿ ನಾಯಕ ನಟನ ಅಪ್ಪನ ಅಂತ್ಯಕ್ರಿಯೆ ಕಾರ್ಯಕ್ರಮ. ವರುಣ ಅನಿರೀಕ್ಷಿತವಾಗಿ ತನ್ನ ಪ್ರಭಾವನ್ನು ತೋರಿಸಲು ಆರಂಭಿಸಿದ. ಅಲ್ಲಿ ನೆರೆದಿದ್ದ ಮನೆಯವರು ಮತ್ತು ನೆಂಟರು ಶವವನ್ನು ಅಲ್ಲೇ ಬಿಟ್ಟು ಮಳೆಯಲ್ಲಿ ತಾವು ನೆನೆಯ ಬಾರದು ಎಂದು ಮರದ ಕೆಳಗೆ ಆಶ್ರಯ ಪಡೆದು ಕೊಳ್ಳುವರು. ಆಗ ನಾಯಕ ನಟ, ಶವವಾಗಿದ್ದ ತನ್ನ ತಂದೆಗೆ ಹೇಳುತ್ತಾನೆ ” ನೋಡಪ್ಪ ನೀನು ಬದುಕಿದ್ದಾಗ ಎಲ್ಲ ನಿನ್ನ ಹಿಂದೇನೆ ಇದ್ದರು, ಈಗ ನೋಡು ನಿನ್ನ ಮಳೆಯಲಿ ನೆನೆಯೋಕೆ ಬಿಟ್ಟು ಹೇಗೆ ಎಲ್ಲಾ ಮರದ ಕೆಳಗೆ ನಿಂತಿದ್ದಾರೆ ”

ಮೇಲಿನ ಎರಡು ಸನ್ನಿವೇಶಗಳನ್ನು ನೋಡಿದರೆ ಎಂತವರಿಗು ಒಮ್ಮೆ ಕರಳು ಚುರುಕ್ ಎನ್ನದೆ ಇರುವುದಿಲ್ಲ. ಈಗೊಂದು ಸನ್ನಿವೇಶವನ್ನು ಹೇಳುತ್ತೇನೆ ಮೇಲಿನ ಎರಡಕ್ಕೂ ಇದು ತದ್ವಿರುದ್ದ.

ಅಂದು ಸಹ  ಸೂರ್ಯ ಉಗ್ರವಾಗಿ ಪ್ರಕಾಶಿಸುತ್ತಿದ್ದ. ಲಾರಿಯ ಮೇಲೆ ಶವದ ಮೆರವಣಿಗೆ ಸಾಗಿತ್ತು . ಎಲ್ಲೋ ದೂರದಿಂದ ತೆಳ್ಳನೆಯ ಬಿಳಿ ಪಂಚೆ, ಕತ್ತಲ್ಲಿ ಮಫ್ಲರ್ , ತೆಲೆಯ ಮೇಲೆ ಒಂದು ಟೋ

ಬಹುಶ ಮೇಲಿನ ಎರಡು ಸನ್ನಿವೇಶಗಳಿಗೆ ಕೆಳಗಿನದನ್ನು ಹೋಲಿಕೆ ಮಾಡಿದರೆ ಮಾನವರ ಕರಾಳ ಮುಖದ ಪರಿಚಯ ನಮಗಾಗುತ್ತದೆ. ಜೀವ ಇದ್ದಾಗ ಮಾತ್ರ ಬೆಲೆ, ಇಲ್ಲದಿದ್ದಾಗ ಏನು ಇಲ್ಲ.ಪಿ ಮತ್ತು ಹಣೆಯ ಮೇಲೆ ನಾಮ ಇಟ್ಟುಕೊಂಡ ವಯಸ್ಸಾದ ಹಣ್ಣು ಹಣ್ಣು ಹಿರಿಯ ಜೀವವೊಂದು ಓಡೋಡಿ ಬಂದು ಲಾರಿಯ ಮೇಲೇರಿ. ಶವದ ಪಕ್ಕಕ್ಕೆ ನಿಂತು ತಾವು ತಂದಿದ್ದ ಛತ್ರಿಯನ್ನು ಹಿಡಿದು ” ಅಯ್ಯೋ, ನನ್ನಪ್ಪ ಬಿಸಿಲಿನ ತಾಪಕ್ಕೆ ಬೆಂದು ಹೋಗ್ತಿದಿಯಲ್ಲಪ್ಪಾ” ಎನ್ನುತ್ತಾ ಶವದ ಮುಖಕ್ಕೆ ನೆರಳು ಮಾಡಿದರು. ಈ ಮಾತು ಹೃದಯದ ಅಳದಿಂದ ಬಂದಂತಹ ಮಾತು. ಅಂದು ನಡೆಯುತ್ತಿದದು ಮತ್ತಾರದು ಅಲ್ಲ ಅ ನ ಕೃಷ್ಣರಾಯರ ಅಂತಿಮ ಯಾತ್ರೆ ಮತ್ತು ಅ ಹಿರಿ ಜೀವ ಮತ್ತಾರು ಅಲ್ಲ ಕನ್ನಡದ ಅಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್.

ಹುಟ್ಟು ಆಕಸ್ಮಿಕ ಸಾವು ಅನಿವಾರ್ಯ. ಇಂತಹ ಪರಿಸ್ಥಿತಿಯಲ್ಲಿ ಬದುಕಿದ್ದಾಗ ಹೇಗೆ ನಾವು ಬೇರೆಯವರನ್ನು ಇಷ್ಟ ಪಡುತ್ತೆವೋ ಹಾಗೆ ಅವರು ಇಲ್ಲವಾದಗಲು ಅಷ್ಟೇ ಪ್ರೀತಿಯಿಂದ ನೆನೆಯಬೇಕು.

ಚಿತ್ರಕೃಪೆ : ಗೂಗಲ್
*******************************