ವಿಷಯದ ವಿವರಗಳಿಗೆ ದಾಟಿರಿ

Archive for

30
ಆಕ್ಟೋ

ಹೀಗೊಂದು ಸಂ..ಶೋಧನೆ

-ಪ್ರಶಸ್ತಿ ಪಿ.ಸಾಗರ 

ಉಪ್ಪಿಗಿಂತ ರುಚಿ ಬೇರೆ ಇಲ್ಲ

ಟೆಸ್ಟಿಂಗಿಲ್ಲದ ಜಗತ್ತೆ ಇಲ್ಲ…

ಅಂತ ಗುಂಡಣ್ಣ ಹಾಡ್ತಾ ಇದ್ದ . ಸೂಪರ್ ಮಚ್ಚಾ.. ಮಸಾಲೆಪುರಿಗೆ ಐಸ್ ಕ್ರೀಂ ಸೇರ್ಸಿದಂಗೈತೆ ಅಂತ ಕಾಲೆಳ್ದ ತರ್ಲೆ ತಿಪ್ಪ ಅಲಿಯಾಸ್ ತಿಪ್ಪೇಶಿ. ಎಲ್ಲಾ ಗೊಳ್ ಅಂತ ನಕ್ರು.  ಏ ಸುಮ್ನಿರ್ರಿ ,ಅಷ್ಟೇನೂ ಅದ್ವಾನವಾಗಿಲ್ಲ.  ಮಿಸ್ಟರ್ ರೌಂಡ್ ಅಣ್ಣಂಗೆ ಸಾಪ್ಟವೇರ್ ಟೆಸ್ಟರ್ ಕೆಲ್ಸ ಸಿಕ್ಕಿರ್ಬೇಕು. ಅದ್ಕೇ ಖುಷಿಯಾಗಿ ಹಾಡ್ತಿರಬೇಕು ಅಲ್ವಾ ರೌಂಡ್ ಅಂತ ಸಮಾಧಾನ ಮಾಡಿದ್ಲು ಇಳಾದೇವಿ ಅಲಿಯಾಸ್ ಇಳಾ..

ಹೂಂ ಕಣ್ರೋ. ನನ್ನಣ್ಣಂಗೆ ಸಾಪ್ಟವೇರ್ ಟೆಸ್ಟರ್ ಕೆಲ್ಸ ಸಿಕ್ತು. ಡೆವಲಪರ್ಸ್ ಏನೇ ಮಾಡಿದ್ರೂ ಅದ್ನ ಟೆಸ್ಟರ್ಸ್ ಸೈ ಅನ್ನದೆ ಅದು ಜೈ ಅನ್ನಲ್ಲ. ಹಂಗಾಗಿ ಅದ್ಕೂ ಈಗೀಗ ಬೆಲೆ ಬರ್ತಿದ್ಯಂತೆ ಅಂದ ಗುಂಡ. ಹೌದಂಬ್ರು ,ಸಾಪ್ಟವೇರ್ ಟೆಸ್ಟಿಂಗ್ ಜೊತೆ ಡಾಟಾ ಮೈನಿಂಗ್ ಅಂತೇನೂ ಮುಂದಿನ ಸೆಮ್ಮಲ್ಲಿ ಉಟಂತಲಾ ಅದ್ಕೂ ಭರ್ಜರಿ ಬೆಲಿ ಇತ್ತಂಬ್ರು ಅಂದ್ಲು ಸರಿತಾ ಅಲಿಯಾಸ್ ಸರಿ. ಹೌದಾ ಸರಿ ??, ನೀ ಹೇಳಿದ್ದೆಲ್ಲಾ ಸರಿ ಅಂದ ತಿಪ್ಪ. ಎಲ್ಲಾ ಮತ್ತೆ ನಕ್ರು.

ನಂಗೆ ಬಳ್ಳಾರಿ ಮೈನಿಂಗ್ ಮಾತ್ರ ಗೊತ್ತುಂಟು. ಇದೆಂತಾ ಡಾಟಾ ಮೈನಿಂಗ್ ಮಾರ್ರೆ ಅಂದ ಮಂಗ್ಳೂರು ಮಂಜ. ರಾಶಿ ಬಿದ್ದಿರೋ ಮಾಹಿತೀಲಿ ಬೇಕಾಗಿರೋ ಮಾಹಿತೀನ ಕೆದಕಿ ತೆಗ್ಯೋದು , Finding required data out of heap of data ಅಂದ್ಲು ಇಳಾ ತನ್ನತ್ರ ಇರೋ ಮಾಹಿತಿ ಮತ್ತೆ ಇಂಗ್ಲೀಷಿಗೆ ಜಂಭ ಪಡ್ತಾ. ಓ, ತಿಪ್ಪೇಲಿ ಕಸ ಆರಿಸ್ದಂಗಾ ಅಂದ ತಿಪ್ಪೇಶಿ. ಮತ್ತೆ ಗೊಳ್.. ಹೇ, ಹಂಗೆಲ್ಲಾ ಅವ್ಮಾನ ಮಾಡಬಾರ್ದು. ಅದ್ಕೆ ಎಷ್ಟು ಬೆಲೆ ಇದೆ ಗೊತ್ತಾ ಅಂದ ಗುಂಡ. Read more »