ವಿಷಯದ ವಿವರಗಳಿಗೆ ದಾಟಿರಿ

Archive for

29
ಆಕ್ಟೋ

ಯಡಿಯೂರಪ್ಪರ ಹೊಸ ಪಕ್ಷವೂ..ರಾಜ್ಯ ರಾಜಕೀಯ ಜಂಜಾಟವೂ..!

– ಶಂಶೀರ್ ಬುಡೋಳಿ

ರಾಜ್ಯ ಬಿಜೆಪಿಯ ಆಡಳಿತಾವಧಿಯ ಕಾಲಾವಧಿ ಮುಗಿಯುತ್ತಾ ಬಂದಿದೆ..ಜೊತೆಗೆ ದಿ ಗ್ರೇಟ್ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ಬ್ಲಾಕ್‌ಮೇಲ್ ರಾಜಕಾರಣ ಕೂಡಾ ಹೆಚ್ಚಾಗ್ತಾ ಇದೆ. ಹಗರಣದ ಆರೋಪ ಮೈಮೇಲೆ ಬಂದಾಗ ಅನಿವಾರ್ಯವಾಗಿ ಸಿಎಂ ಪಟ್ಟದಿಂದ ಕೆಳಗಿಳಿಯುವಾಗ ಬಿಜೆಪಿ ಹೈಕಮಾಂಡ್ ನಿಮಗೆ ಸೂಕ್ತ ಸ್ಥಾನಮಾನ ನೀಡುತ್ತೇವೆಂದು ಭರವಸೆ ನೀಡಿತ್ತೆಂದು ಹಲವಾರು ಬಾರಿ ಯಡಿಯೂರಪ್ಪರೇ ಹೇಳಿದ್ದರು. ಇದನ್ನೇ ಅಸ್ತ್ರವಾಗಿಟ್ಟುಕೊಂಡು ಮಾಜಿ ಸಿಎಂ ‘ಹಠ’(ಯಡಿ)ಯೂರಪ್ಪ ಬಿಜೆಪಿಯನ್ನ ತೊರೆದು ಕೆಜೆಪಿ ಎಂಬ ಸ್ವಪಕ್ಷ ಕಟ್ಟುವ ಮೂಲಕ ಬಿಜೆಪಿ ಹೈಕಮಾಂಡ್‌ಗೆ ಸವಾಲು ಎಸೆದಿದ್ದಾರೆ..ಅದಕ್ಕೂ ಮುನ್ನಾ ಹೈಕಮಾಂಡ್‌ಗೆ ತನಗೆ ಸೂಕ್ತ ಸ್ಥಾನಮಾನ ನೀಡುವುದರ ಬಗ್ಗೆ ಬೇಗ ಯೋಚಿಸಿ ಅಂತಾ ಎಚ್ಚರಿಕೆ ಕೊಟ್ಟು ತಾನೇ ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯನ್ನ ಆಡಳಿತಕ್ಕೆ ತಂದಂತೆ ವರ್ತಿಸುತ್ತಿದ್ದಾರೆ. ನಿಜಕ್ಕೂ ಯಡಿಯೂರಪ್ಪಗೆ ಮಾನ ಮರ್ಯಾದೆ ಎನ್ನುವುದು ಇಲ್ಲವೇ..?

ಮಾಜಿ ಸಿಎಂ ಯಡಿಯೂರಪ್ಪನವರು ಬಿಜೆಪಿ ಹೈಕಮಾಂಡ್‌ನಿಂದ ಮುನಿಸಿಕೊಂಡು ಪ್ರತ್ಯೇಕ ಪಕ್ಷವನ್ನ ಕಟ್ಟುವ ದೊಡ್ಡ ಸಾಹಸಕ್ಕೆ ಕೈಹಾಕಿದ್ದಾರೆ. ನಿಜಕ್ಕೂ ಇದು ರಾಜ್ಯ ರಾಜಕೀಯದಲ್ಲಿ ಹೊಸ ಶಕೆಯನ್ನ ಆರಂಭಿಸಲಿದೆಯೇ..? ಎಂಬ ಪ್ರಶ್ನೆ ಉದ್ಭವವಾಗಿದೆ. ಇದಕ್ಕೆ ಉತ್ತರ ನಿಜಕ್ಕೂ ಇಲ್ಲ..ಯಾವ ಯಡಿಯೂರಪ್ಪ ತಾನು ಬಿಜೆಪಿಯಿಂದಲೇ ಬೆಳೆದು ಬಂದಿರುವುದನ್ನೇ ಮರೆತುಕೊಂಡು ತಾನು ಕುಣಿಸಿದ ಹಾಗೇ ಶೆಟ್ಟರ್ ಹಾಗೂ ಹೈಕಮಾಂಡ್ ಆಡಿಲ್ಲವೆಂದು ಮುನಿಸಿಕೊಂಡು ಅದಕ್ಕಿಂತಲೂ ಹಠ ಮಾಡಿಕೊಂಡು ಹೊಸ ಪಕ್ಷ ಕಟ್ಟುವುದಕ್ಕೆ ಮುಂದಾಗಿದ್ದು ಇವರ ಮೂರ್ಖತನಕ್ಕೊಂದು ಸಾಕ್ಷಿ. ಬಳ್ಳಾರಿ ಗ್ರಾಮಾಂತರ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ನಂತರ ಶ್ರೀರಾಮುಲು ‘ಬಿಎಸ್‌ಆರ್’ ಪಕ್ಷವನ್ನು ಸ್ಥಾಪನೆ ಮಾಡಿದ ವೇಳೆ ರಾಜ್ಯದಲ್ಲಿ ಬದಲಾವಣೆ ಆಗುತ್ತದೆಂದು ಭಾವಿಸಲಾಗಿತ್ತು. ಆದರೆ ಇಂದು ಈ ಪಕ್ಷ ಪ್ರಾಥಮಿಕ ಮಟ್ಟದಿಂದಲೇ ಬೇರೂರಲು ಇನ್ನು ಸಾಧ್ಯವಾಗಿಲ್ಲ. ಇನ್ನು ರಾಜ್ಯ ಬಿಜೆಪಿ ಹಾಗೂ ಯಡಿಯೂರಪ್ಪರ ವಿಷಯಕ್ಕೆ ಬರುವುದಾದರೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ಮನದಲ್ಲಿ ಏನೇನೋ ಇದೆ..ಮಾತು ಮೊದಲೇ ಹೇಳಿಬಿಡಲು ಕಾರಣನೂ ಇದೆ. ‘ನಾನು ಪಕ್ಷ ಬಿಟ್ಟು ಹೋಗುತ್ತಿದ್ದೇನೆ. ಯಾರಿಗೆ ಬೇಕಾಗಿದೆ ಬಿಜೆಪಿ. ನನಗೆ ಮಾಡಿದ ಅಪಮಾನಕ್ಕಾಗಿ ಪಕ್ಷ ಬಿಡುತ್ತಿದ್ದೇನೆ’ ಎಂದು ತಾನು ಬೆಳೆದು ಬಂದ ಪಕ್ಷದ ವಿರುದ್ಧನೆ ಇತ್ತೀಚಿಗಷ್ಟೇ ಶಿವಮೊಗ್ಗದಲ್ಲಿ ಹೇಳಿಕೆ ನೀಡಿ ತಾನಿಲ್ಲದೇ ಬಿಜೆಪಿ ಪಕ್ಷ ರಾಜ್ಯದಲ್ಲಿರಲು ಸಾಧ್ಯನೇ ಇಲ್ಲ ಅಂತಾ ಫೋಸು ಕೊಡುತ್ತಿರುವ ಯಡಿಯೂರಪ್ಪರ ಮೊಸಳೆ ಕಣ್ಣೀರು ಜನರಿಗೆ ಅರ್ಥವಾಗಲ್ಲವೇ..? Read more »