ತುಳು ಭಾಷೆ ಎಡ್ಮನೇ ಪರಿಚ್ಚೇದೊಡಿಜ್ಜಿ…!
-ಲೋಕು ಕುಡ್ಲ
ಭಾಷೆದ ಪೊರ್ಲುನು ಪುಗರ್ರೆ ಸಾಧ್ಯ ಇಜ್ಜಿ ಇಂಚಿತ್ತಿ ತುಳು ಭಾಷೆ ದಾಯೆ ಇನಿ ಅವನತಿದಂಚಿ? ಅಂದ್ ತುಳುವೆರೆ ಕಾಲೊದ ಕೋಲೊನು ತೂನಗ ನಮ್ಮ ತುಳು ಭಾಷೆ ಅವನತಿದಂಚಿ ಪಜ್ಜೆ ದೀವೊಂದು ಉಂಡು! ನಮ ತುಳುವೆರ್ ನನಲಾ ಲಕ್ಕ್ ದ್ ಉಂತುಜಿಂದಾಂಡ ನಮ್ಮ ಅಪ್ಪೆ ಭಾಷೆ ತುಳುನು ಒರಿಪ್ಪಾವರೆ ಸಾಧ್ಯ ಇಜ್ಜಿ, ಏತೊಂಜಿ ಕಾರ್ಯಕ್ರಮೊಲು ನಮ್ಮ ತುಳು ನಾಡ್ ಡ್ ಅತ್ತ್೦ಡ ಪರವೂರುಡು ನಡತೊಂದು ಇಜ್ಜಿ,ಕೆಲವೊಂಜಿ ಚಾವಡಿಲೆಡ್ ಪಾತೆರೊಗು ಪದ ದಾಂತಿನಂಚಿನ ಪೆರ್ಮೆದ ಕಾರ್ಯಕಮೊಲು ಸಂಘಟನೆದ ಮುಖಾಂತರವಾದ್ ನಡತೊಂದು ಉಂಡು, ಅಂಚೆನೆ ಪ್ರತಿಯೊಂಜಿ ಕಾರ್ಯಕ್ರಮೊಲೆಡ್ ನಮ್ಮ ತುಳುವೆರ್ ರಾಜಕಾರಣಿಲು,ಸಾಹಿತಿಲು,ಸಾಧಕೆರೆನಕ್ಲೆಗ್ ಮಾನ್ಯಾದಿಗೆನ್ ಸಂದಾವೊಂದು ಉಲ್ಲೆರ್, ಪ್ರತಿ ಒಂಜಿ ಲೇಸ್ ಡ್ ಲಾ ರಾಜಕಾರಣಿನಕ್ಲೆಗ್ ನಮ್ಮ ತುಳು ಸಂಘಟನೆದ ಮಾತೆರ್ಲಾ ತುಳು ಭಾಷೆದ ಒರಿಪ್ಪುಗು ಬೆರಿಸಾಯ ಕೊರ್ಲೆ ಪಂದ್ ನಟ್ಟೊಂದುಲ್ಲೆರ್.
ಇಂಗ್ಲೀಷ್ ಭಾಷೆಯ ದಾಳಿಯಿಂದ ಸೊರಗುತ್ತಿರುವ ಇನ್ನಿತರ ಭಾಷೆಗಳು – ಇಂಗ್ಲೀಷ್ ವಿಂಗ್ಲೀಷ್
– ರೂಪಲಕ್ಷ್ಮಿ
ಶಶಿ – ಅತ್ಯಂತ ಸಾಮಾನ್ಯ ಹೆಣ್ಣು ಮಗಳು. ಅತ್ತೆ, ಗಂಡ, ಮಕ್ಕಳಿಗೆ ರುಚಿಯಾದ ಅಡುಗೆ ಮಾಡಿ, ಅವರಿಗೆ ಉಣಬಡಿಸುವುದರಲ್ಲಿಯೇ ಸಾರ್ಥಕ್ಯ ಕಂಡವಳು. ಜೊತೆಗೊಂದಿಷ್ಟು ಪುಡಿಕಾಸು ಸಂಪಾದಿಸಲು, ತನಗೆ ಗೊತ್ತಿರುವಂಥ ವಿದ್ಯೆಯಾದ ಅಡುಗೆಯಿಂದಲೇ, ಮದುವೆ ಮುಂತಾದ ಸಮಾರಂಭಗಳಿಗೆ ಲಡ್ಡು ತಾನೇ ಕೈಯಾರೆ ತಯಾರಿಸಿ, ಅಲ್ಲಿಗೆ ಹೋಗಿ ಕೊಟ್ಟು ಬರುವಂಥವಳು. ಆ ಹಣವನ್ನು ಆಪದ್ಧನವೆಂದು ಕಾದಿರಿಸುವವಳೇ ಹೊರತು, ತನ್ನ ಬಟ್ಟೆಬರೆ, ಅಲಂಕಾರಗಳಿಗೆ ಖರ್ಚು ಮಾಡುವಂಥವಳಲ್ಲ! ಒಟ್ಟಿಗೆ ಬಾಳುವುದಕ್ಕೆ ಸಂಗಾತಿ ಪರಿಪೂರ್ಣನಾಗಿರಬೇಕಿಲ್ಲ, ಒಬ್ಬರಿಗೊಬ್ಬರು ಪೂರಕವಾಗಿದ್ದರೆ ಸಾಕು ಎಂಬುದು ಇವಳ ತತ್ವ. ಮಕ್ಕಳನ್ನು ಬೆಳೆಸುವಲ್ಲಿಯೂ ಆಕೆ ನಿರಾಳ. ಟೀನೇಜ್ ಮಗಳು ತುಂಡುಬಟ್ಟೆ ಹಾಕಿಕೊಂಡು, ಕಾಫೀ ಡೇ ಹೋಗುವುದನ್ನು ಅತೀ ಸಾಮಾನ್ಯ ವಿಷಯದಂತೆ ಸ್ವೀಕರಿಸುವಷ್ಟು, ತನ್ನ ಮುಂದೆಯೇ ತನ್ನ ಗಂಡ, ಪರ ನಾರಿಯನ್ನು ಹಗ್ ಮಾಡುವುದನ್ನು ಒಪ್ಪಿಕೊಳ್ಳುವಷ್ಟು, ಆಧುನಿಕ ಮನೋಧರ್ಮ ಇವಳಲ್ಲಿದೆ. ಗೇ, ಲೆಸ್ಬಿಯನ್ ಸಂಬಂಧಗಳನ್ನು ಒಪ್ಪಿಕೊಳ್ಳಲು ಹಿಂದೆ ಮುಂದೆ ನೋಡುವಂಥ ಸುಶಿಕ್ಷಿತ ಮನೋವರ್ಗದ ನಡುವೆ, ಅವರದು ಹೃದಯವಲ್ಲವೇ? ಅವರು ಕೂಡ ಪ್ರೀತಿಸಲು, ಬದುಕಲು ಅರ್ಹರು ಎನ್ನುವಂಥ, ಗಂಡ, ಮಕ್ಕಳ ಆಧುನಿಕ ಮನಸ್ಸನ್ನು ಯಾವುದೇ ತಂಟೆ, ತಕರಾರಿಲ್ಲದೆ ಒಪ್ಪಿಕೊಳ್ಳುವಂಥ ವಿಶಾಲ ಮನಸ್ಸು ಈಕೆಯದು. ಈ ಆಧುನಿಕ ಜಗತ್ತಿನಲ್ಲಿ ಇದ್ದು ಕೂಡ ಇರದಂಥವಳು. ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಲು, ಭಾವನೆಗಳನ್ನು ವ್ಯಕ್ತ ಪಡಿಸಲು ಭಾಷೆಯ ಹಂಗೇಕೆ? ತಾವೇ ಅವರ ಜಾಗದಲ್ಲಿ ನಿಂತು ನೋಡಿದರೆ ಅವರು ಅರ್ಥವಾಗುತ್ತಾರೆ ಎನ್ನುವ ಮನೋಭಾವದವಳು. ಆದರೆ ಈಕೆಯನ್ನು, ಈಕೆಯ ಮನಸ್ಸನ್ನು ಅರ್ಥ ಮಾಡಿಕೊಳ್ಳದ ಗಂಡ ಮತ್ತು ಮಗಳು, ಈಕೆಯದು ಗೊಡ್ಡು ಸ್ವಭಾವವೆಂದು, ಈ ಜಗತ್ತಿನಲ್ಲಿ ಬದುಕಲು ಕೂಡ ಅನರ್ಹವೆಂದೂ, ಇಂಗ್ಲೀಷ್ ಭಾಷೆ ಬರದ ಈಕೆ ಅಡುಗೆಮನೆಯಲಿರಷ್ಟೇ ಲಾಯಕ್ಕೆಂದೂ, ಸಮಯ ಸಿಕ್ಕಾಗಲೆಲ್ಲಾ ಪರಿಹಾಸ್ಯ ಮಾಡುವ ಗಂಡ, ಅದನ್ನು ತನ್ನ ಉಪಯೋಗಕ್ಕೆ ಬಳಸಿಕೊಳ್ಳುವ ಮಗಳು, ಇವರೀರ್ವರ ಅಪಹಾಸ್ಯದಿಂದ ನೋವಾದರೂ, ಸಂಕಟವಾದರೂ, ತೋರಿಸಿಕೊಳ್ಳದ ಸಂಯಮಿ.




