ವಿಷಯದ ವಿವರಗಳಿಗೆ ದಾಟಿರಿ

Archive for

6
ಆಕ್ಟೋ

ಕಾವೇರಿಗಾಗಿ ಕರ್ನಾಟಕದ ಜನರ ಜೊತೆಯಾಗಿ

6
ಆಕ್ಟೋ

ಆಯಸ್ಕಾಂತ

-ಪ್ರಜ್ವಲ್ ಕುಮಾರ್

ಈ ಮೊಬೈಲ್ ಅಲ್ಲಿ ಬ್ಯಾಟರಿನೆ ಇರಲ್ಲ ಗೇಮ್ ಆಡೋಣ ಅಂದ್ರೆ”,

“ಲೋ! ಬ್ಯಾಟಲ್ ಫೀಲ್ಡ್ ಗೇಮ್ ಸಿ.ಡಿ. ಇದ್ರೆ ಕೊಡೋ ಆ ಗೇಮ್ ಆಡಿಲ್ಲ ನಾನು”,

“ಒಂಥರಾ ಬೋರ್ ಹೊಡೀತಾ ಇದೆ ಕಣೆ! ಯಾವ್ದಾದ್ರು ಮೂವಿ ನೋಡೋಣ? ಟಿ.ವಿ. ಆನ್ ಮಾಡು, ಹೇಯ್! ಹ್ಯಾರಿ ಪಾಟರ್ ಬರ್ತಾ ಇದೆ ಕಣೆ. ಇರ್ಲಿ ಬಿಡು”

ಪೇಟೆಯಲ್ಲಿಯೇ ಹುಟ್ಟಿ, ಬೆಳೆದ ಅದೆಷ್ಟೋ ಸಣ್ಣ ಮಕ್ಕಳು ಇಷ್ಟು ಹೊತ್ತಿನ ತನಕ ಹೇಳಿದ ರೀತಿಲೇ ಮಾತಾಡ್ತಾ ಇರೋದನ್ನ ಕೇಳ್ತಾ ಇರ್ತೀವಿ. ಅದ್ಯಾಕೋ ಗೊತ್ತಿಲ್ಲ, ಕೆಲವು ಜನ ತಮ್ಮ ಮಕ್ಕಳಿಗೆ ಮತ್ತಷ್ಟು ಓದು »

5
ಆಕ್ಟೋ

ಬೆಂಗಳೂರು ಕನ್ನಡಿಗರಿಗೊಂದು ಬಹಿರಂಗ ಪತ್ರ

-ಭರತ್ ಬಿಕೆ

ಬೆಂಗಳೂರಲ್ಲೀ ಇದೀರಾ ? ಬೆಂಗಳೂರಿಗೆ ಬಂದ್ರಾ ?? ಸಂತೋಷ 🙂 ಬೆಂಗಳೂರಲ್ಲೇ ಹುಟ್ಟೀ, ಬೆಂಗಳೂರಲ್ಲೇ ಬೆಳೆದ್ರಾ ?? ತುಂಬಾ ಸಂತೋಷ 🙂

ಬೆಂಗಳೂರಲ್ಲೇ ಬದುಕಬೇಕು ಅಂತಾ ಇದೀರಾ ?? ಇನ್ನೂ ಸಂತೋಷ:)

ಆದರೇ ಇಲ್ಲಿನ ಭಾಷೆ, ನೆಲ, ಜಲ, ವ್ಯವಸ್ಥೆ, ಅವಸ್ಥೆ,ಸಮಸ್ಯೆಗಳ ಬಗ್ಗೆ ಸ್ವಲ್ಪ ಯೋಚನೆ ಮಾಡಿದ್ದೀರಾ?  ಅದಕ್ಕಾಗಿ, ಅದಕ್ಕೆ ಸಂಬಂಧಿಸಿದ ವಿಚಾರಗಳಲ್ಲೀ ಭಾಗವಹಿಸಿದ್ದೀರಾ ??

ಸಾರ್ವಜನಿಕವಾಗಿ ?? ವಯಕ್ತಿಕವಾಗಿ ??

ಅಷ್ಟೆಲ್ಲಾ ಯಾಕೇ ಬಿಡಿ.. ಫೇಸ್ ಬುಕ್ ಪ್ರೋಫೈಲಲ್ಲೀ ಪೋಸ್ಟ್ ಮಾಡಿದಿರಾ ? ಸಂಬಂಧಿಸಿದ ಪೋಸ್ಟ್ ಗಳಿಗೇ ಲೈಕ್ ಮಾಡಿಡ್ಡೀರಾ ?? ಕಮೇಂಟ್ ಕೊಟ್ಟಿದ್ದೀರಾ ??

ಮತ್ತಷ್ಟು ಓದು »

5
ಆಕ್ಟೋ

ಹೀಗೊಂದು ಅಧುನಿಕ ತುಘಲಕ್ ಸಂಸ್ಕೃತಿ

ಮಧುಚಂದ್ರ ಭದ್ರಾವತಿ

ಅಲ್ಲೊಂದು ದೇವಸ್ಥಾನದ ವಿಮಾನ ಗೋಪುರದ ಪ್ರತಿಷ್ಠಾಪನೆಯ  ಕಾರ್ಯಕ್ರಮ. ಕಾರ್ಯಕ್ರಮ ಅಂದರೆ ವೆಲ್ಕಮ್ ಕಮಿಟಿ ಅಂತ ಒಂದು ಕಾಲದಲ್ಲಿ ಇರುತಿತ್ತು . ಅವರು  ಮಾತ್ರ ದೇವಸ್ಥಾನದ ರಾಜ ಬೀದಿಯಲ್ಲಿ  ” ಕಾರ್ಯಕ್ರಮಕ್ಕೆ  ಆಗಮಿಸುವ ಭಕ್ತಾದಿಗಳಿಗೆ ಶುಭ ಕೋರುತ್ತಿದ್ದೇವೆ ” ಅಂತ ಎಲ್ಲೋ ಒಂದು ಬೋರ್ಡ್ ಹಾಕಿ ಕೈ ತೊಳೆದುಕೊಳ್ಳುತಾ ಇದ್ದರು .

ಈಗ ಕಾಲ ಬದಲಾಗಿದೆ  ” ವಿಮಾನ ಗೋಪುರದ ಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಭಕ್ತರಿಗೆ ಶುಭ ಕೋರುವವರು ..” ಎಂದು  ಮೂವತ್ತೆರಡು  ದಂತ ಪಂಕ್ತಿ ಗಳನ್ನು  ಪ್ರದರ್ಶಿಸುತ್ತಾ  ಕಾಲ್ಗಟೆ ಸ್ಮೈಲ್ ಕೊಡುತ್ತ ನಿಂತಿರುವ  ನರ ರೊಪದ ಅಧುನಿಕ ತುಘಲಕ  ಭಾವ ಚಿತ್ರಗಳು  ಎಲ್ಲ್ ಎಲ್ಲಿ ನೋಡಿದರು ರಾರಾಜಿಸುತ್ತಿರುತ್ತವೆ .

ಈ ರೀತಿಯ ಹುಚ್ಚು ಮನಸ್ಸಿನ ಅವಿವೇಕ ಎಲ್ಲಿಂದ ಬಂತೋ ಗೊತ್ತಿಲ್ಲ. ಕೇವಲ ಪ್ರಚಾರ ಮತ್ತು ರಾಜಕೀಯ ಲಾಭ ಮಾಡಿಕೊಳ್ಳಲು ತಮ್ಮ ಇರುವಿಕೆ ಮತ್ತು ಶಕ್ತಿ ಪ್ರದರ್ಶನ ಮಾಡಲು  ಕೀಳು ಮಟ್ಟಕ್ಕೆ ಪುಡಾರಿಗಳು ಇಳಿಯುತ್ತಾರೆ. ಆವರಿಗೆ ಸಾತ್ ನೀಡಲು ನಮ್ಮ ನೆಚ್ಚಿನ ಜನ ನಾಯಕ  ಎಂದು ಅವರ ಪಕ್ಕದಲ್ಲಿ ತಮ್ಮದೊಂದು ಮುಖಾರವಿಂದ ಇರಲಿ ಎಂದು  ಮರಿ ಪುಡಾರಿಗಳು ಊರ ತುಂಬೆಲ್ಲ ಫ್ಲೆಕ್ಷ್ ಹಾಕಿ ಮೆರೆಯುತ್ತಾರೆ.

 ಮಳೆಗಾಲಕ್ಕೆ ಸರಿಯಾಗಿ ಮಳೆ ಬರುತ್ತೋ ಇಲ್ಲವೋ, ಹಿಂದೂಗಳ ಹಬ್ಬ ಬಂದಾಗ ಹಿಂದುಗಳಿಗೆ , ಮುಸ್ಲಿಂರ ಹಬ್ಬಕ್ಕೆ ಮುಸ್ಲಿಮರಿಗೆ , ಕ್ರಿಶ್ಚಿಯನ್ನರ ಹಬ್ಬ ಬಂದಾಗ ಕ್ರಿಶ್ಚಿಯನ್ನರಿಗೆ ಶುಭಾಶಯಗಳ ಫ್ಲೆಕ್ಷ್ ಬ್ಯಾನರ್ ಮಾತ್ರ ಬಂದೆ ಬರುತ್ತೆ.

ಮತ್ತಷ್ಟು ಓದು »

3
ಆಕ್ಟೋ

ಕಾನೂನಿನಂಗಳ ೯ : ಹೆಣ್ಣಿಗೆ ಆಸ್ತಿಯಲ್ಲಿ ಸಮಾನ ಹಕ್ಕು

ಉಷಾ ಐನಕೈ  ಶಿರಸಿ

ಭಾರತೀಯ ಸಂಸ್ಕೃತಿಗೆ ಜಾಗತಿಕ ಮಟ್ಟದಲ್ಲಿ ಒಂದು ವಿಶಿಷ್ಟವಾದ ಸ್ಥಾನಮಾನ ಇದೆ. ವೈವಿಧ್ಯಮಯವಾದ ಭೌಗೋಲಿಕ ಸ್ವರೂಪ, ವಿಭಿನ್ನವಾದ ಭಾಷೆ, ಆಚಾರ, ರೂಢಿ ಹೀಗೆ ಭಾರತದಲ್ಲಿ ಸಾಂಸ್ಕೃತಿಕ ವೈವಿಧ್ಯತೆ ಅಪಾರ. ಈ ಕಾರಣಕ್ಕಾಗೇ ಭಾರತದೇಶ ಜಾಗತಿಕ ಕುತೂಹಲದ ತಾಣವಾಗಿದೆ. ಭಾರತೀಯ ಸಮಾಜಕ್ಕೆ ಸಾವಿರಾರು ವರ್ಷಗಳ ಪರಂಪರೆ ಇದೆ. ಇಷ್ಟೊಂದು ವರ್ಷ ಈ ಸಂಸ್ಕೃತಿ ಸುಸಂಬದ್ಧವಾಗಿ ಸಾಗಿಬಂದಿದೆ ಅಂದರೆ ಇದರ ಹಿಂದೆ ನ್ಯಾಯ, ನೀತಿ, ಧರ್ಮ ಮುಂತಾದವುಗಳು ಇದೆ ಅಂತಲೇ ಅರ್ಥ. ಅಂದರೆ ಒಂದು ರೀತಿಯ ಕಾನೂನುಗಳ ಪರಿಕಲ್ಪನೆಯಲ್ಲೇ ನಮ್ಮ ಸಂಸ್ಕೃತಿ ಸಾಗಿಬಂದಿದೆ. ಅದನ್ನೇ ಸಂಪ್ರದಾಯ, ರೂಢಿ, ಶ್ರುತಿ, ಸ್ಮೃತಿ, ಉಪನಿಷತ್ ಮುಂತಾದವುಗಳಾಗಿ ಕಾನೂನಿನ ಅಂಗವೆಂದು ಗುರುತಿಸಲ್ಪಟ್ಟಿವೆ. ನಾವಿಂದು ನೋಡುತ್ತಿರುವ ಹಿಂದೂ ಕಾನೂನು ಪ್ರಾಚೀನ ಭಾರತದಲ್ಲಿನ ಸಂಪ್ರದಾಯ, ಪದ್ದತಿ, ಸ್ಮೃತಿಗಳನ್ನಾಧರಿಸಿಯೇ ಇದೆ.

ಈ ಹಿಂದೂ ಕಾನೂನು ಎನ್ನುವುದು ಎಲ್ಲ ಭಾರತೀಯರಿಗೆ ಅಥವಾ ಹಿಂದೂಗಳು ಎನಿಸಿಕೊಂಡ ಭಾರತೀಯರಿಗೆ ಅನ್ವಯಿಸುತ್ತದೆ. ಇದರಲ್ಲಿ ವಿವಾಹ, ಜೀವನಾಂಶ, ದತ್ತಕ, ವಾರಸಾ, ಸಂರಕ್ಷ ಅಧಿನಿಯಮ, ಆಸ್ತಿ ವಿಭಾಗ ಮುಂತಾದವುಗಳೆಲ್ಲ ಬರುತ್ತವೆ.

ಮತ್ತಷ್ಟು ಓದು »

2
ಆಕ್ಟೋ

ಪದವೀಧರೆಯಾದೆ

– ಮೂಲ್ಕಿ ನಾಗ

ಉಲ್ಲಾಸ ಮಹದೊಲ್ಲಾಸ ಆಹ್ಲಾದ
ಲಾಸ್ಯ ನಾಟ್ಯವಾಡುತಿದೆ ಇಂದು
ಪದ ವಾಕ್ಯಗಳಿಂದ ವರ್ಣಿಸಲಾಗದು
ಗದ್ಯ ಪದ್ಯಗಳಿಂದ ಬಣ್ಣಿಸಲಾಗದು
ಈ ಧರೆಯಲೊಂದು ಒಂದು ಪದವಿ
ಪಡೆದ ವೀರೇ ಪದವೀಧರೆಯಾದೆ

ಅದೆಷ್ಟೂ ಪರೀಕ್ಷೆಗಳೋ
ಅದೇನೋ ನಿರೀಕ್ಷೆಗಳೋ
ಏನೇನೋ ಅನಿರೀಕ್ಷೆಗಳೋ

ಮುಗಿಯಿತೊಂದು ಶುರುವಾಯಿತು
ಇನ್ನೊಂದು ಮತ್ತೊಂದು
ಬರುವುದು ಹೋಗುವುದು
ವಾಲದೆ ಜಾರದೆ ಮುನ್ನಡೆದರೆ
ಪರಿ ಪರಿಯ ಪರಿಶ್ರಮ ಕ್ರಮವಾಗಿ
ಫಲ ಸಫಲ ಪ್ರತಿಫಲ ಸುಫಲ

ಹೆತ್ತವರ ತೆತ್ತವರ ಹಕ್ಕಿನವರ
ಕಥೆ ವ್ಯಥೆ ಗಾಥೆ ಗಾದೆ ಹಕ್ಕಿಗಳ
ಸುರ ಪುರ ಗೋಪುರ ಆಶಾಗೋಪುರ
ಅರ್ಥೈಸು! ವ್ಯರ್ಥ ಅನರ್ಥವಾಗದೆ
ಮತ್ತಷ್ಟು ಓದು »

1
ಆಕ್ಟೋ

ಅಮೃತಾ

-ಮಾಲಿನಿ ಭಟ್

ಪ್ರೀತಿಯ ಕಂದ ನೀನು

ವಾತ್ಸಲ್ಯದ ಬಿಂದು ನೀ

ನಾ ಕಂಡ ಮೊದಲ ರಶ್ಮಿ,

ಮುಗ್ಧತೆಯ ಮೂರ್ತಿ ,

ಆ ಎಳೆ ಸ್ಪರ್ಶ,

ಆಹಾ!! ಅದೆಂತಹ ಮಧುರ

ಇರಲಿ ಸ್ಪರ್ಶ ನಿರಂತರ….

ಮುದ್ದು ಮುಖದ

ಏನೂ ಅರಿಯದ ಪುಟ್ಟ ಮೊಗ್ಗು ,

ಆ ನಿನ್ನ ನಗು ,

ಅದರಲ್ಲಿಯ ಅರ್ಥ ,

ನಾ ಏನೆಂದು ಊಹಿಸಲಿ,

ಮುಗ್ಧತನಡಿ ಹೇಗೆ ಗೃಹಿಸಲಿ,

ಆ ನೂತನ ನಗು ನಿರಂತರ ………..

ಪುಟ್ಟ – ಪುಟ್ಟ ಹೆಜ್ಜೆ ,

ಜಗವ ಗೆದ್ದ ಸಂಭ್ರಮ,

ಕಣ್ಣಲ್ಲಿ ಇನ್ನೇನೋ ತವಕ ,

ಮುಂದಿನದನ್ನು ಕಲಿಯುವ ಕಾತರ,

ಮೌನವಾಗೇ ಎಲ್ಲ ಗೆಲ್ಲುವೇ,

ಆ ತಾಳ್ಮೆ ನಿರಂತರ …………..

(ನನ್ನ ಪುಟ್ಟ ಮಗಳು ಅಮೃತಾ ಹುಟ್ಟಿದಾಗ , ಅವಳ ಆಟ , ನಗು , ಮಗುವಿನ ಆ ಮುಗ್ಧತೆಯನ್ನು ನೋಡಿ ಬರೆದ ಕವನ )

* * * * * * *

1
ಆಕ್ಟೋ

ಜಾತ್ಯಾತೀತ ‘ಜಿನ್ನಾ’ ಖಳ ನಾಯಕನಾದರೆ ‘ಗಾಂಧೀ’ ಯಾರು?..

– ಅಶ್ವಿನ್ ಅಮೀನ್

ಕೆಲವು ವರ್ಷಗಳ ಹಿಂದೆ ಮಾಜಿ ಉಪ ಪ್ರಧಾನಿ ಎಲ್. ಕೆ.ಅಡ್ವಾಣಿ ಯವರು ಪಾಕಿಸ್ತಾನದಲ್ಲಿರುವ ಮಹಮ್ಮದ್ ಆಲಿ ಜಿನ್ನಾ ಸಮಾಧಿಗೆ ಭೇಟಿ ಕೊಟ್ಟು ‘ಜಿನ್ನಾ ಒಬ್ಬ ಜಾತ್ಯಾತೀತ ನಾಯಕ’ ಎಂದು ಉದ್ಗರಿಸಿದ್ದರು. ಆ ಹೇಳಿಕೆ ಭಾರತದಾದ್ಯಂತ ಎಷ್ಟು ಸಂಚಲನವನ್ನು ಉಂಟು ಮಾಡಿತ್ತೆಂದರೆ ಸ್ವಪಕ್ಷೀಯರೇ ಆಡ್ವಾಣಿಯನ್ನು ವಿರೋಧಿಸತೊಡಗಿದರು.ಆದರೆ, ಅಷ್ಟು ಹಿರಿಯ ಮುತ್ಸದ್ದಿಯಾದ ಆಡ್ವಾನಿಯವರು ಯಾವುದೇ ಆಧಾರ – ಕಾರಣಗಳಿಲ್ಲದೆ ಆ ಹೇಳಿಕೆ ನೀಡಿಯಾರೇ ಎಂಬ  ಪ್ರಶ್ನೆ ನನ್ನನ್ನು ಕಾಡುತ್ತಲೇ ಇತ್ತು. ಅದಕ್ಕೆ ಉತ್ತರ ಹುಡುಕುತ್ತಾ ಇತಿಹಾಸದ ಪುಟಗಳನ್ನು ತಿರುವ ಹೊರಟ ನನಗೆ ಕಂಡು ಬಂದ ಸತ್ಯ ಮಾತ್ರ ನಿಜಕ್ಕೂ ಆಘಾತಕಾರಿ!. ‘ಧರ್ಮಕ್ಕಿಂತ ದೇಶ ಮೊದಲು, ನಾನು ಮೊದಲು ಭಾರತೀಯ’ ಎನ್ನುತ್ತಿದ್ದ ಮಹಮ್ಮದ್ ಆಲಿ ಜಿನಾ ಭಾರತವನ್ನು ಒಡೆಯುವಷ್ಟರ ಮಟ್ಟಿಗೆ ಹೋಗಲು ಕಾರಣೀಭೂತರಾದರೂ ಯಾರು? ಆ ಸತ್ಯಗಳನ್ನು ತಿಳಿಯುತ್ತಾ ಹೋದಂತೆ ಆಡ್ವಾಣಿಯವರು ಜಿನ್ನಾರ ಬಗ್ಗೆ ಅಂದು ಹೇಳಿದ ಮಾತುಗಳು ಸತ್ಯವಾಗುತ್ತಾ ಹೋಯಿತು.

ಮಹಮ್ಮದ್ ಆಲಿ ಜಿನ್ನಾ… ಆತನ ವ್ಯಕ್ತಿತ್ವ ಎಂದಿಗೂ ಒಬ್ಬ ಮುಸ್ಲಿಮನಿಗೆ ತಕ್ಕುದಾಗಿ ಇರಲಿಲ್ಲ. ಆತನೆಂದೂ ಗಡ್ಡ ಬಿಡಲಿಲ್ಲ, ಸ್ಕಲ್ ಕ್ಯಾಪ್ ಹಾಕಲಿಲ್ಲ, ದಿನಕ್ಕೆ ಐದು ಬಾರಿ ನಮಾಜ್ ಮಾಡಲಿಲ್ಲ, ಮದರಸಾದಲ್ಲಿ ಕಲಿಯಲಿಲ್ಲ… ಮದುವೆಯಾಗಿದ್ದು ಪಾರ್ಸಿ ಹುಡುಗಿಯನ್ನು, ಕಲಿತಿದ್ದು ಕ್ರೈಸ್ತ ಕಾನ್ವೆಂಟ್ ನಲ್ಲಿ, ಇಂಗ್ಲೆಂಡ್ ನಲ್ಲಿ ಉನ್ನತ ವ್ಯಾಸಾಂಗ… ಆತ ಸಿಗರೇಟು ಸೇದುತ್ತಿದ್ದ, ಹಂದಿ ಮಾಂಸ ತಿನ್ನುತ್ತಿದ್ದ, ಮದ್ಯ ಸೇವಿಸುತ್ತಿದ್ದ… ಅಂತಹ ವ್ಯಕ್ತಿ ಅದೇಗೆ ಧರ್ಮಾಂಧನಾಗಲು ಸಾಧ್ಯ…?

ಮತ್ತಷ್ಟು ಓದು »