ವಿಷಯದ ವಿವರಗಳಿಗೆ ದಾಟಿರಿ

Archive for

6
ಮಾರ್ಚ್

‘ಮಾನವ ಹಕ್ಕು ಉಲ್ಲಂಘನೆ’ ಅನ್ನುವುದು ಮೋದಿಗೆ ಮಾತ್ರ ಅನ್ವಯವೇ?

– ರಾಕೇಶ್ ಶೆಟ್ಟಿ

NaModiಕಳ್ಳಬೆಕ್ಕು ತೀರ್ಥಯಾತ್ರೆಗೆ ಹೊರಟು ನಿಂತ ಕತೆ ಗೊತ್ತಿದೆಯಲ್ವಾ! ಅಮೇರಿಕಾದ ವಾರ್ಟನ್-ಇಂಡಿಯಾ ಎಕಾನಾಮಿಕ್ ಫೋರಂನ ವಾರ್ಷಿಕ ಸಭೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಭಾಷಣ ಮಾಡಲು ಆಹಾನ ಕೊಟ್ಟು ಕಡೆಗೆ ಎಡಪಂಥೀಯರ ಒತ್ತಾಯಕ್ಕೆ ಮಣಿದು ಅದನ್ನು ರದ್ದುಗೊಳಿಸಿ ಭಾರತದ ಸಂವಿಧಾನದಡಿ ಜನರಿಂದ ಚುನಾಯಿಸಿ ಬಂದ ಮುಖ್ಯಮಂತ್ರಿಯೊಬ್ಬರಿಗೆ ಅವಮಾನ ಮಾಡುವುದಿದೆಯಲ್ಲ ಅದು ಮೋದಿಗಾದ ಅವಮಾನವಲ್ಲ.ಬದಲಿಗೆ ಆ ರಾಜ್ಯಕ್ಕಾದ ಅವಮಾನ ಕೂಡ ಹೌದು.ಗುಜರಾತ್ ಗಲಭೆಯ ನಂತರ ಮೋದಿಯೆಡೆಗೆ ಬೆನ್ನು ತಿರುಗಿಸಿ ನಿಂತಿದ್ದ ಐರೋಪ್ಯ ಒಕ್ಕೂಟ ಇವತ್ತು ಸ್ನೇಹ ಹಸ್ತಚಾಚಿ ನಿಂತಿದೆ.ಆದರೆ ತೀರ್ಥಯಾತ್ರೆಗೆ ಹೊರಟು ನಿಂತ ಕಳ್ಳಬೆಕ್ಕು ಅಮೇರಿಕಾ ಮಾತ್ರ ಇನ್ನು ಹುಸಿ ಧ್ಯಾನದಲ್ಲಿದ್ದಂತಿದೆ.ಮೋದಿಯ ವಿಷಯದಲ್ಲಿ ಅದೂ ಈಗಲೂ ಹಟಮಾರಿ ಧೋರಣೆಯನ್ನು ಮುಂದುವರೆಸಿಕೊಂಡು ಬಂದಿದೆ.

“ನೀವು ಬಯಸುವ ಬದಲಾವಣೆ ನೀವೆ ಆಗಿ ತೋರಿಸಿ” ಅಂದಿದ್ದರು ಗಾಂಧೀಜಿ.ಆದರೆ ಅಮೇರಿಕಾದ ವರಸೆ ಸಲ್ಪ ಉಲ್ಟಾ ಈ ವಿಷಯದಲ್ಲಿ “ತಾನು ಬಯಸುವ ಬದಲಾವಣೆ ಬೇರೆಡೆಯಲ್ಲಿ,ಬೇರಯವರಿಂದ ಆಗಬೇಕು.ತಾನು ಮಾತ್ರ ತನ್ನ ಚಾಳಿ ಬಿಡಲಾರೆ” ಅನ್ನುವಂತೆ.ಮೋದಿಯ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆಯ ಭಾಷಣ ಬಿಗಿಯುವ ಈ ಅಮೇರಿಕಾ ಇತಿಹಾಸದುದ್ದಕ್ಕೂ ಮಾಡಿಕೊಂಡು ಬಂದಿರುವುದೇನು?

Read more »

6
ಮಾರ್ಚ್

ಕನ್ನಡ ಶಿಕ್ಷಕರು ಬೇಕಾಗಿದ್ದಾರೆ – ಕನ್ನಡಿಗರಿಗೆ ಆದ್ಯತೆ

ನಮಸ್ಕಾರ ಗೆಳೆಯರೇ,

ಬೆಂಗಳೂರಿನಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ ” ಕನ್ನಡ ಲರ್ನಿಂಗ್ ಸ್ಕೂಲ್ ” ಸಂಸ್ಥೆ ಕೆಲಸ ಮಾಡುತ್ತಿರುವುದು ತಮ್ಮೆಲ್ಲರಿಗೂ ಗೊತ್ತಿರುವ ವಿಷಯವಾಗಿದೆ.
ಸಂತೋಷದ ವಿಷಯವೆಂದರೆ ಬಹಳಷ್ಟು ಜನ ಕನ್ನಡೇತರರು ಕನ್ನಡ ಕಲಿಯಲು ಆಸಕ್ತರಾಗಿದ್ದಾರೆ. ಇವರಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಗೆ ” ಕನ್ನಡ ಶಿಕ್ಷಕರು” ಬೇಕಾಗಿದ್ದಾರೆ.
ಕನ್ನಡ ಕಲಿಸುವ ಆಸಕ್ತಿ ಇದ್ದರೆ ಮತ್ತು ಈ ಕೆಳಗಿನ ನಿಯಮಗಳು ಒಪ್ಪಿಗೆಯಾದರೆ ನೀವು ನಮ್ಮನ್ನು ಸಂಪರ್ಕಿಸಬಹುದು:
************************************************************************************************************************
೧. ಕನ್ನಡ ಕಲಿಸುವ ತರಗತಿಗಳು ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ) ಮಾತ್ರ ನಡೆಯುವುದರಿಂದ, ಪ್ರತಿ ವಾರಾಂತ್ಯ ೪ ಗಂಟೆ ನಿಮ್ಮ ಸಮಯವನ್ನು ಮೀಸಲಿಡುವಂತಿದ್ದರೆ ಮಾತ್ರ ನಿಮ್ಮ ಒಪ್ಪಿಗೆ ಸೂಚಿಸಿ.
೨. ಮೊದಲು ೨ ತಿಂಗಳು ” ಕನ್ನಡ ಕಲಿಸುವುದು ಹೇಗೆ” ಎನ್ನುವುದನ್ನು ತರಬೇತಿ ನೀಡಲಾಗುತ್ತದೆ. ಆ ನಂತರವಷ್ಟೇ ಶಿಕ್ಷಕರು ತರಗತಿಗಳನ್ನು ತಾವಾಗಿಯೇ ತೆಗೆದುಕೊಳ್ಳಬಹುದು.
೩. ಕನ್ನಡೇತರರಿಗೆ ಕನ್ನಡ ಕಲಿಸುವ ಆಸಕ್ತಿ ಇರುವ ಅಭ್ಯರ್ಥಿಗಳಿಗೆ, “ಇಂಗ್ಲಿಷ್ ಭಾಷೆಯ ಮೇಲೆ ಹಿಡಿತವಿರಬೇಕು ಹಾಗು ಸ್ವಲ್ಪ ಮಟ್ಟಿಗಿನ ಹಿಂದಿ ಭಾಷೆಯನ್ನೂ ತಿಳಿದಿರಬೇಕು”.
೪. ಬಿ. ಎ; ಬಿ.ಎಡ್ ಅಥವಾ ಎಮ್. ಎ ; ಎಂ.ಎಡ್ ಮಾಡಿದ ಅಥವಾ ಮಾಡುತ್ತಿರುವ ಅಭ್ಯರ್ಥಿಗಳಿಗೂ ಅವಕಾಶವಿದೆ.
೫. ಕನ್ನಡ ಪಾಠ ಹೇಳಿ ಕೊಡುವ ಶಿಕ್ಷಕರಿಗೆ ಇಂತಿಷ್ಟು ಸಂಭಾವನೆ ಕೊಡಲಾಗುವುದು.
೬. ವಯಸ್ಸಿನ ಮಿತಿ ೨೫ ರಿಂದ ೪೦ ರ ವರೆಗೆ.
೭. ಕೊನೆಯದಾಗಿ ತಮಗೆ ಆಸಕ್ತಿ ಇದ್ದರಷ್ಟೇ ನಮಗೆ ಉತ್ತರವನ್ನು ಬರೆಯಿರಿ.
೮. ಆಸಕ್ತರು ತಮ್ಮ ಜಾತಕವನ್ನು ನಮಗೆ ಕಳಿಸಬಹುದು: school.kannada@gmail.com
೯. ಖಾಲಿ ಇರುವ ಹುದ್ದೆಗಳ ಸಂಖ್ಯೆ : ೦೨.
************************************************************************************************************************

ಧನ್ಯವಾದಗಳೊಂದಿಗೆ,
ಕನ್ನಡ ಲರ್ನಿಂಗ್ ಸ್ಕೂಲ್ ತಂಡ.
“ಕನ್ನಡ ಕಲಿಸಲು ಕೈ ಜೋಡಿಸಿ”.
೯೯೦೦೫೭೭೨೨೫