ಹೊಸ ಚಳುವಳಿಯ ಅರುಣೋದಯ
ಪ್ರೊ. ವಿವೇಕ ಧಾರೇಶ್ವರ, ಬೆಂಗಳೂರು
ವಚನ ಚಳುವಳಿ ಹಾಗೂ ಜಾತಿ ವ್ಯವಸ್ಥೆಯ ಕುರಿತ ಡಂಕಿನ್ ಅವರ ಪ್ರಬಂಧದ ವಿರುದ್ಧವಾಗಿ ನಡೆದ ವಾಗ್ದಾಳಿಯನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಅದರಲ್ಲೂ ಪ್ರೊ. ಶಿವಪ್ರಕಾಶರನ್ನು ಬಿಟ್ಟರೆ ಮತ್ಯಾರೂ ಆ ಪ್ರಬಂಧವನ್ನು ಓದಿದಂತೆ ಕಾಣುವುದಿಲ್ಲ. ಇಲ್ಲಿ ಗಮನಿಸಬೇಕಾದ ಎರಡು ಅಂಶಗಳಿವೆ: 1) ಇದು ಡಂಕಿನ್ ವಿಚಾರಕ್ಕೊಂದೇ ಹುಟ್ಟಿದ ವಿರೋಧವಲ್ಲ ಎಂಬುದು ಸ್ಪಷ್ಟ. ಬಾಲಗಂಗಾಧರರ ‘ಹೀದನ್..’ (ಸ್ಮೃತಿ-ವಿಸ್ಮೃತಿ) ಗ್ರಂಥವು ಹುಟ್ಟುಹಾಕಿದ ಸಂಶೋಧನಾ ಕಾರ್ಯಕ್ರಮದ ಕುರಿತ ಚರ್ಚೆಯಿಂದಾಗಿ ಹುಟ್ಟಿಕೊಂಡ ಚಿಂತನಾ ಪರಿಸರವನ್ನೇ ಇಲ್ಲಿ ಗುರಿಯಾಗಿಟ್ಟುಕೊಳ್ಳಲಾಗಿದೆ ಎಂಬುದು ಖಚಿತ. 2) ಇದನ್ನು ನಾನು ಗುಂಪು, ಸಮುದಾಯ ಎಂಬುದಾಗಿ ಗುರುತಿಸದೇ ಪರಿಸರ ಎಂದು ಏಕೆ ಕರೆಯುತ್ತೆನೆಂದರೆ, ಇಲ್ಲಿರುವವರು ಬೇರೆ ಬೇರೆ ದೇಶಗಳಿಗೆ ಸೇರಿದ್ದಾರೆ, ಬೇರೆ ಬೇರೆ ಭಾಷೆಗಳನ್ನು ಆಡುತ್ತಾರೆ, ವಿಭಿನ್ನ ಸಂಸ್ಥೆಗಳು ಹಾಗೂ ಸಾಮಾಜಿಕ ಹಿನ್ನೆಲೆಗಳಿಗೆ ಸೇರಿದ್ದಾರೆ. ಈ ಸಂಶೋಧಕರು ತಮಗಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ನೆಲೆಯಲ್ಲಿ ಮಾತ್ರವೇ ಒಟ್ಟಿಗೆ ಬಂದಿದ್ದಾರೆ. ಸಂಶೋಧನಾಸಕ್ತಿಯೇ ಇವರನ್ನೆಲ್ಲ ಒಟ್ಟಿಗೆ ತಂದಿದೆಯೇ ವಿನಃ ಯಾವುದೇ ರಾಜಕೀಯ ಉದ್ದೇಶವಾಗಲೀ, ಸಾಮಾಜಿಕ ಹೋರಾಟವಾಗಲೀ ಅಲ್ಲ. ಅವರ ಮೇಲೆ ನಡೆಯುತ್ತಿರುವ ದಾಳಿಯ ರಭಸವನ್ನು ಹಾಗೂ ಕೆಸರೆರಚಾಟದ ಸ್ವರೂಪವನ್ನು ವಿಶ್ಲೇಷಿಸುವುದಕ್ಕೂ ಮೊದಲು ಈ ಮೇಲಿನ ಎರಡೂ ಅಂಶಗಳನ್ನು ಗುರುತಿಸಿಕೊಳ್ಳುವುದು ಮುಖ್ಯ.
ಈ ಸಂಶೋಧಕರ ಸಂಶೋಧನೆಯ ಕುರಿತು ಚರ್ಚೆಯೇ ನಡೆಯುತ್ತಿಲ್ಲ, ಬದಲಾಗಿ ಈ ಸಂಶೋಧನೆಯ ರಾಜಕೀಯ ಪರಿಣಾಮದ ಕುರಿತು ಕಟು ಟೀಕೆಗಳು ಬರುತ್ತಿವೆ. ಒಂದು ಸಂಶೋಧನಾ ಕಾರ್ಯಕ್ರಮದ ಪರಿಣಾಮದ ಕುರಿತು ಚರ್ಚಿಸಲೇ ಬಾರದು ಎಂದು ನಾನು ಹೇಳುತ್ತಿಲ್ಲ. ಆದರೆ ಅಂಥ ಚರ್ಚೆಗೂ ಮುನ್ನ ಆ ಸಂಶೋಧಕರ ವಾದ ಹಾಗೂ ಸಂಶೋಧನೆಗಳು ಏನು ಎಂಬುದನ್ನು ತಿಳಿದುಕೊಳ್ಳುವುದಾದರೂ ಬೇಡವೆ? ಈ ಸಂಶೋಧನೆಯು ಹೊಸದೇ ಆದ ವಿಚಾರವೊಂದನ್ನು ತಿಳಿಸುತ್ತಿದೆ, ಸಾಮಾನ್ಯ ಜ್ಞಾನಕ್ಕೆ ವಿರುದ್ಧವಾಗಿದೆ, ಹಾಗೂ ಬೌದ್ಧಿಕ ಸವಾಲನ್ನು ಎಸೆಯುತ್ತದೆ ಎಂಬ ಕಾರಣಕ್ಕಾದರೂ ಅದನ್ನು ಗಂಭೀರವಾಗಿ ಪರಿಶೀಲಿಸುವ ಒಂದು ಪ್ರಯತ್ನವಾದರೂ ಕಾಣಬೇಡವೆ? ಸ್ಮೃತಿ-ವಿಸ್ಮೃತಿಯಲ್ಲಿ ಬರುವ ಹೇಳಿಕೆಯೊಂದು ನಮ್ಮಲ್ಲಿ ಅನೇಕರನ್ನು ಕಾಡಿದೆ: ಅದೆಂದರೆ, “ಹಿಂದೂಯಿಸಂ” ಎಂಬುದು ಅಸ್ತಿತ್ವದಲ್ಲಿ ಇಲ್ಲವೊಂದೇ ಅಲ್ಲ ಯುರೋಪಿಯನ್ನರು ಅಂಥದ್ದೊಂದು ಸಂಗತಿ ಇದೆ ಎಂಬುದಾಗಿ ಅಂದುಕೊಂಡೇ ಭಾರತೀಯ ಸಂಸ್ಕೃತಿಯನ್ನು ಅನುಭವಿಸಿದರು. ಈ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲಿಕ್ಕಾಗಿ ಸ್ಮೃತಿ-ವಿಸ್ಮೃತಿಯಲ್ಲಿ ರಿಲಿಜನ್ನಿನ ಕುರಿತು ಒಂದು ಸಿದ್ಧಾಂತವನ್ನು ರಚಿಸಿ ರಿಲಿಜನ್ನೆಂದರೆ ಏನು? ಅದು ಭಾರತದಲ್ಲಿ ಇರಲಿಕ್ಕೆ ಹೇಗೆ ಸಾಧ್ಯವಿಲ್ಲ ಎಂಬುದನ್ನು ವಿವರಿಸಲಾಗಿದೆ. ಇವು ಗಹನವಾದ ಹೇಳಿಕೆಗಳಾಗಿದ್ದು ಈ ವಾದವನ್ನು ಅರ್ಥಮಾಡಿಕೊಂಡ ನಮ್ಮಲ್ಲಿ ಕೆಲವರಾದರೂ ರೋಮಾಂಚಿತರಾದೆವಷ್ಟೇ ಅಲ್ಲ ಸಮಾಜ ವಿಜ್ಞಾನಗಳಲ್ಲಿ ಸಿದ್ಧಾಂತವನ್ನು ಕಟ್ಟುವುದು ಸಾಧ್ಯ ಎಂಬ ಹೇಳಿಕೆಗೆ ದೃಷ್ಟಾಂತವನ್ನು ಕಣ್ಣಾರೆ ನೋಡಿ ಸ್ಫೂರ್ತಿಗೊಂಡೆವು. ಅಂದರೆ ನಮಗೆ ಸಾಮಾಜಿಕ ಜಗತ್ತಿನ ಜ್ಞಾನವನ್ನು ನಿಸರ್ಗ ವಿಜ್ಞಾನಗಳ ದಾರಿಯಲ್ಲೇ, ಅದಕ್ಕೂ ಭಿನ್ನವಾಗಿ ಕಟ್ಟಬಹುದು ಎಂಬುದನ್ನು ಅದು ತೋರಿಸಿತು. ಈ ಸಿದ್ಧಾಂತವನ್ನು ಕಟ್ಟುವ ಕೆಲಸವೇ ಇಂದು ನಾನು ಉಲ್ಲೇಖಿಸುತ್ತಿರುವ ಈ ಹೊಸ ಸಂಶೋಧನಾ ಪರಿಸರವನ್ನು ರೂಪಿಸಿದೆ.
ಈ ಪರಿಸರವು ನಡೆಸಿದ ಸಂಶೋಧನೆಯ ವೈವಿಧ್ಯಪೂರ್ಣವಾಗಿದೆಯಾದರೂ ಪರಸ್ಪರ ಸಹಕಾರ ಹಾಗೂ ಸಂವಾದದಿಂದ ಸಿದ್ಧಾಂತಗಳನ್ನು ಕಟ್ಟಿದ ಕಾರಣದಿಂದ ಅವಕ್ಕೆಲ್ಲ ಒಂದು ಅಂತಃಸಂಬಂಧವೂ ಇದೆ. ಈ ಮುಂದಿನ ವಿಷಯಗಳ ಕುರಿತು ಗಂಭೀರ ಸಂಶೋಧನೆಗಳು ನಡೆಯುತ್ತಿವೆ: ಅ) ರಿಲಿಜನ್ನಿನ ಸಂಸ್ಕೃತಿಗಳಲ್ಲಿ (ಯುರೋಪಿನಲ್ಲಿ) ಕಾನೂನು ಹಾಗೂ ಕಾನೂನಿನ ಸಂಸ್ಥೆಗಳ ಸ್ವರೂಪದ ಕುರಿತು. ಆ) ಕ್ರಿಯಾಜ್ಞಾನದ ಕುರಿತು ಹೊಸ ಸಿದ್ಧಾಂತದ ಆಧಾರದ ಮೇಲೆ fetishism ಕುರಿತು ಮಾರ್ಕ್ಸ್ ನ ಸಿದ್ಧಾಂತವನ್ನು ಪರಿಷ್ಕರಿಸುವುದು. ಇ) ಭಾರತೀಯ ನೀತಿ ಸಿದ್ಧಾಂತಗಳಿಗೂ ಪಾಶ್ಚಾತ್ಯ ಚಿಂತನೆಯ ನಾರ್ಮೇಟಿವ್ ರಚನೆಗಳಿಗೂ ವ್ಯತ್ಯಾಸವನ್ನು ಬಿಡಿಸಿಡುವುದು. ಈ) ವಿಭಿನ್ನ ಸಂಸ್ಕೃತಿಗಳು ಪರಸ್ಪರ ಅರ್ಥಮಾಡಿಕೊಳ್ಳುವಾಗ ಪರಿಕಲ್ಪನೆಗಳು ಹೇಗೆ ವಿಕೃತವಾಗುತ್ತವೆ? ಹಾಗೂ ಅದರಲ್ಲಿ ಬೌದ್ಧಿಕ ದಾಸ್ಯದ ಪಾತ್ರವೇನು? ಇತ್ಯಾದಿಯಾಗಿ ಇನ್ನೂ ಅನೇಕ ಸಾಂಸ್ಕೃತಿಕ ಹಾಗೂ ರಾಜಕೀಯ ಪ್ರಶ್ನೆಗಳನ್ನು ಎತ್ತಿಕೊಳ್ಳಲಾಗಿದೆ. ಈ ಸಂಶೋಧನೆಗಳು ಈಗಾಗಲೇ ಹೊಸ ಸಾಧ್ಯತೆಗಳನ್ನು ತೆರೆದಿವೆ, ಜೊತೆಗೇ ಮಾರ್ಕ್ಸ್ ವಾದ ಹಾಗೂ ಲಿಬರಲಿಸಂಗಳು ನಮಗೆ ಬಳುವಳಿಯಾಗಿ ನೀಡಿದ ಬೌದ್ಧಿಕ ಸಂಪನ್ಮೂಲಗಳು ಬರಿದಾಗಿವೆ ಎಂಬುದನ್ನು ಅರಿತುಕೊಳ್ಳಲಿಕ್ಕೂ ಸಹಾಯ ಮಾಡಿವೆ. ಈ ಹೊಸ ಸಂಶೋಧನಾ ಪರಿಸರವು ಕಣ್ಣಿಗೆಸೆಯುವಂತೆ ಬಲಗೊಂಡು ಹಬ್ಬಲಿಕ್ಕೆ ಕಾರಣವೆಂದರೆ ವಿಭಿನ್ನ ಕ್ಷೇತ್ರದಲ್ಲಿ ನಡೆಯುವ ವೈವಿಧ್ಯಪೂರ್ಣ ಸಂಶೋಧನೆಗಳಲ್ಲಿ ಒಂದು ಮತ್ತೊಂದರಿಂದ ಹೊಳಹುಗಳನ್ನು ಪಡೆಯುತ್ತದೆ. ಬಹುಶಃ ಈ ಹಿಂದೆ ಎಂದೂ ಕಂಡರಿಯದ ಬೌದ್ಧಿಕ ಉತ್ಸಾಹವು ನಮ್ಮ ಗ್ರಹಿಕೆಗೆ ಬರತೊಡಗಿದೆ.
ಇದಕ್ಕೆ ತದ್ವಿರುದ್ಧವಾಗಿ ಶೈಕ್ಷಣಿಕ ಜಗತ್ತು ಕಳೆದ ಕೆಲವು ವರ್ಷಗಳಿಂದ ನಿಂತ ನೀರಾಗಿದೆ. ಇದು ಭಾರತಕ್ಕಾಗಲೀ, ಕರ್ನಾಟಕಕ್ಕಾಗಲೀ ಸೀಮಿತವಲ್ಲ, ಅಮೇರಿಕಾ ಹಾಗೂ ಯುರೋಪುಗಳಲ್ಲಿ ಕೂಡ ಬಹುತೇಕ ಜನರು ಗಮನಕ್ಕೆ ತೆಗೆದುಕೊಳ್ಳದೇ ಇರುವ ಒಂದು ವಸ್ತುಸ್ಥಿತಿಯಾಗಿದೆ. ಅಮೇರಿಕಾದಲ್ಲಂತೂ ಈ ಕುರಿತು ಅರಿವೇ ಇದ್ದಂತಿಲ್ಲ, ಆದರೆ ಅದು ಕಳೆದ ನಾಲ್ಕೈದು ದಶಕಗಳಿಂದ ಅಲ್ಲಿನ ಸಂಶೋಧನೆಗಳ ಮೇಲೆ ತನ್ನ ದುಷ್ಪರಿಣಾಮವನ್ನುಂಟುಮಾಡಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಅಲ್ಲಿನ ವಿಶ್ವವಿದ್ಯಾಲಯಗಳು ಸಮಾಜದಿಂದ ಬೇರ್ಪಟ್ಟಿವೆ ಹಾಗೂ ಶೈಕ್ಷಣಿಕ ಚರ್ಚೆಗಳು ಕೇವಲ “ಶೈಕ್ಷಣಿಕ”ಮಾತ್ರವೇ ಆಗಿರುತ್ತವೆ. ಯುರೋಪಿನಲ್ಲಿ ಫಿಲಾಸಫಿ ಹಾಗೂ ಸಮಾಜವಿಜ್ಞಾನ ಚಿಂತನೆಗಳು ಗಾಭರಿಹುಟ್ಟಿಸುವಷ್ಟು ಅವನತಿ ಹೊಂದಿವೆ. ಅದರ ಪರಿಣಾಮವಾಗಿ ಅಲ್ಲಿನ ಶೈಕ್ಷಣಿಕ ವ್ಯವಸ್ಥೆಯೊಂದೇ ಅಲ್ಲ ವಿಷಯಗಳಲ್ಲಿ ಕೂಡ ಅಮೇರಿಕಾ ಮಾದರಿಯನ್ನು ಅಪ್ಪಿಕೊಳ್ಳುವ ಹತಾಶ ಪ್ರಯತ್ನಗಳು ನಡೆಯುತ್ತಿವೆ. ಭಾರತದ ನಗರಕೇಂದ್ರಿತ ವಿದ್ವತ್ ಲೋಕವು ಈಗ ಅಮೇರಿಕಾದ ಶೈಕ್ಷಣಿಕ ವಲಯದೊಳಗೆ ವಿಲೀನವಾಗಿರುವುದರಿಂದ ಅದು ಅಲ್ಲಿನ ಸಂಶೋಧನೆಯು ನಾರುತ್ತಿರುವುದನ್ನು ಗುರುತಿಸುವುದು ಹೋಗಲಿ, ಇದೊಂದು ಬೌದ್ಧಿಕ ಪರ್ವಕಾಲ ಎಂಬುದಾಗಿ ಭಾವಿಸಿಕೊಳ್ಳುತ್ತ ತನ್ನನ್ನೇ ತಾನು ಮೋಸಗೊಳಿಸಿಕೊಳ್ಳುತ್ತಿರುವುದು ಒಂದು ದೊಡ್ಡ ವಿಪರ್ಯಾಸ. ಇದು ಅಮೇರಿಕಾದ ಮೇಲೆ ಗೂಬೆ ಕೂರಿಸುವುದಕ್ಕೆ ಹೇಳಿದ ಮಾತಲ್ಲ, ಆದರೆ ಭಾರತ ಹಾಗೂ ಯುರೋಪಿನ ಶಿಕ್ಷಣರಂಗದ ಮೇಲೆ ಅಮೇರಿಕಾದ ಅಗಾಧ ಪ್ರಭಾವವಿದೆ ಎನ್ನುವದನ್ನು ಒಪ್ಪಿಕೊಳ್ಳುವುದಕ್ಕಾಗಿ ಹೇಳಿದ ಹೇಳಿಕೆಯಾಗಿದೆ. ಯುರೋಪು ಹಾಗೂ ಅಮೇರಿಕಾದಲ್ಲಿ ಉಂಟಾಗಿರುವ ಶೈಕ್ಷಣಿಕ ಜಡತ್ವವು ಯಾರ ಕಣ್ಣಿಗೂ ಬೀಳದೇ ಉಳಿದುಕೊಂಡಿದೆ ಎಂಬುದು ವಿಷಾದಕರ ಸಂಗತಿ ಎಂಬುದರ ಜೊತೆಗೆ ಈ ಸ್ಥಗಿತತೆಯನ್ನು ಒಪ್ಪಿಕೊಳ್ಳಲಿಕ್ಕೆ ಅವರು ಏಕೆ ನಿರಾಕರಿಸುತ್ತಾರೆ ಎನ್ನುವುದಕ್ಕೂ ಒಂದು ಕಾರಣವಿರಬಹುದು: ಸಾಮಾಜಿಕ ತಿಳುವಳಿಕೆಯ ಕೆಲಸವನ್ನು ಮರುಚಿಂತನೆಗೊಳಪಡಿಸಬಹುದಾದ ಹಾಗೂ ಅದಕ್ಕೆ ಹೊಸತನವನ್ನು ನೀಡಬಹುದಾದ ಸಾಂಸ್ಕೃತಿಕ ಸಂಪನ್ಮೂಲಗಳು ಅವರಿಗೆ ಲಭ್ಯವಿಲ್ಲ. ಇದನ್ನು ಒಪ್ಪಿಕೊಳ್ಳಲು ನಿರಾಕರಿಸುವುದು ಭಾರತಕ್ಕೆ ವಿನಾಶಕಾರಿಯಾಗಬಹುದು. ಏಕೆಂದರೆ ಅದಕ್ಕೆ ಮಾನವಿಕ ವಿಜ್ಞಾನಗಳನ್ನು ನಿಜವಾಗಿಯೂ ಪುನರುಜ್ಜೀವನಗೊಳಿಸಲಿಕ್ಕೆ ಸಂಪನ್ಮೂಲಗಳಿವೆಯೊಂದೇ ಅಲ್ಲ, ತನ್ನ ಸಂಸ್ಕೃತಿಯ ಉಳಿವಿಗೆ ಅಂಥ ಪುನರುಜ್ಜೀವನವು ಅನಿವಾರ್ಯ ಕೂಡಾ ಆಗಿದೆ.
ಮುಖ್ಯವಾಹಿನಿಯ ಬುದ್ಧಿಜೀವಿಗಳು (ಕರ್ನಾಟಕದಲ್ಲಿ ಅದು ಬಹುತೇಕವಾಗಿ ಸಾಹಿತಿಗಳು ಹಾಗೂ ವಿಮರ್ಶಕರಿಂದ ಕೂಡಿದೆ) ಈ ಹೊಸ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲಿಕ್ಕೆ ವಿಫಲರಾಗಿದ್ದಾರೆ ಹಾಗೂ ನಿರಾಕರಿಸುತ್ತಿದ್ದಾರೆ. ಬಹುಶಃ ಅವರು ಈ ಬರವಣಿಗೆಗಳೂ ತಮ್ಮ ಬರವಣಿಗೆಗಳಂತೇ ಶುದ್ಧ ಶಬ್ದಜಾಲಗಳು ಎಂದು ಅಂದುಕೊಂಡಿರುವಂತಿದೆ. ಹಿಂದೂಯಿಸಂ ಇದೆಯೊ ಇಲ್ಲವೊ ಎನ್ನುವುದು, ರಿಲಿಜನ್ನಿನ ಲಕ್ಷಣಗಳು ಯಾವವು ಎನ್ನುವುದು, ಒಂದು ಸಾಮಾಜಿಕ ವ್ಯವಸ್ಥೆಯಾಗಬೇಕಾದರೆ ಜಾತಿ ವ್ಯವಸ್ಥೆ ಹೇಗಿರಬೇಕಾಗುತ್ತದೆ ಇತ್ಯಾದಿಗಳೆಲ್ಲ ಶಬ್ದಲೋಕಕ್ಕೆ ಸಂಬಂಧಪಟ್ಟ ವಿಷಯಗಳು ಎಂದು ಅಂದುಕೊಂಡಿರಬಹುದು. ಅಥವಾ ಇದೆಲ್ಲವೂ ಸಂಕಥನಗಳು (ಬಹುಶಃ ಪಾಶ್ಚಾತ್ಯ ಸಿದ್ಧಾಂತಗಳ ಕುರಿತ ಅವರ ಆಳವಾದ ಜ್ಞಾನವು ಅದನ್ನು ಹೇಳಿರಬಹುದು) ಅಂದುಕೊಂಡಿರಬಹುದು. ಒಂದು ಉದಾಹರಣೆಯನ್ನು ನೀಡಿ ವಿವರಿಸುವುದಾದರೆ: ನಮಗೆಲ್ಲ ಆರ್ಥಿಕತೆ ಎಂದ ಶಬ್ದ ಗೊತ್ತು, ಹಾಗೂ ಬಂಡವಾಳಶಾಹಿಯೂ ಒಂದು ಅರ್ಥವ್ಯವಸ್ಥೆ ಎಂಬುದೂ ಗೊತ್ತು, ಹಾಗಾಗಿ ಮಾರ್ಕ್ಸ್ ‘ಬಂಡವಾಳಶಾಹಿಯಲ್ಲಿ ಆರ್ಥಿಕತೆಯು ಒಂದು ಮಂತ್ರಶಕ್ತಿ’ ಎಂಬುದಾಗಿ ಹೇಳುವುದರಲ್ಲಿ ವಿಶೇಷವೇನಿದೆ? ಅದನ್ನು ಅರ್ಥಮಾಡಿಕೊಳ್ಳುವುದಕ್ಕೇನಿದೆ? ಹಾಗಾಗಿ ಅದರ ಬದಲು ಸೆಕ್ಯುಲರಿಸಂ ಅಥವಾ ಮೀಸಲಾತಿಯ ಮೇಲೆ ಅದರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳೋಣ, ಮಾರ್ಕ್ಸ್ ನ ಸಿದ್ಧಾಂತವು ಸೆಕ್ಯುಲರಿಸಂನ್ನು ಬೆಂಬಲಿಸುತ್ತದೆಯೆ? ಅದು ಮೀಸಲಾತಿಯ ವಿರೋಧಿಯೆ? ಹಾಗಿದ್ದಲ್ಲಿ ಅದನ್ನು ಬೀಸಾಕಿ. ನಾವು ಇದೆ ಎಂದೇ ನಂಬಿಕೊಂಡಿರುವುದನ್ನು ಇಲ್ಲ, ಅದು ನಮ್ಮ ಅನುಭವ ಅಲ್ಲವೆಂದು ಹೇಳುವ ಸಿದ್ಧಾಂತವು ಯಾರಿಗೆ ಬೇಕಾಗಿದೆ?
ಏಕೆ ಬುದ್ಧಿಜೀವಿಗಳಿಗೆ ಬೌದ್ಧಿಕ ಕುತೂಹಲವೇ ಇಲ್ಲವಾಗಿದೆ? ಅದು ಮಾರ್ಕ್ಸ್ ಇರಬಹುದು, ಬಾಲು ಇರಬಹುದು, ಅಲ್ಲಮ ಇರಬಹುದು ಅಥವಾ ಶಂಕರ ಇರಬಹುದು, ಅರಿಸ್ಟಾಟಲ್ ಅಥವಾ ನಾಗಾರ್ಜುನ ಇರಬಹುದು, ಅವರು ಯಾವ ಬೌದ್ಧಿಕ ಹುಡುಕಾಟವನ್ನು ನಡೆಸಿರಬಹುದೆಂಬುದರ ಕುರಿತು ಕುತೂಹಲವೇ ಇಲ್ಲ. ನಮ್ಮ ಸಮಾಜದ ಕುರಿತು ಯಾವ ದಿವ್ಯಜ್ಞಾನವನ್ನು ಹೊಂದಿದ್ದಾರೆ ಅಂತ ಈ ಬುದ್ಧಿಜೀವಿಗಳಿಗೆ ಇಂಥ ನಿರಾಸಕ್ತಿ ಹುಟ್ಟಿದೆ? ಪ್ರಶ್ನೆಯನ್ನು ಹೀಗೆ ಕೇಳುವುದರಿಂದ ನಾವು ಈ ಮುಖ್ಯವಾಹಿನಿಯ ಬುದ್ಧಿಜೀವಿಗಳು ಏಕೆ ಆಲೋಚಿಸುವ ಹಾಗೂ ವಾದಿಸುವ ಬದಲು ದೂಷಿಸುವ ಹಾಗೂ ಬೆದರಿಕೆ ಹಾಕುವ ಮಾರ್ಗ ಹಿಡಿದಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಾಯವಾಗಬಹುದು, ಅವರಿಗೆ ಬುದ್ಧಿಜೀವಿಗಳಾಗಲಿಕ್ಕೆ ಪರಿಶ್ರಮ ಪಡಬೇಕಾದ ಅಗತ್ಯ ಬಂದಿಲ್ಲ. ಅವರು ರಾಜಕೀಯವನ್ನು ಅರ್ಥಮಾಡಿಕೊಳ್ಳುವುದರ ಕುರಿತು ತಲೆ ಕೆಡಿಸಿಕೊಳ್ಳದೇ ಅದನ್ನೊಂದು ಲಾಭದಾಯಕ ವೃತ್ತಿಯನ್ನಾಗಿ ಮಾಡಿಕೊಂಡ ನಮ್ಮ ರಾಜಕಾರಣಿಗಳ ಹಾಗೇ ಕಾಣಿಸುತ್ತಾರೆ. ಬುದ್ಧಿಜೀವಿಯಾಗಲಿಕ್ಕೆ ವಸಾಹತುಕಾಲದ ಅಥವಾ ಇಂದಿನ ಬೌದ್ಧಿಕ ಫ್ಯಾಶನ್ನುಗಳು ನೀಡಿದ ರೆಡಿಮೇಡ್ ಧೋರಣೆಗಳನ್ನು ಬಳಸಿಕೊಂಡರಾಯಿತು: ಜಾತಿ ವ್ಯವಸ್ಥೆ, ತಾರತಮ್ಯ, ಮೂಢನಂಬಿಕೆ, ಹಕ್ಕುಗಳ ಉಲ್ಲಂಘನೆ, ಇವುಗಳ ಮೇಲೆ ಭಾಷಣ ಬಿಗಿಯಿರಿ ಹಾಗೂ ಬುದ್ಧಿಜೀವಿ ಪಟ್ಟವನ್ನು ಪಡೆಯಿರಿ. ( ಯುರೋಪಿನಿಂದ ಅಸ್ತಿತ್ವವಾದಿ ಬರಹಗಳು ಆಥವಾ ಮಾರ್ಕ್ಸ್ ವಾದೀ ವಿಮರ್ಶೆಗಳು, ಪೋಸ್ಟ್ ಸ್ಟ್ರಕ್ಚರಲಿಸ್ಟ್ ಗೈಡ್ ಬುಕ್ಕುಗಳನ್ನು ನಿಮಗೆ ತರಿಸಿಕೊಳ್ಳಲಿಕ್ಕೆ ಸಾಧ್ಯವಾದರೆ ನೀವು ಶ್ರೇಷ್ಠ ಲೇಖಕರೊ ವಿಮರ್ಶಕರೋ ಕೂಡ ಆಗಿಬಿಡುತ್ತಿರಿ.) ವಸಾಹತುಶಾಹಿಯು ಹುಟ್ಟಿಸಿದ ಈ ಬುದ್ಧಿಜೀವಿಯ ಮಾದರಿಗೆ ಭಾರತವನ್ನಾಗಲೀ ಪಶ್ಚಿಮವನ್ನಾಗಲೀ ಅರ್ಥಮಾಡಿಕೊಳ್ಳುವ ಜರೂರತ್ತು ಇಲ್ಲ, ವಸಾಹತು ದೊರೆಗಳು ಹಾಕಿಕೊಟ್ಟ ಚೌಕಟ್ಟನ್ನು ಸುಮ್ಮನೆ ಪುನರುತ್ಪಾದಿಸಿದರೆ ಅಷ್ಟೇ ಸಾಕು. ಈ ಮಾದರಿಯ ಬುದ್ಧಿಜೀವಿಯೇ ಇಂದು ಈ ಹೊಸ ಸಂಶೋಧನಾ ಪರಿಸರದಿಂದ ಹಾಗೂ ಅದು ಸೃಷ್ಟಿಸುತ್ತಿರುವ ಹೊಸ ಶಿಸ್ತುಬದ್ಧ ಪ್ರಶ್ನೆಗಳಿಂದ ಭೀತನಾಗಿದ್ದಾನೆ. ಹಾಗಾಗಿ ಈ ಬುದ್ಧಿಜೀವಿಯು ನಮ್ಮ ಕಣ್ಣೆದುರಿಗೆ ಇರುವ ಸಂಗತಿಯನ್ನು ನಾವು ನಿರಾಕರಿಸುತ್ತಿದ್ದೇವೆ ಎಂಬುದಾಗಿ ಆರೋಪಿಸುತ್ತಿದ್ದಾನೆ.
ಇಂಥದ್ದೇ ಆರೋಪವನ್ನು ಮಾರ್ಕ್ಸ್ ಒಬ್ಬನೇ ಅಲ್ಲ ಅವನಿಗಿಂತಲೂ ಹಿಂದೆಯೆ ಗೆಲಿಲಿಯೊ ಕೂಡ ಎದುರಿಸಿದ್ದನು. ಏಕೆಂದರೆ ಅವರು ತಮ್ಮ ಸಮಕಾಲೀನರು ಏನನ್ನು ನೋಡುತ್ತಿದ್ದರೊ, ಅದನ್ನೇ ಅಲ್ಲಗಳೆದಿದ್ದರು, ಭೂಮಿಯು ಭೂಸುಂಕವನ್ನು ಉತ್ಪಾದಿಸುತ್ತದೆ, ಬಂಡವಾಳವು ಲಾಭವನ್ನು ಉತ್ಪಾದಿಸುತ್ತದೆ, ಸರಕಿಗೆ ವಿನಿಮಯ ಮೌಲ್ಯವಿದೆ, ಹಣಕ್ಕೆ ಸರಕುಗಳಲ್ಲಿ ಸಮಾನತೆಯನ್ನು ಸ್ಥಾಪಿಸುವ ಗುಣ ಅಂತರ್ಗತವಾಗಿದೆ, ಇತ್ಯಾದಿ. ಇದೇ ರೀತಿಯಲ್ಲಿ ನಾವು “ಹಿಂದೂಯಿಸಂ” ಎಂಬುದು ಇಲ್ಲ, ಅದು ರಿಲಿಜನ್ನಲ್ಲ, ಅದು ಜಾತಿ ವ್ಯವಸ್ಥೆ ಎಂಬುದನ್ನು ಹೊಂದಿಲ್ಲ ಎನ್ನುತ್ತೇವೆ. ಮಾರ್ಕ್ಸ್ ಮತ್ತು ಗೆಲಿಲಿಯೊರಂತೇ ಇನ್ನೂ ಅರ್ಥ ಮಾಡಿಕೊಳ್ಳದ ಸಂಗತಿಯನ್ನು ಸಿದ್ಧಾಂತಕ್ಕೆ ಒಗ್ಗಿಸಿರುವುದೇ ಅವುಗಳಲ್ಲಿ ವಿಶೇಷ ಆಸಕ್ತಿಗೆ ಕಾರಣವಾಗಿದೆ.
ಒಂದು ತಳಮಳ ಹುಟ್ಟಿರುವುದಂತೂ ನಿಸ್ಸಂದೇಹ ಹಾಗೂ ತಾವು ಬುದ್ಧಿಜೀವಿಗಳೆಂದು ಕರೆದುಕೊಳ್ಳುವವರೆಲ್ಲರಿಗೂ ತಮ್ಮ ಠೊಳ್ಳುತನವು ಪರೋಕ್ಷವಾಗಿ ಅರಿವಿಗೆ ಬರತೊಡಗಿದೆ. ಅವರು ತಾವು ಪ್ರತಿನಿಧಿಸುತಿರುವ ಪಾಶ್ಚಾತ್ಯ ಬೌದ್ಧಿಕ ಸಂಪ್ರದಾಯವನ್ನು ಅರ್ಥಮಾಡಿಕೊಂಡ ರೀತಿಯೇ ಈಗ ಪ್ರಶ್ನೆಗೊಳಗಾಗಿದೆ. ತಮಗೆ ತಾವು ಬದುಕುತ್ತಿರುವ ಸಾಮಾಜಿಕ, ಸಾಂಸ್ಕೃತಿಕ ಜಗತ್ತು ಕೂಡ ಅರ್ಥವಾಗಿಲ್ಲ ಎಂಬುದನ್ನೂ ಅವರು ಅರಿಯುತ್ತಿದ್ದಾರೆ.
ಸಂಪೂರ್ಣವಾಗಿ ಬೌದ್ಧಿಕ ಸ್ವರೂಪದ ಚಳವಳಿಯು ತೀರಾ ಅಪರೂಪ. ಆದರೆ ನಮ್ಮ ರಾಷ್ಟ್ರೀಯ ಚಳವಳಿಯಲ್ಲಿ ಕೂಡ ಶುದ್ಧ ಬೌದ್ಧಿಕ ಎಳೆಗಳಿದ್ದವು ಎಂಬುದನ್ನು ಅರಿಯುವ ಅಗತ್ಯವಿದೆ. ಆಧುನಿಕ ಚಿಂತನೆಯ ಮಹಾವ್ಯಕ್ತಿಗಳಾದ ಗಾಂಧಿ ಹಾಗೂ ಟಾಗೋರ್ ಇಬ್ಬರೂ ಬೌದ್ಧಿಕ ಸ್ವಾವಲಂಬನೆಯೇ ಅತ್ಯುಚ್ಚವಾದ ಧ್ಯೇಯವೆಂಬುದಾಗಿ ಭಾವಿಸಿದ್ದರು. ಆದರೆ ವಸಾಹತುಶಾಹಿಯ ವಿರುದ್ಧ ಸೆಣಸಾಡುವ ರಾಜಕೀಯ ಅನಿವಾರ್ಯತೆಗಾಗಿ ಅವರು ತಮ್ಮ ಈ ಧ್ಯೇಯವನ್ನು ಬದಿಗಿಡಬೇಕಾಯಿತು. ಇಂದು ನಮಗೆ ಆ ಅನಿವಾರ್ಯತೆ ಇಲ್ಲ. ಆದರೆ ವಸಾಹತುಶಾಹಿಯು ಬಳುವಳಿಯಾಗಿ ನೀಡಿದ ಮನಃಸ್ಥಿತಿಯೇ ನಮಗೊಂದು ತೊಡಕಾಗಿದೆ. ನಾವು ಯುರೋಪಿನ ದಾಸ್ಯದಿಂದ ಹಿಡಿದು ಅದರ ಉಚ್ಚಿಷ್ಟದ ವರೆಗೆ ಎಲ್ಲದರಿಂದಲೂ ಬಿಡುಗಡೆ ಪಡೆಯುವುದಕ್ಕೆ ಇದು ಸಕಾಲ. ಈಗಾದರೂ ನಮ್ಮದೇ ಜಗತ್ತು ಹಾಗೂ ಪಶ್ಚಿಮಗಳು ನಮಗೆ ಹೇಗೆ ಕಾಣುತ್ತವೆ ಎಂಬುದನ್ನು ಹೇಳಲು ಪ್ರಾರಂಭಿಸಿದ್ದೇವೆಂಬ ಭರವಸೆಯನ್ನು ಈಗ ಉದಿಸುತ್ತಿರುವ ಬೌದ್ಧಿಕ ಪರಿಸರವು ನೀಡುತ್ತಿದೆ.
ಕನ್ನಡಕ್ಕೆ: ರಾಜಾರಾಮ ಹೆಗಡೆ





“ಸಾಮಾಜಿಕ ಜಗತ್ತಿನ ಜ್ಞಾನವನ್ನು ನಿಸರ್ಗ ವಿಜ್ಞಾನಗಳ ದಾರಿಯಲ್ಲೇ, ಅದಕ್ಕೂ ಭಿನ್ನವಾಗಿ ಕಟ್ಟಬಹುದು ಎಂಬುದನ್ನು ಅದು ತೋರಿಸಿತು”- is it possible to talk about society as newton talks about gravity? are there not differences in the ‘object’ that the social sciences study and the ‘object’ that physical sciences study? can you please explain the above statement that i have quoted from your essay?
If you are asking whether it is possible for social sciences to develop a scientific theory in exactly the same way as in natural sciences I believe that it is possible. If, say, you ask whether existing social sciences have adequate resources to do the job the answer is emphatic no. Present social sciences are inadequate simply because they are not doing science. As Balu puts it they tend to study the social and cultural phenomena through the glass of Christian theological notions and assumptions about human beings. Present day social science puts on the garb of science by making these notions and assumptions as universally applicable. Balu argues that it is through the present social science that Christian theology spreads itself in the garb of secular ideas. If you are interested to know how he develops his argument in this regard I suggest you read ‘The Heathen….’ Balu points out two main obstacles that the existing social sciences have to overcome to acquire the status of ‘science’: a) to recognize that the assumptions that they make about human life and institutions have their roots in one specific (i.e. western) culture and hence are not universally valid; b) to further recognize that other cultures have altogether different notions about human beings and human life.
To my knowledge Balu’s ‘Heathen…’ has very effectively by taking just one example i.e. religion shown how and in what way Christian ideas have spread all over the world in the guise of secular ideas. Balu and his research group is presently engaged in doing research with the second hypothesis that other cultures (especially Indian) have understood the world differently. What this group is now doing is to show how and why, because of their inability to recognize this difference, the existing (Christian theological) theoretical framework is bound to distort the cultural and social phenomena that they study.
Secondly, the objective –subjective dichotomy that we still teach in the class room even today had been rejected in the philosophy of science long back. Therefore we can not any more talk about natural sciences providing us with the ‘objective’ knowledge as against human sciences. After a long debate it is now by and large accepted that all human knowledge including natural sciences are hypotetical and tentative. It however,doesn’t mean that every piece of what we see as knowledge is suspect. When we try to test a hypothesis, we take to be correct the theory of deductive logic and its rules of inference. This tells us something about how to test any hypothesis. However, if you subscribe to the notion that there is no way to judge and that we are free to disagree, there is nothing to discuss but to end with an aphorism “don’t accept any author’s opinion, but accept whatever fits your tastes”; this is what we see in erudites: quoting some
or another verse, quote some or another fragment which is consistent with what one believes in.
ಯಾರು ಏನು ಹೇಳುತ್ತಾರೆ/ಹೇಳಿದ್ದಾರೆ ಎಂಬ ಪ್ರಶ್ನೆಯನ್ನು ಬದಿಗಿಟ್ಟು ಈ ಮುಂದಿನ ಪ್ರಶ್ನೆಗಳ ಕುರಿತು ಯೋಚಿಸೋಣ: “is it possible to talk about society as newton talks about gravity? are there not differences in the ‘object’ that the social sciences study and the ‘object’ that physical sciences study?”
1) ನಮ್ಮ ಸಾಮನ್ಯ ಜ್ಞಾನಕ್ಕೆ ತೋಚುವ “newton *talks* about gravity” ಎನ್ನುವ ರೀತಿಯ ಹೇಳಿಕೆ ಈ ಮೇಲಿನ ಪ್ರಶ್ನೆಗಳ ಕುರಿತು ಸರಿಯಾಗಿ ಯೋಚಿಸಲು ತೊಂದರೆ ಕೊಡುತ್ತದೆ ಎಂಬುದನ್ನು ನಾವು ಮೊದಲು ಮನಗಾಣಬೇಕು. ಇಂದು ಒಬ್ಬ ಸಮಾಜ ಶಾಸ್ತ್ರಜ್ಞ ‘ಜಾತಿ ಪದ್ಧತಿ ಅಥವಾ ಮದುವೆಯ ಆಚರಣೆಗಳ’ ಕುರಿತು ಮಾತನಾಡುವ ರೀತಿಯಲ್ಲೇ ನ್ಯೂಟನ್ ಸಹ ‘gravitation’ ಕುರಿತು ಮಾತನಾಡಿದ ಎಂಬ ಆಭಾಸವನ್ನು ಈ ರೀತಿಯ ಹೇಳಿಕೆ ಮೂಡಿಸುತ್ತದೆ. ಹಾಗಾದರೆ ನ್ಯೂಟನ್ ಮಾಡಿದ್ದು ಇನ್ನೇನು? ಆತನ ಕುರಿತು ಪ್ರಚಲಿತದಲ್ಲಿರುವ ಸೇಬಿನ ಹಣ್ಣಿನ ಕಥೆಯನ್ನೇ ತೆಗೆದುಕೊಳ್ಳಿ. ತನ್ನ ತಲೆಯ ಮೇಲೆ ಬಿದ್ದ ಸೇಬಿನ ಕುರಿತು ತಾನು ಹೀಗೆ ಯೋಚಿಸಿದೆ ಎಂದು ಆತ ಬರೆಯುತ್ತಾನೆ: “why should that apple always descend perpendicularly to the ground? why should it not go sideways, or upwards? but constantly to the earths centre?” ಒಂದು ಸಾಮಾನ್ಯ ನಿತ್ಯದ ಘಟನೆಯನ್ನು ನ್ಯೂಟನ್ ಹೇಗೆ ಒಂದು ಸಂಶೋಧನಾ ಸಮಸ್ಯೆಯನ್ನಾಗಿ ಪರಿವರ್ತಿಸುತ್ತಾನೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಪ್ರಶ್ನೆಯನ್ನು ಹೀಗೆ ಎತ್ತಿದ ಕೂಡಲೇ ಈ ಮುಂದಿನ ವಿಚಾರಗಳು ನ್ಯೂಟನ್ನನಿಗೆ ಹೊಳೆಯಿತು ಎಂಬುದು ಆಶ್ಚರ್ಯವೆನಿಸುವುದಿಲ್ಲ: “assuredly, the reason is, that the earth draws it. there must be a drawing power in matter. & the sum of the drawing power in the matter of the earth must be in the earths centre, not in any side of the earth. therefore dos this apple fall perpendicularly, or toward the centre. if matter thus draws matter; it must be in proportion of its quantity. therefore the apple draws the earth, as well as the earth draws the apple.”
ಅಂದರೆ, ನ್ಯೂಟನ್ gravity ಕುರಿತು ‘ಮಾತನಾಡಲಿಲ್ಲ’. ತನ್ನ ನಿತ್ಯದ ಬದುಕಿನಲ್ಲಿ ಎದ್ದ ಒಂದು ಸಮಸ್ಯೆಗೆ gravityಯನ್ನು ಉತ್ತರವಾಗಿ ಕಂಡುಕೊಂಡ ಮತ್ತು ಅದರ ಕುರಿತು ಕ್ರಮೇಣ ಒಂದು ಸಿದ್ಧಾಂತವನ್ನು ಕಟ್ಟಿದ.
2) ಅಂದರೆ, ಮೇಲಿನ ಉದಾಹರಣೆಯಲ್ಲಿ ವಿಜ್ಞಾನದ ‘object’ gravity ಅಲ್ಲ. ಬದಲಿಗೆ ನಿತ್ಯದ ಬದುಕಿನಲ್ಲಿ ಎದ್ದ ಒಂದು ಸಮಸ್ಯೆಯೇ ನ್ಯೂಟನ್ನಿನ ಸಂಶೋಧನೆಯ ‘object’. ಹೀಗೆ ಯೋಚಿಸಿದಾಗ ನಾವು ವಿಜ್ಞಾನ ಮತ್ತು ಸಮಾಜ ವಿಜ್ಞಾನಗಳ ‘object’ ಬೇರೆಬೇರೆ ಅಲ್ಲ ಎಂಬುದು ತಿಳಿಯುತ್ತದೆ. ನಿತ್ಯದ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಕೆಲವೊಮ್ಮೆ physics ಉತ್ತರ ಕೊಟ್ಟರೆ ಕೆಲವೊಮ್ಮೆ psychology ಉತ್ತರ ಕೊಡಬೇಕು. ನಮ್ಮ ಮುಂದಿರುವ ಸಮಸ್ಯೆಯ ರೂಪುರೇಷೆ ಉತ್ತರದ ರೂಪುರೇಷೆಯನ್ನು ನಿರ್ಧರಿಸಬೇಕು/ನಿರ್ಧರಿಸುತ್ತದೆ.
ಆದರೆ ತೊಂದರೆ ಏನೆಂದರೆ ಸಾಮಾಜ ವಿಜ್ಞಾನಗಳು (psychology, sociology, political science ಇತ್ಯಾದಿ) ನಿತ್ಯದ ಬದುಕಿನ ಸಮಸ್ಯೆಗಳಿಗೆ ಉತ್ತರಕೊಡುವುದಿರಲಿ ಅವು ಹಾಗೆ ಉತ್ತರ ಕೊಡಬೇಕು ಇಲ್ಲದಿದ್ದರೆ ಅವು ಸಾಮಾಜದ ಕುರಿತ ಶಾಸ್ತ್ರ/ವಿಜ್ಞಾನ ಆಗುವುದಿಲ್ಲ ಎಂಬ ವಿಚಾರವೇ ನಮಗೆ ಗೊತ್ತಿಲ್ಲ. ಸಮಾಜ ವಿಜ್ಞಾನಗಳಲ್ಲಿನ ಸಂಶೋಧನೆಯನ್ನು ನಾವು ಇಂದು ಜೀವನದ/ಜಗತ್ತಿನ ಸಮಸ್ಯೆಗಳಿಗೆ ಉತ್ತರ ಹುಡುಕುವ ಕೆಲಸ ಎಂದುಕೊಂಡಿಲ್ಲ. ನಾವು ಕಲಿಸಿಕೊಡುವ ತಪ್ಪುತಪ್ಪು ಮತ್ತು 200 ವರ್ಷಗಳಷ್ಟು ಪುರಾತನ research methodologyಯ ಕೋರ್ಸುಗಳು ಕೂಡ ತಪ್ಪುತಪ್ಪು ವಿಚಾರಗಳನ್ನೇ ಕಲಿಸಿಕೊಡುತ್ತವೆ.
The objects of study of the two sciences are not fundamentally different. Human configurations and events do not differ from those in natural phenomena. After all, human beings are part of nature, and in that sense, it is nature that both the social and the natural sciences wish to study.
However, the process of study is constrained to be fundamentally different in the two sciences. In the social sciences, a theory can be falsified only in theory – for e.g., theories can be proposed that try to explain facts and events that are no longer reproducible. In the natural sciences, a theory must be falsified in practice – i.e., using experiments that reproduce the original ‘problem’.
Therefore, I don’t think there is any doubt that the natural sciences are required to operate in a much more rigid scientific framework than the social sciences.