ಜಾನ್ ಮೆಕೇನ್ ಸ್ಪರ್ಧಿಯಾಗುವ ಮುನ್ನವೇ ಗೆದ್ದಿದ್ದರು ಒಬಾಮಾ, ಹಾಗೆಯೇ ಮೋದಿಯೂ!
– ಗೋಪಾಲ ಕೃಷ್ಣ
ಅದು 2008ರ ನವೆಂಬರ್ 04ನೇ ತಾರೀಖು. ಹಲವು ಕಾರಣಗಳಿಗೆ ಅಮೇರಿಕಾ ಅಧ್ಯಕ್ಷೀಯ ಚುನಾವಣೆ ವಿಶೇಷತೆ ಪಡೆದುಕೊಂಡಿತ್ತು. ಅದಕ್ಕೆ ಮುಖ್ಯವಾಗಿ ಕಾರಣವಾಗಿದ್ದು ಬರಾಕ್ ಒಬಾಮಾ. ಎಲ್ಲಾ ಅಡೆತಡೆಗಳನ್ನು ದಾಟಿ ಚುನಾವಣೆಯ ಹೊಸ್ತಿಲಲ್ಲಿ ನಿಂತ ಒಬಾಮಾಗೆ ರಿಪಬ್ಲಿಕನ್ ಪಕ್ಷದ ಜಾನ್ ಮೆಕೇನ್ ಪ್ರತಿಸ್ಪರ್ಧಿಯಾಗಿದ್ದರು. ಒಬಾಮಾ ಅವರೇ ಗೆಲ್ಲುತ್ತಾರೆ ಎನ್ನುವುದು ಚುನಾವಣೆಗೂ ಮುನ್ನವೆ ಅಮೇರಿಕಾದಲ್ಲಿ ಮಾತ್ರವಲ್ಲ ಇಡಿ ವಿಶ್ವದಲ್ಲೇ ನಿರೀಕ್ಷೆಗಳನ್ನು ಹುಟ್ಟಿಸಿತ್ತು. ಆ ಪರಿಯ ಸಂಚಲನ ಮೂಡಿಸಿದ್ದರು ಒಬಾಮಾ. ಅವರ ಪ್ರಚಾರ ವೈಖರಿ, ಬದಲಾವಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿದ್ದು, ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಂಡದ್ದು ಎಲ್ಲವೂ ಒಬಾಮಾ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ದವು. ಅಂತೆಯೇ ಗೆದ್ದು, ಅಧ್ಯಕ್ಷರಾದರು.
ಒಬಾಮಾ ಗೆಲುವಿನ ಹಾದಿಗೆ ಸಾಮ್ಯತೆ ಎನಿಸುವಂತಹ ಬೆಳವಣಿಗೆಗಳು ಭಾರತದಲ್ಲಿಯೂ ಗೋಚರಿಸುತ್ತಿವೆ, ಅದು ಮುಂದಿನ ಲೋಕಸಭಾ ಚುನಾವಣೆಗೆ. ಇದಕ್ಕೆ ಕಾರಣವಾಗಿರುವುದು ನರೇಂದ್ರ ಮೋದಿಯವರ ನಡೆಗಳು ಮತ್ತು ಅವರ ವಿರೋಧಿಗಳ ಅಡ್ಡಗಾಲುಗಳು.
ಒಬಾಮಾ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗುವುದು ಸುಲಭವಾಗಿರಲಿಲ್ಲ. ಜಾನ್ ಎಡ್ವಡ್ರ್ಸ್ ಮತ್ತು ಹಿಲರಿ ಕ್ಲಿಂಟನ್ ಅವರಿಂದ ಭಾರೀ ಸ್ಪರ್ಧೆಯನ್ನೇ ಎದುರಿಸಬೇಕಾಯಿತು. ಅದರಲ್ಲೂ ಹಿಲರಿ ಕ್ಲಿಂಟನ್ ಕೊನೆಯ ಕ್ಷಣದವರೆಗೂ ಒಬಾಮಾ ಹಾದಿಗೆ ಮುಳ್ಳಾಗುತ್ತಲೇ ಇದ್ದರು. ಅಧ್ಯಕ್ಷೀಯ ಚುನಾವಣೆಗಿಂತಲೂ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಆಯ್ಕೆಯೇ ಅಮೇರಿಕಾದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದು ಒಬಾಮಾ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನೂ ವಹಿಸಿತ್ತು. ‘We ಓeeಜ ಅhಚಿಟಿge’ ‘ಅಊಂಓಉಇ, ತಿe ಛಿಚಿಟಿ’ ಎಂಬ ಘೋಷವಾಕ್ಯಗಳೊಂದಿಗೆ ಒಬಾಮಾ ಜನರ ಬಳಿಗೆ ಹೋದರು. ಹಿಲರಿ ಕ್ಲಿಂಟನ್ ‘ಇxಠಿeಡಿieಟಿಛಿe’ ಬಗ್ಗೆ ಮಾತನಾಡುತ್ತ ಜನರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸಿದರು. ಮೊದಮೊದಲು ಜನರ ಭಾವನೆಗಳು ಅನುಭವಿ ಎಂಬ ಕಾರಣಕ್ಕೆ ಹಿಲರಿಯತ್ತ ವಾಲುತ್ತಿದ್ದವು. ಒಬಾಮಾರಾದರೂ ಹೊಸಬರು, ಇನ್ನು ಕಲಿಯಬೇಕಾದ್ದು ಬಹಳಷ್ಟಿದೆ ಎಂಬ ಅಭಿಪ್ರಾಯವೂ ಮೂಡಿತ್ತು. ಆದರೆ ವಾಸ್ತವವನ್ನರಿತು ಬದಲಾವಣೆ ತರಲು ತನ್ನಲ್ಲಿರುವ ಸಾಮಥ್ರ್ಯವನ್ನು ಜನರಿಗೆ ಬಿಡಿಬಿಡಿಯಾಗಿ ಬಿಚ್ಚಿಟ್ಟರು ಒಬಾಮಾ. ಹಿಲರಿ ತಮ್ಮ ಅನುಭವದ ಬಗ್ಗೆ ಹೇಳಿದರೆ ಹೊರತು, ಬದಲಾವಣೆಯ ಬಗ್ಗೆ ಜನರನ್ನು ಸೆಳೆಯಲಿಲ್ಲ. ಅಭ್ಯರ್ಥಿ ಆಯ್ಕೆಯಲ್ಲಿ ಒಬಾಮಾಗೆ ಶೇ.52ರಷ್ಟು ಮತ ಬಂದಿದ್ದರೆ, ಹಿಲರಿ ಶೇ.42 ಮತಗಳಿಗೆ ತೃಪ್ತಿಪಡಬೇಕಾಯಿತು. ಹಿರಿತನಕ್ಕಿಂತಲೂ ಇಚ್ಛಾಶಕ್ತಿಯೇ ಮುಖ್ಯ ಎಂಬುದನ್ನು ಸಾಬೀತುಪಡಿಸಿದರು. ಇದು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಅವಕಾಶವನ್ನು ಒಬಾಮಾಗೆ ತಂದಿತ್ತಿತು.