ವಿಷಯದ ವಿವರಗಳಿಗೆ ದಾಟಿರಿ

Archive for

10
ಸೆಪ್ಟೆಂ

‘ನಕ್ಸಲ್ ವರಸೆ’ ಮತ್ತು ‘ಹೆಗ್ಗುರುತು’ ಕಥಾ ಸಂಕಲನಗಳನ್ನು ಕುರಿತಂತೆ … ಭಾಗ ೧

-ಮು. ಅ. ಶ್ರೀರಂಗ,ಬೆಂಗಳೂರು

ನಕ್ಸಲ್ ವರಸೆ ಮತ್ತು ಹೆಗ್ಗುರುತುಕಥಾಸಂಕಲನಗಳು, ಕಾದಂಬರಿಗಳು, ಕವನಸಂಕಲನಗಳು … ಹೀಗೆ ಸಾಹಿತ್ಯದ ಯಾವುದೇ ಪ್ರಕಾರವಿರಲಿ ಅವುಗಳಿಗೆ ಮುನ್ನುಡಿಗಳು ಸಾಮಾನ್ಯವಾಗಿ ಇರುತ್ತವೆ.ಈ ಮುನ್ನುಡಿಗಳು ಕೆಲವೊಮ್ಮೆ ಸ್ನೇಹದ ಕುರುಹಾಗಿರಬಹುದು, ಅಥವಾ ಉದಯೋನ್ಮುಖರನ್ನು ಪ್ರೋತ್ಸಾಹಿಸುವ, ಅವರಲ್ಲಿ ಧೈರ್ಯ ತುಂಬುವ ಆಶೀರ್ವಚನಗಳಾಗಿರಬಹುದು. ಇನ್ನು ಕೆಲವು ಪರಸ್ಪರ ಸಹಕಾರದ (ಅವರದ್ದಕ್ಕೆ ಇವರು ಇವರದ್ದಕ್ಕೆ ಅವರು) ಸ್ವರೂಪದ್ದೂ  ಆಗಿರುವುದುಂಟು.

ಕೆ.ಸತ್ಯನಾರಾಯಣರ ಇತ್ತೀಚಿನ ಸಣ್ಣ ಕಥೆಗಳ ಸಂಕಲನ ‘ನಕ್ಸಲ್ ವರಸೆ’ (ಪ್ರಕಾಶಕರು : ಅಕ್ಷರಪ್ರಕಾಶನ ಹೆಗ್ಗೋಡು , ೨೦೧೦)ಗೆ  ಮುನ್ನುಡಿ ಬರೆದಿರುವ ಕೆ.ಫಣಿರಾಜ್  ಮತ್ತು ‘ಹೆಗ್ಗುರುತು’ (ಮನೋಹರ ಗ್ರಂಥಮಾಲ , ಧಾರವಾಡ ,೨೦೧೨)ಗೆ ಪ್ರವೇಶ ರೂಪದಲ್ಲಿ ಮುನ್ನುಡಿ ಬರೆದಿರುವ ಮಲ್ಲಿಕಾರ್ಜುನ ಹಿರೆಮಠರದ್ದು ಮೇಲೆ ಹೇಳಿದ್ದ ಪ್ರಭೇಧಗಳಿಗೆ ಸೇರುವಂಥಹದಲ್ಲ.

ಫಣಿರಾಜರು ತಮ್ಮ ಮುನ್ನುಡಿಯಲ್ಲಿ ಸತ್ಯನಾರಾಯಣರ ಕಥೆಗಳ ಹಿನ್ನಲೆಯಲ್ಲಿ ಸಧ್ಯದ ಕೆಲವೊಂದು ವಾದ-ವಿವಾದಗಳ್ಳನ್ನು ಚರ್ಚಿಸಿರುವುದರಿಂದ ಆಸಕ್ತಿದಾಯಕವಾಗಿದೆ.ಹಿರೇಮಠರದ್ದು ಕಥೆಗಳ ಸಾರಾಂಶ ಅವುಗಳ ಬಗ್ಗೆ ಅವರ ಒಂದೆರೆಡು ಅಭಿಪ್ರಾಯಗಳು/ಅನಿಸಿಕೆಗಳಿಗೆ ಸೀಮಿತವಾಗಿದೆ.ಕಥೆಗಳ ಬಗ್ಗೆ ನೇರವಾಗಿ ಬರೆಯದೆ ಮುನ್ನುಡಿಗಳನ್ನು ಕುರಿತಂತೆ ಚರ್ಚಿಸುವುದಕ್ಕೆ ಒಂದು ಕಾರಣವಿದೆ.ಮುನ್ನುಡಿಗಳೂ ಒಂದು ರೀತಿಯ ವಿಮರ್ಶೆ ಆಗಿರುವುದರಿಂದ ಅದರ ನಿಲುವುಗಳ,ತೀರ್ಮಾನಗಳ ಬಗ್ಗೆ ಮಾತನಾಡುವುದೂ ಸಹ ಪರೋಕ್ಷವಾಗಿ ಆ ಕಥೆಗಳನ್ನು ಕುರಿತಂತೆ ಓದುಗನಾಗಿ ನನ್ನ ಅಭಿಪ್ರಾಯಗಳೂ ಆಗಿರುವ ಸಾಧ್ಯತೆಗಳಿವೆ

ಮತ್ತಷ್ಟು ಓದು »