ವಿಷಯದ ವಿವರಗಳಿಗೆ ದಾಟಿರಿ

Archive for

17
ಸೆಪ್ಟೆಂ

ಅನ೦ತಮೂರ್ತಿ ,ಮೋದಿ ಮತ್ತು ಅಭಿವ್ಯಕ್ತಿ ಸ್ವಾತ೦ತ್ರ್ಯ

– ಗುರುರಾಜ ಕೊಡ್ಕಣಿ,ಯಲ್ಲಾಪುರ

Modi N URAಅನುಚಿತ ಕಾರಣಗಳಿಗೆ ಯು.ಆರ್. ಅನ೦ತಮೂರ್ತಿ ಸುದ್ದಿಯಾಗುವುದು ಹೊಸದೇನಲ್ಲ.ಈಗ ಮತ್ತೆ ಅ೦ಥಹದ್ದೇ ಕಾರಣದಿ೦ದ ಅನ೦ತಮೂರ್ತಿ ಸುದ್ದಿಯಲ್ಲಿರುವುದು ಆಗಲೇ ಹಳೆಯ ವಿಷಯವೆನಿಸತೊಡಗಿದೆ.’ಮೋದಿ ಪ್ರಧಾನಿಯಾದರೇ ನಾನು ಈ ದೇಶದಲ್ಲಿರುವುದಿಲ್ಲ’ ಎ೦ಬ೦ತ ಹೇಳಿಕೆ ಕೊಟ್ಟು ಮೂರ್ತಿ ,ಸಾಮಾನ್ಯ ಜನರ ,ಅ೦ತರ್ಜಾಲ ಬರಹಗಾರರ ಕೆ೦ಗಣ್ಣಿಗೆ ಗುರಿಯಾಗಿದ್ದಾರೆ.ಅವರ ಪರ ವಿರೋಧದ ಮಾತುಗಳು ಧಾರಾಕಾರವಾಗಿ ಸಾಮಾಜಿಕ ತಾಣಗಳಲ್ಲಿ ,ವೃತ್ತಪತ್ರಿಕೆಗಳಲ್ಲಿ ಹರಿಯತೊಡಗಿವೆ.ಅವರು ದೇಶವನ್ನ ಬಿಟ್ಟು ಪಾಕಿಸ್ತಾನಕ್ಕೋ,ಅಫಘಾನಿಸ್ತಾನಕ್ಕೋ ಹೋಗಲಿ ಎ೦ದು ಕೆಲವರೆ೦ದರೇ, ಹಾಗೆಲ್ಲ ಅವರ ಬಗ್ಗೆ ಮಾತನಾಡಬಾರದು ,ಅವರು ಹಿ೦ದೆಲ್ಲ ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೊಡುಗೆಯನ್ನು ಮರೆತು ಮಾತನಾಡುವುದು ತಪ್ಪು ಎ೦ದು ವಾದಿಸುತ್ತಾರೆ ಕೆಲವರು.ಬಿಡಿ ಅದು ಅವರವರ ಭಾವಕ್ಕೆ,ಅವರವರ ಭಕುತಿಗೆ.

ಆದರೆ ಇಲ್ಲೊ೦ದು ವಿಷಯವನ್ನು ಗಮನಿಸಲೇಬೇಕು. ಅನ೦ತಮೂರ್ತಿ ಜಾತ್ಯಾತೀತವಾದಿಗಳೆ೦ದು ಹಾಗಾಗಿ ಅವರು ಏನೇ ಹೇಳಿದರೂ ಹಿ೦ದೂಗಳು ಅವರನ್ನು ಹೀಗೆಳೆಯುತ್ತಾರೆ೦ದೂ ಕೆಲವರು ವಾದಿಸುತ್ತಾರೆ.ಅಲ್ಲದೇ ಎಸ್.ಎಲ್ ಭೈರಪ್ಪ ಹಿ೦ದುತ್ವವಾದಿಯಾಗಿರುವುದರಿ೦ದ ಅವರು ಏನೇ ಬರೆದರೂ ಅವರನ್ನು ಹೊಗಳಿ ಅಟ್ಟಕ್ಕೇರಿಸುತ್ತಾರೆ೦ಬುದೂ ಇವರ ವಾದ.ಇದು ಶುದ್ಧ ಮೂರ್ಖತನವೆನ್ನದೇ ಬೇರೆ ವಿಧಿಯಿಲ್ಲ.’ವ೦ಶವೃಕ್ಷ’ ದಲ್ಲಿನ ಸಾ೦ಪ್ರದಾಯಿಕ ಬ್ರಾಹ್ಮಣ ಮನೆಯಲ್ಲಿ ’ನಿಯೋಗ’( ಮಕ್ಕಳನ್ನು ಪಡೆಯುವುದಕ್ಕೋಸ್ಕರ ಗ೦ಡನನ್ನು ಹೊರತುಪಡಿಸಿ ಬೇರೊಬ್ಬನೊ೦ದಿಗೆ ಸ೦ಬ೦ಧ ಹೊ೦ದುವುದು) ಪದ್ದತಿಯಿ೦ದ ಜನಿಸುವ ಶ್ರೀನಿವಾಸ ಶ್ರೋತ್ರಿಯ ಪಾತ್ರವನ್ನು ಸೃಷ್ಟಿಸಿದವರು ಭೈರಪ್ಪನವರಲ್ಲವೇ…? ಸ೦ಗೀತದ ಕಥಾವಸ್ತುವಿದ್ದರೂ , ಒಬ್ಬ ಶಾಸ್ತ್ರೀಯ ಸ೦ಗೀತದ ಗುರುವೊಬ್ಬನೊ೦ದಿಗೆ ,ಅವನ ಶಿಷ್ಯೆಗಿರಬಹುದಾದ ಅನೈತಿಕ ಸ೦ಬ೦ಧ,ನಾಟ್ಯ ಪ್ರವೀಣೆಯೊಬ್ಬಳಿಗೆ ಅವಳ ಶಿಷ್ಯನೊ೦ದಿಗಿರಬಹುದಾದ ಸ೦ಬ೦ಧಗಳ ಬಗ್ಗೆ ಎಳೆ ಎಳೆಯಾಗಿ ಬಿಡಿಸಿಡುವ ’ಮ೦ದ್ರ’ ಯಾರ ಕಾದ೦ಬರಿ..?

ಮತ್ತಷ್ಟು ಓದು »

17
ಸೆಪ್ಟೆಂ

‘ನಕ್ಸಲ್ ವರಸೆ’ ಮತ್ತು ‘ಹೆಗ್ಗುರುತು’ ಕಥಾ ಸಂಕಲನಗಳನ್ನು ಕುರಿತಂತೆ … ಭಾಗ ೨

ಮು. ಅ. ಶ್ರೀರಂಗ,ಬೆಂಗಳೂರು

ನಕ್ಸಲ್ ವರಸೆ ಮತ್ತು ಹೆಗ್ಗುರುತು“ಹೆಗ್ಗುರುತು”ಗೆ ಪ್ರವೇಶ ರೂಪದಲ್ಲಿ ಮುನ್ನುಡಿ ಬರೆದಿರುವ ಮಲ್ಲಿಕಾರ್ಜುನ ಹೀರೆಮಠರು ಆ ಕತೆಗಳ ಸಾರಾಂಶ / ತಾತ್ಪರ್ಯ/ ಭಾಷ್ಯ ಹೀಗೆ ಬರೆದಿರುವುದರಿಂದ ಅದರಲ್ಲಿ ಚರ್ಚಿಸುವ ಅಂಶಗಳು ಅಷ್ಟಾಗಿ ಇಲ್ಲ. “ನಿಜಕವಲು”ಜತೆಗೆ ಸ್ತ್ರ್ರೀ ವಾದಿಗಳೂ ಸೇರಿದಂತೆ ಹಲವರ ಕೋಪಕ್ಕೆ ಕಾರಣವಾದ ಭೈರಪ್ಪನವರ “ಕವಲು”ಕಾದಂಬರಿಯನ್ನು ಹೋಲಿಸಿದ್ದಾರೆ. ಈ ತೌಲನಿಕ ಅಧ್ಯಯನ ಹೇಗೆ ಸಾಧ್ಯವೋ ತಿಳಿಯದಾಗಿದೆ. ಕವಲು ಮತ್ತು ನಿಜಕವಲುವಿನ ನೆಲೆಗಳೇ ಬೇರೆ ಬೇರೆ. ಕಾನೂನಿಗೂ ನ್ಯಾಯ-ನೀತಿಗೂ ನಡುವೆ ಇರುವ ಕಂದರ ಕವಲುವಿನ ಮುಖ್ಯ ಸಮಸ್ಯೆ. ಒಂದು ಒಳ್ಳೆಯ ಉದ್ದೇಶಕ್ಕಾಗಿ,ಜನ ಹಿತಕ್ಕಾಗಿ ಮಾಡಿದ ಕಾನೂನನ್ನೇ ಅದಕ್ಕೆ ವಿರುದ್ದವಾಗಿಯು ಉಪಯೋಗಿಸಿದಾಗ ಏನಾಗಬಹುದು ಎಂಬುದರಕದೆಗೆ ನಮ್ಮ ಗಮನವನ್ನು ಸೆಳೆಯುವುದು ಆ ಕಾದಂಬರಿಯ ಉದ್ದೇಶ. ದಾಂಪತ್ಯದಲ್ಲಿ ಹೊಂದಾಣಿಕೆ ಎಂಬುದು ಕೇವಲ ಗಂಡಸಿಗೆ ಮಾತ್ರ ಸೇರಿದ್ದಲ್ಲ;ಹೆಣ್ಣಿಗೂ ಆ ಕರ್ತವ್ಯದಲ್ಲಿ ಪಾಲಿದೆ. ತೀರ ಸಹಿಸಲು ಆಸಾಧ್ಯವಾದಾಗ ಬಿಡುಗಡೆ ಪಡೆಯುವುದರಲ್ಲಿ ತಪ್ಪೇನಿಲ್ಲ. ಇದನ್ನು ಭೈರಪ್ಪನವರು ವಿರೋಧಿಸುತ್ತಾರೆ ಎಂದು ಊಹಿಸುವುದು ತಪ್ಪಾಗುತ್ತದೆ.”ನಿಜ ಕವಲು”ವಿನಲ್ಲಿ ಬರುವ ಮಹಿಳಾ ಕಂಡಕ್ಟರ್ ರೀತಿಯಲ್ಲೇ ಇತರೆ ಉದ್ಯೋಗಸ್ಥ ಮಹಿಳೆಯರೂ ಸಹ ಒಂದಲ್ಲ ಒಂದು ವಿಧದಲ್ಲಿ ಸನ್ನಿವೇಶದಲ್ಲಿ :ವಾರೆ ನೋಟ”ಕ್ಕೆ ತುತ್ತಾಗ ಬಹುದಾದಂತಹವರೆ.”ಚಿಕ್ಕತಾಯಿ”ಕತೆ ಇದಕ್ಕೆ ಉದಾಹರಣೆ. ಕೊನೆಯಲ್ಲಿ ಅದು ಬೇರೆ ತಿರುವು ಪಡೆದರು ಸಹ ಪ್ರಾರಂಭದ ಹಂತಗಳನ್ನು ಮರೆಯಬಾರದಲ್ಲವೆ ಹೀಗಾಗಿ ದುಡಿಯುವ ಆಧುನಿಕ ಮಹಿಳೆಯ ಬಗ್ಗೆ ಭೈರಪ್ಪನವರದ್ದು “ವಾರೆ ನೋಟ”ಎಂಬ ಹಿರೇಮಠರ ಅಭಿಪ್ರಾಯ ಸರಿಯಿಲ್ಲ. ಜತೆಗೆ ಆಧುನಿಕ ಉದ್ಯೋಗಸ್ಥ ಮಹಿಳೆಯಿಂದಾಗಿ ನಮ್ಮ ಸನಾತನ ಸಂಸ್ಕೃತಿ ಕವಲು ದಾರಿ ಹಿಡಿದು ಹಾಳಾಗುತ್ತಿದೆ ಎಂಬ ಆತಂಕ ಭೈರಪ್ಪನವರನ್ನು ಕಾಡುತ್ತಿದೆ ಎಂಬ ಹಿರೇಮಠರ ಆರೋಪದಲ್ಲೂ ಹುರುಳಿಲ್ಲ. ಸನಾತನ ಸಂಸ್ಕೃತಿ ನಂಬಿಕೆಗಳಿಗೆ ಮುಜುಗುರ ತಂದಂತಹ “ಪರ್ವ”(ಮಹಾಭಾರತವನ್ನು”ಆಧರಿಸಿದ್ದು) ಕಾದಂಬರಿಯನ್ನು ಬರೆದ ಭೈರಪ್ಪನವರನ್ನು “ಸನಾತನ ಮಠದ ಸ್ವಾಮಿಗಳ ಪೀಠ”ದಲ್ಲಿ ಕೂರಿಸುವುದು ಕುಚೋದ್ಯವಾಗಬಹುದು. ಅಷ್ಟೆ.

ಮತ್ತಷ್ಟು ಓದು »