ವಿಷಯದ ವಿವರಗಳಿಗೆ ದಾಟಿರಿ

Archive for

31
ಆಕ್ಟೋ

“ಓಲೈಕೆ ಮತ್ತು ತುಷ್ಟೀಕರಣ” ಜಾತ್ಯಾತೀತತೆಯ ಸಂಕೇತಗಳೇ?

ಮು ಅ ಶ್ರೀರಂಗ ಬೆಂಗಳೂರು

Mindsetಒಂದು ರಾಜಕೀಯ ಧೋರಣೆಗೆ ಕಂಕಣಬದ್ಧವಾದ “ಹೊಸತು”ಎಂಬ ಮಾಸಪತ್ರಿಕೆಯ ಜುಲೈ ೨೦೧೩ರ ಸಂಚಿಕೆಯಲ್ಲಿ “ಆಧುನಿಕೋತ್ತರವಾದವೂ ಸಿ. ಎಸ್. ಎಲ್. ಸಿ. ಚಿಂತನಾಕ್ರಮವೂ”ಎಂಬ ಲೇಖನವನ್ನು ಬೆಂಗಳೂರಿನ ಕೆ. ಪ್ರಕಾಶ್ ಎಂಬುವವರು ಬರೆದಿದ್ದಾರೆ. ೫ ಪುಟಗಳಷ್ಟು ವಿಸ್ತಾರವಾದ ಆ ಲೇಖನದ ೧೬ ಪ್ಯಾರಾಗಳಲ್ಲಿ ಸುಮಾರು ೧೫ ಜನ ಬುದ್ಧಿಜೀವಿಗಳ,ಚಿಂತಕರ,ಉದ್ದುದ್ದದ ವಾಕ್ಯಗಳನ್ನು(ಉದ್ಧರಣೆಗಳು)ಪ್ರಕಾಶ್ ಅವರು ತಮ್ಮ ಲೇಖನಕ್ಕೆ “ಬಲ”ಬರಲಿ ಎಂದು ಉಪಯೋಗಿಸಿಕೊಂಡಿದ್ದಾರೆ. ಆ ದೊಡ್ಡ ದೊಡ್ಡ ವಾಕ್ಯಗಳ ನಡುವೆ “ಫಿಲ್ಲರ್”ತರಹ ತಮ್ಮ ನಾಲ್ಕೈದು ಸಾಲುಗಳನ್ನು ಸೇರಿಸಿದ್ದಾರೆ. ಆ “ಫಿಲ್ಲರ್”ಗಳ ಮುಖ್ಯ ಉದ್ದೇಶ ಕುವೆಂಪು ವಿ. ವಿ.ಯಲ್ಲಿನ ಸಿ ಎಸ್ ಎಲ್ ಸಿ ಯನ್ನು ಖಂಡಿಸುವುದಷ್ಟೇ ಆಗಿದೆ.

“ಮಡೆ ಸ್ನಾನ”ದಿಂದ ಪ್ರಾರಂಭವಾಗುವ ಈ ಲೇಖನ ಕೊನೆಗೆ ಬಂದು ನಿಲ್ಲುವುದು  “ವಚನಗಳು vs ಜಾತಿ ವ್ಯವಸ್ಥೆ”ಬಗ್ಗೆ  “ಪ್ರಜಾವಾಣಿ”ಪತ್ರಿಕೆಯಲ್ಲಿ ಸುಮಾರು ಮೂರು ತಿಂಗಳಿನಷ್ಟು ಕಾಲ ನಡೆದ ವಾದ-ಪ್ರತಿವಾದದ “ಅನುಭವ ಮಂಟಪದಲ್ಲಿ”. ಪ್ರಕಾಶ್ ಅವರು ತುಂಬಾ ಆರಾಧಿಸುವ ಪ್ರೊ। ಐಜಾಜ್ ಅಹ್ಮದ್ ಅವರೇ “ಆಧುನಿಕೋತ್ತರವಾದವು ಹಲವು ವಿಭಿನ್ನ ಎಳೆಗಳಿಂದ ರಚಿತವಾಗಿದ್ದು ಅದನ್ನು ಒಂದು ಸುಸಂಬದ್ಧ ಚಿಂತನೆಯಾಗಿ ಮಂಡಿಸುವುದು ಕಷ್ಟ ಎಂದು ಎಚ್ಚರಿಸುತ್ತಲೇ ಅದರ ಪ್ರಮುಖ ಲಕ್ಷಣಗಳನ್ನು ಗುರುತಿಸುತ್ತಾರಂತೆ”(ಹೊಸತು ಜುಲೈ ೨೦೧೩ ಪುಟ ೩೦). ಸಿ ಎಸ್ ಎಲ್ ಸಿ ಯದೂ ಆ ಹಲವು ಹಾದಿಗಳಲ್ಲಿ ಒಂದು ಎಳೆ ಎಂದು  ಪ್ರಕಾಶ್ ಅವರು ಒಪ್ಪಿಕೊಳ್ಳಲು ಸಿದ್ದರಿಲ್ಲ.

ಮತ್ತಷ್ಟು ಓದು »

30
ಆಕ್ಟೋ

ಲೈಂಗಿಕ ವಸ್ತುಗಳ ನಿಷೇಧ ಸರಿಯೇ?

– ಶ್ರೀಪತಿ ಗೋಗಡಿಗೆ

ಲೈಂಗಿಕ ಸಲಕರಣೆಗಳುಮೊದಲಿಗೆ ಈ ಲೈಂಗಿಕ ವಸ್ತುಗಳು ಎಂದರೆ ಏನು ಅಂತ ಸ್ವಲ್ಪ ಹೇಳಿ ಬಿಡ್ತೀನಿ. ಏಕೆಂದರೆ ನಮ್ಮ ದೇಶದಲ್ಲಿ ಲೈಂಗಿಕತೆಯ ಬಗ್ಗೆ ಮಾತಾಡಲಿಕ್ಕೇ ಹಿಂಜರಿಯುವ ಮಾನಸಿಕತೆಯಿರುವಾಗ ಎಷ್ಟೋ ಜನರಿಗೆ ಇದೆಂತಾ ವಸ್ತುಗಳು? ಎಂಬ ಅನುಮಾನವೂ ಮೂಡಬಹುದು.

ಲೈಂಗಿಕ ವಸ್ತುಗಳು ಅಥವಾ ಸಾಮಗ್ರಿಗಳು

ಇವುಗಳನ್ನು ಇಂಗ್ಲೀಷಿನಲ್ಲಿ ಸೆಕ್ಸ್ ಟಾಯ್ಸ್ ಎಂದು ಕರೆಯುತ್ತಾರೆ. ಲೈಂಗಿಕತೆಗೆ ಸಂಬಂಧ ಪಟ್ಟಂತೆ ಉಪಯೋಗಿಸುವ ವಸ್ತುಗಳೆಲ್ಲಾ ಈ ಸಾಲಿಗೆ ಬರುತ್ತವೆ. ಬಹಳಷ್ಟು ಜನರು ಲೈಂಗಿಕ ವಿಷಯವೆಂದರೆ ಒಂದು ಕೋಣೆ, ಹಾಸಿಗೆ ಮತ್ತು ಸಂಗಾತಿ ಅಷ್ಟೇ ಎಂದುಕೊಂಡಿರಬಹುದು. ಆದರೆ ಅದನ್ನೂ ಮೀರಿದ ವಿಷಯಗಳು ನೂರಾರಿವೆ. ಅವುಗಳನ್ನು ಚರ್ಚಿಸುವುದೇ ಈ ಲೇಖನದ ಉದ್ದೇಶ.

ಲೈಂಗಿಕ ಪರಿಕರಗಳ ಬಗ್ಗೆ ಸರಳವಾಗಿ ಹೇಳಬೇಕೆಂದರೆ ಬಹಳಷ್ಟು ಬಳಕೆಯಲ್ಲಿರುವ ಕಾಂಡೋಮ್ ಸಹ ಒಂದು ಲೈಂಗಿಕ ಪರಿಕರವೇ ಆಗಿದೆ. ಕಾಂಡೋಮ್ ಮೊದಲಿಗೆ ಗರ್ಭನಿರೋಧಕವಾಗಿ ಉಪಯೋಗಕ್ಕೆ ಬಂದಿತು. ನಂತರದ ದಿನಗಳಲ್ಲಿ ರೋಗ ನಿರೋಧಕವಾಗಿ ಹೆಚ್ಚು ಪ್ರಚಾರ ಹಾಗೂ ಉಪಯೋಗಕ್ಕೆ ಬಂತು. ಅದರ ತಯಾರಕರು ಕೂಡಾ ಸುಮ್ಮನಿರದೇ ಅದರ ಮೇಲೆ ಗೆರೆ, ಗುಳ್ಳೆ ಮುಂತಾದವುಗಳನ್ನು ಸೇರಿಸಿ ಲೈಂಗಿಕ ಸಂತೃಪ್ತಿಯನ್ನೂ ನೀಡುವ ವಸ್ತುವನ್ನಾಗಿ ರೂಪಿಸತೊಡಗಿದರು.

ಕಾಂಡೋಮ್ ಎಲ್ಲರಿಗೂ ಪರಿಚಯವಿರುವ ಒಂದು ಲೈಂಗಿಕ ಪರಿಕರ. ಅದಲ್ಲದೇ ಇನ್ನೂ ನೂರಾರು ಲೈಂಗಿಕ ಪರಿಕರಗಳು ಚಾಲ್ತಿಯಲ್ಲಿ ಇವೆ. ಇವುಗಳಲ್ಲಿ ಬಹಳಷ್ಟು ವಸ್ತುಗಳನ್ನು ಅಭಿವೃದ್ದಿ ಪಡಿಸಿರುವುದೇ ಏಕಾಂಗಿಗಳ ಕಾಮವನ್ನು ತಣಿಸಲಿಕ್ಕಾಗಿ. ಅಂದರೆ ಕಾಮೋತ್ತೇಜನಗೊಂಡಾಗ ಸಂಗಾತಿ ಸಿಗದೇ ಹೋದರೆ ಈ ಪರಿಕರಗಳ ಮೂಲಕ ಕಾಮವನ್ನು ತಣಿಸಿಕೊಳ್ಳುವ ಅವಕಾಶವಿದೆ. [ ಅವುಗಳನ್ನು ವಿವರವಾಗಿ ಇಲ್ಲಿ ಚರ್ಚಿಸಲು ಸಾಧ್ಯವಿಲ್ಲವಾದರೂ ಉದಾ : ಸ್ತ್ರೀಯರಿಗಾಗಿ ಕೃತಕ ಶಿಶ್ನ, ಪುರುಷರಿಗಾಗಿ ಸುಂದರವಾದ ಹುಡುಗಿಯ ಗೊಂಬೆ ಮುಂತಾದವು ] ಇವುಗಳನ್ನು ಸೆಕ್ಸ್ ಟಾಯ್ಸ್ ಮತ್ತು ಸೆಕ್ಸ್ ಡಾಲ್ಸ್ ಎಂದು ಕರೆಯುತ್ತಾರೆ.

ಮತ್ತಷ್ಟು ಓದು »

29
ಆಕ್ಟೋ

ಸ೦ಜಯ್ ದತ್ ಎ೦ಬ ನಟ ಮತ್ತು ಜೈಲು ಶಿಕ್ಷೆಯ ಪ್ರಹಸನ

– ಗುರುರಾಜ್ ಕೊಡ್ಕಣಿ

Sanjay Dutಹಿ೦ದಿ ಖ್ಯಾತ ಚಿತ್ರ ನಟ ಸ೦ಜಯ ದತ್ ಮತ್ತೆ ಸುದ್ದಿಯಲ್ಲಿದ್ದಾರೆ.ಟಾಡಾ ಕಾಯ್ದೆಯಡಿ ಶಿಕ್ಷೆಗೊಳಗಾಗಿದ್ದ ಸ೦ಜಯ್ ದತ್ ಶಿಕ್ಷೆಯ ಪ್ರಮಾಣವನ್ನು ಇಳಿಸುವುದರ ಬಗ್ಗೆ ಕೇ೦ದ್ರ ಸರಕಾರ ಚಿ೦ತನೆ ನಡೆಸಿದೆ.ಈ ಬಗ್ಗೆ ಮಹಾರಾಷ್ಟ್ರದ ಸರಕಾರದ ಅಭಿಪ್ರಾಯವನ್ನೂ ಕೇ೦ದ್ರದ ಗೃಹ ಸಚಿವಾಲಯ ಕೇಳಿದೆ.’ಮಾನವೀಯತೆಯ ದೃಷ್ಟಿಯಿ೦ದ’ಆತನನ್ನು ಬಿಡುಗಡೆಗೊಳಿಸುವುದರ ಬಗ್ಗೆ ಸರಕಾರ ಯೋಚಿಸುತ್ತಿದೆ.

ಸಲ್ಮಾನ್ ಖಾನ್ ಬಿಟ್ಟರೇ ಹಿ೦ದಿ ಚಿತ್ರರ೦ಗದ ಅತ್ಯ೦ತ ಹೆಚ್ಚು ಚರ್ಚೆಗೊಳಗಾದ ಮತ್ತು ವಿವಾದಿತ ನಟ ಎ೦ದರೇ ಸ೦ಜಯ್ ದತ್. ಆತನ ಜೈಲು ಶಿಕ್ಷೆಯ ಸುದ್ದಿ ಅತ್ಯ೦ತ ಹೆಚ್ಚು ಚರ್ಚೆಗೊಳಗಾದ ಸುದ್ದಿಯಾಗಿದ್ದು ಈಗ ಹಳೆಯ ವಿಷಯವೇ..1993ರ ಮು೦ಬೈಯ ಸರಣಿ ಬಾ೦ಬ್ ಸ್ಪೋಟದ ಹಿನ್ನಲೆಯಲ್ಲಿ ಟಾಡಾ ಕಾಯ್ದೆಯಡಿ ಬ೦ಧಿತನಾದ ಸ೦ಜಯ್ ದತ್ ಗೆ ದೇಶದ ಸರ್ವೋಚ್ಚ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.ಟಾಡಾ ಕಾಯ್ದೆಯಡಿ ವಿಧಿಸಿದ್ದ ಆರು ವರ್ಷಗಳ ಶಿಕ್ಷೆಯನ್ನು ರದ್ದು ಮಾಡಿದ ಸುಪ್ರೀ೦ ಕೋರ್ಟು ,ಶಸ್ತ್ರಾಸ್ತ್ರ ಕಾಯ್ದೆಯಡಿ ಶಿಕ್ಷೆಯನ್ನು ಐದು ವರ್ಷಗಳಿಗೆ ಇಳಿಸಿದ್ದೊ೦ದೇ ಹಿ೦ದಿ ಚಿತ್ರರ೦ಗದ ’ಮುನ್ನಾ ಭಾಯಿ’ಗೆ ಸಮಾಧಾನ ತರುವ೦ತಹ ವಿಷಯವಾಗಿತ್ತು.ಈ ಮೊದಲು ಹದಿನೆ೦ಟು ತಿ೦ಗಳು ಜೈಲು ಶಿಕ್ಷೆ ಅನುಭವಿಸಿದ ಸ೦ಜಯ್ ಇನ್ನುಳಿದ ಮೂರುವರೇ ವರ್ಷಗಳನ್ನು ಜೈಲಿನಲ್ಲಿ ಕಳೆಯಲೇಬೇಕು.

ಮತ್ತಷ್ಟು ಓದು »

28
ಆಕ್ಟೋ

ಮೂರ್ತಿಗಳೇ,ಸೈನ್ಯ ಸಾಮ್ರಾಟ ಅಶೋಕನ ಬಳಿಯೂ ಇತ್ತು.ಆದರೆ,ಗೆದ್ದಿದ್ದು ಕಳಿಂಗ …!

– ರಾಕೇಶ್ ಶೆಟ್ಟಿ

Siddu n URAಭಾರತ ಬಿಡದಿರಲು ನಿರ್ಧರಿಸಿದ ಮೇಲೆ ನಮ್ಮ ಅನಂತ ಮೂರ್ತಿಯವರು, ಕಳೆದ ವಾರ ಸಿ.ಎಂ ಸಿದ್ದರಾಮಯ್ಯ ನವರಿಗೆ ಮೋದಿಯಂತೆ ಸೈಬರ್ ಸೈನ್ಯ ಕಟ್ಟಲು ಹೇಳಿ ಮತ್ತೊಮ್ಮೆ ಸುದ್ದಿಯಾದರು.

ಭಾರತದ ದೇಶ ಕಂಡ ಬೃಹತ್ ಸೈನ್ಯ ಸಾಮ್ರಾಟ ಅಶೋಕನ ಬಳಿಯೂ ಇತ್ತು ಮೂರ್ತಿಗಳೇ.ಆದರೆ ಅವನೆದುರು ಸೋತು ಗೆದ್ದಿದ್ದು ’ಕಳಿಂಗ’ …! ಸಾಮ್ರಾಟ ಅಶೋಕನ ಸೈನ್ಯದೆದುರಿಗೆ ಕಳಿಂಗ ಅನ್ನುವ ಪುಟ್ಟ ರಾಷ್ಟ್ರ ಏನೇಂದರೇ ಏನು ಆಗಿರಲಿಲ್ಲ.ಅವರಲ್ಲಿ ಅಶೋಕನ ಬಳಿಯಿದ್ದಷ್ಟು ಶಸ್ತ್ರ-ಅಸ್ತ್ರಗಳಿರಲಿಲ್ಲ,ಸೈನ್ಯವೂ ಇರಲಿಲ್ಲ.ಅವರಲ್ಲಿ ಇದ್ದಿದ್ದು ಸ್ವಾಭಿಮಾನ ಮತ್ತು ಧೈರ್ಯ. ಸಾಮ್ರಾಟ ಅಶೋಕನ ಸೈನ್ಯಕ್ಕೆ ಎದೆಯೊಡ್ಡಿ ಅವರು ಹೇಳಿದ್ದು “ನೀನು ಮಹಾನ್ ಸಾಮ್ರಾಟನಿರಬಹುದು,ನಿನ್ನ ಶಕ್ತಿ ಅಸಾಧಾರಣವಿರಬಹುದು.ಆದರೆ,ನಮಗೆ ಕನಿಷ್ಟ ಆತ್ಮಾಭಿಮಾನದಿಂದ ಸಾಯುವ ಅಧಿಕಾರವಾದರೂ ಇದೆ- ನೀನದನ್ನು ನಮ್ಮಿಂದ ಕಿತ್ತುಕೊಳ್ಳಲಾರೆ” ಅನ್ನುವುದೇ ಆಗಿತ್ತು.

ನೀವು ದುಡ್ಡು ಕೊಟ್ಟು,ಏನು ಮಾಡಬೇಕು ಅಂತ ಹೇಳಿಕೊಟ್ಟು ಕಟ್ಟಬಹುದಾದ ಸೈಬರ್ ಸೈನ್ಯ ಸಾಮ್ರಾಟ ಅಶೋಕನ ಸೈನ್ಯದಂತೆಯೇ ಅಗಾಧವಾಗಿರಬಹುದು.ಆದರೆ ಅದಕ್ಕೆದುರಾಗಿ ನಿಂತಿರುವುದು ಸ್ವಾಭಿಮಾನಿ ’ಕಳಿಂಗ’ದಂತಹ ಸೈನ್ಯ. ಈ ಸೈನಿಕರು ದುಡ್ಡಿಗಾಗಿ,ಅಧಿಕಾರಕ್ಕಾಗಿ,ಆಯ್ಕೆ ಸಮಿತಿಗಳ ಸ್ಥಾನಗಳಿಗಾಗಿ,ವಿವಿಗಳ ನಾಮಫಲಕಗಳಲ್ಲಷ್ಟೇ ರಾರಾಜಿಸುವ, ವಿವಿಗಳ ಕುರ್ಚಿ ಬಿಸಿ ಮಾಡುವ ಹುದ್ದೆಗಳಿಗಾಗಿಯೋ ಇಲ್ಲ ಪ್ರಶಸ್ತಿಗಳಿಗಾಗಿಯೋ ಕಾದು ಕುಳಿತಿರುವ ಅವಕಾಶವಾದಿಗಳಲ್ಲ.ಇವರೆಲ್ಲ ಕೇಂದ್ರ ಸರ್ಕಾರದ ಭ್ರಷ್ಟಚಾರದ ವಿರುದ್ಧ ಜೊತೆಯಾದವರು. ನಿಮ್ಮ ಸೆಕ್ಯುಲರ್ ಬ್ರಿಗೇಡ್ ಕಳೆದ ೧೧ ವರ್ಷಗಳಲ್ಲಿ ಮೋದಿ ಅನ್ನುವವನ ಮೇಲೆ ಏಕಪಕ್ಷೀಯವಾಗಿ ಕಟ್ಟುತ್ತ ಬಂದ ಸುಳ್ಳಿನ ಕೋಟೆಯನ್ನು ಕಂಡು ರೋಸಿ ಹೋಗಿ, ಆ ಸುಳ್ಳಿನ ಕೋಟೆಯ ಭೇಧಿಸಲು ತಾನಾಗೇ ಹುಟ್ಟಿಕೊಂಡ ಸೈನ್ಯ. ನಿಮ್ಮ ಸೆಕ್ಯುಲರ್ ಬ್ರಿಗೇಡಿನ ಸುಳ್ಳುಗಳಿಗೆ ಸಾಕ್ಷಿ ಬೇಕಾದರೇ, ನಿಮ್ಮದೇ ಹೇಳಿಕೆಯ ಸುತ್ತ ತಿರುಗೋಣ ಬನ್ನಿ ಮೂರ್ತಿಗಳೇ,

ಮತ್ತಷ್ಟು ಓದು »

26
ಆಕ್ಟೋ

ರೋಗಿಗಳ ದೀರ್ಘಕಾಲದ ನೋವನ್ನು ಅರ್ಥೈಸಿಕೊಳ್ಳುವಾಗ ನೋಡಬೇಕಾದ ಮನೋ-ಸಾಮಾಜಿಕ ಮತ್ತು ಕೌಟುಂಬಿಕ ಅಂಶಗಳು

-ಡಾ| ಸುಧಾ ಪ್ರಸಾದ್

Painಭೌತ-ಸಾಮಾಜಿಕ, ಮನೋ-ಸಾಮಾಜಿಕ, ವಾತಾವರಣಾವಲಂಬಿತ ಮತ್ತು ಕೌಟುಂಬಿಕ ಸ್ಥಿತಿಗತಿಗಳನ್ನವಲಂಬಿತ ಅಂಶಗಳು ರೋಗಿಯ ದೀರ್ಘಕಾಲದ ನೋವಿಗೆ ಕಾರಣಗಳಾಗಿರಬಹುದು. ದೀರ್ಘಕಾಲದ ನೋವು ಕೌಟುಂಬಿಕವಾಗಿ ಮನೆಯ ಸದಸ್ಯರಮೇಲೆ ಋಣಾತ್ಮಕ ಪರಿಣಾಮಗಳಿಗೆ ಕಾರಣವಾಗುತ್ತದೆ. ಸತತ ನೋವೆಂದು ಹೇಳುವುದನ್ನು ಅನುಮೋದಿಸುವ ಕುಟುಂಬ, ಅಂತಹ ನೋವಿಗೆ ಭಾಗಶಃ ತಾನೇ ಕಾರಣವಾಗಿರಲೂಬಹುದು!  

65 ವರ್ಷದ ಶ್ರೀಮತಿ ಲಕ್ಷ್ಮಿ ಎಂಬಾಕೆ ಮೊಳಕಾಲುಗಂಟಿನ ನೋವಿನ ಪರಿಹಾರಕ್ಕಾಗಿ ಎರಡೂ ಮೊಳಕಾಲುಗಂಟುಗಳ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಒಳಗಾದರು. ನಂತರ ಪಡೆಯಬೇಕಾದ ಪುನರುಜ್ಜೀವನ ಚಿಕಿತ್ಸೆಗಳನ್ನು ಆಕೆ ಅದೇ ಆಸ್ಪತ್ರೆಯಲ್ಲಿ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ; ಆದರೆ ಆಸ್ಪತ್ರೆಯಿಂದ ಮರಳಿ ಮನೆಗೆ ಕಳಿಸುವಾಗ ಕೊಟ್ಟ ಚಿಕಿತ್ಸಾಕ್ರಮಗಳ ಸಾರಾಂಶಯಾದಿಯಲ್ಲಿ ಹೇಳಲಾದ  ವ್ಯಾಯಾಮಗಳನ್ನೆಲ್ಲ ಆಕೆ ಮನೆಯಲ್ಲೇ ನಡೆಸಿದರು. ಶಸ್ತ್ರಚಿಕಿತ್ಸೆ ಮುಗಿದು ಒಂದು ತಿಂಗಳ ನಂತರವೂ ಸಹ ಆಕೆ ಎತ್ತರದ ಕುರ್ಚಿಯಲ್ಲೇ ಕುಳಿತಿದ್ದರು, ಮಲಗುವುದಕ್ಕೆ ಆಧಾರವಾಗಿ ಹಲವು ದಿಂಬುಗಳನ್ನು ಒಂದರಮೇಲೊಂದರಂತೇ ಇಟ್ಟುಕೊಂಡಿದ್ದರು, ನಡೆಯುವುದಕ್ಕೆ ವಾಕರ್ ಬಳಸುತ್ತಿದ್ದರು ಅಥವಾ ಯಾರನ್ನೋ ಹಿಡಿದುಕೊಂಡು ನಡೆದಾಡುತ್ತಿದ್ದರು. ನೋವು ಬರುತ್ತದೆ, ಬುದ್ದುಬಿಡುತ್ತೇನೆ ಎಂಬ ಹೆದರಿಕೆ ಆಕೆಯ ಮನದಲ್ಲಿ ಆಳವಾಗಿ ಬೇರೂರಿ ಆಕೆ ಮಲಗೇ ಇರುವಂತೇ ಮಾಡಿತ್ತು. ಆಕೆಯ ಕುಟುಂಬದವರು ಆಕೆಗೆ ಇನ್ನೇನೋ ತೊಂದರೆಯಿರಬೇಕೆಂಬ ಅನಿಸಿಕೆಯಿಂದ ನಮ್ಮ ಕ್ಲಿನಿಕ್ಕಿನ ಸಲಹೆ-ಸಹಾಯ ಬಯಸಿ ನಮ್ಮಲ್ಲಿಗೆ ಬಂದರು. ಒಬ್ಬ ಅನುಭವಿಯ ಮಾರ್ಗದರ್ಶನದಲ್ಲಿ ಒಂದೇ ವಾರದಲ್ಲಿ ಆಕೆ ಯಾರ ಸಹಾಯವೂ ಇಲ್ಲದೇ ನಡೆಯುವಂತಾದರು. ವಾರಗಳ ನಂತರ ಯಾವ ಹೆದರಿಕೆಯೂ ಇಲ್ಲದೇ ನಡೆದಾಡಿದರೆ, ತಿಂಗಳನಂತರ ಮೆಟ್ಟಿಲುಗಳನ್ನೇರಲು ತೊಡಗಿದರು, ಕಾರನ್ನೇರಿ ಎಲ್ಲರಂತೇ ಆರಾಮವಾಗಿ ಇರಲಾರಂಭಿಸಿದರು. ಮನಸ್ಸಿನಾಳದಲ್ಲಿದ್ದ ನೋವು ಮತ್ತು ಬೀಳುವ ಭಯವನ್ನು ಪರಿಹರಿಸದಿದ್ದರೆ, ಶಸ್ತ್ರಕ್ರಿಯೆಯ ಬಳಿಕವೂ ದೀರ್ಘಕಾಲದ ನೋವಿನಿಂದ ಆಕೆ ಬಳಲುತ್ತಲೇ ಇರಬೇಕಾಗುತ್ತಿತ್ತು. ಬಹಳದೊಡ್ಡ ಶಸ್ತ್ರಚಿಕಿತ್ಸೆಯಿಂದ ಆಯಾಸಗೊಂಡಿರುತ್ತಾರೆಂಬ ಸಹಾನುಭೂತಿಯಿಂದ ಹೆಜ್ಜೆಹೆಜ್ಜೆಗೂ ಆಕೆಗೆ ಸಹಾಯಮಾಡಲು ಮುಂದಾಗುವ ಕುಟುಂಬ ತಮಗರಿವಿಲ್ಲದೇ ಆಕೆಯ ನೋವು ದೀರ್ಘಕಾಲ ಅಥವಾ ಶಾಶ್ವತವಾಗಿ ಹಾಗೇ ಉಳಿದುಬಿಡಲು ಕಾರಣೀಭೂತರಾಗಬಹುದಿತ್ತು!      

ಮತ್ತಷ್ಟು ಓದು »

25
ಆಕ್ಟೋ

ಮೋದಿ ಅಭಿಮಾನ ಮತ್ತು ಅಭಿಮಾನಿಗಳ ಸುತ್ತ

– ಮಹೇಶ್ ಪ್ರಸಾದ್ ನೀರ್ಕಜೆ

NaModiಎಲ್ಲೆಡೆ ಮೋದಿ ಜಪ (ಪರ ವಿರೋಧ) ಆಗುತ್ತಿರುವಾಗ ಮೋದಿ ಬೆಂಬಲಿಗನಾಗಿದ್ದುಕೊಂಡೆ ನನ್ನದೊಂದು ಕ್ರಿಟಿಕ್ ಬರಹ ಇರಲಿ ಅನಿಸಿ ಬರೆಯುತ್ತಿದ್ದೇನೆ.

ಮೊದಲನೆಯದಾಗಿ ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿಸಿದ ಗಾದೆ ನಮಗೆ ಗೊತ್ತೇ ಇದೆ. ಮೇಲ್ನೋಟಕ್ಕೆ ಇದು ತೀರಾ ಸರಳ ವಿಚಾರ ಎನಿಸಿದರೂ ಆಚರಣೆಗೆ ಕಷ್ಟ ಅಂತ ಮೋದಿ ಮತ್ತು ಅವರ ಬೆಂಬಲಿಗರು ತುಳಿಯುತ್ತಿರುವ ಹಾದಿ ನೋಡಿದಾಗ ಅನಿಸುತ್ತಿದೆ. ಮೊನ್ನೆ ಮೊನ್ನೆ ಮೋದಿ ಪ್ರಧಾನ ಮಂತ್ರಿ ಅಭ್ಯರ್ಥಿ ಅಂತ ಆಯ್ಕೆ ಆದಾಗ ರಾಜನಾಥ್ ಸಿಂಗ್ ಜೊತೆ ಮೋದಿ ಪರಸ್ಪರ ಸಿಹಿ ಹಂಚಿಕೊಂಡಿದ್ದನ್ನು ನೋಡಿದಾಗ ಮೊದಲ ಬಾರಿಗೆ ನನಗೆ ಎಲ್ಲೋ ಎಡವಟ್ಟಾಗುತ್ತಿದೆ ಅನಿಸಿತು. ಟಿವಿ ಯಲ್ಲಿ ಇದನ್ನು ನೋಡುತ್ತಿದ್ದ ನನ್ನಂಥವರಿಗೆ ಆಗ ಈ ಗಾದೆ ನೆನಪಾದದ್ದು ಸುಳ್ಳಲ್ಲ. ಈಗ ಮೋದಿ ಬೆಂಬಲಿಗರ ವಿಚಾರದಲ್ಲೂ ನನಗೆ ಈ ಗಾದೆ ನೆನಪಾಗುತ್ತಿದೆ.

ಮತ್ತೊಮ್ಮೆ ಹೇಳುವುದಾದರೆ ನಾನು ಮೋದಿ ಪ್ರಧಾನ ಮಂತ್ರಿ ಆಗಬೇಕೆಂದು ಬಯಸುವವನು ಆದರೆ ಅದರ ಜೊತೆ ಜೊತೆಗೇ ನಾಳೆ ಭ್ರಮನಿರಸ ಗೊಳ್ಳಲು ಸಿಧ್ಧವಿಲ್ಲದಿರುವವನು. ಯಡ್ಯೂರಪ್ಪ ವಿಚಾರದಲ್ಲಿ ಈಗಾಗಲೇ ಒಮ್ಮೆ ಭ್ರಮನಿರಸ ಆಗಿದ್ದೇವೆ. ಹಾಗೆ ನೋಡಿದರೆ ಯಡ್ಯೂರಪ್ಪ ಕೂಡ ಪರಿಸ್ಥಿತಿ ಒತ್ತಡದಿಂದ ಭ್ರಷ್ಟರಾದರು ಹೊರತಾಗಿ ಸ್ವತಹ ಅವರೇ ಭ್ರಷ್ಟರಲ್ಲ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅವರಿಗೆ ಸ್ಪಷ್ಟ ಬಹುಮತ ಸಿಕ್ಕಿದ್ದಿದ್ದರೆ ಅವರು ರೆಡ್ಡಿಗಳ ಕಾಲು ಹಿಡಿಯಬೇಕಾಗಿರಲಿಲ್ಲ ಮತ್ತು ಕೊನೆಗೆ ಸಿಬಿಐ ಬಲೆಗೆ ಬಿದ್ದು ಜೈಲಿಗೂ ಹೋಗುತ್ತಿರಲಿಲ್ಲ. ಮೋದಿ ಕೂಡ ಹಾಗೆ ಮಾಡ್ತಾರೆ ಅಂತ ಹೇಳ್ತಿಲ್ಲ, ಆದರೆ ಮೋದಿ ಪ್ರಚಾರ ಅನ್ನುವುದು ಒಂದು ಮುಟ್ಟಬೇಕಾದ ಗುರಿ ಹೊರತು ಸಂಭ್ರಮಿಸಬೇಕಾದ ಮತ್ತು ಸಂಭ್ರಮದಲ್ಲಿ ಮೈಮರೆಯುವ ವಿಚಾರ ಅಲ್ಲ ಅನ್ನುವುದನ್ನು ಅವರ ಅಭಿಮಾನಿಗಳು ಅರ್ಥಮಾಡಿಕೊಂಡರೆ ಸಾಕು.

ಮತ್ತಷ್ಟು ಓದು »

24
ಆಕ್ಟೋ

ತೇಜಸ್ವಿ ಲೋಕದಲ್ಲಿ ನನ್ನ ವಿಹಾರ

– ಪ್ರೇಮಶೇಖರ

KP Tejaswiನನ್ನ ಅತ್ಯಂತ ಇಷ್ಟದ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಬಗ್ಗೆ ಎರಡು ವರ್ಷಗಳ ಹಿಂದೆ ಬರೆದಿದ್ದ ಲೇಖನ

ಶ್ರೀ ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ಬಗ್ಗೆ, ಅವರ ಬರಹಗಳ ಬಗ್ಗೆ ಟಿ. ಪಿ. ಅಶೋಕರ ತೇಜಸ್ವಿ ಕಥನ, ಡಿ. ವಿ. ಪ್ರಹ್ಲಾದ್ ಸಂಕಲಿಸಿರುವ ತೇಜಸ್ವಿ ಲೋಕ ಸೇರಿದಂತೆ ಹಲವು ಪುಸ್ತಕಗಳು ಬಂದಿವೆ.  ನೂರೊಂದು ಬಿಡಿಬಿಡಿ ಲೇಖನಗಳು ಪತ್ರಿಕೆಗಳಲ್ಲಿ, ವಿಮರ್ಶಾಸಂಕಲನಗಳಲ್ಲಿ ಪ್ರಕಟವಾಗಿವೆ. ಅವುಗಳ ಸಾರಾಂಶವನ್ನು ಸಂಗ್ರಹಿಸುವ ಪ್ರಯತ್ನ ಇದಲ್ಲ.  ಅವುಗಳಲ್ಲಿನ ಅಭಿಪ್ರಾಯಗಳನ್ನು ಪುನರುಕ್ತಿಸುವ ಪ್ರಯತ್ನವೂ ಇಲ್ಲಿಲ್ಲ.  ನನ್ನ ಅತ್ಯಂತ ಪ್ರೀತಿಯ ಲೇಖಕ ತೇಜಸ್ವಿಯವರ ಬಗ್ಗೆ ನನ್ನ ವೈಯುಕ್ತಿಕ ಅನಿಸಿಕೆಗಳನ್ನು ನನ್ನ ಸರಳ ಭಾಷೆಯಲ್ಲಿ (ಕ್ಲಿಷ್ಟ, ಗ್ರಾಂಥಿಕ ಕನ್ನಡ ನನಗೆ ಗೊತ್ತಿಲ್ಲ) ನಿಮ್ಮೊಡನೆ ಹಂಚಿಕೊಳ್ಳುವ ಒಂದು ಪುಟ್ಟ ಪ್ರಯತ್ನ ಇದು.

ಐದು ವರ್ಷಗಳ ಹಿಂದೆ ಇಂಥದೇ ಏಪ್ರಿಲ್ ಅಂತ್ಯದ ಒಂದು ದಿನ ಮಂಗಳೂರಿನ ಗೆಳೆಯ ಡಾ. ಜಯರಾಜ್ ಅಮೀನ್ ಅವರು ತೇಜಸ್ವಿಯವರ “ಮಾಯಾಲೋಕ”ವನ್ನು ತಂದುಕೊಟ್ಟಾಗ ನಾನು ಓದುವ ಆ ಮಹಾನ್ ಲೇಖಕನ ಕೊನೆಯ ಪುಸ್ತಕ ಅದಾಗಬಹುದೆಂದು ನಾನು ನೆನಸಿರಲಿಲ್ಲ.  ಅದಾಗಿ ಒಂದು ವರ್ಷದಲ್ಲಿ ಅವರು ಕಣ್ಮರೆಯಾದಾಗ ನನ್ನಲ್ಲುಂಟಾದ ಶೂನ್ಯತೆಗೆ ಹಲವು ಆಯಾಮಗಳಿದ್ದವು.  ಅವರ ಬರಹಗಳನ್ನು ಮತ್ತೆ ಮತ್ತೆ ಓದುವುದಲ್ಲದೇ ಅವರ ಬಗ್ಗೆ ಇತರರ ಬರಹಗಳನ್ನು ಕಾಯುವುದಷ್ಟೇ ನನಗೆ ಉಳಿದದ್ದು.

ಎರಡುಮೂರು ವಾರಗಳ ಹಿಂದೆ ವಿಜಯಕರ್ನಾಟಕದಲ್ಲಿ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರು ಬರೆದಿರುವ ನನ್ನ ತೇಜಸ್ವಿ ಕೃತಿಯ ಬಗ್ಗೆ ಶ್ರೀಮತಿ ವಿ. ಎನ್. ವೆಂಕಟಲಕ್ಷ್ಮಿಯವರ ಬರಹವನ್ನು ಓದಿದೊಡನೇ ಪ್ರೊ. ಶ್ರೀರಾಂ ಅವರಿಗೆ ಫೋನ್ ಮಾಡಿ ಪುಸ್ತಕದ ಪ್ರತಿಯೊಂದನ್ನು ನನಗಾಗಿ ತೆಗೆದಿಡುವಂತೆ ಕೇಳಿಕೊಂಡೆ.  ಕಳೆದವಾರ ನನ್ನ ಪುಸ್ತಕದ ಬಿಡುಗಡೆಯ ಪ್ರಯುಕ್ತ ಮೈಸೂರಿಗೆ ಹೋದಾಗ ಅವರ ಮನೆಗೆ ಹೋಗಿ ಆ ಪುಸ್ತಕದ ಜತೆ ಪುಸ್ತಕ ಪ್ರಕಾಶನ ಅತ್ಯಾಕರ್ಷಕ ಶೈಲಿಯಲ್ಲಿ ಹೊರತಂದಿರುವ ಮಾಯೆಯ ಮುಖಗಳು ಎಂಬ ತೇಜಸ್ವಿಯವರ ಚಿತ್ರ – ಲೇಖನಗಳ ಸುಂದರ ಸಂಕಲನವನ್ನೂ ಕೊಂಡುತಂದು ಓದಿದೆ.  ತೇಜಸ್ವಿಯವರ ಬರಹಗಳು, ಅವರ ಬಗೆಗಿನ ಇತರರ ಬರಹಗಳ ಬಗ್ಗೆ ನನಗಿರುವ ಇಂಗದ ದಾಹವೇ ಈ ಪುಸ್ತಕಗಳನ್ನು ನನ್ನದಾಗಿಸಿಕೊಳ್ಳುವುದರ ಹಿಂದಿನ ಕಾರಣ.

ಮತ್ತಷ್ಟು ಓದು »

23
ಆಕ್ಟೋ

ಜಾತಿ ಆಧಾರಿತ ಮೀಸಲಾತಿಯ ಎರಡು ಮುಖಗಳು

– ಮು.ಅ ಶ್ರೀರಂಗ,ಬೆಂಗಳೂರು

Reservtion is Gud r Badಜಾತಿ ಆಧಾರಿತ ಮೀಸಲಾತಿ ಕುರಿತ ಪರ-ವಿರೋಧ ಚರ್ಚೆಗಳಲ್ಲಿ ಅದರ ಪರವಾಗಿ ವಾದಿಸುತ್ತಿರುವವರ ಸಂಖ್ಯೆ ಜಾಸ್ತಿಯೇ ಇದೆ. ಇದಕ್ಕೆ ಅವರುಗಳು ಮನುವಿನಿಂದ ಹಿಡಿದು ಪುರೋಹಿತಶಾಹಿ ವಾದಗಳನ್ನು ಮಂಡಿಸುತ್ತಾ ಬಂದಿದ್ದಾರೆ. ವಿರೋಧವಾಗಿರುವವರದ್ದು ಅವರವರ ಸದ್ಯದ ಸ್ವಂತ ಅನುಭವವಷ್ಟೇ ಆಗಿ ಕ್ಷೀಣ ದನಿಯಾಗಿದೆ. ಮೀಸಲಾತಿಯು ವೋಟಿನ ರಾಜಕಾರಣಕ್ಕೆ ನೇರವಾಗಿ ಸಂಬಂಧಿಸಿರುವ ಕಾರಣದಿಂದ ಸ್ವಾತಂತ್ರ್ಯಾನಂತರ ಮೀಸಲಾತಿಯ ಗಡಿಗಳು(line of limits) ವಿಸ್ತಾರಗೊಳ್ಳುತ್ತಲೇ ಇದೆ. ಇದು ವೈಜ್ನಾನಿಕವೋ,ಅವೈಜ್ನಾನಿಕವೋ ಅಥವಾ ಸಹಜ ನ್ಯಾಯವೋ ಎಂಬ ಯಾವುದೇ ಚರ್ಚೆಗೆ, ಸಂವಾದಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಏನೂ ಬೆಲೆಯಿಲ್ಲ. ಇಷ್ಟಾಗಿಯೂ ಸಹ ಮೀಸಲಾತಿಯ ಗಡಿ ರೇಖೆಯಿಂದಾಚೆಗೆ ಇರುವ ಜಾತಿಗಳಲ್ಲಿನ(ಸರ್ಕಾರದ ದೃಷ್ಟಿಯಲ್ಲಿ ಮುಂದುವರಿದವರು, ಮೇಲ್ಜಾತಿಯವರು) ಕೆಲವರು ಆಗಾಗ ತಮ್ಮ ವಿರೋಧವನ್ನು ಧರಣಿ,ಮೆರವಣಿಗೆಗಳ ಮೂಲಕ ವ್ಯಕ್ತಪಡಿಸುತ್ತಿರುತ್ತಾರೆ. ತೀರಾ ಭಾವಾವೇಶಕ್ಕೊಳಗಾದ ಒಂದಿಬ್ಬರು ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುತ್ತಾರೆ;ಪ್ರಾಣ ಕಳೆದುಕೊಳ್ಳುತ್ತಾರೆ. ಕಾಲ ಕಳೆದಂತೆ ಜನಗಳು ಅದನ್ನೆಲ್ಲಾ ಮರೆಯುತ್ತಾರೆ. ಸರ್ಕಾರಗಳು ಬದಲಾಗುತ್ತವೆ. ವ್ಯವಸ್ಥೆ ಹಿಂದಿನಂತೆಯೇ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗುತ್ತದೆ. ತಮ್ಮ ಹಿರಿಯರು ಮಾಡಿದರೆನ್ನಲಾದ ಪಾಪದ ಹೊರೆ ಹೊರಬೇಕಾಗಿ ಬಂದಿರುವ ಮೇಲ್ಜಾತಿಯ ಯುವ ಜನತೆ “ಯಾವ ರಾಜ ಬಂದರೇನು ರಾಗಿ ಬೀಸುವುದಂತೂ ತಪ್ಪುವುದಿಲ್ಲವಲ್ಲ” ಎಂಬ ಗಾದೆಯಂತೆ ಸನ್ನಿವೇಶಕ್ಕೆ ಹೊಂದಿಕೊಂಡು ಹೋಗುತ್ತಾರೆ. ಕ್ರಮೇಣ ಇದೇ ಅಭ್ಯಾಸವಾಗಿ ತಾನಾಯ್ತು ತನ್ನ ಸಂಸಾರವಾಯ್ತು ಎಂದು ಅಷ್ಟಕ್ಕೇ ತಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತಾರೆ.

ಮತ್ತಷ್ಟು ಓದು »

22
ಆಕ್ಟೋ

ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆಯಾಗಲೇಬೇಕು,ಆದರೆ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುತ್ತಿರುವುದೇಕೆ?

– ಗೋಪಾಲ ಕೃಷ್ಣ

Justice for Kumari Soujanyaಧರ್ಮಸ್ಥಳವೆಂದರೆ ಪ್ರತಿನಿತ್ಯ ಸಾವಿರಾರು ಜನರು, ದೇಶದ ಖ್ಯಾತನಾಮರು, ಅಧಿಕಾರದ ಚುಕ್ಕಾಣಿ ಹಿಡಿದ ಮಂತ್ರಿ, ಮುಖ್ಯಮಂತ್ರಿಗಳು ಭೇಟಿ ನೀಡುವ ಧಾರ್ಮಿಕ ಸ್ಥಳ.  ಇಲ್ಲಿನ ಪೂಜೆಯಿಂದ ಹಿಡಿದು ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಬಾಲಿವುಡ್ ತಾರೆಯರ ಭೇಟಿಯವರೆಗಿನ ಪ್ರತಿ ಬೆಳವಣಿಗೆಯೂ ರಾಜ್ಯ/ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿ ಮಾಡುತ್ತಿರುತ್ತದೆ.  ತೀರಾ ಇತ್ತೀಚೆಗೆ ಅಂದರೆ ಜೂನ್ 27, 2011ರಂದು ಇಡೀ ರಾಜ್ಯವೇ ಧರ್ಮಸ್ಥಳದತ್ತ ಮುಖ ಮಾಡಿ ಕುಳಿತಿತ್ತು.  ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಆಣೆ-ಪ್ರಮಾಣದ ಸಮರಕ್ಕೆ ಧರ್ಮಸ್ಥಳ ಸಾಕ್ಷಿಯಾಗುವುದಿತ್ತು.  ಅಂದು ರಾಜ್ಯದ ಎಲ್ಲಾ ಸುದ್ದಿ ಮಾಧ್ಯಮಗಳು ಧರ್ಮಸ್ಥಳದಲ್ಲೇ ಠಿಕಾಣಿ ಹೂಡಿದ್ದವು; ಧರ್ಮಸ್ಥಳದ ವಿಚಾರದ ವಿನಹ ಮತ್ತೇನೂ ಸುದ್ದಿಯೇ ಅಲ್ಲ.  ‘ಮಾತಿಗೆ ಹೆಣಗಿದವನು ಮಂಜುನಾಥ, ದುಡ್ಡಿಗೆ ಹೆಣಗಿದವನು ವೆಂಕಟರಮಣ’ ಎಂಬ ನಂಬಿಕೆ ಇರುವುದರಿಂದಲೇ ಜನರ ದೃಷ್ಟಿ ಧರ್ಮಸ್ಥಳದತ್ತ ನೆಟ್ಟಿತ್ತು.

ಅಂತಹ ಸಂದರ್ಭದಲ್ಲೂ ಧರ್ಮಸ್ಥಳದ ವಿರುದ್ಧ ಆರೋಪ ಮಾಡದಿದ್ದವರು, ಇಂದು ದಿಗ್ಗನೆದ್ದು ಕುಳಿತಿರುವುದೇಕೆ?  ಸೌಜನ್ಯ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಲೇಬೇಕು.  ಧರ್ಮಸ್ಥಳವೇ ಆಗಲಿ, ದೇಶದ ಬೇರೆ ಎಲ್ಲಿಯೇ ಆಗಲಿ ಸಾಮಾನ್ಯನಿಂದ ರಾಷ್ಟ್ರಪತಿಯವರೆಗೂ ಹತ್ಯಾಚಾರದಂತಹ ಪ್ರಕರಣದಲ್ಲಿ ಸಿಲುಕಿಕೊಂಡವರು ಯಾರೇ ಆದರೂ ಸರಿಯೇ ಅವರಿಗೆ ಮರಣದಂಡನೆ ವಿಧಿಸುವುದೇ ಸೂಕ್ತ ಶಿಕ್ಷೆ.  ಆಗಲೇ ಸಹೋದರಿ ಸೌಜನ್ಯ ಆತ್ಮಕ್ಕೂ, ಅವರ ಕುಟುಂಬಕ್ಕೂ ನ್ಯಾಯ ಒದಗಿಸಿದಂತಾಗುವುದು.

ಮತ್ತಷ್ಟು ಓದು »

21
ಆಕ್ಟೋ

ಹೊರಾಟಗಾರ್ತಿ ಮಲಾಲಾ ಮತ್ತು ಮಿಥ್ಯಾ ಪ್ರಗತಿಪರರ ಭ೦ಡತನ

– ಗುರುರಾಜ್ ಕೊಡ್ಕಣಿ,ಯಲ್ಲಾಪುರ

Malalaaಪ್ರತಿವರ್ಷದ೦ತೇ ಈ ಬಾರಿಯ ನೊಬೆಲ್ ಪ್ರಶಸ್ತಿಯ ಘೊಷಣೆಯಾಗಿದೆ.ಅದರಲ್ಲೂ ಈ ಬಾರಿ ಶಾ೦ತಿಗಾಗಿ ಕೊಡುವ ನೊಬೆಲ್ ಪ್ರಶಸ್ತಿ ಚರ್ಚಿತ ವಿಷಯವಾಗಿತ್ತು. .ಪಾಕಿಸ್ತಾನದ ಪುಟ್ಟ,ದಿಟ್ಟ ಹೋರಾಟಗಾರ್ತಿ ಮಲಾಲಾ ಯುಸುಫಜಾಯ್ ನೊಬೆಲ್ ಶಾ೦ತಿ ಪ್ರಶಸ್ತಿಯ ಕಣದಲ್ಲಿದ್ದು ಆಸಕ್ತಿಗೆ ಕಾರಣವಾಗಿತ್ತು.ಆ ಪುಟ್ಟ ಹುಡುಗಿ ತೋರಿದ ದಿಟ್ಟತನಕ್ಕೆ ಆಕೆಗೆ ನೊಬೆಲ್ ಸಿಗಲಿ ಎ೦ಬುದು ಬಹುತೇಕರ ಆಶಯ ಮತ್ತು ಅಭಿಪ್ರಾಯವಾಗಿತ್ತು.ಆದರೆ ಕೊನೆಯ ಕ್ಷಣಗಳಲ್ಲಿ ಆಕೆಗೆ ನೊಬೆಲ್ ಪ್ರಶಸ್ತಿ ತಪ್ಪಿದ್ದು ಅನೇಕರಲ್ಲಿ ನಿರಾಸೆಯು೦ಟು ಮಾಡಿತು.ಪರಮ ಕ೦ಟಕ ರಾಷ್ಟ್ರ ಪಾಕಿಸ್ತಾನದ ಪ್ರಜೆಯಾಗಿದ್ದರೂ ಈ ಚಿಕ್ಕ ವಯಸ್ಸಿನಲ್ಲಿ ಆಕೆ ತೋರಿದ ಧೈರ್ಯಕ್ಕೆ ಅಕೆಗೆ ನೊಬೆಲ್ ಸಿಗಲೆ೦ದು ಅನೇಕ ಭಾರತೀಯರೂ ಬಯಸಿದ್ದರೆ೦ಬುದು ಸುಳ್ಳಲ್ಲ

ಈಗಾಗಲೇ ಮಲಾಲಾ ವಿಶ್ವದಾದ್ಯ೦ತ ಮನೆಮಾತಾಗಿದ್ದರೂ ಆಕೆಯ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲದಿದ್ದವರಿಗೆ ಕೊ೦ಚ ಮಾಹಿತಿ ನೀಡುತ್ತಿದ್ದೇನೆ.ಹದಿನಾರು ವರ್ಷದ ಮಲಾಲಾ ಯುಸುಫಜಾಯ್ ಮೂಲತ: ಪಾಕಿಸ್ತಾನದ ತಾಲಿಬಾನ್ ಪೀಡಿತ ಸ್ವಾಟ್ ಕಣಿವೆಯವಳು.ತಾಲಿಬಾನಿ ಆಡಳಿತದಲ್ಲಿನ ಈ ಪ್ರದೇಶದಲ್ಲಿ ತಾಲಿಬಾನ್ ಕರ್ಮಠ ಇಸ್ಲಾ೦ ಸ೦ಪ್ರದಾಯಗಳನ್ನು ,ಕಾನೂನುಗಳನ್ನು ಈ ಪ್ರದೇಶದಲ್ಲಿ ಜಾರಿಗೊಳಿಸಿದೆ.ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸವಿಲ್ಲ ಎ೦ಬ ಕಾನೂನನ್ನು ಈ ಪ್ರದೇಶದಲ್ಲಿ ಜಾರಿಗೊಳಿಸಿದ್ದರು.ಅಲ್ಲಿ ತಾಲಿಬಾನಿಗಳ ನಿರ್ಣಯವನ್ನು ಯಾರೂ ಪ್ರಶ್ನಿಸುವ೦ತಿರಲಿಲ್ಲ.ಆದರೆ ಈ ಪುಟ್ಟ ಬಾಲಕಿ ಮಲಾಲಾ ಈ ಅನ್ಯಾಯವನ್ನು ವಿರೋಧಿಸುವ ನಿರ್ಧಾರಕ್ಕೆ ಬ೦ದಳು.ತನ್ನ ಹನ್ನೊ೦ದನೆಯ ವಯಸ್ಸಿನಲ್ಲಿ ಬಿಬಿಸಿಯ ಅ೦ತರ್ಜಾಲ ತಾಣಗಳಿಗೆ ಮಲಾಲಾ ಗುಪ್ತ ನಾಮದಲ್ಲಿ ಬ್ಲಾಗ್ ಬರೆಯಲಾರ೦ಭಿಸಿದಳು.ಬಿಬಿಸಿಯ೦ತಹ ವಿಶ್ವಮಾನ್ಯ ಸ೦ಸ್ಥೆಗೆ ,ಸ್ವಾಟ್ ನಲ್ಲಿ ತಾಲಿಬಾನಿಗಳ ಅರಾಜಕತೆ,ಮಹಿಳೆಯರ ಮೇಲಿನ ದೌರ್ಜನ್ಯವನ್ನು ವಿವರಿಸುವ ಪ್ರಯತ್ನ ಮಾಡಿದಳು. ಮಹಿಳಾ ಶಿಕ್ಷಣದ ಬಗ್ಗೆ ತನ್ನ ಅಭಿಪ್ರಾಯವನ್ನು ವಿಶ್ವಕ್ಕೆ ಅರುಹಿದಳು.ಚಿಕ್ಕ ವಯಸ್ಸಿನಲ್ಲಿಯೇ ಆಕೆಯ ವೈಚಾರಿಕತೆಗೆ ತಲೆದೂಗಿದ ನ್ಯೂಯಾರ್ಕ್ ಟೈಮ್ಸ್ ಆಕೆಯ ಬಗ್ಗೆ ಸಾಕ್ಷ್ಯ ಚಿತ್ರವನ್ನು ನಿರ್ಮಿಸಿತು.ಅಲ್ಲಿ೦ದ ವಿಶ್ವ ಪ್ರಸಿದ್ದಳಾದ ಆಕೆ ಮುಕ್ತವಾಗಿ ಮಾಧ್ಯಮಗಳಲ್ಲಿ,ಪತ್ರಿಕೆಗಳಲ್ಲಿ ಸ೦ದರ್ಶನಗಳನ್ನು ನೀಡತೊಡಗಿದಳು.ಆಗ ಎಚ್ಚೆತ್ತುಕೊ೦ಡ ಪಾಕಿಸ್ತಾನದ ಸೈನ್ಯ ಸ್ವಾಟ್ ಕಣಿವೆಯ ಮೇಲೆ ಕದನ ಘೋಷಿಸಿತು. ’ಎರಡನೇ ಸ್ವಾಟ್ ಯುದ್ದ’ ಎ೦ದೇ ಪ್ರಸಿದ್ಧವಾದ ಈ ಯುದ್ದದಲ್ಲಿ ಪಾಕಿಸ್ತಾನಿ ಸೈನ್ಯ ಸ್ವಾಟ್ ಕಣಿವೆಯನ್ನು ಮರಳಿ ತನ್ನ ವಶಕ್ಕೆ ಪಡೆಯಿತು.ಅನೇಕ ತಾಲಿಬಾನಿ ಕಮಾ೦ಡರಗಳ ಬ೦ಧನವಾಯ್ತು.

ಮತ್ತಷ್ಟು ಓದು »