ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 23, 2013

1

ವಿರೋಧಿಗಳೆಸೆದ ಕಲ್ಲನ್ನೇ ತನ್ನ ಏಳಿಗೆಯ ಮೆಟ್ಟಿಲಾಗಿಸಿಕೊಂಡ ಮೋದಿ

‍ನಿಲುಮೆ ಮೂಲಕ

– ಪ್ರಸನ್ನ  ಬೆಂಗಳೂರು

NaModiಭಾರತದ ರಾಜಕೀಯ ಇತಿಹಾಸದಲ್ಲಿ ೧೦ ವರ್ಷಗಳಿಗೂ ಹೆಚ್ಚು ಕಾಲ ವಿರೋಧ ಪಕ್ಷಗಳು,ಮಾಧ್ಯಮಗಳು,ಪ್ರಗತಿಪರರು ಟಾರ್ಗೆಟ್ ಮಾಡಿರುವುದು ನರೇಂದ್ರ ಮೋದಿಯವರನ್ನು . ಮೋದಿಯವನರನ್ನು  ಬಿಜೆಪಿ ತನ್ನ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದ ಮೇಲೆ ಅವರ ಮೇಲಿನ ಹಿಂದಿನ ಆರೋಪಗಳ ಜೊತೆ ಜೊತೆಗೆ ಅವರ ಅಭಿವೃದ್ಧಿ ಕಾರ್ಯಗಳನ್ನು ವಿಶ್ಲೇಷಣೆಗೊಳಪಡಿಸಲಾಗುತ್ತಿದೆ. ಈ ಹಿಂದೆ ಪ್ರಧಾನಿಯಾದವರ ಬಗ್ಗೆ ಇಷ್ಟೊಂದು ವಿಶ್ಲೇಷಣೆ ವಿಮರ್ಶೆ ಪರೀಕ್ಷೆ ನಡೆದಿತ್ತೆ? ನಡೆದು ಅಂತಹ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಬಂದಿದ್ದರೆ ಬಹುಶಃ ಭಾರತವಿಂದು ಇಂತಹ ಪರಿಸ್ಥಿತಿಯಲ್ಲಿರುತ್ತಿರಲಿಲ್ಲ ಅಲ್ಲವೆ? ಮೋದಿ ಈ ಪರಿ ಬೆಳೆದಿದ್ದಕ್ಕೆ ಕಾರಣ ಹುಡುಕುತ್ತಾ ಹೊರಟವನಿಗೆ ಕಂಡದ್ದು ಈ ವಿಭಿನ್ನವಾದ ಆದರೆ ತೆರೆಮರೆಯ ಕಾರಣ.

ಅದು ತನ್ನ ಕುಕೃತ್ಯಕ್ಕೆ ತಾನೆ ಬಲಿಯಾದ ಆತನ ದ್ವೇಷ ವರ್ಗ.ಇವರ ದ್ವೇಷ,’ತನ್ನೊಡಲ ಬೆಂಕಿ ತನ್ನನ್ನಲ್ಲದೆ ಅನ್ಯರನ್ನು ಸುಡದು‘ ಎಂಬ ಜನಪ್ರಿಯ ವಚನದಂತೆ ದ್ವೇಷಿಗಳೇ ನಾಲಿಗೆ ಕಚ್ಚಿಕೊಳ್ಳುವಂತಾಗಿರುವುದು ಸುಳ್ಳಲ್ಲ. ತಾನು ವೈಭವೀಕರಿಸಿದ ಸುಳ್ಳು ತನಗೇ ತಿರುಗುಬಾಣವಾಗಿರುವುದು ಅವರ ಈಗಿನ ಬಡಬಡಿಕೆಗೆ ಕಾರಣವಾಗಿದೆ. ಈ ವರ್ಗ ಮೋದಿಯ ವಿರುದ್ದ ಮಾಡಿದ ಅಪಪ್ರಚಾರಗಳೇ ಅಪಚಾರಗಳೇ ಅವರಿಗೆ ಇಂದು ಮುಳುವಾಗಲು ಮೂಲ ಕಾರಣವೆಂದು ಅವರು ಒಪ್ಪಿಕೊಳ್ಳಲು ಸಿದ್ದರಿಲ್ಲದಿದ್ದರೂ ಅದು ಸತ್ಯವಲ್ಲವೆಂದು ತಳ್ಳಿ ಹಾಕಲು ಅವರಿಗೆ ಸಾಧ್ಯವಾಗುವುದಿಲ್ಲ.

ಮೋದಿ ಮಾಡದ ತಪ್ಪಿಗೆ ಅವನನ್ನು ಹೊಣೆಗಾರನನ್ನಾಗಿಸುವ ಮೂಲಕ ಆತನ ಬೆಳವಣಿಗೆ ದಾರಿ ಮಾಡಿಕೊಟ್ಟದ್ದು ಹೇಗೆ?

ತನ್ನದಲ್ಲದ ತಪ್ಪಿಗೆ ಆರೋಪಕ್ಕೊಳಗಾದ ಯಾವುದೇ ವ್ಯಕ್ತಿ ಅದರ ವಿರುದ್ದ ಸೆಟೆದು ನಿಲ್ಲುವುದು ಸಹಜವಾದರೂ ಈ ಪರಿ ಅದರಲ್ಲೂ ಸಂಘಪರಿವಾರದವನೊಬ್ಬ ಹೀಗೆ ಮರು ಆಕ್ರಮಣಕಾರಿಯಾಗುತ್ತಾನೆಂದು ಊಹಿಸಿದೆ ಆತನನ್ನು ಅಪರಾಧಿಯೆಂದು ಆತ ಮಾಡದ ಅಪರಾಧವನ್ನು ವೈಭವೀಕರಿಸಿದ್ದು ಹಿಂತಿರುಗುತ್ತದೆಂದು ಊಹಿಸದ ಮೂರ್ಖರಿಗೆ ಈಗ ಪರಿಹಾರಕ್ಕಾಗಿ ತಡಕಾಡುವಂತಾಗಿದೆ. ಇವರನ್ನು ಛೂ ಬಿಟ್ಟ ಕಾಂಗ್ರೆಸಿನ ಪರಿಸ್ಥಿತಿಯೂ ಇವರಿಗಿಂತ ಭಿನ್ನವಾಗಿಲ್ಲ.ಮಲಗಿರುವ ಹಿಂದೂ ಸಮಾಜ ಎಂದಿಗೂ ಮರು ಆಕ್ರಮಣ ಮಾಡುವುದಿಲ್ಲವೆಂದೆಣಿಸಿದ್ದ,ಈ ಕಥೆಕಟ್ಟಿ ಮಾರಣಹೋಮ ನಡೆಸಿ ಬಲಿ ಹಾಕಲು ಮುಂದಾದ ಈ ಪ್ರಗತಿಪರರಿಗೆ ನವ ಯುವ ವಿದ್ಯಾವಂತ ಹಿಂದೂ ಸಮಾಜವನ್ನು ಈ ಪರಿಯಲ್ಲಿ ಒಟ್ಟುಗೂಡಿಸುತ್ತದೆಂದು  ಕನಸಿನ್ನಲ್ಲೂ ಎಣಿಸಿರದ ಈ ವರ್ಗ ಇಂದು ಕೈ ಕೈ ಹಿಸುಕಿಕೊಳ್ಳುತ್ತಿದೆ ತಾನೇ ಮಾಡಿದ ತಪ್ಪಿನಿಂದ ತನ್ನ ಕಾಲ ಮೇಲೆ ತಾನೆ ಕಲ್ಲು ಹಾಕಿಕೊಂಡಂತ ಮಂಗನ ಪರಿಸ್ಥಿತಿಯಾಗಿದೆ.

ತನ್ನ ಮೇಲಿನ ಆರೋಪಗಳನ್ನು ಕೊಡವಿಕೊಳ್ಳಲು ಆತ ಆಯ್ದುಕೊಂಡ ಹಾದಿ, ಚತುರತೆ ಈಗ ಇವರಿಗೆ ಗಾಭರಿ ಹುಟ್ಟಿಸಿದೆ. ಎಲ್ಲ ಸಂಘಪರಿವಾರದಂತೆ ಈತನೂ ಕೂಡ ಅದೇ ಹಳೇ ಮಾರ್ಗಗಳನ್ನು ಆಯ್ದುಕೊಂಡು ತನಗೆ ತಾನೇ ಮೂಲೆಗುಂಪಾಗುತ್ತಾನೆ ಇನ್ನೊಬ್ಬ ತೊಗಾಡಿಯಾನನ್ನು ಸೃಷ್ಠಿಸಿ ಆ ಮೂಲಕ ತಮ್ಮ ಕೆಲಸ ಮುಗಿಸ ಬಯಸಿದ್ದವರಿಗೆ ಆತ ಇವರ ಕಲ್ಪನೆಯನ್ನೂ ಮೀರಿ ಬೆಳೆಯುತ್ತಾ ಹೋದ ಪರಿ ಇವರನ್ನು ಕಂಗಾಲಾಗಿಸಿತು. ಇನ್ನೊಂದುಕಡೆ ಈ ಹೊಸ ಭಾರತೀಯ ಯುವ ಪೀಳಿಗೆಗೆ ಮಾದರಿಯಾಗುತ್ತಾ ಹೋದ. ಆತನ ಮೇಲಿನ ಸುಳ್ಳು ಆರೋಪಗಳು ಹೆಚ್ಚಿದಂತೆಲ್ಲಾ ಮಾಹಿತಿಗಳು ಬೆರಳ ತುದಿಯಲ್ಲಿ ಲಭ್ಯವಿರುವ ಈ ಯುಗದಲ್ಲಿ ಯುವಕರಿಗೆ ಹೆಚ್ಚು ಹೆಚ್ಚು ಆತ್ಮೀಯನಾಗುತ್ತಾ ಹೋದ.

ಇಷ್ಟು ದಿನ ಇವರ ಆರೋಪಗಳಿಗೆ ಕುರಿಗಳಂತೆ ತಲೆ ಒಡ್ಡುತ್ತಾ ಬಂದ ಹಿಂದೂ ನಾಯಕರನ್ನು ನೋಡುತ್ತಿದ ಯುವ ಸಮೂಹಕ್ಕೊಬ್ಬ ಧೀರ ಧೀಮಂತ ನಾಯಕ ಸಿಕ್ಕುವಂತೆ ಮಾಡಿದ್ದೂ ಕೂಡ ಈ ಸುಳ್ಳು ಆರೋಪಗಳನ್ನು ಮಾಡುತ್ತಾ ಹೊರಟವರೆ. ತನ್ನ ಬೆನ್ನಿಗಿರುವ ಯುವ ಪಡೆ ತನ್ನ ಕಾರ್ಯ ದಕ್ಷತೆಯ ಆತ್ಮವಿಶ್ವಾಸ ಬೆಳೆಯುತ್ತಿದ್ದಂತೆ ಯಾರ ಹಿಡಿತಕ್ಕೂ ಸಿಕ್ಕದೇ ಬೆಳೆದ ಪರಿ ನೋಡಿ ಬೆಚ್ಚಿ ಬೀಳುವ ವಿನಃ ಬೇರೇನೂ ಮಾಡಲಾಗದೆ ಮತ್ತದೇ ಹಳೇ ಧೋರಣೆಗಳನ್ನೇ ಅನುಸರಿಸುತ್ತಾ ಹೋದ ಈ ವಿರೋಧಿ ಗುಂಪುಗಳಿಗೆ ತನ್ನ ಕಾರ್ಯದಿಂದಲೇ ಉತ್ತರಿಸುತ್ತಾ ಆನೆ ನಡೆದದ್ದೇ ದಾರಿಯೆಂದು ತೋರಿಸುತ್ತಾ ನಡೆದ ಅವನನ್ನು ಕಂಡು ಈಗ ಅಸಹಾಯಕೆತೆಯಿಂದ ಕೈಚೆಲ್ಲಿ ಕುಳಿತ ಬುದ್ದಿಜೀವಿ ವರ್ಗ ಈಗ ಚೀರಾಡುವುದನ್ನು ಬಿಟ್ಟು ಬೇರೇನೂ ಮಾಡಲಾಗದೆ ಅಸಹಾಯಕ ಸ್ಥಿತಿಗೆ ತಲುಪಿದೆ. ಆದರೆ ಅದು ವಾಮಮಾರ್ಗವನ್ನಾದರೂ ಅನುಸರಿಸದೆ ಬಿಡದು.

ಅವರ ಆರೋಪಗಳು ನಿಜವೇ ಆಗಿದ್ದರೆ ಈ ದೇಶದ ಸರ್ವೋಚ್ಛ ನ್ಯಾಯಾಲಯದ ಕಣ್ಣಿಗೆ ಆತ ಮಣ್ಣೆರಚಲು ಸಾಧ್ಯವಾಗುತ್ತಿರಲಿಲ್ಲ ಎಂಬ ಸರಳ ಸತ್ಯವೂ ಈ ಮತಾಂಧರಿಗೆ ಕಾಣದೇ ಹೋಗಿದ್ದು ಅವರ ದುರದೃಷ್ಠ. ಒಂದು ಕೂದಲಿನ ಎಳೆಯಲ್ಲಿ ಆತನ ಒಂದು ಉಸಿರಿನ ಕಣ ಸಿಕ್ಕಿದರೂ ಆತ ಸಾಯುವವರೆಗೆ ಕಂಬಿ ಎಣಿಸುವಂತೆ ಮಾಡಲು ಈ ದಂಡಿನ ಜೊತೆಗೆ ಕೇಂದ್ರ ಸರ್ಕಾರವೇ ನಿಂತಿದ್ದರೂ ಆತನ ಕೂದಲು ಕೊಂಕಿಸಲಾಗದಿದ್ದಾಗ ಇಡಿ ಭಾರತದ ವಿದ್ಯಾವಂತ ವರ್ಗ ಈವರೆಗೂ ತಮ್ಮ ಸಮಾಜಕ್ಕಾದ ಅವಮಾನಗಳನ್ನು ಹಿಂದೆ ತಳ್ಳುವ ಅವನಲ್ಲಿ ಒಂದು ಆಶಾಕಿರಣವನ್ನು ಕಂಡಿದ್ದು ಅತಿಶಯೋಕ್ತಿಯಲ್ಲ. ಇವರು ಸುಳ್ಳಿನ ಕಂತೆಯನ್ನು ಹೆಣೆಯುತ್ತಾ ಹೋದಂತೆ ಆತ ದೇಶಪ್ರೇಮಿಗಳ ಕಣ್ಣಲ್ಲಿ ನಿಜದ ಅರ್ಥದಲ್ಲಿ ಬೆಳೆಯುತ್ತಾ ಹೋದ.

ಇವರ ಆರೋಪಗಳು ತೀವ್ರವಾಗುತ್ತಾ ಹೋದಂತೆ ಆತನ ಮೇಲಿನ ಅಭಿಮಾನವೂ ಅತಿರೇಕಕ್ಕೆ ಹೋಗುತ್ತಾ ಸಾಗಿದೆ. ಆತನನ್ನು ದೆವ್ವವೆಂದವರಿಗೆ ಅಭಿಮಾನಿಗಳು ಅವನಲ್ಲಿ ದೇವರನ್ನು ಕಾಣುತ್ತಾ ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ದೇಶಕ್ಕೊಬ್ಬ ನಾಯಕನನ್ನು ಕೊಟ್ಟ ಕೀರ್ತಿ ಈ ದ್ವೇಷಿಗಳಿಗೇ ಸಲ್ಲಬೇಕು. ಕೊನೆ ಪಕ್ಷ ಅಂತಹ ನಾಯಕನಿಗೆ ಪರ್ಯಾಯ ನಾಯಕನೊಬ್ಬನನ್ನು ಬೆಳೆಸುವ ನಿಟ್ಟಿನಲ್ಲಿ ಯೋಚಿಸದೇ ಬರೀ ವಿರೋಧಿಸುವ ಅಂಧತೆಗೆ ಒಳಗಾದ ಈ ಸಮೂಹ ನಾಯಕನಿಲ್ಲದ ನಾವಿಕೆಯಂತಾಗಿ ಹಪಾಹಪಿಸುತ್ತಿದೆ ಗೋಳಿಡುತ್ತಿದೆ ಗೋಗರೆಯುತ್ತಿದೆ. ತಮ್ಮ ಟೀಕಾಸ್ತ್ರಗಳಿಂದ ಮೋದಿಯನ್ನು ಹಣಿದು ಕಡೆದು ಅವನಲ್ಲೊಬ್ಬ ಸೌಮ್ಯ ವಾಜಪೇಯಿಯ ವಿಗ್ರಹ ಕೂರಿಸಲೆತ್ನಿಸಿದವರ ಕೈಗೆ ಆತ ಸಿಗದೇ ಹೋಗಿದ್ದು ಇವರಿಗೆ ಮತ್ತೊಂದು ಆಘಾತ. ಸರದಾರರ ನಂತರ ಉಕ್ಕಿನ ಮನುಷ್ಯನೆನಿಸಿಕೊಳ್ಳುವ ಎಲ್ಲಾ ಅವಕಾಶಗಳಿದ್ದರೂ ಡೋಂಗಿ ಸೆಕ್ಯುಲರ್ಗಳನ್ನು ಮೆಚ್ಚಿಸಲು ಅರೆ ಸೆಕ್ಯುಲರಾಗಿ  ಎಲ್ಲಿಯೂ ಸಲ್ಲದವರಾದ ಅಡ್ವಾಣಿಯನ್ನು ಕೂರಿಸಲು ನೋಡಿದಾಗ ಸೆಕ್ಯುಲರ್ ಬಿಳಿ ಟೋಪಿ ನಿರಾಕರಿಸಿ ಬಿಟ್ಟ ಮೋದಿ, ಸೆಕ್ಯುಲರುಗಳ ಕನಸಿಗೆ ಬೆಂಕಿಯಿಟ್ಟುಬಿಟ್ಟಿದ್ದ.

ಈ ಟೋಪಿ ಇಡುವ ಹಿಂದೆಯೂ ಒಂದು ಮಜಬೂತಾದ ಹುನ್ನಾರವಿದೆ. ಸ್ವಾತಂತ್ರ ಪೂರ್ವದಿಂದಲೂ ಮುಸ್ಲಿಂ ಸಮುದಾಯ ಅಪಾಪೋಲಿ ಮಗನೊಬ್ಬ ಪೋಷಕರನ್ನು ಕಾಡಿ ಹಠ ರಚ್ಚೆ ಹಿಡಿದು ತನ್ನೆಡೆಗೆ ಒಲಿಸಿಕೊಳ್ಳುವಂತೆ ಕಾಂಗ್ರೆಸನ್ನು ವಶಪಡಿಸಿಕೊಂಡು ತನಗೆ ಬೇಕಾದಂತೆ ತನ್ನನ್ನು ಕುಣಿಸುತ್ತಿದ್ದ ಮುಸ್ಲಿಂ ಸಮುದಾಯವನ್ನು ಉಪಯೋಗಿಸಲು ನಿರ್ಧರಿಸಿತು ಕಾಂಗ್ರೆಸ್. ಅದರ ಫಲವಾಗಿಯೇ ಪರಿಸ್ಥಿತಿಯ ಕೂಸುಗಳಾದ ತೀಸ್ತಾ ಸೆತಲ್ವಾಡ್ ಅಂತವರನ್ನು ಛೂ ಬಿಟ್ಟು ಆತನನ್ನು ಮೆತ್ತಗೆ ಮಾಡಿ ಮುಸ್ಲಿಂ ಸಮುದಾಯ ಮಿಕ್ಕೆಲ್ಲಾ ನಾಯಕರಂತೆ ಬಗ್ಗಿಸುವ ಪ್ರಯತ್ನಮಾಡಿ ಮತ್ತೆ ಹೀನಾಯವಾಗಿ ಸೋತು ಹೋಯಿತು. ಬತ್ತಳಿಕೆಯಲ್ಲಿರುವ ಬಾಣಗಳೆಲ್ಲಾ ಮುಗಿದು ಹೋದ ಮೇಲೆ ಕಣ್ಣೀರು ಊರು ಬಿಡುತ್ತೇನೆ ದೇಶ ಬಿಡುತ್ತೇನೆ ಎನ್ನುವ ಭಾವನಾತ್ಮಕ ದುರುಪಯೋಗದ ಪ್ರಯತ್ನ.

ಕೊನೆಗೆ ಇವರಿಗೆ ಉಳಿದದ್ದು ಸಿಂಹವನ್ನು ಕಂಡು ಊಳಿಡುವ ನರಿಯ ಪಾತ್ರ ಮಾತ್ರ. ಹುಲಿಯನ್ನು ಕಂಡು ಮರದ ಮೇಲೇಯೇ ಚೀರಾಡುವ ಕಪಿಯ ಪಾತ್ರ. ಅಥವ ಹುಲಿಯನ್ನು ಕಂಡು ತಂತಾನೆ ಮರದಿಂದ ಕೆಳಗೆ ಬೀಳುವ ಕಪಿಗಳ ಪಾತ್ರವಾಗುತ್ತಿದ್ದಾರೆ, ಈಗ ಏನೋ ಮಾಡಲು ಹೋಗಿ ತನ್ನ ಕಾಲು ಸಿಕ್ಕಿಸಿಕೊಂಡ ಕೋತಿಯ ಪರಿಸ್ಥಿತಿಯಲ್ಲಿ ಅರಚುವುದೊಂದೇ ಕಾಂಗ್ರೆಸ್ ಮತ್ತದರ ವಿದೂಷಕ ಬಳಗಕ್ಕೆ ಉಳಿದಿರುವ ಮಾರ್ಗ.

ಕೊನೆಗೊಮ್ಮೆ ದ್ವೇಷಿಗಳು ಹಚ್ಚಿ ಉರಿಸುತ್ತಾ ಹೋದ ಬೆಂಕಿ ಅಭಿಮಾನಿಗಳೆಂಬ ಹಾರುವ ಬಲೂನನ್ನು ಮೇಲೇರಿಸಿದಂತಾಗಿದೆ. ನನಗೆ, ಒಂದು ಆಕೃತಿಯನ್ನು ದ್ವೇಷಿಸುವವರು ಒಂದು ಕಡೆ ಎಳೆಯುತ್ತಾ ಮತ್ತೊಂದು ಕಡೆ ಅಭಿಮಾನಿಗಳು ಎಳೆಯುತ್ತಾ ಆಕೃತಿಯ ಬೆಳವಣಿಗೆಗೆ ಸಹಾಯ ಮಾಡುತ್ತಿರುವ ದೃಶ್ಯ ನಿಚ್ಚಳವಾಗಿ ಗೋಚರಿಸುತ್ತಿದೆ.
ಮೋದಿಯನ್ನು ವಿರೋಧಿಸಬಹುದು,ಪ್ರೀತಿಸಬಹುದು,ದ್ವೇಷಿಸಬಹುದು ಆದರೆ ಇಗ್ನೋರ್ ಮಾಡಲಿಕ್ಕಾಗದು … ಸದ್ಯಕ್ಕೆ ಈ ಪ್ರಗತಿಪರರ ಮುಸುಕಿನೊಳಗಿರುವ ಪಿತೂರಿಗಾರರಿಗೂ ಅದರ ಅರಿವಾಗಿದೆ … ಮೋದಿ ಮುಂದಿನ ಪ್ರಧಾನಿಯಾಗಲಿ ಅಂತ ಆಶಿಸುತ್ತ , ಸುಳ್ಳನ್ನೇ ಬಂಡವಾಳ ಮಾಡಿಕೊಂಡ ಮೋದಿ ವಿರೋಧಿಗಳಿಗೂ ಅವನನ್ನು ಎದುರಿಸುವ ಶಕ್ತಿಯನ್ನು ಅವರು ನಂಬುವ/ನಂಬದ ದೇವರು ಕರುಣಿಸಲಿ ಅಂತ ಹಾರೈಸುತ್ತೇನೆ.

1 ಟಿಪ್ಪಣಿ Post a comment
  1. Dhananjaya's avatar
    ಸೆಪ್ಟೆಂ 24 2013

    one of the nice Article sir….Are you Explain Real fact….

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments