ವಿಷಯದ ವಿವರಗಳಿಗೆ ದಾಟಿರಿ

Archive for

15
ಆಗಸ್ಟ್

ಅವರೆಲ್ಲರೂ ಪ್ರತಿಭಾವಂತರೇ ಆದರೆ…..

-ಡಾ ಅಶೋಕ್ ಕೆ ಆರ್
corruption

ಭಾರತದಲ್ಲಿ ಹಗರಣಗಳು ಹೊಸದಲ್ಲ, ಹಗರಣಗಳ ಕುರಿತ ರಾಜಕೀಯ ಮತ್ತು ರಾಜಕೀಯೇತರ ಗದ್ದಲ, ಪ್ರತಿಭಟನೆಗಳು ಹೆಚ್ಚಾಗಿ ಚಳುವಳಿಗಳಾಗಿ ಮಾರ್ಪಟ್ಟ ನಂತರ ಅಧಿಕಾರದಲ್ಲಿರುವ ಪಕ್ಷಗಳು ಆ ಹಗರಣದ ತನಿಖೆಗೆ ವಿವಿಧ ಹಂತದ ತನಿಖಾ ಆಯೋಗಗಳನ್ನು ರಚಿಸುವುದೂ ಹೊಸದಲ್ಲ. ಸಿ.ಐ.ಡಿ ಪೋಲೀಸರಿಂದ ಹಿಡಿದು ನ್ಯಾಯಂಗ, ಸದನ ಸಮಿತಿ, ಸಿ.ಬಿ.ಐ ಸಂಸ್ಥೆಗಳೆಲ್ಲವನ್ನೂ ತನಿಖೆ ಮಾಡಲು ನಿಯೋಜಿಸುವುದು ಸಾಮಾನ್ಯ. ವಿಪರ್ಯಾಸದ ಸಂಗತಿಯೆಂದರೆ ಇಂತಹ ಎಷ್ಟೋ ತನಿಖಾ ಸಂಸ್ಥೆಗಳು ನೀಡಿದ ಅನೇಕಾನೇಕ ವರದಿಗಳು ಅನುಷ್ಠಾನಗೊಳ್ಳದೆ ಸರಕಾರದ ಯಾವುದೋ ಒಂದು ಕಛೇರಿಯಲ್ಲಿ ಧೂಳು ಹಿಡಿದು ಹಾಳಾಗುತ್ತವೆಯೇ ಹೊರತು ತನಿಖಾ ಆಯೋಗ ನೀಡಿದ ಸಲಹೆ ಸೂಚನೆಗಳನ್ನು ಯಥಾವತ್ತಾಗಿ ಜಾರಿಗೆ ತರುವುದು ಅಪರೂಪದ ಸಂಗತಿಯೇ ಆಗಿಹೋಗಿದೆ.

ಸಲಹೆ ಸೂಚನೆಗಳು ಜಾರಿಗೆ ಬರದಿರಲು ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ, ರಾಜಕೀಯ ಪಕ್ಷಗಳ ವೋಟ್ ಬ್ಯಾಂಕ್ ಅನಿವಾರ್ಯತೆ, ಅಧಿಕಾರಸ್ಥ ಪಕ್ಷಗಳೇ ಬದಲಾವಣೆಗೊಳ್ಳುವುದು ಮತ್ತು ಕೆಲವು ಸಂದರ್ಭದಲ್ಲಿ ಆರೋಪಕ್ಕೊಳಗಾದವರು ಮತ್ತು ವಿವಿಧ ಕಾರಣಗಳಿಂದ ಅವರಿಗೆ ಬೆಂಬಲ ನೀಡುವವರು ಪ್ರತಿಭಟನೆಯ ರೂಪದಲ್ಲಿ ವಿರೋಧ ವ್ಯಕ್ತಪಡಿಸುವುದು. ಬಿಜೆಪಿಯ ದುರಾಡಳಿತದಿಂದ ಬೇಸತ್ತು ಕಾಂಗ್ರೆಸ್ಸಿಗೆ ಅವಕಾಶ ನೀಡಿದ ಕರ್ನಾಟಕದ ಮತದಾರ ಕಳೆದೊಂದೂವರೆ ವರುಷದಿಂದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಿಂದ ಭ್ರಮನಿರಸನಕ್ಕೊಳಗಾಗಿರುವುದೇ ಅಧಿಕ. Read more »