ವಿಷಯದ ವಿವರಗಳಿಗೆ ದಾಟಿರಿ

Archive for

20
ಆಗಸ್ಟ್

ಸಂಸ್ಕೃತ ಸಪ್ತಾಹ ಮತ್ತು ಆರ್ಯ-ದ್ರಾವಿಡ ವಾದವೆಂಬ ಸತ್ತ ಕುದುರೆ

– ಪ್ರವೀಣ್ ಪಟವರ್ಧನ್ (ಪ್ರ ಕೊ ಪ )

ಸಂಸ್ಕೃತಸ್ನೇಹಿತರೊಬ್ಬರು, ‘Breaking India’ ಪುಸ್ತಕ ಓದುತ್ತಿದ್ದರೆ ನಿದ್ದೆಯೇ ಬರುವುದಿಲ್ಲ , ಯೋಚನೆಯಲ್ಲಿ ಮುಳುಗಿಸುತ್ತದೆ, ನಮ್ಮ ದೇಶ ಭಾರತವನ್ನು ವಿಭಜಿಸುವಲ್ಲಿನ ಪಾತ್ರಧಾರಿಗಳ ಬಗ್ಗೆ, ಆ ವಿಭಜಿಸುವ ತಂತ್ರಕ್ಕೆ ಬೆನ್ನೆಲುಬು ಇಲ್ಲದಿದ್ದರೂ ದೇಶವನ್ನು ಬೆರಗುಗೊಳಿಸುವಂತೆ ಹೆಣೆದ ಸುಳ್ಳಿನ ಕಂತೆಯನ್ನು, ಅವರ ಕಾರ್ಯತಂತ್ರವನ್ನೂ ಲೇಖಕರಾದ ರಾಜೀವ್ ಮಲ್ಹೋತ್ರಾ ತಿಳಿಸಿದ್ದಾರೆಂದು ತಿಳಿದಾಗಲೇ ಆ ಪುಸ್ತಕವನ್ನು ಕೊಂಡು ಓದುವ ಸಾಹಸಕ್ಕೆ ಮುಂದಾದೆ. 600 ಪುಟಕ್ಕೂ ಮೀರಿದ ಈ ಪುಸ್ತಕವನ್ನು ಓದಲಾರಂಭಿಸಿದ್ದು ಇತ್ತೀಚೆಗಿನ ಹೊಸ ವಿವಾದವೊಂದು ಸೃಷ್ಟಿಯಾದ ಬಳಿಕವೇ. ಪುಸ್ತಕದಲ್ಲಿ ಬರೋಬ್ಬರಿ 60 ಪುಟಗಳ ವಿವಿಧ ಆಧಾರ ಗ್ರಂಥಗಳನ್ನು ಉಲ್ಲೇಖಿಸಿರುವ ರಾಜೀವ್ ಮಲ್ಹೋತ್ರ, ಅರವಿಂದನ್ ನೀಲಕಂದನ್ ಇನ್ನೆಷ್ಟು ಅಧ್ಯಯನ ಮಾಡಿರಬೇಕು ಎಂಬುದನ್ನು ಊಹಿಸಲೂ ಅಸಾಧ್ಯ.

ವಿವಾದ:
ಆಗಸ್ಟ್ ತಿಂಗಳ ಎರಡನೆಯ ವಾರವನ್ನು ಸಂಸ್ಕೃತ ಸಪ್ತಾಹವೆಂದು ಘೋಷಿಸಿ ಆ ವಾರ ಸಿ.ಬಿ.ಎಸ್.ಸಿ (ಬೋರ್ಡ್) ಪಠ್ಯಕ್ರಮದ ವ್ಯಾಪ್ತಿಗೆ ಬರುವ ಎಲ್ಲಾ ಹದಿನೈದು ಸಾವಿರ ಶಾಲೆಗಳು ಸಂಸ್ಕೃತ ಸಪ್ತಾಹವನ್ನು ಆಚರಿಸಬೇಕೆಂದು ಬೋರ್ಡ್ ಸೂಚನೆಯನ್ನು ಹೊರಡಿಸಿತು. ಈ ವಿಷಯ ಸೋಷಿಯಲ್ ಮೀಡಿಯಾದಲ್ಲೂ ಚರ್ಚೆಗೊಳಗಾಯಿತು. ಕಟ್ಟಾ ಕನ್ನಡಾಭಿಮಾನಿಗಳು ಇದನ್ನು ವಿರೋಧಿಸಿದರು. ಸಂಸ್ಕೃತಕ್ಕೆ ಮಾನ್ಯತೆ ನೀಡುವ ಕೇಂದ್ರ ಸರ್ಕಾರ ನಮ್ಮ ದೇಶದ ಪ್ರತಿಯೊಂದು ಭಾಷೆಗೂ ಈ ತರಹದ ಚಟುವಟಿಕೆಯನ್ನು ಹಮ್ಮಿಕೊಳ್ಳುವ ಯೋಜನೆ ಮಾಡಬೇಕು. ಅದರ ಬದಲು ಸಂಸ್ಕೃತಕ್ಕೇನು ವಿಶೇಷ ಎಂದೆಲ್ಲಾ ಚರ್ಚಿಸತೊಡಗಿದರು. ಬೋರ್ಡ್‌ನ ಈ ತಾರತಮ್ಯ (?) ನೀತಿಯನ್ನೂ ಖಂಡಿಸಿದರು. ಈ ಬಗೆಯ ಸಂಸ್ಕೃತ ಒಲವು ಮಾತೃಭಾಷೆಯನ್ನು ಕಡೆಗಣಿಸುತ್ತದೆಂಬುದೇ ಹಲವರ ಮೂಲ ಆಪಾದನೆಯಾಗಿತ್ತು. ಈ ತರಹದ ಚರ್ಚೆಗೆ ಕೆಲ ಉತ್ತರಗಳನ್ನು ಹುಡುಕೋಣ. ಜೊತೆಗೆ ಈ ಚರ್ಚೆಯನ್ನು ನಮ್ಮಗಳ ನಡುವೆ ಮುಂದಿಟ್ಟ ಕಾರಣಗಳನ್ನೂ ಕೆಲ ಮಟ್ಟಿಗೆ ಮೆಲಕು ಹಾಕೋಣ.
Read more »