ಇಲ್ಲಿ ಒಂದಿಷ್ಟು ಹಾಸ್ಯ, ಹತಾಶೆ, ನೋವು, ಸಿಟ್ಟು, ಸೆಡವು, ಪ್ರಚಲಿತ ವಿದ್ಯಮಾನಗಳು, ಕಥೆ-ವ್ಯಥೆಗಳು, ಇತಿಹಾಸ, ದೇಶ, ಭಾಷೆ,ಧರ್ಮ, ಸಿನೆಮ, ಪುಸ್ತಕ ಪರಿಚಯ ಎಲ್ಲ ಸಿಗುತ್ತದೆ. ನಮ್ಮ ನಮ್ಮ ಅಭಿಪ್ರಾಯಗಳನ್ನು ಒಂದೇ ವೇದಿಕೆಯಲ್ಲಿ ಹಂಚಿಕೊಳ್ಳಬೇಕೆಂಬ ಆಶಯವೆ ಈ ನಿಲುಮೆ. ನಿಲುಮೆಯೊಳಗೆ ಒಂದು ಸುತ್ತು ಹೊಡೆದು ಬನ್ನಿ. ನಿಮ್ಮ ಅಭಿಪ್ರಾಯ ತಿಳಿಸಿ. ಸಾಧ್ಯವಾದಲ್ಲಿ ನಿಮ್ಮ ಒಂದು ಲೇಖನ ಯಾ ಕವನಗಳನ್ನು ನಮಗೆ ಕಳುಹಿಸಿದರೆ ನಮ್ಮ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವೂ ಸೇರಿದಂತಾಗುತ್ತದೆ. ನಿಮ್ಮ ಲೇಖನಗಳನ್ನು nilume@sify.com ಅಥವಾ baraha@nilume.net ಇ-ಮೇಲ್ ವಿಳಾಸಕ್ಕೆ ಕಳುಹಿಸಿ. ಹನಿಹನಿ ಸೇರಿದರೆ ಹಳ್ಳ- ತೆನೆತೆನೆಗೂಡಿದರೆ ಬಳ್ಳ ಅನ್ನೋ ಮಾತಿದೆಯಲ್ಲ ಹಾಗೆಯೇ, ‘ನಿಲುಮೆ’ಯನ್ನ ಕನ್ನಡ ಸಾಹಿತ್ಯ ಪ್ರಪಂಚದ ಮನೆ ಮಾತಾಗಿಸುವ ಬನ್ನಿ. ಈ ನಿಲುಮೆ ಬರಿ ನಮ್ಮದಲ್ಲ ಇದು ನಿಮ್ಮದು, ಪ್ರತಿಯೊಬ್ಬ ಕನ್ನಡಿಗನದು. ಹೆಚ್ಚಿನ ಮಾಹಿತಿಗೆ: https://nilume.net/about
| kpbolumbu ರಲ್ಲಿ “ಮೂಢನಂಬಿಕೆ” ಅನ್ನುವ… | |
| Laura Grenier ರಲ್ಲಿ ಫಾರ್ಮಾ ಲಾಬಿ Vs ಮೋದಿಯವರ ಭಾ… | |
| ರಾಕೇಶ್ ಶೆಟ್ಟಿ ರಲ್ಲಿ ಇತಿಹಾಸದ ನೆರಳಿನಲ್ಲಿ ವರ್ತಮಾನದ ವೈ… | |
| SANKULA News ರಲ್ಲಿ ಇತಿಹಾಸದ ನೆರಳಿನಲ್ಲಿ ವರ್ತಮಾನದ ವೈ… | |
| ಚಾ ಶಿ ಜಯಕುಮಾರ್ ಕೃಷ್ಣ… ರಲ್ಲಿ ಕನ್ನಡದ ಅಳಿವು–ಉಳಿವು ಮತ್ತು ಭಾಷಾ… | |
| ಚಾ ಶಿ ಜಯಕುಮಾರ್ ಕೃಷ್ಣ… ರಲ್ಲಿ ನಾಡು- ನುಡಿ: ಮರುಚಿಂತನೆ-‘ಕರ್ಣಾಟಕ… | |
| ಚಾ ಶಿ ಜಯಕುಮಾರ್ ಕೃಷ್ಣ… ರಲ್ಲಿ ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿ… | |
| ಚಾ ಶಿ ಜಯಕುಮಾರ್ ಕೃಷ್ಣ… ರಲ್ಲಿ ದಲಿತರ ಮೇಲಿನ ದೌರ್ಜನ್ಯ ಮತ್ತು ಪರಿ… | |
| ಚಾ ಶಿ ಜಯಕುಮಾರ್ ಕೃಷ್ಣ… ರಲ್ಲಿ “ಫೇಸ್ಬುಕ್” ನಿಸ್ತಂತು ಕನ್ನಡ ಸಾಹ… | |
| ಚಾ ಶಿ ಜಯಕುಮಾರ್ ಕೃಷ್ಣ… ರಲ್ಲಿ “ಎಲ್ಲರ” ಕಲ್ಪನೆಗೆ ಎ… | |
| ಚಾ ಶಿ ಜಯಕುಮಾರ್ ಕೃಷ್ಣ… ರಲ್ಲಿ “ಎಲ್ಲರ” ಕಲ್ಪನೆಗೆ ಎ… | |
| ಚಾ ಶಿ ಜಯಕುಮಾರ್ ಕೃಷ್ಣ… ರಲ್ಲಿ ಬರಹಗಾರನ ತಲ್ಲಣಗಳು | |
| Dayanand Hegde ರಲ್ಲಿ “ಪೂರ್ವಾಗ್ರಹ” ಕುರಿತ… | |
| ಚಾ ಶಿ ಜಯಕುಮಾರ್ ಕೃಷ್ಣ… ರಲ್ಲಿ ವಿವೇಕಾನಂದರ ವಿಚಾರಗಳು: ಜಾತಿ… | |
| Bailey ರಲ್ಲಿ ಯುಎಇ ನಿಜಕ್ಕೂ ಅಷ್ಟೊಂದು ಅಸಹಿಷ್ಣು… |
ನಿಲುಮೆ ತಂಡದಲ್ಲಿ ಯಾರು ಯಾರು ಇದ್ದಾರೆ ಅನ್ನುವುದು ಬಹಳಷ್ಟು ಜನರಿಗೆ ಗೊತ್ತಿರಬಹುದು, ಗೊತ್ತಿಲ್ಲದೆಯೂ ಇರಬಹುದು. ಯಾವುದೇ ಹಿಡನ್ ಅಜೆಂಡಾವನ್ನೇನು ಇಟ್ಟುಕೊಂಡು ಮುಖ ಮುಚ್ಚಿಕುಳಿತಿರುವವರು ನಾವಲ್ಲ. ಅಷ್ಟಕ್ಕೂ ನಿಲುಮೆ ನಡೆಯುತ್ತಿರುವುದು ಕೇವಲ ನಮ್ಮಿಂದ ಅಲ್ಲ, ಅದಕ್ಕೆ ಕಾರಣ ನಮ್ಮ ಲೇಖಕರ ಬಳಗ ಮತ್ತು ಓದುಗ ಮಿತ್ರರು. ಇವರೇ ಮುಖ್ಯವಾದಾಗ ನಾವು ನಮ್ಮ ಹೆಸರು ಹೇಳಿಕೊಂಡು ಓಡಾಡುವುದು ತೋರಿಕೆಯಾಗಬಹುದು ಅನ್ನುವ ಕಾರಣಕ್ಕಾಗಿ ಮಾತ್ರ. ನಾವು ಮಾಡುತ್ತಿರುವ ಚಿಕ್ಕ ಕೆಲಸಕ್ಕೆ ದೊಡ್ಡ ಪ್ರಚಾರ ಬೇಡ ಎಂಬ ಕಾರಣಕ್ಕಾಗಿಯಷ್ಟೆ...!






ಮೂರ್ಖ, ಮುಠ್ಠಾಳ ಎಂಬ ಬೈಗುಳಗಳನ್ನು ಬಳಸಬಾರದು ಎನ್ನುತ್ತಾರೆ ಮಾಧ್ಯಮ ಸಲಹೆಗಾರರು. ಈ ಎರಡೂ ಪದಗಳಿಗೆ ಇರುವ ಅರ್ಥ ಒಂದೇ: ಅವಿವೇಕಿ, ತಿಳಿಗೇಡಿ, ಬುದ್ಧಿಹೀನ ಇತ್ಯಾದಿ. ಸರ್ಕಾರದ್ದು ಮೂರ್ಖ ಯೋಜನೆ, ಮುಠ್ಠಾಳತನದ ಕೆಲಸ ಎಂದೋ ಅವಿವೇಕದ ಪರಮಾವಧಿ ಎಂದೋ ಇನ್ನು ಬರೆಯುವಂತಿಲ್ಲ!
ವಿದ್ಯಾವಂತ ಮುಠ್ಠಾಳರು, ಅವಿದ್ಯಾವಂತ ಮೂರ್ಖರೇ ತುಂಬಿರುವ ಈ ಲೋಕದಲ್ಲಿ ಇಂತಹ ಕುಚೋದ್ಯಗಳು ಸರ್ವೇ ಸಾಮಾನ್ಯ. ಇಂತಹವುಗಳಿಗೆ ತಲೆ ಕೆಡಿಸಿಕೊಳ್ಳದೇ ನಿಮ್ಮ ಕಾರ್ಯವನ್ನು ಮುಂದುವರೆಸುವುದು ಸೂಕ್ತ.
When is Nilume prakashana book releasing?
ನಿಮ್ಮ ಬ್ಲಾಗಿನಲ್ಲಿ ಬರೆಯುವವರ ಬಗ್ಗೆ ನೀವು ಸಂಪೂರ್ಣ ನಿಯಂತ್ರಣ ಮಾಡಲಾಗದಿದ್ದರೆ ನಿಲುಮೆಯನ್ನು ಮುಚ್ಚಿಬಿಡಿ ಎನ್ನುತ್ತಾರೆ ಅಮೀನ್ ಮಟ್ಟು ಅವರು. ಆದರೆ ಪತ್ರಿಕೆಯಲ್ಲಿ ಸ್ವತಃ ಸಂಪಾದಕರಾದ ಬೆಳಗೆರೆ, ಮತ್ತು ಲಂಕೇಶರು ಎಷ್ಟೊಂದು ಅವಮಾನಕರವಾಗಿ ಕೆಲವು ಪ್ರಮುಖ ವ್ಯಕ್ತಿಗಳ ಬಗ್ಗೆ , ಮತ್ತು ಮಂತ್ರಿಗಳ ಬಗ್ಗೆ , ಮತ್ತು ಮಠಾಧೀಶರ ಬಗ್ಗೆ ಎಷ್ಟೊಂದು ಕೆಟ್ಟದಾಗಿ ಬರೆದಿದ್ದಾರಲ್ಲಾ ಅವೆರಡೂ ಪತ್ರಿಕೆಗಳನ್ನು ಮುಚ್ಚಲು ಏಕೆ ಮಟ್ಟು ಹೇಳಲ್ಲ??
ದಿನೇಶ್ ಅಮೀನ್ ಮಟ್ಟು ಅವರ ಉದ್ದೇಶ ಒಳ್ಳೆಯದೇ ಇರಬಹುದು, ಆದರೆ ನಿಲುಮೆಯ ವ್ಯವಸ್ಥಾಪಕರ ಮೇಲೆ ಪೋಲೀಸ್ ಕಂಪ್ಲೈಂಟ್ ಕೊಟ್ಟಿದ್ದು ಸರಿ ಅಂತ ಅನ್ನಿಸಲಿಲ್ಲ. ಬಹುಶಃ ದಿನೇಶ್ ಅವರಿಗೆ ನಿಲುಮೆಯ ಓದುಗರು ಅವರ ಬಗ್ಗೆ ಮಾಡಿದ ಅವಹೇಳನಕಾರಿ ಕಮೆಂಟುಗಳಿಗಿಂತ ಸಿ ಎಂ ಸಾಹೇಬರನ್ನು ಮೂರ್ಖ ಮು*ಳ ಅಂತ ಕರೆದದ್ದು ಹರ್ಟ್ ಮಾಡಿದೆ. ಆದುದರಿಂದ ನಿಲುಮೆ ಮೇಲೆ ಕಠಿಣ ಕ್ರಮ ತೆಗೆದುಕೊಂಡಿದ್ದಾರೆ. ದಿನೇಶ್ ಅವರ ಕ್ರಮವು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿಂತ ಸ್ವಾಮಿನಿಷ್ಠೆಯನ್ನು ಮೆರೆದಿದೆ. ಎಳೆಸು ಹುಡುಗರ ಮೇಲೆ ಪೋಲೀಸ್ ಕಂಪ್ಲೈಂಟ್ ಕೊಡುವ ಬದಲು ಮಾಧ್ಯಮಗಳಲ್ಲಿ ವ್ಯಕ್ತಿಗತ ಟೀಕೆ ಬಗ್ಗೆ ಒಂದು ವಸ್ತುನಿಷ್ಠ ಚರ್ಚೆಗೆ ಕಾರಣವಾಗುವ ಉತ್ತಮ ಅವಕಾಶವನ್ನು ದಿನೇಶ್ ಅವರು ಸ್ವಾಮಿನಿಷ್ಠೆ ಪ್ರದರ್ಶನಕ್ಕಾಗಿ ವ್ಯಯ ಮಾಡಿದ್ದಾರೆ. ಖೇದನೀಯ.
ನಾಗಶೆಟ್ಟಿ ಶೆಟ್ಕರ್ ರವರೇ, ನಿಜವಾದ ಪ್ರಗತಿಪರವಾದ ಕಾಮೆಂಟ್ ಹಾಕಿದ್ದೀರಿ. ನಕಲಿ ಪ್ರಗತಿಪರರ ಹಾವಳಿಯಲ್ಲಿ ನೀವು ವಿಭಿನ್ನವಾಗಿ ನಿಲ್ಲುತ್ತೀರಿ.
ನಾಗಶೆಟ್ಟಿ ಶೆಟ್ಕರ್ ರವರೇ, ನಿಜವಾದ ಪ್ರಗತಿಪರವಾದ ಕಾಮೆಂಟ್ ಹಾಕಿದ್ದೀರಿ. ನಕಲಿ ಪ್ರಗತಿಪರರ ಹಾವಳಿಯಲ್ಲಿ ನೀವು ವಿಭಿನ್ನವಾಗಿ ನಿಲ್ಲುತ್ತೀರಿ.
+1
ನಿಮ್ಮ ಪ್ರತಿಕ್ರಿಯೆಗೆ ನೀವು ಅಥವಾ ನಿಮ್ಮ ಐಡಿಯಿಂದ ಹೊಕ್ಕ ಬೇರೆಯವರು ಈ ರೀತಿಯಾಗಿ +1 ಹಾಕುವುದನ್ನು ನಿಲ್ಲಿಸಿ. ಧನ್ಯವಾದಗಳು
– ನಿಲುಮೆ ನಿರ್ವಾಹಕರು
PK ಎಂಬ ಸಿನಿಮಾ ತೆಗೆದು ಹಿಂದೂ ದೇವದೇವತೆಗಳ, ಮಠಾಧೀಶರ ಕುರಿತಾಗಿ ಬಾಯಿಗೆ ಬಂದಂತೆ ಟೀಕಿಸಬಹುದು.
ಆ ಸಿನಿಮಾವನ್ನು ಟೀಕಿಸುವವರನ್ನು “ಅಭಿವ್ಯಕ್ತಿ ಸ್ವಾತಂತ್ರ್ಯ”ದ ಹೆಸರಿನಲ್ಲಿ ಬಾಯಿ ಮುಚ್ಚಿಸುವ ಪ್ರಯತ್ನವೂ ನಡೆಯಿತು.
ಆದರೆ, ನಿಲುಮೆಯಂತಹ ಸಾಮಾಜಿಕ ತಾಣದಲ್ಲಿ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡುವುದು ಇವರಿಗೆ ಬೇಡ.
ಹಿಂದುಗಳ ಟೀಕೆಯ ವಿಷಯದಲ್ಲಿ “ಅಭಿವ್ಯಕ್ತಿ ಸ್ವಾತಂತ್ರ್ಯ”ದ ಪ್ರಶ್ನೆಯನ್ನು ಎತ್ತುವವರೇ ನಿಲುಮೆಯ ಅಭಿವ್ಯಕ್ತಿ ಸ್ವಾತಂತ್ರ್ಯದ ಕುತ್ತಿಗೆ ಹಿಸುಕುತ್ತಿರುವುದು ವಿಪರ್ಯಾಸ.
ನಿಲುಮೆಯಲ್ಲಿ ಬರೆಯುತ್ತಿರುವುದು ಸರಿ ಕಾಣದಿದ್ದರೆ, ನಿಲುಮೆಯನ್ನು ಓದಬೇಡಿ. ನಿಮಗೆ ನಿಲುಮೆಯನ್ನು ಓದಲೇಬೇಕೆಂಬ ಹಠವೇಕೆ!?
ನಿಲುಮೆಯಲ್ಲಿ ಪ್ರಗತಿಪರರ ಬ್ಲಾಗ್ ಗಳಂತೆ ಕಾಮೆಂಟ್ ಮಾಡರೇಶನ್ ಎಂದಿನಿಂದ ಆರಂಭವಾಯಿತು ? ನಿಲುಮೆ ಆರಂಭವಾದ ಇಷ್ಟು ವರ್ಷಗಳಲ್ಲಿ ಎಂದೂ ಸಹ ಕಾಮೆಂಟ್ ಗಳನ್ನು ಮಾಡರೇಟ್ ಮಾಡಿರಲಿಲ್ಲ. ಪ್ರತಿಯೊಬ್ಬನೂ ತನ್ನ ಅಭಿಪ್ರಾಯವನ್ನು ಮುಕ್ತವಾಗಿ ಯಾವ ಅಂಜಿಕೆಯಿಲ್ಲದೇ ನಿಲುಮೆಯಲ್ಲಿ ವ್ಯಕ್ತಪಡಿಸಬಹುದಾಗಿತ್ತು ಮತ್ತು ಅದು ತಕ್ಷಣ ಪ್ರಕಟವಾಗುತ್ತಿತ್ತು ಕೂಡ. ನಕಲಿ ಪ್ರಗತಿಪರರ ಹುಸಿ ಬೆದರಿಕೆಗಳಿಗೆ ಬಲಿಯಾಗಿ ನಿಲುಮೆ ತಂಡ ಕಾಮೆಂಟ್ ಗಳನ್ನು ಮಾಡರೇಟ್ ಮಾಡಲು ಆರಂಭಿಸಿತೇ ? ಖಂಡಿತವಾಗಿಯೂ ಇದು ಒಳ್ಳೆಯ ಬೆಳವಣಿಗೆಯಲ್ಲ. ಅತ್ಯಂತ ಬೇಸರವೆನಿಸುತ್ತಿದೆ.
+1
ಮೊದಲನೆಯದಾಗಿ ನಿಲುಮೆ ತನ್ನ ನಿಲುವನ್ನು ಪಾಲಿಸುತ್ತದೆ..ಸರಿಯಿದ್ದಾಗ ಬೆದರುವ ಪ್ರಶ್ನೆ ಬರುವುದೇ ಇಲ್ಲ.
ಲೇಖನದ ಆಶಯಕ್ಕೆ ಸಂಬಂಧವಿಲ್ಲದ, ಚರ್ಚೆಯನ್ನು ಎತ್ತಲೋ ತೆಗೆದುಕೊಂಡು ಹೋಗಿ ದಿಕ್ಕು ತಪ್ಪಿಸಿ ವಿಷಯ ಸಂಬಂಧಿತ, ಮೌಲಿಕ ಚರ್ಚೆಗಳು ನಡೆಯದಂತೆ ಮಾಡುವ ಕಾರ್ಯ ವ್ಯವಸ್ಥಿತವಾಗಿ ನಡೆದಿದ್ದನ್ನು ಗಮನಿಸಿ ಮಾಡರೇಶನ್ ಜಾರಿಯಿಡಲಾಗಿದೆ. ಸ್ವಲ್ಪ ಕಾಲ ಕಾದು ನೋಡೋಣ..ಸುಧಾರಿಸಿದಾಗ ಮತ್ತೆ ಸಡಿಲು ಬಿಡೋಣ.
– ನಿಲುಮೆ ನಿರ್ವಾಹಕರು
ಸಂಕಷ್ಟಗಳು, ಘರ್ಷಣೆಗಳು, ನ್ಯಾಯಾಲಯ, ಮೊಕದ್ದಮೆಗಳು ಪತ್ರಿಕಾ ರಂಗದಲ್ಲಿ ಸಾಮಾನ್ಯ. ಮುದ್ರಣ ಮಾಧ್ಯಮದ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹಾಕಿದರೆ, ಎಲೆಕ್ಟ್ರಾನಿಕ್ ಮಾದ್ಯಮವಾದರೆ ಪೊಲೀಸ್ ಠಾಣೆಯಲ್ಲಿ ಐ.ಟಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಸಾಮಾನ್ಯರಿಂದ ಇಂತಹ ದೂರುಗಳು ಬಂದಲ್ಲಿ ಸಾಧಾರಣವಾಗಿ ಏಕಾ ಏಕಿ ಪ್ರಕರಣ ದಾಖಲು ಮಾಡುವುದಿಲ್ಲ.. ಈ ರೀತಿಯಾಗಿ ನೊಂದ (..?) ಎಲ್ಲರೂ ದೂರು ನೀಡುತ್ತಾ ಹೋದಲ್ಲಿ, ಬಂದ ದೂರುಗಳೆಲ್ಲವನ್ನೂ ಪರಿಗಣಿಸಿ ಪ್ರಕರಣಗಳನ್ನು ದಾಖಲಿಸುತ್ತಾ ಹೋದರೆ ಐ.ಟಿ ಆಕ್ಟ್ ಪ್ರಕರಣಗಳಿಗೇ ಪ್ರತ್ಯೇಕ ಠಾಣೆಗಳನ್ನು ಎಲ್ಲೆಡೆ ತೆರೆಯಬೇಕಾಗುತ್ತದೆ. ಈ ದೂರಿಗೆ ವಿಶೇಷ ಮಹತ್ವ ನೀಡಲಾಗಿರುವ ಹಿನ್ನೆಲೆ ಮೇಲ್ನೋಟಕ್ಕೇ ಎಲ್ಲರ ಅರಿವಿಗೆ ಬರುತ್ತದೆ.
ನಿಲುಮೆ ಜನಪ್ರಿಯವಾಗುತ್ತಿರುವ, ಮೌಲ್ಯಯುತ ಸಾಮಾಜಿಕ ಚಿಂತನೆಗಳಿಗೆ ಯಶಸ್ವಿ ವೇದಿಕೆಯಾಗುತ್ತಿರುವ ವೇಳೆಯಲ್ಲಿ ಇಂತಹ ಸಂಕಷ್ಟಗಳು ಸಾಮಾನ್ಯ. ಕಾನೂನಿನ ಹೋರಾಟ ಮುಂದುವರೆಸುತ್ತಾ, ತಮ್ಮ ಎಂದಿನ ಹಾದಿಯಲ್ಲಿ ಮತ್ತಷ್ಟು ದೃಢವಾಗಿ ಮುಂದುವರೆಯುವುದು ಸೂಕ್ತ.
ಯಶಸ್ಸು ನಿಮ್ಮದಾಗಲಿ.
ಭಾರತದಲ್ಲಿ ಮಾನನಷ್ಟ ಮೊಕದ್ದಮೆಯನ್ನು ಸಿವಿಲ್ ಮತ್ತು ಕ್ರಿಮಿನಲ್ ಲಾ ಎರಡರ ಅಡಿಯಲ್ಲೂ ಹಾಕಬಹುದು. (ಇದು ಭಾರತದಲ್ಲಿ ಮಾತ್ರ ಸಾಧ್ಯ. ಬೇರೆ ದೇಶಗಳಲ್ಲಿ ಇದೊಂದು ಸಿವಿಲ್ ಕಾನೂನಿನ ವಿಚಾರ ಮಾತ್ರ.) ಮಾನನಷ್ಟ ಮೊಕದ್ದಮೆಗೆ ಸೇರಿದ ಕ್ರಿಮಿನಲ್ ಕಾನೂನು ಮಾತ್ರ Indian Penal Code (section 499)ರಲ್ಲಿ ಶಾಸನದ ರೂಪದಲ್ಲಿ ನಮೂದಿಸಲಾಗಿದೆ. ಸಿವಿಲ್ ಕಾನೂನಿನಲ್ಲಿ ಇದು ಕೇವಲ judge-made lawಗಳ ಮೇಲೆ ಅವಲಂಬಿಸಿರುತ್ತದೆ.
ಈ ಹಿನ್ನಲೆಯಲ್ಲಿ ಆಮೀನರಿಗೆ ಒಂದು ಪ್ರಶ್ನೆ: ಒಬ್ಬ ಶಿಕ್ಷಕನಾಗಿ ನೊಂದು ಈ ಕೇಸು ಹಾಕುತ್ತಿದ್ದ ಪಕ್ಷದಲ್ಲಿ ಅವರು ಮಾನನಷ್ಟ ಮೊಕದ್ದಮೆಯನ್ನು ಸಿವಿಲ್ ಕಾನೂನಿನಡಿ ಹಾಕಬಹುದಿತ್ತು. ಆದರೆ ಅವರು ಇದನ್ನು ಕ್ರಿಮಿನಲ್ ಕಾನೂನಿನ ಅಡಿ ಹಾಕಿದ್ದು ಯಾಕೆ?
ಏಕೆಂದರೆ, ಭಾರತೀಯ ಕಾನೂನು ಪ್ರಕ್ರಿಯೆಯಲ್ಲಿ, ಸಾಮಾನ್ಯವಾಗಿ ಒಂದು ಕ್ರಿಮಿನಲ್ ಮೊಕದ್ದಮೆ ಹೂಡಿದ ನಂತರ
ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಸಮನ್ಸ್ ಹೊರಡುತ್ತದೆ/ಹೊರಡಿಸಬಹುದು. ಎದುರಾಳಿಯನ್ನು ಹಣ ಮತ್ತು ಅಧಿಕಾರದ ಬಲಪ್ರಯೋಗ ಮಾಡಿ ನಿಯಂತ್ರಿಸಲು ಭಾರತದಲ್ಲಿ ಬಳಸಲಾಗುವ ಸಾಮಾನ್ಯ ಉಪಾಯ.
ಇದು ನಮ್ಮ ಶಿಕ್ಷಕರ ಒಳ ಮರ್ಮ.