ಪೀರಾಯರ ಒಂದು ಕಥಾನಕ (ನೀಳ್ಗತೆ ಭಾಗ-೫)
– ಮು. ಅ ಶ್ರೀರಂಗ ಬೆಂಗಳೂರು
ಪೀರಾಯರು ನಾಲ್ಕೈದು ದಿನಗಳಲ್ಲಿ ತಾವು ಬರೆಯಬೇಕೆಂದುಕೊಂಡಿದ್ದ ಕಥೆಯನ್ನು ಬರೆದು ಮುಗಿಸಿದರು. ಕೊನೆಯ ಸಾಲು ಬರೆದು ಮುಗಿಸಿದಾಗ ಏನೋ ಒಂದು ಭಾರ ತಲೆಯಿಂದ ಇಳಿದ ಹಾಗೆ ಅನಿಸಿತು. ಇದುವರೆಗೆ ಭಾರ ಹೊತ್ತುಕೊಂಡವನಂತೆ ಇದ್ದದ್ದು ಈಗ ನಿರಾಳ ಅನಿಸುತ್ತಿದೆ ಎಂದು ಭಾವಿಸುವುದು ಕೇವಲ ನನ್ನ ಕಲ್ಪನೆಯೇ? ಹೀಗೆಲ್ಲಾ ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳಬಾರದೆಂದು ಅನಿಸಿತು. ತಮ್ಮ ಗಂಡ ಮೂರ್ನಾಲಕ್ಕು ದಿನಗಳಿಂದ ಸಂಜೆ ವಾಕಿಂಗೂ ಬಿಟ್ಟು ಮತ್ತೆ ಲಾಪ್ಟಾಪ್ ಹಿಡಿದು ಕುಳಿತಿದ್ದು ಕಂಡು ರಾಯರ ಹೆಂಡತಿ ‘ಏನು ಮತ್ತೆ ಶುರು ಮಾಡಿದಿರಲ್ಲ ನಿಮ್ಮ ಹಳೇ ಚಾಳಿ? ಸಂಜೆ ವಾಕಿಂಗೂ ಬಿಟ್ಟಿದ್ದೀರಿ. ಏಕೆ? ಯಾರ ಜೊತೆಯಾದರೂ ಚಾಟಿಂಗೋ?’ ಮತ್ತಷ್ಟು ಓದು