ವಿಷಯದ ವಿವರಗಳಿಗೆ ದಾಟಿರಿ

Archive for

30
ಮಾರ್ಚ್

ಪೂಜೆಯ ಬಗ್ಗೆ ತಪ್ಪು ಕಲ್ಪನೆಗಳು ಮತ್ತು ಕಾರಣಗಳು.

ಭಾರತೀಯರ ಭಾಷೆ ಮತ್ತು ಚಿಂತನೆಯ ಮೇಲೆ ಅಬ್ರಹಾಮಿಕ್ ಮತಗಳ ಪ್ರಭಾವ ಹೇಗೆ ಆಗಿದೆ  ಹಾಗೂ  ಸುಶಿಕ್ಷಿತ ವರ್ಗದಲ್ಲಿ ಭಾರತೀಯತೆಯ ಬಗ್ಗೆ ತಾತ್ಸಾರಕ್ಕೆ ಕಾರಣಗಳು ಏನು ?

http://

28
ಮಾರ್ಚ್

ನೆನಪುಗಳೊಂದಿಗೆ ಯುಗಾದಿ…

– ಗೀತಾ ಹೆಗ್ಡೆ

ಅನೇಕ ಸಲ ನಾವಂದುಕೊಳ್ಳುತ್ತೇವೆ; ಈ ನೆನಪುಗಳು ಇರಲೇಬಾರದು. ಅದರಲ್ಲೂ ಕಹಿ ನೆನಪುಗಳಂತೂ ಪೂರ್ತಿ ಮರೆತು ಹೋಗಬೇಕು. ಬರಿ ಸಿಹಿ ಸಿಹಿ ನೆನಪುಗಳೆ ಇದ್ದರೆ ಸಾಕು. ಎಷ್ಟು ಖುಷಿಯಾಗಿರಬಹುದು. ಛೆ! ಯಾಕೆ ಬರುತ್ತೋ ಈ ನೆನಪು, ಜೀವ ಹೈರಾಣೋಗುತ್ತಿದೆ ಈ ಕೆಟ್ಟ ನೆನಪು. ಮರುಕಳಿಸಬಾರದಿತ್ತು. ಯಾರಲ್ಲೂ ಹೇಳಿಕೊಳ್ಳಲೂ ಆಗೋದಿಲ್ಲ, ಒಬ್ಬನೆ ಅನುಭವಿಸೋಕೂ ಆಗೋದಿಲ್ಲ. ರಾತ್ರಿ ನಿದ್ದೆ ಕೂಡಾ ಕಸಿದುಕೊಂಡುಬಿಡುತ್ತದಲ್ಲಾ. ಹಾಸಿಗೆಯಲ್ಲಿ ನಿದ್ದೆ ಇಲ್ಲದೆ ಹೊರಳಾಟ. ಅಬ್ಬಾ! ಎಷ್ಟು ಶಕ್ತಿ ಇದಕ್ಕೆ. ಮತ್ತಷ್ಟು ಓದು »

27
ಮಾರ್ಚ್

ನಿಮ್ಮ ಮಕ್ಕಳನ್ನು ಗಿಣಿಯಂತೆ ಸಾಕಿ ಪ್ರಗತಿಪರರ ಕೈಗೊಪ್ಪಿಸಬೇಡಿ..

– ಪ್ರವೀಣ್ ಕುಮಾರ್ ಮಾವಿನಕಾಡು

ಆಕೆ ನನಗಿಂತಾ ಎರಡು ಮೂರು ವರ್ಷ ದೊಡ್ಡವಳು. ನನ್ನದೇ ಶಾಲೆಯಲ್ಲಿ ನನ್ನ ಹಿರಿಯ ವಿದ್ಯಾರ್ಥಿಯಾಗಿದ್ದವಳು. ನನ್ನಂತೆಯೇ ನಾಲ್ಕೈದು ಮೈಲಿ ದೂರದಿಂದ ಗದ್ದೆ, ಬಯಲು, ಗುಡ್ಡ, ಹಾಡ್ಯ, ಒಳ ದಾರಿಗಳನ್ನು ದಾಟಿ ಶಾಲೆಗೆ ಬರುತ್ತಿದ್ದಳು. ನನಗೆ ಪಾಠ ಮಾಡಿದ ಶಿಕ್ಷಕರೇ ಆಕೆಗೂ ಪಾಠ ಮಾಡಿದ್ದರು. ಆದರೆ ಆಕೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆರಡರಲ್ಲೂ ನನಗಿಂತಲೂ ತುಂಬಾ ಚುರುಕಾಗಿದ್ದಳು. ಆದರೆ ನಾನಿನ್ನೂ ಬದುಕಿದ್ದೇನೆ. ಆಕೆ ಪೊಲೀಸರ ಗುಂಡಿಗೆ ಬಲಿಯಾಗಿ ಒಂದು ದಶಕವೇ ಕಳೆದಿದೆ!

ಆ ವರ್ಷ ನಮ್ಮ ಪ್ರೌಢಶಾಲೆಯ ಬೆಳ್ಳಿ ಹಬ್ಬ. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ನೂರಾರು ವಿದ್ಯಾರ್ಥಿಗಳು ಏಳನೇ ತರಗತಿ ಮುಗಿಸಿದ ನಂತರ ಸೇರುತ್ತಿದ್ದುದು ಅದೇ ಪ್ರೌಢಶಾಲೆಗೆ. ಹಾಗಾಗಿ ಹತ್ತಾರು ಹಳ್ಳಿಗಳಲ್ಲೂ ಬೆಳ್ಳಿ ಹಬ್ಬದ ಸಂಭ್ರಮ. ಬೆಳ್ಳಿ ಹಬ್ಬದ ಸಂಭ್ರಮವನ್ನು ಸ್ಮರಣೀಯಗೊಳಿಸಲು ಶಾಲೆಯಿಂದ ವಿದ್ಯಾರ್ಥಿಗಳ ಬರಹಗಳೇ ತುಂಬಿರುವ ಸ್ಮರಣಸಂಚಿಕೆಯೊಂದನ್ನು ಹೊರತರಲಾಯಿತು. ಆ ಸ್ಮರಣಸಂಚಿಕೆಯಲ್ಲಿ ಕೆಲವು ಮಕ್ಕಳು ನಗೆ ಹನಿಗಳನ್ನು ಬರೆದರೆ ಇನ್ನು ಕೆಲವು ವಿದ್ಯಾರ್ಥಿಗಳು ಮಲೆನಾಡಿನ ಸೊಬಗನ್ನು ವರ್ಣಿಸಿ ಬರೆದಿದ್ದರು. ಕೆಲವು ವಿದ್ಯಾರ್ಥಿಗಳು ಶಾಲೆಯ ಅನುಭವಗಳನ್ನು ಬರೆದರೆ ಇನ್ನು ಕೆಲವು ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಬೆಳಕು ಚೆಲ್ಲುವ ಬರಹಗಳನ್ನು ಬರೆದಿದ್ದರು. ಬುದ್ದಿವಂತೆ ಎಂದು ಗುರುತಿಸಿಕೊಂಡಿದ್ದ ಆಕೆ ಮಾತ್ರ ಬಡತನ, ಶೋಷಣೆ, ಜಮೀನ್ದಾರೀ ಪದ್ಧತಿಯ ಬಗ್ಗೆ ತನಗನ್ನಿಸಿದ ರೀತಿಯಲ್ಲಿ ಹಲವು ಬರಹಗಳನ್ನು ಬರೆದಿದ್ದಳು. ಮತ್ತಷ್ಟು ಓದು »

26
ಮಾರ್ಚ್

25 ಮಾರ್ಚ್ 1971: ಬಾಂಗ್ಲಾ ನರಮೇಧದ ದಿನ

– ಶ್ರೇಯಾಂಕ ಎಸ್ ರಾನಡೆ.

ನರಮೇಧವೆಂದರೆ ಉದ್ದೇಶಪೂರ್ವಕವಾಗಿ ಸಮುದಾಯವೊಂದರ ಮೇಲೆ ದೇಶ ಅಥವಾ ಭಿನ್ನ ಸಮುದಾಯದಿಂದ ನಡೆಯಲ್ಪಡುವ ಅಸಂಖ್ಯ ಜನರ ಮಾರಣಹೋಮ. ವಿಶ್ವ ಇತಿಹಾಸದ ವಿಜೃಂಭಿತ ಆಡುಂಬೋಲದಲ್ಲಿ, ಸೋಲು-ಗೆಲುವುಗಳ ರಕ್ತಸಿಕ್ತ ಪುಟಗಳಲ್ಲಿ ಅಸಂಖ್ಯ ನರಮೇಧಗಳು ನಡೆದಿವೆ. ಟರ್ಕರು, ಮಂಗೋಲಿಯನ್ನರು, ಜಪಾನಿಯರು, ಅಮೆರಿಕದ ಆಟಂ ಬಾಂಬ್‍ಗಳು, ಆಧುನಿಕ ಶಕ್ತಿಗಳು; ಹಿಟ್ಲರ್, ಮುಸೊಲೊನಿ, ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ರುವಾರಿ ಜನರಲ್ ಓ ಡಯರ್, ಸದ್ದಾಂ ಹುಸೇನ್, ಐಎಸ್‍ಐಎಸ್‍ನಂತಹ ಮತಾಂಧ ಕೆಡುಕುಗಳು, ಅದೆಷ್ಟೋ ವಿನಾಶಕಾರಿ ಶಕ್ತಿಗಳು, ಯುದ್ಧಪಿಪಾಸು ನರಹಂತಕರು ಹೀಗೆ ಸಾವಿನ ವ್ಯಾಪಾರಿಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಅರ್ಮೆನಿಯಾ, ರವಾಂಡ, ಸುಡಾನ್ ಮೊದಲಾದ ದೇಶಗಳ ಇತಿಹಾಸವೆಂದರೆ ಅದು ನರಮೇಧದ ಕರಾಳ ಇತಿಹಾಸವೆಂಬಂತಾಗಿಬಿಟ್ಟಿದೆ. ಮತ್ತಷ್ಟು ಓದು »

24
ಮಾರ್ಚ್

ಸಂಪ್ರದಾಯವೆಂದರೆ ಏನು.. ? ( ಸಂಸ್ಕೃತಿ ಸರಣಿ – ಭಾಗ ೩ )

ಜಗತ್ತಿನ ಎಲ್ಲ ನಾಗರೀಕತೆಗಳಿಗಿಂತ ಅತೀ ಪುರಾತನವಾದದ್ದು ಭಾರತೀಯ ನಾಗರೀಕತೆ.ಆದರೆ ಆ ಪ್ರಾಚೀನತೆ ಮಾತ್ರ ಅದರ ಹೆಗ್ಗಳಿಕೆ ಅಲ್ಲ. ಪ್ರಾಚೀನವಾದದ್ದೆಲ್ಲ ಉತ್ತಮ ಎಂಬ ಭ್ರಮೆ ಮತ್ತು ಕುರುಡು ಅಭಿಮಾನ ಉಚಿತವಲ್ಲ. ತಮ್ಮ ನಾಡೇ ಪ್ರಾಚೀನ, ಆ ಕಾರಣಕ್ಕೆ ತಮ್ಮ ಸಂತತಿಯೇ ಶ್ರೇಷ್ಠ, ನಾವೇ ಸುಸಂಸ್ಕೃತರು ಇತ್ಯಾದಿ ಅನೇಕ ಭ್ರಮೆಗಳನ್ನು ಐರೋಪ್ಯರು ಹೊಂದಿದ್ದರು.ಆ ಭ್ರಮೆಗಳ ಕಾರಣದಿಂದಾಗಿ ತಮ್ಮ ಸಾರ್ವಭೌಮತ್ವವನ್ನು ಎಲ್ಲರ ಮೇಲೆ ಹೇರಲು ಹೊರಟು, ಅನೇಕ ಜಾಗತಿಕ ಹಾಗೂ ಮಾನವೀಯ ಸಮಸ್ಯೆಗಳಿಗೆ ಕಾರಣರಾಗಿದ್ದಾರೆ. ಮತ್ತಷ್ಟು ಓದು »

23
ಮಾರ್ಚ್

ಮೇರಾ ರಂಗ್ ದೇ ಬಸಂತಿ ಚೋಲಾ…

ಶಿವಾನಂದ ಶಿವಲಿಂಗಪ್ಪ ಸೈದಾಪೂರ (ಎಂ.ಎ.ವಿದ್ಯಾರ್ಥಿ)
ರಾಜ್ಯ ಕಾರ್ಯಕಾರಣಿ ಸದಸ್ಯರು
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್
ರಾಣಿಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ

ಸುಮಾರು ನೂರಾರು ವರ್ಷಗಳ ಕಾಲ ಪರಾಧೀನತೆಯನ್ನು ಕಿತ್ತೊಗೆಯಲು ಲಕ್ಷಾಂತರ ಜನ ತಮ್ಮ ಬಿಸಿ ನೆತ್ತರವನ್ನು ನೀರಾಗಿ ಹರಿಸಿ ನಮಗಾಗಿ, ನಮ್ಮ ಉಳಿವಿಗಾಗಿ ಹೋರಾಡಿ ಜೀವವನ್ನೇ ತೆತ್ತು ಇಂದಿನ ಸುಭದ್ರತೆಗೆ ಕಾರಣರಾದರು. 1857ರ ಮಹಾ ಸಂಗ್ರಾಮದಿಂದ 1947 ರ ವರೆಗೆ ಅನೇಕಾನೇಕ ಕ್ರಾಂತಿಕಾರಿ ಮಹನೀಯರು ಕಾರಣೀಕರ್ತರಾಗಿದ್ದಾರೆ. ಅಂತಹವರಲ್ಲಿ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕ್ರಾಂತಿಯ ಹೊಸ ಅಧ್ಯಾಯವನ್ನೇ ಬರೆದ ಮಹಾನ್ ಹೋರಾಟಗಾರರೆಂದರೆ ಅದು ಭಗತ್ ಸಿಂಗ್, ಸುಖದೇವ್, ರಾಜಗುರುರವರು. ಕ್ರಾಂತಿಯ ಇತಿಹಾಸದಲ್ಲಿ ಅವರ ಆತ್ಮ ಬಲಿದಾನವೇ ಅತ್ಯಂತ ಪ್ರಮುಖದೆಂದು ಹೇಳಬಹುದು. ದಾಸ್ಯ ಮುಕ್ತಿಗಾಗಿ, ತಮ್ಮ ಜೀವನದ ಅಂತಿಮ ಹೊತ್ತಿನಲ್ಲಿಯೂ ಕೂಡ ನಗು ನಗುತ ತಾಯಿ ಭಾರತಮಾತೆಯನ್ನು ಮೇರಾ ರಂಗ್ ದೇ ಬಸಂತಿ ಚೋಲಾ… ಎಂದು ಗುಣಗಾನ ಮಾಡುತ್ತ ಉರುಳನು ಚುಂಬಿಸಿ ನೇಣಿನ ಕುಣಿಕೆಗೆ ಕೊರಳನ್ನೊಡ್ಡಿದ್ದರು.

ಅಂತಹ ಮಹಾನ್ ಹೋರಾಟಗಾರರ ಬಲಿದಾನವಾಗಿ 87 ವರ್ಷ ಉರುಳಿದವು. ಅದರ ಸ್ಮರಣೆಯೇ ಈ ಲೇಖನ. ಮತ್ತಷ್ಟು ಓದು »

22
ಮಾರ್ಚ್

ಪೀರಾಯರ ಒಂದು ಕಥಾನಕ – ನೀಳ್ಗತೆ ಭಾಗ ೪

– ಮು. ಅ. ಶ್ರೀರಂಗ, ಬೆಂಗಳೂರು

ಪೀರಾಯರು ಎದ್ದಾಗ ಎಂಟು ಗಂಟೆಯಾಗಿತ್ತು. ರಾತ್ರಿ ಕೃಷ್ಣಾಚಾರ್ಯ ಮಲಗಿದ್ದ ಹಾಸಿಗೆ ನೀಟಾಗಿ ಸುತ್ತಿ ಇಟ್ಟಿತ್ತು. ರಾಯರು ಮುಖ ತೊಳೆದು ಬಂದು ಅಂದಿನ ಪೇಪರ್ ಹಿಡಿದು ಕೂತರು. ಕಾಫಿ ತಂದ ರಾಯರ ಹೆಂಡತಿ
‘ಕೃಷ್ಣಾಚಾರ್ಯರು ಏಳು ಗಂಟೆಗೆ ಎದ್ದು ಮನೆಗೆ ಹೋದ್ರು.. ತಿಂಡಿ ತಿಂದು ಹೋಗಿ ಎಂದು ನಾನು ಬಲವಂತ ಮಾಡಿದರೂ ಇನ್ನೊಂದು ಸಲ ಬರ್ತೀನಿ’ ಅಂದ್ರು..
‘ನನ್ನನ್ನು ನೀನು ಎಬ್ಬಿಸಬಾರದಿತ್ತೇ?’
‘ಅವರೇ ಬೇಡ, ನಿದ್ದೆ ಮಾಡಲಿ. ನಿನ್ನೆ ರಾತ್ರಿ ನಾವು ಹಳೆ ಸಂಗತಿಗಳನ್ನೆಲ್ಲಾ ಎರಡು ಗಂಟೆ ತನಕ ಮಾತಾಡುತ್ತಾ ಇದ್ವು ಎಂದ್ರು.. ಏನು ಅಂತ ರಾಜ ರಹಸ್ಯನಪ್ಪ ಅದು?’
‘ಏನೂ ಇಲ್ಲ ಕಣೆ. ಹೀಗೆ ಸುಮ್ಮನೆ’.
‘ಆಯ್ತು ನಂಗೆ ಅಡಿಗೆ ಮನೇಲಿ ಕೆಲಸ ಇದೆ ಹೋಗ್ತೀನಿ’ ಮತ್ತಷ್ಟು ಓದು »

20
ಮಾರ್ಚ್

ನಾವೆಲ್ಲರೂ ಒಂದೇ..‌.

– ಗೀತಾ ಹೆಗ್ಡೆ

ಒಂದಿಲ್ಲೊಂದು ಕಾರಣಗಳಿಂದ ನೀನು ಹಿಂದು, ನೀನು ಕ್ರಿಶ್ಚಿಯನ್, ನೀನು ಮುಸ್ಲಿಂ ಹೀಗೆ ಅವರವರ ಧರ್ಮದ ಹೆಸರಲ್ಲಿ, ಒಂದಿನಿತೂ ಅವರ ಮನಸ್ಸಿನಲ್ಲಿ ನಾವೆಲ್ಲ ಒಂದೇ ಅನ್ನುವ ಭಾವನೆ ಬೆಳೆಯಲು ಈ ಸಮಾಜ ಯಾಕೆ ಅನುವು ಮಾಡಿಕೊಡುತ್ತಿಲ್ಲ.. ಇದು ಸದಾ ಕಾಡುವ ನನ್ನೊಳಗಿನ ಪ್ರಶ್ನೆ. ಎಷ್ಟೋ ಸಾರಿ ಜೀವನದ ಅನೇಕ ವೇಳೆಯಲ್ಲಿ ಎದುರಾಗುವ ಮಾನವೀಯ ಜನರು ನಮ್ಮ ಕಷ್ಟ ಸುಃಖಕ್ಕೆ ಸ್ಪಂಧಿಸಿರುತ್ತಾರೆ. ಅವರ ಒಡನಾಟದಲ್ಲಿ ನಾವು ಜಾತಿಯ ಬಗ್ಗೆ ಯೋಚನೆಯನ್ನೆ ಮಾಡುವುದಿಲ್ಲ. ಅಷ್ಟು ನಮ್ಮೊಳಗಿನ ಮನಸ್ಸು ಬೇಧ ಭಾವ ಮರೆತು ಕೇವಲ ಅವರ ಒಳ್ಳೆಯ ನಡೆ ನುಡಿಗಳಲ್ಲಿ ತಲ್ಲೀನವಾಗಿರುತ್ತದೇ. ಆದರೆ ‌ಸಮಾಜದ ಕೆಲವು ವ್ಯಕ್ತಿಗಳು ಇಷ್ಟು ಮುಕ್ತ ಮನಸ್ಸಿನಿಂದ ಬದುಕಲು ಬಿಡುವುದಿಲ್ಲ. ಆಗಾಗ ಅವರ ಚುಚ್ಚು ಮಾತುಗಳನ್ನು ಕೇಳಬೇಕಾಗುತ್ತದೆ. ಅಲ್ಲಿ ನಮ್ಮ ಬದುಕಿನ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದನ್ನು ಪ್ರತಿಭಟಿಸುವಷ್ಟು ಶಕ್ತಿ ಎಲ್ಲರಲ್ಲೂ ಇರುವುದಿಲ್ಲ. ಸಮಾಜದ ಕಟ್ಟು ಕಟ್ಟಳೆಗೆ ತಲೆ ಬಾಗಲೇ ಬೇಕಾಗುತ್ತದೆ. ಅಂಥದೊಂದು ಘಟನೆ ಎದುರಿಸಿದ ಸಂದರ್ಭವಿದು. ಮತ್ತಷ್ಟು ಓದು »

17
ಮಾರ್ಚ್

ಸಂಸ್ಕೃತಿ ಸರಣಿ – ಭಾಗ ೨ : ಪೂಜೆ

ಜಗತ್ತಿನ ಎಲ್ಲ ನಾಗರೀಕತೆಗಳಿಗಿಂತ ಅತೀ ಪುರಾತನವಾದದ್ದು ಭಾರತೀಯ ನಾಗರೀಕತೆ.ಆದರೆ ಆ ಪ್ರಾಚೀನತೆ ಮಾತ್ರ ಅದರ ಹೆಗ್ಗಳಿಕೆ ಅಲ್ಲ. ಪ್ರಾಚೀನವಾದದ್ದೆಲ್ಲ ಉತ್ತಮ ಎಂಬ ಭ್ರಮೆ ಮತ್ತು ಕುರುಡು ಅಭಿಮಾನ ಉಚಿತವಲ್ಲ. ತಮ್ಮ ನಾಡೇ ಪ್ರಾಚೀನ, ಆ ಕಾರಣಕ್ಕೆ ತಮ್ಮ ಸಂತತಿಯೇ ಶ್ರೇಷ್ಠ, ನಾವೇ ಸುಸಂಸ್ಕೃತರು ಇತ್ಯಾದಿ ಅನೇಕ ಭ್ರಮೆಗಳನ್ನು ಐರೋಪ್ಯರು ಹೊಂದಿದ್ದರು.ಆ ಭ್ರಮೆಗಳ ಕಾರಣದಿಂದಾಗಿ ತಮ್ಮ ಸಾರ್ವಭೌಮತ್ವವನ್ನು ಎಲ್ಲರ ಮೇಲೆ ಹೇರಲು ಹೊರಟು, ಅನೇಕ ಜಾಗತಿಕ ಹಾಗೂ ಮಾನವೀಯ ಸಮಸ್ಯೆಗಳಿಗೆ ಕಾರಣರಾಗಿದ್ದಾರೆ. ಮತ್ತಷ್ಟು ಓದು »

16
ಮಾರ್ಚ್

ಉತ್ತರಕಾಂಡದೊಳಗೆ ಉಳಿದ ಒಂದಷ್ಟು ಪ್ರಶ್ನೆಗಳು.

– ನರೇಂದ್ರ ಎಸ್ ಗಂಗೊಳ್ಳಿ.

ಎಸ್ ಎಲ್ ಭೈರಪ್ಪನವರ ಬರಹಗಳನ್ನು ದೊಡ್ಡ ನೆಲೆಯಲ್ಲಿ ವಿಮರ್ಶಿಸುವಷ್ಟು ನಾನು ಓದಿಕೊಂಡವನಲ್ಲ. ಇಲ್ಲಿ ಉತ್ತರಕಾಂಡ ಓದಿದ ಬಳಿಕ ಓರ್ವ ಓದುಗನಾಗಿ ನನಗೆ ಅನ್ನಿಸಿದ್ದನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಒಂದು ಪ್ರಯತ್ನವಿದು.

ನಿಜ ಉತ್ತರಕಾಂಡ ಓದಿದ ಬಳಿಕ ಒಂದು ದೊಡ್ಡದಾದ ನಿಟ್ಟುಸಿರು ಎಂತವರಿಗಾದರೂ ಹೊರಬಾರದಿರದು. ರಾಮಾಯಣದ ಕತೆ ತಿಳಿದಿಲ್ಲದವರಿಗೆ ಇಲ್ಲಿನ ವಿಷಯಗಳು ಬರೀ ಶಬ್ದಗಳಾಗಿಯಷ್ಟೇ ಉಳಿಯುವುದು ಸತ್ಯ. ಆದರೆ ರಾಮಾಯಣವನ್ನು ಅರಿತವರಿಗೆ ಇಲ್ಲಿನ ಸೀತೆಯ ದೃಷ್ಟಿಯಿಂದ ನೋಡಿದಂತಹ ರಾಮಾಯಣದ ದೃಷ್ಟಿಕೋನ ಹೊಸತೇಯಾದ ಅನುಭವವನ್ನು ನೀಡುವುದು ಅಷ್ಟೇ ಸತ್ಯ. ಭೈರಪ್ಪನವರ ಹಿಂದಿನ ಕಾದಂಬರಿ ಪರ್ವಕ್ಕೆ ಹೋಲಿಸಿದರೆ ಕೊಂಚ ನೀರಸ ಎನ್ನಿಸಿದರೂ ಇಡೀ ಕಾದಂಬರಿಯಲ್ಲಿ ಭೈರಪ್ಪನವರು ಕಟ್ಟಿಕೊಡುವ ಊರು, ರಾಜ್ಯ, ಹೊಲ, ದಂಡಕಾರಣ್ಯ, ಅಂತಪುರ, ದಾಸಿಯರು, ಪ್ರಕೃತಿ, ಸಂಬಂಧಗಳು, ಮಾತುಗಳು, ಧರ್ಮ, ಮಕ್ಕಳಾಟ ಹೀಗೆ ಎಲ್ಲದರ ಚಿತ್ರಣವೂ ಒಂದಕ್ಕಿಂತ ಒಂದು ಚೆಂದ ಎನ್ನಿಸುವಂತೆ ಮೂಡಿಬಂದಿದೆ. ಮತ್ತಷ್ಟು ಓದು »