ಯಡಿಯೂರಪ್ಪನವರಿಗೊಂದು ಪತ್ರ…
– ಸಂದೀಪ್ ಕುಮಾರ್ ಶೆಟ್ಟಿ
ಪ್ರೀತಿಯ ಯಡಿಯೂರಪ್ಪ ಅವರೆ,
ಪ್ರೇಮಪೂರ್ವಕ ನಮಸ್ಕಾರಗಳು. ಮೊನ್ನೆಯ ದಿನ ಭಾರತೀಯ ಜನತಾ ಪಕ್ಷದ ಪಾಲಿಗೆ ಅಷ್ಟೇನೂ ಆಶಾದಾಯಕವಾದ ದಿನ ಅಲ್ಲ. ಉಪಚುನಾವಣೆಯ ಫಲಿತಾಂಶ ಪಕ್ಷದ ವಿರುದ್ಧವಾಗಿ ಬಂದಿದೆ. ಪಕ್ಷದ ಸಂಘಟನೆಯಲ್ಲಿ ಮೂರು ದಶಕಗಳಿಗೂ ಹೆಚ್ಚಾಗಿ ದುಡಿದ ನಿಮಗೆ ಈ ರೀತಿಯ ಹಿನ್ನಡೆ ಹೊಸದು ಅಲ್ಲ, ತಿಳಿಯದೆ ಇರುವುದೂ ಅಲ್ಲ, ರಾಜಕೀಯ ಜೀವನದಲ್ಲಿ ಇದು ಸಾಮಾನ್ಯ ಮತ್ತು ಸ್ವಾಭಾವಿಕ ಕೂಡ. ಆತ್ಮೀಯ ಸ್ನೇಹಿತ, ಸಂಸದ ಪ್ರತಾಪ ಹೇಳಿದ ರೀತಿಯಲ್ಲಿ ಇದು ಆಳಿಗೊಂದು ಕಲ್ಲು ಅಲ್ಲ ಬದಲಾಗಿ ಇದು ನಿಮ್ಮ ಸುತ್ತ ಮುತ್ತ ಇರುವ, ಆದರೆ ನಿಮ್ಮನ್ನು ಮಾತನಾಡಿಸಲು ಸಾಧ್ಯವಿಲ್ಲದ, ಹಿತೈಷಿಗಳ ಪ್ರತಿನಿಧಿಯಾಗಿ ಈ ಸಂಧರ್ಭದಲ್ಲಿ ಹೇಳಲು ಇಚ್ಛಿಸುತ್ತೇನೆ. ಮತ್ತಷ್ಟು ಓದು