IT/ED RAID ಗಳು ಹೇಗೆ ನಡೆಯುತ್ತವೆ?
ಗುಜರಾತಿನ ಶಾಸಕರನ್ನು ಬೆಂಗಳೂರಿನ ರೆಸಾರ್ಟಿನಲ್ಲಿ ತಂದಿಟ್ಟ ೩-೪ ದಿನಗಳ ಒಳಗೆಯೇ,ರಾಜ್ಯ ಸರ್ಕಾರದ ಪವರ್ ಮಿನಿಸ್ಟರ್ ಡಿ.ಕೆ ಶಿವಕುಮಾರ್ ಮೇಲೆ ನಡೆದ ಐಟಿ ದಾಳಿಯನ್ನು,ರಾಜ್ಯ ಸರ್ಕಾರ,ಕಾಂಗ್ರೆಸ್ ,ಕಾಂಗ್ರೆಸ್ ಬೆಂಬಲಿಸುವ ಪತ್ರಕರ್ತ ಮುಖವಾಡಗಳು ಮತ್ತು ಬೆಂಬಲಿಗರೂ ಅದೇ ರಾಗವನ್ನು ಹಾಡಿದರು.ರೇಡ್ ಎಂದರೇನು,ಅದಕ್ಕೆ ಬೇಕಾದ ಪೂರ್ವ ತಯಾರಿಗಳೇನು? ಹೇಗೆ ನಡೆಯುತ್ತದೆ ಎಂಬೆಲ್ಲ ಅಂಶಗಳು ಜನಸಾಮಾನ್ಯರಿಗೆ ತಿಳಿದಿರುವುದಿಲ್ಲ.ಅಂತಹ ಮಾಹಿತಿಯನ್ನು ಒಳಗೊಂಡ ಲೇಖನವಿದು.
– ಜೆಬಿಆರ್ ರಂಗಸ್ವಾಮಿ
IT/ED RAID ಆಗುತ್ತೆ ಅಂದರೆ ಬಲವತ್ತರವಾದ ಸಾಕ್ಷ್ಯಾಧಾರ ಗಳು ಇರಲೇಬೇಕು.ನೂರಿಪ್ಪತ್ತು ನೂರಮೂವತ್ತು ಅಧಿಕಾರಿಗಳು 150 ಕಾರುಗಳಲ್ಲಿ ಸಿಬ್ಬಂದಿಯನ್ನು ತುಂಬಿಕೊಂಡು, ಏಕಕಾಲದಲ್ಲಿ 39 – ರಿಂದ – 64 ಕಡೆ ರೇಡ್ ಮಾಡಲು ಹೊರಟರೆಂದರೆ ತಿಂಗಳೇನು? ವರ್ಷಗಟ್ಟಲೇ ಪೂರ್ವಸಿದ್ಧತೆ ನಡೆದಿರುತ್ತೆ.ಗುಜರಾತಿನ ಗುಜರಿ ಶಾಸಕರ ಸಲುವಾಗಿ ರೇಡ್ ಆಗಿದೆ ; ಪ್ರಜಾತಂತ್ರದ ಕಗ್ಗೊಲೆ ಯಾಗಿದೆ ಎಂಬಂತಹ ಪ್ರಲಾಪಗಳೆಲ್ಲವೂ ಅಜ್ಞಾನಿ ಹೇಳಿಕೆಗಳು ಮಾತ್ರ.ಎಮ್ಮೆ ಗಂಜಲ ಹುಯ್ದರೆ ಇರುವೆ ಕಣ್ಣಿಗೆ ಅದೇ ದೊಡ್ಡ ಜಲಪಾತದಂತೆ ಕಾಣುತ್ತೆ.ಈ ಪುಢಾರಿಗಳು ಪುಟಗೋಸಿ ರೆಸಾರ್ಟ್ ರಾಜಕೀಯವನ್ನೇ ಅಂತರಾಷ್ಟ್ರೀಯ ಮಟ್ಟದಷ್ಟು ದೊಡ್ಡದು ಅಂದುಕೊಂಡಿವೆ.
ಇರಲಿ.ಇಂತಹ ರೇಡ್ ಗಳ ಹಿನ್ನೆಲೆ ಹೇಗಿರುತ್ತೆ? ಹೇಗೆ,ಯಾಕೆ,ಯಾವ ಸಂದರ್ಭಗಳಲ್ಲಿ ರೇಡ್ ಮಾಡುತ್ತಾರೆ? ಎಂಬುದರ ವಾಸ್ತವಾಂಶಗಳನ್ನು ನೋಡಿ :
1 ) ರೇಡ್ ಆಗುವವನ ಅನೇಕ ವ್ಯವಹಾರ,ಅವ್ಯವಹಾರ ಕುರಿತಂತೆ ನಾನಾ ಮೂಲಗಳಿಂದ ನಾನಾ ದೂರುಗಳು ಮೊದಲೇ ಬಂದಿರುತ್ತವೆ.ಅವುಗಳ ಸತ್ಯಾಸತ್ಯತೆಗಳ ಬಗ್ಗೆ ಕೂಲಂಕುಷ ಗೋಪ್ಯ ವಿಚಾರಣೆ ತಿಂಗಳುಗಟ್ಟಲೇ ನಡೆದಿರುತ್ತೆ. ಅವುಗಳಲ್ಲಿ ಸತ್ಯಾಂಶ ಇರುವ ಸಂಗತಿಗಳು ಪಟ್ಟಿಯಾಗುತ್ತವೆ.ಇದೊಂದು ದೊಡ್ಡ ಕಸರತ್ತು.ಸಂಗ್ರಹಿಸಿರುವ ಮಾಹಿತಿ ನಿಜವೋ ಅಲ್ಲವೋ ಮತ್ತೆ ಮತ್ತೆ ಖಚಿತ ಪಡಿಸಿಕೊಳ್ಳುತ್ತಾರೆ. (sec 132 IT Act).
2 ) ಎಲ್ಲೆಲ್ಲಿ ರೇಡ್ ಮಾಡಬೇಕೋ ಆಯಾ ಮನೆ,ಜಾಗಗಳ ಪಕ್ಕಾ #ಚಕ್ಕುಬಂದಿ ಪಟ್ಟಿ ತಯಾರಾಗುತ್ತದೆ.ಆ ಮನೆಗೆ ರೇಡ್ ಮಾಡಲು ಎಷ್ಟು ಜನ ಅಧಿಕಾರಿ ಸಿಬ್ಬಂದಿ ನಿಯೋಜಿಸಬೇಕು ಎಂಬುದರ ಯೋಜನೆಯೂ ಸಿದ್ದವಾಗುತ್ತದೆ.
ನೆನಪಿರಲಿ : ಯಾವ ಅಧಿಕಾರಿಯ ನೇತೃತ್ವದಲ್ಲಿ ರೇಡ್ ಆಗುತ್ತದೆಯೋ,ಸ್ವತಃ ಆ ಅಧಿಕಾರಿ ಸಿಬ್ಬಂದಿಗಳಿಗೇ ತಾವು ಎಲ್ಲಿಗೆ,ಯಾರ ಮನೆಗೆ ದಾಳಿ ಇಡುತ್ತೇವೆ ಎಂಬ ವಿಷಯ ಕೊನೆಯತನಕ ತಿಳಿದಿರುವುದಿಲ್ಲ ! ( ನನ್ನದೇ ಅನುಭವ ! )
ಅದು ಅಷ್ಟು ಗೋಪ್ಯ. SECRET! And the Meaning of the secret is SECRET ONLY !