ನಮ್ಮೂರ ಹಬ್ಬ : ತಿಂಗಳು ಮಾಮನ ಹಬ್ಬ
– ಶಾಂತಮ್ಮ ಕೋಡಯ್ಯ
ನಮ್ಮೂರ ಹಬ್ಬ ಪ್ರಬಂಧ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದ ಲೇಖನ
ಪೀಠಿಕೆ: ಹಬ್ಬಗಳು ಗ್ರಾಮದ ಅವಿಭಾಜ್ಯ ಅಂಗಗಳು ಹಳ್ಳಿಗರಿಗೆ ಹಬ್ಬಗಳೇ ಜೀವಾಳ. ಹಬ್ಬಗಳೇ ಮಾದ್ಯಮಗಳು, ಮನೋರಂಜನೆಗಳು.. ನಮ್ಮ ಪೂರ್ವಜರಿಂದ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ಪರಿಚಯಿಸುವ ನಮ್ಮ ಜೀವನದಲ್ಲಿ ಸುಂದರ ಅನುಭವಗಳು ಮತ್ತು ಬಾಲ್ಯ, ಯೌವನ, ಮುಪ್ಪು, ಪ್ರೇಮ ಮುಂತಾದವುಗಳ ಸಂಗಮ. ಹಬ್ಬಗಳು ಹಳ್ಳಿಗರ ಪ್ರತಿಷ್ಠೆ ಕೂಡ ಹೌದು. ಎಲ್ಲ ಜಾತಿಯವರು ಬೆರೆತು, ಭೇದ ಮರೆತು ಒಂದಾಗುವ ಪರಿ ಅದ್ಭುತ. ನಮ್ಮ ಹಿರಿಯರ ಹಾಡು, ಹಸೆ, ಬೈಗುಳ, ಬೆಡಗು, ಬಿನ್ನಾಣ, ಕಾರ್ಯ ವೈಖರಿ ಎಲ್ಲ ಸಂಸ್ಕೃತಿಯನ್ನ ಹೊಂದಿ ಬೆಳೆಯಲು ಸಹಾಕಾರಿ ಈ ತಿಂಗಳಮಾಮನ ಹಬ್ಬ. ಮತ್ತಷ್ಟು ಓದು
ವಿಜಯನಗರ ಸಾಮ್ರಾಜ್ಯದ ಧ್ವಜವೇ ಕರ್ನಾಟಕದ ಧ್ವಜವಾಗಲಿ
– ರಾಕೇಶ್ ಶೆಟ್ಟಿ
“ನಿಮ್ಮಲ್ಲಿ ಕತ್ತರಿಸುವ ಕತ್ತರಿಯಿದೆ. ನಮ್ಮಲ್ಲಿ ಹೊಲಿಯುವ ಸೂಜಿಯಿದೆ.ಅಂತಿಮ ಗೆಲುವು ಸೂಜಿಯದ್ದು.ಕತ್ತರಿಯದ್ದಲ್ಲ. #ಬೆಂಕಿ ಆರಿಸಿ ಬೆಳಕು ಹಚ್ಚುವ” ಹೀಗೊಂದು ಟ್ವೀಟನ್ನು ಬಿಜೆಪಿಯವರನ್ನು ಉದ್ದೇಶಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಟ್ವಿಟರ್ ಖಾತೆಯಿಂದ ಹತ್ತು ದಿನಗಳ ಹಿಂದೆ ಮಾಡಿದ್ದರು.ಅದಾದ ನಂತರ ಸಾಹೇಬರ ಪಕ್ಷ ಮತ್ತು ಸರ್ಕಾರ ರಾಜ್ಯದಲ್ಲಿ ನಡೆಸುತ್ತಿರುವ ಚುನಾವಣಾ ರಾಜಕೀಯದ ಪರಿ ನೋಡಿದರೆ,ಸಿಎಂ ಸಿದ್ಧರಾಮಯ್ಯನವರ ಬಳಿಯಿರುವುದು ಸೂಜಿಯಲ್ಲ, ವಿಭಜನಕಾರಿ “ಕೊಡಲಿ” ಎನ್ನುವುದು ಮನವರಿಕೆಯಾಗುತ್ತಿದೆ.ಭಾಷೆ,ಧರ್ಮ,ಜಾತಿ ಹೀಗೆ ವಿಭಜನೆಯ ಎಲ್ಲಾ ದಾಳಗಳನ್ನು ಬಳಸಿಕೊಂಡು ರಾಜ್ಯ ಹಾಳಾದರೂ ಸರಿಯೇ ಮತ್ತೊಮ್ಮೆ ಅಧಿಕಾರದ ಪೀಠವೇರಬೇಕು ಎಂದು ಹೊರಟು ನಿಂತಿದ್ದಾರೆ. ಪಾಪ! ಸಾಹೇಬರಿಗೆ ಅರ್ಥವಾಗದಿರುವುದೇನೆಂದರೆ ತಾವು ಕುಳಿತಿರುವ ಕೊಂಬೆಯನ್ನೇ ಅವರು ಕಡಿಯುತ್ತಿರುವುದು. ಕೊಂಬೆ ಮುರಿದಾಗ ಅವರು ಸೇರಬಹುದಾದ ಪ್ರಪಾತದ ಅರಿವು ಸಾಹೇಬರಿಗೆ ಇಲ್ಲವೋ ಅಥವಾ ತಮ್ಮ ರಾಜಕೀಯ ಜೀವನದ ಕೊನೆ ಇನ್ನಿಂಗ್ಸನ್ನು ಗೆಲ್ಲಲ್ಲು ಸಮಾಜದ ಏಕತೆಗೆ ಭಂಗವಾದರೂ ಸರಿಯೇ ಎನ್ನುವ ಧೋರಣೆಯಲ್ಲಿದ್ದಾರೆ.
ಪ್ರತ್ಯೇಕ ಲಿಂಗಾಯಿತ ಧರ್ಮ ಬೇಕೆನ್ನುವ ಕೂಗು ಏಳಲು ಕಾರಣವಾಗಿದ್ದೆ ಸಿಎಂ ಅಭಿನಂದನಾ ಸಮಾರಂಭದಲ್ಲಿ ನೀಡಿದ ಹೇಳಿಕೆಯಿಂದಾಗಿ. ಧರ್ಮ,ಮತ, ರಿಲಿಜನ್, ಸಂಪ್ರದಾಯಗಳ ನಡುವಿನ ವ್ಯತ್ಯಾಸ ತಿಳಿಯದವರೆಲ್ಲಾ (ಕೆಲವು ಕಾವಿಧಾರಿಗಳನ್ನೂ ಸೇರಿಸಿ) ಈ ವಿಷಯದ ತರೇವಾರಿ ಮಾತನಾಡುವದು ಕೇಳಿದಾಗ ಸಮಾಜದಲ್ಲಿ ಮೂರ್ಖರ ಸಂಖ್ಯೆಯೇನು ಕಡಿಮೆಯಿಲ್ಲ ಎನ್ನುವುದು ಖಾತ್ರಿಯಾಗುತ್ತದೆ. ಆ ವಿಷಯ ಪಕ್ಕಕ್ಕಿಟ್ಟು ನೋಡಿದರೆ, ನಮ್ಮ ಸಿಎಂ ಸಾಹೇಬರು ಕೊಡಲಿ ಹಿಡಿದು ಹೊರಟಿರುವ ಮತ್ತೊಂದು ವಿಷಯ ರಾಜ್ಯಕ್ಕೊಂದು ಪ್ರತ್ಯೇಕ ಧ್ವಜ ಬೇಕು ಎಂದು ಎಬ್ಬಿಸಿರುವ ಕೂಗಿನಿಂದ. ಈ ರಾಜ್ಯದಲ್ಲಿ (ಅಧಿಕೃತ)ವಲ್ಲದಿದ್ದರೂ 1960ರಲ್ಲಿ ಮ.ರಾಮಮೂರ್ತಿಯವರೂ ಕನ್ನಡಕ್ಕೊಂದು ಧ್ವಜವನ್ನು ರೂಪಿಸಿದ್ದರು. ಇಂದಿಗೂ ಜನಮಾನಸದಲ್ಲಿ ಅದೇ ಧ್ವಜ ಚಿರಸ್ಥಾಯಿಯಾಗಿದೆ. ಗೋಕಾಕ್ ಚಳವಳಿಯಿಂದ ಹಿಡಿದು ಇತ್ತೀಚಿನ ಕಂಬಳ ಹೋರಾಟದಲ್ಲೂ ಸ್ಫೂರ್ತಿ ನೀಡಿದ್ದು ಅದೇ ಅರಿಶಿಣ-ಕುಂಕುಮದ ಧ್ವಜವೇ.