ವಿಷಯದ ವಿವರಗಳಿಗೆ ದಾಟಿರಿ

Archive for

27
ಸೆಪ್ಟೆಂ

ಬುಲೆಟ್, ಬಾಂಬ್, ಕ್ಷಿಪಣಿಗಳ ಯುಗದಲ್ಲಿ ಭಾರತದಲ್ಲೊಂದು “ಬುಲೆಟ್ ಟ್ರೈನ್”.

-ಶ್ರೇಯಾಂಕ ಎಸ್ ರಾನಡೆ.

“ಬುಲೆಟ್” ಎಂಬ ಪ್ರಗತಿಯ ಪಟರಿ(Track):

ವಿಶ್ವದ ಬಹುತೇಕ ರಾಷ್ಟ್ರಗಳು, ಪ್ರದೇಶಗಳು ಒಂದಿಲ್ಲೊಂದು ಕಾರಣದಿಂದ ಬುಲೆಟ್, ಬಾಂಬ್, ಕ್ಷಿಪಣಿಗಳನ್ನು ಹಿಡಿದು ನಿಂತಿವೆ. ಕೆಲವು ಸಾಮ್ರಾಜ್ಯ ವಿಸ್ತರಣೆಗೆ ಅವನ್ನು ಹಿಡಿಯುತ್ತಿದ್ದರೆ ಮತ್ತೆ ಕೆಲವರು ಅವರನ್ನು ತಡೆಯುವುದಕ್ಕಾಗಿಯೋ ಅಥವಾ ತಮ್ಮ ಅಸ್ಮಿತೆಯ ರಕ್ಷಣೆಗಾಗಿಯೋ ಅಥವಾ ತಮ್ಮನ್ನು ನೆಚ್ಚಿದವರನ್ನು ಕಾಪಾಡಲೋ ಹೀಗೆ ಕಾರಣಗಳು ಹಲವಿದ್ದರೂ ಕೈಯಲ್ಲಿರುವುದು ವಿನಾಶಕಾರಿ ಆಯುಧಗಳು. ಸಿರಿಯಾ, ವೆನೆಜುವೆಲಾದಂತಹ ಕಡೆ ನಾಗರಿಕ ಯುದ್ಧವಾಗುತ್ತಿದ್ದರೆ; ಉತ್ತರ ಕೊರಿಯಾ, ಚೀನಾದಂತಹ ದೇಶಗಳು ಆಕ್ರಮಣಕ್ಕಾಗಿ ಸದಾ ಸಿದ್ಧವಾಗಿವೆ. ಭಯೋತ್ಪಾದನೆ, ಮತಾಂಧತೆಯಿಂದ ಮಧ್ಯಪ್ರಾಚ್ಯ, ಪಶ್ಚಿಮ ಏಷ್ಯಾದ ಪರಿಸ್ಥಿತಿ ರಕ್ತದ ಮಡುವಿನಲ್ಲಿ ಮುಳುಗುವಂತೆ ಮಾಡಿದೆ. ಹೀಗೆ ಒಂದಿಲ್ಲೊಂದು ಕಾರಣಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಯ ಬದಲಿಗೆ ಅಧಿಕಾರ ಕೇಂದ್ರಿತ “ಹಿಂಸೆ” ಶಕ್ತಿ ರಾಜಕಾರಣದ ಪ್ರಬಲ ಅಸ್ತ್ರವಾಗಿದೆ. ಮತ್ತಷ್ಟು ಓದು »

26
ಸೆಪ್ಟೆಂ

ನಂಬುಗೆಯೆಂಬ ಅಡಿಪಾಯದಲ್ಲಿ ವೈಚಾರಿಕತೆಯ ಸ್ಥಾನ

– ಸುಜಿತ್ ಕುಮಾರ್

ಮಾನವನ ದಿನನಿತ್ಯದ ಕಾರ್ಯಚಟುವಟಿಕೆಗಳನ್ನು ಎರಡು ವಿಧಗಳಾಗಿ ವಿಂಗಡಿಡಬಹುದು. ಒಂದು ವ್ಯಾವಹಾರಿಕ ಮತ್ತೊಂದು ಭಾವನಾತ್ಮಕವಾದದ್ದು. ಈ ಎರಡು ಚಟುವಟಿಕೆಗಳು ಹಾಗು ಅವುಗಳ ಮೂಲವಾಗಿರುವ ಗುಣಗಳು ಒಂದಕೊಂದು ಎಷ್ಟು ತದ್ವಿರುದ್ದವೋ ಅಷ್ಟೇ ಒಂದಕೊಂದು ಪೂರಕ. ಒಬ್ಬ ಮನುಷ್ಯ ತಾನು ಅದೆಷ್ಟೇ ಸಾತ್ವಿಕ ನಡವಳಿಕೆಯ ಮಹಾಪುರುಷನೇ ಆಗಿದ್ದರೂ ವ್ಯವಹಾರದ ವಿಷಯಕ್ಕೆ ಬಂದಾಗ ಅಲ್ಲಿ ಆತ ಮಹಾ ಚಾಣಕ್ಯನಾಗಿರುತ್ತಾನೆ. ಮತ್ತಷ್ಟು ಓದು »

25
ಸೆಪ್ಟೆಂ

ಸಾವಿನಲ್ಲೂ ಸಂದೇಶ ಬಿಟ್ಟುಹೋದ ರಾಷ್ಟ್ರವಾದದ ದಧೀಚಿ

– ಸಂತೋಷ್ ತಮ್ಮಯ್ಯ 

ಆ ಘಟನೆಯನ್ನು ನೆನಪಿಸಿಕೊಳ್ಳುತ್ತಾ ಕೆಲವರು “ಕೊನೆ ಕ್ಷಣಕ್ಕೆ ಅದೊಂದು ಬದಲಾವಣೆ ಆಗದೇ ಹೋಗಿದಿದ್ದರೆ ಜನಸಂಘದ ಕಥೆಯೇ ಬೇರೆ ಇರುತ್ತಿತ್ತು” ಎಂದು ಹೇಳುತ್ತಾರೆ. ಬೇರೆ ಎಂದರೆ ಹೇಗೆ ಎಂದರೆ ಅದಕ್ಕೆ ಉತ್ತರವಿಲ್ಲ. ಹಾಗೆನ್ನುವ ಎಲ್ಲರಲ್ಲೂ ಒಂದು ನಂಬಿಕೆ ಸ್ಪಷ್ಟವಾಗಿದೆ. ಜನಸಂಘ ವ್ಯಕ್ತಿ ಕೇಂದ್ರಿತ ಪಕ್ಷವಲ್ಲ ಎಂದು ಎಲ್ಲರಿಗೂ ತಿಳಿದಿದೆ. ಆದರೂ ಕೂಡಾ ಎಲ್ಲರೂ ಕಥೆ ಬೇರೆಯಾಗಿರುತ್ತಿತ್ತು ಎಂದೇ ಹೇಳುವರು. ಒಂದೇ ಒಂದು ಕ್ಷಣಕ್ಕೆ ಒಂದು ಪಕ್ಷದ ಆಗುಹೋಗುಗಳು ನಿರ್ಧರಿತವಾಗುವುದಿಲ್ಲ ಎಂದು ಅವರೆಲ್ಲರೂ ನಂಬಿದ್ದರೂ ‘ಕಥೆ ಬೇರೆಯಾಗಿರುತ್ತಿತು’ ಎಂಬ ಮಾತನ್ನು ನಿಟ್ಟುಸಿರಿನಿಂದ ಆವರೆಲ್ಲರೂ ಹೇಳದೇ ಇರುವುದಿಲ್ಲ. ದೀನದಯಾಳರ ನಂತರವೂ ಪಕ್ಷ ಅದೇ ತತ್ತ್ವ ಸಿದ್ಧಾಂತಗಳಿಂದ ಮುನ್ನಡೆಯುವುದು ಎಂದು ಅಂದುಕೊಂಡಿದ್ದರೂ ಅವರ ನಂತರ ಜನಸಂಘದಲ್ಲಿ ಏನೋ ಖಾಲಿತನ. ಸಿದ್ಧಾಂತವನ್ನು ಮುನ್ನಡೆಸಲು ದೀನದಯಾಳರಂಥ ವಾಹಕರು ಬೇಕು ಎನ್ನುವ ಚಡಪಡಿಕೆ. ಬೇಸರ, ಗೊಂದಲ, ಅಸಹನೆ. ಹಾಗಾದರೆ ದೀನದಯಾಳರು ಪಕ್ಷಕ್ಕಿಂತ, ಸಿದ್ಧಾಂತಕ್ಕಿಂತ ಮೇಲಾಗಿ ಬೆಳೆದುಬಿಟ್ಟಿದ್ದರೇ ಎಂದರೆ ಅದೂ ಇಲ್ಲ. ರಾಜಕೀಯ ಅವರಿಗೆಂದೂ ಗುರಿಯಾಗಿರಲೇ ಇಲ್ಲ. ಬದಲಿಗೆ ಮಾರ್ಗವಾಗಿತ್ತು. ಕೇವಲ ಒಂದು ಸಾಧನ ಮಾತ್ರವಾಗಿತ್ತು. ಅದುವರೆಗೆ ಭಾರತದಲ್ಲಿ ಏನಿತ್ತೋ ಅದನ್ನೇ ಅವರು ರಾಜಕೀಯ ಪರಿಭಾಷೆಯಲ್ಲಿ ಹೇಳಿದ್ದರು. ಅನುಷ್ಠಾನಕ್ಕೆ ಪ್ರಯತ್ನಿಸಿದ್ದರು. ಹಾಗಾದರೆ ಜನರಿಗೆ ಚಡಪಡಿಕೆ, ಖಾಲಿತನ, ಗೊಂದಲ, ಗೊಣಗುವಿಕೆಗಳು ಊಂಟಾಗಲು ಕಾರಣವೇನು? ಗಟ್ಟಿ ಸಿದ್ಧಾಂತದ ಪಕ್ಷದಲ್ಲೂ ಹೀಗಾಗುತ್ತವೆಯೇ?

ಸಾವು ಸಹಜವಾಗಿರದಿದ್ದರೆ ಎಲ್ಲೆಲ್ಲೂ ಹೀಗಾಗುತ್ತದೆ. ಅವರದ್ದು ಎಂಥವರೂ ಅಲ್ಲಾಡಿಹೋಗುವಂಥಾ ಸಾವು. ಸಾಧಾರಣವಾಗಿ ಸಂಘದವರು ಎಂಥಾ ಸಾವಿಗೂ ಕಣ್ಣೀರು ಹಾಕಲಾರರು. ಆದರೆ ಅಂಥ ಸಂಘದವರೂ ಕಣ್ಣೀರು ಹಾಕಿ ಬಿಕ್ಕಳಿಸಿದ ಸಾವು ದೀನದಯಾಳದ್ದು. ಗುರೂಜಿಯಂಥಾ ಆಧ್ಯಾತ್ಮ ಸಾಧಕರೇ ವಿಚಲಿತರಾಗಿಹೋದ ಸಾವು ದೀನದಯಾಳರದ್ದು. ದೇಶಕ್ಕೆ ದೇಶವೇ ಮಾತಾಡಿಕೊಂಡ ಸಾವು ದೀನದಯಾಳರದ್ದು. ಇಂದಿಗೂ ಉತ್ತರ ಸಿಗದ ಸಾವು ದೀನದಯಾಳರದ್ದು. ಸಾಧಕನ ಬದುಕನ್ನು ಆತನ ಸಾವಿನಲ್ಲಿ ನೋಡಬೇಕೆಂಬ ಮಾತಿದೆ. ಅದನ್ನು ೧೯೬೮ರ ಫೆಬ್ರವರಿ ೧೨ರಂದು ದೇಶ ನೋಡಿತು.

ಇಂದು ದೀನದಯಾಳರ ಜನ್ಮಶತಮಾನೋತ್ಸವ. ಅವರ ಹುಟ್ಟಿದ ದಿನದಂದೇ ಸಾವಿನ ಮಾತನ್ನಾಡಬೇಕು. ಏಕೆಂದರೆ ದೀನದಯಾಳರ ಅಂತಿಮ ಸಂಸ್ಕಾರ ನಡೆದ ನಂತರ ಅಟಲಬಿಹಾರಿ ವಾಜಪೇಯಿಯವರು ಅಂದೇ ಕರೆಕೊಟ್ಟಿದ್ದರು, “ಬನ್ನಿ, ಪಂಡಿತ್‌ಜಿ ಅವರ ರಕ್ತದ ಒಂದೊಂದು ಹನಿಯನ್ನೂ ಹಣೆಯ ಗಂಧವನ್ನಾಗಿಸಿಕೊಂಡು ನಮ್ಮ ಗುರಿಯತ್ತ ಸಾಗೋಣ. ಅವರ ಚಿತೆಯಿಂದ ಹೊರಬರುತ್ತಿರುವ ಒಂದೊಂದು ಕಿಡಿಯನ್ನು, ಹೃದಯದಲ್ಲಿರಿಸಿಕೊಂಡು ಪರಿಶ್ರಮದ ಪರಾಕಾಷ್ಠೆಯನ್ನು ಹಾಗೂ ಪ್ರಯತ್ನಗಳ ಎಲ್ಲೆಯನ್ನು ತಲುಪೋಣ. ಈ ದಧೀಚಿಯ ಅಸ್ಥಿಗಳ ವಜ್ರಾಯುಧವನ್ನು ತಾಯಾರಿಸಿ ಅಸುರರ ಮೇಲೆ ಆಕ್ರಮಣ ಮಾಡೋಣ ಹಾಗೂ ಪವಿತ್ರ ಭೂಮಿಯನ್ನು ನಿಷ್ಕಂಟಕವನ್ನಾಗಿಸೋಣ”. ಹಾಗಾಗಿ ದೀನದಯಾಳರ ಸಾವು ಸಿದ್ಧಾಂತಿಗಳು ಮರೆಯಬಾರದ ಸಾವು. ಆ ಚಿತೆಯ ಬೆಂಕಿ ಸದಾ ಎದೆಯಲ್ಲಿ ಸುಡುತ್ತಿರಬೇಕಾದ ಉರಿ.

ಮತ್ತಷ್ಟು ಓದು »

25
ಸೆಪ್ಟೆಂ

ಸಾವು..!

– ಗೀತಾ ಹೆಗಡೆ

ಇತ್ತೀಚಿನ ದಿನಗಳಲ್ಲಿ ಈ ಸಾವು ಎಂಬ ಶಬ್ದ ಬೇಡ ಬೇಡಾ ಅಂದರೂ ನನ್ನ ಚಿತ್ತದ ಸುತ್ತ ಬಿಡದೇ ಗಿರ್ಗೀಟಿ ಹೊಡಿತಾನೇ ಇದೆ. ಕುಳಿತಲ್ಲಿ ನಿಂತಲ್ಲಿ ಬರೀ ಇದರ ಬಗ್ಗೆಯೆ ತರ್ಕ. ಏನೇನೊ ಯೋಚನೆ, ಭಯ, ಯಾತನೆ, ಕಳವಳ ಇತ್ಯಾದಿ. ಏನಾದರೂ ಬರಿಬೇಕು. ಬರಿಲೇ ಬೇಕು ಎಂಬ ಹಠ ಮನಸ್ಸಿಗೆ. ಆದರೆ ಹೇಗೆ ಬರೆದರೆ ಹೇಗೊ ಏನೊ. ನನ್ನಿಂದ ಏನಾದರೂ ತಪ್ಪು ಬರವಣಿಗೆ ಅನಾವರಣವಾದರೆ? ತಪ್ಪು ಒಪ್ಪುಗಳನ್ನು ವಿಶ್ಲೇಷಿಸುವಷ್ಟು ತಿಳುವಳಿಕೆ ನನಗೆ ಖಂಡಿತಾ ಇಲ್ಲ. ಆದರೆ ನಮ್ಮ ಸುತ್ತಮುತ್ತಲೂ ನಡೆಯುವ ಸಾವಿನ ಸಮಾಚಾರ ನನಗೆ ನಿಜಕ್ಕೂ ಸಂಕಟವಾಗುತ್ತಿರುವುದು ದಿಟ. ಮತ್ತಷ್ಟು ಓದು »

24
ಸೆಪ್ಟೆಂ

ರೊಹಿಂಗ್ಯಾಗಳಿಗಾಗಿ ‘ಭಾರತ’ ತನ್ನತನವನ್ನು ಕಳೆದುಕೊಳ್ಳಬೇಕೇ ?

– ಡ್ಯಾನಿ ಪಿರೇರಾ
ಹಳ್ಳಿಮೈಸೂರು

ಭಾರತ ಎಲ್ಲಾ ಜಾತಿ ಜನಾಂಗಗಳನ್ನು ತನ್ನೊಡಲಲ್ಲಿ ಆಶ್ರಯ ನೀಡಿ ಆದರಿಸಿದ ದೇಶ. ಕೆಲವರು ಆಶ್ರಯ ಬೇಡಿ ಬಂದರೆ ಮತ್ತೆ ಕೆಲವರು ದುರಾಸೆಯಿಂದ ದಾಳಿ ಇಟ್ಟವರು. ಬಂದವರಲ್ಲಿ ಅನೇಕರು ಇಲ್ಲಿ ಬೆರೆತರು, ಕಲಿತರು ಕಲಿಸಿದರು. ಮತ್ತೆ ಕೆಲವರು ಬೆರೆತಂತೆ ಕಂಡರೂ ಬೇರೆಯಾಗಿಯೇ ಉಳಿದಿದ್ದಾರೆ. ಅವರು ಶರೀರ ಮಾತ್ರ ಇಲ್ಲಿದ್ದರೆ ಮನಸ್ಸು ಜಾತಿ-ಮತ-ಪಂಥಗಳಾಚೆ ಯೋಚಿಸಲು ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳೇ ಕಳೆದಿದ್ದರೂ ಸಾಧ್ಯವಾಗಿಲ್ಲ. ಅವರೊಳಗಿನ ಮತಾಂಧತೆಯ ಭಾವ ಇಲ್ಲಿ ಎಲ್ಲವನ್ನೂ ಪಡೆದ ಮೇಲೂ ಹಾಗೆಯೇ ಇದೆ ಎಂದರೆ ಅದು ಸರಿಯಾಗದ ಮನಸ್ಥಿತಿ ಎನ್ನುವ ನಿಷ್ಕರ್ಶೆಗೆ ಬರಬೇಕಾಗುತ್ತದೆ. ಇಲ್ಲಿ ಸಮರಸತೆಯಿಂದ ಬೆರೆತ ಜನಾಂಗವೊಂದು ಈ ನೆಲದ ಸಂಸ್ಕೃತಿಯೊಂದಿಗೆ ಸಮ್ಮಿಳಿತಗೊಂಡು ಸ್ವಾತಂತ್ರ್ಯ ಹೋರಾಟದಲ್ಲಿ ಮೊದಲ್ಗೊಂಡು ಈ ದೇಶದ ಬದುಕಿನೊಂದಿಗೆ ಸಮರಸಗೊಂಡು ಹೊರಗಿನಿಂದ ಬಂದವರಿಗೆ ಮಾತ್ರವಲ್ಲ, ತಾವು ಇಲ್ಲಿನ ಮೂಲದವರು ಎನ್ನುವವರಿಗೂ ಆದರ್ಶಪ್ರಾಯರಾಗಿದ್ದಾರೆ. ಈ ಜನಾಂಗ ಈ ದೇಶದ ಮೂಲಭೂತವಾದಿ ಮನಸ್ಥಿತಿಗೆ ನೀತಿ ಮಾರ್ಗವಾಗಬೇಕಿತ್ತು! ದುರ್ದೈವ ಹಾಗಾಗಲಿಲ್ಲ. ಮತ್ತಷ್ಟು ಓದು »

23
ಸೆಪ್ಟೆಂ

ಉತ್ತರೆಯರನ್ನು ದಕ್ಷಿಣೆಯರೊಟ್ಟಿಗೆ ಸೇರಿಸುವ ಸಾಹಸದ ಘಳಿಗೆಯಲ್ಲಿ…

– ಸುಜಿತ್ ಕುಮಾರ್

ಉತ್ತರದ ಅತಿವೃಷ್ಟಿ ಹಾಗು ದಕ್ಷಿಣದ ಅನಾವೃಷ್ಟಿ, ಎರಡೂ ದೇಶವನ್ನು ಕಾಡುತ್ತಿರುವ ಬಹುಮುಖ್ಯವಾದ ಸಮಸ್ಯೆಗಳು. ಶತಮಾನಗಳಿಂದ ಜನಜೀವನಗಳನ್ನು ಬಹುವಾಗಿ ಕಾಡುತ್ತಾ ಬಂದಿರುವ ಈ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ಇತಿಶ್ರೀ ಹಾಡುತ್ತೇನೆಂದು ಆತ್ಮವಿಶ್ವಾಸದಿಂದ ಹೇಳುತ್ತಿದೆ. ಆ ಆತ್ಮವಿಶ್ವಾಸದ ಮಾತಿನ ಹಿಂದಿರುವ ಯೋಜನೆಯೇ ನದಿ ಜೋಡಣೆ. ಉತ್ತರದ ನದಿಗಳನ್ನು ಕಾಲುವೆ, ಆಣೆಕಟ್ಟುಗಳ ಮೂಲಕ ದಕ್ಷಿಣದ ನದಿಗಳ ಹರಿವಿನೊಟ್ಟಿಗೆ ಸೇರಿಸಿ, ಹಿಗ್ಗಿ ಒಡೆದು ಹೋಗುವ ಪ್ರವಾಹವನ್ನು ಕುಗ್ಗಿ ಸೊರಗಿ ಹೋಗುವ ಧಾರೆಯೊಟ್ಟಿಗೆ ಸೇರಿಸುವ ಪ್ರಕ್ರಿಯೆ. ಹಿಂದೆಲ್ಲ ಜನರು ಗಂಗೆಯನ್ನು ಕಾಣಲು ಅವಳ ಬಳಿಗೆ ಹೋದರೆ ಮುಂದೊಂದು ದಿನ ಇಂತಹ ಯೋಜನೆಗಳ ಮೂಲಕ ಆಕೆಯೇ ನಮ್ಮ ಮನೆಬಾಗಿಲಿಗೆ ಬಂದರೂ ಆಶ್ಚರ್ಯಪಡಬೇಕಾಗಿಲ್ಲ! ಮತ್ತಷ್ಟು ಓದು »

21
ಸೆಪ್ಟೆಂ

ಸದ್ಗುರು ಬ್ರಹ್ಮಾನಂದರ ೯೯ನೇ ವರ್ಷದ ಆರಾಧನಾ ಪುಣ್ಯಸ್ಮರಣೆ

– ಚೈತನ್ಯ ಮಜಲುಕೋಡಿ

ಸದ್ಗುರು ಬ್ರಹ್ಮಾನಂದರ ೯೯ನೇ ವರ್ಷದ ಆರಾಧನಾ ಪುಣ್ಯಸ್ಮರಣೆಯ ಪ್ರಯುಕ್ತ. ಸದ್ಗುರುವಿನ ಉಪದೇಶ ಆಶೀರ್ವಾದಗಳು ಸದಾ ನಮ್ಮಲ್ಲಿ ಜಾಗೃತವಾಗಿರಲೆಂದು ಆಶಿಸುತ್ತಾ.

ಕೆಲಕಾಲದ ಹಿಂದೆ ಶ್ರೀ ಲೋಕಾಭಿರಾಮ ಮಾಸಪತ್ರಿಕೆಗೆ ಬರೆದ ಸಣ್ಣ ಲೇಖನ.

ಶ್ರೀ ಬ್ರಹ್ಮಾನಂದ ಮಹಾರಾಜರು ಹೇಳಿದ ಮೋಕ್ಷ ಪ್ರಾಪ್ತಿಯ ಗುಟ್ಟು ಲೇಖನದ ನಂತರ ಕೊಟ್ಟಿದೆ.

ಮೋಕ್ಷಪ್ರಾಪ್ತಿಯ ಗುಟ್ಟು ಒಂದು ಜಿಜ್ಞಾಸೆ: ಮತ್ತಷ್ಟು ಓದು »

20
ಸೆಪ್ಟೆಂ

ಡೋಕ್ಲಾ ಕಾರ್ಮೋಡ ಕರಗಿದ ನಂತರ ಮೋದಿ ಸಮರ್ಥಕರು, ವಿರೋಧಿಗಳು ಮತ್ತದೇ ಗುದ್ದಾಟಕ್ಕಿಳಿದಿದ್ದಾರೆ.

– ಪ್ರಸನ್ನ ಕೆ

ಮೋದಿ ಅಂತದ್ದೇನು ಮಾಡಿದ್ದು ಎಂದು ವಿಶ್ಲೇಷಿಸಲು ಕುಳಿತರೆ ನಮಗೆ ಅಂತ ವಿಶೇಷಗಳು ಸಿಗುವುದಿಲ್ಲ. ಆದರೆ ವಿಷಯ ಇಷ್ಟೇನಾ? ಮೋದಿ ಏನೂ ಮಾಡಲೇ ಇಲ್ವಾ? ಎಂಬ ಪ್ರಶ್ನೆ ಏಳಬಹುದು. ಏನೂ ಮಾಡದೇ ಇಂತಹ ಗೆಲುವುಗಳು, ಯಶಸ್ಸು ಕೇವಲ ಭಕ್ತರ ಹೊಗಳಿಕೆ ವಿರೋಧಿಗಳ ಕೆಸರೆರಚಾಟದಿಂದ ಸಿಗಲು ಸಾಧ್ಯವೆ?

ಮೋದಿಯನ್ನು ಅತಿಯಾಗಿ ಹೊಗಳುವರಾಗಲಿ ಹಿಂದೆ ಮುಂದೆ ತಿಳಿಯದೆ ಕೇವಲ ಸೈದ್ದಾಂತಿಕ ಕಾರಣಕ್ಕಾಗಿ ವಿರೋಧಿಸುವವರು ಅವರ ಕಾರ್ಯಶೈಲಿಯನ್ನು ವಿಮರ್ಷಿಸಲಿಲ್ಲ ಅಥವಾ ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಆದರೆ ಮೋದಿ ಹಾಗೆ ಮಾಡಲಿಲ್ಲ, ತನ್ನ ಕೆಲಸವೇನು, ತನ್ನ ಗುರಿ ಏನು ಎಂಬುದು ಅವರಿಗೆ ಸ್ಪಷ್ಟವಾಗಿ ತಿಳಿದಿದೆ, ಆದನ್ನು ಅವರು ಮುಂದುವರೆಸಿದ್ದಾರಷ್ಟೆ. ಅವರು ಗುರಿ ಒಂದೇ ‘ಉತ್ತಮ ಆಡಳಿತ, ದೇಶದ ಒಳಿತು’. ತನ್ನ ವೈಯಕ್ತಿಕ ವರ್ಚಸ್ಸಿಗಿಂತ ದೇಶದ ಒಳಿತು ಮುಖ್ಯ ಎನ್ನುವುದು ಬಂದಾಗ ಬೇರೆಲ್ಲಾ ದಾರಿಗೆ ಬರುತ್ತವೆ. ಮತ್ತಷ್ಟು ಓದು »

20
ಸೆಪ್ಟೆಂ

ಪ್ರಗತಿಪರ ಫ್ಯಾಸಿಸ್ಟುಗಳಿಂದ ಪ್ರಜಾಪ್ರಾಭುತ್ವವ್ವನ್ನು ರಕ್ಷಿಸಬೇಕಾಗಿದೆ

– ರಾಕೇಶ್ ಶೆಟ್ಟಿ

ದೇಶದಾದ್ಯಂತ ಇಂದು ನಡೆಯುತ್ತಿರುವ Intellectual Intolerance ಹುಟ್ಟಿಕೊಂಡಿದ್ದು 16 May 2014 ರಂದು. ಆ ದಿನ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತು ಎನ್.ಡಿ.ಎ ಪ್ರಚಂಡ ಬಹುಮತಗಳಿಸಿ ಅಧಿಕಾರ ಹಿಡಿಯದೇ ಹೋಗಿದ್ದರೆ ಇವತ್ತು ಭಾರತದ ಹಾದಿ ಬೀದಿಗಳಲ್ಲಿ ಗಂಜಿಗಿರಾಕಿಗಳು ಎದೆಬಡಿದುಕೊಂಡು ಅಳಬೇಕಿರಲಿಲ್ಲ. ಆದರೆ ಏನು ಮಾಡುವುದು ಹೇಳಿ? ಭಾರತದ ಪಾಲಿಗೆ ಅಚ್ಛೇ ದಿನಗಳು ನಿಕ್ಕಿಯಾಗಿದ್ದವಲ್ಲ ಹಾಗಾಗಿ ಮೋದಿಯವರೇ ಗೆದ್ದರು. ಅಷ್ಟಕ್ಕೂ ಮೋದಿಯವರು ಗೆದ್ದಿದ್ದಕ್ಕೆ, ಗೆದ್ದ ನಂತರ ಯಶಸ್ವಿ ಮತ್ತು ಮೂರು ವರ್ಷಗಳ ಜನಪ್ರಿಯ ಆಡಳಿತವನ್ನು ನೀಡಿ ನಾಲ್ಕನೇ ವರ್ಷದತ್ತ ಶರವೇಗದಲ್ಲಿ ಹೊರಟಿರುವಾಗ ಗಂಜಿಗಿರಾಕಿಗಳದೇಕೆ ಈ ಗೋಳು? ಅವರ ಗೋಳಿನ ಕಾರಣವನ್ನು ಸರಳೀಕರಿಸಿ ಮೂರು ಪ್ರಮುಖ ಕಾರಣಗಳನ್ನು ನೀಡಬಹುದು. ಮತ್ತಷ್ಟು ಓದು »

19
ಸೆಪ್ಟೆಂ

ದ್ವೇಷ ಕಾರುವುದನ್ನೇ ವಿಚಾರವಾದ ಎನ್ನುವುದಾದರೆ…

– ಅಜಿತ್ ಶೆಟ್ಟಿ ಹೆರಾಂಜೆ

ಗೌರಿ ಲಂಕೇಶ್ ಕೊಲೆಯಾದಾಗ ನಾನು ಮುಖಪುಟದಲ್ಲಿ ಒಂದು ಸ್ಟೇಟಸ್ ಹಾಕಿದ್ದೆ.. ಅಕಾಲಿಕ ಮರಣ ಯಾರದ್ದೇ ಆಗಿರಲಿ ಅದು ಘೋರ. ಅದು ಗೌರಿ ಲಂಕೇಶರಂತಾ ಖ್ಯಾತ ನಾಮರದ್ದೆ ಆಗಿರಲಿ ಅಥವಾ ಶರತ್, ರುದ್ರೇಶ್, ಕಟ್ಟಪ್ಪ, ರವಿಯರಂತ ಶ್ರೀ ಸಾಮಾನ್ಯರದ್ದೇ ಆಗಿರಿಲಿ..!! ಮತ್ತಷ್ಟು ಓದು »