ಚೀನಾದೊಂದಿಗೆ ಭಾರತಕ್ಕೆ ಯುದ್ಧ ಬೇಕೆ?
– ಶ್ರೇಯಾಂಕ ಎಸ್ ರಾನಡೆ
ಯುದ್ಧವಾಗಲಿದೆ. ಯುದ್ಧಕ್ಕೆ ಸನ್ನದ್ಧ. ಇನ್ನೇನು ಯುದ್ಧ ಆಗೇ ಬಿಟ್ಟಿತು. ನಾಳೆಯೇ ಯುದ್ಧ ಎಂಬಂತಹ ಪರಿಸ್ಥಿತಿಗಳು ಭಾರತ-ಚೀನಾದ ಮಧ್ಯೆ ಉದ್ಭವವಾಗಿರುವುದು ಇದೇ ಮೊದಲೇನಲ್ಲ. ಜನರ ಗಮನಕ್ಕಾಗಿ ಹಾತೊರೆಯುವ ಎರಡೂ ಕಡೆಯ ಆಕ್ರಮಣಕಾರಿ ಮಾಧ್ಯಮಗಳು, ಅವನ್ನೇ ನೆಚ್ಚಿಕೊಂಡು ವಾಸ್ತವತೆಯ ಕನಿಷ್ಟ ಮಾಹಿತಿಯೂ ಇಲ್ಲದ ದೇಶಭಕ್ತರು ಅದಾಗಲೇ ಯುದ್ಧಕ್ಕೆ ರಣಕಹಳೆಯನ್ನು ಮೊಳಗಿಸಿಯಾಗಿದೆ. ಇನ್ನು ಬಾಕಿಯಿರುವುದು ಕೇವಲ ಸೇನೆಗಳ ಗುಂಡಿನ ದಾಳಿಯಷ್ಟೇ! ಮತ್ತು ಭಾರತದ ಗೆಲುವಷ್ಟೇ. ಹೀಗೆ ಆಗಬೇಕೆನ್ನುವುದು ಎಲ್ಲಾ ಭಾರತೀಯರ ಆಸೆಯೂ ಕೂಡ. ಮತ್ತಷ್ಟು ಓದು
ಸ್ವಾತಂತ್ರ್ಯದ ಒಕ್ಕೊರಲ ರಾಗ “ರಾಗ್ ದೇಶ್”
– ಶ್ರೇಯಾಂಕ ಎಸ್ ರಾನಡೆ.
ಭಾರತ ದೇಶಕ್ಕೆ ಸ್ವಾತಂತ್ರ್ಯ ಹೇಗೆ ಬಂತು? ಈ ಪ್ರಶ್ನೆಯನ್ನು ನಿಮ್ಮ ಆಪ್ತರ, ಸಹೋದ್ಯೋಗಿಗಳ ಹಾಗೂ ಯಾವುದೇ ವಿದ್ಯಾರ್ಥಿಗಳ ಬಳಿ ಕೇಳಿ ನೋಡಿ. ಅದಕ್ಕೆ ನಿಮಗೆ ಸಿಗುವ ಉತ್ತರ ಗಾಂಧೀಜಿ ಕೇಂದ್ರಿತವಾಗಿರುತ್ತದೆ. ಖಂಡಿತವಾಗಿಯೂ ಸ್ವಾತಂತ್ರ್ಯ ಚಳುವಳಿಯ ಕೊನೆಯ ಘಟ್ಟದಲ್ಲಿ 1915-1947 ಗಾಂಧೀಜಿಯ ಪಾಲು ಬಹುಮುಖ್ಯವಾದದ್ದು. ಆದರೆ ಈ ದೇಶದ ಜನರ ಆಸ್ಥೆ, ಗಾಂಧೀಜಿಯ ಅಹಿಂಸಾ ಸತ್ಯಾಗ್ರಹ ಮಾತ್ರವೇ ದಪ್ಪ ಚರ್ಮದ ಬ್ರಿಟಿಷರ ಸೊಕ್ಕು ಮುರಿಯಲಿಲ್ಲ. ಅನೇಕ ಕ್ರಾಂತಿಕಾರಿಗಳು, ಸಣ್ಣ-ಪುಟ್ಟ ಹಳ್ಳಿ, ಪ್ರಾಂತ್ಯ-ಪ್ರದೇಶಗಳಲ್ಲಿ ರೈತ, ಬುಡಕಟ್ಟು ಹೀಗೆ ಅಸಂಖ್ಯಾತ ಜನರು ಆಗಾಗ್ಗೆ ಇಂಗ್ಲೀಷರ ಅಹಂಕಾರಕ್ಕೆ ಪೆಟ್ಟುಕೊಟ್ಟರೆ; ಹೊರಗಿನಿಂದ ನೇರವಾಗಿ ಹಾಗೂ ಒಳಗಿನಿಂದ ಪರೋಕ್ಷವಾಗಿ ಬ್ರಿಟಿಷರ ಸೊಕ್ಕನ್ನು, ಅವರ ಬೃಹತ್ ವಸಾಹತು ಸಾಮ್ರಾಜ್ಯದ ಅಸ್ಮಿತೆಯನ್ನೇ ಕಂಪಿಸುವಂತೆ ಮಾಡಿದ್ದು, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂದು ಹೊರಟಿದ್ದು ಸುಭಾಷ್ ಚಂದ್ರ ಬೋಸ್‍ರ ಇಂಡಿಯನ್ ನ್ಯಾಷನಲ್ ಆರ್ಮಿ. ಮತ್ತಷ್ಟು ಓದು
ಉಪರಾಷ್ಟ್ರಪತಿ ಹುದ್ದೆಯ ಆಯ್ಕೆ ಮತ್ತವರ ಕರ್ತವ್ಯಗಳು…
– ಶ್ರೇಯಾಂಕ ಎಸ್ ರಾನಡೆ
ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ 13ನೇ ಉಪರಾಷ್ಟ್ರಪತಿ ಚುನಾವಣೆ ನಡೆದಿದೆ. ನಿರೀಕ್ಷೆಯಂತೆ ಎನ್.ಡಿ.ಎ ಮೈತ್ರಿಕೂಟದ ಅಭ್ಯರ್ಥಿ ಮಾನ್ಯ ವೆಂಕಯ್ಯನಾಯ್ಡು ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಗೋಪಾಲಕೃಷ್ಣ ಗಾಂಧಿಯವರನ್ನು ಬಹು ಅಂತರದಿಂದ ಸೋಲಿಸಿದ್ದಾರೆ. ಅದಕ್ಕಾಗಿ ಅವರಿಗೂ, ಅವರನ್ನು ಉಪರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಮಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೂ ಶುಭಾಶಯಗಳು. ಈ ಹೊತ್ತಿನಲ್ಲಿ ರಾಷ್ಟ್ರಪತಿಗಳ ಕೆಲಸ, ಕರ್ತವ್ಯ ಹಾಗೂ ಇನ್ನಿತರ ಸಂಗತಿಗಳ ಕುರಿತು ಬೆಳಕು ಚೆಲ್ಲುವ ಬರಹ. ಮತ್ತಷ್ಟು ಓದು