ವಿಷಯದ ವಿವರಗಳಿಗೆ ದಾಟಿರಿ

Archive for

11
ಆಗಸ್ಟ್

ಆಳ್ವರ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಯುತ್ತಿದೆಯೇ!?

– ಹರೀಶ್ಚಂದ್ರ ಶೆಟ್ಟಿ

ಕಾವ್ಯಶ್ರೀ ಎಂಬ ಹೆಣ್ಣುಮಗಳ ಆತ್ಮಹತ್ಯೆಯ ಪ್ರಕರಣದಲ್ಲಿ ಮೋಹನ ಆಳ್ವರನ್ನು ಸಿಕ್ಕಿ ಹಾಕಿಸಲು ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿವೆ.ಜನರ ಭಾವನೆಗಳನ್ನು “ಎನ್ಕ್ಯಾಶ್” ಮಾಡಿಕೊಳ್ಳುವುದರಲ್ಲಿ ಪರಿಣಿತರಾದ ವ್ಯಕ್ತಿಗಳು ಪರದೆಯ ಹಿಂದೆ ನಿಂತುಕೊಂಡು ಪ್ರತಿಭಟನೆಯ ಮೂಲಕ” ಮೈಲೇಜ್ ” ಗಿಟ್ಟಿಸಿಕೊಳ್ಳುತ್ತಿದ್ದಾರೆ.ಮಣಿಪಾಲದಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣವೊಂದು ಸುಮಾರು ಸಮಯದ ಹಿಂದೆ ಸಾಕಷ್ಟು ಸುದ್ದಿ ಎಬ್ಬಿಸಿತ್ತು.ಮೊನ್ನೆ ಮೊನ್ನೆ ಮಂಗಳೂರಿನ ಪ್ರಸಿದ್ಧ ವೈದ್ಯಕೀಯ ಕಾಲೇಜ್ ನ ವೈದ್ಯರೊಬ್ಬರನ್ನು ಅಪಹರಿಸಿ ಕೊಲ್ಲಲು ಪ್ರಯತ್ನಿಸಲಾಯಿತು..ಇನ್ನೊಂದು ವೈದ್ಯಕೀಯ ಕಾಲೇಜ್ ನ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ.. ಒಂದೆರಡು ತಿಂಗಳ ಹಿಂದೆ,ಮತ್ತೊಂದು ಪ್ರತಿಷ್ಠಿತ ಕಾಲೇಜ್ ನ ವಿದ್ಯಾರ್ಥಿನಿಯೂ ಆತ್ಮಹತ್ಯೆ ಮಾಡಿಕೊಂಡಳು..ಆವಾಗಿನ ಎಲ್ಲಾ ಪ್ರಕರಣಗಳಲ್ಲಿ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳ ಒಡೆಯರುಗಳ ಬಗ್ಗೆ ತಪ್ಪಿಯೂ ಪ್ರಸ್ತಾಪಗಳು ಬರಲಿಲ್ಲ…ಯಾವ ಮಾಧ್ಯಮಗಳೂ ಅಂತಹ ಶಿಕ್ಷಣ ಸಂಸ್ಥೆಗಳ ಮಾಲೀಕರ ವಿಡಿಯೋ ಕಾನ್ಫರೆನ್ಸ್ ಮಾಡಿಸಿ,ವಕೀಲರಂತೆ ಲೈವ್ ಕ್ರಾಸ್ ಎಕ್ಸಾಮಿನೇಷನ್ ಮಾಡಲಿಲ್ಲ..

ಇಂತಹ ಘಟನೆ ನಡೆಯಲು ನಿಮ್ಮಂತ ಶಿಕ್ಷಣ ಸಂಸ್ಥೆಯ ಮಾಲೀಕರ ಪರೋಕ್ಷ ಕುಮ್ಮಕ್ಕು ಎಂದು ಯಾವ ಅಬ್ಬೆ ಪಾರಿಯೂ ಹೇಳುವ ಧೈರ್ಯ ತೋರಿಸಲಿಲ್ಲ ..ಯಾವುದೇ ಲೆಟರ್ ಹೆಡ್ ಸಂಘಟನೆಗಳ ನಾಯಕರುಗಳು ಜನರನ್ನು ಒಟ್ಟುಮಾಡಿಸಿಕೊಂಡು ಬಂದು ಪ್ರತಿಭಟನೆ ಮಾಡಲಿಲ್ಲ..ಆದರೆ ಆಳ್ವರ ಬಗ್ಗೆ ಎಲ್ಲವೂ ಕ್ರಮಬದ್ಧವಾಗಿ ನೆಡೆಯುತ್ತಿದೆ..ಈಗಿನ ಎಲ್ಲಾ ಪ್ರತಿಭಟನೆಗಳ ನೇತೃತ್ವ ವಹಿಸಿಕೊಂಡಿರುವ ವ್ಯಕ್ತಿಗಳು ಪ್ರತಿಭಟನೆಯ ನಾಯಕತ್ವ ವಹಿಸಿಕೊಳ್ಳುವ ಮೊದಲು ತಾವುಗಳು ಈ ತನಕ ಮಾಡಿರುವ ಒಂದಾದರೂ ಜನಪರ ಕೆಲಸಗಳನ್ನು ಜನರ ಮುಂದಿರಿಸಿಕೊಂಡು ಪ್ರತಿಭಟಿಸಲಿ….

ಸುಮಾರು ಮೂರು ನಾಲ್ಕು ವರ್ಷಗಳ ಹಿಂದೆ ಮೂಡುಬಿದರೆಯಲ್ಲಿ ನಡೆಯುವ “ಆಳ್ವಾಸ್ ನುಡಿ ಸಿರಿ ” ಮತ್ತು “ಆಳ್ವಾಸ್ ವಿರಾಸತ್ ” ಎಂಬ ಅಪೂರ್ವ ಕಾರ್ಯಕ್ರಮಗಳ ಬಗ್ಗೆ ಎಡಪಂಥೀಯ ಬುದ್ಧಿ ಜೀವಿಗಳು ಧ್ವನಿ ಎಬ್ಬಿಸಿ ಸಾಕಷ್ಟು ರಾದ್ಧಾಂತ ಮಾಡಿದ್ದರು..ಆವಾಗ ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆಪ್ ಮತ್ತು ಫೇಸ್ ಬುಕ್ ಗಳಲ್ಲಿ ಈಗಿನಂತೆ ಜನ ಸಂದಣಿ ಇರಲಿಲ್ಲ.. .ಹಾಗಾಗಿ ಅಂದು ಅವರಿಗೆ ತಮ್ಮ “ಹಿಡನ್ ಅಜೆಂಡಾ”ಗಳನ್ನು ಜನ ಸಾಮಾನ್ಯರ ನಡುವೆ ಹರಿಯಲು ಬಿಟ್ಟು ರಾಷ್ಟ್ರೀಯವಾದಿಗಳನ್ನು ಕಟ್ಟಿ ಹಾಕಲು ಆಗಿರಲಿಲ್ಲ..ಆದುದರಿಂದ ಈ ಬಾರಿ ಅವರೆಲ್ಲ ವ್ಯವಸ್ಥಿತವಾಗಿ ತಮಗಿರುವ ರಾಜಕೀಯ ವಶೀಲಿ ಬಾಜಿಗಳನ್ನು ಉಪಯೋಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ..ಆಗ ಆಳ್ವರ ಪರವಾಗಿ ನಾನೊಂದು ಲೇಖನ ಬರೆದಿದ್ದೆ..ಅದನ್ನು ಮತ್ತೊಮ್ಮೆ ನಿಮ್ಮ ನಡುವೆ ಹಂಚಿಕೊಂಡಿದ್ದೇನೆ. ಸ್ವಂತ ಬುದ್ದಿ ಮತ್ತು ವಿವೇಚನೆ ಇರುವವರಿಗೆ,ಆಳ್ವರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಬಗ್ಗೆ ಸ್ವಲ್ಪವಾದರೂ ಅರ್ಥವಾದೀತು. ಸಾಧ್ಯವಾದರೆ ಒಮ್ಮೆ ಓದಿಕೊಳ್ಳಿ…
………………………………………………………………………………….

ಮತ್ತಷ್ಟು ಓದು »