ವಿಷಯದ ವಿವರಗಳಿಗೆ ದಾಟಿರಿ

Archive for

6
ಸೆಪ್ಟೆಂ

ಹವ್ಯಾಸಿ ರಂಗಭೂಮಿ – ಇತ್ತೀಚಿನ ಬೆಳವಣಿಗೆಗಳು

-ಎಸ್.ಎನ್. ಸೇತುರಾಮ್
ಹವ್ಯಾಸಿ ರಂಗಭೂಮಿ…

ಈ ಪದವೇ ಚೆಂದ, ರಂಗಭೂಮಿಯನ್ನು ವೃತ್ತಿ ಅಂತ ಹೇಳಿಕೊಂಡ್ರೆ ಅಪ್ರಯೋಜಕ ಅನ್ನೊರು. ನಾಟಕ ಮಾಡಿಕೊಂಡು ಬದುಕ್ತಾನೆ ಅನ್ನೋರು. ಏನು ಮಾಡ್ತಿದ್ದಿ ಅನ್ನೋ ಪ್ರಶ್ನೇಗೆ ರಂಗಭೂಮೀಲಿ ಸಕ್ರೀಯವಾಗಿದ್ದೀನಿ ಅಂದ್ರೆ, ಅದು ಬಿಟ್ಟು ಹೊಟ್ಟೆಪಾಡಿಗೆ ಏನು ಮಾಡ್ಕೊಂಡಿದ್ದೀ ಅಂತ ಕೇಳೋರು. ನನ್ನ ಬದುಕಿನ ಕಾಲಘಟ್ಟದಲ್ಲಿ ಕಾರಣಗಳು ಏನೇ ಇರಲಿ, ರಂಗಭೂಮಿ ವೃತ್ತಿ ಅಂತಾದರೆ ಒಂದು ತರಹದ ಕೀಳರಿಮೆ. ಎಲ್ಲ ಕಾಲಘಟ್ಟಗಳಲ್ಲೂ ಎಲ್ಲ ಕಲಾಪ್ರಕಾರಗಳ ಹಾಗೇನೇ ರಂಗಭೂಮಿ ಕೂಡಾ. ಹೆಸರಾಗಿ ದೊಡ್ಡೋರಾದ ಮೇಲೆ ಹಾರ ತುರಾಯಿ, ಪೇಟ, ಬಿರುದುಬಾವಲಿ, ಬಿನ್ನವತ್ತಳೆ ಎಲ್ಲಾ. ಹೆಸರಾಗೋವರೆಗೂ ಇದೊಂದು ರಕ್ತಮಾಂಸವಷ್ಟೇ ಅಲ್ಲದ, ಮನಸ್ಸು ಹೃದಯ ಇರುವ ಜೀವ ಅನ್ನೋದೇ ಯಾರ ಗಮನಕ್ಕೂ ಬರುತ್ತಿರಲಿಲ್ಲ. ಗೆದ್ದಾಗ ಮಾನ, ಗೆಲ್ಲದಿದ್ದಾಗ ಬರಿ ಅವಮಾನವೇ. ನಾಟಕದವರು ಅಯೋಗ್ಯರು, ಅಪ್ರಯೋಜಕರು, ಅವರಿಗೆ ಹೆಣ್ಣು ಕೊಡೋ ಹಾಗಿಲ್ಲ. ಮನೆಗೆ ಕರೆಯೋ ಅವಶ್ಯಕತೆ ಇಲ್ಲ. ಗೌರವಕ್ಕೆ ಅವರೆಂದೂ ಪಾತ್ರರಲ್ಲ. ಇದು ಭಾವ. ಮತ್ತಷ್ಟು ಓದು »