ಉತ್ತರೆಯರನ್ನು ದಕ್ಷಿಣೆಯರೊಟ್ಟಿಗೆ ಸೇರಿಸುವ ಸಾಹಸದ ಘಳಿಗೆಯಲ್ಲಿ…
– ಸುಜಿತ್ ಕುಮಾರ್
ಉತ್ತರದ ಅತಿವೃಷ್ಟಿ ಹಾಗು ದಕ್ಷಿಣದ ಅನಾವೃಷ್ಟಿ, ಎರಡೂ ದೇಶವನ್ನು ಕಾಡುತ್ತಿರುವ ಬಹುಮುಖ್ಯವಾದ ಸಮಸ್ಯೆಗಳು. ಶತಮಾನಗಳಿಂದ ಜನಜೀವನಗಳನ್ನು ಬಹುವಾಗಿ ಕಾಡುತ್ತಾ ಬಂದಿರುವ ಈ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ಇತಿಶ್ರೀ ಹಾಡುತ್ತೇನೆಂದು ಆತ್ಮವಿಶ್ವಾಸದಿಂದ ಹೇಳುತ್ತಿದೆ. ಆ ಆತ್ಮವಿಶ್ವಾಸದ ಮಾತಿನ ಹಿಂದಿರುವ ಯೋಜನೆಯೇ ನದಿ ಜೋಡಣೆ. ಉತ್ತರದ ನದಿಗಳನ್ನು ಕಾಲುವೆ, ಆಣೆಕಟ್ಟುಗಳ ಮೂಲಕ ದಕ್ಷಿಣದ ನದಿಗಳ ಹರಿವಿನೊಟ್ಟಿಗೆ ಸೇರಿಸಿ, ಹಿಗ್ಗಿ ಒಡೆದು ಹೋಗುವ ಪ್ರವಾಹವನ್ನು ಕುಗ್ಗಿ ಸೊರಗಿ ಹೋಗುವ ಧಾರೆಯೊಟ್ಟಿಗೆ ಸೇರಿಸುವ ಪ್ರಕ್ರಿಯೆ. ಹಿಂದೆಲ್ಲ ಜನರು ಗಂಗೆಯನ್ನು ಕಾಣಲು ಅವಳ ಬಳಿಗೆ ಹೋದರೆ ಮುಂದೊಂದು ದಿನ ಇಂತಹ ಯೋಜನೆಗಳ ಮೂಲಕ ಆಕೆಯೇ ನಮ್ಮ ಮನೆಬಾಗಿಲಿಗೆ ಬಂದರೂ ಆಶ್ಚರ್ಯಪಡಬೇಕಾಗಿಲ್ಲ! ಮತ್ತಷ್ಟು ಓದು