ಸಂಘಟನೆಯನ್ನು ನಿಷೇಧಿಸಬಹುದು.ಆದರೆ ಮನಸ್ಥಿತಿಯನ್ನು ಏನು ಮಾಡುವುದು?
– ರಾಕೇಶ್ ಶೆಟ್ಟಿ
ಸಂಘಟನೆಯನ್ನು ನಿಷೇಧಿಸಬಹುದು.ಆದರೆ,ಮನಸ್ಥಿತಿಯನ್ನು ಏನು ಮಾಡುವುದು? ಇಂತಹದ್ದೊಂದು ಪ್ರಶ್ನೆಯನ್ನು ಫೇಸ್ಬುಕ್ಕಿನಲ್ಲಿ ಗೆಳೆಯ ಸಂದೀಪ್ ಕೇಳಿದ್ದರು.ಅವರ ಪ್ರಶ್ನೆಯಿದ್ದಿದ್ದು Ban PFI ಎಂಬ ಹೋರಾಟದ ಕುರಿತು. ವಾಜಪೇಯಿಯವರ ಕಾಲದಲ್ಲಿ ಸಿಮಿ ಸಂಘಟನೆಯನ್ನು ನಿಷೇಧಿಸಲಾಯಿತು. ಆಮೇಲೇನಾಯ್ತು? ರಕ್ತಬೀಜಾಸುರರಂತೆ ನಾನಾ ಹೆಸರು,ಸಂಘಟನೆಗಳನ್ನು ಮಾಡಿಕೊಂಡು ಇಸ್ಲಾಮೀಕರಣದ ತಮ್ಮ ಅಜೇಂಡಾವನ್ನು ಇವರು ಒಂದಲ್ಲ ಒಂದು ರೀತಿಯಲ್ಲಿ ಮುಂದುವರೆಸಿಕೊಂಡು ಬಂದರು.ಮುಂಬೈ ಸರಣಿ ಬಾಂಬ್ ಬ್ಲಾಸ್ಟ್ ನಿಂದ ಹಿಡಿದು ಇತ್ತೀಚಿನ ದಿನಗಳವರೆಗೂ ದೇಶದಲ್ಲಿ ನಡೆದ ಬಾಂಬ್ ಸ್ಪೋಟದ ಆರೋಪಿಗಳು ಒಂದೋ ನಿಷೇಧಿತ ಸಿಮಿಯ ಕಾರ್ಯಕರ್ತರಾಗಿದ್ದವರು ಅಥವಾ ಹೊಸತೊಂದು ಸಂಘಟನೆಯ ಬ್ಯಾನರಿನಡಿಯಲ್ಲಿ ಸಿಮಿಯ ಕಾರ್ಯವನ್ನೇ ಮುಂದುವರೆಸಿದ್ದವರು.ಅಂದರೆ ಒಂದು ವಿಷಯ ಸ್ಪಷ್ಟವಾಗಿದೆ. ಸಂಘಟನೆ ನಿಷೇಧವಾದರೂ, ಹೆಸರು ಬದಲಾದರೂ ಅವರ “ಉದ್ದೇಶ” ಬದಲಾಗಲಿಲ್. ಏಕೆ? ಈ ಪ್ರಶ್ನೆಗೆ ಉತ್ತರ ಡಾ.ಬಿ.ಆರ್ ಅಂಬೇಡ್ಕರ್ ಅವರ “Pakistan or Partition of India” ಪುಸ್ತಕದಲ್ಲಿ ಸಿಗುತ್ತದೆ. ಆ ಪುಸ್ತಕದಲ್ಲಿ ಅಂಬೇಡ್ಕರ್ ಅವರು ಭಾರತದ ವಿಭಜನೆ ಮತ್ತು ಪಾಕಿಸ್ತಾನದ ಬಗ್ಗೆ ಮಾತ್ರ ಮಾತನಾಡಿಲ್ಲ,ಅವೆರಡರ ಜೊತೆಗೆ ಮುಖ್ಯವಾಗಿ,ಇಸ್ಲಾಮ್ ಹಾಗೂ ಭಾರತೀಯ ಮುಸ್ಲಿಂರ ಮನಸ್ಥಿತಿಯ ಬಗ್ಗೆಯೂ ವಿವರವಾಗಿ ಬರೆದಿದ್ದಾರೆ.
ಇಂತಹ ಸಂಘಟನೆಗಳ ಬಹುಮುಖ್ಯ ಉದ್ದೇಶ,ಒಂದು ದೇಶವನ್ನು ದಾರ್-ಉಲ್-ಅರ್ಬ್ ನಿಂದ ದಾರ್-ಉಲ್-ಇಸ್ಲಾಮ್ ಮಾಡುವುದೇ ಆಗಿರುತ್ತದೆ. ಏನಿದು ದಾರ್-ಉಲ್-ಅರ್ಬ್/ದಾರ್-ಉಲ್-ಇಸ್ಲಾಮ್? ಅಂಬೇಡ್ಕರ್ ಅವರ ಮಾತನ್ನೇ ಕೋಟ್ ಮಾಡುತ್ತೇನೆ. “… According to Muslim Canon Law the world is divided into two camps, Dar-ul-lslam (abode of Islam), and Dar-ul-Harb (abode of war). A country is Dar-ul-lslam when it is ruled by Muslims. A country is Dar-ul-Harb when Muslims only reside in it but are not rulers of it. That being the Canon Law of the Muslims, India cannot be the common motherland of the Hindus and the Musalmans. It can be the land of the Musalmans—but it cannot be the land of the ‘Hindus and the Musalmans living as equals…” ಅಂದರೆ, ಯಾವ ದೇಶವು ಸಂಪೂರ್ಣವಾಗಿ ಇಸ್ಲಾಮ್ ಅನ್ನು ಒಪ್ಪಿಕೊಂಡು ಮುಸ್ಲಿಮರಿಂದ ಆಳಲ್ಪಡುತ್ತಿದೆಯೋ ಅದು ದಾರ್-ಉಲ್-ಇಸ್ಲಾಮ್ ಎಂದು ಕರೆಸಿಕೊಳ್ಳುತ್ತದೆ. ಯಾವ ದೇಶವು ಮುಸ್ಲಿಮೇತರರಿಂದ ಆಳಲ್ಪಡುತ್ತಿದೆಯೋ ಅದು ದಾರ್-ಉಲ್-ಅರ್ಬ್ ಆಗಿರುತ್ತದೆ.
ಕೋರೆಗಾಂವ್ ಸ್ವಾಭಿಮಾನದ ವಿಜಯವಾದರೆ ಕೊಡವರದ್ದೇನು?
