ಸೈಮನ್ ಅಯೋಗಕ್ಕೆ ತೊಡೆ ತಟ್ಟಿದ ಪಂಜಾಬಿನ ಕೇಸರಿ.
– ಶಿವಾನಂದ ಶಿವಲಿಂಗ ಸೈದಾಪೂರ
ಪಂಜಾಬ್‍ದ ಕೇಸರಿ ಎಂದೇ ಪ್ರಸಿದ್ದರಾದ ಲಾಲಾ ಲಜಪತ್ ರಾಯರು 1865 ರ ಜನೇವರಿ 28 ರಂದು ಪಂಜಾಬ್ ನ ಮುನ್ಷಿ ರಾದಾಕೃಷ್ಣ ಆಜಾದ್ ಮತ್ತು ಗುಲಾಬ್ ದೇವಿಯರ ಮಗನಾಗಿ ಜನಿಸಿದರು. ಸ್ವತಂತ್ರ ಹೋರಾಟದ ದಿಕ್ಕನ್ನೇ ಬದಲಿಸಿದ ಒಂದೇ ಹೆಸರಿನಿಂದ ಮೂವರು ಜನ ಗುರುತಿಸಿಕೊಂಡ “ಲಾಲಬಾಲಪಾಲ್” ರಲ್ಲಿ ಇವರು ಒಬ್ಬರು.
1905 ರ ವರೆಗೂ ಕಾಂಗ್ರೇಸ್‍ನ ನೀತಿಯಿಂದಾಗಿ ಮಂದಗತಿಯಲ್ಲಿಯೇ ಸಾಗುತ್ತಿದ್ದ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕ್ರಾಂತಿಯ ಕಿಚ್ಚನ್ನು ಉದ್ದೀಪನಗೊಳಿಸಿದವರಲ್ಲಿ ಇವರು ಒಬ್ಬರು. ಪ್ರಖರ ವಾಗ್ಮಿಯಾದ ಇವರು ತಮ್ಮ ಭಾಷಣಗಳಲ್ಲಿ “ಜಗತ್ತಿನ ಇತಿಹಾಸ ರೂಪಗೊಂಡಿದ್ದೇ ರಕ್ತದಿಂದ. ನಮ್ಮ ಮಾತೃಭೂಮಿ ನಮ್ಮ ರಕ್ತವನ್ನು ಅಪೇಕ್ಷಿಸುತ್ತಾಳೆ. ರಾಷ್ಟ್ರಕ್ಕಾಗಿ ಅದನ್ನು ನೀಡಿಯೇ ಅಮರರಾಗೋಣ”. ಎಂದು ಸದಾಕಾಲ ಭಾರತೀಯ ಕ್ಷಾತ್ರ ಪರಂಪರೆಯನ್ನು ಎಚ್ಚರಗೊಳಿಸುತಿದ್ದರು. ಮಂದಗತಿಯಲ್ಲಿ ಸಾಗುತಿದ್ದ ಹೋರಾಟಕ್ಕೆ “ನಾವು ಒಂದು ಸಾಮ್ರಾಜ್ಯದ ಪ್ರಜೆಗಳು, ಭಿಕ್ಷುಕರಲ್ಲ. ಹೋರಾಟದ ಈ ಪ್ರಜ್ಞೆ ನಮ್ಮಲ್ಲಿರಬೆಕಾದದ್ದು ಅಗತ್ಯ. ನಮ್ಮ ಹಕ್ಕುಗಳನ್ನು ಪ್ರತಿಪಾದಿಸುವ ಪ್ರಜೆಗಳು ನಾವಾಗಿರಬೇಕು. ಒಂದು ದೃಢ ನಿಲುವನ್ನು ತಳೆದು ಅದಕ್ಕೆ ಅಂಟಿಕೋಳ್ಳಬೇಕು” ಎಂದು ಹೇಳುತಿದ್ದರು. “ಈ ಭೂಮಿಯ ಮೇಲೆ ಸೊಂಕಿರುವುದು ನಮ್ಮ ಪೂರ್ವಜರ ರಕ್ತ. ನಾವು ಅದರ ಮೇಲೆ ಬದುಕುತಿದ್ದೇವೆ. ಈ ಭೂಮಿ ನಮ್ಮದು ಇಲ್ಲವೇ ದೇವರದ್ದು” ಎಂದು ನಿರಂತರವಾಗಿ ಒತ್ತಿ ಒತ್ತಿ ಹೇಳಿದರು. ಮತ್ತಷ್ಟು ಓದು