ಜನ್ಮಾಷ್ಟಮಿಗೂ ಇಮಾಮ್ ಸಾಹೇಬ್ರಿಗೂ ಏನು ಸಂಬಂಧ ಎಂದು ಕೇಳುತ್ತಿರಾ?? ಖಂಡಿತಾ ಸಂಬಂಧ ಇದೆ..!!
– ಅಜಿತ್ ಶೆಟ್ಟಿ ಹೆರಾಂಜೆ
ಹೌದು ಉಡುಪಿಯ ಮಟ್ಟಿಗೆ ಜನ್ಮಾಷ್ಟಮಿಗೂ ಇಮಾಮ್ ಸಾಹೇಬ್ರಿಗೂ ಖಂಡಿತಾ ಸಂಬಂಧ ಇದೆ. ದುರಂತ ಅಂದ್ರೆ ಈ ಸಂಬಂಧದ ಬಗ್ಗೆ ನಮಗೆ ಯಾರೂ ಎಂದೂ ಹೆಳಿದವರೇ ಇಲ್ಲ. ಶಾಲಾ ಕಾಲೇಜುಗಳಲ್ಲಿ ನಮ್ಮ ಯಾವುದೇ ಶಿಕ್ಷಕರು ಈ ಸಂಬಂಧದ ಬಗ್ಗೆ ಪಾಠ ಮಾಡಲಿಲ್ಲ. ನಮಗೆ ಗಾಂಧಿ ಗೊತ್ತಿತ್ತು, ನಮಗೆ ಬುದ್ದ ಗೊತ್ತಿತ್ತು, ನಮಗೆ ಅಕ್ಬರ್ ಗೊತ್ತಿತ್ತು, ನಮಗೆ ಮುಸೊಲಿನಿ, ಹಿಟ್ಲರ್ ಚಗುವೇರ ಗೊತ್ತಿತ್ತು. ಆದ್ರೆ ನಮ್ಮೂರಿನ ಮಹಾತ್ಮರ ಬಗ್ಗೆ ಗೊತ್ತೇ ಇಲ್ಲ. ಅವರು ನಮ್ಮ ಸಮಾಜವನ್ನು ಕಟ್ಟಲು ತಮ್ಮ ಇಡಿ ಜೀವಮಾನದ ಗಳಿಕೆಯನ್ನೆಲ್ಲವೂ ಸಮಾಜದ ಉದ್ದಾರಕ್ಕಾಗಿ ನೀರಿನಂತೆ ಹರಿಸಿ, ತಮ್ಮ ಇಡಿ ಜೀವನವನ್ನು ಸಮಾಜಕ್ಕಾಗಿ ತೇದಿ ಸವೆದು ಸದ್ದಿಲ್ಲದೆ ಮರೆಯಾದವರು. ಅವರಿಗೆ ಯಾವುದೇ ಪ್ರಚಾರದ ಹಂಗಿರಲಿಲ್ಲ, ಅವರಿಗೆ ತಮ್ಮ ಸಮಾಜದ ಬಗೆಗಿನ ತಾವು ನಿಭಾಯಿಸಬೇಕಿದ್ದ ಕರ್ತವ್ಯಗಳ ಅರಿವಿತ್ತು, ಸಮಸ್ಯೆಗಳು ಬಂದಾಗ ಅದನ್ನ ಸರ್ಕಾರ ಅಥವಾ ಇನ್ಯಾರೋ ಪರಿಹರಿಸಲಿ ಎಂದು ಯಾವತ್ತೂ ಕಾದವರಲ್ಲ. ಅವರು ಸ್ವತಃ ತಾವೇ ಅಂತಹಾ ಸಮಸ್ಯೆಗಳಿಗೆ ಎದೆಯೊಡ್ಡಿ ನಿಂತು ಪರಿಹರಿಸಿದವರು. ಆಗ ಅವರ ಕಣ್ಣಲ್ಲಿ ಜಾತಿ, ಮತ ,ಪಂತ, ಪಂಗಡ, ಇವ ನಮ್ಮವ ಇವ ಬೇರೆಯವನು ಎಂಬುವ ಯಾವುದೆ ಬೇಧ ಭಾವ ಇರಲಿಲ್ಲ. ಅವ್ರಲ್ಲಿ ಇದ್ದದ್ದು ಸಮಾಜದಲ್ಲಿ ತಾನು ಮಾಡಬೇಕಾಗಿದ್ದ ಕೆಲಸಗಳ ಬಗ್ಗೆ ಇದ್ದ ತುಡಿತ ಮಾತ್ರ. ಅಂತಹ ಅದೆಷ್ಟೋ ಗಣ್ಯರು ಕಾಲದ ಪುಟಗಳಲ್ಲಿ ಮರೆಯಾಗಿ ಹೋದರು. ಅವರನ್ನ ಅವರ ಸಾಧನೆಗಳನ್ನ ಮುಂದಿನ ತಲೆಮಾರಿಗೆ ಪರಿಚಯಿಸುವ ಹೊಣೆ ಹೊತ್ತ ಸರ್ಕಾರಗಳು ಇಂತವರ ಪರಿಚಯನ್ನು ಯಾವತ್ತೂ ಮುಂದಿನ ಪೀಳಿಗೆಗೆ ಮಾಡಲೇ ಇಲ್ಲ. ಅದಿರಲಿ ಸಮಾಜವೂ ಅಂತವರನ್ನ ಮರೆತಿತು. ಇಂತಹಾ ಅನೇಕ ಮರೆತುಹೋದ ಮಹಾನುಭಾವರಲ್ಲಿ ಉಡುಪಿಯ ಖಾನ ಬಹದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಕಾಸಿಮ್ ಸಾಹೇಬ್ ಬಹದ್ದೂರ್ ಕೂಡ ಒಬ್ಬರು. ಚಿಕ್ಕದಾಗಿ ಹೇಳೋದಾದರೆ ಹಾಜಿ ಅಬ್ದುಲ್ಲಾ ಸಾಹೇಬರು . ಹಾಜಿ ಅಬ್ದುಲ್ಲಾ ಸಾಹೆಬರು !! ? ಯಾರೀತ?? ಮತ್ತಷ್ಟು ಓದು