ವಿಷಯದ ವಿವರಗಳಿಗೆ ದಾಟಿರಿ

Archive for

24
ಜುಲೈ

ಹಿಟ್ಲರನ ಗೊಬೆಲ್ಸ್ ಮತ್ತು ಕಾಂಗ್ರೆಸ್ಸಿನ ರಾಹುಲ್

– ರಾಕೇಶ್ ಶೆಟ್ಟಿ

ಮೆಗಾಸೀರಿಯಲ್ಲುಗಳನ್ನೂ ಮೀರಿಸುವಷ್ಟು ಬೋರ್ ಹೊಡೆಸುವಂತಹ ಬಹಳಷ್ಟು ಕಾಮಿಡಿ ಶೋಗಳು ಈಗ ವಿವಿಧ ಚಾನೆಲ್ಲುಗಳಲ್ಲಿ ಬರುತ್ತವೆ. ಈ ಕಾಮಿಡಿ ಶೋಗಳಲ್ಲಿ ಮಾಡುವ ಕಾಮಿಡಿಗೆ,ಕಾರ್ಯಕ್ರಮದ ಪೇಯ್ಡ್ ತೀರ್ಪುಗಾರರು,ಸ್ಪರ್ಧಿಗಳು ಹಾಗೂ ಸ್ಟುಡಿಯೋದಲ್ಲಿ ಕುಳಿತವರನ್ನು ಹೊರತುಪಡಿಸಿ, ಟಿವಿಯಲ್ಲಿ ಇವರ ಕಾಮಿಡಿ ನೋಡುವ ಪ್ರೇಕ್ಷಕರ ಮುಖದಲ್ಲಿ ನಗು ಬಾರದಿರುವುದು,ಈ ಕಾಮಿಡಿ ಶೋಗಳ ಸ್ಪೆಷಾಲಿಟಿ.ಕಳೆದ ಶುಕ್ರವಾರ, ಚಾನೆಲ್ಲುಗಳಲ್ಲಿನ ಇಂತಹ ಕಳಪೆ ಕಾಮಿಡಿ ಶೋಗಳು ಟಿಆರ್ಪಿ ಕಳೆದುಕೊಂಡಿದ್ದವು.ಅಸಲಿ ಕಾಮಿಡಿಯೆಂದರೇನು ಎನ್ನುವುದನ್ನು ಲೋಕಸಸಭಾ ಚಾನೆಲ್ಲಿನಲ್ಲಿ ಶ್ರೀಮಾನ್ ರಾಹುಲ್ ಗಾಂಧಿಯವರು ತಮ್ಮ ಭಾಷಣದ ಮೂಲಕ ತೋರಿಸುತ್ತಿದ್ದರು. ನಕಲಿ ಅಪ್ಪುಗೆ-ಕ್ಲಾಸ್ ರೂಮಿನ ಪಡ್ಡೆ ಹುಡುಗನಂತೆ ಕಣ್ಣು ಹೊಡೆಯುವ ಚೇಷ್ಟೆಗಳೆಲ್ಲ ಬಹುಶಃ ಲೋಕಸಭಾ ಚಾನೆಲ್ಲಿನಲ್ಲೂ ಮೊದಲಬಾರಿಗೆ ಕಂಡ ದೃಶ್ಯಗಳು. ಗಂಜಿಗಿರಾಕಿಗಳು ಬರೆದುಕೊಟ್ಟ ನಾಟಕೀಯ ಸ್ಕ್ರಿಪ್ಟ್ ಮೂಲಕ ಜನರಲ್ಲಿ ನಗುಬುಗ್ಗೆ ಹರಿಸಿದ್ದೇ ರಾಹುಲ್ ಹೆಚ್ಚುಗಾರಿಕೆ.

ಲೋಕಸಭೆಯಲ್ಲಿ ನರೇಂದ್ರ ಮೋದಿಯವರ ಸರ್ಕಾರದ ವಿರುದ್ಧ, ಒಂದು ಕಾಲದ ಮಿತ್ರ ಪಕ್ಷ ಟಿಡಿಪಿ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯ ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಅಧ್ಯಕ್ಷ,ಸಂಸದ ರಾಹುಲ್ ಗಾಂಧೀ ಹೆಚ್ಚು ಕಡಿಮೆ ಒಂದುಗಂಟೆಗಳ ಕಾಲ ಮಾತನಾಡಿದರು. ರಾಜಕೀಯಕ್ಕೆ ಬಂದು ೧೩ ವರ್ಷಗಳಾದ ನಂತರ ಬರೆದುಕೊಟ್ಟ ಭಾಷಣವನ್ನು ಓದಿಕೊಂಡು ತುಸು ಗಂಭೀರವಾಗಿ ಅವರು ಮಾತನಾಡಿದ್ದು ಬಹುಶಃ ಇದೇ ಮೊದಲು. ಆತ ಮಾತನಾಡುವ ಶೈಲಿ ಬದಲಾಗಿದೆ,ಎದ್ದು ಕಾಣುತ್ತಿದ್ದ ಆತ್ಮವಿಶ್ವಾಸದ ಕೊರತೆಯನ್ನು ದನಿಯನ್ನು ಬದಲಿಸಿಕೊಳ್ಳುವ ಮತ್ತು ಆಕ್ರಾಮಕ ಶೈಲಿಯಿಂದ ಮುಚ್ಚಿಡಲು ಪ್ರಯತ್ನಿಸುತ್ತಿರುವಂತೆ ತೋರಿತು and Ofcourse ರಾಹುಲ್ ಭಾಷಣವೆಂದ ಮೇಲೆ ಇರಲೇಬೇಕಿದ್ದ ತಪ್ಪುಗಳು ಅಲ್ಲಿದ್ದವು. ಆದರೆ ಒಂದುಗಂಟೆಯ ಕಾಲದ ಈ ಭಾಷಣ ಅದೇ ತಲೆಮಾಸಿದ ಹಳಸಲು ಸುಳ್ಳಿನ ಕಂತೆಗಳಲ್ಲದೇ ಅದರಲ್ಲೇನು ವಿಷಯ ಇರಲಿಲ್ಲ.ಅದೂ ಈ ಮೊದಲಿನಿಂದಲೂ ರಾಹುಲ್ ಮತ್ತವರ ಕಾಂಗ್ರೆಸ್ ಪಕ್ಷ ಹೋದಲ್ಲಿ ಬಂದಲ್ಲಿ ನರೇಂದ್ರ ಮೋದಿವಯವರ ವಿರುದ್ಧ ಮಾಡುತ್ತಿರುವ ಸುಳ್ಳು ಆಪಾದನೆಗಳ ದೋಷಾರೋಪಣ ಪಟ್ಟಿಯನ್ನೇ ರಾಹುಲ್ ಮತ್ತೆ ಲೋಕಸಭೆಯಲ್ಲಿ ರಿಪೀಟ್ ಟೆಲಿಕಾಸ್ಟ್ ಮಾಡಿಸಿದರೇ ಹೊರತು ಅದರಲ್ಲಿ ನಯಾ ಪೈಸೆಯ ಹೊಸತನವಾಗಲಿ, ವೈಚಾರಿಕತೆಯಾಗಲಿ,ಸತ್ಯವಾಗಲಿ ಇರಲೇ ಇಲ್ಲ.ಕೆಲವು ದಿನಗಳ ಹಿಂದಿನ ಅಂಕಣದಲ್ಲಿ ‘ಗಂಜಿಗಿರಾಕಿಗಳೆಂಬ ಗೊಬೆಲ್ಸ್ ಗಳು” ಅಂತೊಂದು ಅಂಕಣವನ್ನು ಬರೆದಿದ್ದೆ. ಮೊನ್ನೆಯ ರಾಹುಲ್ ಭಾಷಣ ಕೇಳಿದ ನಂತರ ಈ ಗೊಬೆಲ್ಸ್ ತಂತ್ರವೇ ಕಾಂಗ್ರೆಸ್ಸಿನ ಚುನಾವಣಾ ಸ್ಟಾಟರ್ಜಿಯೆಂದು ಎಂದು ಊಹಿಸಬಹುದು. ಮತ್ತಷ್ಟು ಓದು »