ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 10, 2013

69

ಶಂಕರ ಬಟ್ಟರದ್ದು “ಎಲ್ಲರ ಕನ್ನಡ”ವೇ?

‍ನಿಲುಮೆ ಮೂಲಕ

– ಡಾ.ಮಾಧವ ಪೆರಾಜೆ

images

ಡಾ. ಆರ್. ಚಲಪತಿಯವರು ‘ತಂತಿ ಮೇಲಿನ ನಡಿಗೆ’ ಎನ್ನುವ ಪುಸ್ತಕವನ್ನು ಇದೀಗ ತಾನೇ ಪ್ರಕಟಿಸಿದ್ದಾರೆ. ‘ಕಲಿಕೆಯ ಕನ್ನಡದ ಬಗೆಗೆ ಬಲ್ಲವರೊಂದಿಗೆ ಮಾತು ಕತೆ’ ಎನ್ನುವ ಉಪಶೀರ್ಷಿಕೆಯೂ ಇದಕ್ಕಿದೆ. ಸಖಿ ಪ್ರಕಾಶನ ಹೊಸಪೇಟೆ ಇವರು ಇದನ್ನು ಪ್ರಕಟಿಸಿದ್ದಾರೆ. ಈ ಪುಸ್ತಕದಲ್ಲಿ ಬಳಕೆಯಾಗಿರುವ ಭಾಷೆಯ ಕುರಿತು ಒಟ್ಟಾರೆಯಾಗಿ ನಾನು ಮುಂದೆ ಚರ್ಚಿಸಲಿರುವುದರಿಂದ ಆರಂಭದಲ್ಲಿಯೇ ಒಂದು ಮಾತನ್ನು ವಿಶೇಷವಾಗಿ ಪ್ರಸ್ತಾಪಮಾಡಿ ಮುಂದುವರಿಯುತ್ತೇನೆ.ಈ ಪುಸ್ತಕದ ಮುಖಪುಟದ ಮೇಲಿನಿಂದ ಅದು ಸ್ವತಂತ್ರ ಪುಸ್ತಕದ ಹಾಗೆ ಕಾಣುತ್ತದೆ. ಆದರೆ ತೆರೆತೆರದಂತೆ ಅದು ಸಂಪಾದನೆ ಎನ್ನುವುದು ಸ್ಪಷ್ಟವಾಗುತ್ತದೆ.ಶಿಕ್ಷಣ ಕ್ಷೇತ್ರದಲ್ಲಿ ದಶಕಗಳಿಂದ ತೊಡಗಿಸಿಕೊಂಡಿರುವವರೊಂದಿಗೆ ಲೇಖಕರು ಮಾಡಿದ ಸಂದರ್ಶನಗಳಿರುವ ಪುಸ್ತಕವಿದು. ಹಾಗಿರುವಾಗ ಇಂತಹ ಪುಸ್ತಕವನ್ನು ಸಂಪಾದನೆ ಎಂದು ಸ್ಪಷ್ಟವಾಗಿ ಗುರುತಿಸಬೇಕು.ಅದುವೇ ಸರಿಯಾದ ವಿಧಾನ.

ಈ ಪುಸ್ತಕದಲ್ಲಿ ಪ್ರಯೋಗವಾಗಿರುವ ಭಾಷೆಯ ಕುರಿತು ಒಂದು ಉದಾಹರಣೆಯನ್ನು ನೀಡುತ್ತೇನೆ.

ಉದಾ: ೧:

“ಪದವಿ ತರಗತಿಗಳಲ್ಲಿ ಏನನ್ನು ಕಲಿಯುವುದು/ ಕಲಿಸುವುದಾಗಿರಬೇಕು?”

ಎಂ.ಜಿ.ಸಿ. ಯಾವುದೇ ಒಂದು ಮಾತ್ರುಬಾಶೆಯನ್ನು ತರಗತಿಯಲ್ಲಿ ಕಲಿಯುವ ವಿದ್ಯಾರ್‍ತಿಗೆ ಆ ಭಾಶೆಯಲ್ಲಿ ವ್ಯವಹರಿಸುವ ಸಾಮಾನ್ಯ ಜ್ನಾನವಿರುತ್ತದೆ. ತರಗತಿಗಳಲ್ಲಿ ಹೊಸ ಪಾರಿಬಾಶಿಕ ಪದಗಳು ಪರಿಚಯವಾಗುತ್ತವೆ. ಹಾಗೂ ಒಂದು ರೀತಿಯ ಆಲೋಚನಾ ಕ್ರಮಕ್ಕೆ ಆಡುಬಾಶೆಯಿಂದ ಶಿಶ್ಟಬಾಶೆಯ ಕಡೆಗೆ ಅವನ/ಳ ಗಮನ ಹರಿಯುತ್ತದೆ.

ಒಂದು ರೀತಿಯಲ್ಲಿ ಕಲಿಸುವವರು ಮತ್ತು ಕಲಿಯುವವರು ಅಸಹಾಯಕರು. ಪಟ್ಯಕ್ರಮ ಮತ್ತು ಪಟ್ಯವನ್ನು ಸಿದ್ದಪಡಿಸುವವರೇ ಬೇರೆಯವರಾಗಿರುತ್ತಾರೆ. ಈಗ ಪರಿಸ್ತಿತಿ ಸುದಾರಿಸುತ್ತಿದೆ ಎನಿಸಿದರೂ ವಿವಿಗಳ ಒಟ್ಟು ರಚನಾ ವಿನ್ಯಾಸವೇ ಪ್ಯೂಡಲ್ ಮಾದರಿಯದು- ವಸಾಹತು ಕಲ್ಪನೆಯದು. ಅವು ಇಂದಿಗೂ ಡೆಮಕ್ರೆಟಿಕ್ ಆಗಿಯೇ ಇಲ್ಲ.(ಪು.೧೨)

    ಉದಾ ೨:

ಮಹಾಲಿಂಗ: ಇಲ್ಲಿ ಆ ತರಹದ ಯೋಚನೆಗಳಲ್ಲಿ ಹೆಚ್ಚು ಕೆಲಸಗಳು ಆಗಿಲ್ಲ ಯಾಕಂದರೆ ಅದಕ್ಕೆ ತುಂಬಾ ಸೂಕ್ಯ್ಮ ಜಿಜ್ನಾಸೆಯ ಅಗತ್ಯವಿದೆ. ಮತ್ತು ಅದು ಅಂತಿಮವಾಗಿ ಮೆತೆಡಾಲಿಜಿಗೆ ಸಂಬಂದ ಪಟ್ಟ ವಿಶಯ (ಪು.೧೮೮).

ಈ ಎರಡು ಉಲ್ಲೇಖಗಳನ್ನು ನಾನು ಇಲ್ಲಿ ಉಲ್ಲೇಖಿಸುವುದಕ್ಕೆ ಕಾರಣಗಳಿವೆ. ಮೊದಲನೆಯಾದಾಗಿ ಎಂ.ಜಿ.ಸಿ (ಎಂ.ಜಿ.ಚಂದ್ರಶೇಖರಯ್ಯ) ಅವರ ಪರಿಚಯ ನನಗಿಲ್ಲ. ಹಾಗಾದುದರಿಂದ ಅವರು ‘ಜ್ಞಾನ ಎನ್ನುವುದನ್ನು ‘ಜ್ನಾನ ಎಂದು ಹೇಳಿದರೂ ಹೇಳಿರಬಹುದು. ಆದರೆ ಮಹಾಲಿಂಗರು ನನಗೆ ಗೊತ್ತು. ಅವರು ಮಂಗಳೂರಿನವರಾದುದರಿಂದ ಜಿಜ್ಞಾಸೆಯನ್ನು ‘ಜಿಜ್ನಾಸೆ’ ಎಂದು ಯಾವ ಕಾರಣಕ್ಕೂ ಉಚ್ಚರಿಸಲಾರರು; ಉಚ್ಚರಿಸುವುದಿಲ್ಲ. ಹಾಗಿದ್ದರೂ ಲೇಖಕರು ಅವರ ಉಚ್ಚಾರಣೆಯನ್ನು ತಪ್ಪಾಗಿ ಬರೆಯಲು ಕಾರಣವೇನು? ಘಟ್ಟದ ಮೇಲಿನ ಕನ್ನಡಿಗರಲ್ಲಿ ಅಂತಹದೊಂದು ಉಚ್ಚಾರಣೆಯ ಭೇದ ಇದ್ದರೂ ಇದ್ದೀತು. ಅದನ್ನು ಹಾಗೆ ಉಚ್ಚರಿಸದವವರಿಗೂ ಅನ್ವಯಮಾಡಿ ಕನ್ನಡ ಭಾಷಿಗರಿಗೆ ಜ್ಞ ಉಚ್ಚರಣೆ ಗೊತ್ತಿಲ್ಲ ಎಂದು ಸಾಧಿಸುವುದಾದರೂ ಏತಕ್ಕೆ?

ಈ ಎರಡು ಉದಾಹರಣೆಗಳನ್ನು ನೀಡಲು ಉದ್ದೇಶಗಳಿವೆ.ಅದೆಂದರೆ ಈ ಪುಸ್ತಕವು ಈಗ ಬಳಕೆಯಲ್ಲಿರುವ ಬರವಣಿಗೆಯ ಕ್ರಮವನ್ನು ಉದ್ದೇಶ ಪೂರ್ವಕವಾಗಿ ಅನುಸರಿಸುವುದಿಲ್ಲ. ಇದರಲ್ಲಿ ಮಹಾಪ್ರಾಣ ಬಳಕೆ ಇಲ್ಲ.(ಉದಾ:ವಿದ್ಯಾರ್‍ತಿ/ವಿದ್ಯಾರ್ಥಿ ಎಂದಿಲ್ಲ.);ಹಾಗೆಯೇ ಅರ್ಕಾವೊತ್ತು ಇಲ್ಲ. (ಉದಾ:ರ್‍ತಿ/ರ್ಥಿ ಎಂದಿಲ್ಲ. ‘ಷ’ ಕಾರದ ಬಳಕೆ ಇಲ್ಲ. (ಉದಾ:ಬಾಶೆ/ಭಾಷೆ ಎಂದಿಲ್ಲ)ಹಾಗೆಯೇ ಅನುನಾಸಿಕಗಳ ಬಳಕೆಯೂ ಇಲ್ಲ.(ಉದಾ:ಜ್ನಾನ/ಜ್ಞಾನ ಎಂದಿಲ್ಲ.)ಇಲ್ಲಿ ಪ್ರಯೋಗವಾಗಿರುವ ಪದಗಳಿಗೆ ಇನ್ನಷ್ಟು ಉದಾಹರಣೆಗಳನ್ನು ಮುಂದೆ ನೀಡಲಾಗಿದೆ:

ಸಂಸ್ಕ್ರುತಿ>ಸಂಸ್ಕೃತಿ

ಪಟ್ಯ>ಪಾಠ್ಯ

ಆರಂಬ>ಆರಂಭ

ಏಕಮುಕಿ>ಏಕಮುಖಿ

ಸ್ವಶ್ಟ>ಸ್ಪಷ್ಟ

ದೀರ್‍ಗ>ದೀರ್ಘ

ನಿವ್ರುತ್ತ>ನಿವೃತ್ತ

ಹವ್ದವ್ದು>ಹೌದುಹೌದು

ಇಲ್ಲಿ ಎಡಗಡೆಗೆ ಬರೆದಿರುವುದು ಚಲಪತಿಯವರ ಪುಸ್ತಕದಲ್ಲಿರುವ ಬಾಶೆ ! ಬಲಗಡೆ ಇರುವುದು ಕನ್ನಡದಲ್ಲಿ ಸರ್ವಸಾಧಾರಣವಾಗಿ ಬಳಕೆತಲ್ಲಿರುವ ಪ್ರಮಾಣಬದ್ಧವಾದ ಭಾಷೆ.ಅಂದರೆ ಇದು ಹೊಸ ಬರವಣಿಗೆಯ ಕ್ರಮದಲ್ಲಿದೆ ಎಂದಾಯಿತು.

ಕನ್ನಡದಲ್ಲಿ ಹೊಸ ಬರವಣಿಗೆಯ ಕ್ರಮದಲ್ಲಿ ಬರೆಯುವ ಕ್ರಮವೊಂದು ಈಗ ಮೆಲ್ಲನೆ ತಲೆದೋರುತ್ತಿದೆ .ಈ ಪ್ರಯತ್ನಕ್ಕೆ ನಾಂದಿ ಹಾಡಿದವರು ಡಾ.ಡಿ.ಎನ್ ಶಂಕರ ಭಟ್ಟರಾಗಿದ್ದಾರೆ. ಕನ್ನಡಕ್ಕೆ ಬೇಕು ಕನ್ನಡದೇ ವ್ಯಾಕರಣ ಎನ್ನುವ ಅವರ ಪುಸ್ತಕದಲ್ಲಿ ಇದರ ಮೊದಲ ಪ್ರಯತ್ನ ಕಂಡುಬರುತ್ತದೆ. ಅನಂತರ ಭಟ್ಟರ ಪ್ರಯತ್ನ ಅವ್ಯಾಹತವಾಗಿ ಮುಂದುವರಿಯುತ್ತದೆ.ಆ ಪ್ರಯತ್ನದ ಫಲವಾಗಿ ಅವರು ತಮ್ಮ ಹೆಸರನ್ನೇ ‘ಶಂಕರ ಬಟ್ಟ’(ಭಟ್ಟ ಎನ್ನುವುದಕ್ಕೆ ಬದಲಾಗಿ) ಎಂದು ಬದಲಾಯಿಸಿಕೊಂಡರು. ಹಾಗೆ ನೋಡಿದರೆ ಕನ್ನಡ ಭಾಷೆಯಲ್ಲಿ ‘ಶ’ಕಾರದ ಉಚ್ಚಾರಣೆ ಅಪರೂಪ,ಇಲ್ಲವೆಂದರೂ ನಡೆದೀತು. ಅದರ ಮುಂದುವರಿಕೆಯಾಗಿ ಶಂಕರ ಬಟ್ಟ ಎನ್ನುವುದನ್ನು ‘ಸಂಕರ ಬಟ್ಟ’ ಎಂದು ಅವರು ಯಾವಾಗ ಬದಲಾಯಿಸಿಕೊಳ್ಳುತ್ತಾರೋ ಎನ್ನುವ ಕುತೂಹಲ ಈಗಲೂ ನನಗಿದೆ,ಇರಲಿ !

ಶಂಕರ ಭಟ್ಟರು ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಎಂದು ಆರಂಭಿಸುವಾಗ ಮೊದಲಿಗೆ ಅವರು ದೂರಿದ್ದೇ ಕೇಶಿರಾಜನೇ ಮೊದಲಾದ ಹಳೆಗನ್ನಡ ವೈಯಾಕರಣಿಗಳನ್ನು.ಈ ಹಳೆಗನ್ನಡ ವ್ಯಾಕರಣಕಾರರು ಸಂಸ್ಕೃತ ವ್ಯಾಕರಣವನ್ನು (ಅವರ ಪ್ರಕಾರ ‘ಸಂಸ್ಕ್ರುತ’ ) ಕನ್ನಡ ಭಾಷೆಯ ಮೇಲೆ ಹೇರಿದರು. ಅದು ಕನ್ನಡಕ್ಕೆ ಸಹಜ ವ್ಯಾಕರಣ ಅಲ್ಲ ಎನ್ನುವುದು ಈಗಲೂ ಅವರು ಮಂಡಿಸುವ ವಾದವಾಗಿದೆ. ಹೀಗೆ ಮೊದಲಿಗೆ ಹಳೆಗನ್ನಡ ವ್ಯಾಕರಣವೆಲ್ಲವೂ ವ್ಯರ್ಥವೆಂದಮೇಲೆ ಭಟ್ಟರು ಕನ್ನಡದ್ದೇ ವ್ಯಾಕರಣ ಪುಸ್ತಕಗಳನ್ನೆಲ್ಲ ಬರೆಯ ಹೊರಟರು.

ಆದರೆ ಕೇಶಿರಾಜನೇ ಮೊದಲಾದವವರು ಕನ್ನಡಕ್ಕೆ ಸಹಜವಾದ ವ್ಯಾಕರಣವನ್ನು ಬರೆಯಲಿಲ್ಲ ಎನ್ನುವ ಶಂಕರ ಭಟ್ಟರ ವಾದವು ಒಂದು ತಪ್ಪು ಕಲ್ಪನೆಯಿಂದ ಬಂದಿರುವುದಾಗಿದೆ. ಕೇಶಿರಾಜನ ಶಬ್ದಮಣಿದರ್ಪಣದ ಈ ಪದ್ಯವನ್ನು ಗಮನಿಸಿ :

ಗಜಗನ ಗುಣನಂದಿಯ ಮನ

ಸಿಜನಸಗನ ಚಂದ್ರಭಟ್ಟ ಗುಣವರ್ಮ ಶ್ರೀ

ವಿಜಯರ ಹೊನ್ನನ ಹಂಪನ

ಸುಜನೋತ್ತಂಸನ ಸುಮಾರ್ಗವಿದರೊಳೆ ಲಕ್ಷ್ಯಂ||೫||

ಕೇಶಿರಾಜನೇ ಮೊದಲಾದ ವೈಯಾಕರಣಿಗಳು ಪ್ರಾಚೀನ ಕವಿಗಳ ಕಾವ್ಯದಲ್ಲಿ ಬಳಕೆಯಾದ ಬರೆಹದ ಕನ್ನಡಕ್ಕೆ ವ್ಯಾಕರಣವನ್ನು  ಬರೆದಿದ್ದರು. ಅಂದರೆ ಕನ್ನಡವನ್ನು ಬರೆಹದ ಭಾಷೆಯಾಗಿ ಗಟ್ಟಿಯಾಗಿ ನೆಲೆಗೊಳಿಸುವುದು ಅವರ ಉದ್ದೇಶವಾಗಿತ್ತು. ಏಕೆಂದರೆ ಹಲ್ಮಡಿ ಶಾಸನದಂತಹ ಬರೆವಣಿಗೆಯಲ್ಲಿ ‘ಪೆತ್ತಜಯನ್’ ಮೊದಲಾದ ಅಸಹಜ ಪ್ರಯೋಗಗಳು ನುಸುಳಿದ್ದವು.ಇದು ಮುಂದೆ ಕವಿರಾಜಮಾರ್ಗ’ದಲಿ ‘ರಾವಣನಂ ಕೊಂದು ಜಯಶೀ ವಧುವಂತಾಳ್ದಿ’ ಎಂದು ಬದಲಾಗುತ್ತದೆ. ಮುಂದೆ ಪಂಪ ಅದನ್ನು ‘ಶ್ರೀಯನರಾತಿ ಸಾಧನ ಪಯೋನಿಧಿಯೊಳ್ ಪಡೆದು’ ಎಂದು ಸರಿಗೊಳಿಸುತ್ತಾನೆ. ಈ ಪ್ರಯೋಗ ಹೀಗೆ ಸ್ಪಷ್ಟಗೊಳ್ಳಬೇಕಾದರೆ ಏನೆಲ್ಲ ರೂಪಗಳೊಂದಿಗೆ ಸಾಗಿ ಬಂದಿದೆ ಎಂದು ನಮಗೀಗ ಗೊತ್ತಾಗುವುದಿಲ್ಲ. ಏಕೆಂದರೆ ಕೇಶಿರಾಜ ಹೇಳುವ ಗಜಗ, ಗುಣನಂದಿ, ಅಸಗ ಮೊದಲಾದವರ ಕಾವ್ಯಗಳು ನಮಗೆ ದೊರೆತಿಲ್ಲ.

ಆಡು ಮಾತಿನಲ್ಲಿ ಶುದ್ಧಿಯನ್ನು ಹೇಗೆ ಕಾಪಾಡಬೇಕೆಂಬುದನ್ನು ವಿವರಿಸುವುದು ಸಂಸ್ಕೃತ ವೈಯಾಕರಣಿಗಳ ಉದ್ದೇಶವಾಗಿತ್ತು. ಏಕೆಂದರೆ ವೇದಗಳ ಉಚ್ಚಾರಣೆಯಲ್ಲಿ ದೋಷವಿರಬಾರದು, ಆ ಮೂಲಕ ಅದು ಖಿಲವಾಗಬಾರದು ಇತ್ಯಾದಿ ಉದ್ದೇಶಗಳು ಸಂಸ್ಕೃತ ವೈಯಾಕರಣಿಗಳ ಮುಂದಿದ್ದವು. ಹೀಗೆ ಎರಡು ಭಿನ್ನ ಪರಂಪರೆಗಳು ಕನ್ನಡ ಮತ್ತು ಸಂಸ್ಕೃತಗಳಲ್ಲಿ ಕಂಡು ಬರುತ್ತದೆ.ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಹಳಗನ್ನಡ ವ್ಯಾಕರಣ ಸರಿಯಿಲ್ಲ, ಹಳೆಗನ್ನಡ ವೈಯಾಕರಣಿಗಳು ಸೋಮಾರಿಗಳು ಎಂದರೆ ಏನು ಅರ್ಥ?

ಆದ್ದರಿಂದ ನಮ್ಮ ವೈಯಾಕರಣಿಗಳು ಈ ವರೆಗೆ ಬರವಣಿಗೆಯ ಕನ್ನಡಕ್ಕೆ (ನೆಲೆಸಿದ ಕನ್ನಡ ಎಂದು ಕವಿರಾಜಮಾರ್ಗಕಾರ ಹೇಳುವುದು ಇದನ್ನೇ) ವ್ಯಾಕರಣ ಬರೆದವರಾಗಿದ್ದಾರೆ. ಈ ಬರವಣಿಗೆಯ ಕನ್ನಡದಲ್ಲಿ ಮಹಾಪ್ರಾಣಗಳಿವೆ, ಸ, ಶ, ಷ ಕಾರಗಳಿವೆ, ಋ ಕಾರವಿದೆ, ಅನುನಾಸಿಕ ಇದೆ: ಬಹುಮಟ್ಟಿಗೆ ಸಂಸ್ಕೃತದಲ್ಲಿ ಬಳಕೆಯಲ್ಲಿರುವ (ಕೇಶಿರಾಜ ಹೇಳಿರುವ ಹತ್ತು ಅಕ್ಷರಗಳನ್ನುಳಿದು) ಎಲ್ಲ ವರ್ಣಗಳೂ ಬಳಕೆಯಲ್ಲಿವೆ. ಏಕೆಂದರೆ ಕವಿಗಳು ಅಂತಹ ಪ್ರಯೋಗಗಳನ್ನು ಮಾಡಿದ್ದಾರೆ. ಈಗಲೂ ಕನ್ನಡದ ಕಾವ್ಯಗಳನ್ನು ಅಧ್ಯಯನ ಮಾಡುವವರಿಗೆ ಅವುಗಳ ಉಪಯೋಗವಿದೆ. ಅಷ್ಟುಮಾತ್ರವಲ್ಲ ‘ಶ’ ಕಾರ ಮತ್ತು ‘ಷ’ ಕಾರ, ಹಾಗೆಯೇ ‘ಋ’ ಮತ್ತು ‘ರ’ ‘ಞ’ ಮತ್ತು ‘ಙ’ ಇವುಗಳನ್ನು ಉಚ್ಚರಿಸುವ ಕ್ರಮ ಹೇಗೆ ಎಂದು ಪರಂಪರೆಯಿಂದ ಗುರುಗಳು ಶಿಷ್ಯರಿಗೆ ತಿಳಿಸುತ್ತ ಬರುತ್ತಾರೆ. ಯಾವುದೇ ವರ್ಣವನ್ನು ಹೇಗೆ ಉಚ್ಚರಿಸುವುದು ಎನ್ನುವುದಕ್ಕೆ ಗುರು ಪರಂಪರೆ ಎನ್ನುವುದನ್ನು ಬಿಟ್ಟರೆ ಬೇರೆ ದಾರಿಗಳಿಲ್ಲ. ಸತ್ತವರ ಬಳಿಗೆ ಹೋಗಿ ಬದುಕಿದವರು ‘ಷ’ ಕಾರದ  ಉಚ್ಚಾರಣೆ ಹೇಗೆ  ಎಂದು ಹೇಳಿ ಎಂದು ಕೇಳಲಾಗುವುದಿಲ್ಲ. ಆದುದರಿಂದ ‘ಷ’ ಕಾರ ‘ಞ’ ಕಾರ ,‘ಙ’ಕಾರದ ಉಚ್ಚಾರಣೆ ಯಾರಿಗೋ ಬರುವುದಿಲ್ಲವೆಂದು ಅದು ಬೇಡವೆನ್ನುವುದು ಕೇವಲ ಮೂರ್ಖತನವಾಗುತ್ತ್ತದೆ. ಹಾಗೇ ಒಂದುವೇಳೆ ಇರುವುದೇ ಆದರೆ ದಕ್ಷಿಣ ಕನ್ನಡದ ನಮಗೆಲ್ಲ ಕನ್ನಡ ಮಾತಾಡುವುದಕ್ಕೆ ಸಾಧ್ಯವಾದರೂ ಹೇಗಾಗುತ್ತಿತ್ತು ? ಏಕೆಂದರೆ ಕನ್ನಡ ನಮ್ಮ ಮನೆ ಭಾಷೆಯಲ್ಲ. ಹಾಗಿದ್ದರೂ ನಾವು ಕೃಷ್ಣ ಎನ್ನುವುದನ್ನು ಕನಸಿನಲ್ಲಿಯೂ ಕ್ರುಶ್ಣ ಎನ್ನುವುದಿಲ್ಲ; ವಿಜ್ಞಾನ ಎನ್ನುವುದನ್ನು ವಿಜ್ನಾನ ಎನ್ನುವುದಿಲ್ಲ. ದಕ್ಷಿಣ ಕನ್ನಡದಲ್ಲಿ ಯಕ್ಷಗಾನವನ್ನು ಹಿಂದೆಯೂ ಉಳಿಸಿ ಬೆಳೆಸಿದವರು ಯಕ್ಷಗಾನ ಕಲಾವಿದರು; ಇಂದೂ ಉಳಿಸಿ ಬೆಳೆಸುವವರೂ  ಅವರೇ. ಹಿಂದಿನ ಯಕ್ಷಗಾನ ಕಲಾವಿದರೆಲ್ಲ ಪ್ರಾಥಮಿಕ ಶಾಲೆ ಓದಿದವರು ಕೂಡ ಅಲ್ಲ. ಎಷ್ಟೋ ಮಂದಿ ಅನಕ್ಷರಸ್ಥರು. ಅವರು ಅರ್ಥ ಹೇಳಿದ ಧ್ವನಿಮುದ್ರಣಗಳಿವೆ. ಅಲ್ಲೆಲ್ಲಿಯೂ ಅವರು ಕೃಷ್ಣ ಪದವನ್ನು ಕ್ರುಶ್ಣ ಎನ್ನುವುದಿಲ್ಲ. ಋಷಿ ಪದವನ್ನು ರುಶಿ ಎನ್ನುವುದಿಲ್ಲ. ಜನಸಾಮಾನ್ಯರಲ್ಲಿಯೂ ಜನಸಾಮಾನ್ಯರವರು, ಅಷ್ಟುಮಾತ್ರವಲ್ಲ ಎಷ್ಟೋಮಂದಿ ಕಲಾವಿದರೂ ದಲಿತ ಹಾಗೂ ಹಿಂದುಳಿದ ವರ್ಗದಿಂದ ಬಂದವರು. ಶಂಕರಭಟ್ಟರ ಅನುಯಾಯಿಗಳು ದಲಿತ ವರ್ಗದವರಿಗೆ ಪ್ರಮಾಣೀಕೃತ ಕನ್ನಡವನ್ನು ಮಾತನಾಡಲು ಬರುವುದಿಲ್ಲ ಎಂದು ವ್ಯಾಕರಣದಂತಹ ವಿಷಯದಲ್ಲಿ  ಜಾತಿಯನ್ನು ತುರುಕುವ ಪ್ರಯತ್ನ ಮಾಡುತ್ತಾರೆ. ಮೇಲೆ ಹೇಳಿದ ಯಕ್ಷಗಾನ ಕಲಾವಿದರೆಲ್ಲಾ ಶೂದ್ರಾತಿಶೂದ್ರ ವರ್ಗದಿಂದ ಬಂದವರು. ಅವರ ಆಡು ಮಾತು ತುಳು. ಆ ಮಾತಿನಲ್ಲಿ ‘ಶ’ ಕಾರದಂತಹ ವರ್ಣಗಳೇ ಇಲ್ಲ, ಮಹಾಪ್ರಾಣಗಳೂ ಇಲ್ಲ. ಆದರೆ ಯಕ್ಷಗಾನದ ಅರ್ಥಗಾರಿಕೆಯಲ್ಲ ಅದನ್ನು ಸರಿಯಾಗಿ ಬಳಸುತ್ತಾರೆ. ಯಾವ ಸಂಸ್ಕೃತ ವಿದ್ವಾಂಸರೂ ಈವರೆಗೆ ನಿಮ್ಮ ಉಚ್ಚಾರಣೆಯಲ್ಲಿ ದೋಷವಿದೆ ಎಂದಿಲ್ಲ.

ಇದರ ತಾತ್ಪರ್‍ಯ ಇಷ್ಟೆ: ಡಿ.ಎನ್.ಶಂಕರಭಟ್ಟರಿಗೆ ಕನ್ನಡ ವ್ಯಾಕರಣ ಪರಂಪರೆಯ ಬಗೆಗೆ ಆಳವಾದ ಅರಿವೇ ಇಲ್ಲ. ಅಷ್ಟು ಮಾತ್ರವಲ್ಲ ಅವರು ಬಳಸುವ ಪದಪ್ರಯೋಗಗಳು ಕನ್ನಡಕ್ಕೆ ಸಹಜವಾದುದಲ್ಲ. ಅವರು ಅರಿಮೆ ಎನ್ನುವ ಪದಪ್ರಯೋಗ ಮಾಡುತ್ತಾರೆ. ಕನ್ನಡಕ್ಕೆ ಸಹಜವಾದ ವ್ಯಾಕರಣದ ಪ್ರಕಾರವೂ ಇದು ಅಪಪ್ರಯೋಗ. ಅರಿವು ಪದಕ್ಕೆ ಅರಿಮೆ ಎನ್ನುವ ರೂಪ ಕನ್ನಡದಲ್ಲಿ ಸಿದ್ಧಿಸುವುದಿಲ್ಲ. ಹಾಗೆಯೇ ‘ಕೇಳ್ವಿ’ ಎನ್ನುವುದು ಪ್ರಶ್ನೆಗೆ ಸರಿಯಾದ ರೂಪವಲ್ಲ. (ಅದು ಕೇಳಿಕೆ ಎಂದಾಗಬೇಕು) ನಾಮಪದವೆಂದರೆ ಕೆಲಸಪದ ಅಲ್ಲ ;ಅದು ನಾಮ ಪದದ ವಿವರಣೆಯಾಗುತ್ತದೆ,ಅಷ್ಟೇ. ಪಾರಿಭಾಷಿಕ ಪದಗಳು ಸಾಮಾನ್ಯ ಪದಗಳಿಗಿಂತ ಭಿನ್ನವಾದವು.

ಇನ್ನು ಬರವಣಿಗೆಯು ಆಡುಮಾತಿಗನುಗುಣವಾಗಿರಬೇಕು ಎನ್ನುವುದು ಶುದ್ಧ ತಲೆಹರಟೆ ಹೊರತು ತರ್ಕಬದ್ಧವಾದುದ್ದಲ್ಲ. ಉದಾಹರಣೆಗೆ ‘ತೆಗೆದುಕೊಂಡು ಬಾ’ ಎನ್ನುವ ಪದಕ್ಕೆ ಆಡುಮಾತಿನಲ್ಲಿ ಈ ಕೆಳಗಿನಂತೆ ಪ್ರಾದೇಶಿಕ ರೂಪಗಳಿವೆ :

ತೆಗೆದುಕೊಂಡು ಬಾ

ಕೊಂಡು ಬಾ

ತಕ್ಕೊಂಡು ಬಾ

ತೆಕ್ಕೊಂಡು ಬಾ

ತಗೊಂಡು ಬಾ

ತಗ ಬಾ

ತಾಂಬಾ

ತಕ

ತಾ

ಇವು ಯಾವುದೂ ನನ್ನ ವೈಯಕ್ತಿಕ ಪ್ರಯೋಗಗಳಲ್ಲ. ಕರ್ನಾಟಕದ ಬೇರೆ ಬೇರೆ ಪ್ರಾದೇಶಿಕ ರೂಪಗಳಿವು.ಇನ್ನೂ ಪ್ರಾದೇಶಿಕ ರೂಪಗಳಿರಬಹುದು. ಬರವಣಿಗೆಯು ಆಡುಮಾತಿಗನುಗುಣವಾಗಿರಬೇಕು ಎಂದರೆ ಇವುಗಳಲ್ಲಿ ಯಾವ ರೂಪಕ್ಕನುಗುಣವಾಗಿರಬೇಕು?

ಕನ್ನಡ ಭಾಷೆಯಲ್ಲಿ ಕನ್ನಡದ್ದೇ ಪದಗಳಿರಬೇಕು ಎನ್ನುವ ವಾದವನ್ನೇ ಒಂದಷ್ಟು ಪರಿಶೀಲಿಸಬೇಕು.ಹಾಗೆ ನೋಡಿದರೆ ಈ ವಾದದ ಮೊದಲಿಗರು ಶಂಕರ ಭಟ್ಟರೇನಲ್ಲ. ಅದು ಕೇಶಿರಾಜನಲ್ಲೇ ಕಾಣಿಸಿಕೊಳ್ಳುತ್ತದೆ.ಕೊಳಂಬೆ ಪುಟ್ಟಣ್ಣ ಗೌಡರು ಅಚ್ಚಗನ್ನಡ ನುಡಿಕೋಶವನ್ನೇ ಬರೆದವರು.ಹೀಗೆ ಕ್ರಿ.ಶ. ೧೨ನೇ ಶತಮಾನದಲ್ಲೇ ಕಾಣಿಸಿಕೊಳ್ಳುವ ಈ ವಾದವನ್ನು ಇದೀಗ ಶಂಕರಭಟ್ಟರು ತಾನೇ ಹೋಸದಾಗಿ ರೂಪಿಸಿರುವ ಹಾಗೆ ನಮ್ಮ ಮುಂದಿಡುತ್ತಿದ್ದಾರೆ,ಇರಲಿ.ಅದೇನೇ ಇದ್ದರೂ ಕನ್ನಡದ ಬರವಣಿಗೆಯಲ್ಲಿ ಸಂಸ್ಕೃತ ಪದಗಳು ಎಲ್ಲಿ ಬರಬೇಕು, ಕನ್ನಡ ಪದಗಳು ಎಲ್ಲಿ ಬರಬೇಕು ಎನ್ನುವುದರ ಬಗೆಗೆ ಖಚಿತವಾದ ಜ್ಙಾನ ನಮ್ಮ ಕವಿಗಳಲ್ಲಿದೆ.ಉದಾಹರಣೆಗೆ

ಕುಮಾರವ್ಯಾಸನ ಕರ್ಣಾಟಭಾರತ ಕಥಾಮಂಜರಿಯಲ್ಲಿ ಬರುವ ಕರ್ಣಭೇದನ ಪ್ರಸಂಗವನ್ನೇ ಗಮನಿಸೋಣ:

ನಿನಗೆ ಹಸ್ತಿನ ಪುರದ ರಾಜ್ಯದ

ಘನತೆಯನು ಮಾಡುವೆನು ಪಾಂಡವ

ಜನಪ ಕೌರವ ಜನಪರೋಲೈಸುವರು ಗದ್ದುಗೆಯ ||

ಕೃಷ್ಣನು ಕರ್ಣನಿಗೆ ಹಸ್ತಿನಾವತಿಯ ಪಟ್ಟಾಭಿಷೇಕವನ್ನು ಮಾಡುತ್ತೇನೆ ಎಂದಾಗಲೀ,ನಿನ್ನನ್ನು ಚಕ್ರವರ್ತಿಯನ್ನಾಗಿ ಮಾಡುತ್ತೇನೆ ಎಂದಾಗಲೀ ಹೇಳುವುದಿಲ್ಲ.ಹಸ್ತಿನ ಪುರದ ರಾಜ್ಯದ ಘನತೆಯನು ಮಾಡುತ್ತೇನೆ ಎನ್ನುತ್ತಾನೆ.ಇಲ್ಲಿ ಘನತೆ ಎನ್ನುವ ಪದ ಕೇವಲ ಪ್ರಾಸಕ್ಕಾಗಿ ಬಂದಿರುವುದಲ್ಲ.ಕನ್ನಡ ಭಾಷೆಯಲ್ಲಿ ಅದಕ್ಕೆ ಸಮಾನವಾದ ಪದವೇ ಇಲ್ಲ.ಇದ್ದರೂ ಈ ಸಂದರ್ಭಕ್ಕೆ ಅದು ಉಚಿತವಾಗುವುದಿಲ್ಲ.ಅದು ಭರತಖಂಡದ ಸಾರ್ವಭೌಮತೆ,ಸಿರಿಸಂಪತ್ತು.ಚಂದ್ರವಂಶದ ಹಿನ್ನೆಲೆ,ಸೂರ್ಯನ ಪಿತೃತ್ವ -ಹೀಗೆ ಸಕಲವನ್ನೂ ಒಳಗೊಳ್ಳುವಂತಹುದು.ಅದನ್ನು ಗನತೆ ಎಂದು ಉಚ್ಚರಿಸಿದರೆ ಅದಕ್ಕೆ ಆ ತೂಕ ಬರುವುದಿಲ್ಲ.ಅದಕ್ಕಾಗಿಯೇ ಈಗಲೂ ಘನತೆವೆತ್ತ ರಾಜ್ಯಪಾಲರು ಎಂದು  ನಾವು ಹೇಳುವುದು( ಹಾಗೆ ಹೇಳಲು ನಮಗೆ ಕಲಿಸಿರುವುದೇ ಕುಮಾರವ್ಯಾಸ )ಹಾಗೆಯೇ ಕನ್ನಡ ಪದ ಎಲ್ಲಿ ಬರಬೇಕೆಂಬುದಕ್ಕೆ ವಿಕ್ರಮಾರ್ಜುನ ವಿಜಯಂ ಕಾವ್ಯದಲ್ಲಿ ಸೊಗಸಾದ ನಿದರ್ಶನವಿದೆ.ಆ ಪದ್ಯವೂ ಪ್ರಸಿದ್ಧವಾಗಿಯೇ ಇದೆ:

ನೆತ್ತಮನಾಡಿ ಭಾನುಮತಿ ಸೋಲ್ತೊಡೆ ಸೋಲಮನೀವುದೆಂದು ಕಾ

ಡುತ್ತಿರೆ ಲಂಬಣಂ ಪರಿಯೆ…

ಇಲ್ಲಿ ಪ್ರಯೋಗವಾಗಿರುವ ಸೋಲ ಎನ್ನುವ ಪದವು  ಪಣಕ್ಕೆ ಸಂವಾದಿಯಾದುದು.ಇದಕ್ಕೆ ಸಂವಾದಿಯಾಗಿ ಯಾವುದಾದರೊಂದು ಪದವನ್ನು ಬಳಸುವುದಕ್ಕೆ ಪಂಪನಿಗೆ ಶಬ್ದ ದಾರಿದ್ರ್ಯವೇನೂ ಇಲ್ಲ. ಹಾಗಿರುವಾಗಲೂ ಅಲ್ಲಿ ಯಾವುದೇ ಸಂಸ್ಕೃತ ಪದ ಉಚಿತವಲ್ಲವೆಂದೇ ಆ ಪ್ರಯೋಗ.

ಹೀಗೆ ಕನ್ನಡ ಭಾಷೆಯಲ್ಲಿ ಸಂಸ್ಕೃತದ ಪದಬಳಕೆಯು- ಅದು ಯಾವ ಯಾವ ವರ್ಣಗಳು  – ಕನ್ನಡದಲ್ಲಿವೆ ,ಇಲ್ಲ ಎನ್ನುವುದರ ಮೇಲೆ ಅವಲಂಬಿತವಾಗಿಲ್ಲ. ಕನ್ನಡದಲ್ಲಿ ಅದಕ್ಕೊಂದು ಪರಂಪರೆ ಇದೆ.ಜನ ಸಾಮಾನ್ಯರಲ್ಲಿ ಈಗ ಈ ಪರಂಪರೆಯ ಅರಿವು ಇಲ್ಲದಿರಬಹುದು. ಹೀಗೆಂದು ಸಂಸ್ಕೃತವನ್ನು ಪೂರ್ವ ಜನ್ಮದ ವೈರಿಯ ಹಾಗೆ ನೋಡಬೇಕಾಗಿಲ್ಲ.ಜನಗಳು ಸಂಸ್ಕೃತ ಪದಗಳನ್ನು ಕನ್ನಡದಲ್ಲಿ ಬಳಸಬೇಕೇ ಬೇಡವೇ ಎನ್ನುವುದು ವೈಯಾಕರಣಿಗಳ ವ್ಯಾಪ್ತಿಯಿಂದಾಚೆಗಿನ ಮಾತು.ನೆಲಸಿದ ಕನ್ನಡಕ್ಕೆ ವ್ಯಾಕರಣ ಬರೆಯುವುದು ಅವರ ಕೆಲಸ. ಕೇಶಿರಾಜನೇ ಮೊದಲಾದವರು ಪೂರ್ವಕವಿ ಪ್ರಯೋಗವಿರುವುದರಿಂದ ಅದು ಕನ್ನಡಕ್ಕೆ ಸಹಜವೆಂದರೇ ಹೊರತು ಬೇರೇನಿಲ್ಲ. ಒಂದು ವೇಳೆ ಕನ್ನಡ ಭಾಷೆಯಲ್ಲಿ ಆ ಪ್ರಯೋಗವೇ ಇಲ್ಲದೇ ಹೋದರೆ ಅವುಗಳನ್ನು ಹೇಳುವ ಪ್ರಸಂಗವೇ ಬರುತ್ತಿರಲಿಲ್ಲ.

ಕನ್ನಡ ಭಾಷೆಗೆ ಮಾತ್ರವಲ್ಲ ಈ ಪರಿವಾರದ ಎಲ್ಲ ಭಾಷೆಗಳಿಗೆ ಕೆಲವೊಂದು ಮೂಲಭೂತವಾದ ನ್ಯೂನತೆಗಳಿವೆ. ಇವುಗಳ ಪದಸಂಪತ್ತು ಮಿತವಾದುದು.ಪದರಚನೆಯಲ್ಲಿರುವ ನಿಯಮಗಳು ಸೀಮಿತವಾದವು. ಒಂದು ಪದಕ್ಕೆ ಏಕಕಾಲದಲ್ಲಿ ಅನೇಕ ಅರ್ಥಗಳನ್ನು ಹೊರಡಿಸುವ ಸಾಮರ್ಥ್ಯ ಅನೇಕ ಪದಗಳಿಗಿಲ್ಲ.ಸಂಸ್ಕೃತದಲ್ಲಿ ‘ಅಂಗ’ ಎನ್ನುವ ಸಾಮಾನ್ಯ ಪದಕ್ಕೆ ಸುಮಾರು ೧೬ಕ್ಕಿಂತಲೂ ಹೆಚ್ಚು ಅರ್ಥಗಳಿವೆ.ಹಾಗೆಯೇ ಅದರಲ್ಲಿ ಪ್ರತ್ಯಯಗಳಿಗೂ ವಿಪರೀತ ಬಲ.‘ಧಿ’ ಎನ್ನುವ ಪ್ರತ್ಯಯವೊಂದು ಎಷ್ಟೋ ಪದಗಳಿಗೆ ಪ್ರಯುಕ್ತವಾಗಿ ಅವುಗಳ ಹಣೆಬರಹವನ್ನೇ ಬದಲಾಯಿಸುತ್ತದೆ.ಆದರೆ ಕನ್ನಡದ ಪ್ರತಯ್ಯಗಳನ್ನು ಹಾಗೆ ಪ್ರಯುಕ್ತ ಮಾಡಲಾಗುವುದಿಲ್ಲ.ಇದನ್ನು ಮೀರುವ ಸಲುವಾಗಿಯೇ ಕನ್ನಡ  ಕವಿಗಳು ಅವರ ಬರೆಹಗಳಲ್ಲಿ ಯಥೇಚ್ಛವಾಗಿ ಸಂಸ್ಕೃತ ಪದಗಳನ್ನು ಬಳಸಿರುತ್ತಾರೆ.

    ಇನ್ನೂ ಒಂದು  ವಿಷಯವನ್ನು ಇಲ್ಲಿ ಪ್ರಸ್ತಾಪಿಸಬೇಕು.ಈ ಬರೆಹದ ಹಸ್ತಪ್ರತಿಯನ್ನು ನಮ್ಮ ವಿದ್ಯಾರ್ಥಿಗಳಿಗೆ ಅಕ್ಷರ ಸಂಯೋಜನೆಗೆಂದು ಕೊಟ್ಟಿದ್ದೆ.ಲೇಖನದ ಮೊದಲ ಭಾಗದಲ್ಲಿ ಬರುವ ಮಾತ್ರುಬಾಶೆ,ವಿದ್ಯಾರ್‍ತಿ ಜ್ನಾನ ಮೊದಲಾದುವುಗಳಿಗೆ ಬದಲಾಗಿ ಅವರು ಮಾತೃಭಾಷೆ, ವಿದ್ಯಾರ್ಥಿ,ಜ್ಞಾನ ಎಂದು ಪ್ರಮಾಣಬದ್ಧ ಭಾಷೆಯನ್ನು ಬಳಸಿದ್ದರು.ಈಗ ತಾನೇ ಎಂ.ಎ. ಮುಗಿಸಿರುವ ವಿದ್ಯಾರ್ಥಿಗಳವರು.ಅಂದರೆ ಚಲಪತಿಯವರು ಹೇಳುವ ಹಾಗೆ ಕಣ್ಣಿನ ಭಾಷೆ ಮತ್ತು ಕಿವಿಯ ಭಾಷೆಯ ನಡುವೆ ಈ ವಿದ್ಯಾರ್ಥಿಗಳಿಗೆ ಗೊಂದಲವಿಲ್ಲವೆಂದಾಯಿತು. ಅವರೆಲ್ಲರೂ ಗ್ರಾಮೀಣ ಭಾಗದವರೂ ದಲಿತ ವಿದ್ಯಾರ್ಥಿಗಳೂ ಆಗಿದ್ದಾರೆ. ಹಾಗಿರುವಾಗ ಸರಿ ದಾರಿಯಲ್ಲಿರುವ ವಿದ್ಯಾರ್ಥಿಗಳನ್ನು ತಪ್ಪು ನಡೆಯಿಡುವಂತೆ ಮಾಡುವುದಾದರೂ ಏಕೆ?

ಈ ಪುಸ್ತಕದಲ್ಲಿ ೧೯ ವಿದ್ವಾಂಸರ ,ಶಿಕ್ಷಣ ತಜ್ಞರ ಅಭಿಪ್ರಾಯಗಳಿವೆ.ಅವು ಮೌಲಿಕವಾಗಿಯೂ ಇವೆ.ಆದರೆ ಭಾಷೆಯ ಪ್ರಯೋಗವೇ ಸರಿಯಿಲ್ಲ. ತುಳು ಬಾಷೆಯಲ್ಲಿ ‘ಬಾಸೆ ಇದ್ದಿ’ (ಭಾಷೆ ಇಲ್ಲ )ಎಂದರೆ ನಡತೆ ಸರಿಯಿಲ್ಲ ಎಂದರ್ಥವೂ ಆಗುತ್ತದೆ.ವಿಚಾರವನ್ನು ಚರ್ಚೆ ಮಾಡಲು ಸರಿಯಾದ ಭಾಷೆಯ ಅವಶ್ಯಕತೆಯೂ ಇರುತ್ತದೆ. ಅದು ವ್ಯಾಕರಣ ಬದ್ಧವಾಗಿರಬೇಕೆಂದೇನೂ ಇದಕ್ಕೆ ಅರ್ಥವಲ್ಲ .ಅವು ಮುಜುಗರವನ್ನುಂಟು ಮಾಡಬಾರದು ಎಂದು ಅರ್ಥ. ಹೇಲತಾಕೋಮಲಾಂಗಿ, ಬನ್ನಿಯ ತರುಡೆಕ್ಕೆಗೆ/ ಸುರಹೊನ್ನೆಯ ತರುಡಮರುಗಕ್ಕೆ ಮೊದಲಾದ ಪ್ರಯೋಗಗಳು ಸರಿಯಿಲ್ಲ ಎಂದು ಕೇಶಿರಾಜ ಹೇಳುವಾಗ ವ್ಯಾಕರಣಕ್ಕಿಂತಲೂ ಮುಜುಗರದ ಪ್ರಶ್ನೆಯೇ ಅವನಿಗೆ ಅಡ್ಡಬಂದದ್ದು.

ಈಗ ಹೊಸ ಬರವಣಿಗೆಯೆಂದು ಪ್ರಕಟವಾಗುವ ಪುಸ್ತಕಗಳಲ್ಲಿ ಈ ಮುಜುಗರ ಮಾತ್ರವಲ್ಲ; ಅವು ಯಾರಿಗೂ ಅರ್ಥವಾಗುವುದಿಲ್ಲ.ಕೆಲಸ ಪದ ಎಂದರೆ ಕ್ರಿಯಾಪದ ಎಂದು ತಿಳಿಯಲು ಒಂದು ನಿಘಂಟು ಬೇಕು.(ಅಲ್ಲಲ್ಲ,ನಿಗಂಟು ) ಇವರು ಬಳಸುವ ಪದಗಳೆಲ್ಲ ಇವರಿಗೆ ಮತ್ತು ಆ ದೇವರಿಗೇ ಪ್ರೀತಿ ! ಅಂದರೆ ಯಾವ ರೀತಿಯಿಂದಾದರೂ ಜನಗಳ ಗಮನ ಸೆಳೆದು ಜನಪ್ರಿಯರಾಗಬೇಕೆನ್ನುವ ಹಪಹಪಿಕೆ ಬಿಟ್ಟರೆ ಬೇರೇನೂ ಇದರಲ್ಲಿ ಕಂಡು ಬರುವುದಿಲ್ಲ.

ಈ ಗ್ರಂಥವನ್ನು ಬರೆದ ಡಾ.ಆರ್.ಚಲಪತಿಯವರು ನನ್ನ ಸ್ನೇಹಿತರು.ಶಂಕರ ಭಟ್ಟರು ಹಿರಿಯರು ಮತ್ತು ದೊಡ್ಡ ವಿದ್ವಾಂಸರು.ಅವರು ಚೋಮ್‌ಸ್ಕಿಯಂತಹ ಅಂತಾರಾಷ್ಟ್ರೀಯ ವಿದ್ವಾಂಸರೊಂದಿಗೆ ಒಡನಾಟ ಇರುವವರಂತೆ.ಅವರಿಗೆ ಚೋಮ್‌ಸ್ಕಿಯೊಂದಿಗಲ್ಲ, ಸಾಕ್ಷಾತ್ ಬೃಹಸ್ಪತಿಯೊಂದಿಗೇ ಒಡನಾಟವಿರಲಿ. ಇಂತಹವರ ದೆಸೆಯಿಂದ ವಿದ್ಯಾರ್ಥಿ ಸಮುದಾಯವೇ ದಾರಿ ತಪ್ಪುತ್ತಿದೆ.ಈ ವಾದವನ್ನು ಮುಂದುವರಿಸುವವರಿಗೆ ಕನ್ನಡ ಭಾಷೆ ಮತ್ತು ಪರಂಪರೆಯ ಬಗೆಗೆ ಆಳವಾದ  ಜ್ಞಾನವಿಲ್ಲವೆನ್ನದೇ ಬೇರೆ ವಿಧಿಯಿಲ್ಲ.

***********

69 ಟಿಪ್ಪಣಿಗಳು Post a comment
  1. ಉಮೇಶ ಶೆಟ್ಟಿ
    ಏಪ್ರಿಲ್ 10 2013

    ಎಲ್ಲರಕನ್ನಡ ಎಂದರೇನು? http://www.ellarakannada.org/ellarakannada.html

    ಉತ್ತರ
  2. ಉಮೇಶ ಶೆಟ್ಟಿ
    ಏಪ್ರಿಲ್ 10 2013

    ಚಲಪತಿಯವರ ಪುಸ್ತಕ ಎಲ್ಲಿ ಸಿಗುತ್ತದೆ?

    ಉತ್ತರ
    • ಉಮೇಶ ಶೆಟ್ಟಿ
      ಏಪ್ರಿಲ್ 10 2013

      ಚಲಪತಿಯವರು “ಹೊಸ ಬರವಣಿಗೆಯಲ್ಲಿ” ಈ ಪುಸ್ತಕವನ್ನು ಬರೆದಿದ್ದರೆ, ಅದರಲ್ಲಿರುವ ಎಲ್ಲ ಉಲ್ಲೇಖಗಳೂ “ಹೊಸ ಬರವಣಿಗೆಯಲ್ಲಿ”ರುವುದು ಸಹಜವಲ್ಲವೇ?
      ಕತೆ, ಕಾದಂಬರಿ, ನಾಟಕಗಳಲ್ಲಿ ಪ್ರತಿಯೊಬ್ಬರ ಆಡು ಭಾಷೆಯನ್ನು ಬಳಸುವುದು ಸಾಮಾನ್ಯ. ಬರಹದ ವಸ್ತು “ಬಳಸುವ ಭಾಷೆ”ಗೆ ಸಂಬಂಧ ಪಟ್ಟಿರದ ಇತರ ಬರಹಗಳಲ್ಲಿ ಇತರರ ಹೇಳಿಕೆ ಉಲ್ಲೇಖಿಸುವಾಗ ಅದನ್ನು ಯಥಾವತ್ತಾಗಿ ಉಲ್ಲೇಖಿಸದೇ, ಬರಹ ದ ಭಾಷೆಯಲ್ಲಿ/ ಶೈಲಿಯಲ್ಲಿ ಉಲ್ಲೇಖಿಸುವುದು ಸಾಮಾನ್ಯ, ಅಲ್ಲವೆ.
      ಚಲಪತಿಯವರು ಈ ಪುಸ್ತಕದಲ್ಲಿ “ಮಹಾಲಿಂಗರಿಗೆ ಅನ್ವಯಮಾಡಿ ಕನ್ನಡ ಭಾಷಿಗರಿಗೆ ಜ್ಞ ಉಚ್ಚರಣೆ ಗೊತ್ತಿಲ್ಲ ಎಂದು ಸಾಧಿಸಿದರೆ”
      ಅದು ತಪ್ಪು. ಹಾಗೆಂದು ಅವರು ಸಾಧಿಸಿದ್ದಾರೆಯೇ?
      ಇಲ್ಲದಿದ್ದರೆ ಮಹಾಲಿಂಗರ ಮಾತುಗಳನ್ನು ತಮ್ಮ ಪುಸ್ತಕದ “ಬರವಣಿಗೆಯ ಶೈಲಿಯಲ್ಲಿ” ಉಲ್ಲೇಖಿಸಿದರೆ ತಪ್ಪೇನಿಲ್ಲ, ಅಲ್ಲವೆ.

      ಉತ್ತರ
  3. ಏಪ್ರಿಲ್ 10 2013

    ಡಾ | ಮಾಧವ ಪೆರಾಜೆ ಅವರಿಗೆ, ’ಎಲ್ಲರಕನ್ನಡ’ವೆಂದರೇನು ಎಂಬುದು ತಿಳಿದಂತಿಲ್ಲ.
    ಡಿ. ಎನ್. ಶಂಕರ ಬಟ್ಟರ ಬಗೆಗೆ ವೈಯಕ್ತಿಕ ನಿಂದನೆಗಿಳಿದಿರುವುದು, ವಿಚಾರ ಹಂಚಿಕೆಗೆ ಪೂರಕವಾಗಿಲ್ಲ.

    ಕರಾವಳಿಯಲ್ಲಿ “ಜ್ಞ” ಎಂದೇ ಉಲಿಯಲಾದರೂ, ಮಿಕ್ಕೆಡೆಗಳಲ್ಲಿ ಅದು “ಗ್ನ” ಎಂದು ಉಲಿಯಲ್ಪಡುತ್ತದೆ. “ಎಲ್ಲರಕನ್ನಡ” ಎಂದರೆ ಅದು ಎಲ್ಲರಿಗೂ ಹತ್ತಿರವಿರುವ ಕನ್ನಡವಾಗಿರಬೇಕೆಂಬುದನ್ನೇ ಶಂಕರ ಬಟ್ಟರು ಹೇಳುತ್ತಿರುವುದು. ಹಾಗಾಗಿ, “ವಿಗ್ನಾನ” ಎಂದು ಬರೆಯಲ್ಪಡುತ್ತದೆಯೇ ಹೊರತು “ವಿಜ್ನಾನ” ಎಂದಲ್ಲ.

    “ಕರಾವಳಿಯಲ್ಲಿ “ಜ್ಞ” ಎಂದು ಉಲಿಯಲಾಗುತ್ತಿದ್ದರೂ, ಅನುನಾಸಿಕ ಯಾಕೆ ಬಿಡಬೇಕು? ಬಿಟ್ಟರೆ ಅದು ಹೇಗೆ ಎಲ್ಲರಕನ್ನಡ?” ಎಂಬ ಪ್ರಶ್ನೆ ಮೂಡಬಹುದು. ಅದಕ್ಕೆ ಉತ್ತರ, ಇನ್ನೊಂದು ಪ್ರಶ್ನೆಯ ಮೂಲಕ ಕೊಡಬಹುದು ಎಂದನಿಸಿತು.
    ಮೈಸೂರಿನ ಕಡೆ ಮಾತಿನಲ್ಲಿ, ಇನ್ನೂ ಒಂದು ಬಗೆಯ ಅನುನಾಸಿಕವಿದೆ, ಅರೆ-ಉ (ತಮಿಳಿನಲ್ಲಿರುವಂತೆ) ಬಳಕೆಯಲ್ಲಿದೆ. ಅದಕ್ಕೂ ನಾವು ಬರಿಗೆ (ಅಕ್ಶರ) ಕೊಟ್ಟುಕೊಳ್ಳಬೇಕಲ್ಲವೇ? ಹಾಗೆ, ಕರ್ನಾಟಕದ ಹಲವೆಡೆಗಳಲ್ಲಿರುವ ಕನ್ನಡ ಮಾತುಗಳಲ್ಲಿ ಬೇರೆ ಬೇರೆ ಉಲಿಗಳು ಇವೆ. ಇವೆಲ್ಲಕ್ಕೂ ಬರಿಗೆ (ಅಕ್ಶರ) ಕೊಡುತ್ತಾ ಸಾಗಿದರೆ, ಕನ್ನಡದ ಬರಿಗೆಮಣೆ (ಅಕ್ಶರಮಾಲೆ) ಇನ್ನೂ ದೊಡ್ಡದಾಗುತ್ತಾ, ಸಿಕ್ಕಲು ಸಿಕ್ಕಲೆನಿಸುತ್ತದೆ. ಈ ಸಿಕ್ಕಲನ್ನು ಬಿಡಿಸಿ, ಬರವಣಿಗೆಯನ್ನು ಸಲೀಸು ಮಾಡುವುದೇ ಎಲ್ಲರಕನ್ನಡ.

    ಷ-ಕಾರದ ಬಗೆಗೂ ಡಾ | ಮಾಧವ ಪೆರಾಜೆಯವರಿಗೆ ತಿಳಿದಂತಿಲ್ಲ. “ವಿಶೇಷ” ಎಂದು ಬರೆದರೂ, “ವಿಶೇಶ” ಎಂದು ಬರೆದರೂ, “ವಿಷೇಶ” ಎಂದು ಬರೆದರೂ, ಕನ್ನಡಿಗರು ಓದುವುದು “ವಿಶೇಶ” ಎಂದೇ. ಕನ್ನಡಿಗರ ಉಲಿಕೆಯಲ್ಲಿ ಷ-ಕಾರ ಇಲ್ಲ.

    ಉತ್ತರ
    • ಏಪ್ರಿಲ್ 10 2013

      ಕರ್ನಾಟಕದ ಅನೇಕ ಜನ ‘ಹ’ಕಾರಕ್ಕೆ ‘ಅ’ಕಾರವನ್ನೂ, ‘ಅ’ಕಾರಕ್ಕೆ ‘ಹ’ಕಾರವನ್ನೂ ಬಳಸುತ್ತಾರೆ.
      ನಿಮ್ಮ “ಎಲ್ಲರ ಕನ್ನಡ”ದಲ್ಲಿ ಈ ಬದಲಾವಣೆ ಇರುವಂತೆ ಕಾಣುತ್ತಿಲ್ಲ.
      ಅದೇ ರೀತಿ, ಕೆಲವು ಪದಗಳನ್ನು ಪ್ರಯೋಗಿಸುವಾಗ ‘ಇ’ ಸೇರಿಸಿ ಪ್ರಯೋಗಿಸುವುದೂ ಅನೇಕರಿಗೆ ರೂಢಿಯಾಗಿದೆ.
      ಉದಾಹರಣೆಗೆ, “ಸ್ಕೂಲು” ಎನ್ನುವ ಬದಲು “ಇಸ್ಕೂಲು” ಎನ್ನುತ್ತಾರೆ.
      ನಿಮ್ಮ “ಎಲ್ಲರ ಕನ್ನಡ”ವು ಇದನ್ನು ಇನ್ನೂ ಗಮನಿಸಿರುವಂತಿಲ್ಲ.

      ಮತ್ತು ನೀವು “ಎಲ್ಲರ ಕನ್ನಡ” ಎಂಬ ಹೆಸರನ್ನು ಕೊಟ್ಟು, ಕರ್ನಾಟಕದ “ಎಲ್ಲರೂ” ಇದನ್ನು ಒಪ್ಪಿಬಿಟ್ಟಿದ್ದಾರೆ ಎಂದು ಹೇಳುತ್ತಿರುವಿರಿ.
      ಇಲ್ಲಿಯವರೆಗೆ ಈ ರೀತಿಯ ಅಭಿಪ್ರಾಯ ಸಂಗ್ರಹವಾಗಲೀ, ಅದಕ್ಕೆ ಪ್ರಯತ್ನವಾಗಲೀ ನಡೆದಿಲ್ಲ.
      ಹೀಗಾಗಿ, “ಎಲ್ಲರ ಕನ್ನಡ” ಎಂದು ಹೇಳಿ ಜನರನ್ನು ದಾರಿತಪ್ಪಿಸಲು ಪ್ರಯತ್ನಿಸುವ ಬದಲು “ಕೆಲವರ ಕನ್ನಡ” ಎಂದು ಹೇಳಿಕೊಂಡರೆ ಸತ್ಯಕ್ಕೆ ಹತ್ತಿರವಿರುತ್ತೀರಿ.

      ಉತ್ತರ
      • Priyank
        ಏಪ್ರಿಲ್ 10 2013

        ಕುಮಾರ್ ಅವರೇ,
        ’ಅ’-ಕಾರ ಮತ್ತು ’ಹ’-ಕಾರದ ಬಳಕೆ ಬಗ್ಗೆ ತಮಗೆ ತಿಳಿದಂತಿಲ್ಲ. ಈ ಬಗ್ಗೆ ನಡೆದಿರುವ ಸಂಶೋದನೆಗಳನ್ನು ತಿಳಿಯಲು ಈ ಅಂಕಣವನ್ನು ಬಿಡುವಿದ್ದಾಗ ಓದಿ: http://taayinaadunudi.wordpress.com/2013/03/27/soundchange3/
        ’ಹ’-ಕಾರವು ಹೆಚ್ಚಿನ ಕನ್ನಡಿಗರ ಉಲಿಕೆಯಲ್ಲಿದೆ. ಹಾಗಾಗಿ, ಕನ್ನಡದ ಬರವಣಿಗೆಗಳಲ್ಲಿ ’ಹ’-ಕಾರ ಉಳಿಸಿಕೊಳ್ಳುವುದೇ ತಕ್ಕುದಾಗಿದೆ.
        ನೀವು ಎತ್ತಿರುವ ಮಾತು, “ಕೆಲ ಕನ್ನಡಿಗರು ’ಹ’-ಕಾರದ ಬದಲಾಗಿ ’ಅ’-ಕಾರ ಉಲಿಯುತ್ತಾರೆ. ಹಾಗಿರುವಾಗ, ’ಹ’-ಕಾರವನ್ನು ಬರವಣಿಗೆಯಿಂದ ಬಿಡಬಹುದಲ್ಲವೇ?” ಎಂಬಂತೆ ತಿಳಿದುಕೊಂಡಿದ್ದೇನೆ.
        ಈ ಮಾತು, “ಜ್ಞ” ಉಲಿಕೆ ಕರಾವಳಿಯಲ್ಲಿರುವಾಗ ಆ ಬರಿಗೆ ಉಳಿಸಿಕೊಳ್ಳೋಣ ಎಂಬ ಡಾ | ಮಾಧವ ಪೆರಾಜೆಯವರ ಮಾತಿನಂತೆಯೇ ಇದೆ. ಹಾಗೆ ಮಾಡಿದರೆ, ಅದು “ಎಲ್ಲರಕನ್ನಡ”ವಾಗಲಾರದು.

        ಇನ್ನು, ’ಇ’-ಸೇರಿಸಿ ಹೇಳುವುದಕ್ಕೆ ತಾವು ಇಂಗ್ಲೀಶಿನ ಪದವೊಂದನ್ನು ತೆಗೆದುಕೊಂಡು ಹೇಳಿದ್ದೀರಿ. ಹೆಚ್ಚಿನ ಕನ್ನಡಿಗರು ಇಂಗ್ಲೀಶ್ ಪದಗಳನ್ನು ಹೇಗೆ ಉಲಿಯುತ್ತಾರೋ, ಹಾಗೇ ಬರೆಯುವುದರಿಂದ, ಬರವಣಿಗೆ ಸಲೀಸು ಎಂಬುದಷ್ಟೇ ಇಲ್ಲಿನ ಮಾತು.
        ಉದಾ: “ಷೇಕ್‍ಸ್ಪಿಯರ್” ಎಂದು ಬರೆದರೂ “ಶೇಕ್‍ಸ್ಪಿಯರ್” ಎಂದು ಬರೆದರೂ, ಓದುವುದು “ಶೇಕ್‍ಸ್ಪಿಯರ್” ಎಂದೇ. ಹಾಗಿರುವಾಗ “ಷೇಕ್‍ಸ್ಪಿಯರ್” ಎಂಬ ಬಗೆ ಬೇಕೇ ಎಂಬುದು ಪ್ರಶ್ನೆ.

        “ಎಲ್ಲರಕನ್ನಡ”ದ ಬಗ್ಗೆ ತಮಗೆ ಹೆಚ್ಚು ತಿಳಿದಂತಿಲ್ಲವಾದ್ದರಿಂದ, ಅದನ್ನು “ಕೆಲವರ ಕನ್ನಡ” ಎಂದು ಕರೆಯುತ್ತಿರುವಿರಿ. ದಿಟವು ಹಾಗಿಲ್ಲ. ದಿನಕಳೆದಂತೆ ತಮಗೇ ಇದು ತಿಳಿದು ಬರುತ್ತದೆ ಎಂಬ ನಂಬಿಕೆ ನನ್ನದು.

        ಉತ್ತರ
        • ಏಪ್ರಿಲ್ 10 2013

          ನಾನು ‘ಹ’ಕಾರ ಉಚ್ಚಾರದ ಕುರಿತಾಗಿ ಒಂದು ಉದಾಹರಣೆ ನೋಡಿ:
          “ನೀವು ಎತ್ತಿರುವ ಮಾತು” ಮಾತು ಎಂಬುದನ್ನು ಅನೇಕರು
          “ನೀವು ಹೆತ್ತಿರುವ ಮಾತು” ಎಂದಾಗಿ ಉಚ್ಚರಿಸುತ್ತಾರೆ.
          ಹಾಗೆಯೇ, “ಹೆಣ್ಣು” ಎಂಬ ಪದವನ್ನು “ಎಣ್ಣು” ಎಂದುಚ್ಚರಿಸುತ್ತಾರೆ.

          ನೀವು ನಿಮ್ಮಷ್ಟಕ್ಕೇ “ಎಲ್ಲರ ಕನ್ನಡ” ಎಂದು ಹೆಸರು ಕೊಟ್ಟು, ಅದರ ಕುರಿತಾಗಿ ಪ್ರಶ್ನೆ ಕೇಳುವವರಿಗೆ ಆ ಕುರಿತಾಗಿ ತಿಳಿದಿಲ್ಲ ಎಂದು ಸುಲಭವಾಗಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವಿರಿ.

          ನಿಜಕ್ಕೂ ನೀವು ಹೇಳುತ್ತಿರುವುದು ಎಲ್ಲರ ಕನ್ನಡವೇ ಆಗಿದ್ದರೆ, ಅದರ ಕುರಿತಾಗಿ ನಡೆದಿರುವ ಸಂಶೋಧನೆಗಳು, ಅಂಕಿ-ಅಂಶಗಳು, ಇತ್ಯಾದಿಗಳನ್ನು ಒದಗಿಸಿದರೆ ನಿಮ್ಮ ಮಾತಿಗೆ ಬೆಲೆ ಬರುತ್ತದೆ.

          ಉತ್ತರ
          • kspriyank
            ಏಪ್ರಿಲ್ 10 2013

            ಕುಮಾರ್ ಅವರೇ,
            ಹ-ಕಾರದ ತಪ್ಪು ಬಳಕೆಯ ಬಗ್ಗೆ ತಾವು ಎತ್ತಿರುವ ಪ್ರಶ್ನೆಗೆ ಉತ್ತರು ನಾನು ಕೊಟ್ಟ ಲಿಂಕಿನಲ್ಲಿಯೇ ಇದೆ.
            ತಾವು ನೋಡಿದಿರೇ? ನೋಡಿಲ್ಲದಿದ್ದರೆ, ಒಮ್ಮೆ ನೋಡಿ. ಪ್ರಶ್ನೆಗಳಿದ್ದರೆ, ಚರ್ಚೆ ಮಾಡೋಣ.

            ಸಂಶೋದನೆಗಳು ನಡೆದಿವೆ, ಮತ್ತವು ಹಲವಾರು ಹೊತ್ತಗೆಗಳಲ್ಲಿ ದಾಖಾಲಾಗಿವೆ ಕೂಡಾ. ತಾವು ನುಡಿಯರಿಮೆ ವಿಷಯವಾಗಿ ಡಾ | ಡಿ. ಎನ್. ಶಂಕರ ಬಟ್ಟರು, ಕೆ.ವಿ. ನಾರಾಯಣ ಅವರು, ಹಂಪಿ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಮೂಡಿ ಬಂದಿರುವ ಹೊತ್ತಗೆಗಳಲ್ಲಿ ತಾವು ಇದನ್ನು ಕಾಣಬಹುದು. ಒಂದು ಕಾಮೆಂಟಿನಲ್ಲಿ ಹಿಡಿದಿಡಬಹುದಾದ ವಿಷಯ ಇದಲ್ಲವಾದ್ದರಿಂದ, ಈ ಬಗ್ಗೆ ಆಳವಾಗಿ ತಿಳಿಯಲು ಹೊತ್ತಗೆಗಳನ್ನು ತಾವು ಓದಲೇಬೇಕು.

            ತಾವು ಎತ್ತಿದ ಪ್ರಶ್ನೆಗಳಿಂದ ನನಗೆ ಕಂಡುಬಂದಿದ್ದು, “ತಮಗೆ ಎಲ್ಲರಕನ್ನಡದ ಬಗ್ಗೆ ಹೆಚ್ಚು ತಿಳಿದಿಲ್ಲ” ಎಂಬುದು. ತಿಳಿದಿಲ್ಲ ಎಂದರೆ ತಪ್ಪೇನೂ ಅಲ್ಲ. ತಿಳಿದಿಲ್ಲದಿದ್ದರೂ, “ನಂಗೆ ಗೊತ್ತಿದೆ” ಎಂದುಕೊಂಡು ಕೂತಿರುವುದು ಮೌಡ್ಯವಾಗುತ್ತದಲ್ಲವೇ.

            ಉತ್ತರ
            • ಏಪ್ರಿಲ್ 10 2013

              > ತಾವು ಎತ್ತಿದ ಪ್ರಶ್ನೆಗಳಿಂದ ನನಗೆ ಕಂಡುಬಂದಿದ್ದು, “ತಮಗೆ ಎಲ್ಲರಕನ್ನಡದ ಬಗ್ಗೆ ಹೆಚ್ಚು ತಿಳಿದಿಲ್ಲ” ಎಂಬುದು.
              > ತಿಳಿದಿಲ್ಲ ಎಂದರೆ ತಪ್ಪೇನೂ ಅಲ್ಲ. ತಿಳಿದಿಲ್ಲದಿದ್ದರೂ, “ನಂಗೆ ಗೊತ್ತಿದೆ”
              > ಎಂದುಕೊಂಡು ಕೂತಿರುವುದು ಮೌಡ್ಯವಾಗುತ್ತದಲ್ಲವೇ.
              ತಿಳಿದಿಲ್ಲ ಎಂಬುದು ಮನವರಿಕೆಯಾದಾಗ ಒಪ್ಪಿಕೊಳ್ಳುವುದರಲ್ಲಿ ತಪ್ಪೇನಿಲ್ಲ.
              ನಾನು ಯಾರೆಂದು ನಿಮಗೆ ತಿಳಿದಿಲ್ಲ. ನನ್ನೊಡನೆ ಯಾವ ಚರ್ಚೆಯನ್ನೂ ಮಾಡಿಲ್ಲ. ನನ್ನ ಮೊದಲ ಉತ್ತರ ನೋಡಿಯೇ “ನನಗೆ ತಿಳಿದಿಲ್ಲ” ಎಂದು ನೀವು ನಿಷ್ಕರ್ಶೆಗೆ ಬಂದದ್ದು ನೋಡಿ ನನಗೆ ಈ ಕೆಳಗಿನ ಮಾತು ನೆನಪಿಗೆ ಬರುತ್ತಿದೆ:
              “ನನ್ನ ಬಾವಿ ನಿನ್ನ ಸಮುದ್ರಕ್ಕಿಂತ ಬಹಳ ದೊಡ್ಡದಾಗಿದೆ; ನನ್ನ ಬಾವಿ ಕುರಿತಾಗಿ ನಿನಗೆ ತಿಳಿದಿಲ್ಲ, ಅದಕ್ಕೇ ಹೀಗೆ ಹೇಳುತ್ತಿದ್ದೀಯಾ”

              ಇರಲಿ ಬಿಡಿ. ನನಗೆ ತಿಳಿದಿಲ್ಲ ಎಂದೇ ಇಟ್ಟುಕೊಳ್ಳೋಣ. ನೀವು ನನ್ನ ತಿಳುವಳಿಕೆ ಹೆಚ್ಚಿಸಲು ಕೆಲವು ಗ್ರಂಥಗಳನ್ನು ಅಧ್ಯಯಿಸಲು ತಿಳಿಸಿರುವಿರಿ. ಖಂಡಿತ ಅಧ್ಯಯನ ಮಾಡುತ್ತೇನೆ.
              ಆದರೆ, ನನ್ನ ಪ್ರಶ್ನೆಗೆ ನೀವಿನ್ನೂ ನೇರವಾಗಿ ಉತ್ತರಿಸಿಲ್ಲ.
              ನೀವು ಹೇಳುತ್ತಿರುವ “ಎಲ್ಲರ ಕನ್ನಡ” ಎನ್ನುವುದು ಹೆಚ್ಚಿನ ಜನ ಮಾತನಾಡುವ ಕನ್ನಡ ಎಂದು ನಿರೂಪಿಸಲು ನಡೆದಿರುವ ಸಮೀಕ್ಷೆ ಅಥವಾ ಜನಮತಗಣನೆಯ ಅಂಕಿ-ಅಂಶಗಳನ್ನು ಪ್ರಸ್ತುತಪಡಿಸಿ.
              ನೀವು ಹೇಳುತ್ತಿರುವ ಗ್ರಂಥಗಳೆಲ್ಲವೂ ಇತಿಹಾಸ ಸಂಶೋಧನೆಯ ಗ್ರಂಥಗಳು. ಅವು ಇತಿಹಾಸದ ಶಾಸನಗಳ ಆಧಾರದ ಮೇಲೆ ಕನ್ನಡ ಬೆಳೆದು ಬಂದ ಬಗೆ, ಇತ್ಯಾದಿಗಳನ್ನು ಆಧರಿಸಿ ಬರೆದಿರುವ ಸಂಶೋಧನಾ ಗ್ರಂಥಗಳು.
              ಆ ಗ್ರಂಥಗಳಾವುವೂ ಇಂದಿನ ಕನ್ನಡಿಗರ ನಡುವೆ ನಡೆಸಿರುವ ಸಮೀಕ್ಷೆಯಾಗುವುದಿಲ್ಲ ಅಥವಾ ಕನ್ನಡಿಗರ ಜನಮತಗಣನೆ ಎಂದು ಪರಿಗಣಿಸಲ್ಪಡುವುದಿಲ್ಲ.

              ಬಹುಸಂಖ್ಯಾತ ಕನ್ನಡಿಗರು ಒಪ್ಪಿದ್ದನ್ನು “ಎಲ್ಲರ ಕನ್ನಡ” ಎಂದು ಹೇಳಬಹುದು.
              ನೀವು ಹೇಳುತ್ತಿರುವ ಅಥವಾ ಹುಟ್ಟುಹಾಕುತ್ತಿರುವ ಕನ್ನಡವನ್ನು ಬಹುಸಂಖ್ಯಾತ ಕನ್ನಡಿಗರು “ನನ್ನ ಕನ್ನಡ” ಎಂದು ಒಪ್ಪಿದ್ದಾರೆನ್ನುವುದಕ್ಕೆ ಆಧಾರವಿದ್ದರೆ ದಯವಿಟ್ಟು ತಿಳಿಸಿ.
              ಆ ರೀತಿ ಆಧಾರವಿಲ್ಲದಿದ್ದರೆ ಇಲ್ಲ ಎಂದು ಒಪ್ಪಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಅಲ್ಲವೇ?

              ಇನ್ನು ನೀವು ನೀಡಿದ ಕೊಂಡಿಯಲ್ಲಿರುವ ಲೇಖನವನ್ನು ನಾನು ಓದಿರುವೆ.
              ಅದರಲ್ಲಿ, ಕನ್ನಡದ ‘ಪ’ ಯಾವ ರೀತಿಯಲ್ಲಿ “ಹ’ಕಾರ ಮತ್ತು ‘ಅ’ಕಾರವಾಗಿ ಮಾರ್ಪಟ್ಟಿದೆ ಎಂದು ತಿಳಿಸಿದ್ದಾರೆ.
              ಆದರೆ, ನನ್ನ ಪ್ರಶ್ನೆಯಿರುವುದು, ಅನೇಕ ಕನ್ನಡಿಗರು “ಹೆಣ್ಣು” ಎನ್ನುವ ಬದಲು “ಎಣ್ಣು” ಎಂದುಚ್ಚರಿಸುತ್ತಾರೆ.
              ಹೀಗಾಗಿ ನೀವು ಹುಟ್ಟುಹಾಕಿರುವ ಕನ್ನಡದಲ್ಲಿ ಉಚ್ಚರಿಸುವಂತೆಯೇ ಬರೆಯುವುದರಿಂದ, “ಎಣ್ಣು” ಎನ್ನುವ ಪದವನ್ನು ಏಕೆ ಬಳಸುತ್ತಿಲ್ಲ?

              ಅದೇ ರೀತಿ, “ಏಳು” ಎನ್ನುವ ಪದವನ್ನು ಅನೇಕರು “ಯೋಳು” ಎನ್ನುತ್ತಾರೆ. ನೀವು ಹುಟ್ಟುಹಾಕುತ್ತಿರುವ ಕನ್ನಡದಲ್ಲಿ ಇದರ ಪ್ರಸ್ತಾಪ ಏಕಿಲ್ಲ?

              ಉತ್ತರ
              • Priyank
                ಏಪ್ರಿಲ್ 10 2013

                ಕುಮಾರ್ ಅವರೇ,
                “ತಮಗೆ ತಿಳಿದಿಲ್ಲ” ಎಂದು ಹೇಳಿದ್ದನ್ನು ತಾವು, ಆಪಾದನೆಯಂತೆ ತೆಗೆದುಕೊಂಡಿರುವಿರೇನೋ.
                “ನಿಮಗೆ ತಿಳಿದಿಲ್ಲ, ಹಾಗಾಗಿ ಚರ್ಚೆಯಲ್ಲಿ ಪಾಲ್ಗೊಳ್ಳಬೇಡಿ” ಎಂದು ಹೇಳಿದ್ದರೆ ತಪ್ಪಾಗುತ್ತಿತ್ತು.
                “ನಿಮಗೆ ತಿಳಿದಿಲ್ಲ, ತಿಳಿದುಕೊಳ್ಳಿ, ಪ್ರಶ್ನೆಗಳಿದ್ದರೆ ಚರ್ಚೆ ಮಾಡಿ” ಎಂದೇ ಹೇಳುತ್ತಿರುವೆ.

                “ಎಣ್ಣು” ಎನ್ನುವ ಪದವನ್ನು “ಎಲ್ಲರಕನ್ನಡ”ದಲ್ಲೇಕೆ ಸೇರಿಸುತ್ತಿಲ್ಲ? ಎಂಬುದು ತಮ್ಮ ಪ್ರಶ್ನೆ.
                ’ಹ’-ಕಾರದ ಬದಲಿಗೆ ’ಅ’-ಕಾರ ಬಳಕೆಯಲ್ಲಿರುವುದು ಮೈಸೂರಿನ ಮತ್ತು ಬಳ್ಳಾರಿಯಲ್ಲಿನ ಕೆಲ ಊರುಗಳಲ್ಲಿ ಮಾತ್ರ. ಇದು ಸಂಶೋದನೆಗಳಿಂದ ತಿಳಿದುಬಂದಿರುವ ವಿಚಾರವಾಗಿದ್ದು, “ಯಾವ ಸಂಶೋದನೆಗಳು?” ಎಂಬ ಪ್ರಶ್ನೆ ತಮ್ಮಲ್ಲಿದ್ದರೆ, ನಾನು ಈಗಾಗಲೇ ಕೊಟ್ಟಿರುವ ಲಿಂಕಿನಲ್ಲೇ ತಮಗೆ ಉತ್ತರ ಸಿಗುತ್ತದೆ.
                ಹೆಚ್ಚಿನ ಕಡೆಗಳಲ್ಲಿ ’ಹ’-ಕಾರವೇ ಬಳಕೆಯಲ್ಲಿರುವಾಗ, ಬರವಣಿಗೆಯಲ್ಲಿ ’ಹ’ ಉಳಿಸುಕೊಳ್ಳುವುದೇ ತಕ್ಕುದು.

                ’ಶ’-ಕಾರ ಮತ್ತು ’ಷ’-ಕಾರಕ್ಕೆ ಹೋಲಿಸಿ ನೋಡಿದಾಗ, ಕನ್ನಡಿಗರ ಉಲಿಕೆಯಲ್ಲಿ ’ಷ’-ಕಾರ ಇಲ್ಲವೇ ಇಲ್ಲ. ಅದನ್ನು ಬರಿಗೆಯಿಂದ ಕೈ ಬಿಡೋಣವೆಂದರೆ, ವಿರೋದಿಸುವವರಿದ್ದಾರಲ್ಲ, ಅವರಿಗೂ ನೀವು ಹೇಳಿದ ಬಾವಿಯ ಕತೆ ಒಪ್ಪುತ್ತಲ್ಲವಾ?

                “ಯೋಳು” ಎಂಬ ಪದದ ಬಗ್ಗೆಯೂ ತಮ್ಮ ಪ್ರಶ್ನೆಯಿದೆ.
                “ಎಲ್ಲರಕನ್ನಡ”ದ ಬಗ್ಗೆ ವಿವರವನ್ನು ತಾವು ಓದಿರುವಿರೋ ಇಲ್ಲವೋ ಗೊತ್ತಿಲ್ಲ. ಇದುವರೆವಿಗೂ ಓದಿಲ್ಲದಿದ್ದರೆ, ಈ ಕೊಂಡಿಯಲ್ಲಿ ಓದಿರಿ: http://www.ellarakannada.org/ellarakannada.html
                ಹಳೆ-ಮೈಸೂರು ಊರುಗಳಲ್ಲಿ ಮನೆ ಎಂಬ ಪದವು, ಉತ್ತರ ಕರ್ನಾಟಕದಲ್ಲಿ “ಮನಿ” ಎಂದು ಬಳಕೆಯಲ್ಲಿದೆ. ಹಾಗಿದ್ದರೂ, ನಾವು ನಮ್ಮ ಬರವಣಿಗೆಯ ಕನ್ನಡದಲ್ಲಿ “ಮನೆ” ಎಂದೇ ಬಳಸುತ್ತೇವೆ. ಈ ಬರವಣಿಗೆಯ ಕನ್ನಡದಲ್ಲಿ ಬಳಕೆಯಾಗುವ ಒಳನುಡಿಯನ್ನೇ “ಎಲ್ಲರಕನ್ನಡ” ಎಂದು ಕರೆಯಲಾಗುತ್ತಿದೆ. ಈಗ ತಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿರಬಹುದು ಎಂದುಕೊಂಡಿದ್ದೇನೆ.

                ಉತ್ತರ
    • ಬಸವಯ್ಯ
      ಏಪ್ರಿಲ್ 10 2013

      ಬರಿಗೆ,ಕೆಲಸಪದ, ಸೊಲ್ಲರಿಗ,ಮಾಂಜುರಿಗ, ಬರಿಗೆಮಣೆ,ಅರಿಮೆ,ಕೆಳ್ವೆ ಇವೆಲ್ಲ ಸಾಮಾನ್ಯ ಜನ, ಕೆಳವರ್ಗದವರು ಈಗ ದಿನನಿತ್ಯ ಬಳಸುವ ಶಬ್ದಗಳೆ? ಇವೆನ್ಯಾಕೆ ಹೊಸದಾಗಿ ‘ನೀವು’ಗಳು (ಎಲ್ಲರ ಕನ್ನಡದ ಚಾಂಪಿಯನ್ ಗಳು) ಸೃಷ್ಟಿಸಿ ಜನರ ಮೇಲೆ ಏಕೆ ಹೇರುತ್ತಿದ್ದೀರಾ? ಈಗಿರುವ ಕನ್ನಡ ಇನ್ಯಾವುದೊ ಭಾಷೆಯ ಹೇರಿಕೆಯಿಂದ, ಕಲಬೆರೆಕೆಯಿಂದ ಹುಟ್ಟಿದ್ದು ಎಂದಾದರೆ ಈ ಎಲ್ಲರ ಕನ್ನಡದ ಹೊಸ ಪದಗಳು ಕೂಡ ಒಂದು ರೀತಿಯ ಹೇರಿಕೆಯೆ. ‘ಎಲ್ಲರ ಕನ್ನಡ’ವನ್ನು ಎಲ್ಲರ ಕನ್ನಡವನ್ನಾಗಿ, ತೀರ ಸುಲಭವನ್ನಾಗಿ ಮಾಡೋಣ. ಷ ಅಂತ ಬರೆಯಲಿ, ಶ ಅಂತ ಬರೆಯಲಿ, ಜ್ಞಾ ಅನ್ನಲಿ, ಗ್ನಾ ಅನ್ನಲಿ ಯಾವುದೇ ತಪ್ಪಲ್ಲ. ನಿಮಗೆ ಯಾವ ರೀತಿ ಹೇಳಬೇಕೆನಿಸುತ್ತೋ, ಬರೆಯಬೇಕೆನಿಸುತ್ತೊ ಹಾಗೆ ಮಾಡಿ ಎನ್ನೋಣ. ವ್ಯಾಕರಣ, ಸಂಧಿ-ಸಮಾಸಗಳ ಗೊಡವೆಯೆ ಬೇಡ. ಮನಸಿಗೆ, ನಾಲಗೆಗೆ, ತಲೆಗೆ ಬಂದಂತೆ ಮಾತನಾಡುವ ಕನ್ನಡ ಎಲ್ಲರ ಕನ್ನಡವಾಗಲಿ. ಆಗ ಯಾರೂ ಯಾರನ್ನು ತುಳಿದಂತಿರುವುದಿಲ್ಲ!.

      ಎರಡನೆಯದಾಗಿ ಈ ಎಲ್ಲರ ಕನ್ನಡ ಹುಟ್ಟಿದ್ದು ಕೇವಲ ಮಂಡ್ಯ,ಮೈಸೂರು ದಕ್ಷಿಣ ಕರ್ನಾಟಕ ಬೆಲ್ಟನವರಿಗಾಗಿಯೋ ಅಥವ ಉತ್ತರ ಕರ್ನಾಟಕದವರು ಕೂಡ ಇದರಲ್ಲಿ ಸೇರುತ್ತಾರೊ? ಮತ್ತೊಂದೆನೆಂದರೆ ಮೇಲೆ ಕುಮಾರವರು ಕೇಳಿದಂತೆ ಅಭಿಪ್ರಾಯ ಸಂಗ್ರಹ ಎಂದಾದರೂ ನಡೆದಿದೆಯಾ?

      ಉತ್ತರ
      • kspriyank
        ಏಪ್ರಿಲ್ 10 2013

        ಬಸವಯ್ಯನವರೇ,
        ಮೊದಲನೆಯದಾಗಿ, “ಕೆಲಸಪದ” ಎಂಬುದನ್ನು ಡಾ | ಮಾಧವ ಪೆರಾಜೆಯವರು ಎಲ್ಲಿ ಓದಿರುವರೋ ಕಾಣೆ. ಡಾ | ಡಿ. ಎನ್. ಶಂಕರ ಬಟ್ಟರು “ಕ್ರಿಯಾಪದ” ಎಂಬುದಕ್ಕೆ ಕನ್ನಡದಲ್ಲಿ “ಎಸಕಪದ” ಎಂಬ ಪದ ಬಳಸಿದ್ದಾರೆ.
        ಎರಡನೆಯದಾಗಿ, ನೀವು ಹೇಳಿರುವಂತೆ, ಈ ಎಲ್ಲಾ ಪದಗಳೂ ಕನ್ನಡಿಗರ ಮಾತಿನಲ್ಲಿ ಬಳಕೆಯಲ್ಲಿಲ್ಲ. ಇವನ್ನು ಕನ್ನಡದ್ದೇ ಪದಗಳನ್ನು ಬಳಸಿ ಕಟ್ಟಿದುದಾಗಿದೆ. ತಮ್ಮ ಗಮನಕ್ಕೆ ಬಂದಿಲ್ಲದಿರಬಹುದು, ಡಾ | ಡಿ. ಎನ್. ಶಂಕರ ಬಟ್ಟರು ತಮ್ಮ ಹೊತ್ತಗೆಯಾದ “ಇಂಗ್ಲೀಶ್ ಪದಗಳಿಗೆ ಕನ್ನಡದ್ದೇ ಪದಗಳು”-ನ್ನು ನಿಘಂಟು ಎಂದು ಕರೆದಿಲ್ಲ. ಅದನ್ನು ಪದನೆರಕೆ ಎಂದು ಕರೆದಿರುವರು. ನುಡಿಯರಿಗರೆಲ್ಲಾ ಒಪ್ಪುವಂತೆ, ನಿಘಂಟಿನಲ್ಲಿ, ಬಳಕೆಯಲ್ಲಿರುವ ಪದಗಳಿರಬೇಕು. ಹೊಸಪದಗಳು ಆಡುಮಾತಿನಲ್ಲಿ ಬಳಕೆಗೆ ಬಂದಮೇಲೆ ಮಾತ್ರಾ, ನಿಘಂಟಿನಲ್ಲಿ ಸೇರಬಹುದಾಗಿದೆ.

        ನಿಮ್ಮ ಇನ್ನೊಂದು ಪ್ರಶ್ನೆ, “ಈ ಪದಗಳನ್ನು ಯಾಕೆ ಜನರ ಮೇಲೆ ಹೇರುತ್ತಿದ್ದೀರಾ?”. ಶಂಕರ ಬಟ್ಟರು ತಮ್ಮ ಹೊತ್ತಗೆಗಳಲ್ಲಿ ಈ ಪದಗಳನ್ನು ಬಳಸಿದರೆ, ಅದು ಹೇರಿಕೆ ಅಲ್ಲ. ಬೇರೆ ಯಾವುದೋ ಕಾರಣಕ್ಕೆ ತಮಗೆ ಇದು ಹೇರಿಕೆ ಎಂದನಿಸಿದ್ದರೆ, ಅದನ್ನು ತಿಳಿಸಿ. ಚರ್ಚೆ ಮುಂದುವರೆಸೋಣ.
        ನಿಮ್ಮ ಈ ಪ್ರಶ್ನೆಗೆ ಸಂಬಂಧಪಟ್ಟಂತೆ, ನನ್ನದೊಂದು ಮರು-ಪ್ರಶ್ನೆ. ಕನ್ನಡದ ಪಟ್ಯಪುಸ್ತಕಗಳು ಹೊರಬಂದಾಗ, “ಅನುಲೋಮಾನುಪಾತ”, “ದ್ಯುತಿ ಸಂಶ್ಲೇಷಣ ಕ್ರಿಯೆ”, “ತ್ರುಷ್ಣ” ಎಂಬ ಪದಗಳನ್ನು ಬಳಸಲಾಗಿತ್ತಲ್ಲ, ಅವು ಯಾರ ಆಡುಮಾತಿನಲ್ಲಿದ್ದವು?

        “ಎಲ್ಲರಕನ್ನಡ”ವನ್ನು ಕಟ್ಟುವ ಕೆಲಸದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. “ಏನು ಬೇಕು, ಏನು ಬೇಡ” ಎಂಬ ಚರ್ಚೆ ಕನ್ನಡಿಗರಲ್ಲಿ ನಡೆಯಲಿ.

        ಉತ್ತರ
        • ಬಸವಯ್ಯ
          ಏಪ್ರಿಲ್ 10 2013

          ಒಟ್ಟಿನಲ್ಲಿ ಉಚ್ಚಾರಣೆಗೆ ಸುಲಭವಲ್ಲದ್ದು ಅನಿಸಿದ್ದನ್ನು ತೆಗೆದು, ನೆನಪಿಟ್ಟುಕೊಳ್ಳಲು ಸುಲಭವೆನಿಸದ ಹೊಸ ಪದಗಳು ಬರುತ್ತಿವೆ. ಬಾಣಲೆಯಿಂದ ಬೆಂಕಿಗೆ ಎಂಬಂತೆ.
          “ಅನುಲೋಮಾನುಪಾತ”, “ದ್ಯುತಿ ಸಂಶ್ಲೇಷಣ ಕ್ರಿಯೆ”, “ತ್ರುಷ್ಣ” ಎಂಬ ಮೂರ್ಖ ಶಬ್ದಗಳು,ಅನುವಾದಗಳು ಹೋಗಿ, ಆ ಜಾಗದಲ್ಲಿ ಸರಿಯಾದ,ಸುಲಭವಾದ ಕನ್ನಡ ಪದಗಳು ಅಥವಾ ಅವೇ ಇಂಗ್ಲಿಶ್ ಮೂಲ ಪದಗಳನ್ನು ಬಳಸುವುದನ್ನು ಒಪ್ಪಲೇಬೇಕಾದ್ದದ್ದು.. ಆದರೆ ‘ಕ್ರಿಯಾಪದ’ ತೆಗೆದು ‘ಎಸಕಪದ’ ಮಾಡುವ ಅನಿವಾರ್ಯತೆ ಬಗ್ಗೆ ತಿಳಿಯಲಿಲ್ಲ.

          ಉತ್ತರ
          • kspriyank
            ಏಪ್ರಿಲ್ 10 2013

            ಬಸವಯ್ಯನವರೇ,
            ನೆನಪಿಟ್ಟುಕೊಳ್ಳಲು ಸುಲಬವೆನಿಸದ ಪದಗಳು ಬಂದರೆ, ಅವು ತಾನಾಗಿಯೇ ಜನರ ಬಳಕೆಯಿಂದ ದೂರಾಗುತ್ತವೆ. ಅದರ ಬಗ್ಗೆ ಕೆಲವರಿಗೆ ಅಂಜಿಕೆ ಏಕೆ ಎಂಬುದು ನನಗೆ ಇವತ್ತಿಗೂ ತಿಳಿಯಲಾಗಿಲ್ಲ.

            ಕಷ್ಟದ ಪದಗಳ ಬದಲು ಸರಳವಾದ ಕನ್ನಡದ ಪದಗಳು ಬಂದು ಕೂರುವುದು ಒಳಿತು ಎಂಬುದನ್ನು ತಾವೂ ಒಪ್ಪಿದ್ದೀರಿ.
            “ಕ್ರಿಯಾಪದ” ಎಂಬುದರ ನಿಜವಾದ ಹುರುಳು ಹೆಚ್ಚು ಜನರಿಗೆ ತಿಳಿಯುವುದಿಲ್ಲ ಎಂಬುದು ನನ್ನನಿಸಿಕೆ. “ಎಸಕಪದ” ಎಂಬ ಪದವೂ ಹೆಚ್ಚು ಜನರಿಗೆ ತಿಳಿಯದೇ ಇರಬಹುದು. ಅದರ ಬದಲಾಗಿ, ಇನ್ನೂ ಒಳ್ಳೆಯ (ಹೆಚ್ಚು ಜನರಿಗೆ ತಟ್ಟನೆ ಅರಿವಾಗುವಂತಹ) ಪದವನ್ನು ತಾವು ಕಟ್ಟಿದರೆ, ಅದನ್ನೇ ಬಳಸೋಣ. ಬೇರೆ ಇನ್ಯಾರೋ ಕಟ್ಟಿದರೂ ಅದನ್ನೇ ಬಳಸೋಣ. “ಬರವಣಿಗೆ” ಮತ್ತು “ಓದು” ಇವೆರಡೂ ಸಲೀಸಾಗಲು ಏನು ಮಾಡಬೇಕೋ, ಅದನ್ನು ಮಾಡೋಣ.

            ಉತ್ತರ
    • ಏಪ್ರಿಲ್ 16 2013

      I am not personaly commeting to Dr.D N. Shankara Bhat.It was who personally attacked to scholars like Keshiraja and other classical writers. And his orguments are not new to Kannda scholarship.Originally Keshiraja himsely devolped such orguments and Dr D.N. Bhat continues such orguments without mentioning even his name .Another scholar by name, Kolomge puttanna Gowda who didicated his whole life for achackannada(Origanal Kannda) Followers of D N Shankar are shouting like anything. This is a acdemic debet and where the tradition, kannada languageand and also its future must important.

      ಉತ್ತರ
      • ಬಸವಯ್ಯ
        ಏಪ್ರಿಲ್ 16 2013

        ಪೆರಾಜೆ ಸರ್.. ನೀವು ಕೂಡ ಗೊತ್ತಾಗದೆಯೆ ಶಂಕರ ಬಟ್ಟರ ಪ್ರಭಾವಕ್ಕೆ ಸಿಲುಕಿರೊ ಹಾಗಿದೆ. ‘ಉಲಿದಂತೆ ಬರೆ’ ಎಂಬುದನ್ನು ನೀವು ಇಂಗ್ಲೀಶಿನಲ್ಲಿ ಅನುಸರಿಸಿದಂತಿದೆ! 🙂

        ಉತ್ತರ
  4. ಗಿರೀಶ್ ಕಾರ್ಗದ್ದೆ.
    ಏಪ್ರಿಲ್ 10 2013

    ನಾವು ಹೇಗೆ ಉಲಿಯುತ್ತೀವೋ ಹಾಗೆಯೇ ಬರೆಯುವುದು ಸರಿಯಾದದ್ದು. ಯಾಕೆಂದರೆ ನಾವು ಏನನ್ನು ಮಾತನಾಡುತ್ತೀವೋ ಅದು ನುಡಿ. ಬರವಣಿಗೆಯು ನಂತರದ್ದು. ನಮ್ಮ ಮಾತುಗಳಲ್ಲಿ ಸಹಜವಾಗಿ ಮಹಾಪ್ರಾಣಗಳು ಬರುವುದಿಲ್ಲ. ಮಂಜುನಾಥ್ – ಎಂಬುದನ್ನು ಮಂಜುನಾತ್ ಎಂದೇ ಹೆಚ್ಚಿನವರು ಉಲಿಯುವುದು. ಲೇಖನ ಅಂತಿದ್ದರೆ ಅದನ್ನು ‘ಲೇಕನ’ ಎಂದೇ ಓದುವುದು.ಹಾಗಾಗಿ ಮಕ್ಕಳಿಗೆ ಅಲ್ಪಪ್ರಾಣ ಮಹಾಪ್ರಾಣ ಎಂದು ಪ್ರಾಣ ಹಿಂಡುವ ಬದಲು ಸುಲಬವಾಗುವಂತೆ ಕಲಿಸಬೇಕು. ಅದೇ ಶ್ರಮವನ್ನು ಇತರೆ ಮೂಲಬೂತ ವಿಶಯಗಳನ್ನು ಕಲಿಯುವುದಕ್ಕೆ ಹಾಕಬಹುದಾಗಿದೆ.

    ಉತ್ತರ
    • ಏಪ್ರಿಲ್ 10 2013

      ನೀವು ಕನ್ನಡ ಕಲಿಕೆಯನ್ನು “ಪ್ರಾಣ ಹಿಂಡುವ” ಎಂದು ಹೇಳುತ್ತಿರುವಿರಿ.
      ಮಕ್ಕಳು ಕೇವಲ ಕನ್ನಡವನ್ನೇ ಕಲಿಯಬೇಕಿದ್ದರೆ, ಇನ್ನು ಯಾವ ಭಾಷೆಯನ್ನೂ ಕಲಿಯುವ ಅಗತ್ಯವೇ ಇಲ್ಲದಿದ್ದಿದ್ದರೆ, ನಿಮ್ಮ ಸಲಹೆಯನ್ನು ಅನುಸರಿಸಿ “ಪ್ರಾಣ ಹಿಂಡು”ವುದನ್ನು ತಪ್ಪಿಸಿಬಿಡಬಹುದಿತ್ತು.
      ಆದರೆ, ಮಕ್ಕಳು ಅವೈಜ್ಞಾನಿಕ ಭಾಷೆಯಾದ ಇಂಗ್ಲಿಷನ್ನೂ ಕಲಿಯಬೇಕಲ್ಲಾ?
      ಕನ್ನಡಕ್ಕಿಂತಲೂ ಹೆಚ್ಚು “ಪ್ರಾಣ ಹಿಂಡು”ವುದು ಇಂಗ್ಲಿಷೇ ಅಲ್ಲವೆ?
      ನನ್ನ ಮಾತಿನಲ್ಲಿ ನಿಮಗೆ ಸಂದೇಹವಿದ್ದರೆ, ಕಳೆದ ಒಂದಷ್ಟು ವರ್ಷಗಳ ೧೦ನೇ ತರಗತಿಯ ಫಲಿತಾಂಶಗಳ ಕಡೆಗೊಮ್ಮೆ ಕಣ್ಣು ಹಾಯಿಸಿ. ಹೆಚ್ಚಿನ ಮಕ್ಕಳು ಅನುತ್ತೀರ್ಣರಾಗಿರುವುದು ಇಂಗ್ಲಿಷಿನಲ್ಲಿ ಮತ್ತು ಗಣಿತದಲ್ಲಿ!

      ನಿಜಕ್ಕೂ ಮಕ್ಕಳಿಗೆ “ಪ್ರಾಣ ಹಿಂಡು”ವುದನ್ನು ತಪ್ಪಿಸಬೇಕಿದ್ದರೆ, ನೀವು ಬದಲಾಯಿಸಬೇಕಾದುದು ಇಂಗ್ಲಿಷನ್ನು.
      ಸಾಧ್ಯವಿದ್ದರೆ ತೆಗೆದುಹಾಕಬೇಕಾದುದು ಗಣಿತವನ್ನು.

      ಉತ್ತರ
      • ಏಪ್ರಿಲ್ 10 2013

        ಕುಮಾರ್ – ಕನ್ನಡ ಕಲಿಕೆಯನ್ನು ಪ್ರಾಣ ಹಿಂಡುವುದು ಎಂದು ನೀವು ಎಲ್ಲಿ ಓದಿಕೊಂಡರೋ ಗೊತ್ತಿಲ್ಲ. ನಾನು ಹೇಳಿರುವುದು ಮಹಾಪ್ರಾಣಗಳು ಮತ್ತು ಅಲ್ಪಪ್ರಾಣಗಳ ಗೊಂದಲಗಳು ಮತ್ತು ಅದನ್ನು ನೆನಪಿಟ್ಟುಕೊಳ್ಳುವ ಕಷ್ಟದ ಬಗ್ಗೆ. ಇಲ್ಲಿ ಚರ್ಚೆ ನಡೆಯುತ್ತಿರುವುದು ಕನ್ನಡ ನುಡಿಯ ಬಗ್ಗೆ, ಇಂಗ್ಲಿಶ್‍ನ ಬಗ್ಗೆ ಬೇಕಿದ್ದರೆ ಬೇರೆ ವೇದಿಕೆಯಲ್ಲಿ ಚರ್ಚಿಸೋಣ. ಜಗತ್ತಿನ ಹಲವು ಭಾಷೆಗಳಲ್ಲಿ ನುಡಿ ಸುದಾರಣೆಗಳು ಆಗಿವೆ. ಇದರಿಂದ ಅವರ ಕಲಿಕೆ ಉತ್ತಮಗೊಂಡಿದೆ. ಇದರ ಬಗೆಗಿನ ಸಂಶೋದನೆಗಳನ್ನು/ಇತಿಹಾಸವನ್ನು ನೀವು ಓದಿಕೊಂಡಿದ್ದೀರಾ?

        ಉತ್ತರ
      • kspriyank
        ಏಪ್ರಿಲ್ 10 2013

        ಕುಮಾರ್ ಅವರೇ,
        “ವ್ಯುತ್ಕ್ರಮ” ಎಂದರೆ ತಮಗೆ ಅರಿವಾಗುತ್ತೋ, “ತಲೆಕೆಳಗು/ಬುಡಮೇಲು” ಎಂದರೆ ಅರಿವಾಗುತ್ತೋ?

        ಉತ್ತರ
        • ಏಪ್ರಿಲ್ 10 2013

          > “ವ್ಯುತ್ಕ್ರಮ” ಎಂದರೆ ತಮಗೆ ಅರಿವಾಗುತ್ತೋ, “ತಲೆಕೆಳಗು/ಬುಡಮೇಲು” ಎಂದರೆ ಅರಿವಾಗುತ್ತೋ?
          ತಲೆಕೆಳಗು/ಬುಡಮೇಲು ಎನ್ನುವುದು ಸುಲಭವಾಗಿ ಅರ್ಥವಾಗುತ್ತದೆ.

          ಅದೇ ರೀತಿ “ಕ್ರಿಯಾಪದ” ಮತ್ತು “ಎಸಕಪದ”ಗಳಲ್ಲಿ “ಕ್ರಿಯಾಪದ” ಎನ್ನುವುದು ಸುಲಭವಾಗಿ ಅರ್ಥವಾಗುತ್ತದೆ.

          > ಹಳೆ-ಮೈಸೂರು ಊರುಗಳಲ್ಲಿ ಮನೆ ಎಂಬ ಪದವು, ಉತ್ತರ ಕರ್ನಾಟಕದಲ್ಲಿ “ಮನಿ” ಎಂದು ಬಳಕೆಯಲ್ಲಿದೆ.
          ಅನೇಕ ಪದಗಳು ಮತ್ತು ಉಚ್ಚಾರಣೆಗಳು ಆಯಾ ಪ್ರದೇಶಗಳಲ್ಲಿ ರೂಢಿಯಲ್ಲಿರುವಂತೆ ಅಭ್ಯಾಸವಾಗುತ್ತವೆ.
          ಉಚ್ಚಾರಣೆ ಸರಿಯಿಲ್ಲವೆಂದರೆ ಉಚ್ಚಾರಣೆಯನ್ನು ತಿದ್ದಬೇಕೇ ಹೊರತು ಭಾಷೆಯನ್ನೇ ಅಲ್ಲ.
          ಮಗುವು ಗಣಿತ ಕಲಿಯುವಾಗ 2X2 ಎಂದರೆ 5 ಎಂದು ಹೇಳುತ್ತಿದರೆ, ಅದಕ್ಕೆ ಸರಿಯಾದದ್ದನ್ನು ಅಭ್ಯಾಸ ಮಾಡಿಸುವಿರೋ ಅಥವಾ ಗಣಿತವನ್ನೇ ಬದಲಾಯಿಸಿಬಿಡುವಿರೋ?

          ಕನ್ನಡಿಗರಿಗೆ ‘ಹ’ಕಾರ ಬರುವುದಿಲ್ಲ ಅಥವಾ ಮಹಾಪ್ರಾಣ ಬರುವುದಿಲ್ಲ ಎನ್ನುವುದು ಒಪ್ಪತಕ್ಕ ಮಾತಲ್ಲ.
          ನಮ್ಮ ನಾಲಗೆಗೆ ಸಂಸ್ಕಾರ ನೀಡಿದಂತೆ ಅದು ಹೊರಳುತ್ತದೆ. ಚೀನಾದಲ್ಲಿ ಹುಟ್ಟಿದ ಮಗು ಚೀನಾ ಭಾಷೆ ಕಲಿಯುತ್ತದೆ. ಅದಕ್ಕೆ ಕನ್ನಡ ಕಲಿಯುವುದು ಕಷ್ಟವೆನಿಸುತ್ತದೆ.
          ಅದೇ ಮಗುವನ್ನು ಕರ್ನಾಟಕದಲ್ಲಿ ಬೆಳೆಸಿದರೆ ಅದು ಕನ್ನಡ ಕಲಿಯುತ್ತದೆ. ಆಗ ಅದಕ್ಕೆ ಚೀನೀ ಭಾಷೆ ಕಷ್ಟವೆನಿಸುತ್ತದೆ.

          ನಾವು ಒಂದೇ ಭಾಷೆಯನ್ನು ಜೀವಮಾನವೆಲ್ಲಾ ಬಳಸುತ್ತೇವೆ ಎಂದು ಹೇಳುವುದು ಸಾಧ್ಯವಿಲ್ಲ.
          ಇಂಗ್ಲಿಷ್, ಜಪಾನೀ ಭಾಷೆ, ಜರ್ಮನ್ ಭಾಷೆ, ಇತ್ಯಾದಿ ಭಾಷೆಗಳನ್ನು ಕಲಿಯುವ ಅಗತ್ಯ ನಿಮ್ಮ ಜೀವನದ ವಿವಿಧ ಹಂತಗಳಲ್ಲಿ ಬರುತ್ತದೆ.
          ಅದರಲ್ಲಿರುವ ಯಾವುದೋ ಪದದ ಉಚ್ಚಾರ ಕಷ್ಟವೆಂದು ನೀವು ಭಾಷೆಯನ್ನೇ ತಿದ್ದಲು ಬರುವುದಿಲ್ಲ.
          ಆಯಾ ಭಾಷೆ ಮತ್ತು ಜನಗಳಿಗನುಗುಣವಾಗಿ ಕಲಿಯಲೇಬೇಕು.

          ಅವೈಜ್ಞಾನಿಕ ಭಾಷೆಯಾದ ಇಂಗ್ಲಿಷನ್ನು ಕಲಿಯಲು ಯಾವುದೇ ಚಕಾರವೆತ್ತದ ನೀವು ಕನ್ನಡ ಕಲಿಯಲು ಏಕೆ ತಕರಾರು ಎತ್ತುತ್ತಿರುವಿರಿ?
          ಇದನ್ನು ನೋಡಿದಾಗ ನನಗೆ ನೆನಪು ಬರುವ ಗಾಧೆಯೆಂದರೆ:
          “ಒಲ್ಲದ ಗಂಡನಿಗೆ ಮೊಸರಿನಲ್ಲೂ ಕಲ್ಲು ಸಿಗುತ್ತದೆ”!

          ಇಂದು ಇಂಗ್ಲಿಷಿನ ಬಿರುಗಾಳಿಯ ನಡುವೆ ಕನ್ನಡವನ್ನು ಉಳಿಸಿಕೊಳ್ಳುವುದು ಹೇಗೆ ಎನ್ನುವುದನ್ನು ಯೋಚಿಸಬೇಕು.
          ಅದನ್ನು ಬಿಟ್ಟು, ಕನ್ನಡವನ್ನೇ ಬದಲಾಯಿಸಲು ಪ್ರಯತ್ನಿಸಿದರೆ, ಕನ್ನಡವನ್ನೇ ಕಳೆದುಕೊಂಡು ಬಿಡುತ್ತೇವೆ ಎನ್ನುವುದು ತಿಳಿದಿರಲಿ.
          ಇನ್ನೊಂದು 15 ವರ್ಷಗಳಲ್ಲಿ ಬೆಂಗಳೂರು, ಮೈಸೂರು, ಮುಂತಾದ ನಗರಗಳಲ್ಲಿ ಕನ್ನಡ ಓದು-ಬರಹ ಬಲ್ಲವರನ್ನು ಬೂದುಗಾಜಿನಲ್ಲಿ ಹುಡುಕಬೇಕಾಗಬಹುದು!

          ಉತ್ತರ
          • Priyank
            ಏಪ್ರಿಲ್ 10 2013

            ಮಾನ್ಯ ಕುಮಾರ್ ಅವರೇ,
            ನೀವು ಎತ್ತಿದ ಪ್ರಶ್ನೆಗಳು ಸರಿಯಾದುವೇ, ಒಂದನ್ನು ಬಿಟ್ಟು.
            ಮೊದಲು ನೀವು ಎತ್ತಿರುವ ತಪ್ಪನಿಸಿಕೆಯಿಂದ ಕೂಡಿದ ಪ್ರಶ್ನೆಯನ್ನು ಉತ್ತರಿಸುತ್ತೇನೆ. ಆಮೇಲೆ, ಮಿಕ್ಕ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ.
            ನಿಮ್ಮ ಪ್ರಶ್ನೆ: “ಅವೈಜ್ಞಾನಿಕ ಭಾಷೆಯಾದ ಇಂಗ್ಲಿಷನ್ನು ಕಲಿಯಲು ಯಾವುದೇ ಚಕಾರವೆತ್ತದ ನೀವು ಕನ್ನಡ ಕಲಿಯಲು ಏಕೆ ತಕರಾರು ಎತ್ತುತ್ತಿರುವಿರಿ?”
            ಇಂಗ್ಲೀಶನ್ನು ಕಲಿಯುವುದರ ಬಗ್ಗೆ ನಾನು ಚಕಾರವೆತ್ತುತ್ತಿಲ್ಲ ಎಂಬ ಆಪಾದನೆ ತಾವು ಯಾಕೆ ಮಾಡುತ್ತಿರುವಿರಿ? ಕನ್ನಡಿಗರಿಗೆ ಎಲ್ಲಾ ಬಗೆಯ ಕಲಿಕೆಯೂ ಕನ್ನಡದಲ್ಲೇ ಸಿಗುವಂತಾಗಲಿ ಎಂಬ ಆಶಯದೊಂದಿಗೆ ನಾನು ಮಾಡುತ್ತಿರುವ ಕೆಲಸದ ಬಗ್ಗೆ ತಮಗೆ ತಿಳಿದಿಲ್ಲ ಎನಿಸುತ್ತದೆ. ಎಳೆವಯಸ್ಸಿನಲ್ಲೇ ಎಲ್ಲವನ್ನೂ ಇಂಗ್ಲೀಶ್ ಮೂಲಕ ಕಲಿಯತೊಡಗುವುದು ತೀರಾ ವೈಜ್ಞಾನಿಕವಾದುದು, ಮತ್ತು ಹಾಗೆ ಮಾಡುವ ಮೂಲಕ ನಮ್ಮಲ್ಲಿನ ಪ್ರತಿಬೆ ಕುಂದುತ್ತದೆ ಎಂಬುದನ್ನು ನನ್ನ ಮಟ್ಟಿನಲ್ಲಿ ಸಾರುತ್ತಾ ಬಂದಿರುವೆ. ತಮಗೆ ಕಂಡಂತಿಲ್ಲ, ತಾವು ಹೇಳಿದ ಬಾವಿಯ ಕತೆ ಯಾಕೋ ನೆನಪಾಯಿತು.
            ಇನ್ನು, ಎಲ್ಲಾ ಬಗೆಯ ಕಲಿಕೆಯೂ ಕನ್ನಡದಲ್ಲೇ ಸಿಗುವಂತಾಗಲಿ ಎಂದರೆ, “ಬೇರೆ ನುಡಿ ಕಲಿಯದಿರಿ” ಎಂಬ ಆದೇಶವಲ್ಲ. “ಬೇರೆ ಬೇರೆ ನುಡಿಯನ್ನು ಕಲಿಯಬಯಸುವವರು ಕಲಿಯಲಿ”.

            “ತಲೆಕೆಳಗು/ಬುಡಮೇಲು” ಎಂಬುದು ಸುಲಬವಾಗಿ ಅರಿವಾಗುತ್ತೆ ಎಂದಿದ್ದೀರಿ ತಾವು. ನನಗೂ ಕೂಡ. ಹಾಗಿದ್ದರೂ, ನಮ್ಮ ಪಟ್ಯಪುಸ್ತಕಗಳಲ್ಲಿ “ವ್ಯುತ್ಕ್ರಮ” ಎಂಬ ಪದವನ್ನು ಬಳಸಲಾಗಿದೆ. ಇದರಿಂದ, ಮಕ್ಕಳಿಗೆ ಕಲಿಕೆ ಕಷ್ಟ ಮಾಡಿದ ಹಾಗೆ. ಈ ಬೇಡದ ಹೊರೆಯನ್ನಿಳಿಸುವುದೇ ಒಳಿತು.

            ಹಾಗೆಯೇ, “ಕ್ರಿಯಾಪದ/ಎಸಕಪದ”ಗಳಲ್ಲಿ ಕ್ರಿಯಾಪದವೇ ಸುಲಬವಾಗಿ ಅರಿವಾಗುವಂತದ್ದು ಎಂದಿದ್ದೀರಿ. ನಿಮ್ಮ ನೇರವಾದ ಮಾತಿಗೆ ಗೌರವಿಸುತ್ತಾ, “ಎಸಕಪದ” ಜನರಿಗೆ ನಿಜಕ್ಕೂ ಅರಿವಾಗದಿದ್ದರೆ, ತಾನಾಗಿಯೇ ಬಿದ್ದು ಹೋಗುತ್ತದೆ. ಅದು ಎಂದಿಗೂ ಬಳಕೆಗೆ ಬರುವುದಿಲ್ಲ. ಈ ಬಗ್ಗೆ ಕೆಲವರಿಗೆ ಅಂಜಿಕೆ ಏಕೆ ಎಂಬುದು ನನಗೆ ಇನ್ನೂ ತಿಳಿಯಲಾಗಿಲ್ಲ.

            “ಉಚ್ಚಾರಣೆ ಸರಿಯಿಲ್ಲದಿದ್ದರೆ, ಉಚ್ಚಾರಣೆ ಸರಿ ಮಾಡಬೇಕು” ಎಂಬುದು ನಿಮ್ಮ ಅಂಬೋಣ.
            “ಚೈನೀಸ್ ಪರಿಸರದಲ್ಲಿ ಬೆಳೆಯದವರಿಗೆ, ಚೈನೀಸ್ ಉಲಿಯಲು ಕಷ್ಟ” ಎಂಬುದೂ ನಿಮ್ಮ ಅಂಬೋಣ.
            ಹೌದು, ತಮ್ಮ ಪರಿಸರದಲ್ಲಿರದ ಉಲಿಕೆಗಳನ್ನು ಉಲಿಯಲು ಬಹಳ ಕಷ್ಟ ಪಡಬೇಕಾಗುತ್ತದೆ. ಮಲಯಾಳಂ ನುಡಿಯಲ್ಲಿರುವ ಹಲವು ಉಲಿಗಳನ್ನು ಕನ್ನಡಿಗರು ಏನು ಮಾಡಿದರೂ ಉಲಿಯಲು ಕಷ್ಟಪಡುತ್ತಾರೆ. ಹಾಗೆಯೇ, ಕನ್ನಡಿಗರ ಪರಿಸರದಲ್ಲಿಲ್ಲದ ಮಹಾಪ್ರಾಣಗಳನ್ನು ಉಲಿಯಲು ಕನ್ನಡಿಗರು ಕಷ್ಟಪಡಬೇಕು. ಕನ್ನಡಿಗರ ಸಹಜ ನುಡಿಯಲ್ಲಿ ಮಹಾಪ್ರಾಣವಿಲ್ಲದಾಗ, ಹೀಗಾಗುವುದು ಸಹಜ.

            ಉತ್ತರ
            • kspriyank
              ಏಪ್ರಿಲ್ 10 2013

              ಈ ಒಂದು ಮಾತು ತಪ್ಪಾಗಿ ಬರೆದಿರುವೆ.
              “ಎಳೆವಯಸ್ಸಿನಲ್ಲೇ ಎಲ್ಲವನ್ನೂ ಇಂಗ್ಲೀಶ್ ಮೂಲಕ ಕಲಿಯತೊಡಗುವುದು ತೀರಾ ವೈಜ್ಞಾನಿಕವಾದುದು”.
              ಇದನ್ನು ಈ ಕೆಳಗಿನಂತೆ ಓದಿಕೊಳ್ಳಿ:
              “ಎಳೆವಯಸ್ಸಿನಲ್ಲೇ ಎಲ್ಲವನ್ನೂ ಇಂಗ್ಲೀಶ್ ಮೂಲಕ ಕಲಿಯತೊಡಗುವುದು ತೀರಾ ಅವೈಜ್ಞಾನಿಕವಾದುದು”.

              ಉತ್ತರ
            • ಏಪ್ರಿಲ್ 10 2013

              > ಹಾಗೆಯೇ, “ಕ್ರಿಯಾಪದ/ಎಸಕಪದ”ಗಳಲ್ಲಿ ಕ್ರಿಯಾಪದವೇ ಸುಲಬವಾಗಿ ಅರಿವಾಗುವಂತದ್ದು ಎಂದಿದ್ದೀರಿ.
              > ನಿಮ್ಮ ನೇರವಾದ ಮಾತಿಗೆ ಗೌರವಿಸುತ್ತಾ, “ಎಸಕಪದ” ಜನರಿಗೆ ನಿಜಕ್ಕೂ ಅರಿವಾಗದಿದ್ದರೆ,
              > ತಾನಾಗಿಯೇ ಬಿದ್ದು ಹೋಗುತ್ತದೆ. ಅದು ಎಂದಿಗೂ ಬಳಕೆಗೆ ಬರುವುದಿಲ್ಲ.
              > ಈ ಬಗ್ಗೆ ಕೆಲವರಿಗೆ ಅಂಜಿಕೆ ಏಕೆ ಎಂಬುದು ನನಗೆ ಇನ್ನೂ ತಿಳಿಯಲಾಗಿಲ್ಲ.
              ಇಲ್ಲಿ ಅಂಜಿಕೆಯ ಪ್ರಶ್ನೆ ಎಲ್ಲಿದೆ? ಇಲ್ಲಿರುವುದು ಅಗತ್ಯದ ಪ್ರಶ್ನೆ.

              ಕ್ರಿಯಾಪದ ಎನ್ನುವುದು ಉಚ್ಚರಿಸಲು ಕಷ್ಟವಾದ ಪದವೇನಲ್ಲ. ಕರ್ನಾಟಕದ ಯಾವುದೇ ಭಾಗದ ಕನ್ನಡಿಗನನ್ನು ಕೇಳಿದರೂ, ಅದನ್ನು ಒಂದೇ ರೀತಿ ಉಚ್ಚರಿಸುತ್ತಾರೆ; ಇದರಲ್ಲಿ ಯಾವುದೇ ಗೊಂದಲವಿಲ್ಲ, ಅಲ್ಲವೇ?
              ಇನ್ನು ಅದರ ಅರ್ಥ ಅನೇಕರಿಗೆ ತಿಳಿದಿಲ್ಲ ಎಂದಿರುವಿರಿ. ಅಷ್ಟೇ ಆಗಿದ್ದರೆ, ತಿಳಿಸಿಬಿಟ್ಟರಾಯಿತಲ್ಲವೇ?
              ನೀವು ಅದರ ಬದಲಾಗಿ “ಎಸಕಪದ” ಎಂಬ ಹೊಸಪದವನ್ನು ಸೃಷ್ಟಿಸಿದರೂ ಅರ್ಥವನ್ನು ತಿಳಿಸಲೇಬೇಕಲ್ಲವೇ?
              ಹೀಗಿರುವಾಗ, ಹೊಸಪದದ ಅಗತ್ಯವೇನು?
              ನೀವು ಇಂತಹ ವಿಷಯಗಳನ್ನು ಸ್ಪಷ್ಟ ಪಡಿಸದೇ ಇರುವುದರಿಂದಲೇ ನಿಮ್ಮ ಉದ್ದೇಶದ ಬಗ್ಗೆ ಅನೇಕರಿಗೆ ಅನುಮಾನಗಳಿವೆ.

              ಉತ್ತರ
              • kspriyank
                ಏಪ್ರಿಲ್ 10 2013

                ಮಾನ್ಯ ಕುಮಾರ್ ಅವರೇ,
                ನಿಮ್ಮ ಅನುಮಾನವೇನು ಎಂಬುದನ್ನು ನೇರವಾಗಿ ತಿಳಿಸಿಕೊಟ್ಟಿದ್ದೀರ, ಅದನ್ನು ಮೆಚ್ಚುತ್ತೇನೆ.
                ಇಲ್ಲಿಯವರೆವಿಗೂ ನಿಮ್ಮ ಗಾದೆಮಾತುಗಳನ್ನ ನೋಡುತ್ತಾ, ನಿಮ್ಮ ಅನುಮಾನದ ಬಗೆಗೇ ಗೊಂದಲ ಉಂಟಾಗಿತ್ತು ನನಗೆ.

                ಇರಲಿ. “ಎಸಕಪದ” ಎಂಬುದನ್ನು ಕಟ್ಟಿರುವುದರ ಹಿಂದೆ ಇರುವ ಒಂದು ಕಾರಣವನ್ನು ನಾನು ತಿಳಿಸಬಲ್ಲೆ. ಶಂಕರ ಬಟ್ಟರೇ ಇದನ್ನು ಕಟ್ಟಿರುವರೋ, ಅಥವಾ ಬೇರೆ ಯಾರೋ ಕಟ್ಟಿರುವರೋ ಎಂಬುದು ನನಗೆ ಗೊತ್ತಿಲ್ಲ.
                “ಕ್ರಿಯಾಪದ” ಎಂದರೆ ಕೆಲಸವನ್ನು ಸೂಚಿಸುತ್ತದೆ ಎಂಬರ್ಥ ಎಲ್ಲಾ ಕನ್ನಡಿಗರಿಗೆ ಮೂಡುತ್ತದೆ ಎಂಬ ಅನಿಸಿಕೆಯಿಂದಲೇ, “ವ್ಯುತ್ಕ್ರಮ, ದ್ಯುತಿ ಸಂಶ್ಲೇಷಣ ಕ್ರಿಯೆ” ಎಂಬೆಲ್ಲಾ ಪದಗಳೂ ಮೂಡಿರುವುದು. ಈ ಅನಿಸಿಕೆ ನಿಜವೇ ಎಂಬುದನ್ನು ಅರಸುತ್ತಾ ಹೊರಟಾಗ ಕಂಡಿದ್ದು, ಕನ್ನಡಿಗರಿಗೆ ಕನ್ನಡದಿಂದಲೇ ಕಟ್ಟಿದ ಪದಗಳು ಹೆಚ್ಚು ಹತ್ತಿರವೆನಿಸುವವು ಮತ್ತು ಅರ್ಥವಾಗುವವು ಎಂಬುದು. ಹಾಗಾಗಿ, ಬೇರೆ ಯಾವುದೇ ನುಡಿಯ ಮೇಲೆ ಒರಗಿಕೊಳ್ಳದೆಯೇ, ಕನ್ನಡದ್ದೇ ಪದಗಳನ್ನು ಕಟ್ಟುವ ಪ್ರಯೋಗವಿದು.

                ಇಂತದೇ ಹಲವು ಪದಗಳನ್ನು ಕಟ್ಟಿರುವವರು ನನಗೆ ಗೊತ್ತಿದ್ದಾರೆ. “ನಾನು ಕಟ್ಟಿದ ಎಲ್ಲಾ ಪದಗಳೂ ಬಳಕೆಗೆ ಬಂದುಬಿಡುತ್ತವೆ” ಎಂಬ ನಂಬಿಕೆ ಅವರು ಯಾರಿಗೂ ಇಲ್ಲ. ಪದಗಳು ಸಮಾಜಕ್ಕೆ ಒಪ್ಪಿಗೆಯಾದರೆ ಮಾತ್ರಾ ಬಳಕೆಗೆ ಬರುತ್ತವೆ, ಇಲ್ಲವಾದಲ್ಲಿ ಸಾಯುತ್ತವೆ.
                ಒಂದು ದಿನ ಕನ್ನಡಿಗರೆಲ್ಲರೂ, “ಕ್ರಿಯಾಪದ” ಎಂಬ ಪದದ ಬದಲು, “ಎಸಕಪದ” ಎಂಬ ಪದವನ್ನೇ ಬಳಸತೊಡಗಿದರೆ, ನಿಮಗೇನಾದರೂ ಬೇಜಾರಾಗುತ್ತದೆಯೇ? ಇಲ್ಲಾ ತಾನೇ?

                ಮೇಲಾಗಿ, ಒಂದು ನುಡಿಯಲ್ಲಿ ಒಂದು ಪದಕ್ಕೆ ಹಲವಾರು ಹುರುಳೂ, ಒಂದು ಹುರುಳಿಗೆ ಹಲವಾರು ಪದಗಳೂ ಇರುತ್ತವೆ.
                “ತೆರೆ”, “ಕರಿ” ಇವುಗಳು ಹಲವಾರು ಹುರುಳು ಹೊಂದಿವೆ.
                ಇನ್ನು, ಡಾ | ಮಾಧವ ಪೆರಾಜೆ ಅವರು ಪಟ್ಟಿ ಮಾಡಿರುವ “ತಗೊಂಡು ಬಾ”, “ತಕ ಬಾ”, “ಎತ್ಕೊಂಡ್ ಬಾ” ಎಂಬೆಲ್ಲಾ ಪದಗಳಿಗೂ ಒಂದೇ ಅರ್ಥವಿದೆ. ಹೀಗಿರುವಾಗ, ಎಲ್ಲರೂ “ಕ್ರಿಯಾಪದ” ಎಂಬ ಪದವನ್ನೇ ಬಳಸಬೇಕು, ಅದರ ಬದಲಿಗೆ ಬೇರ್ಯಾವ ಪದವನ್ನೂ ಬಳಸಬಾರದು ಎಂದು ಅಪ್ಪಣೆ ಕೊಡುವುದು ಅರ್ಥಹೀನವಾಗುತ್ತದೆ, ಅಲ್ಲವೇ !

                ಉತ್ತರ
                • ಬಸವಯ್ಯ
                  ಏಪ್ರಿಲ್ 10 2013

                  ಉತ್ತಮ ಪ್ರಶ್ನೆಗಳನ್ನು ಎತ್ತಿರುವ ಕುಮಾರ ಅವರಿಗೆ, ಹಾಗೆಯೇ ತಾಳ್ಮೆಯಿಂದ ಉತ್ತರ ಕೊಡುತ್ತಿರುವ ನಿಮಗೆ ಧನ್ಯವಾದಗಳು.

                  ” “ಕ್ರಿಯಾಪದ” ಎಂದರೆ ಕೆಲಸವನ್ನು ಸೂಚಿಸುತ್ತದೆ ಎಂಬರ್ಥ ಎಲ್ಲಾ ಕನ್ನಡಿಗರಿಗೆ ಮೂಡುತ್ತದೆ ಎಂಬ ಅನಿಸಿಕೆಯಿಂದಲೇ, “ವ್ಯುತ್ಕ್ರಮ, ದ್ಯುತಿ ಸಂಶ್ಲೇಷಣ ಕ್ರಿಯೆ” ಎಂಬೆಲ್ಲಾ ಪದಗಳೂ ಮೂಡಿರುವುದು.”

                  ಎಸಕ ಎಂದರೆ ಕೆಲಸ ಎಂಬರ್ಥವನ್ನು ಸೂಚಿಸುತ್ತದೆ ಎಂಬುದು ಎಷ್ಟು ಕನ್ನಡಿಗರಿಗೆ ಗೊತ್ತಿದೆ? ನೀವೇ ಒಂದು ೧೦ ಜನರಿಗೆ ಕ್ರಿಯೆ ಮತ್ತು ಎಸಕ ಪದಗಳ ಅರ್ಥ ಕೇಳಿ ನೋಡಿ. ನಿಮಗೆ ಗೊತ್ತಾಗುತ್ತದೆ. ಅರ್ಥವಿಲ್ಲದ ಕಠಿಣ ಪದಗಳಿಗೆ ಹೊಸ, ಸುಲಭ ಶಬ್ದ ಹುಡುಕುವುದು ಎಲ್ಲರೂ ಒಪ್ಪುವಂತಹದ್ದು. ಆದರೆ ಸುಲಭವಾಗಿರುವ, ಈಗಾಗಲೇ ಜನರ ತಲೆಯಲ್ಲಿ ಉಳಿದಿರುವ,ಇಳಿದಿರುವ ಪದಗಳನ್ನು ಕೂಡ ಎತ್ತಿ ಹಾಕಿ ಹೊಸ ಶಬ್ದ ರಚನೆಗೆ ಹೊರಟರೆ ಅರ್ಥವಿದೆಯೆ?

                  ಉತ್ತರ
                  • kspriyank
                    ಏಪ್ರಿಲ್ 10 2013

                    ಬಸವಯ್ಯನವರೇ,
                    “ಎಸಕಪದ” ಎಂಬುದು ಎಲ್ಲ ಕನ್ನಡಿಗರಿಗೂ ಅರ್ಥ ಆಗುತ್ತದೆಯೇ ಎಂಬುದು ಸರಿಯಾದ ಪ್ರಶ್ನೆಯೇ.
                    ಅರ್ಥ ಆಗದಿದ್ದರೆ, ಅದು ಬಿದ್ದು ಹೋಗುತ್ತದೆ. ಅರ್ಥ ಆದರೆ ಉಳಿಯುತ್ತದೆ. “ಎಸಕಪದ” ಎಂಬ ಪದ ಬಳಕೆಗೆ ಬಾರದೇ ಬಿದ್ದು ಹೋದರೂ ನನಗೆ ಬೇಸರವಿಲ್ಲ.

                    ಪದಕಟ್ಟಣೆಯಲ್ಲಿ ಹೊಸಪ್ರಯೋಗಗಳು ನಡೆದರೆ ಒಳಿತೇ. ಪ್ರಯೋಗಗಳಲ್ಲಿ ಸೋಲು, ಗೆಲುವು ಇದ್ದಿದ್ದೇ. ಆದರೆ, ಪ್ರಯೋಗಗಳ ಮೂಲಕವೇ ಅಲ್ಲವೇ, ದಿಟಗಳು ಕಂಡುಬರುವುದು. ಪ್ರಯೋಗಗಳೇ ಇಲ್ಲದ ನಿಂತ ನೀರಾದರೆ ಕನ್ನಡಕ್ಕೆ ಹೆಚ್ಚು ಕೆಡುಕು.

                    ಒಂದು ಮಾತನ್ನು ಹೇಳಲು ಬಯಸುತ್ತೇನೆ. “ಸಂಸ್ಕ್ರುತ ಮೂಲದ ಪದಗಳು ಜನರಿಗೆ ಅರ್ಥವಾಗದಿದ್ದರೂ ಪರವಾಗಿಲ್ಲ, ಅವನ್ನೇ ಎಲ್ಲರೂ ಬಳಸಬೇಕು” ಎಂಬ ನಿಲುವು ಹೊಂದಿರುವವರು ಇದ್ದಾರೆ. ಅವರ ಸಾಲಿನಲ್ಲಿ ನಾನಾಗಲೀ, ನನಗೆ ತಿಳಿದಮಟ್ಟಿಗೆ ಶಂಕರ ಬಟ್ಟರಾಗಲೀ ನಿಲ್ಲುವುದಿಲ್ಲ. ಹಾಗೆಯೇ, “ಕನ್ನಡ ಮೂಲದ ಪದಗಳು ಜನರಿಗೆ ಅರ್ಥವಾಗದಿದ್ದರೂ ಪರವಾಗಿಲ್ಲ, ಅವನ್ನೇ ಎಲ್ಲರೂ ಬಳಸಬೇಕು” ಎಂಬ ನಿಲುವು ಹೊಂದಿರುವವರೂ ನಾವಲ್ಲ.
                    ಶಂಕರ ಬಟ್ಟರು ತಾವು ಮಾಡಿರುವ ಕನ್ನಡದ ಪದಗಳ ಪಟ್ಟಿಯನ್ನು ನಿಘಂಟು ಎಂದು ಕರೆಯದೇ ಪದನೆರಕೆ ಎಂದು ಕರೆದಿರುವುದಕ್ಕೆ ಇದೇ ಕಾರಣ. “ತಾವು ಮಾಡಿರುವ ಪದಗಳ ಪಟ್ಟಿ, ಎಲ್ಲೆಡೆ ಜನರ ಬಳಕೆಯಲ್ಲಿ ಬಂದರೆ, ಆಗ ಮಾತ್ರ ಅವು ನಿಘಂಟಿಗೆ ಬರಬೇಕು” ಎಂಬುದೇ ಅವರ ನಿಲುವು.

                    ಉತ್ತರ
                    • ರವಿಕುಮಾರ ಜಿ ಬಿ
                      ಏಪ್ರಿಲ್ 18 2013

                      ಜನರಿಗೆ ಅರ್ಥ ಆಗದ ಪದಗಳನ್ನು ಜನ ಬಳಸೋದಿಲ್ಲ,ಬಳಸದಿದ್ದಾಗ ಅದಾಗಿಯೇ ಭಾಷೆಯಿಂದ ಬಿಡಲ್ಪಡುತ್ತದೆ ಅಂದಿರಿ ಸರಿ !! ಅದು ಹೌದಾದ ಮೇಲೆ ನೀವು ಎಲ್ಲರ ಕನ್ನಡದ ಮೂಲಕ ಇಷ್ಟೆಲ್ಲಾ ಮಾಡೊ ಅಗತ್ಯ ಇದೆಯಾ?

                    • ನವೀನ
                      ಏಪ್ರಿಲ್ 18 2013

                      >>ಒಂದು ಮಾತನ್ನು ಹೇಳಲು ಬಯಸುತ್ತೇನೆ. “ಸಂಸ್ಕ್ರುತ ಮೂಲದ ಪದಗಳು ಜನರಿಗೆ ಅರ್ಥವಾಗದಿದ್ದರೂ ಪರವಾಗಿಲ್ಲ, ಅವನ್ನೇ ಎಲ್ಲರೂ ಬಳಸಬೇಕು” ಎಂಬ ನಿಲುವು ಹೊಂದಿರುವವರು ಇದ್ದಾರೆ. ಅವರ ಸಾಲಿನಲ್ಲಿ ನಾನಾಗಲೀ, ನನಗೆ ತಿಳಿದಮಟ್ಟಿಗೆ ಶಂಕರ ಬಟ್ಟರಾಗಲೀ ನಿಲ್ಲುವುದಿಲ್ಲ. ಹಾಗೆಯೇ, “ಕನ್ನಡ ಮೂಲದ ಪದಗಳು ಜನರಿಗೆ ಅರ್ಥವಾಗದಿದ್ದರೂ ಪರವಾಗಿಲ್ಲ, ಅವನ್ನೇ ಎಲ್ಲರೂ ಬಳಸಬೇಕು” ಎಂಬ ನಿಲುವು ಹೊಂದಿರುವವರೂ ನಾವಲ್ಲ.<<

                      ಪ್ರಿಯಾಂಕ್,

                      ಬಹುಷಃ ನಿಮಗೆ ಈ ಅಭಿಪ್ರಾಯವಿರಬಹುದು.ಆದರೆ ನಿಮ್ಮಲ್ಲೆ ಕೆಲವರು ಅರ್ಥವಾಗದಿದ್ದರೂ ಕನ್ನಡ ಬಳಸಿ.ಅರ್ಥವಾದರೂ ಸಂಸ್ಕೃತ ಬಿಡಿ ಅನ್ನುವವರಿದ್ದಾರೆ.ಅವರಿಗೆ ಏನು ಹೇಳಬಯಸುತ್ತೀರಿ?

  5. ಏಪ್ರಿಲ್ 10 2013

    ಕನ್ನಡಕ್ಕೆ ಅರಿಮೆಯ ಹೊಸ ಪದಗಳನ್ನು ಉಂಟು ಮಾಡುವಾಗ ಸಾಮಾನ್ಯವಾಗಿ ಸಂಸ್ಕೃತದಿಂದ ಪದಗಳನ್ನು ಎರವಲು ತರಲಾಗುತ್ತದೆ. ಇದರ ಬದಲಾಗಿ ಕನ್ನಡದ್ದೇ ಆಡುಮಾತಿನ ಪದಗಳನ್ನು ಬಳಸುವುದರಿಂದ ಆಗುವ ಅನುಕೂಲಗಳು ತುಂಬಾ ಇವೆ. ಇದು ಕಲಿಕೆಯಲ್ಲಿ ತುಂಬಾ ಮುಖ್ಯವಾದ ಒಂದು ವಿಚಾರ. ಇದರ ಬಗ್ಗೆ ಚೆನ್ನಾಗಿ ಅರಿಯಬೇಕೆಂದರೆ ನಮ್ಮ ಕನ್ನಡ ಮಾಧ್ಯಮ ಪಾಟ ಪುಸ್ತಕಗಳನ್ನು ಒಮ್ಮೆ ತೆರೆದು ನೋಡಬೇಕು. ಸಂಸ್ಕೃತದ ಎರವಲಿನಿಂದ ಹುಟ್ಟಿರುವ ನೂರಾರು ಪದಗಳು ಕಾಣಸಿಗುತ್ತವೆ. ಉದಾಹರಣೆಗೆ ‘ತಲೆಕೆಳಗು’ ಎಂದು ಸುಲಭವಾಗಿ ಹೇಳಬಹುದಾದುದನ್ನು ‘ವ್ಯುತ್ಕ್ರಮ’ ಅಂತಲೂ, ‘ಸದಾಹಸಿರು ಕಾಡು’ ಇದನ್ನು ನಿತ್ಯ ‘ಹರಿದ್ವರ್ಣ ಅರಣ್ಯ’ ಅಂತಲೂ ಕರೆಯಲಾಗಿದೆ. ಇದರ ಅರ್ಥ ತಿಳಿದುಕೊಳ್ಳುವುದು ಮಕ್ಕಳಿಗೆ ಕಷ್ಟ, ತಿಳಿದರೂ ಹೆಚ್ಚುಕಾಲ ನೆನಪಿನಲ್ಲಿರುವುದಿಲ್ಲ.

    ಕನ್ನಡ ಮಾದ್ಯಮದಲ್ಲಿ ಓದಿದ ನನಗೆ ಇವತ್ತಿಗೂ ‘ಅಬಿದಮನಿ’, ‘ಅಪದಮನಿ’ ಅಂದರೆ ಏನು ಎಂಬುದರ ಬಗ್ಗೆ ಅನುಮಾನ ಇದೆ. ಶಾಲೆಯ ದಿನಗಳಲ್ಲಿ ಕಷ್ಟ ಪಟ್ಟು ನೆನಪಿನಲ್ಲಿ ಇಟ್ಟುಕೊಂಡಿದ್ದೆ ಆದರೆ ಈಗ ನೆನಪಿಲ್ಲ. ಇದೇ ರೀತಿಯ ಹಲವಾರು ಪದಗಳು ಇವೆ ಉದಾಹರಣೆಗೆ ‘ಹೃತ್ಕರ್ಣ’ , ‘ಹೃತ್ಕಕ್ಷಿ’, ‘ಧ್ಯುತಿ ಸಂಶ್ಲೇಷಣೆ ಕ್ರಿಯೆ’, ‘ಯಾದ್ರಚ್ಚಿಕ ಪುಟ’ ಈ ಪದಗಳನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ಇದಕ್ಕೆ ಆಡು ಮಾತಿನ ಕನ್ನಡ ಪದಗಳು ಬೇಕು. ಇದರಿಂದ ಮಕ್ಕಳಿಗೆ ಸುಲಭವಷ್ಟೇ ಅಲ್ಲದೆ ಉರು ಹೊಡೆದು ನೆನಪಿಟ್ಟು ಕೊಳ್ಳುವ ಕಷ್ಟ ತಪ್ಪುತ್ತದೆ. ಆಶ್ಚರ್ಯದ ವಿಷಯವೆಂದರೆ ಕನ್ನಡದೆನ್ನಲಾಗಿರುವ ಈ ಪದಗಳು ಇಂಗ್ಲಿಷ್‍ನ ಪದಗಳಷ್ಟೇ ಅಪರಿಚಿತ ಮತ್ತು ನೆನಪಿನಲ್ಲಿಟ್ಟುಕೊಳ್ಳುವುದು ಕೂಡ ಕಷ್ಟದ ಕೆಲಸ.

    ಹಾಗಾಗಿ ಯಾವುದೇ ಅರಿಮೆಯ ಪದ ಆಡು ಮಾತಿನಲ್ಲಿದ್ದರೆ ಅದು ಕಲಿಕೆಯನ್ನು ಹಗುರವಾಗಿಸುತ್ತದೆ ಹಾಗೂ ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು, ಕಲಿಕೆಯ ಮಟ್ಟವನ್ನು ಮೇಲೆತ್ತಲು ಸಹಾಯವಾಗುತ್ತದೆ. ಈ ಅಂಶಗಳನ್ನು ಕಲಿಕೆಯ ಪರಿಣಿತರು, ಪಾಟ ಪುಸ್ತಕವನ್ನು ಬರೆಯುವವರು ಗಂಬೀರವಾಗಿ ನೋಡಿ ಪುಸ್ತಕಗಳಲ್ಲಿ ಆಡು ಮಾತಿನ ಸುಲಭ ಪದಗಳನ್ನು ಬಳಸಿ ಮಕ್ಕಳ ಕಲಿಕೆಯನ್ನು ಇನ್ನಷ್ಟು ‘ಅರ್ಥಪೂರ್ಣ’ವಾಗಿಸಬೇಕಿದೆ.

    http://girishkargadde.blogspot.in/2013/01/blog-post_24.html

    ಉತ್ತರ
  6. ಏಪ್ರಿಲ್ 10 2013

    ಕನ್ನಡಕ್ಕೆ ಅರಿಮೆಯ ಹೊಸ ಪದಗಳನ್ನು ಉಂಟು ಮಾಡುವಾಗ ಸಾಮಾನ್ಯವಾಗಿ ಸಂಸ್ಕೃತದಿಂದ ಪದಗಳನ್ನು ಎರವಲು ತರಲಾಗುತ್ತದೆ. ಇದರ ಬದಲಾಗಿ ಕನ್ನಡದ್ದೇ ಆಡುಮಾತಿನ ಪದಗಳನ್ನು ಬಳಸುವುದರಿಂದ ಆಗುವ ಅನುಕೂಲಗಳು ತುಂಬಾ ಇವೆ. ಇದು ಕಲಿಕೆಯಲ್ಲಿ ತುಂಬಾ ಮುಖ್ಯವಾದ ಒಂದು ವಿಚಾರ. ಇದರ ಬಗ್ಗೆ ಚೆನ್ನಾಗಿ ಅರಿಯಬೇಕೆಂದರೆ ನಮ್ಮ ಕನ್ನಡ ಮಾಧ್ಯಮ ಪಾಟ ಪುಸ್ತಕಗಳನ್ನು ಒಮ್ಮೆ ತೆರೆದು ನೋಡಬೇಕು. ಸಂಸ್ಕೃತದ ಎರವಲಿನಿಂದ ಹುಟ್ಟಿರುವ ನೂರಾರು ಪದಗಳು ಕಾಣಸಿಗುತ್ತವೆ. ಉದಾಹರಣೆಗೆ ‘ತಲೆಕೆಳಗು’ ಎಂದು ಸುಲಭವಾಗಿ ಹೇಳಬಹುದಾದುದನ್ನು ‘ವ್ಯುತ್ಕ್ರಮ’ ಅಂತಲೂ, ‘ಸದಾಹಸಿರು ಕಾಡು’ ಇದನ್ನು ನಿತ್ಯ ‘ಹರಿದ್ವರ್ಣ ಅರಣ್ಯ’ ಅಂತಲೂ ಕರೆಯಲಾಗಿದೆ. ಇದರ ಅರ್ಥ ತಿಳಿದುಕೊಳ್ಳುವುದು ಮಕ್ಕಳಿಗೆ ಕಷ್ಟ, ತಿಳಿದರೂ ಹೆಚ್ಚುಕಾಲ ನೆನಪಿನಲ್ಲಿರುವುದಿಲ್ಲ.
    ಕನ್ನಡ ಮಾದ್ಯಮದಲ್ಲಿ ಓದಿದ ನನಗೆ ಇವತ್ತಿಗೂ ‘ಅಬಿದಮನಿ’, ‘ಅಪದಮನಿ’ ಅಂದರೆ ಏನು ಎಂಬುದರ ಬಗ್ಗೆ ಅನುಮಾನ ಇದೆ. ಶಾಲೆಯ ದಿನಗಳಲ್ಲಿ ಕಷ್ಟ ಪಟ್ಟು ನೆನಪಿನಲ್ಲಿ ಇಟ್ಟುಕೊಂಡಿದ್ದೆ ಆದರೆ ಈಗ ನೆನಪಿಲ್ಲ. ಇದೇ ರೀತಿಯ ಹಲವಾರು ಪದಗಳು ಇವೆ ಉದಾಹರಣೆಗೆ ‘ಹೃತ್ಕರ್ಣ’ , ‘ಹೃತ್ಕಕ್ಷಿ’, ‘ಧ್ಯುತಿ ಸಂಶ್ಲೇಷಣೆ ಕ್ರಿಯೆ’, ‘ಯಾದ್ರಚ್ಚಿಕ ಪುಟ’ ಈ ಪದಗಳನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ಇದಕ್ಕೆ ಆಡು ಮಾತಿನ ಕನ್ನಡ ಪದಗಳು ಬೇಕು. ಇದರಿಂದ ಮಕ್ಕಳಿಗೆ ಸುಲಭವಷ್ಟೇ ಅಲ್ಲದೆ ಉರು ಹೊಡೆದು ನೆನಪಿಟ್ಟು ಕೊಳ್ಳುವ ಕಷ್ಟ ತಪ್ಪುತ್ತದೆ. ಆಶ್ಚರ್ಯದ ವಿಷಯವೆಂದರೆ ಕನ್ನಡದೆನ್ನಲಾಗಿರುವ ಈ ಪದಗಳು ಇಂಗ್ಲಿಷ್‍ನ ಪದಗಳಷ್ಟೇ ಅಪರಿಚಿತ ಮತ್ತು ನೆನಪಿನಲ್ಲಿಟ್ಟುಕೊಳ್ಳುವುದು ಕೂಡ ಕಷ್ಟದ ಕೆಲಸ.
    ಹಾಗಾಗಿ ಯಾವುದೇ ಅರಿಮೆಯ ಪದ ಆಡು ಮಾತಿನಲ್ಲಿದ್ದರೆ ಅದು ಕಲಿಕೆಯನ್ನು ಹಗುರವಾಗಿಸುತ್ತದೆ ಹಾಗೂ ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು, ಕಲಿಕೆಯ ಮಟ್ಟವನ್ನು ಮೇಲೆತ್ತಲು ಸಹಾಯವಾಗುತ್ತದೆ. ಈ ಅಂಶಗಳನ್ನು ಕಲಿಕೆಯ ಪರಿಣಿತರು, ಪಾಟ ಪುಸ್ತಕವನ್ನು ಬರೆಯುವವರು ಗಂಬೀರವಾಗಿ ನೋಡಿ ಪುಸ್ತಕಗಳಲ್ಲಿ ಆಡು ಮಾತಿನ ಸುಲಭ ಪದಗಳನ್ನು ಬಳಸಿ ಮಕ್ಕಳ ಕಲಿಕೆಯನ್ನು ಇನ್ನಷ್ಟು ‘ಅರ್ಥಪೂರ್ಣ’ವಾಗಿಸಬೇಕಿದೆ.

    ಉತ್ತರ
  7. ಸೋಮಶೇಖರ
    ಏಪ್ರಿಲ್ 10 2013

    ಕಷ್ಟವಾಗುತ್ತೆಂದು ಎಲ್ಲವನ್ನೂ ಬಿಟ್ಟು ಬಿಟ್ಕೊಂಡ್ಬರೋಣ. ಕಲಿಯುವುದು ಕಷ್ಟವೆ, ಅದನ್ನು ಬಿಟ್ಟು ಬಿಡೋಣ. ಕೆಲವರಿಗೆ ಶ ಅಕ್ಷರ ಕೂಡ ಬಿಡೋಣ , ಅದೇನು ಅವರಿಗೆ ಕಷ್ಟವಾಗಿದ್ದು ಮಾತ್ರ ಬಿಡ್ಬೇಕು ನಮಗೆ ಕಷ್ಟವಾಗಿದ್ದು ಬಿಡಬಾರದೆಂದರೆ ಹೇಗೆ? ಇದು ಶಂಕರ ಬಟ್ಟರ ಕನ್ನಡವಷ್ಟೆ ಎಲ್ಲರ ಕನ್ನಡ ಹೇಗಾಗುತ್ತದೆ? ಕೆಲವರು ಹ ಉಪಯೋಗಿಸುತ್ತಾರೆ ಅಲ್ಲಿ ಉಳಿಸಿ ಕೊಳ್ಳಿ ಇನ್ನು ಕೆಲವೆಡೆ ಞ ಉಪಯೋಗಿಸುತ್ತಾರೆ ಇರಲಿ. ಅವರಿಗೆ ಸಿಕ್ಕಿದ್ದು ಹೇಗೆ? ಮಂಡ್ಯ ಕನ್ನಡ ಮಾತ್ರ ಇರಲಿ ದಾವಣಗೆರೆಯವರೇನು ಕನ್ನಡಿಗರಲ್ಲವೆ?
    ಧಾರಾಳವಾಗಿ ಶಂಕರಬಟ್ಟರ ಕನ್ನಡವೆಂದು ಕರೆದು ಕೊಳ್ಳಲಿ, ಇಂಗ್ಲೀಷ್-USA ಇಂಗ್ಲೀಷ್-UK ಇಂಗ್ಲೀಷ್-AUS ಹೀಗೆ ಕನ್ನಡದ್ದು.

    ಉತ್ತರ
    • kspriyank
      ಏಪ್ರಿಲ್ 10 2013

      ಒಂದು ಸುಲಬದ ಹಾದಿ, ಇನ್ನೊಂದು ಕಷ್ಟದ ಹಾದಿ.
      ಜನರು ಅವರಿಗೆ ಬೇಕಾದ ಹಾದಿಯಲ್ಲಿ ಬರುತ್ತಾರೆ.
      ಆಯ್ಕೆಯನ್ನು ಜನರಿಗೆ ಬಿಡೋಣ.

      ಉತ್ತರ
      • ನವೀನ
        ಏಪ್ರಿಲ್ 10 2013

        ಬುಡಕ್ಕೆ ಬಂದಾಗ ಪ್ರಜಾಪ್ರಭುತ್ವದ ಮಾತು…! ಇಲ್ಲದಿದ್ದರೆ ಇವರು ಮಾತಾಡಿದ್ದೇ ಕನ್ನಡ ಅನ್ನೋ ಧೋರಣೆ…

        ಉತ್ತರ
      • ಸೋಮಶೇಖರ
        ಏಪ್ರಿಲ್ 11 2013

        ಯಾರಿಗೆ ಕಷ್ಟ? ಕಷ್ಟವೆಂದು ಸ್ಪಷ್ಠ ಭಾಷೆಯನ್ನು ಸರಳಗೊಳಿಸಿ ಅಸ್ಪಷ್ಠಗೊಳಿಸಿ, ಎರಡು ಕನ್ನಡ ಪದಗಳ ಜೋಡಣೆಗೊಳಿಸಿ ಅದನ್ನೆ ಕನ್ನಡದ ಪದವೆಂಬ ಭ್ರಮೆ ಸೃಷ್ಠಿಸಿ ಗೊಂದಲಮಯವಾಗಿಸುವ ಪ್ರತ್ಯೇಕತೆಯ ಕೂಗು ಯಾವ ಪುರುಷಾರ್ಥಕ್ಕೆ?

        ಉತ್ತರ
        • kspriyank
          ಏಪ್ರಿಲ್ 12 2013

          ಏನಿದು ಸ್ಪಷ್ಟ, ಅಸ್ಪಷ್ಟ?
          ಮಾತಿನ ’ಸ್ಪಷ್ಟ’ತೆಯ ಬಗ್ಗೆ ಮಾತನಾಡುತ್ತಿರುವಿರೋ? ಅಥವಾ, ಬರವಣಿಗೆಯ ಬಗ್ಗೆ ಮಾತನಾಡುತ್ತಿರುವಿರೋ?

          ಉತ್ತರ
  8. ಏಪ್ರಿಲ್ 10 2013

    > ಒಂದು ಮಾತನ್ನು ಹೇಳಲು ಬಯಸುತ್ತೇನೆ. “ಸಂಸ್ಕ್ರುತ ಮೂಲದ ಪದಗಳು ಜನರಿಗೆ ಅರ್ಥವಾಗದಿದ್ದರೂ ಪರವಾಗಿಲ್ಲ,
    > ಅವನ್ನೇ ಎಲ್ಲರೂ ಬಳಸಬೇಕು” ಎಂಬ ನಿಲುವು ಹೊಂದಿರುವವರು ಇದ್ದಾರೆ.
    ಆದರೆ ನೀವು ಪ್ರಯತ್ನಿಸುತ್ತಿರುವುದು, “ಸಂಸ್ಕೃತ ಮೂಲದ ಪದಗಳು ಜನರಿಗೆ ಅರ್ಥವಾದರೂ ಪರವಾಗಿಲ್ಲ, ಅವನ್ನು ತೆಗೆದು ಹಾಕೋಣ” ಎಂದನ್ನಿಸುತ್ತಿದೆ!
    ಹಾಗಲ್ಲದಿದ್ದರೆ “ಕ್ರಿಯಾಪದ” ಎಂಬ ಅತ್ಯಂತ ಸರಳಪದಕ್ಕೆ ಹೊಸಪದ ಹುಡುಕುವ ಪ್ರಯತ್ನ ಮಾಡುತ್ತಿರಲಿಲ್ಲ ಅಲ್ಲವೇ?

    ಕೇವಲ ಸಂಸ್ಕೃತ ಮೂಲದ ಪದಗಳೆಂಬ ಕಾರಣಕ್ಕೆ, ಅವನ್ನು ತೆಗೆದುಹಾಕಿ ಹೊಸ ಕನ್ನಡ ಪದಗಳನ್ನು ಹುಟ್ಟುಹಾಕುವುದು ಸರಿಯಲ್ಲ ಎನ್ನುವುದು ನನ್ನ ಅಭಿಪ್ರಾಯ.
    ಕೊಡು-ಕೊಳ್ಳುವುದು ನೈಸರ್ಗಿಕ ಪ್ರಕ್ರಿಯೆ. ಇದು ಭಾಷೆಗೂ ಅನ್ವಯವಾಗುತ್ತದೆ.
    ವಿವಿಧ ಭಾಷೆಗಳ ಒಡನಾಟದಿಂದ ಹೊಸ ಪದಗಳ ಸೇರ್ಪಡೆಯಾಗುತ್ತದೆ. ಆ ರೀತಿಯ ಸೇರ್ಪಡೆಯಂದ ಭಾಷೆ ಶ್ರೀಮಂತವಾಗುತ್ತದೆಯೇ ಹೊರತು ಸೊರಗುವುದಿಲ್ಲ.

    ಕನ್ನಡದಲ್ಲಿ ಕೇವಲ ಸಂಸ್ಕೃತ ಮಾತ್ರವಲ್ಲ, ಹಿಂದಿ, ಪರ್ಶಿಯನ್, ಮುಂತಾದ ಭಾಷೆಗಳ ಪದಗಳೂ ಇವೆ.
    ಹೀಗಾಗಿ ಕೇವಲ ಸಂಸ್ಕೃತ ಮೂಲದ ಪದಗಳನ್ನೇ ಹುಡುಕಿ ತೆಗೆದು ಹಾಕುವುದರ ಹಿಂದೆ ಬೇರೇನೋ ಉದ್ದೇಶವಿರಬಹುದೇ ಎಂಬ ಅನುಮಾನವನ್ನು ಹುಟ್ಟುಹಾಕುತ್ತಿದೆ.

    ನೀವು ಮಾಡುತ್ತಿರುವ ಕೆಲಸ ವಿಚಿತ್ರವೆನಿಸುತ್ತಿದೆ.
    ಕರ್ನಾಟಕ ಮೂಲದ ವಿಜ್ಞಾನ ಮಾತ್ರ ನಮಗೆ ಬೇಕು, ಉಳಿದೆಲ್ಲವನ್ನೂ ತೆಗೆದುಹಾಕಿ, ಮತ್ತೊಮ್ಮೆ ಕರ್ನಾಟಕದಲ್ಲಿಯೇ ಹೊಸದಾಗಿ ಸಂಶೋಧನೆ ಮಾಡಿ ಅವನ್ನು ಸಾಧಿಸೋಣ ಎಂದ ಹಾಗಾಯಿತು ನಿಮ್ಮ ಪ್ರಯತ್ನ.

    ಉತ್ತರ
    • ಏಪ್ರಿಲ್ 10 2013

      ಕುಮಾರ್ ಅವರೇ,

      “ಕೇವಲ ಸಂಸ್ಕೃತ ಮೂಲದ ಪದಗಳೆಂಬ ಕಾರಣಕ್ಕೆ, ಅವನ್ನು ತೆಗೆದುಹಾಕಿ ಹೊಸ ಕನ್ನಡ ಪದಗಳನ್ನು ಹುಟ್ಟುಹಾಕುವುದು ಸರಿಯಲ್ಲ ಎನ್ನುವುದು ನನ್ನ ಅಭಿಪ್ರಾಯ”.
      – ಅಂಜಿಕೆ ಬೇಡ. ಆ ಕೆಲಸವನು ಯಾರೂ ಮಾಡುತ್ತಿಲ್ಲ.

      “ವಿವಿಧ ಭಾಷೆಗಳ ಒಡನಾಟದಿಂದ ಹೊಸ ಪದಗಳ ಸೇರ್ಪಡೆಯಾಗುತ್ತದೆ. ಆ ರೀತಿಯ ಸೇರ್ಪಡೆಯಂದ ಭಾಷೆ ಶ್ರೀಮಂತವಾಗುತ್ತದೆಯೇ ಹೊರತು ಸೊರಗುವುದಿಲ್ಲ.”
      – ಹೌದು, ನೀವು ಹೇಳುತ್ತಿರುವುದು ಸರಿ.
      ಒಡನಾಟ ಬೇಡ ಎಂದು ಯಾರೂ ಹೇಳುತ್ತಿಲ್ಲವಲ್ಲ. ಹೊಸಪದಗಳ ಸೇರ್ಪಡೆ ಬೇಡ ಎಂದು ಯಾರು ಹೇಳಿದ್ದಾರೆ?
      ಹಾಗೆಯೇ, ಕನ್ನಡದಲ್ಲೇ ಪದಗಳನ್ನು ಕಟ್ಟಿದರೆ ಕನ್ನಡವು ಶ್ರೀಮಂತವಾಗುತ್ತದೆ.

      “ಕರ್ನಾಟಕ ಮೂಲದ ವಿಜ್ಞಾನ ಮಾತ್ರ ನಮಗೆ ಬೇಕು, ಉಳಿದೆಲ್ಲವನ್ನೂ ತೆಗೆದುಹಾಕಿ, ಮತ್ತೊಮ್ಮೆ ಕರ್ನಾಟಕದಲ್ಲಿಯೇ ಹೊಸದಾಗಿ ಸಂಶೋಧನೆ ಮಾಡಿ ಅವನ್ನು ಸಾಧಿಸೋಣ ಎಂದ ಹಾಗಾಯಿತು ನಿಮ್ಮ ಪ್ರಯತ್ನ.”
      – ನಮ್ಮ ಪ್ರಯತ್ನ ಹಾಗಲ್ಲ. ನೀವು ನಮ್ಮ ಪ್ರಯತ್ನದ ಬಗ್ಗೆ ಪ್ರಶ್ನೆಗಳನ್ನೆತ್ತಿ ಕೊನೆಗೂ ತಪ್ಪಾಗಿ ಅರ್ಥ ಮಾಡಿಕೊಂಡಿದ್ದೀರ.

      ಉತ್ತರ
    • ಏಪ್ರಿಲ್ 11 2013

      >>ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಹಳಗನ್ನಡ ವ್ಯಾಕರಣ ಸರಿಯಿಲ್ಲ, ಹಳೆಗನ್ನಡ ವೈಯಾಕರಣಿಗಳು ಸೋಮಾರಿಗಳು ಎಂದರೆ ಏನು ಅರ್ಥ?

      ಶಂಕರ ಬಟ್ಟರು ಹಳೆಯ ವ್ಯಾಕರಣಗಳ ದೋಶಗಳನ್ನು ತೋರಿಸಲು ಪ್ರಯತ್ನಿಸಿದ್ದಾರೆ. ಆದರೆ ಆ ವಯ್ಯಾಕರಣಿಗಳನ್ನು ‘ಸೋಮಾರಿಗಳು’ ಎಂದು ವಯುಕ್ತಿಕವಾಗಿ ಜರಿದಿಲ್ಲ. ಅದು ಸೋಮಾರಿತನವೋ, ಕನ್ನಡದ ಮೇಲಿನ ಕೀಳರಿಮೆಯೋ, ಇಲ್ಲವೇ ಸಂಸ್ಕ್ರುತದ ಮೇಲಿನ ಮೋಹವೋ ತಿಳಿಯದು. ಒಟ್ಟಿನಲ್ಲಿ ಕನ್ನಡಕ್ಕೆ ಒಪ್ಪುವ ಸರಿಯಾದ ವ್ಯಾಕರಣವನ್ನು ಬರೆಯದಿರುವುದು ಮಾತ್ರ ನಿಜ. ಇದರ ಒಂದು ಸಣ್ಣ ಉದಾಹರಣೆ ಇಲ್ಲಿದೆ ನೋಡಿ: http://kannudi.blogspot.in/2013/02/blog-post.html.

      ಉತ್ತರ
      • ಏಪ್ರಿಲ್ 12 2013

        > ಉದಾಹರಣೆ ಇಲ್ಲಿದೆ ನೋಡಿ: http://kannudi.blogspot.in/2013/02/blog-post.html.

        ನೀವು ನೀಡಿರುವ ಪುಟವನ್ನು ಓದಿದೆ.
        ಅದನ್ನೊಮ್ಮೆ ಕನ್ನಡ ಕಲಿತಿರುವ ಅಥವಾ ಕಲಿಯುತ್ತಿರುವ ಅಥವಾ ಕನ್ನಡ ಓದಬಲ್ಲವರಿಗೆ ತೋರಿಸಿ, ಓದಲು ಹೇಳಿ.
        ಅದರಲ್ಲಿ ಬರೆದಿರುವುದು ಶೇ.98 ಮಂದಿ ಕನ್ನಡಿಗರಿಗೆ ಅರ್ಥವಾಗುವುದಿಲ್ಲ.
        ಅದು ಕನ್ನಡವೋ ಅಥವಾ ಕನ್ನಡ ಲಿಪಿ ಬಳಸಿ ಬರೆದಿರುವ ಮತ್ಯಾವುದೋ ಪರಕೀಯ ಭಾಷೆಯೋ ಎಂದೇ ತಿಳಿಯುವುದಿಲ್ಲ!

        ನೀವು ಮಾಡಲು ಹೊರಟಿರುವ ಕೆಲಸ ಹೇಗಿದೆಯೆಂದರೆ, ನೇರವಾಗಿ ಊಟ ಮಾಡಲು ಕಲಿತವನಿಗೆ, ಇನ್ಯಾವುದೋ ಹೊಸ ರೀತಿಯಲ್ಲಿ ಊಟ ಮಾಡಲು ಕಲಿಸಿದಂತೆ.

        ಒಂದು ಕಡೆ ಕನ್ನಡ ವ್ಯಾಕರಣ ಕ್ಲಿಷ್ಟವೆನ್ನುತ್ತೀರಿ.
        ಮತ್ತೊಂದೆಡೆ ಹೊಸ ಪದಗಳನ್ನು ಸೇರಿಸುತ್ತೇವೆ ಎನ್ನುತ್ತೀರಿ.
        ಮಗದೊಂದೆಡೆ ಸಂಸ್ಕೃತ ಪದಗಳಿಂದ ಕನ್ನಡ ಕಷ್ಟವಾಗಿದೆ, ಹೀಗಾಗಿ ಅವುಗಳಿಗೆ ಕನ್ನಡ ಪದವನ್ನು ಹುಡುಕುತ್ತೇವೆ ಎನ್ನುತ್ತೀರಿ.
        ಕಡೆಗೆ, ಸರಳವಾಗಿ, ರೂಢಿಯಲ್ಲಿರುವ, ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ಪದಗಳನ್ನೇ ಹೆಕ್ಕಿ, ಅವುಗಳಿಗೆ ಹೊಸ ಪದಗಳನ್ನು ಕೊಡುತ್ತೀರಿ – ಆ ಹೊಸ ಪದಗಳು ಯಾರಿಗೂ ಅರ್ಥವಾಗದಿದ್ದರೂ ಪರವಾಗಿಲ್ಲ, ಪ್ರಯೋಗ ಮಾಡೋಣ, ಕಷ್ಟವಾದರೆ ಬಿದ್ದು ಹೋಗುತ್ತವೆ ಎಂಬ ಸಮರ್ಥನೆ ಬೇರೆ!!

        ಈಗಾಗಲೇ ಕಂಡುಹಿಡಿದಿರುವ ಚಕ್ರವನ್ನೇ ಮತ್ತೆ ಮತ್ತೆ ಹುಡುಕುವುದು ವ್ಯರ್ಥ ಪ್ರಯತ್ನ. ಇಂಗ್ಲಿಷಿನ ಚಕ್ರ, ಸಂಸ್ಕೃತದ ಚಕ್ರ, ಕನ್ನಡದ ಚಕ್ರ ಎಂಬ ಬೇರೆಬೇರೆ ಚಕ್ರಗಳಿಲ್ಲ.
        ಚಕ್ರವನ್ನು ಇಂಗ್ಲಿಷಿನವನೇ ಹುಡುಕಿರಲಿ, ಸಂಸ್ಕೃತದವನೇ ಹುಡುಕಿರಲಿ, ಅದರಿಂದ ತೊಂದರೆಯೇನು? ಅದರ ಉಪಯೋಗಕ್ಕಲ್ಲವೇ ನಾವು ಗಮನ ನೀಡಬೇಕಾಗಿರುವುದು!?
        “ಇಲ್ಲ, ನಾನು ಕನ್ನಡದವನಾದ್ದರಿಂದ, ಸಂಸ್ಕೃತದವನು ಕಂಡುಹಿಡಿದ ಚಕ್ರವನ್ನು ಒಪ್ಪುವುದಿಲ್ಲ. ಅದನ್ನು ತೊಲಗಿಸಿ, ಅದರ ಜಾಗದಲ್ಲಿ ಮತ್ತೊಮ್ಮೆ ಹೊಸದಾಗಿ ಕನ್ನಡದ್ದೇ ಚಕ್ರವನ್ನು ಆವಿಷ್ಕಾರ ಮಾಡುತ್ತೇನೆ” ಎನ್ನುವ ಹಠ ತೋರಿಸಿದರೆ…….!!!!

        ಉತ್ತರ
        • kspriyank
          ಏಪ್ರಿಲ್ 12 2013

          ಕುಮಾರ್ ಅವರೇ,
          “ಸಂಸ್ಕ್ರುತದವನು ಕಂಡುಹಿಡಿದ ಚಕ್ರ” ಎಂದು ನೀವು ಕರೆಯುತ್ತಿರುವುದು ಏನು? ಸಂಸ್ಕ್ರುತದವರು ಸಂಸ್ಕ್ರುತದಲ್ಲಿ ಕಟ್ಟಿದ ಪದಗಳನ್ನು ಹಾಗೆ ಕರೆಯುತ್ತಿರುವಿರೋ?
          ತಿಳಿಸಿ.

          ಉತ್ತರ
  9. ಬಸವಯ್ಯ
    ಏಪ್ರಿಲ್ 11 2013

    @ ಪ್ರಿಯಾಂಕ, ಸಂದೀಪ್.

    ಮೊದಲನೆಯದಾಗಿ ನನಗೆ ನಿಮಗೆ ಗೊತ್ತಿರುವಷ್ಟು ಸಂಸ್ಕೃತವು ಗೊತ್ತಿಲ್ಲ, ಕನ್ನಡ ವ್ಯಾಕರಣ/ಸಂಧಿ ಸಮಾಸಗಳೂ ಗೊತ್ತಿಲ್ಲ. ಒಳ್ಳೆಯ ಕನ್ನಡ ಪುಸ್ತಕಗಳನ್ನು ಖರೀದಿಸಲು ವರ್ಷಕ್ಕೊಂದಿಷ್ಟು ಬಡ್ಜೆಟ್ ಇಟ್ಟು..ಅವನ್ನು ಓದಿ, ಅರ್ಥ ಮಾಡಿಕೊಳ್ಳಬಲ್ಲ ಹಾಗೆಯೇ ಕೊಂಚ ಮಟ್ಟಿಗೆ ಅವುಗಳ ವಿಶ್ಲೇಶಣೆ ಮಾಡಲು ಬಲ್ಲ, ಕೊಂಚ ಮಟ್ಟಿಗೆ ಎದುರಿನವರಿಗೆ ಅರ್ಥವಾಗುವಂತೆ ಬರೆಯಬಲ್ಲ ಕನ್ನಡಿಗ ನಾನು. ನನ್ನಂಥವರು ಸಾಕಷ್ಟು ಜನ ಇದ್ದಾರೆಂದು ನನ್ನ ಭಾವನೆ. ಹೀಗಿರುವ ನಮಗೆಯೇ ಶಂಕರ ಬಟ್ಟರ, ನಿಮ್ಮ ‘ಎಲ್ಲರ ಕನ್ನಡ’ ನಮ್ಮೆಲ್ಲರ ಕನ್ನಡವಲ್ಲ.. ಇದು ‘ಎಲ್ಲ ಬಲ್ಲವರ ಕನ್ನಡ’, ಪಕ್ಕದಲ್ಲಿ ನಿಘಂಟಿಲ್ಲದೆ, ಕೊಳಂಬೆ ಪುಟ್ಟಣ್ಣೆ ಗೌಡರು ಇತ್ಯಾದಿಗಳ ಆಶೀರ್ವಾದವಿಲ್ಲದೆ ತಿಳಿದುಕೊಳ್ಳಲು ಆಗುವುದಿಲ್ಲ ಅನಿಸುತ್ತಿರಬೇಕಾದರೆ ಇನ್ನು ಉಳಿದವರ ಗತಿ ಏನು? ಇದು ಕುತ್ಸಿತ ಟೀಕೆಯಲ್ಲ..ಪ್ರಾಮಾಣಿಕ ಅಭಿಪ್ರಾಯ.

    ನೀವೇ ಒಂದು ಸಲ ನಿಮ್ಮ ‘ಎಲ್ಲರ ಕನ್ನಡ’ದ ಹತ್ತು-ಹದಿನೈದು ಪದಗಳನ್ನು ಹೆಕ್ಕಿ , ಹೊಂದಿಸಿ ಬರೆಯುವ ಪರೀಕ್ಷೆ ಇಡಿ (ಸಾಮಾನ್ಯ ಕನ್ನಡಿಗರಿಗೆ). ಯಾರಾದರೂ ತಿಣುಕದೆ, ೫ ರ ಮೇಲೆ ಸರಿ ಉತ್ತರ ಬರೆದರೆ ‘ಎಲ್ಲರ ಕನ್ನಡ’ಕ್ಕೆ ಭವಿಷ್ಯವಿದೆ ಎಂದು ತಿಳಿಯಬಹುದು. ಆ ಜನರಿಗೆ ನೀವು ಕಲಿಮನೆ -ಶಾಲೆ, ಗುಂಡಿಗೆ ಮಾಂಜುಗರ -ಹ್ರುದಯ ತಜ್ಞ ಈ ಮುಂತಾದ ಶಬ್ದಗಳಲ್ಲಿ ಸುಲಭವಾದದ್ದು, ಅರ್ಥವಾಗುವಂತದ್ದು ಯಾವುದು ಎಂದು ಕೂಡ ಕೇಳಿ ನೋಡಿ. ಘಮ ಘಮ -ಗಮ ಗಮ, ಖಾರ-ಕಾರ, ಭಯ-ಬಯ ಇವುಗಳಲ್ಲಿ ನಿಜವಾದ ಭಾವನೆ (ಆ ಶಬ್ದಗಳು ಹೇಳಲು ಬಯಸುವ) ಯಾವ ಶಬ್ದಗಳಲ್ಲಿ ಸಿಗುತ್ತೆ ಎಂಬುದನ್ನೂ ಕೂಡ ಪ್ರಶ್ನಿಸಿ ತಿಳಿದುಕೊಳ್ಳಬಹುದು.

    ನನಗನಿಸುವಂತೆ ಸಧ್ಯ ನಮಗೆ ಬೇಕಾದದ್ದು ಕನ್ನಡದ ಮಕ್ಕಳಿಗೆ ‘ಡ್ಯಾಡಿ,ಮಮ್ಮಿ,ಆಂಟಿ,ಅಂಕಲ್ಲು, ಆಪಲ್ಲು,ಒರೆಂಜು’ ಗಳಿಂದ ಮುಕ್ತಿ. ಇದರ ಬಗ್ಗೆ ನಮಗ್ಯಾರಿಗೂ ಅಷ್ಟು ಕಾಳಜಿ ಇಲ್ಲ. ನನಗೆ ಕೆಲವು ಸಾರಿ ಅನಿಸುತ್ತೆ ಜಾತಿ ರಾಜಕಾರಣ ಮತ್ತು ಭಾಷಾ ರಾಜಕಾರಣಕ್ಕೆ ಒಳಗಿಂದೊಳಗೆ ಕೊಂಡಿ ಇದೆ ಅಂತ. ಶಂಕರ ಬಟ್ಟರು ಉತ್ಸವ ಮೂರ್ತಿಗಳು ಮಾತ್ರ ಅಂತ

    ಉತ್ತರ
    • ಏಪ್ರಿಲ್ 11 2013

      @Basavayya +100

      ಉತ್ತರ
    • ಏಪ್ರಿಲ್ 11 2013

      ಬಸವಯ್ಯ,
      ನಮ್ ಕಡೆಯಿಂದ ೧೦೦ ನಿಮ್ಗೆ 🙂

      >>ನನಗೆ ಕೆಲವು ಸಾರಿ ಅನಿಸುತ್ತೆ ಜಾತಿ ರಾಜಕಾರಣ ಮತ್ತು ಭಾಷಾ ರಾಜಕಾರಣಕ್ಕೆ ಒಳಗಿಂದೊಳಗೆ ಕೊಂಡಿ ಇದೆ ಅಂತ. ಶಂಕರ ಬಟ್ಟರು ಉತ್ಸವ ಮೂರ್ತಿಗಳು ಮಾತ್ರ ಅಂತ<<

      ಇದು ಖಂಡಿತ ಸತ್ಯ.ಅವರ ಗುಂಪಿನವರೆ ಇದನ್ನು ಆಗಾಗ ಸಾಬೀತು ಮಾಡ್ತಾ ಇರ್ತಾರೆ ತಮ್ಮ ಸಂಸ್ಕೃತ,ಬ್ರಾಹ್ಮಣ ದ್ವೇಷದಿಂದ.ಕಡೆಗೆ ಅಲ್ಲಿ ಹಿಂದೂ ರಾಷ್ಟ್ರ,ಆರೆಸ್ಸೆಸ್,ಜ್ಯೋತಿಷ್ಯ ಎಲ್ಲವನ್ನೂ ಎಳೆದು ತರುತ್ತಾರೆ.
      ಮೊದ ಮೊದಲು ರಾಹುಲ್ ಗಾಂಧಿಯಾದರೂ ಬರಲಿ,ಮೋದಿಯಾದರೂ ಬರಲಿ ಕರ್ನಾಟಕ ಉದ್ಧಾರ ಆಗಲಿ ಅನ್ನುತಿದ್ದವರು.ಇವತ್ತು ಮೋದಿಯ ಬೆಂಬಲಿಗರನ್ನು ಇಂಟರ್ನೆಟ್ ಸರ್ವಾಧಿಕಾರಿಗಳು (ತಾವೇ ಖುದ್ದು ಸರ್ವಾಧಿಕಾರಿಗಳು ಅನ್ನುವುದನ್ನು ಮರೆತು) ಅನ್ನುತ್ತಾರೆ ಅಂದ ಮೇಲೆ, ಇವರೊಳಗೆ ರಾಜಕಾರಣ ತಲೆಯೆತ್ತುತ್ತಿಲ್ಲ ಅನ್ನಲಾದೀತೆ?

      ಉತ್ತರ
    • knsandeep
      ಏಪ್ರಿಲ್ 12 2013

      ಬಸವಯ್ಯನವರೇ,

      ನಿಮ್ಮ ಪ್ರಾಮಾಣಿಕ ಅನಿಸಿಕೆಗೆ ನನ್ನ ಒಪ್ಪಿಗೆ ಇದೆ. ನೀವು ಕೆಲವು ಪದಗಳನ್ನ ಪಟ್ಟಿ ಮಾಡಿ ಅವು ಸಾಮಾನ್ಯ ಕನ್ನಡಿಗರಿಗೆ ತಿಳಿಯುವುದಿಲ್ಲ ಎಂದು ಹೇಳಿರುವುದು ನಿಜವೇ. ಅದನ್ನು ನಾನು ಪೂರ್ತಿಯಾಗಿ ಒಪ್ಪುತ್ತೇನೆ. ಆದರೆ ಇಂದಿನ ಇಂಟರ್ನೆಟ್ ಯುಗದಲ್ಲಿ ಎಲ್ಲ ನುಡಿಗಳಲ್ಲೂ ನೂರಾರು ಹೊಸ ಪದಗಳು ಹೊಮ್ಮುತ್ತವೆ. ಇವನ್ನು ಕಟ್ಟುವವರು ಯಾರೋ ಕೆಲವು ಬುದ್ದಿ ಜೀವಿಗಳಲ್ಲ. ಸಾಮಾನ್ಯ ಜನರು. ಈಗ ಇಂಗ್ಲೀಶಿನ ಉದಾಹರಣೆಯನ್ನು ತೆಗೆದುಕೊಳ್ಳೋಣ.blog, rofl, troll, lol ಇಂತಹ ಪದಗಳನ್ನು ಕಟ್ಟಿದ್ದು ಸಾಮಾನ್ಯ ಇಂಟರ್ನೆಟ್ ಬಳಕೆದಾರರು. ಇದನ್ನೆಲ್ಲಾ ಲ್ಯಾಟಿನ್ ಅಲ್ಲಿ ಕಟ್ಟ ಬೇಕೆಂದಿದ್ದರೆ ಆಗುತ್ತಿತ್ತಾ? ಅದಲ್ಲದೇ computer, RAM, FTP ಅಂತಹ ಪದಗಳನ್ನು ನೋಡಿ. ಇವೆಲ್ಲ ಇಂಗ್ಲೀಶಿನವು ಮತ್ತು ಇಂಗ್ಲೀಶಿನ ವ್ಯಾಕರಣವನ್ನೇ ಬಳಸಿ ಸುಲಬವಾಗಿ ಕಟ್ಟಿದ್ದು. ಈ ಪದಗಳನ್ನ ಯೂರೋಪಲ್ಲಿ ಹುಟ್ಟಿದ ರಸಾಯನ ಶಾಸ್ತ್ರದ ಲ್ಯಾಟಿನ್/ ಗ್ರೀಕ್ ಪದಗಳಿಗೆ ಒಮ್ಮೆ ಹೋಲಿಸಿ ನೋಡಿ. ಈ ಹೊಸ ಪದಗಳು ಅದೆಶ್ಟು ಸುಲಬ ಅನಿಸುತ್ತವೆ.

      ‘ಪಾಠಶಾಲೆ’ಯಂತಹ ಪದಗಳು ಸುಲಬ ಅನ್ನಿಸುವುದಕ್ಕೆ ಕಾರಣ ಅದರ ದಿನ ನಿತ್ಯದ ಬಳಕೆ. ಆದರೆ ಇಂತಹದೇ ಒಂದು ಹೊಸ ಪದವನ್ನು ಸಾಮಾನ್ಯ ಕನ್ನಡಿಗನಿಗೆ ಕಟ್ಟಲು ಹೇಳಿ, ಅದು ಅವನಿಗೆ ಕಶ್ಟವಾದೀತು. ಆದರೆ ಕಲಿಮನೆಯಂತಹ ಪದಗಳು ಕಟ್ಟಲು ಹೆಚ್ಚು ಸಲೀಸು. ಮಂಜುಗ ಎಂಬ ಪದ ಕಂಡಾಗ ಕೊಂಚ ಕಸಿವಿಸಿಯಾಗುವುದು ನಿಜ. ಆದರೆ ಪದಗಳನ್ನು ಹುಟ್ಟು ಹಾಕಿ ಜನರ ಮುಂದೆ ಇಡುವುದು ಒಂದು ಪ್ರಯೋಗ ಆಶ್ಟೆ. ಈ ಪ್ರಯೋಗದಲ್ಲಿ ನೀವೂ ಪಾಲ್ಗೊಳ್ಳಬಹುದು. ಹೆಚ್ಚು ಪದಗಳು ಉಂಟು ಮಾದುವುದೇ ಈ ಪ್ರಯೋಗದ ಗುರಿ. ಜನರು ಯಾವುದು ಸುಲಬವೋ ಅದನ್ನು ಬಳಕೆಯಲ್ಲಿ ಉಳಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಅಚ್ಚಗನ್ನಡದ ಪದವನ್ನು ಬಿಟ್ಟು ಸಂಸ್ಕೃತದ ಪದವನ್ನೇ ಉಳಿಸಿಕೊಳ್ಳಬಹುದು, ಇಲ್ಲವೇ ಸಂಸ್ಕೃತವನ್ನು ಬಿಟ್ಟು ಕನ್ನಡದ ಪದವನ್ನು ಬಳಸಬಹುದು, ಇಲ್ಲವೇ ಎರಡನ್ನೂ ಬಳಸಬಹುದು.

      ಮಾಂಜುಗ ನಿಮಗೆ ಸರಿಯಿಲ್ಲ ಎನಿಸಿದರೆ ನೀವೇ ಹೊಸ ಪದ ಹುಟ್ಟು ಹಾಕಿ. ಅದಾಗದಿದ್ದರೆ ನಿಮಗೆ ಸಮಾದಾನ ಕೊಡುವ ತಜ್ಞ/ ವೈದ್ಯ ಪದಗಳನ್ನೇ ಬಳಸಿ. ಅಡ್ಡಿಯಿಲ್ಲ.

      @ರಾಕೇಶ್ ಶೆಟ್ಟಿ, ಇಲ್ಲಿ ಜಾತಿಯ ಪ್ರಶ್ನೆ ಎತ್ತಿ ಸಂಸ್ಕ್ರುತ/ ಬ್ರಾಮಣ ದ್ವೇಶ ಎಂದು ಹೇಳುತ್ತಿರುವಿರಿ, ಅದಕ್ಕಾಗಿ ಹೇಳುತ್ತಿದ್ದೇನೆ. ಎಲ್ಲರ ಕನ್ನಡ ಪ್ರಯೋಗದಲ್ಲಿ ತೊಡಗಿಸಿಕೊಂಡವರಲ್ಲಿ ಎಶ್ಟು ಮೇಲ್ವರ್ಗದ ಜನ ಮತ್ತು ಸಂಸ್ಕ್ರುತ ಬಲ್ಲವರಿದ್ದಾರೆ ಎಂಬುದನ್ನು ಒಮ್ಮೆ ಗಮನಿಸಿ ನೋಡಿ.

      ಉತ್ತರ
      • ಏಪ್ರಿಲ್ 12 2013

        ಮೇಲಿರುವ ಅನಿಸಿಕೆ ನನ್ನದೇ. ಮರೆತು ವರ್ಡ್ ಪ್ರೆಸ್ ಮೂಲಕ ಅನಿಸಿಕೆ ಹಾಕಿದೆ.

        ಉತ್ತರ
    • kspriyank
      ಏಪ್ರಿಲ್ 12 2013

      ಬಸವಯ್ಯನವರೇ,
      ನೀವು ಎತ್ತಿರುವ ಪದಗಳ ಬಗೆಗಿನ ಪ್ರಶ್ನೆಗೆ ಒಪ್ಪಿಗೆಯಿದೆ.
      ಕನ್ನಡಿಗರಿಗೆ ಸುಲಬವಾಗಿ ತಿಳಿಯಲಾಗದ ಪದಗಳನ್ನು ಕಟ್ಟಿದ್ದರೆ, ಅದು ಪದಕಟ್ಟುವಿಕೆಯ ನ್ಯೂನತೆ. ಅಂತಹ ಪದಗಳು ಬಿದ್ದು ಹೋಗುತ್ತವೆ. ಸುಲಬವಾಗಿ ತಿಳಿಯಲಾಗುವ ಪದಗಳು ಮೂಡಿ ಬಂದರೆ, ಅವು ನಿಲ್ಲುತ್ತವೆ.
      “ಹೊಸ ಪದಗಳ ಕಟ್ಟುವಿಕೆ”ಯನ್ನೇ ಬೇಡ ಎನ್ನುವುದು ಸರಿಯಾದೀತೇ, ಯೋಚಿಸಿ.
      ಕನ್ನಡವು ನಿಂತ ನೀರಾಗಬಾರದು, “ಹೊಸ ಪದಗಳು” ಬರಲಿ. ಅರ್ಥವಾಗದಂತವು ಬಿದ್ದು ಹೋಗಲಿ.

      ಉತ್ತರ
      • ಏಪ್ರಿಲ್ 12 2013

        ಹೊಸ ವಿಚಾರಗಳು, ವಿಷಯಗಳು ಹುಟ್ಟಿದಂತೆಲ್ಲಾ ಹೊಸ ಪದಗಳ ಆವಿಷ್ಕಾರ ಆಗಬೇಕಾದ್ದು ಸಹಜ.
        Blog, Internet, mobile, smartphone, tablet, ಇತ್ಯಾದಿಗಳೆಲ್ಲಾ ಹೊಸ ಸಂಗತಿಗಳು ಮತ್ತು ಹೀಗಾಗಿ ಹೊಸ ಹೆಸರುಗಳು.
        ಇವುಗಳಿಗೆ ಕನ್ನಡದಲ್ಲೂ ಹೊಸ ಹೆಸರು ಹುಡುಕಿ, ಯಾರೂ ಬೇಡ ಎನ್ನಲಾರರು.

        ಆದರೆ, ಈಗಾಗಲೇ ರೂಢಿಯಲ್ಲಿರುವ ಪದಗಳಿಗೆ ಹೊಸ ಪದ ಹುಡುಕುತ್ತೇವೆನ್ನುವುದು ಸರಿ ಕಾಣುತ್ತಿಲ್ಲ.
        ಅದರಲ್ಲೂ “ಕ್ರಿಯಾಪದ” ಮುಂತಾದ ಸರಳವಾಗಿ, ಎಲ್ಲರಿಗೂ ಅರ್ಥವಾಗುವಂತಹ ಪದಗಳಿಗೇ ಹೊಸ ಪದ ಹುಡುಕಲು ಹೊರಟಿರುವಿರಿ. ಪದಗಳು ಕ್ಲಿಷ್ಟವಾಗಿದೆ ಎನ್ನುವುದಕ್ಕಿಂತ, ಅವು ಸಂಸ್ಕೃತದಲ್ಲಿವೆ ಎಂಬ ಒಂದೇ ಕಾರಣಕ್ಕೆ ಅವು ಬೇಡವೆಂದು ನೀವನ್ನುತ್ತಿರುವುದು ನಿಮ್ಮ ಬರಹಗಳಿಂದಲೇ ಸ್ಪಷ್ಟವಾಗಿದೆ.
        ಸಂಸ್ಕೃತದ ಕುರಿತಾಗಿ ನಿಮಗೇಕಿಷ್ಟು ಧ್ವೇಷವೋ ತಿಳಿಯದು!

        ಧ್ವೇಷದ ಕಾರಣದಿಂದ ಮಾಡುವ ಯಾವ ಕೆಲಸವೂ ಯಶಸ್ವಿಯಾಗುವುದಿಲ್ಲ ಎನ್ನುವುದು ತಿಳಿದಿರಲಿ.

        ಉತ್ತರ
        • kspriyank
          ಏಪ್ರಿಲ್ 12 2013

          ಮಾನ್ಯ ಕುಮಾರ್ ಅವರೇ,
          ಮೊದಲಿಗೆ ಹೇಳಿಬಿಡುತ್ತೇನೆ, “ನನಗೆ ಸಂಸ್ಕ್ರುತದ ಮೇಲೆ ಯಾವುದೇ ಹಗೆತನವಿಲ್ಲ”.
          “ಹರಾಜು” ಎಂಬ ಪರ್ಶಿಯನ್ ಮೂಲದ ಪದಕ್ಕೆ ತಕ್ಕುದಾದ ಕನ್ನಡ ಪದವನ್ನು ಕಟ್ಟಬಹುದೇ ಎಂದು ನೆನ್ನೆ ಗೆಳೆಯರೊಬ್ಬರೊಡನೆ ಹರಟುತ್ತಿದ್ದೆ. ಈಗ ನಾನು “ಪರ್ಶಿಯನ್ ದ್ವೇಶಿ” ಆಗಿಬಿಟ್ಟೆನೇ?
          ಇಂಗ್ಲೀಶಿನಲ್ಲಿರುವ ವಿಚಾರಗಳೆಲ್ಲವನ್ನೂ, ಕನ್ನಡಿಗರಿಗೆ ಅರಿವಾಗಲಿ ಎಂದು ಕನ್ನಡಕ್ಕೆ ಅನುವಾದಿಸಿದರೆ, ಅದು “ಇಂಗ್ಲೀಶ್ ದ್ವೇಶ”ವೆಂದು ಕರೆಯಲಾಗುತ್ತದೆಯೇ? ಇಲ್ಲಾ ತಾನೇ?

          ಪದಕಟ್ಟಣೆಯ ಬಗ್ಗೆ ನಿಲುಮೆಯ ಓದುಗರಲ್ಲಿ ತುಸು ಅಪನಂಬಿಕೆಗಳು ಕಾಣುಸಿತ್ತಿರುವುದರಿಂದ, ಈ ಮಾತನ್ನು ಹೇಳುತ್ತಿರುವೆ. ಪದಕಟ್ಟಣೆಯನ್ನು ಒಂದು ಪದ್ಯ ಬರೆಯುವಂತಹ ಕೆಲಸದಂತೆ ನೋಡಬಹುದು. ಪದ್ಯ ಬರೆಯುವವರು ತಮ್ಮ ಸ್ವತಂತ್ರ ಆಲೋಚನೆಗಳ ಮೂಲಕ, ತಮಗೆ ತೋಚಿದ ವಿಶಯಗಳ ಮೇಲೆ ಪದ್ಯ ಬರೆಯುತ್ತಾರೆ. ಬರೆದು ಸಂತಸ ಪಡುತ್ತಾರೆ ಕೂಡಾ. ಪದ್ಯ ಬರೆಯುವವರನ್ನು ತುಸು ಮಾತನಾಡಿಸಿದರೆ, ನಿಮಗೆ ಇದು ತಾನಾಗೇ ಕಂಡುಬರುವುದು. ಪದ್ಯ ಚೆನ್ನಾಗಿದ್ದರೆ, ಜನರ ಮೆಚ್ಚುಗೆ ಗಳಿಸುತ್ತದೆ, ಹೆಸರುವಾಸಿಯಾಗುತ್ತದೆ. ಚೆನ್ನಾಗಿಲ್ಲದಿದ್ದರೆ, “ಹಾಗೊಂದು ಪದ್ಯವಿದೆ” ಎಂಬುದೇ ಜನರಿಗೆ ಗೊತ್ತಿರುವುದಿಲ್ಲ. ಹಾಗೆಯೇ, ಪದಕಟ್ಟಣೆಯನ್ನು “ಇಂತವುಗಳಿಗೆ ಮಾತ್ರ ಸೀಮಿತ” ಎಂದು ಮಾಡಲಿಕ್ಕಾಗುವುದಿಲ್ಲ.

          “ಕ್ರಿಯಾಪದ”ವೆಂಬ ಪದವು ಈಗಾಗಲೇ ಇರುವಾಗಲೂ, “ಎಸಕಪದ” ಎಂಬ ಪದವನ್ನೇಕೆ ಕಟ್ಟಿದಿರಿ ಎಂಬುದು ನಿಮ್ಮನ್ನು ಹೆಚ್ಚಾಗಿ ಕಾಡುತ್ತಿರಬಹುದಾದ ಪ್ರಶ್ನೆ. ನಾನು ಇದುವರೆಗೆ ಕೊಟ್ಟ ಯಾವ ಉತ್ತರಗಳೂ ತಮಗೆ ಒಪ್ಪಿಗೆಯಾದಂತೆ ತೋರುತ್ತಿಲ್ಲ. ಉತ್ತರಿಸಲು ನನ್ನ ಇನ್ನೊಂದು ಪ್ರಯತ್ನ.
          “Walking stick” ಎಂಬ ಪದಕ್ಕೆ, “ಹಿಡಿಕೆ ಬೆತ್ತ”, “ಊರುಗೋಲು”, “ನಡುಗೆ ಬೆತ್ತ” ಎಂಬ ಮೂರ್ನಾಕು ಪದಗಳನ್ನು ಹೆಕ್ಕಿ ತೆಗೆಯಲಾಗಿದೆ, ಕಟ್ಟಲಾಗಿದೆ. “ಒಂದು ಪದ ಮಾತ್ರಾ ಸಾಕು, ಮಿಕ್ಕವೆಲ್ಲಾ ಬೇಡಾ” ಎಂಬ ಕಟ್ಟಲೆ ಹಾಕಿಕೊಂಡರೆ creative ಕೆಲಸ ಮಾಡಲಿಕ್ಕಾಗುತ್ತದೆಯೇ? ನನ್ನ ಅನುಭವದ ಪ್ರಕಾರ, ಗೆರೆ ಎಳೆದುಕೊಂಡರೆ ಯಾವುದೇ creative ಕೆಲಸ ಮಾಡಲಾಗುವುದಿಲ್ಲ.

          ಉತ್ತರ
  10. ಏಪ್ರಿಲ್ 11 2013

    “ಎಲ್ಲರ ಕನ್ನಡ” ಕ್ಕೂ, ಸಾಮಾನ್ಯರ ಕನ್ನಡಕ್ಕೂ ವ್ಯತ್ಯಾಸವೇನು?

    “ಎಲ್ಲರ ಕನ್ನಡ” ದಲ್ಲೊಂದು “ಕಟ್ಟೊರೆ”:

    ಸೆರೆಯಕುಡಿಯುತಲಿದ್ದವನ ಹೊರದಬ್ಬಿರಲು ಸೆರೆಗಾರನು
    ಮರಳುವೆನುನಾನಿಲ್ಲಿಗೆನುತಲು ನಡೆದು ಮೇಲಕೆ ಪಾರಲು
    ಎರಡು ಪೆರೆಗಳು ಹೊಗರುಚೆಲ್ಲುತ ಬಾನನೆಲ್ಲಾ ತೊಳಗಿರೆ
    ಅರರೆಯಿಂತಹ ಪಾರುಮೆಯಿದೋ ಪಿರ್ಗುವಡೆದೆನುಯೆಂದನು

    ಸಾಮಾನ್ಯರ ಕನ್ನಡದಲ್ಲೊಂದು ಪದ್ಯ: (ಇದು ನನ್ನ ಕನ್ನಡವೂ ಕೂಡ)

    ಸೆರೆಯಕುಡಿಯುತಲಿದ್ದವ ಹೊರದಬ್ಬಿರಲು ಸೆರೆಗಾರನು
    ಮರಳುವೆನು ಮನೆಗೆಯೆನುತಲಿ ನಡೆದು ಮೇಲಕೆ ನೋಡಿರೆ
    ಎರಡು ಚಂದಿರ ಹೊಳಪುಚೆಲ್ಲುತ ಬಾನಲ್ಲೆಲ್ಲಾ ಬೆಳಗಿರೆ
    ಅರೆರೆಯೆಂತಹ ನೋಟವಿದು ನಾ ಹಿಗ್ಗುಪಡೆದೆನುಯೆಂದನು

    ಯಾವುದು ಯಾರ್ಯಾರಿಗೆ ಎಷ್ಟೆಷ್ಟು ತಿಳಿಯತ್ತೋ ನೀವೇ ನೋಡ್ಕೊಳ್ಳಿ. ನಾನೇ ಬರೆದಿದ್ದರಿಂದ ಎರಡೂ ನನಗೆ ಅರ್ಥ ಆಗ್ತಿದೆ, ಹಾಗಂತ “ಎಲ್ಲರಿಗೂ” ತಿಳೀಬೇಕು ಅಂತೇನಿಲ್ಲ ಬಿಡಿ.

    ಉತ್ತರ
    • ಬಸವಯ್ಯ
      ಏಪ್ರಿಲ್ 13 2013

      ಕುಡಿದ ನಶೆ ಇಳಿಸುವಂತಹ ಎಲ್ಲರ ಕನ್ನಡದ ‘ಕಟ್ಟೊರೆ’! 🙂

      ಉತ್ತರ
  11. ಏಪ್ರಿಲ್ 12 2013

    ಈಗಿರುವ ಕನ್ನಡವು ಕಷ್ಟ, ಅದರ ವ್ಯಾಕರಣ ಕಷ್ಟ, ಅದರ ಪದಗಳು ಕಷ್ಟ ಎಂದು ನೀವು ಹೇಳುತ್ತಿರುವಿರಿ.
    ಹಾಗಿದ್ದರೆ, ಇಡೀ ಕನ್ನಡವನ್ನು ಬದಲಾಯಿಸುವ ಬದಲು, ಹೊಸ ಭಾಷೆಯೊಂದನ್ನೇ ಹುಟ್ಟುಹಾಕುವುದು ಜಾಣತನವಲ್ಲವೇ?
    ನೀವು ಹುಟ್ಟುಹಾಕುವ ಹೊಸ ಭಾಷೆಯು ಈಗಿರುವ ಕನ್ನಡಕ್ಕಿಂತ ಸರಳವಾಗಿದ್ದರೆ, ಸುಲಭವಾಗಿದ್ದರೆ, ಶುದ್ಧವಾಗಿದ್ದರೆ, ಅದನ್ನು ಎಲ್ಲರೂ ಒಪ್ಪಿಕೊಳ್ಳುವರು.
    ಈಗಿರುವ ಕನ್ನಡದಲ್ಲಿ ಕೈಯ್ಯಾಡಿಸಿ, ಹಲವು ಶತಮಾನಗಳಿಂದ ಬಳಕೆಗೆ ಬಂದಿರುವ ಪದಗಳಿಗೆಲ್ಲಾ ಹೊಸ ಪದಗಳನ್ನು ಹುಡುಕಿ, ವ್ಯಾಕರಣದಲ್ಲೂ ಸಂಸ್ಕೃತದ ಪ್ರಭಾವವನ್ನು ತೆಗೆದು ಹಾಕಿ, ಕಡೆಗೆ ಯಾರಿಗೂ ಅರ್ಥವಾಗದ ಭಾಷೆಯನ್ನಾಗಿ ಕನ್ನಡವನ್ನು ಮಾರ್ಪಡಿಸುವ ಬದಲು, ಹೊಸ ಭಾಷೆಯನ್ನು ಹುಟ್ಟುಹಾಕಿವುದು “ಜಾಣತನ” ಎನ್ನುವುದು ಅನೇಕರ ಅನಿಸಿಕೆಯಾಗಿದೆ.

    ಉತ್ತರ
    • kspriyank
      ಏಪ್ರಿಲ್ 12 2013

      ಇಲ್ಲ ಇಲ್ಲ.
      ತಾವು ತುಂಬಾ ತಪ್ಪಾಗಿ ಅರ್ಥ ಮಾಡಿಕೊಂಡಿರುವಿರಿ ಕುಮಾರ್ ಅವರೇ.
      – ಈಗಿರುವ ಕನ್ನಡ ಮಾತನ್ನು ಬದಲಾಯಿಸಲು ಯಾರಿಂದಲೂ ಸಾದ್ಯವಿಲ್ಲ.
      – ಈವರೆಗೆ ಬರೆಯಲಾದ ಕನ್ನಡ ವ್ಯಾಕರಣವು, ನಿಜವಾದ ಕನ್ನಡದ ವ್ಯಾಕರಣವನ್ನು ಬಣ್ಣಿಸುವಲ್ಲಿ ಸೋತಿವೆ ಎಂಬುದನ್ನು ತೋರಿಸಲಾಗುತ್ತಿದೆ. ಮತ್ತು, ಕನ್ನಡದ ಬರಹವನ್ನು ಬಣ್ಣಿಸುವ ವ್ಯಾಕರಣವನ್ನು ಬರೆಯುವ ಕೆಲಸ ನಡೆಯುತ್ತಿದೆ.
      – ಈಗಿನ ಕನ್ನಡದ ಪದಗಳು ಕಷ್ಟವೆಂದಲ್ಲ ಅರ್ಥ. ಕನ್ನಡದ ಬರವಣಿಗೆಗಳಲ್ಲಿ ಬಳಸಲಾಗುತ್ತಿರುವ ಹೆಚ್ಚಿನ ಪದಗಳ ಬದಲು, ಆಡುಮಾತಿನಲ್ಲಿರುವ ಪದಗಳನ್ನೇ ಬಳಸುವುದು, ಜನರಿಗೆ ಸಲೀಸು ಮಾಡುತ್ತದೆ ಎಂಬುದು ವಾದ.
      – ಒಂದು ಉದಾಹರಣೆಗೆ ಹೇಳುತ್ತಿರುವೆ. ಮಂಡ್ಯದಲ್ಲಿ “ಕುಕ್ಕುಟ ಪಾಲನಾ ಕೇಂದ್ರ” ಎಂಬೊಂದು ಕಚೇರಿಯಿದೆ. ಇದನ್ನು “ಕೋಳಿ ಸಾಕಣೆ ಕೇಂದ್ರ” ಎಂದರೆ ಎಲ್ಲರಿಗೂ ಅರ್ಥವಾಗುತ್ತೆ. “ಕೋಳಿ” ಎಂಬ ಪದವೂ, “ಸಾಕಣೆ” ಎಂಬ ಪದವೂ ಶತಮಾನಗಳಿಂದ ಬಳಕೆಯಲ್ಲಿರುವ ಪದಗಳೇ. ಅವನ್ನು ಬಳಸೋಣ ಎಂದೇ ಹೇಳಲಾಗುತ್ತಿದೆ.

      ಉತ್ತರ
    • ಏಪ್ರಿಲ್ 12 2013

      ಕುಮಾರ್ ಅವರೇ, ಕನ್ನಡ ಕಶ್ಟ ಅನ್ನುವುದು ಸರಿಯಲ್ಲ. ಯಾವುದೇ ನುಡಿ, ಅದನ್ನು ತಾಯ್ನುಡಿಯಾಗಿ ಆಡುವ ಜನರಿಗೆ ಕಶ್ಟವಲ್ಲ. ಕನ್ನಡ ಕನ್ನಡಿಗರಿಗೆ ಎಂದೆಂದಿಗೂ ಸುಲಬವೇ. ಹಾಗಾಗಿ ಇಲ್ಲಿ ಹೊಸ ಬಾಶೆಯೊಂದನ್ನು ಹುಟ್ಟು ಹಾಕುವ ಅವಶ್ಯಕತೆಯಿಲ್ಲ. ಹಾಗೆ ‘ಸುಲಬವಾದ’ ಹೊಸ ಬಾಶೆ ಕಟ್ಟಿಕೊಂಡರೂ ಅದು ಕನ್ನಡಿಗರಿಗೆ ಕನ್ನಡಕ್ಕಿಂತ ಸುಲಬವಿರುವುದಕ್ಕೆ ಆಗುವುದಿಲ್ಲ.

      ತೊಂದರೆಯಿರುವುದು ಕನ್ನಡದ ಬರಹದಲ್ಲಿ, ಮಾತಲ್ಲಲ್ಲ. ನಮ್ಮ ಮಾತಲ್ಲಿ ಇಲ್ಲದ ಕೆಲವು ಅಕ್ಶರಗಳನ್ನು ಬರಹದಲ್ಲಿ ಬೇಡದೆ ತುರುಕಿಕೊಂಡಿದ್ದೇವೆ. ಬೇಡದ ಅಕ್ಶರಗಳ ಹೊರೆಯನ್ನು ಇಳಿಸುವುದಕ್ಕೆ ನಾವು ಹೇಳುತ್ತಿರುವುದು.

      ಇನ್ನು ವ್ಯಾಕರಣದ ವಿಚಾರಕ್ಕೆ ಬಂದರೆ ಕಶ್ಟ ಎನ್ನುವುದಕ್ಕಿಂತ ಅದರಲ್ಲಿ ಸಾಕಶ್ಟು ಕುಂದು ಕೊರತೆಗಳಿವೆ ಎಂಬ ಸತ್ಯವನ್ನು ಎತ್ತಿ ಹಿಡಿಯಲಾಗಿದೆ ಆಶ್ಟೆ. ಉದಾಹರಣೆಯಾಗಿ ಕನ್ನಡದ ಸಂದಿಗಳ ಬಗ್ಗೆ ಇರುವ ಕೆಲವು ಕುಂದು ಕೊರತೆಗಳನ್ನು ನಾನು ಇಲ್ಲಿ ಪಟ್ಟಿ ಮಾಡಿದ್ದೇನೆ ನೋಡಿ: http://kannudi.blogspot.in/2013/02/blog-post.html.

      ಉತ್ತರ
      • ಏಪ್ರಿಲ್ 12 2013

        > ತೊಂದರೆಯಿರುವುದು ಕನ್ನಡದ ಬರಹದಲ್ಲಿ, ಮಾತಲ್ಲಲ್ಲ. ನಮ್ಮ ಮಾತಲ್ಲಿ ಇಲ್ಲದ ಕೆಲವು
        > ಅಕ್ಶರಗಳನ್ನು ಬರಹದಲ್ಲಿ ಬೇಡದೆ ತುರುಕಿಕೊಂಡಿದ್ದೇವೆ. ಬೇಡದ ಅಕ್ಶರಗಳ ಹೊರೆಯನ್ನು
        > ಇಳಿಸುವುದಕ್ಕೆ ನಾವು ಹೇಳುತ್ತಿರುವುದು.

        ಸ್ವಾಮಿ, ನೀವು ಒಬ್ಬೊಬ್ಬರು ಒಂದೊಂದು ಮಾತನಾಡುತ್ತಿರುವಿರಿ.
        ಇದೇ ಲೇಖನಕ್ಕೆ ಬಂದಿರುವ ಪ್ರತಿಕ್ರಿಯೆಗಳ ಮೇಲೊಮ್ಮೆ ಕಣ್ಣಾಡಿಸಿ, ಆಗ ನಿಮಗೇ ತಿಳಿಯುತ್ತೆ.
        ಕೇವಲ ಅಕ್ಷರದ ಮಾತಾದರೆ, ಪ್ರಿಯಾಂಕ್ ಅವರು, ಬದಲಿ ಪದಗಳ ಹುಡುಕಾಟವನ್ನೇಕೆ ಮಾಡುತ್ತಿರುವರು?

        > ಕೆಲವು ಕುಂದು ಕೊರತೆಗಳನ್ನು ನಾನು ಇಲ್ಲಿ ಪಟ್ಟಿ ಮಾಡಿದ್ದೇನೆ ನೋಡಿ:
        > http://kannudi.blogspot.in/2013/02/blog-post.html

        ಮೊದಲಿಗೆ ಜನರಿಗೆ “ಇಂದು” ಅರ್ಥವಾಗುವ ಭಾಷೆಯಲ್ಲಿ ಬರೆಯಿರಿ; ಇಲ್ಲವೇ ನಿಮ್ಮ ಬರಹವನ್ನು ಅನುವಾದ ಮಾಡಿಕೊಳ್ಳಲು ಒಂದು ನಿಘಂಟನ್ನು ಪ್ರಕಟಿಸಿ.
        ಇದೆರಡೂ ಇಲ್ಲದೆ ನಿಮ್ಮ ಬರಹ ಹೆಚ್ಚಿನ ಜನರಿಗೆ ಅರ್ಥವಾಗದು.

        > ಹಾಗಾಗಿ ಇಲ್ಲಿ ಹೊಸ ಬಾಶೆಯೊಂದನ್ನು ಹುಟ್ಟು ಹಾಕುವ ಅವಶ್ಯಕತೆಯಿಲ್ಲ.
        ಅಕ್ಷರಗಳನ್ನು ಬದಲಾಯಿಸಿ, ವ್ಯಾಕರಣವನ್ನು ಬದಲಾಯಿಸಿ, ಹೊಸಪದಗಳನ್ನು ಸೇರಿಸಿ – ನಂತರ ನಮಗೆ ಸಿಗುವುದು ಹೊಸಭಾಷೆಯೇ ಅಲ್ಲವೇ?
        ಅಥವಾ “ತೇಪೆ ಹಾಕಿದ ಭಾಷೆ” ಎನ್ನೋಣವೇ?

        ಉತ್ತರ
        • ಏಪ್ರಿಲ್ 12 2013

          > ಮೊದಲಿಗೆ ಜನರಿಗೆ “ಇಂದು” ಅರ್ಥವಾಗುವ ಭಾಷೆಯಲ್ಲಿ ಬರೆಯಿರಿ; ಇಲ್ಲವೇ ನಿಮ್ಮ ಬರಹವನ್ನು ಅನುವಾದ > ಮಾಡಿಕೊಳ್ಳಲು ಒಂದು ನಿಘಂಟನ್ನು ಪ್ರಕಟಿಸಿ.
          > ಇದೆರಡೂ ಇಲ್ಲದೆ ನಿಮ್ಮ ಬರಹ ಹೆಚ್ಚಿನ ಜನರಿಗೆ ಅರ್ಥವಾಗದು.
          ಸರಿ. ಇಲ್ಲಿ ನಿಮಗೆ ಯಾವ ಪದಗಳು ತಿಳಿಯಲಿಲ್ಲ ಎಂದು ಹೇಳುತ್ತೀರಾ? ತೀರ ಅಪರಿಚಿತ ಪದಗಳಿಗೆ ಪಕ್ಕದಲ್ಲೇ ಅವುಗಳ ಹುರುಳನ್ನೂ ಕೊಟ್ಟಿದ್ದೇನೆ.

          ಉತ್ತರ
  12. ಏಪ್ರಿಲ್ 12 2013

    ಪ್ರಿಯಾಂಕ್,

    ನಾನು ನಿಮ್ಮೊಬ್ಬರ ಕುರಿತಾಗಿ ಈ ಮಾತು ಹೇಳುತ್ತಿಲ್ಲ.
    ಈ ಲೇಖನದೊಂದಿಗೆ ನಡೆದಿರುವ ಚರ್ಚೆ ಇದೇ ಮೊದಲನೆಯದಲ್ಲ.
    “ನಿಲುಮೆ”ಯಲ್ಲಿಯೇ ಈ ಕುರಿತಾಗಿ ಅನೇಕ ಚರ್ಚೆಗಳು ನಡೆದಿದೆ.
    ಆ ಚರ್ಚೆಗಳು ನಡೆದಾಗೆಲ್ಲಾ, ಕನ್ನಡಕ್ಕೆ ಹೊಸ ವ್ಯಾಕರಣ ಬೇಕು ಎಂಬುದರ ಪರವಾಗಿರುವವರು ಕೆಲವರು, ಏತಕ್ಕಾಗಿ ಹೊಸ ವ್ಯಾಕರಣ/ಪದ ಬೇಕೆಂದು ಹೇಳುವಾಗ, ಸಂಸ್ಕೃತವೆಂಬ ಕಾರಣಕ್ಕೆ, ಅಥವಾ “ಮೇಲ್ಜಾತಿಯವರಿಗೆ ಸೇರಿದ ಸಂಸ್ಕೃತ”, ಇತ್ಯಾದಿಗಳನ್ನು ವ್ಯಕ್ತಪಡಿಸಿದ್ದಾರೆ.
    (ಆ ರೀತಿಯ ಅಭಿಪ್ರಾಯ ಬರುವ ಕಾಮೆಂಟುಗಳನ್ನಿಲ್ಲಿ ನೋಡಿ:
    ೧. https://nilume.net/2013/04/12/%E0%B2%85%E0%B2%95%E0%B3%8D%E0%B2%B7%E0%B2%B0-%E0%B2%95%E0%B2%A1%E0%B2%BF%E0%B2%A4%E0%B2%95%E0%B3%8D%E0%B2%95%E0%B3%86-%E0%B2%A4%E0%B2%AE%E0%B2%BF%E0%B2%B3%E0%B3%81-%E0%B2%AE%E0%B2%BE%E0%B2%A6/#comment-1529
    ೨. https://nilume.net/2013/04/12/%E0%B2%85%E0%B2%95%E0%B3%8D%E0%B2%B7%E0%B2%B0-%E0%B2%95%E0%B2%A1%E0%B2%BF%E0%B2%A4%E0%B2%95%E0%B3%8D%E0%B2%95%E0%B3%86-%E0%B2%A4%E0%B2%AE%E0%B2%BF%E0%B2%B3%E0%B3%81-%E0%B2%AE%E0%B2%BE%E0%B2%A6/#comment-1077
    ೩. https://nilume.net/2013/04/12/%E0%B2%85%E0%B2%95%E0%B3%8D%E0%B2%B7%E0%B2%B0-%E0%B2%95%E0%B2%A1%E0%B2%BF%E0%B2%A4%E0%B2%95%E0%B3%8D%E0%B2%95%E0%B3%86-%E0%B2%A4%E0%B2%AE%E0%B2%BF%E0%B2%B3%E0%B3%81-%E0%B2%AE%E0%B2%BE%E0%B2%A6/#comment-1045
    ೪. https://nilume.net/2011/06/16/%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%95%E0%B2%B2%E0%B2%BF%E0%B2%95%E0%B3%86%E0%B2%AF-%E0%B2%86%E0%B2%B8%E0%B2%95%E0%B3%8D%E0%B2%A4%E0%B2%B0%E0%B2%BF%E0%B2%97%E0%B3%86/#comment-2478
    ೫. https://nilume.net/2011/03/31/%E0%B2%85%E0%B2%9C%E0%B2%95%E0%B3%8D%E0%B2%95%E0%B2%B3%E0%B2%B0%E0%B2%BF%E0%B2%97%E0%B3%87%E0%B2%95%E0%B3%86-%E0%B2%88-%E0%B2%85%E0%B2%B8%E0%B2%B9%E0%B2%A8%E0%B3%86/#comment-3037
    ೬. https://nilume.net/2011/04/06/%E0%B2%87%E0%B2%97%E0%B3%8B%E0%B2%87%E0%B2%A6%E0%B2%B0%E0%B2%B2%E0%B3%8D%E0%B2%B2%E0%B2%BF/#comment-1363
    )

    ಈ ಕಾರಣಗಳಿಂದಾಗಿ, ಮೇಲೆ ತಿಳಿಸಿದಂತಹ ಅಭಿಪ್ರಾಯ ಮೂಡುತ್ತಿದೆ.

    ಉತ್ತರ
  13. ಏಪ್ರಿಲ್ 12 2013

    > ಸ್ವಾಮಿ, ನೀವು ಒಬ್ಬೊಬ್ಬರು ಒಂದೊಂದು ಮಾತನಾಡುತ್ತಿರುವಿರಿ.
    > ಇದೇ ಲೇಖನಕ್ಕೆ ಬಂದಿರುವ ಪ್ರತಿಕ್ರಿಯೆಗಳ ಮೇಲೊಮ್ಮೆ ಕಣ್ಣಾಡಿಸಿ, ಆಗ ನಿಮಗೇ ತಿಳಿಯುತ್ತೆ.
    > ಕೇವಲ ಅಕ್ಷರದ ಮಾತಾದರೆ, ಪ್ರಿಯಾಂಕ್ ಅವರು, ಬದಲಿ ಪದಗಳ ಹುಡುಕಾಟವನ್ನೇಕೆ ಮಾಡುತ್ತಿರುವರು?

    ನಾನು ಅಕ್ಶರವೊಂದೇ ಎಂದು ಹೇಳಿಲ್ಲ. ಅಕ್ಶರದ ವಿಶಯವಾಗಿ ಇಲ್ಲಿ ಹೇಳಿದ್ದೇನೆ ಆಶ್ಟೆ. ಕನ್ನಡದ ಬರಹದಲ್ಲಿರುವ ಇಂದಿನ ತೊಡಕುಗಳಲ್ಲಿ ಯದ್ವಾ ತದ್ವಾ ಸಂಸ್ಕ್ರುತ ಪದಗಳ ತುರುಕುವಿಕೆ ಮತ್ತು ಕನ್ನಡದಲ್ಲಿ ಹೊಸ ಪದ ಕಟ್ಟಿಕೊಳ್ಳುವ ಅಳುವಿಲ್ಲ ಎಂಬ ತಪ್ಪು ನಂಬಿಕೆಯಿಂದ ಹೊಸ ಪಾರಿಬಾಶಿಕ ಪದಗಳಿಗೆ ಕನ್ನಡ ಬಳಸದೆ ಇರುವುದೂ ಒಂದು. ಇಲ್ಲಿ ಈಗಿನ ಕನ್ನಡ ಬರಹದ ಎಲ್ಲ ತೊಡಕುಗಳನ್ನು ಪಟ್ಟಿ ಮಾಡಲು ಜಾಗ ಸಾಕಾಗುವುದಿಲ್ಲ. ಎಲ್ಲ ತೊಡಕುಗಳ ಬಗ್ಗೆ ಓದುವ ಆಸಕ್ತಿಯಿದ್ದಲ್ಲಿ ಶಂಕರ ಬಟ್ಟರ ‘ಕನ್ನಡ ಬರಹ ಸರಿಪಡಿಸೋಣ’ ಪುಸ್ತಕವನ್ನು ಓದಿ. ಇದು ನಿಮ್ಮ ‘ಇಂದಿನ’ ಕನ್ನಡದಲ್ಲೇ ಇದೆ, ನಿಮಗೆ ಓದಲು ಕಶ್ಟವಾಗುವುದಿಲ್ಲ 🙂

    >ಅಕ್ಷರಗಳನ್ನು ಬದಲಾಯಿಸಿ, ವ್ಯಾಕರಣವನ್ನು ಬದಲಾಯಿಸಿ, ಹೊಸಪದಗಳನ್ನು ಸೇರಿಸಿ – ನಂತರ ನಮಗೆ ಸಿಗುವುದು ಹೊಸಭಾಷೆಯೇ ಅಲ್ಲವೇ?
    ಅಕ್ಶರ, ವ್ಯಾಕರಣ ಎರಡನ್ನೂ ಬದಲಾಯಿಸುತ್ತಿಲ್ಲ ಎಂಬುದನ್ನು ಹಿಂದಿನ ಕಾಮೆಂಟಿನಲ್ಲೆ ತಿಳಿಯಾಗಿ ಹೇಳಿದ್ದೀನಿ. ಮತ್ತೆ ಓದಿ ನೋಡಿ. ಇನ್ನು ಹೊಸ ಪದಗಳನ್ನು ಸೇರಿಸಿದರೆ ಬಾಶೆ ಬದಲಾಗುತ್ತದೆ ಎನ್ನುವುದು ತಪ್ಪು ಅದು ಬೆಳವಣಿಗೆ ಕಾಣುತ್ತದೆ. ಇವತ್ತು ಇಂಗ್ಲೀಶಿನಂತಹ ನುಡಿಯನ್ನು ತೆಗೆದುಕೊಂಡರೆ ದಿನಕ್ಕೆ ಹತ್ತಾರು ಪದಗಳು ಹೊಸದಾಗಿ ಸೇರ್ಪಡೆಯಾಗುತ್ತವೆ. ಇದನ್ನು ನಾವು ಒಪ್ಪುವುದಿಲ್ಲ ಅಂದರೆ ಕನ್ನಡವನ್ನು ಶೋ ಕೇಸಿನಲ್ಲಿ ಇಡುವ ಕಾಲ ದೂರ ಇಲ್ಲ.

    ಉತ್ತರ
    • ಏಪ್ರಿಲ್ 12 2013

      ಒಂದು ಕಡೆ ಪ್ರಿಯಾಂಕ್ ಅವರು ಹೇಳುತ್ತಾರೆ, ಇದು ಕನ್ನಡವನ್ನು ಸರಳೀಕರಣಗೊಳಿಸುವ ಪ್ರಯತ್ನವಷ್ಟೇ; ಇಲ್ಲಿ ಸಂಸ್ಕೃತ ಧ್ವೇಷವಾಗಲೀ, ಸಂಸ್ಕೃತದ ಪದಗಳನ್ನು ಹೆಕ್ಕಿ ತೆಗೆಯುವುದಾಗಲೀ ಇಲ್ಲ ಎಂದು.
      ನೀವು ಹೇಳುತ್ತಿರುವಿರಿ, “ಯದ್ವಾ ತದ್ವಾ ಸಂಸ್ಕ್ರುತ ಪದಗಳ ತುರುಕುವಿಕೆ”!
      ನಿಮ್ಮ ಈ ಮೇಲಿನ ವಾಕ್ಯ ಏನನ್ನು ಧ್ವನಿಸುತ್ತಿದೆ!?

      ಭಾಷೆಯೊಂದು ಸಮಾಜದೊಡನೆ ಬೆಳೆಯುತ್ತದೆ. ಸಮಾಜದ ಅಗತ್ಯಕ್ಕೆ ತಕ್ಕಂತೆ ಭಾಷೆಯಲ್ಲಿ ಪದಗಳು ಹುಟ್ಟಿಕೊಳ್ಳುತ್ತವೆ, ಬೇರೆ ಭಾಷೆಗಳಿಂದ ಆಮದಾಗುತ್ತವೆ. ಯಾರೂ ತಮಗಿಷ್ಟ ಬಂದಂತೆ ಪದಗಳನ್ನು ತುರುಕಲಾರರು. ಹಾಗೇನಾದರೂ ಆದಲ್ಲಿ ಸಮಾಜವೇ ಅದನ್ನು ತಿರಸ್ಕರಿಸಿಬಿಡುತ್ತದೆ.
      ಒಂದು ಭಾಷೆಯಲ್ಲಿ ಕೆಲವು ಪದಗಳು ಶತಮಾನಗಳಿಂದಲೂ ಉಳಿದಿದೆಯೆಂದರೆ, ಸಮಾಜಕ್ಕೆ ಅದರ ಅಗತ್ಯವಿತ್ತು ಮತ್ತು ಸಮಾಜವು ಅದನ್ನು ಒಪ್ಪಿಕೊಂಡಿದೆ ಎಂದೇ ಅರ್ಥ.
      ಹೀಗಿರುವಾಗ, ನೀವು ಕನ್ನಡದಲ್ಲಿರುವ ಸಂಸ್ಕೃತ ಪದಗಳಿಗೆ “ಸಂಸ್ಕೃತ ಪದಗಳ ತುರುಕುವಿಕೆ” ಎಂದೇಕೆ ಕರೆಯುತ್ತಿರುವಿರಿ?

      ಕನ್ನಡದ ಮಹಾನ್ ಕವಿಗಳಾದ, ರನ್ನ, ಪಂಪ, ರಾಘವಾಂಕ, ಕುಮಾರವ್ಯಾಸ, ಕುವೆಂಪು ಅವರ ಕಾವ್ಯಗಳನ್ನೊಮ್ಮೆ ಓದಿ. ಅವುಗಳು ಅದೆಷ್ಟು ಸುಂದರವಾಗಿವೆ ಎಂದು ತಿಳಿಯುತ್ತದೆ – ಸಂಸ್ಕೃತ ಪದಗಳನ್ನು ಅವರು ಧಾರಾಳವಾಗಿ ಬಳಸಿದ್ದಾರೆ.
      ಕನ್ನಡದಲ್ಲಿರುವ ಸಂಸ್ಕೃತ ಪದಗಳು “ತುರುಕುವಿಕೆ” ಎಂದೇನಾದರೂ ಆಗಿದ್ದಲ್ಲಿ, ಅವರೇಕೆ ಅವನ್ನು ಬಳಸುತ್ತಿದ್ದರು?
      “ಸಂಸ್ಕೃತ ಪದಗಳೇ ತುಂಬಿರುವ” ಅವರ ಮಹಾನ್ ಕಾವ್ಯಗಳನ್ನೂ ನೀವು ತಿರಸ್ಕರಿಸುತ್ತೀರೇನು!?

      ಪ್ರಿಯಾಂಕ್ ಅವರೇ, ಇದನ್ನೇ ನಾನು ಹೇಳುತ್ತಿರುವುದು, “ಸಂಸ್ಕೃತ ಧ್ವೇಷದಿಂದ ಪ್ರೇರೇಪಿತರಾದವರು ನಿಮ್ಮ ಈ ಪ್ರಯತ್ನದಲ್ಲಿ ನಿಮ್ಮೊಡನಿದ್ದಾರೆ” ಎಂದು. ಇಲ್ಲದಿದ್ದಲ್ಲಿ “ತುರುಕುವಿಕೆ”, “ಹೇರುವಿಕೆ”, ಇತ್ಯಾದಿ ಧ್ವೇಷವನ್ನು ಧ್ವನಿಸುವ ಪದಗಳು ಚರ್ಚೆಯಲ್ಲಿ ಇಣುಕುತ್ತಿರಲಿಲ್ಲ.
      ನಿಮಗೆ ಸಂಸ್ಕೃತ ಧ್ವೇಷವಿಲ್ಲದಿರಬಹುದು; ಆದರೆ, ನಿಮ್ಮ ಈ ಕಾರ್ಯದಲ್ಲಿ ತೊಡಗಿರುವವರಿಗೆಲ್ಲಾ ಅದೇ ಭಾವನೆಯಿದೆ ಎಂದು ನನಗನ್ನಿಸುವುದಿಲ್ಲ.

      ಭಾಷೆಯೊಂದನ್ನು “agenda” ಇಟ್ಟುಕೊಂಡು ಯಾರೂ ರಚಿಸುವುದಿಲ್ಲ, ಬದಲಾಯಿಸುವುದಿಲ್ಲ. ಸಮಾಜವು ಬದಲಾದಂತೆ ಅದು ಬದಲಾಗುತ್ತದೆ. ಭಾಷೆಯೊಂದು ಉಳಿಯುವುದು ಮತ್ತು ಬೆಳೆಯುವುದು, ಅದರ ವ್ಯಾಕರಣ, ಲಿಪಿಗಳಿಂದಲ್ಲ; ಅದನ್ನು ಮಾತನಾಡುವ ಜನರಿಂದ. ತುಳು-ಕೊಂಕಣಿಗೆಳಿಗೆ ಲಿಪಿಯೇ ಇಲ್ಲ; ಆ ಸಮಾಜದ ಮಕ್ಕಳಿಗೆ ವ್ಯಾಕರಣ ಕಲಿಸಿ ಭಾಷೆ ಕಲಿಸಲಾಗುವುದಿಲ್ಲ. ಹೀಗಿದ್ದೂ, ಆ ಭಾಷೆಗಳು ಜೀವಂತವಾಗಿವೆ.
      ಕನ್ನಡಕ್ಕೆ ಅದರ ಲಿಪಿಯಿಂದಾಗಲೀ, ವ್ಯಾಕರಣದಿಂದಾಗಲೀ ತೊಡಕಾಗಿಲ್ಲ. ಅದನ್ನು ಮಾತನಾಡುವವರ ಸಂಖ್ಯೆ (ವಿಶೇಷವಾಗಿ ಬೆಂಗಳೂರು, ಮೈಸೂರು, ಮುಂತಾದ ಮಹಾನಗರಗಳಲ್ಲಿ) ಕಡಿಮೆಯಾಗುತ್ತಿದೆ ಎನ್ನುವುದೇ ಚಿಂತೆಯ ವಿಷಯ. ಕನ್ನಡವನ್ನು ನಮ್ಮ ರಾಜಧಾನಿಯಲ್ಲಿ ಮೆರೆಸುವುದು ಹೇಗೆ, ಹೊರಗಿನಿಂದ ಬಂದವರೂ ಕನ್ನಡವನ್ನು ಮಾತನಾಡುವಂತೆ ಮಾಡುವುದು ಹೇಗೆ, ಎನ್ನುವುದನ್ನು ಯೋಚಿಸಿ ಕಾರ್ಯರೂಪಕ್ಕಿಳಿಸಿದರೆ, ಹೆಚ್ಚಿನ ಕನ್ನಡ ಸೇವೆಯಾಗುವುದು ಎಂದು ನನಗನ್ನಿಸುತ್ತದೆ.

      ಉತ್ತರ
      • ಏಪ್ರಿಲ್ 12 2013

        ಕುಮಾರ್, ನಾನು ಹೇಳುವುದನ್ನೆಲ್ಲ ಹೇಳಿದ್ದಾಗಿದೆ. ಅದು ನಿಮ್ಮ ತಿಳಿವಳಿಕೆಗೆ ಬಂದಿದೆ ಎಂಬುದು ನನಗೆ ಗೊತ್ತಾಗುತ್ತಿದೆ. ಆದರೂ ನಾನು ಮಾಡಿದ ವಾದಕ್ಕೆ ನಿಮ್ಮ ಎದುರು ವಾದ ಹೇಳುವ ಬದಲು ಹೇಳಿದ ಪದಗಳಲ್ಲೆಲ್ಲ ಒಂದು ತಪ್ಪು ಅರ್ತ ಹುಡುಕಿ ತಿರುಚುತ್ತಿರುವುದು ನೋಡಿದರೆ ನೀವು ‘ಎಲ್ಲರ ಕನ್ನಡ’ವನ್ನು ಒಪ್ಪುವುದಿಲ್ಲ ಎಂಬ ತೀರ್ಮಾನಕ್ಕೆ ಆಗಲೇ ಬಂದಂತಿದೆ. ಇರಲಿ ಅದು ನಿಮಗೆ ಬಿಟ್ಟಿದ್ದು.

        ಉತ್ತರ
        • ಏಪ್ರಿಲ್ 12 2013

          > ಹೇಳಿದ ಪದಗಳಲ್ಲೆಲ್ಲ ಒಂದು ತಪ್ಪು ಅರ್ತ ಹುಡುಕಿ ತಿರುಚುತ್ತಿರುವುದು ನೋಡಿದರೆ
          ನಾನು ಏನನ್ನೂ ಇಲ್ಲಿ ತಿರುಚಿಲ್ಲ. ನಾವು ಚರ್ಚಿಸಿದ ಪ್ರತಿಯೊಂದು ವಿಷಯವೂ ಇಲ್ಲಿ ದಾಖಲಾಗಿದೆ.
          ನನ್ನ ಪ್ರಶ್ನೆಗಳಿಗೆ ಒಬ್ಬೊಬ್ಬರು ಒಂದೊಂದು ರೀತಿ ಉತ್ತರ ಕೊಡುತ್ತಿರುವುದನ್ನು ನಾನು ನಿಮಗೆ ತೋರಿಸಿದೆ ಅಷ್ಟೇ.
          ಆಷ್ಟಕ್ಕೇ ನೀವು ಹೇಳಿದ್ದನ್ನು ನಾನು ತಿರುಚಿದೆನೆಂದು ಆರೋಪಿಸುತ್ತಿರುವಿರಿ.
          ಆ ರೀತಿ ಹೇಳುವ ಬದಲು, ನಾನು ಏನನ್ನು ತಿರುಚಿದೆ ಎಂದು ತಿಳಿಸಿಬಿಟ್ಟಿದ್ದರೆ ವಿಷಯ ಸ್ಪಷ್ಟವಾಗುತ್ತಿತ್ತು.
          ಅದನ್ನು ಬಿಟ್ಟು, ವೃಥಾ ಆರೋಪ ಮಾಡುತ್ತಿರುವುದನ್ನು ನೋಡಿದರೆ, ನನ್ನ ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರವಿಲ್ಲ, ಅಥವಾ ನನ್ನ ಸಂದೇಹ ಸರಿಯೆಂದು ನೀವು ಒಪ್ಪುತ್ತಿರುವಿರೆಂದು ಭಾವಿಸಬೇಕಾಗುತ್ತದೆ.

          ಪ್ರಾರಂಭದಿಂದಲೂ ನನ್ನ ಪ್ರಶ್ನೆಯಿರುವುದು “ಉದ್ದೇಶ ಶುದ್ಧಿ”ಯ ಕುರಿತಾಗಿ.
          ಅದನ್ನು ಸ್ಪಷ್ಟವಾಗಿ ನಿರೂಪಿಸಬೇಕಾದವರು ನೀವು. ನಿಮ್ಮ ಮಾತುಗಳು ಸಂದೇಹ ಹುಟ್ಟಿಸುವಂತಿದ್ದರೆ, ಗೊಂದಲ ನಿರ್ಮಾಣ ಮಾಡುವಂತಿದ್ದರೆ, ಅದು ಯಾರ ತಪ್ಪು?

          ಉತ್ತರ
          • ಏಪ್ರಿಲ್ 12 2013

            > ನನ್ನ ಪ್ರಶ್ನೆಗಳಿಗೆ ಒಬ್ಬೊಬ್ಬರು ಒಂದೊಂದು ರೀತಿ ಉತ್ತರ ಕೊಡುತ್ತಿರುವುದನ್ನು ನಾನು ನಿಮಗೆ ತೋರಿಸಿದೆ ಅಷ್ಟೇ.
            ಎಲ್ಲವನ್ನು ಒಂದೆಡೆ ತಿಳಿಸಲಾಗುವುದಿಲ್ಲ, ಅದಕ್ಕೆ ನಿಮಗೆ ‘ಕನ್ನಡ ಬರಹ ಸರಿಪಡಿಸೋಣ’ ಓದಿ ಅಂತ ಹೇಳಿದ್ದು. ಆದರೂ ನೀವು ಅದನ್ನು ಓದಿ ಚರ್ಚಿಸುತ್ತೇನೆ ಎಂದು ಹೇಳದೆ ಮತ್ತೆ ನಿಮ್ಮ ಅದೇ “ಒಬ್ಬೊಬ್ಬರು ಒಂದೊಂದನ್ನು ಹೇಳುತ್ತಿದ್ದೀರಿ” ಎಂಬ ಮಾತನ್ನೇ ಹೇಳುತ್ತಿದ್ದೀರಾ.

            ನಾನು ನಿಮಗೆ ಒಂದು ಕೊಂಡಿಯನ್ನು ಕೊಟ್ಟು ಅದರಲ್ಲಿ ಕನ್ನಡ ಸಂದಿಗಳ ಬಗ್ಗೆ ಇರುವ ತೊಡಕು ಗೊಂದಲಗಳ ಬಗ್ಗೆ ಚರ್ಚಿಸಲಾಗಿದೆ ಅಂದರೆ ಅದರಲ್ಲಿ ಕೆಲವು ಪದಗಳು ತಿಳಿಯುತ್ತಿಲ್ಲ ಎಂದಿರಿ. ಯಾವ ಪದಗಳು ತಿಳಿಯುತ್ತಿಲ್ಲ ಎಂದು ಕೇಳಿದ್ದಕ್ಕೆ ಉತ್ತರವಿಲ್ಲ.

            ನಾನು ತುರುಕುವಿಕೆ ಎಂಬ ಪದ ಬಳಸಿದ್ದಕ್ಕೆ ನೀವು ಉದಾಹರಣೆಗಳಾಗಲೀ, ಸ್ಪಶ್ಟೀಕಾರಣವಾಗಲಿ ಕೇಳಲಿಲ್ಲ. ಬದಲಾಗಿ ನನಗೆ ಸಂಸ್ಕ್ರುತ ದ್ವೇಶ ಎಂದು ನೀವೇ ತೀರ್ಮಾನಿಸಿಕೊಂಡಿರಿ.

            > ಪ್ರಾರಂಭದಿಂದಲೂ ನನ್ನ ಪ್ರಶ್ನೆಯಿರುವುದು “ಉದ್ದೇಶ ಶುದ್ಧಿ”ಯ ಕುರಿತಾಗಿ. ಅದನ್ನು ಸ್ಪಷ್ಟವಾಗಿ ನಿರೂಪಿಸಬೇಕಾದವರು ನೀವು.
            ನಾನು ಹೇಳಿದ ವಿಶಯಗಳು ನೀವು ಗಮನಿಸುವುದಿಲ್ಲ, ಕೊಟ್ಟ ಕೊಂಡಿಯನ್ನು ಕುಂಟು ನೆಪವೊಡ್ಡಿ ಓದುವುದಿಲ್ಲ, ಹೇಳಿದ ಹೊತ್ತಗೆ ಓದುತ್ತೇನೆ ಎಂದು ಕೂಡ ಹೇಳಿಲ್ಲ. ಇನ್ನೂ ಅದೆಶ್ಟು ಸ್ಪಶ್ಟವಾಗಿ ನಿರೂಪಿಸಬೇಕೋ ನನಗೆ ಗೊತ್ತಿಲ್ಲ.

            ಉತ್ತರ
            • ಏಪ್ರಿಲ್ 12 2013

              > ನಾನು ತುರುಕುವಿಕೆ ಎಂಬ ಪದ ಬಳಸಿದ್ದಕ್ಕೆ ನೀವು ಉದಾಹರಣೆಗಳಾಗಲೀ, ಸ್ಪಶ್ಟೀಕಾರಣವಾಗಲಿ ಕೇಳಲಿಲ್ಲ.
              ಅದರಲ್ಲಿ ಸ್ಪಷ್ಟೀಕರಣ ಕೇಳುವುದಕ್ಕೆನಿದೆ. ಕನ್ನಡದಲ್ಲಿ “ತುರುಕು” ಎಂಬುದಕ್ಕೆ ಸ್ಪಷ್ಟವಾದ ಅರ್ಥವಿದೆ. ಅದಕ್ಕಿಂತ ಭಿನ್ನವಾದ ಅರ್ಥವನ್ನು ನೀವು “ಹೊಸ ಕನ್ನಡ”ದಲ್ಲಿ ಕೊಟ್ಟಿದ್ದರೆ, ಅದನ್ನು ನೀವೇ ಎಲ್ಲರಿಗೂ ಗೊತ್ತು ಮಾಡಿಸಬೇಕಷ್ಟೇ.

              > ಹೇಳಿದ ಹೊತ್ತಗೆ ಓದುತ್ತೇನೆ ಎಂದು ಕೂಡ ಹೇಳಿಲ್ಲ.
              ನೀವು ಪುಸ್ತಕವನ್ನು ಓದಲು ಹೇಳಿದ್ದು ಸರಿ. ಆದರೆ, ಪುಸ್ತಕವನ್ನು ಓದಲು ಸಮಯಬೇಕೆನ್ನುವುದು ನಿಮಗೆ ತಿಳಿದಿದೆಯಲ್ಲವೇ?
              ನೀವು ಪುಸ್ತಕ ಓದಲು ಹೇಳಿದ ದಿನವೇ ಓಡಿಹೋಗಿ ಪುಸ್ತಕ ತಂದು, ಅದನ್ನು ಅಂದೇ ಓದಿ ಮುಗಿಸಿ, ನಿಮ್ಮೊಡನೆ ಚರ್ಚೆ ಮುಂದುವರೆಸಬೇಕೆಂದು ಅಪೇಕ್ಷಿಸಿದ್ದರೆ ಅದು ಸಾಧ್ಯವಿಲ್ಲದ ಮಾತು. ಎಲ್ಲಕ್ಕೂ ಸಮಯ ಬೇಕು.
              ನಾನೀಗಾಗಲೇ ಒಂದು ಪುಸ್ತಕವನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸುವುದರಲ್ಲಿ ಮುಳುಗಿದ್ದೇನೆ. ಅದರ ಜೊತೆಗೆ, ನಿಯತಕಾಲಿಕೆಯೊಂದಕ್ಕೆ ಸಮಯಕ್ಕೆ ಸರಿಯಾಗಿ ಲೇಖನಗಳನ್ನು ತಯಾರಿಸಿ ಕಳುಹಿಸುವ ಕೆಲಸವೂ ಇದೆ.
              ಇದೆಲ್ಲವೂ ನನ್ನ ದಿನನಿತ್ಯದ ಕಾರ್ಯಗಳ ಜೊತೆಗೆ. ಹೀಗಾಗಿ, ಇನ್ನೂ ಕೆಲವು ವಾರಗಳ ಮಟ್ಟಿಗೆ ಹೊಸ ಪುಸ್ತಕ ಓದುವ ಸಾಹಸಕ್ಕೆ ಕೈಹಾಕಲಾರೆ; ಅದೂ, ಈಗ ಓದುತ್ತಿರುವ ಗ್ರಂಥಗಳನ್ನು ಮುಗಿಸದೆ, ಹೊಸ ಪುಸ್ತಕಕ್ಕೆ ಕೈಹಾಕಲು ತೊಡಗಿದರೆ, ಕಪ್ಪೆಯನ್ನು ತಕ್ಕಡಿಯಲ್ಲಿ ತೂಗಿದಂತಾಗಿಬಿಡುತ್ತದೆ.

              > ನಾನು ಹೇಳಿದ ವಿಶಯಗಳು ನೀವು ಗಮನಿಸುವುದಿಲ್ಲ, ಕೊಟ್ಟ ಕೊಂಡಿಯನ್ನು ಕುಂಟು ನೆಪವೊಡ್ಡಿ ಓದುವುದಿಲ್ಲ,
              ನಾನು ನೀವು ನೀಡಿದ ಕೊಂಡಿಯನ್ನು ನೋಡಿದ ನಂತರವೇ, ಅದರಲ್ಲಿರುವ ಹೆಚ್ಚಿನಂಶ ಅರ್ಥವಾಗುವುದಿಲ್ಲ ಎಂದದ್ದು.
              ನನಗೆ ಮಾತ್ರವಲ್ಲ, ಹೆಚ್ಚಿನ ಕನ್ನಡಿಗರಿಗೆ ಅದು ಅರ್ಥವಾಗಲಾರದು.
              ಇದರಲ್ಲಿ ಯಾವ “ಕುಂಟು ನೆಪ”ವೂ ಇಲ್ಲ. ಇದ್ದದ್ದನ್ನು ನೇರವಾಗಿಯೇ ಹೇಳಿದ್ದೇನೆ.
              ಪ್ರತಿಯೊಂದು ಪದವನ್ನೂ ಇಲ್ಲಿ ಪಟ್ಟಿ ಮಾಡಿ, ನಿಮ್ಮಿಂದ ಅರ್ಥ ಹೊರಡಿಸಿ, ಅದನ್ನು ನಾನು ನನ್ನ ತಲೆಯೊಳಗೆ ಮುದ್ರಿಸಿಕೊಂಡು, ನಂತರ ಲೇಖನವನ್ನು ಅರ್ಥ ಮಾಡಿಕೊಳ್ಳುವುದು, ಈ ಲೇಖನದ ಚರ್ಚೆಯನ್ನು ದಾರಿ ತಪ್ಪಿಸಿಬಿಡುತ್ತದೆ.
              ಆ ರೀತಿ ನಿಮ್ಮ “ಹೊಸ ಕನ್ನಡ”ವನ್ನು ಅರ್ಥ ಮಾಡಿಸಬೇಕೆಂಬ ಆಸಕ್ತಿ ನಿಮಗಿದ್ದರೆ, ಅದಕ್ಕೇ ಪ್ರತ್ಯೇಕ ಚರ್ಚೆಯ ಕೊಂಡಿಯನ್ನು ಪ್ರಾರಂಭಿಸಿ. ಅದರಲ್ಲಿ, ಆಸಕ್ತಿಯಿದ್ದವರು ಭಾಗವಹಿಸಿ “ಹೊಸ ಕನ್ನಡ” ಕಲಿಯುತ್ತಾರೆ.

              ಉತ್ತರ
              • ಏಪ್ರಿಲ್ 12 2013

                >>ನೀವು ಪುಸ್ತಕವನ್ನು ಓದಲು ಹೇಳಿದ್ದು ಸರಿ. ಆದರೆ, ಪುಸ್ತಕವನ್ನು ಓದಲು ಸಮಯಬೇಕೆನ್ನುವುದು ನಿಮಗೆ ತಿಳಿದಿದೆಯಲ್ಲವೇ?
                >>ನೀವು ಪುಸ್ತಕ ಓದಲು ಹೇಳಿದ ದಿನವೇ ಓಡಿಹೋಗಿ ಪುಸ್ತಕ ತಂದು, ಅದನ್ನು ಅಂದೇ ಓದಿ ಮುಗಿಸಿ, ನಿಮ್ಮೊಡನೆ ಚರ್ಚೆ ಮುಂದುವರೆಸಬೇಕೆಂದು ಅಪೇಕ್ಷಿಸಿದ್ದರೆ ಅದು ಸಾಧ್ಯವಿಲ್ಲದ ಮಾತು. ಎಲ್ಲಕ್ಕೂ ಸಮಯ ಬೇಕು.

                ಕುಮಾರ್, ನಾನು ಇಂತಹ ಕಾಮೆಂಟುಗಳಿಗೇ ಹೇಳಿದ್ದು ನೀವು ನಾನು ಹೇಳಿದ ವಿಶಯಗಳನ್ನು ಸರಿಯಾಗಿ ಗಮನಿಸುತ್ತಿಲ್ಲ ಎಂದು. “ನೀವು ಪುಸ್ತಕವನ್ನು ಓದುತ್ತೇನೆ ಎಂದು ಹೇಳುತ್ತಿಲ್ಲ” ಎಂದು ಹೇಳಿದೆ, ಆದರೆ ನೀವು ಅದನ್ನು “ಪುಸ್ತಕವನ್ನು ಓದಿಕೊಂಡು ಬಂದಿಲ್ಲ” ಎಂದು ತಿಳಿದುಕೊಂಡಿರಿ. ಇರಲಿ ನೀವು ಪುಸ್ತಕ ಓದುತ್ತೀರೆಂದರೆ ನಾನು ಕಾಯಲು ರೆಡಿ. ಅದೆಶ್ಟು ಹೊತ್ತು / ದಿನಗಳು ಬೇಕೋ ತೆಗೆದುಕೊಳ್ಳಿ, ಆಮೇಲೆ ಚರ್ಚೆ ಮಾಡೋಣಂತೆ.

                ಉತ್ತರ
                • ಏಪ್ರಿಲ್ 12 2013

                  ನೀವು ಮೊದಲು, “ಯದ್ವಾ ತದ್ವಾ ಸಂಸ್ಕ್ರುತ ಪದಗಳ ತುರುಕುವಿಕೆ” ಎಂಬ ಮಾತಿನ ಬಗ್ಗೆ ಸ್ಪಷ್ಟೀಕರಣ ನೀಡಿ.
                  ಪುಸ್ತಕಗಳಲ್ಲಿ ಏನು ಬರೆದಿದ್ದಾರೆ ಎನ್ನುವುದಕ್ಕಿಂತ, ಅದರ ಹಿಂದಿರುವ ವ್ಯಕ್ತಿಗಳ ರೀತಿ-ನೀತಿಗಳು, ಮಾತುಕತೆಗಳು, ಮನೋಭಾವಗಳು, ಉದ್ದೇಶಗಳು ಮುಖ್ಯವಾಗುತ್ತದೆ.
                  ನಿಮ್ಮ ಮಾತುಗಳಲ್ಲಿ ಕಾಣುತ್ತಿರುವ ದ್ವಂದ್ವಗಳನ್ನು ಮೊದಲು ದೂರಗೊಳಿಸಿ, ನನ್ನ ಮನಸ್ಸಿಗೆ ಬಂದಿರುವ ಅನುಮಾನಗಳನ್ನು ಪರಿಹರಿಸಿರಿ. ಇವೆಲ್ಲಾ ಸ್ಪಷ್ಟವಾಗದೆ ಮುಂದಿನ ಚರ್ಚೆಗಳು ಸಾಧ್ಯವಿಲ್ಲ.

                  ಹೀಗಾಗಿ, ಮೊದಲು “ಸಂಸ್ಕೃತದ ತುರುಕುವಿಕೆ”ಯ ಬಗ್ಗೆ ನಿಮ್ಮ ಮನಸ್ಸಿನಲ್ಲಿರುವುದನ್ನು ಸರಿಯಾಗಿ ತಿಳಿಸಿ.

                  ಉತ್ತರ
  14. malathi S
    ಏಪ್ರಿಲ್ 12 2013

    ಜ್ಞಾನ becomes ಜ್ನಾನ and ದೋಷ becomes ದೋಶ, ತೃ becomes ತ್ರು ..these are common mistakes which even my office people do. not that they do not have knowledge of Kannada akshara but because they cannot type it properly in baraha ಅಷ್ಟೆ. ಮಾಧವ ಪೇರಾಜೆಯವರು ಉಲ್ಲೇಖಿಸಿರುವ ಆ ಪುಸ್ತಕ ದಲ್ಲಿನ ಸಾಲುಗಳು ಕೇವಲ ಮುದ್ರಣ ದೋಷ ಆಗಿರಬಹುದು.

    ಪುಸ್ತಕ ಹೊರತರುವಾಗ ಅದೂ ‘ ಕನ್ನಡ ಕಲಿಕೆಯ ಬಗ್ಗೆ’ ಇರುವಾಗ ಅವರು (ಚಲಪತಿಯವರು) ಆಗಿದ ತಪ್ಪುಗಳನ್ನು ಗಮನಿಸದೆ ಇದ್ದದ್ದು ಘೋರ ತಪ್ಪು ಅಥವ ಬೇಜವಾಬ್ದಾರಿಯ ವರ್ತನೆ. ಒಂದೆರಡು ತಪ್ಪುಗಳಾದರೆ ಇರಲಿ ಅನ್ನಬಹುದು.ಪದೇ ಪದೇ ತಪ್ಪುಅಕ್ಷರ/ಪದಗಳನ್ನು ಓದುವಾಗ ಕಿರಿ ಕಿರಿ ಎನ್ನಿಸುತ್ತದೆ.

    (ಕ್ಷಮಿಸಿ ಅಷ್ಟೆಲ್ಲ ಕಮೆಂಟ್ ಓದುವ ಪುರುಸೊತ್ತಿಲ್ಲ. ಕಲಿಕೆಯ ಕನ್ನಡ ಅಂದ್ರೆ ಏನು ಅಂತ ಕುತೂಹಲದಿಂದ ಓದಿದೆ ಅಷ್ಟೆ.)

    ಇಂತೀ ಅಲ್ಪಸ್ವಲ್ಪ ಕನ್ನಡ ಗೊತ್ತಿರುವ

    ಮಾಲತಿ ಎಸ್

    ಉತ್ತರ
  15. ಬಸವಯ್ಯ
    ಏಪ್ರಿಲ್ 13 2013

    ಸಂದೀಪ್, ಪ್ರಿಯಾಂಕ ತಾಳ್ಮೆಯಿಂದ ಉತ್ತರಿಸುತ್ತಿರುವ ನಿಮಗೆ ಧನ್ಯವಾದ.

    ಈಗಿರುವ ಕನ್ನಡದ ಮನೆ ಸಾಕಷ್ಟು ಗಟ್ಟಿಯಾಗಿದೆ, ಆದರೆ ಸ್ವಲ್ಪ ಕಿಡಕಿ-ಬಾಗಿಲುಗಳ ರಿಪೇರಿ ಆಗ ಬೇಕಿದೆ. ಮೊದಲಿಗೆ ಈ “ಅನುಲೋಮಾನುಪಾತ”, “ದ್ಯುತಿ ಸಂಶ್ಲೇಷಣ ಕ್ರಿಯೆ”, “ತ್ರುಷ್ಣ”, “ಪತ್ರಹರಿತ್ತು” ಮುಂತಾದ ಅಸಂಬದ್ಧವೆನಿಸುವ, ಹೇಳಲು ಸುಲಭವಲ್ಲದ ಶಬ್ದಗಳ ಪಟ್ಟಿ ಮಾಡಿ ಸರಿಯಾದ ಕನ್ನಡ ಪದಗಳನ್ನು ಅವುಗಳ ಜಾಗದಲ್ಲಿ ತರುವುದು, ಜನಪ್ರಿಯಗೊಳಿಸುವುದು ಮೊದಲ ಅದ್ಯತೆಯಾಗಬೇಕೆಂದು ನನಗನಿಸುತ್ತದೆ, ಈ ವಿಷಯದಲ್ಲಿ ಎಲ್ಲರಿಗೂ ಸಮ್ಮತಿಯಿದೆ ಎಂದನಿಸುವುದಿಲ್ಲವೆ ನಿಮಗೆ?

    ನನ್ನಂತಹ ಬಹಳಷ್ಟು ಜನರಿಗೆ ‘ಎಲ್ಲರ ಕನ್ನಡ’ ಎಂಬುದು ಈಗಿರುವ ಮನೆಯನ್ನು ಕೆಡವಿ ಹೊಸ ಮನೆಯನ್ನೇ ಕಟ್ಟುವ ಪ್ರಯತ್ನವೇನೊ ಅನಿಸುತ್ತಿದೆ. ನಾನು ಜಾಲ ತಾಣಗಳಲ್ಲಿ ಓದಿದ ಹಳೆಶಾಲೆ-ಹೊಸಶಾಲೆ ವಾದಗಳು ನನಗೆ ಈ ಭಾವನೆ ಕೊಡುತ್ತಿವೆ. ನೀವುಗಳು ಒಮ್ಮಿಂದೊಮ್ಮೆಲೆ ಬಹಳಷ್ಟನ್ನು ಬದಲಾಯಿಸ (ಅದೂ ಸುಲಭವಾಗಿ ಅರ್ಥವಾಗದ ಕನ್ನಡ ಶಬ್ದಗಳಿಂದ) ಹೊರಟರೆ, ಎಲ್ಲ ಗೊಂದಲ ಏಳುವುದು. ಈಗಾಗಲೇ ಕನ್ನಡದ ಪರಿಸ್ಥಿತಿ ನೋಡಿರುವ ಸಾಮಾನ್ಯ ಕನ್ನಡಿಗರಿಗೆ, ಇದೆಲ್ಲ ನೋಡಿ ‘ಹಾವು ಹೋಯ್ತು-ಜೋಳಿಗೇನೂ ಹೋಯ್ತು ‘ ಆಗುತ್ತದೆಯೇನೊ ಅನಿಸಿದರೆ ಅದರಲ್ಲಿ ಅಚ್ಚರಿಯೇನಿಲ್ಲ!.

    ಉತ್ತರ
  16. ಬಸವಯ್ಯ
    ಏಪ್ರಿಲ್ 15 2013

    ಪ್ರಾಮಾಣಿಕ ಉದ್ದೇಶ ಹೊಂದಿದ ಪ್ರಿಯಾಂಕ್, ಸಂದೀಪರಂತಹ ಕೆಲವರಿರಬಹುದು. ಆದರೆ ಬೆಂಕಿ ಹಚ್ಚುವ ಕಾಯಕದಲ್ಲಿ ಸುಖ ಕಾಣುವ ‘ಪಂಡಿತ’ ರು ಸಾಕಷ್ಟಿದ್ದಾರೆ. ಈ ಕೆಳಗಿನ ಕಮೆಂಟ್ ಬ್ಲಾಗವೊಂದರಲ್ಲಿ ಬಂದದ್ದು.

    ” ನನ್ನನಿಸಿಕೆಯಲ್ಲಿ ಅದು ಈಗಾಗಲೇ ‘ಜನಪ್ರಿಯ’/’ಮಂದಿಗೆ ಹಿಡಿಸುವ’ಆಗೇ ಇದೆ. ಆದರೆ ಈ ‘ಸಾಹಿತ್ಯ’ ಹಾಗು ‘ಮಾಧ್ಯಮ’ದಲ್ಲಿ ತುಂಬಿಕೊಂಡಿರುವ ಒಂದು ‘ವರ್ಗ’ ಬೇಕು ಬೇಕೆಂದಲೇ ಈ ‘ಎಲ್ಲರ ಕನ್ನಡ’ಕ್ಕಿಂತ ಸಂಸ್ಕೃತ-ಕನ್ನಡವನ್ನು ಬಳಸುವುದು. ಆ ವರ್ಗದ ಲಾಬಿ ಬಲವಾಗಿ ಇರುವ ತನಕ.. ‘ಎಲ್ಲರ ಕನ್ನಡ’ಕ್ಕೆ ಅಲ್ಲಿ ಎಡೆಯಿಲ್ಲ. ಆದರೇ ಅದೇ ನೋಡಿ.. ಸಿನಿಮದಲ್ಲಿ ಆ ‘ವರ್ಗ’ದ ಹಿಡಿತ ಕಡಮೆ, ಅದಕ್ಕೆ ಅಲ್ಲಿ ‘ಎಲ್ಲರ ಕನ್ನಡ’ ಇದೆ. ”
    ” ಪರಂಪರೆ ಅಂದರೇನು? ಹಾಗು ನೀವು ಹೇಳುವ ಪರಂಪರೆಗೆ ಯಾರು ಯಾರು ಹೇಗೆ ಸೇರಿವೆರು? ಹೆಚ್ಚಿನವರು ಸೇರಿವರೇ? ಇವೆಲ್ಲ ಇರಲಿ.!
    ಚಿಕ್ಕದಾಗಿ ಹೇಳಬೇಕೆಂದರೇ ‘ಸಾಹಿತ್ಯ’ ಹಾಗು ‘ಮಾಧ್ಯಮ’ದಲ್ಲಿ ಇರುವ ಈ ಪರಂಪರೆ/ವರ್ಗ/ಲಾಬಿ(ಲಾಭಿ) ಇರುವ ವರೆಗೂ ಹೆಚ್ಚಿನ ಮಂದಿಗೆ ಬೇಕಾದ ಸವಲತ್ತು ಸಿಗುವುದಿಲ್ಲ. ಅದು ಏನೇ ಆಗಿದ್ದರೂ.! ಆದೇ ವರ್ಗ/ಹಿಂಡು/ಗುಂಪನ್ನು ಸಂಸ್ಕೃತಿ/ಪರಂಪರೆ ಎಂದು ಯಾವುದೇ ಅಂದವೆನಿಸುವಂತೆ ಸಂಸ್ಕೃತದಲ್ಲಿ ಕರೆದರೂ, ಅದರ ಹಾವಳಿ, ಹಾವಳಿಯೇ! ”

    ಎಲ್ಲರ ಕನ್ನಡ ‘ ಹಳ್ಳ ಹಿಡಿಸಲು ಇಂಥವರೆ ಸಾಕು!

    ಉತ್ತರ

Trackbacks & Pingbacks

  1. ಸಾಹಿತ್ಯ ಪರಂಪರೆಯ ಅರಿವಿಲ್ಲದ ’ಎಲ್ಲರ ಕನ್ನಡ’ | ನಿಲುಮೆ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments