ವಿಷಯದ ವಿವರಗಳಿಗೆ ದಾಟಿರಿ

ಜೂನ್ 16, 2011

76

ಕನ್ನಡ ಕಲಿಕೆಯ ಆಸಕ್ತರಿಗೆ

‍ನಿಲುಮೆ ಮೂಲಕ

ಕಾರ್ಯಕ್ರಮದ ಬಗ್ಗೆ ಮಾಹಿತಿ

– ಬನವಾಸಿ ಬಳಗ

ನಾಡಿನ ಹಿರಿಯ ನುಡಿಯರಿಗರಾದ ಡಾ|| ಡಿ. ಎನ್. ಶಂಕರಬಟ್ಟರು ಕನ್ನಡದ ನುಡಿಯರಿಮೆ (ಬಾಶಾವಿಗ್ನಾನ) ಸೊಲ್ಲರಿಮೆ (ವ್ಯಾಕರಣ) ಮತ್ತು ಪದಕಟ್ಟಣೆ (ಪದರಚನೆ) ಕುರಿತಂತೆ ಆಳವಾಗಿ ಅದ್ಯಯನ ನಡೆಸಿ ಈ ವಲಯಗಳಲ್ಲಿ ಸಂಶೋದನೆಗೆ ಹೊಸದೊಂದು ದಾರಿಯನ್ನು ಕಟ್ಟಿದ್ದಾರೆ.

ಈಗ ಅವರ ಕೈಕೆಳಗೆ ಅವರಿಂದಲೇ ಈ ವಿಶಯಗಳ ಬಗ್ಗೆ ಕಲಿಯುವ ಮತ್ತು ಅವರ ಸಂಶೋದನೆಯಲ್ಲಿ ನೇರವಾಗಿ ಪಾಲ್ಗೊಳ್ಳುವ ಒಂದು ಚಿನ್ನದಂತಹ ಅವಕಾಶವನ್ನು ಬನವಾಸಿ ಬಳಗ ನಿಮ್ಮ ಮುಂದೆ ತಂದಿದೆ. ಈ ಕಾರ್ಯಕ್ರಮದ ವಿವರಗಳನ್ನು ಕೆಳಗೆ ಕೊಡಲಾಗಿದೆ.

ಕಾರ್ಯಕ್ರಮದ ಇಟ್ಟಳ

ಈ ಕಾರ್ಯಕ್ರಮದ ಅಂಗವಾಗಿ ತಲಾ ಒಂದು ವರ್ಶದ ಅವದಿಯ ನಾಲ್ಕು ಹಮ್ಮುಗೆ (ಯೋಜನೆ) ಗಳನ್ನು ಏರ್ಪಡಿಸಲಾಗಿದೆ. ಮೂವರು ಶಿಬಿರಾರ್ತಿಗಳು ಸೇರಿ ಒಂದು ಹಮ್ಮುಗೆಯನ್ನು ಮಾಡಬೇಕಾಗುತ್ತದೆ. ಹಮ್ಮುಗರಿಗೆ ಡಾ||. ಡಿ. ಎನ್. ಶಂಕರಬಟ್ಟರು ತಾವೇ ಮಾರ್ಗದರ್ಶನ ನೀಡುತ್ತಾರೆ. ಹಮ್ಮುಗೆಗಳ ವಿಶಯಗಳು ಹೀಗಿವೆ:

೧. ಇಂಗ್ಲಿಶ್ ಪದಗಳಿಗೆ ಕೆಲವು ಹೊಸ ಕನ್ನಡದ ಪದಗಳು

೨. ಹೊಸ ಪದಗಳನ್ನು ಉಂಟುಮಾಡುವ ಬಗೆ

೩. ಕೂಡುಪದಗಳನ್ನು ಉಂಟುಮಾಡುವುದು

೪. ಎಸಕಪದಗಳನ್ನು ಗುಂಪಿಸುವುದು

 ವಿದ್ಯಾರ್ಹತೆ ಮತ್ತು ಆಯ್ಕೆಯ ಪ್ರಕ್ರಿಯೆ

ಈ ಒಂದುವರುಶದ ಕಾರ್ಯಕ್ರಮದಲ್ಲಿ ಒಟ್ಟು 12 ಶಿಬಿರಾರ್ತಿಗಳಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶವಿದೆ. ಪಾಲ್ಗೊಳ್ಳಲು ಆಸೆಪಡುವವರು ಲಗತ್ತಿಸಿರುವ ಅರ್ಜಿಯನ್ನು ತುಂಬಿ 07/07/2011 ಒಳಗೆ ಕಳುಹಿಸಬೇಕು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಸೆಪಡುವವರು ಪದವೀದರರಾಗಿರಬೇಕು (ಬಿ.ಎ., ಬಿ.ಎಸ್.ಸಿ., ಬಿ.ಇ., ಬಿ. ಟೆಕ್, ಬಿ.ಕಾಮ್, ಎಂ.ಎ., ಎಂ.ಎಸ್.ಸಿ., ಎಂ.ಇ., ಎಂ. ಟೆಕ್, ಎಂ.ಬಿ.ಬಿ.ಎಸ್., ಪಿ.ಎಚ್.ಡಿ…ಯಾವುದಾದರೂ ಸರಿ). ಅರ್ಜಿ ಸಲ್ಲಿಸುವವರು ವಿದ್ಯಾರ್ತಿಗಳು, ಸಂಶೋದಕರು, ಶಿಕ್ಶಕರು, ಪ್ರಾದ್ಯಾಪಕರು, ಪ್ರೊಫೆಸರು – ಯಾರಾದರೂ ಆಗಿರಬಹುದು. ಅರ್ಜಿ ಸಲ್ಲಿಸಿದವರಲ್ಲಿ ಆಯ್ದ ಕೆಲವರನ್ನು ಡಾ||. ಡಿ. ಎನ್. ಶಂಕರಬಟ್ಟರು ದೂರವಾಣಿಯ ಮೂಲಕ ಸಂದರ್ಶನ ಮಾಡುತ್ತಾರೆ. ಸಂದರ್ಶನದಲ್ಲಿ 12 ಶಿಬಿರಾರ್ತಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಕಾರ್ಯಕ್ರಮ  ನಡೆಯುವ ದಿನಾಂಕ ಮತ್ತು ಜಾಗ

ಆಯ್ಕೆಗೊಂಡ 12 ಶಿಬಿರಾರ್ತಿಗಳು ಒಂದು ವರುಶದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ವಿವರಗಳು ಹೀಗಿವೆ:

 ದಿನಾಂಕಗಳು       ಸಮಯ ಅವದಿ ಜಾಗ ಕಾರ್ಯಕ್ರಮ
06/08/2011 – 08/08/2011 10:00 – 18:00 3 ದಿನ ತೀರ್ತಹಳ್ಳಿ ಡಿ. ಎನ್. ಎಸ್. ಅವರಿಂದ ಪಾಟ
09/08/2011 – 02/12/2011 4 ತಿಂಗಳು ಹಮ್ಮುಗೆಯನ್ನು ಮುಂದುವರೆಸುವುದು
03/12/2011 – 05/12/2011 10:00 – 18:00 3 ದಿನ ತೀರ್ತಹಳ್ಳಿ ಡಿ. ಎನ್. ಎಸ್. ಅವರಿಂದ ಪಾಟ
06/12/2011 – 06/04/2012 4 ತಿಂಗಳು ಹಮ್ಮುಗೆಯನ್ನು ಮುಂದುವರೆಸುವುದು
07/04/2012 – 09/05/2012 10:00 – 18:00 3 ದಿನ ತೀರ್ತಹಳ್ಳಿ ಡಿ. ಎನ್. ಎಸ್. ಅವರಿಂದ ಪಾಟ
10/05/2012 – 03/08/2012 4 ತಿಂಗಳು ಹಮ್ಮುಗೆಯನ್ನು ಮುಂದುವರೆಸುವುದು
04/08/2012 – 06/08/2012 10:00 – 18:00 3 ದಿನ ತೀರ್ತಹಳ್ಳಿ ಡಿ. ಎನ್. ಎಸ್. ಅವರಿಂದ ಪಾಟ, ಮುಕ್ತಾಯ

ಕಾರ್ಯಕ್ರಮದ ಏರ್ಪಾಡು, ಹಣ, ಮುಂತಾದವು

ಆಯ್ಕೆಗೊಂಡ 12 ಶಿಬಿರಾರ್ತಿಗಳು ತಾವು ಇರುವಲ್ಲಿಂದ ತೀರ್ತಹಳ್ಳಿಗೆ ಬಂದುಹೋಗುವ ಏರ್ಪಾಡನ್ನು ತಾವೇ ಮಾಡಿಕೊಳ್ಳಬೇಕಾಗುತ್ತದೆ. ಈ ಕರ್ಚನ್ನು ನಿರ್ವಹಿಸಲು ಕಶ್ಟವಾದರೆ ಕೆಲವು ಕೇಸುಗಳಲ್ಲಿ ಮಾತ್ರ ಬನವಾಸಿ ಬಳಗವು ಬಂದುಹೋಗುವ ಕರ್ಚನ್ನು ನಿರ್ವಹಿಸಬಲ್ಲುದು (ಈ ಬಗ್ಗೆ ಶ್ರೀ. ಪ್ರಿಯಾಂಕ್ ಬಾರ್ಗವ್ ಅವರನ್ನು ಸಂಪರ್ಕಿಸಬಹುದು). ತೀರ್ತಹಳ್ಳಿಯಲ್ಲಿ ಊಟ, ವಸತಿ ಮತ್ತು ಕಲಿಕೆಮನೆಯ ಏರ್ಪಾಡನ್ನು ಬನವಾಸಿ ಬಳಗ ಮಾಡುತ್ತದೆ.

ಅರ್ಜಿ ಕಳುಹಿಸಬೇಕಾದ ವಿಳಾಸ

ತುಂಬಿದ ಅರ್ಜಿಗಳನ್ನು ಕಳುಹಿಸಬೇಕಾದ ವಿಳಾಸ (ಅರ್ಜಿಗಳನ್ನು ಮಿಂಚೆಯ ಮೂಲಕ ಕಳುಹಿಸುವುದು ಉತ್ತಮ):

 ಶ್ರೀ. ಬಾ. ರಾ. ಕಿರಣ

92, 1ನೇ ’ಬಿ’ ಅಡ್ಡರಸ್ತೆ, 3ನೇ ಮುಕ್ಯರಸ್ತೆ,

ನಿವೇದಿತ ನಗರ

ಮೈಸೂರು 570022

ಮಿಂಚೆ: kiran@banavasibalaga.org

ಹೆಚ್ಚಿನ ಮಾಹಿತಿಗಾಗಿ

ಕಾರ್ಯಕ್ರಮದ ಏರ್ಪಾಡಿಗೆ ಸಂಬಂದಿಸಿದ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಶ್ರೀ ಪ್ರಿಯಾಂಕ್ ಬಾರ್ಗವ್

ಮಿಂಚೆ: priyank.ks@gmail.com

ದೂರವಾಣಿ: 9972744665

ಅರ್ಜಿ ನಮೂನೆ (ಕೈಸೇರಲು ಕೊನೆಯ ದಿನಾಂಕ 07/07/2011)

76 ಟಿಪ್ಪಣಿಗಳು Post a comment
 1. ಜೂನ್ 16 2011

  ವಿಚಿತ್ರ ಕನ್ನಡ!

  ಉತ್ತರ
 2. maaysa
  ಜೂನ್ 16 2011

  Enu “ವಿಚಿತ್ರ”, ‘ಆಸು’?

  ಉತ್ತರ
  • ಡಾ. ಡಿ. ಎನ್. ಶಂಕರಬಟ್ಟರು ಎನ್ನುವುದರಲ್ಲಿ “ಡಿ. ಎನ್.” ಅಕ್ಷರಗಳಿಗೆ ಬದಲಾಗಿ ಕನ್ನಡ ಪದಗಳ ಸಂಕ್ಷಿಪ್ತ ರೂಪವನ್ನೇ ಬಳಸಿದ್ದರೆ ಚೆನ್ನಿತ್ತು. ಉದಾಹರಣೆಗೆ ನಾನು “ಏ ಎಸ್.” ಅಕ್ರಗಳಿಗೆ ಬದಲಾಗಿ “ಆಸು” ಅಕ್ಷರಗಳನ್ನು ಬಳಸುತ್ತೇನೆ.
   ಅಲ್ಲದೇ ನೀವೇ ಕಂಡಿರುಂತೆ, ಹೇಳಿರುವಂತೆ, ಕನ್ನೇಡೇತರ ಪದಗಳು ಇನ್ನೂ ಇವೆ.
   ಪದಬಳಕೆ ಒಂದೇ ತೆರನಾಗಿ ಇದ್ದರೆ ಓದಲು ಚೆನ್ನ, ಅಂತ ನನ್ನ ಅನಿಸಿಕೆ.
   ಹಾಗಾಗಿ ಓದುತ್ತಾ ಹೋದಂತೆ ನನಗೆ ವಿಚಿತ್ರ ಅನಿಸಿತು. ಅಷ್ಟೇ.

   ಇನ್ನು ಅವರ ಹಮ್ಮುಗೆಗಳ ಬಗ್ಗೆ, ನನ್ನ ವಿರೋಧವಿಲ್ಲ.
   ನಾಡಿನಲ್ಲಿ ಅನೇಕಾನೇಕ ಹಮ್ಮುಗೆಗಳು ಆರಂಭವಾಗುತ್ತವೆ. ಕೆಲವು ಯಶಸ್ಸನ್ನು ಕಾಣುತ್ತವೆ, ಕೆಲವು ನಡುವಲ್ಲೇ ಅಸುನೀಗುತ್ತವೆ.
   ನಾನು ಒಪ್ಪುತ್ತೇನೋ ಬಿಡುತ್ತೇನೋ ಅನ್ನುವುದು ಸದ್ಯಕ್ಕೆ ಅನಗತ್ಯದ ಮಾತು.
   ಎಲ್ಲವೂ ಎಲ್ಲರೂ ಒಳ್ಳೇದಾಗಲಿ ಎಂದು ಆಶಿಸಬಹುದು. ನಾನೂ ಹಾಗೆಯೇ ಆಶಿಸುತ್ತೇನೆ.

   ಉತ್ತರ
   • maaysa
    ಜೂನ್ 17 2011

    Nimma maatu sari illi..

    Salute!

    ಉತ್ತರ
   • maaysa
    ಜೂನ್ 17 2011

    @Authors..

    ಆತ್ರಾಡಿ ಸುರೇಶ ಹೆಗ್ಡೆ makes a valid point. And some second it.

    Hence an explanation is expected.

    ಉತ್ತರ
 3. maaysa
  ಜೂನ್ 16 2011

  ಈ ಬರಹವು ಹೇಳುತ್ತಿರುವ ಕೆಲಸ ಹೊಗಳ-ತಕ್ಕದ್ದು.

  ಆದರೆ.. ಬೇಡವಾದ ಸಂಸ್ಕ್ರುತ ಪದಗಳಿಂದ, ಅಂದ-ಗೆಟ್ಟು ಹೋಗಿದೆ

  ಉತ್ತರ
 4. ರವಿ ಜಿ ಬಿ
  ಜೂನ್ 16 2011

  ಶಂಕರ ಭಟ್ಟರ ವಿಚಾರವನ್ನು ಪೂರ್ತಿ ಯಾಗಿ ಒಪ್ಪಲಾಗದಾದರೂ, ಪ್ರಯತ್ನ ಖಂಡಿತಾ ಶ್ಲಾಘನೀಯ . ನಾವಿದ್ದೇವೆ ಶಂಕರ ಭಟ್ಟರ ಜೊತೆ ಮತ್ತು ಬನವಾಸಿ ಬಳಗದ ಜೊತೆ (ಖಂಡಿತಾ ವ್ಯಂಗ್ಯವಲ್ಲ. ).
  ಪೂರ್ತಿಯಾಗಿ ಒಪ್ಪಲಾಗದೆಂದು ಯಾಕೆ ಹೇಳಿದೆನೆಂದರೆ , ಈ ಲೇಖನದಲ್ಲಿ ಉಪಯೋಗಿಸಲ್ಪಟ್ಟ ಬಹಳ ಶಬ್ದಗಳು ವಿಶೇಷವಾಗಿವೆ!! ಪದ ಕೋಶ ಜೊತೇಲೆ ಬೇಕು ಮತ್ತು ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಅನ್ನಿಸಿತು !!!!! ಸಾಕಷ್ಟು ವಿದ ವಿಧ ವಾದ ಕನ್ನಡಗಳೊಂದಿಗೆ ಹೊಸ ವಿಧ ವಾದ ಕನ್ನಡ ಅಸ್ತಿತ್ವಕ್ಕೆ ಬಂದಂತಾಯಿತು !!!!!! ಎಲ್ಲಾದರಲ್ಲೂ ಅದರದ್ದೇ ಆದ ಒಳಿತು ಮತ್ತು ಕೆಡುಕುಗಳು ಇವೆ !!!

  ಪ್ರಯತ್ನ ಸಾಗಲಿ, ಒಳ್ಳೆದಾಗಲಿ

  ನಿಮ್ಮವನೇ,
  ರವಿ ಜಿ ಬಿ.

  ಉತ್ತರ
  • ಜೂನ್ 16 2011

   > I cannot comment in Kannada, because this stupid Linux system of
   > mine hardly has any software which can be used to type Kannada.
   > Hence I am handicapped.
   Get a GMAIL mail id. Login to gmail and in the compose box, select “Kannada” in the drop down menu on the left hand side and Click on the “ಅ”.
   After this, whatever you type in English font will change to Kannada font.
   This will work even in Linux.

   > Sanskrit fanaticism, and preach there age-old gospel of
   > discrimination and pomp.
   Can you please tell us some instances of this discrimination done because of Samskrita?
   Noted Samskrita scholars like Kalidasa, Vyasa, Valmiki, etc are all from the “so-called” backward classes.
   If Samskrita was the reason for discrimination, these people would not have got a chance to write in that language and also the society would not have accepted those works. Our society has not only accepted those works, but, it also given them highest place in our society!
   So, I don’t understand how you are telling “Samskrita” as the reason for discrimination.

   > alien words from dead Sanskrit.
   Samskrita is not an alien language.
   Also, Samskrita is not a dead language.
   We are all part of the Samskriti given by Samskrita.
   Even Kannada is part of that Samskriti.

   Nothing can be achieved by “Hate-Ideology”.
   Doing good to Kannada is understandable and everybody will join you.
   But, if you think that, by hating Samskrita, you are doing service to Kannada, you are wrong and you will not achieve success.
   Even scholar D.N.Shankara Bhat will not agree with you and will appose you.

   ಉತ್ತರ
   • maaysa
    ಜೂನ್ 16 2011

    “We are all part of the Samskriti given by Samskrita.
    Even Kannada is part of that Samskriti.”

    We are not.. we are a pure native Kannadigas.. but… not belong to your discriminative group.

    “Can you please tell us some instances of this discrimination done because of Samskrita?”
    Mannusmriti and Vedas

    “by hating Samskrita”
    I honestly hate Sanskrit, because it is the root of all our social evil in India.

    ಉತ್ತರ
    • ಜೂನ್ 16 2011

     ನಾವು ಬಳಸುವ ಭಾಷೆ ನಮ್ಮ ಸಂಸ್ಕೃತಿಯನ್ನು ಹೇಳುತ್ತದೆ.
     ನಮಗೆ ಸಿಕ್ಕಿರುವ ಸಂಸ್ಕಾರ, ನಮ್ಮ ತಂದೆ-ತಾಯಿ ಹಾಗೂ ಗುರುಗಳ ಬಗ್ಗೆ ಹೇಳುತ್ತದೆ.
     ನಮ್ಮ ಪರಂಪರೆಯನ್ನು ತಿಳಿಸುತ್ತದೆ.
     ಯಾರಾದರೂ “ಒಳ್ಳೆಯದೆನಿಸದ” ಭಾಷಾ ಪ್ರಯೋಗ ಮಾಡಿದರೆ, ಅವರ ಬಗ್ಗೆ ಅನುಕಂಪ ಪಡಬೇಕಷ್ಟೇ, ಕೋಪದ ಆವಶ್ಯಕತೆಯಿಲ್ಲ.

     ಉತ್ತರ
     • ಜೂನ್ 16 2011

      > No.. we are born low and cheap who are fit to carry around you holy shit ..
      > right, you highness!?
      ಯಾರೂ ಹುಟ್ಟಿನಿಂದ ಕೀಳಲ್ಲ, ಮೇಲಲ್ಲ. ನಡವಳಿಕೆಯಿಂದ ಮಾತ್ರ ನಮ್ಮ ಮಟ್ಟ ತಿಳಿಯುವುದು.
      ಒಂದು ಕಾಲದಲ್ಲಿ “ಉಚ್ಚ-ನೀಚ”, ’ಸ್ಪೃಷ್ಯ-ಅಸ್ಪೃಷ್ಯ” ಇತ್ಯಾದಿ ಕುರೂಡಿಗಳು ನಮ್ಮ ಸಮಾಜದಲ್ಲಿ ಹುಟ್ಟುಕೊಂಡಿದ್ದು ನಿಜವೇ.
      ಅದನ್ನು ತೊಲಗಿಸಲೂ ಸಾಕಷ್ಟು ಪ್ರಯತ್ನಗಳಾಗಿವೆ, ಆಗುತ್ತಿವೆ.
      ಆದರೆ, ಹಿಂದೆ ಹೀಗಾಯಿತು ಎಂದು ಹಲಬುತ್ತಾ, ಅದೇ ಗುಂಗಿನಲ್ಲಿದ್ದರೆ, ಅದೇನೂ ಸರಿಹೋಗುವುದಿಲ್ಲವಲ್ಲ!
      ಧ್ವೇಷದಿಂದ ಸಮಾನತೆ ಸಾಧ್ಯವಿಲ್ಲ – ಪ್ರೀತಿಯಿಂದ ಮಾತ್ರ ಅದು ಸಾಧ್ಯ.

      ಉತ್ತರ
    • ಜೂನ್ 16 2011

     > My people were killed because they heard Veda-chanting
     ಅದಕ್ಕೆ ಕಾರಣ ವೇದವಲ್ಲ ಅಲ್ಲವೇ? ತಪ್ಪು ಸಂಸ್ಕೃತದ್ದೂ ಅಲ್ಲ!
     ಆ ರೀತಿ ಮಾಡಿದ ಜನರ ತಪ್ಪು ಅದು.
     ಅದೇ ಜನ ಇಂಗ್ಲಿಷ್ ಅಥವಾ ಕನ್ನಡ ಮಾತನಾಡುತ್ತಿದ್ದರೂ ಅದನ್ನೇ ಮಾಡುತ್ತಿದ್ದರು.
     ಆ ಜನರ ಭಾಷೆಯನ್ನು ಧ್ವೇಷಿಸುವುದರಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ.
     ಕೊಲೆಗಾರ ಚಾಕುವಿನಿಂದ ಕೊಲೆ ಮಾಡಿದನೆಂದು ಚಾಕುವನ್ನು ಧ್ವೇಷಿಸಿದಂತಾಯ್ತು ನಿಮ್ಮ ಕಥೆ.
     ಕೊಲೆಗಾರನಿಗೆ ಚಾಕುವೂ ಒಂದೇ ಪಿಸ್ತೂಲೂ ಒಂದೇ.
     ಧ್ವೇಷಿಸಬೇಕಾದ್ದು ಕೊಲೆಗಾರನನ್ನೇ ಹೊರತು, ಚಾಕುವನ್ನಲ್ಲ – ಅದೇ ಚಾಕು ಮುಂದೆ ಅಡುಗೆ ಮನೆಯಲ್ಲೂ ಉಪಯೋಗಕ್ಕೂ ಬರುತ್ತದೆ, ಆಸ್ಪತ್ರೆಗೂ ಬೇಕಾಗುತ್ತದೆ!

     ಉತ್ತರ
     • ಜೂನ್ 16 2011

      > Check your Vedas, it preaches the caste system in a beautiful, holy and
      > sacred way..!
      Tell me which part of Veda preaches caste system?
      And where does it say, which caste is low and which caste is high?

      ಉತ್ತರ
      • maaysa
       ಜೂನ್ 16 2011

       10.90 of the Rigveda, verse 12 ..
       &
       Manusmriti

       ಉತ್ತರ
    • ನಾನವನಲ್ಲ!!!
     ಜೂನ್ 16 2011

     ಮಾಯ್ಸಾ ,
     ಹೌದೆ ? ವೇದ ಕೇಳಿಸ್ಕೋ೦ಡಿದ್ದರಿಂದ್ ನಿಮ್ಮವರಿಗೆ ಆ ಗತಿ ಬಂತೆ !!!!? ನಿಜವಾಗೂ ಅನ್ಯಾಯ! ಯಾವ ಊರಲ್ಲಿ? ಯಾವಾಗ? ಖಂಡಿತಾ ಎಲ್ಲರೂ ಸೇರಿ ವಿರೋಧಿಸಬೇಕಾಗಿದೆ. ಹಿರಿಯರು ಕಲಿಯಲು ಬಿಡದೆ ನೀವೇಗೆ ಕಲಿತ್ರಿ? ನಿಜಕ್ಕೂ ಅಸಾಮಾನ್ಯರು ನೀವು ! ಸ್ವ ವೈದ್ಯ ಅಪಾಯಕಾರಿ !! ಹಿಂದುಳಿದವರು (ಎಸ್ ಸಿ ಮತ್ತು ಎಸ್ ಟಿ ಅಲ್ಲ ಕ್ಷಮಿಸಿ ) ಅಂತ ಹೇಳ್ಕೊಲ್ಲೋದರಲ್ಲಿ ಅದೇನು ಆನಂದವೋ? ನನಗಂತೂ ಹಿಂದುಳಿದವನು ಅಂತ ಹೇಳ್ಕೊಲ್ಲೋಕೆ ಆಗದು ಯಾಕಂದ್ರೆ ನಾನು ಮುಂದೆ ಬರೊ ಯೋಚನೆ ಮಾಡೋನು. ನಾನು ಎಸ್ ಟಿ (ಜಾತಿಯಲ್ಲಿ) ಯಾದರೂ ಖಂಡಿತಾ ಹಿಂದುಳಿದವನಲ್ಲ.hi ಬಯಸುವುದೂ ಇಲ್ಲ !!!

     ನಿಲುಮೆಯ ಓದುಗರಿಗೆ: ದಯವಿಟ್ಟು ಎಲ್ಲರೂ ಕ್ಷಮಿಸಿ ಇಲ್ಲಿ ಜಾತಿ ತಂದಿದ್ದಕ್ಕೆ . ಮಾಯ್ಸರಿಗೆ ಉತ್ತರಿಸಲು ಮಾತ್ರ ಹೇಳಿದ್ದು. ಬೇರೆಯವರನ್ನು ಹಳಿಯುವುವುದಾಗಲಿ ,ನೋಯಿಸುವುದಾಗಲಿ ಉದ್ದೇಶವಲ್ಲ್ಲ. ದಯವಿಟ್ಟು ಕ್ಷಮಿಸಿ .

     ಉತ್ತರ
 5. Priyank
  ಜೂನ್ 16 2011

  ರವಿ ಅವರೇ,

  ‘ಒಳಿತಾಗಲಿ’ ಎಂಬ ನಿಮ್ಮ ಹಾರೈಕೆಗೆ ನನ್ನಿ.

  ಉತ್ತರ
  • ರವಿ ಜಿ ಬಿ
   ಜೂನ್ 16 2011

   ದನ್ಯವಾದ ಪ್ರಿಯಾಂಕ್ ರವರೆ ,
   ಬೇಸರಿಸಿಕೊಳ್ಳಬೇಡಿ ಪ್ಲೀಸ್ ….. ಪ್ರಿಯಾಂಕ್ ಮತ್ತು ಇತರರು …ಬೇಸರವಾಗಿದ್ದರೆ ಕ್ಷಮಿಸಿ ಪ್ಲೀಸ್.

   ಮೇಲೆ ನೋಡಿ (ಮಾಯ್ಸಣ್ಣ ರ ಕಾಮೆಂಟ್ ನ್ನ ) ನಾನು ಹೇಳಿದ್ದು ಸರಿಯಾಗಿದೆ ತಾನೇ? ಯಾಕೆಂದರೆ ಇಲ್ಲಿ ಕಾಮೆಂಟ್ ಹಾಕಿಯಾದ ಮೇಲೆ ನನಗೆ ಬೇಸರವಾಗಿತ್ತು ! ಯಾಕೆಂದರೆ ನಮ್ಮ ಕಾಮೆಂಟ್ ಗಳು ಒಳ್ಳೆ ಕೆಲಸಕ್ಕೆ ಹಿನ್ನಡೆ ಉಂಟು ಮಾಡ ಬಾರದು ( ನಾನೇನು ದೊಡ್ಡ ಮನುಷ್ಯ ಎಂದು ಹೇಳುತ್ತಿಲ್ಲ. ಯಾಕೆಂದರೆ ನಾನಿನ್ನೂ ಸಣ್ಣವನು ನಿಮ್ಮ ಮುಂದೆ .) ಆದರೆ ಮಾಯ್ಸರ ಕಾಮೆಂಟ್ ನೋಡಿದ ಮೇಲೆ ಆ ಬೇಸರ ಪೂರ್ತಿ ಯಾಗಿ ಹೊರಟು ಹೋಯಿತು. ಅದಕ್ಕೆ ನಿಮಗೆ ದನ್ಯವಾದ ಮಾಯ್ಸಣ್ಣ !

   ಉತ್ತರ
 6. sundar
  ಜೂನ್ 16 2011

  ಕೆಲ ಜನಕ್ಕೆ ಚಿತ್ರ ನೂ ಆಗುತ್ತೆ ವಿಚಿತ್ರನೂ ಆಗುತ್ತೆ, ಮೆಚ್ಚಿನ ಸಂಗಾತಿಗಳು ಬರೆದರೆ ತುಟಿಬಿಚ್ಚದ ಜನ. ಆದರೆ ಬೇರೆಯವರು ಬರೆದರೆ ಮಾತ್ರ ಬರೀ ತಪ್ಪು ಕಂಡು ಹಿಡಿಯೋದೆ ಆಗುತ್ತೆ. ಎಲ್ಲ ಬೆಲ್ಟ್ ಮಹಿಮೆ
  ಹುಟ್ಟುಗುಣ

  ಉತ್ತರ
  • maaysa
   ಜೂನ್ 16 2011

   Hu.. Sundar..

   Mechchuge sangati andare, e: niTTinalli namma saraka:ravaagali, illave be:re university-gaLa:gali kelasa ma:DE illa, ma:Duttilla ha:gu ma:Duva ha:ge ka:Nalla…

   ೧. ಇಂಗ್ಲಿಶ್ ಪದಗಳಿಗೆ ಕೆಲವು ಹೊಸ ಕನ್ನಡದ ಪದಗಳು

   ೨. ಹೊಸ ಪದಗಳನ್ನು ಉಂಟುಮಾಡುವ ಬಗೆ

   ೩. ಕೂಡುಪದಗಳನ್ನು ಉಂಟುಮಾಡುವುದು

   ೪. ಎಸಕಪದಗಳನ್ನು ಗುಂಪಿಸುವುದು

   Ivu namage ivottu be:k:giruvudu ivu …. nammalli kannada-dalle hosa bageya saalugaLannu kaTTuvudu nintu hOguttive.

   ಉತ್ತರ
 7. ಜೂನ್ 16 2011

  maaysa :
  10.90 of the Rigveda, verse 12 ..
  &
  Manusmriti

  ಋಗ್ವೇದದ ಆ ಭಾಗದಲ್ಲಿ ಯಾವ ಜಾತಿಯ ಉಲ್ಲೇಖವೂ ಬಂದಿಲ್ಲವಲ್ಲಾ?
  ಉದಾಹರಣೆಗೆ, ನಮ್ಮ ಕರ್ನಾಟಕದಲ್ಲಿ ಕುರುಬ ಎಂಬ ಜಾತಿಯವರಿದ್ದಾರೆ.
  ಅದರ ಉಲ್ಲೇಖ ವೇದದ ಯಾವ ಭಾಗದಲ್ಲೂ ಇಲ್ಲ.
  ವೇದವೇ ಜಾತಿಗೆ ಕಾರಣವಾಗಿದ್ದರೆ, ಕುರುಬ ಎನ್ನುವ ಜಾತಿಯ ಹೆಸರೂ ವೇದದಲ್ಲೇ ಇರಬೇಕಿತ್ತಷ್ಟೇ!
  ವೇದದಲ್ಲಿ ಎಲ್ಲೂ ಕುರುಬ ಎಂಬ ಜಾತಿಯ ಉಲ್ಲೇಖವೇ ಇಲ್ಲ.
  ಅಂದ ಮೇಲೆ, ಜಾತಿಯ ಹುಟ್ಟಿಗೆ ಬೇರೇನೋ ಕಾರಣವಿರಬೇಕಲ್ಲವೇ!?

  ಉತ್ತರ
  • maaysa
   ಜೂನ್ 16 2011

   OK what about Manusmriti?

   By the way where did you learn Vedas? You really had a bad teacher.

   ಉತ್ತರ
   • ಜೂನ್ 16 2011

    ಮನುಸ್ಮೃತಿಯ ಕುರಿತಾಗಿ ನನ್ನ ಅಭಿಪ್ರಾಯವನ್ನು ನಾನಗಲೇ ಹೇಳಿ ಆಗಿದೆ.
    ಅದು ಇಂದಿಗೆ ಅಪ್ರಸ್ತುತ.
    ನಾನು ಕಲಿತಿರುವ ವೇದ ತಪ್ಪೆಂದಾದರೆ, ಆ ತಪ್ಪುಗಳನ್ನು ದಯವಿಟ್ಟು ತಿದ್ದಿ.
    ನಾನು ಹೇಳಿದ ಯಾವ ಅಂಶ ತಪ್ಪೆಂದು ಹೇಳುವ ದೊಡ್ಡ ಮನಸ್ಸು ಮಾಡಬಹುದೇ?
    “ಕುರುಬ” ಎಂಬ ಜಾತಿಯ ಹೆಸರು ವೇದದಲ್ಲಿ ಎಲ್ಲಿ ಬರುತ್ತದೆ ಎಂದು ವೇದವೆಲ್ಲವನ್ನೂ ಅರೆದು ಕುಡಿದ ತಾವೇ ನಮಗೆಲ್ಲಾ ತಿಳಿಸಿಕೊಡಿ.

    ಉತ್ತರ
    • maaysa
     ಜೂನ್ 16 2011

     ನಿಮ್ಮ ನಿಜಬಣ್ಣವನ್ನು ತೋರಿಸಿದ್ದಕ್ಕೆ ಅನೇಕಾನೇಕ ಧನ್ಯವಾದಗಳು ..

     He he.. I always show my true color.. I am not you. I honestly hate fanatic people like you.

     And all those words are befitting to you and your gang.!

     By the way, I thank you for listing them.. I like “half-kongu-maDivanike” the most.. 😀

     ಉತ್ತರ
     • Koodli
      ಜೂನ್ 26 2011

      Maaysa ravarannu shibira sthalada horagad katti hakidare , tumba prayojanakke baruttade.. nimma prayatnada virudha dwani ettidavara virudha bogaluttare

      ಉತ್ತರ
      • ರವಿ
       ಜೂನ್ 27 2011

       ಮತ್ತೆ ಮತ್ತೆ ವೈಯುಕ್ತಿಕ ಆರೋಪ/ನಿಂದೆ 😦

       ಉತ್ತರ
 8. ಇಲ್ಲಿ ಅನಿಸಿಕೆಗಳನ್ನು ಓದಿ, ಕನ್ನಡಿಗರಾಗಿ ಈ ಕಾಡು-ಹರಟೆಯ ಹಂತವನ್ನು ಎಂದಿಗೆ ನಾವು ದಾಟುತ್ತೇವೋ ಎಂದು ಒಮ್ಮೊಮ್ಮೆ ಬೇಸರವಾಗುತ್ತದೆ. ಯಾರಿಗೂ ಒಳ್ಳೆಯದಲ್ಲದ ಹರಟೆ ಬಿಟ್ಟು, ಕಾರ್ಯಕ್ರಮಕ್ಕೆ ಬರುವವರು ಅರ್ಜಿ ಕಳಿಸಿ, ಇಲ್ಲವೇ ಅಂತವರು ಗೊತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಕಳುಹಿಸಿ ಎಂದು ಕೋರಿಕೊಳ್ಳುತ್ತೇನೆ.

  ಸಂಸ್ಕೃತವನ್ನು ಬೈದು ಏನು ಪ್ರಯೋಜನ? ಅದರಿಂದ ಕನ್ನಡ ಪಡೆವುದನ್ನು ಪಡೆದಿದೆ, ಇಂದೂ ಪಡೆಯುತ್ತದೆ, ಮುಂದೂ ಪಡೆಯುತ್ತದೆ. ಇದೆಲ್ಲವೂ ಸರಿಯೇ.

  ಕೆಲವರು ತಿಳಿದಿರುವಂತೆ ಇಲ್ಲಿ ನಾವು ಸಂಸ್ಕೃತವನ್ನು ದೂರ ಮಾಡಲು ಹೊರಟಿಲ್ಲ, ಸಂಸ್ಕೃತ ಬಾರದ ೯೯% ಕನ್ನಡಿಗರು ನುಡಿಗೆ ಸಂಬಂದಿಸಿದ ಈ ವಿಷಯಗಳಲ್ಲಿ (ಮತ್ತು ಆ ಮೂಲಕ ಬಾಳೆಂಬ ಆಟದಲ್ಲಿ ) ‘ಮಾಡುಗ’ರಾಗಲು ಇರುವ ಅಡೆತಡೆಗಳನ್ನೂ ದೂರ ಮಾಡುವ ನಿಟ್ಟಿನಲ್ಲಿ ಒಂದು ಚಿಕ್ಕ ಹೆಜ್ಜೆಯನ್ನು ಇಡುತ್ತಿದ್ದೇವೆ, ಅಷ್ಟೇ. ಈ ಚಿಕ್ಕ ವಿಷಯ ಕೆಲವರಿಗೆ ಏತಕ್ಕೆ ಅರ್ತವಾಗುವುದಿಲ್ಲ ಎಂದು ಸೋಜಿಗ! ಈ ಕೆಲಸದಲ್ಲಿ ಸಂಸ್ಕ್ರುತವನ್ನಾಗಲಿ ಅದನ್ನು ಬಲ್ಲವರನ್ನಾಗಲಿ ಬೈದು ಏನು ಪ್ರಯೋಜನ? ಅದರ ಬದಲು ನಿಜವಾದ ಕೆಲಸಕ್ಕೆ ಕೈ ಹಾಕುವುದು ವಾಸಿ ಎಂದು ಕೂಡ ಕೆಲವರಿಗೆ ಅರ್ತವಾಗುವುದಿಲ್ಲವಲ್ಲ ಎಂದು ಕೂಡ ಸೋಜಿಗ!

  ಉತ್ತರ
  • maaysa
   ಜೂನ್ 16 2011

   First apologies for being a part of that chit-chat and not writing in Kannada..

   Though the work is very appreciable and of high importance to Kannada… I see serious flaws in the way this article is written..

   1. Word usage is very inconsistent and haphazard… Some pure and newly constructed words such as ಹಮ್ಮುಗೆ (ಯೋಜನೆ) etc are used and also some Sanskrit words such as “ವಿದ್ಯಾರ್ಹತೆ ಮತ್ತು ಆಯ್ಕೆಯ ಪ್ರಕ್ರಿಯೆ”.. what is this mess?
   2. If this training is gonna result in a bizarre-ish Kannada such as the one used in this article, then it is making things worse.

   Either completely remove those alien Sanskrit words altogether or you them consistently.. To elaborate, if ವಿದ್ಯಾರ್ಹತೆ can be used directly without a pure Kannada words, then what’s wrong with ಯೋಜನೆ? and v.v/s

   ಉತ್ತರ
  • ರವಿಕುಮಾರ ಜಿ ಬಿ
   ಜೂನ್ 16 2011

   ಕಿರಣ ಬಾಟ್ನಿ (ಬಾ. ರಾ. ಕಿರಣ) ಯವರೇ,

   ಸರಿಯಾಗಿ ಹೇಳಿದಿರಿ. ಇಲ್ಲಿನ ಕೆಲವು ಗೆಳೆಯರು ಸಂಸ್ಕೃತ ವನ್ನ ಬಯ್ಯುವುದು , ಜಾತಿ ವಿಷಯ ತರೋದು ಇಂತಹದುದರಲ್ಲಿ ನಿಸ್ಸೀಮರು !!!! ಕಾಡು ಹರಟೆ ಅಂದರೆ ಅವರಿಗೆ ಪಂಚ ಪ್ರಾಣ !!
   ನೀವು ಈಗ ಹೇಳಿದ್ದನ್ನ ನಾನು ಬಹಳ ಹಿಂದೆಯೇ ಒಮ್ಮೆ ಹೇಳಿದ್ದೆ ! ಈಗ ನಾವು ಸುಧಾರಿಸ ಬೇಕಾದರೆ ಕಾಡು ಹರಟೆ ಮತ್ತು ವ್ಯಂಗ್ಯ ಬಿಟ್ಟು , ಉತ್ತಮ ಮತ್ತು ಆರೋಗ್ಯಕರ ಚರ್ಚೆ ಮಾಡಬೇಕಾಗಿದೆ ! ಹಾಗೆಂದು ಡಾ| ಶಂಕರ ಭಟ್ಟರಂತಹವರ ಸಂಶೋದನೆಗಳಾಗಲಿ,ಕಾರ್ಯಗಳಾಗಲಿ ವ್ಯರ್ಥವಾಗಲು ಆಸ್ಪದ ಕೊಡಬಾರದು.( ಅವರ ಬೃಹತ್ ಕಾರ್ಯಗಳು ಯಕ್ಕಶ್ಚಿತ್ ಜನರಿಂದ ಹಾಳಾಗುತ್ತದೆ ಅಥವಾ ವ್ಯರ್ಥವಾಗುತ್ತದೆ ಅನ್ನೋದು ಕೂಡ ಅಸಾದ್ಯವೇ ಸರಿ.ಆದರೂ ಒಮ್ಮೆಗೆ ಹಿನ್ನಡೆ ಅನ್ನಿಸಿದರೂ ಅನ್ನಿಸಬಹುದು ). ಮನುಷ್ಯರೇ ಹಾಗೆ ,ಒಬ್ಬರು ಮೇಲೆತ್ತಲು ಹೊರಟರೆ ನೂರಾರು ಜನ ಕೆಳಗೆ ನಿಂತು ಕೆಳಕ್ಕೆಳೆಯುತ್ತಿರುತ್ತಾರೆ. ತಾವೂ ಮೇಲೆ ಬರೋಲ್ಲ ,ಬೇರೆಯವರನ್ನೂ ಬಿಡೋಲ್ಲ , ಬೇರೆಯವರನ್ನು ಮೇಲೆತ್ತಲು ಹೊರಟವರನ್ನೂ ಬಿಡೋಲ್ಲ !!!!
   ಜಗಮೊ೦ಡರನ್ನ ಸುದಾರಿಸೋದು ಬಹಳ ಕಷ್ಟ !!!! ಮೊ೦ಡುತನಕ್ಕೆ ಮತ್ತು ದುರಹಂಕಾರಕ್ಕೆ ಉದಾಸೀನವೇ ಮದ್ದು ಅನ್ನಿಸುತ್ತಿದೆ !! ನಾವು ತಿದ್ದಲು ಹೊರಟರೆ ಇನ್ನೂ ಹೆಚ್ಚೆಚ್ಚು ಮೊಂಡ ರಾಗುತ್ತರೆಯೇ ವಿನಃ ಸರಿಯಾಗೊಲ್ಲ!!! ಅವರಿಗೆ ಕೆಸರಲಿರೋದು ಮತ್ತು ಬೇರೆಯವರ ಮೇಲೆ ಕೆಸರೆರೆಚೋದು ಅಂದರೆ ಇಷ್ಟ !! ನಾವು ನೀವು ಏನು ಮಾಡೋಕಾಗುತ್ತೆ?
   ಹಿಂದೆ ಕಥೆಯಲ್ಲಿ ಕೇಳಿದಂತೆ ” ದ್ವಾಪರಯುಗ ಕಳೆದು ಕಲಿಯುಗ ಶುರು ಆಗಬೇಕಾದರೆ ಕಲಿಯಲ್ಲಿ ಹೇಳಿದರಂತೆ ನೀನು ಕೆಟ್ಟದ್ದನ್ನು ಮಾಡುವವರನ್ನು ,ಸಲಹುವವರನ್ನು ಮತ್ತು ಪ್ರಚೋದಿಸುವವರನ್ನು ಶಿಕ್ಷಿಸಿ ಒಳ್ಳೆಯವರನ್ನು ಕಾಪಾಡಬೇಕು ಎಂದು ,ಅದಕ್ಕೆ ಕಲಿ ಹೇಳಿದನಂತೆ ನೀವು ಹೇಳಿದ್ದೆಲ್ಲ ಸರಿ ಆದರೆ ನಾನೇನು ಮಾಡಲಿ ? ನನಗೆ ಕೆಟ್ಟವರೆಂದರೆ ಪಂಚಪ್ರಾಣ ನಾನ್ಹೇಗೆ ಅವರನ್ನ ಶಿಕ್ಷಿಸಲಿ ಅಂತ !!!!!” ಹಾಗಾಗಿ ಅದು ಅವರಿವರ ತಪ್ಪಲ್ಲ !! ಅದು ಅವರವರು ಬೆಳೆದು ಬಂದ ಹಾದಿ,ಸಂಸ್ಕೃತಿ ಮತ್ತು ಹುಟ್ಟುಗುಣ ,ಅದನ್ನವರು ಬಿಟ್ಟಾರೆಯೇ?

   ಇನ್ನಾದರೂ ಎಲ್ಲರೂ ಕಾಡು ಹರಟೆ ಬಿಟ್ಟು ಆರೋಗ್ಯಕರ ಚರ್ಚೆ ಮಾಡೋಣ ಬನ್ನಿ. ಯಾಕೆಂದರೆ ಇಲ್ಲಿ ಕಾಡು ಹರಟೆ ಮಾಡುತ್ತಿರುವವರೆನು ದಡ್ಡರಲ್ಲ, ಆದರೆ ನರಿಗಳ ಜೊತೆ ಬೆಳೆದಿರುವ ಸಿಂಹಕ್ಕೆ ತಾನು ಸಿಂಹ ಎನ್ನುವುದು ಮರೆತು ಹೋಗಿದೆ ಅಸ್ಟೇ !!!

   ಉತ್ತರ
   • maaysa
    ಜೂನ್ 16 2011

    “ಇನ್ನಾದರೂ ಎಲ್ಲರೂ ಕಾಡು ಹರಟೆ ಬಿಟ್ಟು ಆರೋಗ್ಯಕರ ಚರ್ಚೆ ಮಾಡೋಣ ಬನ್ನಿ. ಯಾಕೆಂದರೆ ಇಲ್ಲಿ ಕಾಡು ಹರಟೆ ಮಾಡುತ್ತಿರುವವರೆನು ದಡ್ಡರಲ್ಲ, ಆದರೆ ನರಿಗಳ ಜೊತೆ ಬೆಳೆದಿರುವ ಸಿಂಹಕ್ಕೆ ತಾನು ಸಿಂಹ ಎನ್ನುವುದು ಮರೆತು ಹೋಗಿದೆ ಅಸ್ಟೇ !!!”

    mitra bheda? 🙂

    Mr. Kiran Baatni, for the answer..

    check there http://kannada.webdunia.com/miscellaneous/literature/articles/1106/16/1110616024_1.htm

    Somebody has written

    [-] kamal
    ಬಟ್ ಅಥವಾ ಭಟ್ ?
    Reply Report Abuse
    16-06-11 (03:39 PM)
    [-] pkbys
    ಅದು ಅವರಪ್ಪ ಇಟ್ಟಾಗ ಭಟ್ ಆಗಿತ್ತು… ಆದರೆ ಅವರಿಗೆ ತಮಿಳರ ಥರಾ ಅಚ್ಚ ಕನ್ನಡದ ವ್ಯಾಮೋಹ ಜಾಸ್ತಿ. ಸಂಸ್ಕೃತ ಪದಗಳು ಬೇಡ, ಕನ್ನಡಕ್ಕೆ ಮಹಾಪ್ರಾಣಾಕ್ಷರಗಳೇ ಬೇಡ. ತಮಿಳಿನಂತೆ ಕನ್ನದಕ್ಕೆ ಕೆಲವೇ ಅಕ್ಷರಗಳು ಸಾಕು, ಮುಂತಾದ ಹುಚ್ಚು ಜಾಸ್ತಿಯಾಗಿ, ಭಟ್ ಅನ್ನು ಬಟ್ ಮಾಡಿಕೊಂಡಿದ್ದಾರೆ.
    Reply
    Report Abuse

    16-06-11 (04:36 PM)
    kamal
    ಧನ್ಯವಾದಗಳು pkbys ಅವರೆ. ದಯವಿಟ್ಟು ನೀವು ಬರೆಯುತ್ತಿರಿ.. ವೆಬ್ ದುನಿಯ ಬಡವಾಗಿತ್ತು ತಾವಿಲ್ಲದೆ.
    Reply
    Report Abuse

    ಉತ್ತರ
   • maaysa
    ಜೂನ್ 16 2011

    ಹಿಂದೆ ಕಥೆಯಲ್ಲಿ ಕೇಳಿದಂತೆ ” ದ್ವಾಪರಯುಗ ಕಳೆದು ಕಲಿಯುಗ ಶುರು ಆಗಬೇಕಾದರೆ ಕಲಿಯಲ್ಲಿ ಹೇಳಿದರಂತೆ ನೀನು ಕೆಟ್ಟದ್ದನ್ನು ಮಾಡುವವರನ್ನು ,ಸಲಹುವವರನ್ನು ಮತ್ತು ಪ್ರಚೋದಿಸುವವರನ್ನು ಶಿಕ್ಷಿಸಿ ಒಳ್ಳೆಯವರನ್ನು ಕಾಪಾಡಬೇಕು ಎಂದು ,ಅದಕ್ಕೆ ಕಲಿ ಹೇಳಿದನಂತೆ ನೀವು ಹೇಳಿದ್ದೆಲ್ಲ ಸರಿ ಆದರೆ ನಾನೇನು ಮಾಡಲಿ ? ನನಗೆ ಕೆಟ್ಟವರೆಂದರೆ ಪಂಚಪ್ರಾಣ ನಾನ್ಹೇಗೆ ಅವರನ್ನ ಶಿಕ್ಷಿಸಲಿ ಅಂತ !!!!!” ಹಾಗಾಗಿ ಅದು ಅವರಿವರ ತಪ್ಪಲ್ಲ !! ಅದು ಅವರವರು ಬೆಳೆದು ಬಂದ ಹಾದಿ,ಸಂಸ್ಕೃತಿ ಮತ್ತು ಹುಟ್ಟುಗುಣ ,ಅದನ್ನವರು ಬಿಟ್ಟಾರೆಯೇ?

    Yes.. We are born low and cheap. I have already mentioned. What else you have got other than this cock and bull story? 🙂

    You do believe that people are low from their birth.

    ಉತ್ತರ
 9. ಜೂನ್ 17 2011

  ಸಂಸ್ಕ್ರುತವಾಗಲಿ ಮತ್ತೊಂದು ವಸ್ತುವಾಗಲಿ ಯಾರಿಗೂ ’ಏಲಿಯನ್’ ಅಲ್ಲ, ಮನುಶ್ಯನಿಗೆ ’ಏಲಿಯನ್’ ಆಗಿರುವುದು ತನ್ನ ಇಲ್ಲವೇ ಇತರರ ಮನುಶ್ಯತನವನ್ನು ಅಲ್ಲಗಳೆಯುವ ಬುದ್ದಿಯೊಂದೇ. ಇದೊಂದಿದ್ದರೆ ಇನ್ನೊಬ್ಬರನ್ನು ಕೀಳಾಗಿ ಕಾಣಲು, ಅವರನ್ನು ತುಳಿದುಹಾಕಲು ಯಾವ ವಸ್ತುವನ್ನಾದರೂ ಬಳಸಿಕೊಳ್ಳಬಹುದು – ಅಚ್ಚಗನ್ನಡವನ್ನೂ ಸೇರಿದಂತೆ. ಈ ಬುದ್ದಿಗೆ ಅಹಂಕಾರ ಬೇರು. ಇದರಿಂದ ಯಾರಿಗೂ ಒಳ್ಳೆಯದಲ್ಲ. ಆದುದರಿಂದಲೇ ಹಿಂದಿನಿಂದಲೂ ಅಹಂಕಾರವನ್ನು ಬೈಯುವುದು, ಅದನ್ನು ಬುಡಸಮೇತವಾಗಿ ತೆಗೆದುಹಾಕಲು ಏರ್ಪಾಡುಗಳನ್ನು ಮಾಡಿರುವುದು.

  ಕೊನೆಯ ಬಾರಿಗೆ ಇದನ್ನು ಹೇಳಿ ನಮಸ್ಕಾರ ಹೇಳುತ್ತೇನೆ: ಸಂಸ್ಕ್ರುತದ ಪದಗಳನ್ನು ಕನ್ನಡದಿಂದ ತೆಗೆದುಹಾಕುವುದು ನಮ್ಮದಾಗಲಿ ಶಂಕರಬಟ್ಟರದಾಗಲಿ ಗುರಿಯಲ್ಲ. ಹಾಗೆ ತೆಗೆದುಹಾಕುವ ಅಳವು ಯಾರಿಗೂ ಇಲ್ಲ. ಆದರೆ ಸಂಸ್ಕ್ರುತದ ಪದಗಳನ್ನು ಕಟ್ಟಲಾರದೆ ತಮ್ಮ ಸುತ್ತಮುತ್ತಲ ಜಗತ್ತನ್ನು ಅರಿತುಕೊಳ್ಳುವಲ್ಲಿ (ಮತ್ತು ಆ ಮೂಲಕ ಲೌಕಿಕ ಏಳಿಗೆಯಲ್ಲಿ) ಹಿಂದೆಬಿದ್ದಿರುವ ೯೯% ಕನ್ನಡಿಗರಿಗೆ (ನನ್ನನ್ನೂ ಸೇರಿದಂತೆ) ಸಂಸ್ಕ್ರುತದ್ದಲ್ಲದೆ ಹೊಸ ಪದಗಳನ್ನು ಟಂಕಿಸುವ ಪರಂಪರೆಯೇ ಇಲ್ಲವಾಗಿರುವುದು ಹಲವು ಕಾರಣಗಳಲ್ಲಿ ಒಂದು. ಆದುದರಿಂದ ಕನ್ನಡದ ಪದಕಟ್ಟಣೆ, ಸೊಲ್ಲರಿಮೆ ಮತ್ತು ನುಡಿಯರಿಮೆಗಳನ್ನು ಅರಸಿ ಹೊರಟಿದ್ದೇವೆ. ಇದರಿಂದ ೯೯% ಕನ್ನಡಿಗರ ’ಮಾಡುಗತನ’ ಬರವಣಿಗೆಯ (ಮತ್ತು ಅದರ ಮೂಲಕ ಬದುಕಿನ ಬೇರೆಬೇರೆ ಅರಿಮೆಗಳ) ವಲಯದಲ್ಲಿ ಹುಟ್ಟುತ್ತದೆ ಎಂಬ ಗಟ್ಟಿನಂಬಿಕೆ ನಮಗಿದೆ.

  ಉತ್ತರ
  • Narendra
   ಜೂನ್ 17 2011

   > ಆದರೆ ಸಂಸ್ಕ್ರುತದ ಪದಗಳನ್ನು ಕಟ್ಟಲಾರದೆ ತಮ್ಮ ಸುತ್ತಮುತ್ತಲ ಜಗತ್ತನ್ನು ಅರಿತುಕೊಳ್ಳುವಲ್ಲಿ (ಮತ್ತು ಆ ಮೂಲಕ ಲೌಕಿಕ ಏಳಿಗೆಯಲ್ಲಿ)
   > ಹಿಂದೆಬಿದ್ದಿರುವ ೯೯% ಕನ್ನಡಿಗರಿಗೆ (ನನ್ನನ್ನೂ ಸೇರಿದಂತೆ) ಸಂಸ್ಕ್ರುತದ್ದಲ್ಲದೆ ಹೊಸ ಪದಗಳನ್ನು ಟಂಕಿಸುವ ಪರಂಪರೆಯೇ ಇಲ್ಲವಾಗಿರುವುದು
   > ಹಲವು ಕಾರಣಗಳಲ್ಲಿ ಒಂದು.
   ಒಪ್ಪುವಂತಹ ಮಾತು.

   > ಆದುದರಿಂದ ಕನ್ನಡದ ಪದಕಟ್ಟಣೆ, ಸೊಲ್ಲರಿಮೆ ಮತ್ತು ನುಡಿಯರಿಮೆಗಳನ್ನು ಅರಸಿ ಹೊರಟಿದ್ದೇವೆ. ಇದರಿಂದ ೯೯% ಕನ್ನಡಿಗರ ’ಮಾಡುಗತನ’
   > ಬರವಣಿಗೆಯ (ಮತ್ತು ಅದರ ಮೂಲಕ ಬದುಕಿನ ಬೇರೆಬೇರೆ ಅರಿಮೆಗಳ) ವಲಯದಲ್ಲಿ ಹುಟ್ಟುತ್ತದೆ ಎಂಬ ಗಟ್ಟಿನಂಬಿಕೆ ನಮಗಿದೆ.
   ಕಿರಣ್, ನಿಮ್ಮ ಈ ಸಕಾರಾತ್ಮಕ ಪ್ರಯತ್ನಕ್ಕೆ ನಮ್ಮೆಲ್ಲರ ಬೆಂಬಲ ಸದಾ ನಿಮಗಿರುತ್ತದೆ.

   ಉತ್ತರ
   • Priyank
    ಜೂನ್ 17 2011

    ನರೇಂದ್ರ ಕುಮಾರ್ ಅವರೇ,
    ಬೆಂಬಲ ತೋರಿಸಿದ್ದಕ್ಕೆ ನನ್ನಿ.

    ಉತ್ತರ
    • ಜೂನ್ 17 2011

     ಕನ್ನಡ ನಮ್ಮ ತಾಯಿನುಡಿ. ಅದರ ಕೆಲಸವನ್ನು ಬೆಂಬಲಿಸುವುದು ನಾವು ಮಾಡಬಹುದಾದ ಕನಿಷ್ಠತಮ ಕೆಲಸ – ಇದು ನಮ್ಮದೇ ಕೆಲಸ.
     ಹೀಗಾಗಿ, ಅದರಲ್ಲಿ ಯಾವ ಹೆಚ್ಚುಗಾರಿಕೆಯನ್ನೂ ಕಾಣಬಾರದು; ಧನ್ಯವಾದ ತೆಗೆದುಕೊಳ್ಳುವ, ಧನ್ಯವಾದ ಕೊಡುವ ಅಗತ್ಯವೂ ಇಲ್ಲ.

     ಆದರೆ, ಪಾಕಿಸ್ತಾನದ ಧ್ವೇಷವೇ ಭಾರತದ ಪ್ರೀತಿ ಎಂದು ಕೆಲವರು ತಿಳಿದಿರುವಂತೆ,
     ಸಂಸ್ಕೃತ ಅಥವಾ ಹಿಂದಿ ಅಥವಾ ತಮಿಳಿನ ಧ್ವೇಷವೇ ಕನ್ನಡದ ಪ್ರೀತಿ ಎಂದು ಕೆಲವರು ತಿಳಿದಿರುವರು.
     ಆ ರೀತಿಯ ಸದ್ದುಗಳು ಹೊರ ಬಂದಾಗ, ಅನಿವಾರ್ಯವಾಗಿ ಖಂಡಿಸಬೇಕಾಗುತ್ತದೆ; ಹೀಗಾಗಿಯೇ ಇಲ್ಲಿ ಕೆಲವು ಅನಾವಶ್ಯಕ ಚರ್ಚೆಗಳಿಗೆ ಆಸ್ಪದವಾಯಿತು.
     ಇದು ಬಹಳ ನೋವಿನ ಸಂಗತಿ – ಭಾರತದ ಎಲ್ಲ ಭಾಷೆಗಳೂ ನಮ್ಮ ಭಾಷೆಗಳೇ; ಭಾರತದ ಪ್ರತಿಯೊಂದು ರಾಜ್ಯವೂ ನಮ್ಮದೇ.
     ಇಡೀ ಭಾರತ ಒಂದು ರಾಜ್ಯ. ನಾವಿಂದು ಕಾಣುವ ರಾಜ್ಯಗಳು ಆಡಳಿತದ ಅನುಕೂಲಕ್ಕಾಗಿ ಮಾಡಿಕೊಂಡಿರುವ ವಿಭಾಗಗಳಷ್ಟೇ.
     ಹೀಗಾಗಿ, ಭಾರತದ ಯಾವ ಭಾಗಕ್ಕೆ ತೊಂದರೆಯಾದರೂ ನಮಗೆ ತೊಂದರೆಯಾದಂತೆಯೇ.
     ಕನ್ನಡ ಅಥವಾ ಕರ್ನಾಟಕವಿಲ್ಲದೆ ಭಾರತವಿಲ್ಲ; ಹಾಗೆಯೇ ಭಾರತವಿಲ್ಲದೆ ಕರ್ನಾಟಕ ಹಾಗೂ ಕನ್ನಡಗಳಿಗೂ ಉಳಿಗಾಲವಿಲ್ಲ.
     ಇದೇ ಇಲ್ಲಿನ ಎಲ್ಲ ಭಾಷೆ-ರಾಜ್ಯಗಳಿಗೂ ಅನ್ವಯವಾಗುತ್ತದೆ – ಸಂಸ್ಕೃತವನ್ನೂ ಸೇರಿದಂತೆ.

     ಉತ್ತರ
     • Priyank
      ಜೂನ್ 17 2011

      ನರೇಂದ್ರ ಕುಮಾರ್ ಅವರೇ,

      ನಿಮ್ಮ ಅಬಿಪ್ರಾಯ ಹೇಳಿದ್ದಕ್ಕೆ ನನ್ನಿ.
      ಕಿರಣ್ ಅವರು ಮೊದಲೇ ಹೇಳಿರುವಂತೆ, ಯಾವುದೇ ಬಾಷೆಯನ್ನು ದ್ವೇಷಿಸಿ ಕನ್ನಡ ಕಟ್ಟಲು ಹೊರಟಿಲ್ಲ.
      ನಿಮಗೆ ಈ ಅರಿವು ಈಗಾಗಲೇ ಮೂಡಿದೆ ಎಂದು ತಿಳಿದಿದ್ದೇನೆ.

      ಕನ್ನಡದ ಪದಕಟ್ಟಣೆ, ನುಡಿಯರಿಮೆ ಮತ್ತು ಸೊಲ್ಲರಿಮೆ ‘ಅರಸಿ’ ಹೊರಟಿರುವ ಕೆಲಸ ಇದಾಗಿದೆ.
      ಈ ಮೂಲಕ, ನಮ್ಮ ಕನ್ನಡ ಜನರ ಮುಂದಿನ ದಿನಗಳು ಹೆಚ್ಚು ಬೆಳಗುತ್ತವೆ ಎಂಬ ಗಟ್ಟಿ ನಂಬಿಕೆ ನಮಗಿದೆ.

      ಇಂತದೇ ಕೆಲಸ, ಎಲ್ಲೆಡೆಯೂ ನಡೆಯಲಿ, ಆ ಮೂಲಕ ಎಲ್ಲ ನುಡಿ ಸಮುದಾಯಕ್ಕೂ ಒಳಿತಾಗಲಿ, ಎಂಬುದು ನನ್ನ ಹಾರೈಕೆ.
      ತಮಿಳಾಗಲೀ, ಹಿಂದಿಯಾಗಲೀ, ತೆಲುಗಾಗಲೀ, ತುಳುವಾಗಲೀ, ಆಯಾ ಬಾಷೆಗಳು ಬೆಳೆದು, ಆಯಾ ಬಾಶಿಕರ ಬಾಳು ಬೆಳಗಲಿ ಎಂಬುದು ನನ್ನ ನಿಲುವಾಗಿದೆ.
      ಬಾರತವೊಂದೇ ಅಲ್ಲದೇ, ಬೂಮಿ ಮೇಲಿರೋ ಎಲ್ಲಾ ನುಡಿ ಸಮುದಾಯಗಳೂ, ಏಳಿಗೆ ಹೊಂದಲಿ ಎಂಬ ಆಶಯವನ್ನೇ ಹೊಂದಿರುವೆನು.

      ರಾಜ್ಯಗಳು ಆಡಳಿತದ ಅನುಕೂಲಕ್ಕೆ ಮಾಡಿಕೊಂಡಿರುವುದಷ್ಟೇ ಅಲ್ಲ ಎಂಬುದು ನಿಮಗೆ ತಿಳಿದಿದೆ ಎಂದುಕೊಂಡಿದ್ದೇನೆ.
      ಈ ನೆಲಬಾಗದಲ್ಲಿರೋ ಹಲವು ನುಡಿಕುಟುಂಬಗಳು, ತಮ್ಮ ತಮ್ಮನ್ನು ತಾವು ಆಳಿಕೊಳ್ಳಲಿ ಎಂಬಂತೆ ಕಟ್ಟಲಾಗಿರುವ ವ್ಯವಸ್ತೆ ಇದು.

      ಉತ್ತರ
      • ಜೂನ್ 17 2011

       > ರಾಜ್ಯಗಳು ಆಡಳಿತದ ಅನುಕೂಲಕ್ಕೆ ಮಾಡಿಕೊಂಡಿರುವುದಷ್ಟೇ ಅಲ್ಲ ಎಂಬುದು ನಿಮಗೆ ತಿಳಿದಿದೆ
       > ಎಂದುಕೊಂಡಿದ್ದೇನೆ.
       > ಈ ನೆಲಬಾಗದಲ್ಲಿರೋ ಹಲವು ನುಡಿಕುಟುಂಬಗಳು, ತಮ್ಮ ತಮ್ಮನ್ನು ತಾವು ಆಳಿಕೊಳ್ಳಲಿ ಎಂಬಂತೆ
       > ಕಟ್ಟಲಾಗಿರುವ ವ್ಯವಸ್ತೆ ಇದು.
       ರಾಜ್ಯಗಳ ವಿಂಗಡನೆ ಕುರಿತಾಗಿ ಡಾ||ಬಿ.ಆರ್.ಅಂಬೇಡ್ಕರ್ ಈ ರೀತಿ ಹೇಳಿರುವರು:
       “Though India was to be a federation, the federation was not the result of an agreement by the States to join in a federation, and that the federation not being the result of an agreement, no State has the right to secede from it. The federation is a Union because it is indestructible.

       “Though the country and the people may be divided into different States for convenience of administration, the country is one integral whole, its people a single people living under a single imperium derived from a single source.

       “The Americans had to wage a civil war to establish that the states had no right of secession, and that their federation was indestructible. The Drafting Committee thought that it was better to make it clear at the outset rather than to leave it to speculation or to dispute.”

       ಎರಡನೇ ಪ್ಯಾರಾದಲ್ಲಿ ಇರುವ “divided into different States for convenience of administration” ವ್ಯಾಕ್ಯವು,
       ಭಾಷಾವಾರು ಪ್ರಾಂತ ಮಾಡಿದವರ ಉದ್ದೇಶವನ್ನು ಸ್ಪಷ್ಟ ಶಬ್ದಗಳಲ್ಲಿ ತಿಳಿಸುತ್ತದೆ.

       ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯವನ್ನೋ ಅಥವಾ ಇದಕ್ಕಿಂತಲೂ ಬೇರೆಯಾದ ಕಾರಣಗಳಿವೆ ಎಂಬುದನ್ನು
       ಡಾ||ಬಿ.ಆರ್.ಅಂಬೇಡ್ಕರ್ ಅವರಾಗಲೀ ಅಥವಾ ಸಂವಿಧಾನ ಕರಡು ಸಮಿತಿಯ ಇನ್ನಿತರ ಸದಸ್ಯರಾಗಲೀ, ಅಥವಾ
       ಅಂದಿನ ಪ್ರಧಾನಿ ಜವಹರಲಾಲ್ ನೆಹರೂ ಅವರಾಗಲೀ, ಅಥವಾ ಅಂದಿನ ರಾಷ್ಟ್ರಾಧ್ಯಕ್ಷರಾಗಿದ್ದ ಬಾಬು ರಾಜೇಂದ್ರ ಪ್ರಸಾದ್ ಆಗಲೀ
       ತಿಳಿಸಿದ್ದರೆ, ದಯವಿಟ್ಟು ತಿಳಿಸಿ.

       ಉತ್ತರ
       • Priyank
        ಜೂನ್ 17 2011

        ನರೇಂದ್ರ ಅವರೇ,

        ಅಂಬೇಡ್ಕರ್ ಅವರ ಮಾತುಗಳನ್ನ ನೀವಿಲ್ಲಿ ಹಾಕಿ, ರಾಜ್ಯಗಳನ್ನ ಮಾಡಿಕೊಂಡಿರೋದು ಆಡಳಿತದ ಅನುಕೂಲಕ್ಕೆ ಮಾತ್ರ ಅಂತ ಹೇಳಿದೀರ.
        ನಾನು ಹೇಳೋದು, ಇವತ್ತಿನ ರಾಜ್ಯಗಳ ಇರುವಿಕೆಗೆ ‘ಅದೊಂದೇ’ ಕಾರಣವಲ್ಲ. ಜನರಿಗೆ ತಮ್ಮನ್ನು ತಾವು ಆಳಿಕೊಳ್ಳುವ ಹಕ್ಕಿದೆ.
        ಒಂದು ನುಡಿಯನ್ನಾಡುವ ಜನರಿಗೆ ತಮ್ಮದೇ ಆದ ಆಡಳಿತಕ್ಕೆ ಸಂಬಂದಿಸಿದ ಹಕ್ಕುಗಳಿವೆ. ಅವನ್ನೆಲ್ಲ ಗೌರವಿಸುವ ಏರ್ಪಾಡು ‘ಡೆಮಾಕ್ರಸಿ’ ಎಂದು ಕರೆಸಿಕೊಳ್ಳುತ್ತದೆ.
        ಈ ಬಗ್ಗೆ ಅಂಬೇಡ್ಕರ್ ಅವರಿಗೂ ಚೆನ್ನಾಗಿ ಗೊತ್ತಿತ್ತು ಎಂಬುದು, ಅವರ ಆಲೋಚನೆಗಳ ಬಗ್ಗೆ ಹೆಚ್ಚು ತಿಳಿಯುತ್ತಾ ಹೋದಂತೆ ಕಂಡು ಬರುತ್ತೆ.
        ಅಂತದೇ ಒಂದು ಏರ್ಪಾಡು ನಮ್ಮಲ್ಲೂ ಕಂಡು ಬರುತ್ತದೆ, ಅದಕ್ಕಾಗಿ ರಾಜ್ಯಗಳನ್ನು ಮಾಡಲಾಗಿದೆ. ಮತ್ತು ರಾಜ್ಯಗಳಿಗೆ ಕೆಲವು ಅದಿಕಾರಗಳನ್ನೂ ಕೊಡಮಾಡಲಾಗಿದೆ.
        ಇರಲಿ, ನಿಮ್ಮ ಅರಿವಿನ ಬಗ್ಗೆ ನನಗೆ ಗೌರವವಿದೆ. ಅರಿವನ್ನು ಬೆಳೆಸಿಕೊಳ್ಳುವ ನಿಮ್ಮ ಕೆಲಸ ಮುಂದುವರೆಯಲಿ.

        ರಾಜ್ಯಗಳ ಬಗೆಗಿನ ಚರ್ಚೆಯನ್ನು, ಈ ಪೋಸ್ಟಿನಲ್ಲಿ ಮುಂದುವರೆಸೋದು ಸರಿ ಕಾಣೋಲ್ಲ.
        ಪೋಸ್ಟಿಗೂ, ಚರ್ಚೆಗೂ ಸಂಬಂದವಿಲ್ಲದ ಹಾಗಾಗೋದು ಬೇಡ ಎಂಬ ಕಾರಣಕ್ಕೆ.
        ನಿಮಗೂ, ಈ ಮಾತು ಒಪ್ಪಿಗೆಯಾಗುತ್ತೆ ಎಂದು ನಂಬಿದ್ದೇನೆ.

        ಉತ್ತರ
       • maaysa
        ಜೂನ್ 17 2011

        “divided into different States for convenience of administration”

        Exactly.. >Good point Ssnkumar…

        But we need to ponder “convenience of administration” for who? Because many argue that breaking India into 30 states will also leads to convenience of administration..!! Sedition ye!

        ಉತ್ತರ
        • ಜೂನ್ 17 2011

         > ರಾಜ್ಯಗಳ ಬಗೆಗಿನ ಚರ್ಚೆಯನ್ನು, ಈ ಪೋಸ್ಟಿನಲ್ಲಿ ಮುಂದುವರೆಸೋದು ಸರಿ ಕಾಣೋಲ್ಲ.
         > ಪೋಸ್ಟಿಗೂ, ಚರ್ಚೆಗೂ ಸಂಬಂದವಿಲ್ಲದ ಹಾಗಾಗೋದು ಬೇಡ ಎಂಬ ಕಾರಣಕ್ಕೆ.
         > ನಿಮಗೂ, ಈ ಮಾತು ಒಪ್ಪಿಗೆಯಾಗುತ್ತೆ ಎಂದು ನಂಬಿದ್ದೇನೆ.
         ನನಗೂ ಇಲ್ಲಿನ ಚರ್ಚೆಯನ್ನು ಹಳಿ ತಪ್ಪಿಸಲು ಇಷ್ಟವಿಲ್ಲ.
         ನಮ್ಮ ಸಂವಿಧಾನದ ಕರ್ತೃ ಮತ್ತು ಭಾಷಾವಾರು ಪ್ರಾಂತಗಳ ಕರ್ತೃ ಡಾ|| ಅಂಬೇಡ್ಕರ್.
         ಅವರು ತಾವು ತೆಗೆದುಕೊಂಡ ನಿರ್ಧಾರಗಳ ಹಿಂದಿರುವ ಚಿಂತನೆಗಳನ್ನು ಅಂದಿನ Constituent Assembly ಯಲ್ಲಿ ಮಾಡಿದ ಭಾಷಣಗಳಲ್ಲಿ ತಿಳಿಸಿದ್ದಾರೆ.
         ಅಲ್ಲಿಗೇ ನಿಲ್ಲದೆ, ಅವುಗಳನ್ನು ಪುಸ್ತಕ ರೂಪದಲ್ಲಿಯೂ ಪ್ರಕಟಿಸಿದ್ದಾರೆ. ಎಲ್ಲವೂ ಅಂತರ್ಜಾಲದಲ್ಲಿ ಉಚಿತವಾಗಿ ಲಭ್ಯವಿದೆ.
         ಆಸಕ್ತಿ ಇದ್ದವರು ಅಭ್ಯಸಿಸಬಹುದು.

         http://www.ambedkar.org/ambcd/05B.%20Thoughts%20on%20Linguistic%20States%20PART%20II.htm
         http://www.ambedkar.org/ambcd/05A.%20Thoughts%20on%20Linguistic%20States%20Part%20I.htm

         ಇಲ್ಲಿಗೆ ಈ ಸಂವಾದಕ್ಕೆ ಮಂಗಳ ಹಾಡೋಣ.

         ಉತ್ತರ
  • maaysa
   ಜೂನ್ 17 2011

   “ಸಂಸ್ಕ್ರುತವಾಗಲಿ ಮತ್ತೊಂದು ವಸ್ತುವಾಗಲಿ ಯಾರಿಗೂ ’ಏಲಿಯನ್’ ಅಲ್ಲ, ಮನುಶ್ಯನಿಗೆ ’ಏಲಿಯನ್’ ಆಗಿರುವುದು ತನ್ನ ಇಲ್ಲವೇ ಇತರರ ಮನುಶ್ಯತನವನ್ನು ಅಲ್ಲಗಳೆಯುವ ಬುದ್ದಿಯೊಂದೇ.”

   Just ‘coz you say so…? Sanskrit is always alien to us and it will be.
   You need not have to blabber about all these non-sense.

   Stick to the point and answer…!
   1. Word usage is very inconsistent and haphazard… Some pure and newly constructed words such as ಹಮ್ಮುಗೆ (ಯೋಜನೆ) etc are used and also some Sanskrit words such as “ವಿದ್ಯಾರ್ಹತೆ ಮತ್ತು ಆಯ್ಕೆಯ ಪ್ರಕ್ರಿಯೆ”.. what is this mess?
   2. If this training is gonna result in a bizarre-ish Kannada such as the one used in this article, then it is making things worse.

   You people say you are making research towards Kannada linguistics, and write Kannada in English grammar.!

   Now, this has started to seem like another effort to misuse our love towards the language for some hidden gains.. very vague.!

   ಉತ್ತರ
 10. Chetan Jeeral
  ಜೂನ್ 17 2011

  @ಕಿರಣ್,
  ಸರಿಯಾಗಿ ಹೇಳಿದ್ದಿರಿ. ಶಂಕರ್ ಬಟ್ ಅವರು ಎಲ್ಲೂ ಕೂಡ ಸಂಸ್ಕೃತ ಪದವನ್ನ ತಗೆದು ಹಾಕಿ ಅಂತ ಹೇಳಿಲ್ಲ. ಇವರು ಹೇಳುತ್ತಿರುವುದು ನಮಗೆ ನಮ್ಮದೇ ಪದಗಳನ್ನು ಹುಟ್ಟಿಸಿಕೊಳ್ಳುವ ಶಕ್ತಿ ಇದೆ, ಅದನ್ನು ಹಾಳು ಮಾಡಿಕೊಳ್ಳದೆ ನಮಗೆ ಹತ್ತಿರವಾಗುವ ಪದಗಳನ್ನು ಹುಟ್ಟು ಹಾಕಬೇಕು ಅನ್ನುವುದು ಅವರ ವಾದ. ಇದನ್ನ ಬಹುಷಃ ಯಾರು ತಪ್ಪು ಅನ್ನೋದಕ್ಕೆ ಸಾಧ್ಯವಿಲ್ಲ ಅನ್ನೋದು ನನ್ನ ಅನಿಸಿಕೆ. ಮೈಯಲ್ಲಿ ಕಸುವು ಇರುವಾಗ ಬೇರೆ ಊರುಗೋಲಿನ ಆಸರೆ ಏಕೆ?

  ಉತ್ತರ
 11. ಚಿನಿವಾರ್
  ಜೂನ್ 17 2011

  ಒಳ್ಳೆಯ ಪ್ರಯತ್ನ ಕಿರಣ್.. ಒಳ್ಳೆಯದಾಗಲಿ..

  ಉತ್ತರ
 12. ಚಿನಿವಾರ್
  ಜೂನ್ 17 2011

  ಮಾಯ್ಸ ಅವರ ತಲೆ ಹರಟೆ ನೋಡಿ ಬೇಸರವಾಗ್ತಿದೆ.. ಶಂಕರ ಬಟ್ಟರ ಯೋಚನೆಗಳು, ಯೋಜನೆಗಳ ಒಳಿತು ಕೆಡಕುಗಳನ್ನು ಅತ್ಯಂತ ಡೆಮಾಕ್ರಟಿಕ್ ಆದ ಹಾದಿಯಲ್ಲಿ ಚರ್ಚಿಸುವ, ಯೋಜನೆಗಳನ್ನು ಕೈಗೆತ್ತಿಕೊಂಡು ಕೆಲ್ಸ ಮಾಡುವ, ಅದರಿಂದ ಹೊರ ಬರುವ ಸಾರದ ಬಗ್ಗೆ ಚರ್ಚಿಸಲು ಇಲ್ಲಿ ಎಲ್ಲರೂ ಮುಕ್ತರು.. ಆದರೆ ಅಂತಹ ಯಾವುದೇ ಸರಿ ನಿಲುವು ಮಾಯ್ಸ ಅವರಿಗೆ ಇದ್ದಂತಿಲ್ಲ.. ತಾಯ್ನುಡಿಯ ಬಗ್ಗೆ ಇಷ್ಟೆಲ್ಲ ಮಾತನಾಡುವ ಇವರು ಅಷ್ಟೇ ಕಾಳಜಿ ಇದ್ದಲ್ಲಿ ಕರ್ನಾಟಕಕ್ಕೆ ಮರಳಿ ಬಂದು ತಾವು ನಂಬಿರುವ ವಿಷಯಗಳತ್ತ ಕೆಲಸ ಮಾಡಿ, ತಮ್ಮ ಕೆಲಸದ ಗೆಲುವಿನ ಮೇಲೆ ನಿಂತು ಮಾತನಾಡಲಿ.. ಅದಿಲ್ಲದಿದ್ದರೆ,, ಅದಾವುದೋ ಯೂರೋಪ್ ದೇಶದಲ್ಲಿ ಬೆಚ್ಚಗೆ ವೊಡ್ಕಾ ಕುಡಿದು, ಇಲ್ಲಿ ಕೆಲಸ ಮಾಡುವವರ ವಿರುದ್ದ ಲೇವಡಿ ಮಾಡುವುದನ್ನು ನಿಲ್ಲಿಸಲಿ. ಮಾಯ್ಸ ಅವರೇ, ನಿಮಗೆ ನಿಜವಾಗಿಯೂ ನಿಮ್ಮ ನುಡಿಯನ್ನು ಮೇಲೆತ್ತಿ ತೋರಿಸುವ ಮೀಟರ್ ಇದ್ದಲ್ಲಿ ಬೆಂಗಳೂರಿಗೆ ವಾಪಸ್ಸು ಬಂದು ಕೆಲಸ ಮಾಡಿ ತೋರಿಸಿ.. ಯೂರೋಪಿನ ಸುಖ ಬೇಕು, ವೊಡ್ಕಾದ ಅಮಲು ಬೇಕು,, ಯೂರೋಪಿನ ದುಡ್ಡು ಬೇಕು ಅಂದ್ಕೊಂಡು, ಅಲ್ಲೇ ಸೆಟ್ಲ್ ಆಗುವ ಪಲಾಯನವಾದಿ ಮನಸಿರುವ ತಾವು ಕರ್ನಾಟಕದಲ್ಲಿ ಕನ್ನಡಕ್ಕಾಗಿ ತಮ್ಮ ಬದುಕನ್ನೇ ಮುಡುಪಾಗಿಸಿಕೊಂಡು ದುಡಿಯುವವರ ವಿರುದ್ದ ಮಾತನಾಡಲು ತಮಗೆ ಯಾವ ನೈತಿಕ ಹಕ್ಕು ಇಲ್ಲ ಎಂಬುದನ್ನು ಮನಗಾಣಿರಿ..

  ಉತ್ತರ
  • maaysa
   ಜೂನ್ 17 2011

   ಚಿನಿವಾರ್.

   Dear o Dear..

   Exactly… You caught me at the right spot. All you say about me is true..

   “ಮಾಯ್ಸ ಅವರ ತಲೆ ಹರಟೆ ನೋಡಿ ಬೇಸರವಾಗ್ತಿದೆ.. ಶಂಕರ ಬಟ್ಟರ ಯೋಚನೆಗಳು, ಯೋಜನೆಗಳ ಒಳಿತು ಕೆಡಕುಗಳನ್ನು ಅತ್ಯಂತ ಡೆಮಾಕ್ರಟಿಕ್ ಆದ ಹಾದಿಯಲ್ಲಿ ಚರ್ಚಿಸುವ, ಯೋಜನೆಗಳನ್ನು ಕೈಗೆತ್ತಿಕೊಂಡು ಕೆಲ್ಸ ಮಾಡುವ, ಅದರಿಂದ ಹೊರ ಬರುವ ಸಾರದ ಬಗ್ಗೆ ಚರ್ಚಿಸಲು ಇಲ್ಲಿ ಎಲ್ಲರೂ ಮುಕ್ತರು.. ಆದರೆ ಅಂತಹ ಯಾವುದೇ ಸರಿ ನಿಲುವು ಮಾಯ್ಸ ಅವರಿಗೆ ಇದ್ದಂತಿಲ್ಲ..”

   Misconception.. I only wish destroy the fanatic opposition to DN Shankar Bhat. I behave like a crazy fanatic only to the Sanskrit fanatics who come here to blow their age-old horn again and again.

   “ತಾಯ್ನುಡಿಯ ಬಗ್ಗೆ ಇಷ್ಟೆಲ್ಲ ಮಾತನಾಡುವ ಇವರು ಅಷ್ಟೇ ಕಾಳಜಿ ಇದ್ದಲ್ಲಿ ಕರ್ನಾಟಕಕ್ಕೆ ಮರಳಿ ಬಂದು ತಾವು ನಂಬಿರುವ ವಿಷಯಗಳತ್ತ ಕೆಲಸ ಮಾಡಿ, ತಮ್ಮ ಕೆಲಸದ ಗೆಲುವಿನ ಮೇಲೆ ನಿಂತು ಮಾತನಾಡಲಿ.. ಅದಿಲ್ಲದಿದ್ದರೆ,, ಅದಾವುದೋ ಯೂರೋಪ್ ದೇಶದಲ್ಲಿ ಬೆಚ್ಚಗೆ ವೊಡ್ಕಾ ಕುಡಿದು, ಇಲ್ಲಿ ಕೆಲಸ ಮಾಡುವವರ ವಿರುದ್ದ ಲೇವಡಿ ಮಾಡುವುದನ್ನು ನಿಲ್ಲಿಸಲಿ.”

   100% true… However.. I only visit Europe often. I don’t live there. Since I don’t trust some entities in India.. I don’t comment in public forums from India. I live in Bengaluru. Now I am visiting.. I could have given you my phone number and address at Bengaluru, but I cannot trust you about harming me.

   You are assuming a lot about my personal life. I think, it is not good.. However, people are free to have any opinion, how crappy they are. 😀

   However.. please answer the following question promptly, I go away..

   Though the work is very appreciable and of high importance to Kannada… I see serious flaws in the way this article is written..
   1. Word usage is very inconsistent and haphazard… Some pure and newly constructed words such as ಹಮ್ಮುಗೆ (ಯೋಜನೆ) etc are used and also some Sanskrit words such as “ವಿದ್ಯಾರ್ಹತೆ ಮತ್ತು ಆಯ್ಕೆಯ ಪ್ರಕ್ರಿಯೆ”.. what is this mess?
   2. If this training is gonna result in a bizarre-ish Kannada such as the one used in this article, then it is making things worse.
   Either completely remove those alien Sanskrit words altogether or you them consistently.. To elaborate, if ವಿದ್ಯಾರ್ಹತೆ can be used directly without a pure Kannada words, then what’s wrong with ಯೋಜನೆ? and v.v/s

   Does the way this article is written make any sense? I find the structure and format of this article not only a mess but also detrimental to Kannada.!

   ಉತ್ತರ
 13. ಜೂನ್ 17 2011

  Hi,

  Couldn’t go through the whole comment chain. I think the comments are dealing more with some caste system related things. So just skipped it.

  Good attempt by “ಬನವಾಸಿ ಬಳಗ”. No harm if you add more words to a language though I prefer the “kanglish” way.

  ಉತ್ತರ
 14. dillipac
  ಜೂನ್ 17 2011

  As said by Mr.Ravi G B,
  ಇಲ್ಲಿ ಕಾಡು ಹರಟೆ ಮಾಡುತ್ತಿರುವವರೆನು ದಡ್ಡರಲ್ಲ, ಆದರೆ ನರಿಗಳ ಜೊತೆ ಬೆಳೆದಿರುವ ಸಿಂಹಕ್ಕೆ ತಾನು ಸಿಂಹ ಎನ್ನುವುದು ಮರೆತು ಹೋಗಿದೆ ಅಸ್ಟೇ !!! I feel its true also.I can understand the truth in that by going through many of the comments by Mr.Maaysa , Mr.SSN kumar and others .

  ****************************************************************************************************************************************************************************************************************************************

  1. Word usage is very inconsistent and haphazard… Some pure and newly constructed words such as ಹಮ್ಮುಗೆ (ಯೋಜನೆ) etc are used and also some Sanskrit words such as “ವಿದ್ಯಾರ್ಹತೆ ಮತ್ತು ಆಯ್ಕೆಯ ಪ್ರಕ್ರಿಯೆ”.. what is this mess?
  2. If this training is gonna result in a bizarre-ish Kannada such as the one used in this article, then it is making things worse.
  Either completely remove those alien Sanskrit words altogether or you them consistently.. To elaborate, if ವಿದ್ಯಾರ್ಹತೆ can be used directly without a pure Kannada words, then what’s wrong with ಯೋಜನೆ? and v.v/s
  as said by Mr. maaysa the above questions needs to be answered in priority I feel.

  ಉತ್ತರ
  • maaysa
   ಜೂನ್ 17 2011

   dillipac,

   Thanks.. The whole points of contention are

   1. Sanskrit fanaticalness
   2. Haphazard Kannada as produced in this article.

   Both are almost floccinaucinihilipilification .

   ಉತ್ತರ
  • maaysa
   ಜೂನ್ 22 2011

   Google now translates to Kannada.. Hurray.. I have translated ..

   1. ಪದಗಳ ಬಳಕೆ ತುಂಬಾ ಅಸಂಗತ ಮತ್ತು ಅವ್ಯವಸ್ಥಿತ … ಇಂತಹ ಕೆಲವು ಅಪ್ಪಟ ಮತ್ತು ಹೊಸದಾಗಿ ನಿರ್ಮಿಸಿದ ಪದಗಳನ್ನು ಹಮ್ಮುಗೆ (ಯೋಜನೆ) ಮುಂತಾದವು ಬಳಸಲಾಗುತ್ತದೆ ಮತ್ತು “ವಿದ್ಯಾರ್ಹತೆ ಮತ್ತು ಆಯ್ಕೆಯ ಪ್ರಕ್ರಿಯೆ” ಎಂದು ಕೆಲವು ಸಂಸ್ಕೃತ ಪದಗಳು .. ಈ ಗೊಂದಲ ಏನು?
   2. ಈ ತರಬೇತಿ ಈ ಲೇಖನದಲ್ಲಿ ಬಳಸಿದ ಒಂದು ನಂತಹ ವಿಚಿತ್ರ-ಶೈಲಿಯ ಕನ್ನಡ ಪರಿಣಾಮವಾಗಿ ಹೋಗುವುದರ ಆಗಿದ್ದರೆಆಗ ಇದು ವಿಷಯಗಳನ್ನು ಕೆಟ್ಟದಾಗಿ ಮಾಡುತ್ತಿದೆ.
   ಒಂದೋ ಪೂರ್ತಿಯಾಗಿ ಸಮಂಜಸವಾಗಿ ಅವುಗಳನ್ನು ಸಂಪೂರ್ಣವಾಗಿ ಆ ಅನ್ಯಲೋಕದ ಸಂಸ್ಕೃತ ಪದಗಳನ್ನು ತೆಗೆದು ಇಲ್ಲವೇ ನೀವು .. ವಿದ್ಯಾರ್ಹತೆ ಶುದ್ಧ ಕನ್ನಡ ಪದಗಳನ್ನು ಇಲ್ಲದೆ ನೇರವಾಗಿ ಬಳಸಬಹುದು ವೇಳೆ ವಿವರಿಸುವ, ನಂತರ ಯಾವ ಯೋಜನೆ ಜೊತೆ ತಪ್ಪು ತಂದೆಯ? ಮತ್ತು v.v / ನ

   1. Padagaḷa baḷake tumbā asaṅgata mattu avyavasthita ide… Intaha kelavu śud’dha mattu hosadāgi nirmisida padagaḷannu ham’muge (yōjane) ityādi baḷasalāguttade mattu” vidyār’hate mattu āykeya prakriye” endu kelavu sanskr̥ta padagaḷu.. Ī avyavasthe ēnu?
   2. Ī tarabēti ī lēkhanadalli baḷasida ondu nantaha vilakṣaṇa – śailiya kannaḍa pariṇāmavāgi hōguva vēḷe, nantara idu viṣayagaḷannu keṭṭadāgi māḍuttide.
   Ondō sampūrṇavāgi sthiravāgi avugaḷannu sampūrṇavāgi ā an’yalōkada sanskr̥ta padagaḷannu tegedu athavā nīvu.. Vidyār’hate śud’dha kannaḍa padagaḷannu illade nēravāgi baḷasabahudu vēḷe vivarisuva, nantara yāva yōjane jote tappu tandeya? Mattu v.V/ na

   ಉತ್ತರ
 15. ಜೂನ್ 17 2011

  ಮೋಡದ ಮೇಲೆ ಕುಳಿತಿರ್ಪ ದೊಡ್ಡ ಬುದ್ದಿಗಳೆಲ್ಲ ನೆಲಕ್ಕಿಳಿದು ಈ ದಾಸಾನುದಾಸನು ಮಾಡುವ ಹೇಸಿಗೆಯನ್ನು ನಿಲ್ಲಿಸಿ ಶಿವಾಲಯವ ಕಟ್ಟು ಬನ್ನಿರಯ್ಯ! ನಾನೇನ ಮಾಡಲಿ ಬಡವನಯ್ಯ!

  ಉತ್ತರ
  • maaysa
   ಜೂನ್ 18 2011

   OK..

   So.. no need to get disheartened…

   Just be consistent through out..

   You are doing a great job! Honest appreciation.!

   ಉತ್ತರ
   • ರವಿ
    ಜೂನ್ 18 2011

    ಮಹೇಶಣ್ಣ, ಗೂಗಲ್ ಲಿಪ್ಯಂತರ ಬಳಸಿ – http://google.com/transliterate/kn

    ಉತ್ತರ
    • maaysa
     ಜೂನ್ 18 2011

     ಅಯ್ಯೋ ಅದು ‘ಆಟೋ ಕರೆಕ್ಟ್’ ಮಾಡುತ್ತೆ .
     ಅದೂ ಅಲ್ಲದೆ ನಾನು ಇಂಗ್ಲಿಶ್ ಅಲ್ಲೇ ಬರೆಯೋಣ ಅಂತ.
     ಇಲ್ಲೇ ಈಗ ಸಂಸ್ಕ್ರುತ-ಕನ್ನಡ, ಅಚ್ಚಾಕನ್ನಡ ಮತ್ತು ಈ ಬರಹದಂಗೆ ಎಡಬಿಡಂಗಿ ಕನ್ನಡ, ಹೀಗೆ ಎಲ್ಲ ಅಡಾವುಡಿ ಎದ್-ಹೋಗಿದೆ

     ಏನಿದು ಗಲಿಬಿಲಿ ಅಂತ ಕೇಳಿದ್ರೆ ಜನ, ಬಗವದ್ಗೀತೆಯನ್ನ ಬದಿಲು ಹೇಳ್ತಿದ್ದಾರೆ.

     ಉತ್ತರ
     • ರವಿ
      ಜೂನ್ 18 2011

      “ಆಟೋ ಕರೆಕ್ಟ್” ಮಾಡಲು ಗೂಗಲ್ ನವರು ಯಾವುದೇ ಸಂಸ್ಕೃತ ಪದಗಳನ್ನು ಕೂಡಿಟ್ಟಿಲ್ಲ. ಅತಿ ಹೆಚ್ಚು ಬಳಕೆಯಾದ ಶಬ್ದಗಳ ಮೇಲೆ ಆಟೋ ಕರೆಕ್ಟ್ ತರ್ಕ ಬರೆಯಲಾಗಿದೆ. ಉದಾಹರಣೆಗೆ english ಎಂದು ಬರೆದಾಗ “ಇಂಗ್ಲಿಷ್” ಎಂದು ತೋರಿಸುತ್ತದೆ. ಅದು ನಿಮಗೆ ತಪ್ಪೆಂದು ಕಂಡಲ್ಲಿ “ಇಂಗ್ಲಿಶ್” ಎಂದು ಸರಿಮಾಡಿಕೊಳ್ಳಿ. “ಇಂಗ್ಲಿಶ್” ಬಳಕೆ ಹೆಚ್ಚಾದಷ್ಟು “ಇಂಗ್ಲಿಷ್” “ಆಟೋ ಕರೆಕ್ಷನ್” ಕಡಿಮೆಯಾಗುತ್ತದೆ. ಅಲ್ಲ ಯುನಿಕೋಡ್ ಸಹಾಯವೂ ಇದೆ. ತಂತ್ರಾಂಶವನ್ನು ದೂರಬೇಡಿ, ಮಾರ್ಪಡಿಸಿ. ಅಂತೂ ಕನ್ನಡದಲ್ಲಿ ಬರೆದಿದ್ದಕ್ಕೆ ಮೆಚ್ಚುಗೆ. 🙂

      ಉತ್ತರ
      • maaysa
       ಜೂನ್ 18 2011

       ಆಯ್ತು ಗುರುವೇ..

       ಕನ್ನಡಲ್ಲೇ ಬರೇತೀನಿ. ನನ್ನ ಕನ್ನಡ ಅರಗಿಸಿಕೊಳ್ಳಲು ಮೊಗಸಿ!

       ನನ್ನ ಎದುರಿಸುವಿಕೆ ಇರೋದು
       ೧. ಸಂಸ್ಕ್ರುತದ ಮೇಲಣ ಹುಚ್ಚು ಹಾಗು ಅದರಿಂದ ಮೇಲುಗಾರಿಕೆ ತೋರುವಿಕೆ
       ೨. ಈ ಬರಹ-ದಲ್ಲಿ ಇರುವ ಅಡಾವುಡಿ ಬಗೆಯ ಕನ್ನಡ

       ಕನ್ನಡಕ್ಕೆ ಬೇಕು ಕನ್ನಡದ್ದೇ ಪದಗಳು. ಅದು ಆಗ-ಮಾಡ-ಬರ-ತಕ್ಕದ್ದು

       ಹಮ್ಮುಗೆ = ಯೋಜನೆ
       ಆಗುಹ/ನಡೆತ = ಕಾರ್ಯಕ್ರಮ
       ಓದು = ವಿದ್ಯಾರ್ಹತೆ
       ಕಲಿಕೂಟ = ಶಿಭಿರ
       ಕಲಿಕೂಟಿಗ = ಶಿಭಿರಾರ್ಥಿ
       ಆರಯ್ಯು = ಸಂಶೋಧನೆ
       ಅರಿವು/ಅರಿಕೆ = ಮಾಹಿತಿ
       ಮುಗಿತ = ಮುಕ್ತಾಯ
       ಹುರುಪಿಗರು = ಆಸಕ್ತರು
       ಹೊತ್ತು = ಅವಧಿ

       ಮುಂ …..

       ಉತ್ತರ
       • ರವಿ
        ಜೂನ್ 18 2011

        ೧. ಸಂಸ್ಕ್ರುತದ ಮೇಲಣ ಹುಚ್ಚು ಹಾಗು ಅದರಿಂದ ಮೇಲುಗಾರಿಕೆ ತೋರುವಿಕೆ
        ೨. ಈ ಬರಹ-ದಲ್ಲಿ ಇರುವ ಅಡಾವುಡಿ ಬಗೆಯ ಕನ್ನಡ

        ಈ ಬರಹಗಾರರಿಗೆ ಸಂಸೃತದ ಮೇಲೆ ಹುಚ್ಚು ಎಂದು ಹೇಳುತ್ತಿರುವುದಾದರೆ- ಒಂದು ವೇಳೆ ಅವರು ನೀವು ಹೇಳಿದ ಕಲಿಕೂಟ, ಅರಯ್ಯುಗಳನ್ನ ಬಳಸಿದ್ದರೆ, ನಮ್ಮಂಥವರಿಗೆ ಅರ್ಥವಾಗುತ್ತಿರಲಿಲ್ಲ ಮಹೇಶಣ್ಣ.. ಶಿಭಿರ ನಡೆಸುತ್ತಿರುವುದು ಈ ಹೊಸ ಪದಗಳನ್ನು ಕಲಿಸಲೆಂದು ತಿಳಿದುಕೊಂಡಿದ್ದೇನೆ. ಸಂಸ್ಕೃತ, ಹಿಂದಿ ಹೇರಿಕೆ ಬಗ್ಗೆ ಮಾತಾಡುವ ನೀವು ಕನ್ನಡಿಗರು ದಿನಬೆಳಗಾಗುವುದರೊಳಗೆ ಈ ಹೊಸ ಪದಗಳನ್ನು ಅರಗಿಸಿಕೊಳ್ಳಬೇಕೆಂದು ಏಕೆ ಬಯಸುತ್ತೀರಿ.. ಮೂಲ ಕನ್ನಡದ ಪದಗಳೇ ಆದರೂ ಬಳಕೆ ಕಡಿಮೆಯಲ್ಲವೇ.. ಇದು ಹೇರಿಕೆಯಾಗುವುದಿಲ್ಲವೇ? ಸ್ವಲ್ಪ ತಾಳ್ಮೆ ಇರಲಿ.

        ಉತ್ತರ
        • maaysa
         ಜೂನ್ 18 2011

         Circular argument.. I let you to contemplate yourself.
         😀

         I am tired and it’s a summer weekend. 🙂

         Bye

         ಉತ್ತರ
         • ರವಿ
          ಜೂನ್ 18 2011

          ಹ ಹ.. ಅಂತೂ ಸುಸ್ತಾದ್ರಲ್ಲ.. ಸುಧಾರಿಸಿಕೊಂಡು ಬನ್ನಿ 😀

          ಉತ್ತರ
        • maaysa
         ಜೂನ್ 18 2011

         OK.. I am back.

         Mr Ravi,

         Read all my comments. As I have mentioned to quote
         “Though the work is very appreciable and of high importance to Kannada… I see serious flaws in the way this article is written..”

         One must practise, what he preaches. Many of us here have raised our objections, and concerns, which have not been replied. I just dug more for a logical answer but I found a spring of blabbering and flowery language and Bhagvadgeetha quotation.

         Ours is a secular society, and quoting and relation a religious text is objectionable in the context of language upliftment. Moreover many well know thinkers(contentious too) have serious negative opinions about Bhavadgeetha

         Ex : http://www.osho.com/library/online-library-bhagavadgita-nobody-mother-c284e261-1eb.aspx

         Though I don’t follow Osho and opposed his way for very long, there is an apt statement in that article
         “This tolerance is a silent acceptance. They could have objected but nobody
         wants to risk his prestige. Nobody wants to condemned by the blind masses”

         I risk my prestige and object to quoting Bhavadgeetha in a secular context.!
         We must not tolerate and accept these Bhagvadgeetha quoting in this context. It poisons the whole effort.

         Now.. do you understand?

         “ಸಂಸ್ಕೃತ, ಹಿಂದಿ ಹೇರಿಕೆ ಬಗ್ಗೆ ಮಾತಾಡುವ ನೀವು ಕನ್ನಡಿಗರು ದಿನಬೆಳಗಾಗುವುದರೊಳಗೆ ಈ ಹೊಸ ಪದಗಳನ್ನು ಅರಗಿಸಿಕೊಳ್ಳಬೇಕೆಂದು ಏಕೆ ಬಯಸುತ್ತೀರಿ.. ಮೂಲ ಕನ್ನಡದ ಪದಗಳೇ ಆದರೂ ಬಳಕೆ ಕಡಿಮೆಯಲ್ಲವೇ.. ಇದು ಹೇರಿಕೆಯಾಗುವುದಿಲ್ಲವೇ? ”
         Well constructed but misleading. I am talking only about the language used in the article all the time, which ಆತ್ರಾಡಿ ಸುರೇಶ ಹೆಗ್ಡೆ rightly described as bizarre/ವಿಚಿತ್ರ

         ಉತ್ತರ
 16. ಜೂನ್ 18 2011

  ಈ ಲೇಖನದಲ್ಲಿ ಕನ್ನಡದ ಪ್ರಾಣ ತು೦ಬಾ ವೀಕ್ ಆಗಿದೆ. ಓದಲು ಬಹಳ ಕಷ್ಟ. ಅ೦ದ ಹಾಗೆ ಎಷ್ಟು ಪ್ರತಿಶತ ಕನ್ನಡಿಗರು ಇ೦ತಹ ಕನ್ನಡ ಬಳಸುತ್ತಿದ್ದಾರೆ?

  ಉತ್ತರ
 17. ಜೂನ್ 18 2011

  ಒಮ್ಮೊಮ್ಮೆ ’ವೀಕೂ’ ಒಮ್ಮೊಮ್ಮೆ ’ಡಿಸ್ಹಾರ್ಟಂಡೂ’ ಒಮ್ಮೊಮ್ಮೆ ’ಸ್ಟ್ರಾಂಗೂ’ ಒಮ್ಮೊಮ್ಮೆ ’ಹಾರ್ಟಂಡೂ’ ಆಗಿ ಕಾಣಿಸಿಕೊಳ್ಳುವುದು ನಾವಲ್ಲ, ನಮ್ಮ ತಂದೆ. ಅವನೇ ನಮ್ಮನ್ನು ಆಡಿಸುತ್ತಿರುವುದಲ್ಲವೆ? ಅವನು ಹಿಂದೊಮ್ಮೆ ಸಂಸ್ಕ್ರುತದಲ್ಲಿ ಬಿಲ್ಗಾರನೊಬ್ಬನಿಗೆ ಇಂತೆಂದನಂತೆ, ಅವನ ಮಾತ ಹೇಳುವೆನು ಕೇಳಿರಣ್ಣ:

  ಆಶ್ಚರ್ಯವತ್ ಪಶ್ಯತಿ ಕಶ್ಚಿದೇನಂ ಆಶ್ಚರ್ಯವದ್ ವದತಿ ತಥೈವ ಚಾನ್ಯಃ ।
  ಆಶ್ಚರ್ಯವಚ್ಚೈನಮನ್ಯಃ ಶೃಣೋತಿ ಶ್ರುತ್ವಾSಪ್ಯೇನಂ ವೇದ ನಚೈವ ಕಶ್ಚಿತ್ ॥

  ಸೋಜಿಗವೆಂಬಂತೆ ಕಾಂಬರು ಕೆಲವರವನ, ಸೋಜಿಗವೆಂಬಂತೆ ಪೇಳ್ವರು ಕೆಲವರವನ. ಸೋಜಿಗವೆಂಬಂತವನ ಕೇಳ್ವರು ಕೆಲವರು, ಕೇಳಿಯೂ ತಿಳಿಯರಿನ್ನೂ ಕೆಲವರವನ. ಅವನಂತೆಯೇ ಅವನಾಡಿಸುವ ಆಟವೂ! ಅವನಂತೇ ಅವನಾಡಿಸುವ ಆಟವನಾಡುವ ನಾವೂ.

  ಬಯ್ಯುವವರು ಬಯ್ಯಿರಿ, ನಮ್ಮ ತಂದೆ ನಮ್ಮನ್ನು ಸಲಹುತ್ತಿರುವನಯ್ಯ, ಅವನಿರುವಾಗ ಅನ್ಯರ ಬೈಗಳಕ್ಕೆ ಕೈಕಟ್ಟಿ ಕೂರುವವರು ನಾವಲ್ಲವಯ್ಯ!

  ಉತ್ತರ
  • maaysa
   ಜೂನ್ 18 2011

   Now you have gone crazy and bringing religion. All Kannadigas need not believe in your archer.

   There is some religious agenda! ?

   Mess!

   ಉತ್ತರ
   • ಜೂನ್ 18 2011

    Go figure. Good Bye.

    ಉತ್ತರ
    • maaysa
     ಜೂನ್ 18 2011

     Mr. Kiran…

     You seems to have deluded your self of as if you are enthroned to a high spiritual throne, and dodge all the questions with flowery language and Sanskrit crap.!

     And you also assume that you are well-respected 😀

     That’s all…

     ಉತ್ತರ
 18. Satish
  ಜೂನ್ 18 2011

  Book which bought name and fame to kannada by kumaravayaya / ranna pampa.. kuvempu are infuluence by sanskrit… ,, we have lot of persion .. egnlish .. words in kannada.. we have look over those 1st.. if we have really thing… ….

  ಉತ್ತರ
 19. ನಿಲುಮೆ, ಯಾವುದೇ ವಸ್ತುನಿಷ್ಠ ಚರ್ಚೆಯನ್ನೂ ನಡೆಯಲು ಬಿಡದೇ ಬರೀ ನುಡಿ-ಜಾತಿ-ವರ್ಗದ್ವೇಷವನ್ನೇ ಕನ್ನಡದ ಉದ್ಧಾರವೆಂಬಂತೆ ಕಾರಿಕೊಳ್ಳುವ ಪ್ರವೃತ್ತಿಯನ್ನು ತುಸುವಾದರೂ ನಿಯಂತ್ರಿಸಬೇಕೆನಿಸುತ್ತದೆ. ಇಲ್ಲವೆಂದರೆ ನಿಲುಮೆ ನಾರತೊಡಗಿ “ಹೊಲಮೆ”ಯಾಗಿ ಮಾರ್ಪಡುವುದೇನೋ!

  ಉತ್ತರ
 20. maaysa
  ಜೂನ್ 19 2011

  Since, I am getting a bunch of personal email about this topic( which is sad, since I keep my personal life and internet life disparate ), I will just wanna clarify somethings.

  I hold following opinion
  1. Sanskrit fanaticism has caused a lot of harm to my country, and it is the breeds of this who are becoming hurdles in Bhatt’s effort as he has described in many of his books. Any body who wishes to make Kannada stand its own must face it.
  2. I object to quoting religious texts and bring religion into the arguments such as this.
  3. People are not what they appear in internet.
  4. Arguments must be objective ( not to be taken personally )!

  I hope I won’t get anymore emails…. I will paste the above sentences as reply to all of them.! 😀

  ಉತ್ತರ
 21. datta
  ಜೂನ್ 24 2011

  namma baraki, maaysa avarantaha hanebarahavannu sandeepweb.com nalli chennagi jaladiddare.. ivara ee niti , kannadambe yannu vidhave madisuttidaro yembatide.
  Shankarabhatru sarathyadalli ee manushya pushtaka bere prakatisuva yochane bere, kanditha namma Jnanapith #6 & #8 rante ivarigu prashasti doreuvudu kanditha..
  shubhavagali..

  ಉತ್ತರ
  • maaysa
   ಜೂನ್ 24 2011

   “Shankarabhatru sarathyadalli ee manushya pushtaka bere prakatisuva yochane bere, kanditha namma Jnanapith #6 & #8 rante ivarigu prashasti doreuvudu kanditha..”

   Don’t worry, I am not aiming at Jnanapith. I am aiming at Nobel peace prize 😀 !.

   What a joker!

   ಉತ್ತರ
   • ಮಾನವ
    ಜೂನ್ 24 2011

    ಮಾಯ್ಸ ನಿನಗೆ ಏನಿಲ್ಲದಿದ್ದರೂ ಅಜ್ಞಾನ ಪೀಠ ಮತ್ತು ನೊಬಲ್ ಬದ್ಲು ಗೂಬಾಲ್ ಪ್ರಶಸ್ತಿ ಸಿಗತ್ತೆ ಬಿಡು. 🙂
    ಎಂಥ ಹಾಸ್ಯ 🙂

    ಉತ್ತರ
    • maaysa
     ಜೂನ್ 24 2011

     Oh. Is it? Are you in the committee? seems like you are the chief of jokers.

     Take a chill pill bro.. You are an indecent idiot. A coward, hiding! Shameless.

     ಉತ್ತರ
    • maaysa
     ಜೂನ್ 24 2011

     “What a joker!” This must have hit this maniacs nerve..!

     ” ಗೂಬಾಲ್ ಪ್ರಶಸ್ತಿ ಸಿಗತ್ತೆ ಬಿಡು.” wow. the culture !! he he.

     ಉತ್ತರ
 22. Mahesh
  ಜೂನ್ 24 2011

  ನನಗೆ ತಿಳಿಯದವರು ಯಾರೋ ನನ್ನ ಹೆಸರು, ಇಮೇಲ್ ಬಳಸಿ ಕಾಮೆಂಟ್ ಹಾಗುತ್ತಿದ್ದಾರೆ.

  ನನ್ನ wordpress id ಇದು

  -ಮಾಯ್ಸ

  ಉತ್ತರ
 23. maaysa
  ಜೂನ್ 27 2011

  No worries. Your argument stopped somewhere. Please continue.
  ———————–google translation————————————–
  ಚಿಂತಿಸಬೇಡಿ. ನಿಮ್ಮ ವಾದವು ಎಲ್ಲೋ ನಿಲ್ಲಿಸಿತು. ಮುಂದುವರಿಸಬಹುದು ದಯವಿಟ್ಟು.
  —————————phonetically——————————————
  Cintisabēḍi. Nim’ma vādavu ellō nillisitu. Munduvarisabahudu dayaviṭṭu.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments