ಇಗೋ,ಇದರಲ್ಲಿ ಮುಂದಿದೆ…
– ಕಿರಣ ಬಾಟ್ನಿ, ಬನವಾಸಿ ಬಳಗ
’ನಿಲುಮೆ’ಯಲ್ಲಿ ಕನ್ನಡದ ಸೊಲ್ಲರಿಮೆಯ ಬಗ್ಗೆ ಚರ್ಚೆಯಾಗುತ್ತಿರುವುದು ಒಳ್ಳೆಯ ಸಂಗತಿ. ಅಕ್ಟೋಬರ್ ೨೦೦೮ರಲ್ಲಿ ನಾನು ಬರೆದ ಒಂದು ಬರಹವನ್ನು ಬನವಾಸಿ ಬಳಗದ ಗೆಳೆಯರಾದ ಶ್ರೀ ಆನಂದ್ ಜೋಶಿಯವರು ಈ ಚರ್ಚೆಗೆ ಸರಿಹೊಂದುತ್ತದೆ ಎಂದು ಪ್ರಕಟಣೆಗೆ ಕಳುಹಿಸಿ ಅದು ಪ್ರಕಟಿಸಲಾಗಿ, ಆ ಬರಹದಲ್ಲಿ ಬಂದ ಕೆಲವು ವಿಶಯಗಳ ಬಗ್ಗೆ, ಮತ್ತು ಬನವಾಸಿ ಬಳಗದ ನಿಲುವುಗಳ ಬಗ್ಗೆ ತಮ್ಮ ೪/೪/೨೦೧೧ರ ಬರಹದಲ್ಲಿ ಶ್ರೀ. ಅಜಕ್ಕಳ ಗಿರೀಶ ಬಟ್ಟರು ಪ್ರತಿಕ್ರಿಯೆ ನೀಡಿರುವುದರಿಂದ ಈ ಬರಹವನ್ನು ಬರೆಯುತ್ತಿದ್ದೇನೆ.
ಆ ಬರಹದಲ್ಲಿ ಗಿರೀಶಬಟ್ಟರನ್ನು ಕುರಿತು ನಾನು ಯಾವ ಮಾತನ್ನೂ ಆಡಿಲ್ಲ; ಅದನ್ನು ಬರೆದಾಗ ಅವರು ತಮ್ಮ ಹೊತ್ತಗೆಯನ್ನು ಪ್ರಕಟಿಸಿದ್ದರ ನೆನಪಿಲ್ಲ, ಅವರ ಹೆಸರೂ ನನಗಾಗ ಗೊತ್ತಿರಲಿಲ್ಲ. ಆದುದರಿಂದ ಆ ಬರಹದಲ್ಲಿ ಶಂಕರಬಟ್ಟರಿಗೆ ಗಿರೀಶಬಟ್ಟರು ಕೊಟ್ಟಿರುವ ಉತ್ತರಗಳ ವೈಗ್ನಾನಿಕತೆ-ಅವೈಗ್ನಾನಿಕತೆಗಳ ಬಗ್ಗೆ ನಾನು ಮಾತನಾಡಿರಲು ಸಾದ್ಯವೇ ಇರಲಿಲ್ಲ. ಆದರೆ ಶ್ರೀ. ಕೆ. ವಿ. ತಿರುಮಲೇಶರ ಒಂದು ಬರಹವನ್ನು ಕುರಿತು ಆ ಮಾತುಗಳನ್ನು ಆಡಿದ್ದು ನಿಜ, ಅವರು ಪ್ರತಿನಿದಿಸುವ ’ಹಳೆ-ಶಾಲೆ’ಯವರೆಲ್ಲರನ್ನೂ ಕುರಿತು ಆ ಮಾತುಗಳನ್ನು ಆಡಿದ್ದು ನಿಜ. ಈಗ ಗಿರೀಶಬಟ್ಟರಿಗೆ ಆ ಮಾತುಗಳು ತಮ್ಮನ್ನು ಕುರಿತೇ ಆಡಿದ್ದು ಎಂದು ಅನಿಸಿರುವುದರಲ್ಲಿ ಹಳೆಯ ಬರಹವನ್ನು ಹೊಸ ಚರ್ಚೆಯೊಂದರಲ್ಲಿ ಪ್ರಕಟಿಸಿದ್ದು ಒಂದು ಕಾರಣವಾದರೆ, ಮತ್ತೊಂದು ಕಾರಣ ನಿಜಕ್ಕೂ ಗಿರೀಶಬಟ್ಟರು ಆ ’ಹಳೆ-ಶಾಲೆ’ಗೇ ಸೇರುತ್ತಾರೆ ಎನ್ನುವುದು. ಮೊದಲನೆಯ ಕಾರಣಕ್ಕೆ ಬನವಾಸಿ ಬಳಗದ ಪರವಾಗಿ ನಾನು ಗಿರೀಶಬಟ್ಟರಲ್ಲಿ ಕ್ಶಮೆ ಕೇಳಿಕೊಳ್ಳುತ್ತ, ಎರಡನೆಯ ಕಾರಣದಿಂದ ಪ್ರೇರಿತರಾಗಿ ಅವರು ತಮ್ಮ ೪/೪/೨೦೧೧ರ ಬರಹದಲ್ಲಿ ಅದೇ ಹಳೆಯ ವಾದವನ್ನು ಮಂಡಿಸಿರುವುದರಿಂದ ಅದಕ್ಕೆ ಇಲ್ಲಿ ಮರುವುತ್ತರ.
ಅಂದಹಾಗೆ ನಾನೇನು ’ಹಳೆ-ಶಾಲೆ’ ಎಂದು ಮೂದಲಿಸುವಂದದಲಿ ಹೇಳುತ್ತಿಲ್ಲ; ಆ ಶಾಲೆಯು ನಿಜಕ್ಕೂ ಸಾವಿರಾರು ವರ್ಶ ಹಳೆಯದಾದುದರಿಂದ ಮಾತ್ರವೇ ಆ ಹೆಸರನ್ನು ಅದಕ್ಕೆ ಕೊಟ್ಟಿದ್ದೇನೆ, ಅಶ್ಟೆ.
’ಕತ್ತರಿ’ ಪುಸ್ತಕದ ಹೆಸರಿನ ಬಗೆಗಿನ ಚರ್ಚೆ ಮತ್ತು ಗೊಂದಲ
ಗಿರೀಶಬಟ್ಟರ ಹೊತ್ತಗೆಯ ಹೆಸರಿನಲ್ಲಿ ಶಂಕರಬಟ್ಟರ ಹೆಸರು ಬಂದಿರುವುದು ನನಗೆ ತಪ್ಪೇನು ಅನಿಸುವುದಿಲ್ಲ; ಅವರು ಹೇಳುವಂತೆ ನಿಜಕ್ಕೂ ಆವೊಂದು ’ಕತ್ತರಿ’ ವರಸೆಯನ್ನು ಶಂಕರಬಟ್ಟರೇ ಶುರುಮಾಡಿರುವುದು, ಮತ್ತು ಅವರ ಹಿಂಬಾಲಕರು ಕಡಿಮೆಯೆನ್ನುವುದೂ ನಿಜ. ಅದನ್ನು ಹೇಳುವುದರಲ್ಲಿ ತಪ್ಪೇನೂ ಇಲ್ಲವೆಂದು ನನ್ನ ಅನಿಸಿಕೆ. ಅಶ್ಟೇ ಅಲ್ಲ, ಶಂಕರಬಟ್ಟರ ಹೆಸರನ್ನು ಹೇಳುವುದಕ್ಕೇ ಹಿಂಜರಿದು ’ಇಂದಿನ ಸುದಾರಣಾವಾದಿಗಳು’ ಎಂದು ತಿರುಮಲೇಶರಂತೆ ’ಹೆಸರಿಸದೆ ಹೆಸರಿಸುವುದು’ ನನಗೊಮ್ಮೆ ರಾ. ಗಣೇಶರು ಹೇಳಿದ ’ಶಾಸ್ತ್ರ ಸ್ವಬಾವವೇ ಕ್ಶಾತ್ರ ಸ್ವಬಾವವು’ ಎನ್ನುವ ಮಾತಿಗೆ ಅಪವಾದ ಎನಿಸುತ್ತದೆ. ಆ ಕ್ಶಾತ್ರಸ್ವಬಾವ ಇಲ್ಲದವರ ವಾದದಲ್ಲಿ ಸಾಮಾನ್ಯವಾಗಿ ವೈಗ್ನಾನಿಕತೆಯೂ ಇರುವುದಿಲ್ಲ, ವಿಗ್ನಾನದ ಚರ್ಚೆಗಳಲ್ಲಿ ಅವೈಗ್ನಾನಿಕತೆಯು ಹುಟ್ಟಿಸುವ ಹೆದರಿಕೆ ಇರುತ್ತದೆ (ಅಂದಹಾಗೆ, ಆ ಕ್ಶಾತ್ರಸ್ವಬಾವ ಕಾಣಿಸಿಕೊಂಡ ಮಾತ್ರಕ್ಕೆ ವೈಗ್ನಾನಿಕತೆ ಇದೆ ಎಂದೂ ಹೇಳಲಾಗುವುದಿಲ್ಲ!).
ಆದರೆ ದುಕ್ಕದ ಸಂಗತಿಯೇನೆಂದರೆ ಗಿರೀಶಬಟ್ಟರು ತಮ್ಮ ಹೊತ್ತಗೆಯನ್ನು ಹೆಸರಿಸುವಾಗ ಶಂಕರಬಟ್ಟರ ’ಕತ್ತರಿ’ ಏನನ್ನು ಕತ್ತರಿಸಲು ಹೊರಟಿದೆ ಎಂಬುದರ ಬಗ್ಗೆಯೇ ಗೊಂದಲವನ್ನು ಹುಟ್ಟಿಸಿ ಬಿಟ್ಟಿದ್ದಾರೆ: ಶಂಕರಬಟ್ಟರು ’ಕನ್ನಡ’ಕ್ಕೆ ಕತ್ತರಿ ಹಾಕಲು ಹೊರಟಿಲ್ಲ, ’ಕನ್ನಡ ಬರಹ’ಕ್ಕೆ ಕತ್ತರಿ ಹಾಕಲು ಹೊರಟಿರುವುದು. ಇವೆರಡೂ ಬೇರೆಬೇರೆ. ಕನ್ನಡಕ್ಕೆ, ಎಂದರೆ ಕನ್ನಡ ನುಡಿಗೆ ಕತ್ತರಿ ಹಾಕುವುದು-ಬಿಡುವುದು ಒಬ್ಬಿಬ್ಬರ ಕೈಯಲ್ಲಿ ಇರುವುದಿಲ್ಲ. ಆದರೆ ಬರಹಕ್ಕೆ, ಬರಿಗೆಮಣೆಗೆ ಕತ್ತರಿ ಹಾಕುವುದು ಹಾಗೆ ಒಬ್ಬಿಬ್ಬರ ಕೈಯಲ್ಲಿ ಇರುತ್ತದೆ. ಅದನ್ನು ಒಪ್ಪಿಕೊಳ್ಳುವುದು ಬಿಡುವುದು ಮಾತ್ರ ಕನ್ನಡಿಗರೆಲ್ಲರ ಕೈಯಲ್ಲಿ ಇರುವುದು. ಶಂಕರಬಟ್ಟರ ’ಕತ್ತರಿ’ ವರಸೆಯಿಂದ ಬದಲಾದ ಕನ್ನಡಲಿಪಿಯ ಬದಲು ಒಂದು ಬಿಳಿಹಲಗೆಯೇ ವಾಸೆಯಿಂದು ರೋಮನ್ ಲಿಪಿಯನ್ನೇ ಬಳಸಿದರೆ ಹೇಗೆ ಎಂದು ’ಒಬ್ಬ ವ್ಯಕ್ತಿ’ಯಾದ ನಾನು ಮಿಂಬಲೆಗರಿಗೆ ಈ ಹಿಂದೆ ಸವಾಲು ಹಾಕಿದ್ದೆ (ಹಲವರು ಅದನ್ನು ಒಪ್ಪೂ ಒಪ್ಪಿದ್ದರು). ಬರಹದಲ್ಲಿ ಈ ರೀತಿಯ ಹೊಸತನಗಳನ್ನು ’ಒಬ್ಬಿಬ್ಬ ವ್ಯಕ್ತಿ’ಗಳೇ ಮಾಡಬೇಕು, ಮಾಡಲಾಗುವುದು. ಪ್ರತಿಯೊಬ್ಬ ಕನ್ನಡಿಗನೂ ಕುಳಿತು ಚರ್ಚಿಸಿ ಬರಹದಲ್ಲಿ ಈಬಗೆಯ ಪ್ರಯೋಗಗಳನ್ನು ಮಾಡುವುದು ಆಗದ ಮಾತು; ಆದರೆ ಆ ಪ್ರಯೋಗಗಳು ನೆಲೆನಿಲ್ಲುತ್ತವೋ ಇಲ್ಲವೋ ಎನ್ನುವುದರ ತೀರ್ಮಾನವು ಮಾತ್ರ ಒಬ್ಬಿಬ್ಬರದಲ್ಲ, ಎಲ್ಲ ಕನ್ನಡಿಗರದು (ಅವರನ್ನು ಸ್ವತಂತ್ರವಾಗಿ ಆ ತೀರ್ಮಾನವನ್ನು ಮಾಡಲು ಆರ್ತಿಕ-ಸಾಮಾಜಿಕ-ರಾಜಕೀಯ ಏರ್ಪಾಡುಗಳು ಬಿಟ್ಟರೆ). ಈ ರೋಮನ್ ಲಿಪಿಯ ಪ್ರಯೋಗವನ್ನು ಗಿರೀಶಬಟ್ಟರ ಮಾತಿನ ದಾಟಿಯಲ್ಲಿ ಬಣ್ಣಿಸುವುದಾದರೆ ’ಅಂಗಾಂಗ ಚೇದ’ವೂ ಅಲ್ಲ, ’ಆಂಪ್ಯುಟೇಶನ್ನೂ’ ಅಲ್ಲ, ’ಔಶದಿ ಕೊಡುವಿಕೆ’ಯೂ ಅಲ್ಲ; ಹಳೆಬಟ್ಟೆಯನ್ನು ಕಳಚೆಸೆದು ಹೊಸಬಟ್ಟೆಯನ್ನು ಹಾಕುವ ಒಂದು ಪ್ರಯತ್ನ ಎಂದು ಕರೆಯಬಹುದೇನೋ! ಇರಲಿ, ಅದರ ಬಗ್ಗೆ ಇಲ್ಲಿ ಇಶ್ಟು ಸಾಕು.
ನುಡಿಯರಿಮೆ ಮತ್ತು ರಾಜಕೀಯ
ಗಿರೀಶಬಟ್ಟರು ತಮ್ಮ ಮತವನ್ನು ತಿಳಿಹೇಳುತ್ತ ಶಂಕರಬಟ್ಟರು ’ರಾಜಕೀಯ ಸರಿತನಕ್ಕೆ ಸೂಕ್ತವಾದ ಪರಿಭಾಷೆಯಲ್ಲಿ ತಮ್ಮ ವಾದವನ್ನು ಮಂಡಿಸುತ್ತಿದ್ದಾರೆ’ ಎಂದಿದ್ದಾರೆ. ಶಂಕರಬಟ್ಟರು ಬೇಕೆಂದೇ ಹೀಗೆ ಮಾಡಿರಲಾರರು ಎಂದು ಅವರ ವಯಸ್ಸು ಎಶ್ಟೆಂದು ಗೊತ್ತಿರುವವರಿಗೆ ಗೊತ್ತಿರುತ್ತದೆ. ಆದರೆ ಬೇಕೆಂದೋ ಬೇಕೆಂದಲ್ಲದೆಯೋ ಒಬ್ಬ ನುಡಿಯರಿಗನ ಮಾತಿನಲ್ಲಿ ’ರಾಜಕೀಯ ಸರಿತನ’ ಕಂಡರೆ ತಪ್ಪೇನು? ನುಡಿಯ – ಅದರಲ್ಲೂ ಅದರ ಬರವಣಿಗೆಯ – ಬಗೆಗಿನ ಚರ್ಚೆಯಲ್ಲಿ ರಾಜಕೀಯದ ಪ್ರವೇಶವೇನು ಹೊಸದಲ್ಲ. ನುಡಿ ಮತ್ತು ಬರಹಗಳು ಸಾಮಾಜಿಕ-ಆರ್ತಿಕ-ರಾಜಕೀಯ ನೆಲೆಗಳ ಮೇಲೇ ನಿಂತಿರುತ್ತವೆ ಎಂದು ಹೊಸದಾಗಿ ಹೇಳಬೇಕೆ? ಕನ್ನಡದ ಇತಿಹಾಸವನ್ನು ಬಲ್ಲವರಿಗೆ ಅಶೋಕನೆಂಬ ದೊರೆಯ ’ರಾಜಕೀಯ’ ಕನ್ನಡನಾಡನ್ನು ಹರಡಿದ್ದರಿಂದಲೇ ಕನ್ನಡಕ್ಕೆ ಲಿಪಿಯೆಂಬುದು ಬಂದಿದ್ದು ಎಂದು ತಿಳಿದಿರುತ್ತದೆ. ಈ ಮಾತನ್ನು ಹೇಳಿದರೆ ಕನ್ನಡ ನುಡಿಯ ಬಗೆಗಿನ ಚರ್ಚೆಯ ವೈಗ್ನಾನಿಕತೆಯೇನು ಕಡಿಮೆಯಾಗುವುದಿಲ್ಲ. ಹಾಗೆಯೇ ಆ ಕನ್ನಡಲಿಪಿ ಮತ್ತು ಅದರಲ್ಲಿ ಬರೆಯುತ್ತಿದ್ದುದು ಬಹುಪಾಲು ಕನ್ನಡಿಗರಿಂದ ದೂರವುಳಿಯಿತು ಎಂಬ ’ಸಾಮಾಜಿಕ’ ಸತ್ಯವನ್ನು ಈ ವಾದಕ್ಕೆ ತಂದರೂ ತಂದವರ ವಾದದ ವೈಗ್ನಾನಿಕತೆಯೇನು ಕಡಿಮೆಯಾಗುವುದಿಲ್ಲ. ಹಾಗೆಯೇ ಆ ದೂರವುಳಿದ ಕನ್ನಡಿಗರು ಆರ್ತಿಕವಾಗಿ ಹಿಂದುಳಿದಿದ್ದರು ಮತ್ತು ಈಗಲೂ ಹಿಂದುಳಿದಿದ್ದಾರೆ ಎಂಬ ’ಆರ್ತಿಕ’ ಸತ್ಯವನ್ನು ತಂದರೂ ವೈಗ್ನಾನಿಕತೆ ಕಡಿಮೆಯಾಗುವುದಿಲ್ಲ. ಇವೆಲ್ಲ ದಿಟಗಳು. ದಿಟಗಳನ್ನು ಹೆಕ್ಕಿ ತೆಗೆಯುವುದೇ ಅರಿಗರ ಕೆಲಸ. ಅದನ್ನು ಅವರು ಚೆನ್ನಾಗಿ ಮಾಡಿದಾಗ ಹೊರಬರುವ ದಿಟಗಳು ಯಾರಿಗೆ ಇಶ್ಟವಾಗುವುದಿಲ್ಲವೋ ಅವರು ಆ ದಿಟಗಳ ದಿಟತನವನ್ನೂ, ಅವುಗಳನ್ನು ಹೆಕ್ಕಿ ತೆಗೆಯುವವರ ಅರಿಮೆತನವನ್ನೂ ಪ್ರಶ್ನಿಸುವುದು ಸಹಜ. ಅಂತಹ ಒಂದು ಸಹಜ ಕೆಲಸವನ್ನೇ ’ಹಳೆ-ಶಾಲೆ’ಯವರು ಮಾಡುತ್ತಿರುವುದು. ಅಂತಹ ಒಂದು ಸಹಜ ಕೆಲಸವನ್ನೇ ಗಿರೀಶಬಟ್ಟರು ತಮ್ಮ ಸಮರ್ತನೆಯ ವಾಕ್ಯದಲ್ಲಿ ಮಾಡಿರುವುದು.
ತಮಿಳ್ ತಮಿಳ್ ತಮಿಳೆಂದು ಕೂಗಾಡದಿರಿ!
ಇನ್ನು, ’ಶಂಕರ ಭಟ್ಟರ ವಾದಕ್ರಮ ತಮಿಳು ಮಾದರಿ, ದ್ರಾವಿಡ ಚಳುವಳಿಯಂಥದ್ದು”’ ಎಂದು ಹೇಳುವ ಸ್ವಾತಂತ್ರ್ಯ ಗಿರೀಶಬಟ್ಟರಿಗೆ ಇದೆ. ಅದು ಶಂಕರಬಟ್ಟರ ಮೇಲಿನೆ ವೈಯಕ್ತಿಕ ದಾಳಿ ಎಂದು ನಾನು ಕರೆಯುವುದಿಲ್ಲ. ಒಂದರಲ್ಲಿ ಇನ್ನೊಂದರ ಮಾದರಿಯನ್ನು ಕಾಣುವುದು ಸಹಜ. ಆದರೆ ’ತಮಿಳು ಮಾದರಿ’ ಮತ್ತು ’ದ್ರಾವಿಡ ಚಳುವಳಿಯ ಮಾದರಿ’ ಎಂದರೆ ಅವೈಗ್ನಾನಿಕವಾದುದು ಎಂದು (ತಮಗೆ ಇಶ್ಟವಾಗದೆ ಇರುವುದು ಎಂದಲ್ಲ) ತೋರಿಸಿಕೊಡುವ ಹೊರೆ ಗಿರೀಶಬಟ್ಟರ ಮೇಲೆ ಬೀಳುತ್ತದೆ, ಏಕೆಂದರೆ ವಿಗ್ನಾನದ ಈ ವಾದದಲ್ಲಿ ಆ ಮಾತನ್ನು ವೈಗ್ನಾನಿಕ ಸತ್ಯವೆಂಬಂತೆ ಎತ್ತಿರುವುದು ಅವರೇ. ತಮಿಳು-ಕನ್ನಡಗಳು ಬೇರೆಯಾದದ್ದು ಇತ್ತೀಚೆಗೆ ಎಂದು ನುಡಿಯರಿಗರಿಗೆ ತಿಳಿಯದೆ ಇಲ್ಲ. ಶಂಕರಬಟ್ಟರು ತಮಿಳನ್ನು ಮಾದರಿಯಾಗಿ ತೆಗೆದುಕೊಂಡಿದ್ದಾರೆ ಎಂದೇನು ನಾನು ಒಪ್ಪುವುದಿಲ್ಲ (ಮತ್ತು ತಮಿಳಿನ ಬಗ್ಗೆ ಶಂಕರಬಟ್ಟರು ಬರೆದಿರುವ ಒಂದೆರಡು ವಾಕ್ಯಗಳನ್ನು ಗಿರೀಶಬಟ್ಟರು ಪುರಾವೆಯಾಗಿ ಕೊಡಲೆತ್ನಿಸಿರುವುದು ಅವರ ಮೇಲಿನ ’ಮಾದರಿ’ಯ ಆರೋಪವನ್ನು ಸರ್ಮರ್ತಿಸುವುದಿಲ್ಲ),
ಆದರೆ ತಮಿಳಿನ ಮಾದರಿ ಕನ್ನಡಕ್ಕೆ ಒಪ್ಪುತ್ತದೆ ಎಂದು ಯಾರಾದರೂ ನಿಜಕ್ಕೂ ಹೇಳಿದರೆ ಅವರು ಮಾಡುವ ’ತಪ್ಪು’ ಈವರೆಗಿನ ಹಳೆ-ಶಾಲೆಯವರು ಮಾಡಿರುವ, ಮಾಡುತ್ತಿರುವ, ಇನ್ನು ಮುಂದೆಯೂ ಮಾಡೋಣವೆನ್ನುವ ತಪ್ಪಿಗಿಂತ ದೊಡ್ಡದೇ? ಕನ್ನಡದ ಸೊಲ್ಲರಿಮೆಗೆ ನಂಟಿಲ್ಲದ ಸಂಸ್ಕ್ರುತದ ಬರಿಗೆಮಣೆ, ಪದಕಟ್ಟಣೆ ಮತ್ತು ಸೊಲ್ಲರಿಮೆಗಳ ಮಾದರಿಯನ್ನೇ ಇಲ್ಲಿಯವರೆಗೆ ಕನ್ನಡದ ಬರಹಗಾರರು, ನುಡಿಯರಿಗರು ಮತ್ತು ಸೊಲ್ಲರಿಗರು ಕಣ್ಮುಚ್ಚಿಕೊಂಡು ಪಾಲಿಸುತ್ತ ಬಂದಿರಲಿಲ್ಲವೆ? ಶಂಕರಬಟ್ಟರು ಯಾವ ಹಳೆಯ ಮಾದರಿಗೂ ಅಂಟಿಕೊಳ್ಳದೆ ತಮ್ಮದೇ ಒಂದು ಮಾದರಿಯನ್ನು ಕಟ್ಟುತ್ತ ಬಂದಿದ್ದಾರೆ; ಆದರೆ ಅವರ ಕೆಲಸವನ್ನು ಒಂದಲ್ಲ ಒಂದು ಮಾದರಿಗೆ ಅಂಟಿಸಬೇಕು ಎಂದು ಹೊರಟವರಿಗೆ ’ತಮಿಳಿನ ಮಾದರಿ’ ಮತ್ತು ’ದ್ರಾವಿಡ ಚಳುವಳಿಯ ಮಾದರಿ’ಗಳು ಮುಂದೆ ಬಂದು ನಿಂತರೆ ಅವು ಅವರ ಆ ಮಾದರಿಯನ್ನು ಕಾಣುವ ಹಂಬಲದ ಮತ್ತು ಆ ಮಾದರಿಗಳನ್ನು ಎಲ್ಲರೊಪ್ಪುಗೆಯ ಕೆಡಕುಗಳೆಂದು ಆದಾರವಿಲ್ಲದೆ ತಿಳಿದಿರುವವರ ಅವೈಗ್ನಾನಿಕತೆಯ ಕೂಸುಗಳೇ ಹೊರತು ನಿಜವಲ್ಲ. ತಮಿಳಿನ ನುಡಿಯರಿಗರು ತೋಲ್ಕಾಪ್ಪಿಯಮ್ಮಿನ ಎಲ್ಲೆಗಳನ್ನು ಮೀರಿ ಹೋಗಿಲ್ಲ, ಅದರಲ್ಲಿರುವ ಹಲವಾರು ಅವೈಗ್ನಾನಿಕ ಅಂಶಗಳನ್ನು ಎದುರಿಸುವ ಎದೆಗಾರಿಕೆಯನ್ನು ಮಾಡಿಲ್ಲ ಎಂದು ಶಂಕರಬಟ್ಟರು ಗೋಳಿಡುತ್ತಾರೆ ಎಂದು ಅವರನ್ನು ಒಮ್ಮೆ ಮಾತನಾಡಿಸಿದರೆ ತಿಳಿದು ಬರುತ್ತದೆ; ಅವರು ಕನ್ನಡದ ಕಡೆಗೆ ತಮ್ಮೆಲ್ಲ ಗಮನವನ್ನು ಹರಿಸುತ್ತ ಇರುವುದರಿಂದ ಈ ಬಗ್ಗೆ ಬರೆದಿಲ್ಲ, ಅಶ್ಟೆ. ಅಲ್ಲದೆ, ಅರಿಗನೊಬ್ಬನ ಕೆಲಸ ಯಾವ ಮಾದರಿಯದು ಎಂದು ತೀರ್ಮಾನಿಸಲು ಹೊರಡುವುದಾದರೂ ಏಕೆ? ಒಂದು ವಾದದ ವೈಗ್ನಾನಿಕತೆ-ಅವೈಗ್ನಾನಿಕತೆಗಳನ್ನು ಆ ವಾದದ ಆದಾರದ ಮೇಲೇ ತೀರ್ಮಾನಿಸಲು ಆದರೆ ಮಾಡಬೇಕು. ಇಲ್ಲದಿದ್ದರೆ ಸುಮ್ಮನಿರಬೇಕು. ಸರಿ-ತಪ್ಪಿನ ತೀರ್ಮಾನಕ್ಕಾಗಿ ಒಂದಲ್ಲ ಒಂದು ಮಾದರಿಗೆ ವೋಟು ಹಾಕಲೇ ಬೇಕಾದ ಇಕ್ಕಟ್ಟಿಗೆ ತನ್ನನ್ನು ತಾನೇ ಸಿಕ್ಕಿಸಿಕೊಳ್ಳುವುದು ರಾಜಕೀಯದ ಗೋಶಣೆಗಳಿಂದ ಪ್ರೋಗ್ರಾಮಾಗಿರುವ ಮತದಾರನ ಗುಣ; ಎಲ್ಲ ಸರಪಳಿಗಳನ್ನೂ ಕಳಚಿ ಸ್ವತಂತ್ರವಾಗಿ ಚಿಂತಿಸುವ ಅರಿಗನ ಗುಣವಲ್ಲ.
ಇನ್ನು ಗಿರೀಶಬಟ್ಟರು ’ಹೇಳಬೇಕಾದ ’ಬಹಳ ಮುಖ್ಯವಾದ ಸಂಗತಿ’’ಗೆ ಬರುತ್ತೇನೆ. “”ಶಂಕರಭಟ್ಟರು ಹೇಳುವ ರೀತಿಯ ಸುಧಾರಣೆಗಳನ್ನು ತಮಿಳರು ಎಂದೋ ಮಾಡಿದ್ದಾರೆ ತಾನೆ? ಅಲ್ಲಿ ಆ ಭಾಷೆಯ ಸ್ಥಿತಿಗತಿ ಹೇಗಿದೆ? ಈ ಸುಧಾರಣೆಗಳ ಕಾರಣದಿಂದಾಗಿ ಯಾವ ಗುಣಾತ್ಮಕ ಪರಿಣಾಮಗಳಾಗಿವೆ? ಇದನ್ನು ನೋಡಬೇಡವೆ?”” ಎಂದು ಶುರು ಮಾಡಿಕೊಂಡು ತಮಿಳಿಗೂ ನೊಬೆಲ್ ಪ್ರಶಸ್ತಿ ಬಂದಿಲ್ಲವೆಂದೂ, ತಮಿಳಿನಲ್ಲೂ ’ಜಗತ್ತಿಗೆ ಬೇಕಾದ ಗ್ನಾನ’ ರಚನೆಯಾಗಿಲ್ಲವೆಂದೂ, ತಮಿಳಿನಲ್ಲಿ ಕನ್ನಡದಶ್ಟು ಒಳ್ಳೆಯ ಬರಹಗಾರರು ಬಂದಿಲ್ಲವೆಂದೂ ಗಿರೀಶಬಟ್ಟರು ವಾದಿಸುತ್ತಾರೆ. ಗಮನಿಸಬೇಕಾದ ವಿಶಯವೇನೆಂದರೆ ಈ ವಾದದಲ್ಲಿ ಶಂಕರಬಟ್ಟರು ಮಾಡಬೇಕು ಎನ್ನುತ್ತಿರುವ ಬದಲಾವಣೆಗಳು ವೈಗ್ನಾನಿಕವೋ ಅವೈಗ್ನಾನಿಕವೋ ಎಂಬ ವಾದದಿಂದ ಗಿರೀಶಬಟ್ಟರು ಹೊರಬಂದಿದ್ದಾರೆ, ಮತ್ತು ಯಾವುದೇ ಆದಾರವಿಲ್ಲದೆ ತಮಿಳಿನಲ್ಲಿ ನಡೆದ ’ಸುದಾರಣೆ’ಗೆ ಬಟ್ಟರು ಮಾಡುತ್ತಿರುವ ಕೆಲಸವನ್ನು ಹೋಲಿಸಿದ್ದಾರೆ. ಈಗ ಅವರ ಮುಂದಿರುವ ಪ್ರಶ್ನೆ ವಿಗ್ನಾನದ್ದಲ್ಲ, ಅದರಿಂದ ಹೊರಬಂದ ದಿಟಗಳು ಗಿರೀಶಬಟ್ಟರ ಬಗೆಗಣ್ಣಿನ ಬವಿಶ್ಯದ ಚಿತ್ರಕ್ಕೆ ಒಪ್ಪುತ್ತವೋ ಇಲ್ಲವೋ, ’ಗುಣಾತ್ಮಕ’ವೋ ಇಲ್ಲವೋ ಎಂಬ ಕಾಳಜಿ.
ಆ ಕಾಳಜಿಯಲ್ಲಿ ತಪ್ಪೇನಿಲ್ಲ, ನನಗೂ ಅಂತದ್ದೇ ಕಾಳಜಿಯಿರುವುದು. ಆದರೆ ಯಾವುದನ್ನು ’ಗುಣಾತ್ಮಕತೆ’ ಎಂದು ಗಿರೀಶಬಟ್ಟರು ಕರೆಯುತ್ತಿರುವರೋ ಅದು ಗುಣಾತ್ಮಕತೆಯೇ ಎಂಬ ಪ್ರಶ್ನೆ ಏಳುತ್ತದೆ. ನನ್ನ ಉತ್ತರ “ಅಲ್ಲ, ಅದು ಗುಣಾತ್ಮಕತೆಯಲ್ಲ” ಎಂಬುದು. ಹದಿನೈದು ಒಳ್ಳೆಯ ಬರಹಗಾರರು ಹುಟ್ಟಿಕೊಂಡು, ಕೋಟಿಗಟ್ಟಲೆ ಜನರಿಗೆ ಅರ್ತವಾಗದ ಪದಗಳನ್ನು ಸಂಸ್ಕ್ರುತದಿಂದ ತಂದು ತುರುಕಿ ಹೊತ್ತಗೆಗಳನ್ನು ಬರೆದು, ಅದರಲ್ಲಿ ಕೆಲವಕ್ಕೆ ದೊಡ್ಡದೊಡ್ಡ ಬಿರುದು-ಬಹುಮಾನಗಳನ್ನು ಯಾರಿಂದಲೋ ಸಿಕ್ಕಿಬಿಟ್ಟರೆ ಅದೇನು ಗುಣಾತ್ಮಕತೆಯಲ್ಲ. ಈ ಬಿರುದು-ಬಹುಮಾನಗಳಿಗಿಂತ ಒಂದು ಇಡೀ ನುಡಿಜನಾಂಗವು ತಲೆಯೆತ್ತಿ ತಾನಾಡುವ ನುಡಿಯು ಕೀಳಲ್ಲ ಎಂದು ಎದೆತಟ್ಟಿ ಹೇಳುವುದಾದರೆ ಅದೇ ನನ್ನ ಪಾಲಿಗೆ ಗುಣಾತ್ಮಕತೆ. ಈ ಬಿರುದು-ಬಹುಮಾನಗಳಿಗಿಂತ ಒಂದು ಇಡೀ ಜನಾಂಗದಲ್ಲಿ ಒಂದು ಪಂಗಡವು ಆಡುವ ನುಡಿ ಮೇಲ್ದರ್ಜೆಯದು, ಮಿಕ್ಕೆಲ್ಲ ಪಂಗಡದವರು ಆಡುವ ನುಡಿ ಕೆಳದರ್ಜೆಯದು ಎಂಬ ತಾರತಮ್ಯವಿಲ್ಲದಿದ್ದರೆ ಅದೇ ನನ್ನ ಪಾಲಿಗೆ ಗುಣಾತ್ಮಕತೆ. ಅಂತಹ ಗುಣಾತ್ಮಕತೆಯನ್ನು ತಮಿಳರು ಇಂದು ಪಡೆದುಕೊಂಡಿದ್ದಾರೆ, ಕನ್ನಡಿಗರು ಪಡೆದುಕೊಂಡಿಲ್ಲ. ಬೆರಳೆಣಿಕೆಯ ಕೆಲವರು ಎಲ್ಲಿ “ನಿನಗೆ ನಾಲಗೆಯೇ ಹೊರಳುವುದಿಲ್ಲ! ನಿನಗೆ ಬರವಣಿಗೆ ಎಂದಿಗೂ ಬರುವುದಿಲ್ಲ!” ಎಂದು ಬೈದಾರು ಎಂಬ ಹೆದರಿಕೆಯಿಂದ ಕೋಟಿಗಟ್ಟಲೆ ಕನ್ನಡಿಗರು ಇನ್ನೂ ಬಾಯ್ಬಿಡದೆ, ಬರವಣಿಗೆ ಮಾಡದೆ ಕುಳಿತಿದ್ದಾರೆ. ಇಂತಹ ವಾತಾವರಣದಲ್ಲಿ ಹದಿನೈದು ಒಳ್ಳೆಯ ಬರಹಗಾರರಿಗಾಗಲಿ, ಅವರ ಬಿರುದು-ಬಹುಮಾನಗಳಿಗಾಗಲಿ ಎಶ್ಟು ಬೆಲೆ? ಯಾವುದು ಕೋಟಿಗಟ್ಟಲೆ ಕನ್ನಡಿಗರ ಮನುಷ್ಯತ್ವವನ್ನೇ ಅಲ್ಲಗಳೆದು ಬೆರಳೆಣಿಕೆಯ ಜನರಿಗೆ ಬಿರುದು-ಬಹುಮಾನಗಳನ್ನು ಕೊಡುವುದೋ ಅದರಲ್ಲಿ ಯಾವ ಗುಣಾತ್ಮಕತೆಯಿದೆ?
ತಮಿಳು ಸಾಹಿತ್ಯದ ಮೇಲೆ ಗಿರೀಶಬಟ್ಟರು ಮಾಡಿರುವ ಆರೋಪಗಳನ್ನು ಒಪ್ಪುವ ಇಲ್ಲವೇ ತಳ್ಳಿಹಾಕುವ ಸ್ತಿತಿಯಲ್ಲಿ ನಾನಿಲ್ಲ. ಏಕೆಂದರೆ ತಮಿಳಿನ ಒಬ್ಬ ಸಾಹಿತಿಯನ್ನೂ ನಾನು ಹೆಸರಿಸಲಾರೆ; ನನಗೆ ತಮಿಳು ಬರುವುದೂ ಇಲ್ಲ; ಆದ್ದರಿಂದ ತಮಿಳಿನ ಬರಹಗಾರರ ಸಂಕ್ಯೆ ಮತ್ತು ಅವರ ಬರವಣಿಗೆಯ ಗುಣಮಟ್ಟದ ಬಗ್ಗೆ ನಾನು ತೀರ್ಪು ಕೊಡಲಾರೆ. ಗಿರೀಶಬಟ್ಟರು ತಮಿಳು ಬಲ್ಲವರಾಗಿದ್ದು ತಮಿಳಿನ ಬರವಣಿಗೆಯ ಪ್ರಪಂಚವನ್ನು ಬಹಳ ಹತ್ತಿರದಿಂದ ಗಮನಿಸುತ್ತ ಬಂದಿರುವರೋ ಇಲ್ಲವೋ ಗೊತ್ತಿಲ್ಲ, ಆದರೆ ಅಂತವರಂತೆ ಅವರು ಬರೆದುಕೊಂಡಿರುವುದರಿಂದ ಅದನ್ನು ಒಪ್ಪಬೇಕಶ್ಟೆ! ಅವರು ಹೇಳುವುದು ನಿಜವಾದರೂ ಏನಂತೆ? ಮೇಲೆ ಹೇಳಿದಂತೆ ಸಾಹಿತ್ಯದ ಹದಿನೈದು ಮೇರುಮನುಜರು ಹುಟ್ಟಿಕೊಂಡುಬಿಟ್ಟರೆ ಅದು ಆ ನುಡಿಯ ಹೆಗ್ಗಳಿಕೆಯನ್ನೇನು ತೋರಿಸುವುದಿಲ್ಲ. ಇನ್ನೂ ನಿಜವೇನೆಂದರೆ, ಕೋಟಿಗಟ್ಟಲೆ ಜನರಿಗೆ ಅರಿಯದ ರೀತಿಯಲ್ಲಿ (ಇಲ್ಲವೇ ಅರಿಯದ ನುಡಿಯಲ್ಲಿ) ಬರೆಯುವಂತೆ ಹದಿನೈದು ಜನರಿಗೆ ತರಬೇತಿ ಕೊಟ್ಟುಬಿಟ್ಟು ಬರವಣಿಗೆಯ ಪಂದ್ಯದಲ್ಲಿ ಅವರನ್ನೇ ಗೆಲ್ಲಿಸಿ ತೋರಿಸುವುದು ಕಶ್ಟದ ಕೆಲಸವೂ ಏನಲ್ಲ. ಇಲ್ಲಿ ಗಿರೀಶಬಟ್ಟರು ತಮ್ಮ ಇತ್ತೀಚಿನ ಬರಹದಲ್ಲಿ ಮಾಡಿರುವಂತೆ ಹಲವು ಹಳೆ-ಶಾಲೆಯವರು (ಶ್ರೀ ರಾ ಗಣೇಶ್ ಅವರನ್ನು ಸೇರಿದಂತೆ) ಎಂದಿನಂತೆ ’ದಲಿತ’ಸಾಹಿತಿಗಳೂ ಇವರಲ್ಲಿ ಇದ್ದಾರೆ ಎಂದು ತೋರಿಸುವುದರಿಂದ ಅವರ ವಾದಕ್ಕೆ ಯಾವ ಬಲವೂ ಬಾರದು, ಏಕೆಂದರೆ ಯಾರುಯಾರು ಸಂಸ್ಕ್ರುತಮಯವಾದ ಕನ್ನಡದಲ್ಲಿ ಬರೆಯುವರೋ ಅವರೆಲ್ಲ ಆ ’ಹದಿನೈದು ಜನ’ರಿಗೆ ಸೇರಿದವರೇ – ಅವರು ’ದಲಿತ’ಸಾಹಿಗಳಾಗಿರಲಿ, ಆಗಿಲ್ಲದಿರಲಿ. ಇದನ್ನೇ ಮೊದಮೊದಲು ಬ್ರಿಟಿಶರು ಮಾಡಿದ್ದು – ಇಂಗ್ಲೀಶಿನಲ್ಲಿ. ಕೋಟಿಗಟ್ಟಲೆ ಜನರು ಮಾಡಲಾರದ ಕೆಲಸವನ್ನು ಹದಿನೈದು ಜನರು ಮಾಡಿ ತೋರಿಸಿದರೆ ಅದು ಆ ಜನರ ನುಡಿಯ ಹೆಗ್ಗಳಿಕೆಯೆಂದು ತಿಳಿಯುವುದೇ ತಪ್ಪು. ಬದಲಾಗಿ ಆ ಕೋಟಿಗಟ್ಟಲೆ ಜನರು ಎಲ್ಲರೂ ಮಾಡುವ ಕೆಲಸವನ್ನು ಮಾಡಿ ತೋರಿಸಿದರೆ – ಎಂದರೆ ತಮ್ಮ ನುಡಿಯನ್ನು ಹೆದರಿಕೆಯಿಲ್ಲದೆ, ಕೀಳರಿಮೆಯಿಲ್ಲದೆ ಸದಾಕಾಲ ತಲೆಯೆತ್ತಿ ಆಡಿ ತೋರಿಸಿದರೆ – ಅದೇ ಹೆಗ್ಗಳಿಕೆ. ಆ ಹೆಗ್ಗಳಿಕೆ ಕನ್ನಡಕ್ಕಿಲ್ಲ, ತಮಿಳಿಗಿದೆ. ಆ ಹೆಗ್ಗಳಿಕೆಯನ್ನು ಕನ್ನಡಕ್ಕೆ ತಂದುಕೊಡುವ ಪ್ರಯತ್ನಗಳನ್ನು ’ತಮಿಳಿನ ಮಾದರಿ’ಯಲ್ಲಿ ಮಾಡಿದ ಕೆಲಸಗಳು ಎಂದು ಕರೆಯುವುದಾದರೆ ಹಾಗೇ ಆಗಲಿ. ಹಾಗೆನಿಸಿಕೊಳ್ಳುವುದಕ್ಕೆ ಯಾರಿಗಾದರೂ ಏಕೆ ಬೇಜಾರಿರಬೇಕು?
ಇನ್ನು ಯಾರೋ ಒಬ್ಬ ತಮಿಳನು ಮಿಂಬಲೆಯಲ್ಲಿ ತಮಿಳಿಗೆ ಇನ್ನೂ ಬರಿಗೆಗಳನ್ನು ಸೇರಿಸಬೇಕು ಎಂದು ಬರೆದಿರುವುದನ್ನು ಕನ್ನಡದ ಬರಿಗೆಮಣೆ ಈಗಾಗಲೇ ಚೆನ್ನಾಗಿದೆ ಎಂದು ವಾದಿಸಲು ಗಿರೀಶಬಟ್ಟರು ವಾದದಲ್ಲಿ ಇರಿಸುವುದು ನಗೆ ತರಿಸುವಂತದ್ದು. ಕನ್ನಡದಲ್ಲಿ ಮಹಾಪ್ರಾಣಗಳು, ಋ ಮುಂತಾದವುಗಳು ಬೇಕೇ ಎಂಬ ನೇರವಾದ ಪ್ರಶ್ನೆಗೆ ಅದು ಉತ್ತರವಲ್ಲ. ಅದು ಉತ್ತರವೆಂದು ವಾದಕ್ಕೋಸ್ಕರ ಒಪ್ಪಿದರೂ ಆ ತಮಿಳೋತ್ತಮನೇನಾದರೂ ತಮಿಳು ಬರಿಗೆಮಣೆಗೆ ಮಹಾಪ್ರಾಣ, ಋ ಮುಂತಾದವುಗಳನ್ನು ಸೇರಿಸಬೇಕೆಂದು ಹೇಳುತ್ತ ಇರುವನೇ? ಇಲ್ಲ ತಾನೆ? ಅಲ್ಲದೆ, ಅವನು ತಿಳಿದಿರುವಂತೆ ತಮಿಳರು ಇತರ ನುಡಿಗಳ ಪದಗಳನ್ನು ತಪ್ಪಾಗಿ ಉಲಿಯುತ್ತಾರೆ ಎನ್ನುವುದೇ ತಪ್ಪು. ತಮಿಳರು ತಮಗೆ ಬೇಕಾದಂತೆ ಉಲಿಯುತ್ತಾರೆ, ಅದಕ್ಕೇನಂತೆ? ಅದನ್ನು ತಪ್ಪು ಎನ್ನಲು ಇವನಾಗಲಿ ಮತ್ತೊಬ್ಬನಾಗಲಿ ಯಾವನು? ಒಬ್ಬ ಬ್ರಿಟನ್ನಿನ ಇಲ್ಲವೇ ಫ್ರಾನ್ಸಿನ ವ್ಯಕ್ತಿಯ ಕೈಯಲ್ಲಿ ನಿಮ್ಮ ಮನಸ್ಸು ಒಪ್ಪುವಂತೆ ’ಅಜಕ್ಕಳ ಗಿರೀಶ ಬಟ್ಟ’ ಎನಿಸಿಬಿಡಿ, ನೋಡೋಣ? ಅವರಿಗೆ ಆಗಲಿಲ್ಲ ಎಂದು ಅವರ ನುಡಿಗಳಿಗೆ ಬರಿಗೆಗಳನ್ನು ತುರುಕೋಣವೇ? ಇದು ವೈಗ್ನಾನಿಕತೆಯೇ? ಇದರ ಬದಲಾಗಿ ಜನರು ಉಲಿದಿದ್ದನ್ನು ಕಣ್ಗೊತ್ತಿಗೊಂಡು ಸರಿಯೆಂದು ಒಪ್ಪಿಕೊಳ್ಳುವುದೇ ನುಡಿಯರಿಗರಿಗೂ ಹುಲುಜನರಿಗೂ ಒಪ್ಪುವಂತದ್ದು, ಅದೇ ವೈಗ್ನಾನಿಕತೆಯು.
ನುಡಿಯರಿಮೆಯ ಇನ್ನೂ ಕೆಲವು ಪ್ರಶ್ನೆಗಳಿಗೆ ಉತ್ತರಗಳು
ಒಂದರ್ತದಲ್ಲಿ ಬಳಕೆಯಲ್ಲಿರುವ ಕನ್ನಡದ ಪದಗಳನ್ನು ಬೇರೆಯರ್ತಗಳಲ್ಲಿ ಬಳಸುವುದು ತಮಗೆ ’ಸರಿ ಅನಿಸುವುದಿಲ್ಲ’ವೆಂದು ಗಿರೀಶಬಟ್ಟರು ತಿಳಿಸಿದ್ದಾರೆ. ಸಂತೋಶ. ಆದರೆ ಈಬಗೆಯಲ್ಲಿ ಎಲ್ಲಾ ನುಡಿಗಳಲ್ಲೂ ನಡೆಯುತ್ತಲೇ ಇರುತ್ತವಲ್ಲ? ನುಡಿಯ ಪ್ರಶ್ನೆಗಳಿಗೆಲ್ಲ ಹಳೆ-ಶಾಲೆಯವರೇ ಮಾದರಿ ನುಡಿಯೆನ್ನುವ ಸಂಸ್ಕ್ರುತದಲ್ಲೂ ಹೀಗೇನೇ ನಡೆಯುತ್ತದಲ್ಲ? ಒಂದೇ ಪದವನ್ನು ಸಂದರ್ಬಕ್ಕೆ ತಕ್ಕಂತೆ ಬೇರೆಬೇರೆಯಾಗಿ ಅರ್ತಮಾಡಿಕೊಳ್ಳುವ ಅಳವು ಮನುಶ್ಯನಿಗೆ ಇರುತ್ತದೆ; ಹಾಗೆ ಅರ್ತ ಮಾಡಿಕೊಳ್ಳುವ ಮನುಶ್ಯತನವನ್ನು ಕನ್ನಡಿಗರಿಗೆ ಅಲ್ಲಗಳೆದರೆ ಆಗ ಅದು ’ಸರಿ ಅನಿಸುವುದಿಲ್ಲ’. ಒಮ್ಮೆ ಆ ಮನುಶ್ಯತ್ವವನ್ನು ಕನ್ನಡಿಗರಿಗೆ ಕೊಟ್ಟು ನೋಡಿದರೆ ಸರಿ ಅನಿಸುತ್ತದೆ. ಅಂತಹ ಮನುಶ್ಯತ್ವವನ್ನು ಇಂಗ್ಲೀಶು ಬಲ್ಲವರಿಗೆ ಕೊಟ್ಟೇ ಗಣಕದ ಪಕ್ಕದಲ್ಲಿ ಕೂರುವ ಇಲಿಯಂತಹ ಸಲಕರಣೆಗೆ mouse ಎಂದು ಹೆಸರಿಟ್ಟಿರುವುದು. ನಮ್ಮಲ್ಲಿ ’ಮೂಷಿಕ’ ಎಂದು ಹೆಸರಿಡದೆ ಹೋದರೆ ಅದೇನೋ ಮುಜುಗರ. ಇಲಿಗಿಂತ ಇಲಿಯಾಗಿರಬೇಡವೆ ಮೌಸು? ಆದುದರಿಂದ ’ಮೂಷಿಕ’ವೆನ್ನುವುದೇ ಸರಿಯೆಂದು ಕೆಲವರ ಅನಿಸಿಕೆ.
ಇನ್ನು ಶಂಕರಬಟ್ಟರ ನುಡಿಯರಿಮೆ ಬಣ್ಣನೆಯ ನುಡಿಯರಿಮೆಯಾಗುಳಿಯದೆ (descriptive linguistics) ಅಪ್ಪಣೆಯ ನುಡಿಯರಿಮೆಯಾಗಿಬಿಟ್ಟಿದೆ (prescriptive linguistics) ಎಂದು ಗಿರೀಶಬಟ್ಟರಿಗೆ ಅನಿಸಿರುವುದು ನಿಜವೆಂದು ಒಂದು ವೇಳೆ ಒಪ್ಪಿದರೂ, ಎಂದಿಗೂ ಬಣ್ಣನೆಯ ನುಡಿಯರಿಮೆಯ ಗೋಜಿಗೇ ಹೋಗದೆ ಮೊದಲ ಹೆಜ್ಜೆಯಿಂದಲೇ ಅಪ್ಪಣೆಯ ನುಡಿಯರಿಮೆಯನ್ನು ಕೊಡಮಾಡಿಸುತ್ತ ಸಾವಿರಾರು ವರುಶಗಳನ್ನು ಕಳೆದಿರುವ ಹಳೆ-ಶಾಲೆಗೆ ಶಂಕರಬಟ್ಟರು ಸಾಟಿಯೇ? ಇಲ್ಲವೇ ಬಣ್ಣನೆಯಲ್ಲಿ ಆಳವಾಗಿ ಅರಕೆಯನ್ನು ಮಾಡಿದವರು ಅದರಿಂದ ಕಲಿತ ದಿಟಗಳನ್ನು ಬಳಸಿಕೊಂಡು ಅಪ್ಪಣೆಯ ನುಡಿಯರಿಮೆಯ ಕಡೆಗೆ ಜಾರುವುದೇ ತಪ್ಪೇ? ಯಾವ ಅಪ್ಪಣೆಯು ಅಪ್ಪಣೆಯೆಂದು ಅಪ್ಪಣೆಪಡೆದವರಿಗೆ ಅನ್ನಿಸುವುದಿಲ್ಲವೋ ಅದು ಅಪ್ಪಣೆಯೋ, ಯಾವ ಅಪ್ಪಣೆಯು ಅಪ್ಪಣೆಯಾಗಿ ಅಪ್ಪಣೆಪಡೆದವರಿಗೆ ಹಗಲಿರುಳು ಕಾಡಿ ಅವರಲ್ಲಿ ಕೀಳರಿಮೆಯನ್ನು ಸಾಕಿಕೊಂಡು ಬಂದಿದೆಯೋ ಅದು ಅಪ್ಪಣೆಯೋ?
ಇನ್ನು, ’ಎಲ್ಲ ಪ್ರಭೇದಗಳೂ ಸರಿಯೇ. ಬರೆವಾಗ ತಪ್ಪುಗಳಾಗುವುದು ಕೂಡ ತಪ್ಪಲ್ಲ. ಆದರೆ ತಪ್ಪು ಬರೆಯೋದೇ ಸರಿ ಅಂತ ನೀವು ವಾದಿಸುವುದಾದರೆ (ಇವೆರಡಕ್ಕೆ ವ್ಯತ್ಯಾಸವಿದೆ) ನಾನೇನೂ ಹೇಳಲಾರೆ.’ ಎನ್ನುವ ಗಿರೀಶಬಟ್ಟರಿಗೆ ಒಂದು ವಿಶಯ ಅರ್ತವಾಗುತ್ತಿಲ್ಲ. ಅದೇನೆಂದರೆ, ಬರೆಯುವಾಗ ಯಾವುದು ಸರಿ, ಯಾವುದು ತಪ್ಪು ಎಂದು ಹಳೆ-ಶಾಲೆಯವರು ಏನನ್ನು ಹೇಳಿಕೊಡುತ್ತ ಬಂದಿರುವರೋ ಅದನ್ನೇ ಶಂಕರಬಟ್ಟರು ಪ್ರಶ್ನಿಸುತ್ತ ಇರುವುದು, ಅದನ್ನು ಪ್ರಶ್ನೆ ಮಾಡೇ ಇಲ್ಲಿ ಚರ್ಚೆ ನಡೆಯುತ್ತಿರುವುದು. ಇಶ್ಟೆಲ್ಲ ಕತೆ ಕೇಳಿ ಮತ್ತೆ ತಮ್ಮ ಶಾಲೆಯ ಸರಿ-ತಪ್ಪಿನ ನಿಯಮಗಳೇ ಸರಿ ಎಂದು ತೀರ್ಪನ್ನು ಕೊಡುತ್ತಿರುವುದು ಒಳ್ಳೆಯ ತಮಾಶೆಯಾಗಿದೆ. ಹೀಗೆ ಹೇಳಿದ್ದನ್ನೇ ಹಿಂದೆ ಹೇಳಿತ್ತೆಂಬ ಕಾರಣದಿಂದ ಸರಿಯೆಂದು ತೀರ್ಪು ಕೊಡುವುದು ಹಳೆ-ಶಾಲೆಯವರ ತರ್ಕದ ಪರಿಗಳಲ್ಲಿ ಒಂದು.
ಯಾವುದರಲ್ಲಿ ಮುಂದಿದೆಯೆಂದು ತಿಳಿಯಬೇಕೆ? ಕೇಳಿ.
ಗಿರೀಶಬಟ್ಟರ ಬರಹದ ಶೀರ್ಶಿಕೆಯಲ್ಲಿ ಒಂದು ಪ್ರಶ್ನೆಯನ್ನು ಕೇಳಿದ್ದಾರಲ್ಲ, ಅದನ್ನು ನೇರವಾಗಿ ಉತ್ತರಿಸಿ ನನ್ನ ಬರಹವನ್ನು ಮುಗಿಸುತ್ತೇನೆ. ಅವರು ಕೇಳುವ ಪ್ರಶ್ನೆ “ಕನ್ನಡಕ್ಕಿಂತ ತಮಿಳು ಯಾವುದರಲ್ಲಿ ಮುಂದಿದೆ?” ಎಂಬುದು. ಹೇಳುತ್ತೇನೆ, ಯಾವುದರಲ್ಲಿ ಮುಂದಿದೆ ಎಂದು: ಯೂರೋಪಿನ ನರಹಂತಕರು ಅಮೇರಿಕಕ್ಕೆ ವಲಸೆ ಹೋಗಿ ಅಲ್ಲಿಯ ಬುಡಕಟ್ಟು ಜನಾಂಗದವರನ್ನೆಲ್ಲ ಕೊಂದು, ಅವರ ನೆತ್ತರಿನಿಂದ ಅಮೇರಿಕದ ಮಣ್ಣನ್ನು ತೊಯ್ದು, ಅವರಿದ್ದರು ಎಂಬ ಕುರುಹುಗಳನ್ನೇ ಅಳಿಸಿಹಾಕಿ, ಆ ಮಣ್ಣಿನ ಮೇಲೆ ಮುಗಿಲುಮುಟ್ಟುವ ಜಗಗಗಿಸುವ ತಳತಳಿಸುವ ಕಟ್ಟಡಗಳನ್ನು ಕಟ್ಟಿ ಇಂದು ಅದನ್ನೇ ’ಮುಂದಿರುವಿಕೆ’ ಎಂದು ಕರೆದುಕೊಂಡು ಮೆರೆಯುತ್ತಿದ್ದಾರಲ್ಲ, ಆ ’ಮುಂದಿರುವಿಕೆ’ಯಲ್ಲಿ ಹಿಂದುಳಿದ ಆ ಅಮೇರಿಕದ ಬುಡಕಟ್ಟು ಜನಾಂಗದವರು ಆ ಯೂರೋಪಿಯನ್ನರ ಹೋಲಿಕೆಯಲ್ಲಿ ಯಾವುದರಲ್ಲಿ ಮುಂದಿದ್ದರೋ ಅದರಲ್ಲಿ ತಮಿಳು ಕನ್ನಡಕ್ಕಿಂತ ಮುಂದಿದೆ. ಎಂದರೆ, ಗಿರೀಶಬಟ್ಟರು ಹೇಳುವಂತೆ ಕನ್ನಡಕ್ಕೆ ತಮಿಳಿಗಿಲ್ಲದ ಸಾಹಿತ್ಯದ ಮತ್ತು ಬಿರುದು-ಬಹುಮಾನಗಳ ಕೋಡು ಬಂದಿರಬಹುದು, ಆದರೆ ಜನಸಾಮಾನ್ಯರಿಗೆ ಮನುಷ್ಯತ್ವವನ್ನು ಅಲ್ಲಗಳೆಯದೆ ಇರುವಲ್ಲಿ ತಮಿಳು ಕನ್ನಡಕ್ಕಿಂತ ಮುಂದಿದೆ. ಹೌದು, ಕನ್ನಡನಾಡಿನಲ್ಲೇನು ಅಮೇರಿಕದಲ್ಲಿ ನಡೆದಂತೆ ನೆತ್ತರ ಚೆಲ್ಲಾಟ ನಡೆದಿಲ್ಲ, ಆದರೆ ಅದರ ಬದಲಾಗಿ ಸಮಾಜದಲ್ಲಿ ಮತ್ತು ಅದರ ಗುರುತೆನ್ನಬಹುದಾದ ನುಡಿ-ಬರಹಗಳಲ್ಲಿ ಮೇಲು-ಕೀಳುಗಳು ಏರ್ಪಟ್ಟು ಪ್ರತಿದಿನವೂ ಕನ್ನಡಿಗರ ಮನುಷ್ಯತ್ವವನ್ನೇ ಅಲ್ಲಗಳೆದು ಕಾಡುತ್ತಿವೆ, ಅಶ್ಟೆ.
ಅವುಗಳನ್ನೇ ಮುಂದುವರೆಸಿಕೊಂಡು ಹೋಗುವುದು ಒಳ್ಳೆಯದು ಎಂದು ಹಳೆ-ಶಾಲೆಯವರು ಹೇಳುತ್ತಿರುವಾಗ ವಿಗ್ನಾನವನ್ನು ಸ್ವಲ್ಪವಾದರೂ ಕಲಿತವರು, ಮತ್ತು ನಮ್ಮ ಸಮಾಜದ ಬಗ್ಗೆ ಸ್ವಲ್ಪವಾದರೂ ಕಾಳಜಿಯಿರುವವರು ಅದರ ಅವೈಗ್ನಾನಿಕತೆ ಮತ್ತು ಅದು ಮುಂದುವರೆಸುತ್ತಿರುವ ಸಾಮಾಜಿಕ ಅನ್ಯಾಯವನ್ನು ಪ್ರಶ್ನಿಸದೆ ಇರಲಾರರು. ಇಂತವರ ಶಾಲೆಯೇ ನಾನು ಹೆಸರಿಸಿರುವ ’ಹೊಸ ಶಾಲೆ’.
ಬಾಗಿಲು ತೆಗೆದಿದೆ, ಯುಗಾದಿಗೆ ಮಾವಿನ ತೋರಣವೂ ಹಾಕಿದೆ. ಹೊಸ ಯುಗಕ್ಕೆ ಕಾಲಿಡೋಣ, ಹದುಳ ಬನ್ನಿ.
ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಾ ಕಿರಣ್, ಭಾಷೆ ಆಧಾರಿತ ಯಾವುದೇ ಸುಧಾರಣೆಯನ್ನು ಇಲ್ಲ ನಮ್ಮದಲ್ಲದ ಭಾಷೆಯನ್ನು ಒಪ್ಪುದಿರುವ ದೃಷ್ಟಿಕೋನವನ್ನು ಬಹಳ ಸುಲಭವಾಗಿ “ತಮಿಳರ ಮಾದರಿ” ಎಂದು ಬ್ರಾಂಡ್ ಮಾಡುತ್ತಾರೆ. ಅದರಲ್ಲೂ ಮುಖ್ಯವಾಗಿ ಇದನ್ನು ಹಳೆಯ ಶಾಲೆಯ ಅನೇಕ ಪಂಡಿತರ ಶೈಲಿಯಲ್ಲಿ ನೋದಿದ್ದೇನೆ. ಹಾಗೆ ಮಾಡಿದರೆ ಅದನ್ನು ಓದುವ ಜನರಿಗೆ ಮೊದಲಿಗೆ ತಮಿಳರು ಎಂದರೆ ಒಂದು ಮೈಲಿ ದೂರ, ಯಾವತ್ತು ಕನ್ನಡಿಗ ತಮಿಳಿಗನ ಹಾಗೆ ಆಗಬಾರದು ಎಂದುಕೊಳ್ಳುವ ಮನೋಬುದ್ದಿಯನ್ನು ಒಳಗೊಂಡಿರುತ್ತಾನೆ, ಅದನ್ನು ಬಳಸಿಕೊಂಡು, ನೋಡಿ ನೀವು ಭಾಶೆಯಲ್ಲಿ ಈ ಸುಧಾರಣೆ ತಂದರೆ ತಮಿಳರ ತರ ಆಗುತ್ತಿರಾ , ನಿಮಗೆ ಹಾಗೆ ಆಗಬೇಕಾ ಎಂಬ ತಾರ್ಕಿಕ ವಾದವನ್ನು ಮುಂದಿಡುತ್ತಾರೆ. ಯಾವಗ ವಿಶಯಧರಿತ ವಾದ ಮಾಡಲು ಆಗುವದಿಲ್ಲವೋ ಆಗ ಈ ಬ್ರ್ಯಾಂಡ್ ಸಂಸ್ಜೃತಿಯನ್ನು ನಾವು ಕಾಣಬಹುದು. ಯಾಕೆಂದರೆ ವಾದ ಮಾಡುವ ಹಳೆ ಶಾಲೆಯ ಜನರ ಬತ್ತಳಿಕೆಯಲ್ಲಿ ಇರುವ ಅಸ್ತ್ರಗಳೇ ಕಮ್ಮಿ.
ಭಾಷೆಯು ಕೇವಲ ಒಂದು ವರ್ಗದ ಆಸ್ತಿ, ಅದನ್ನು ಯಾರು ಮುಟ್ಟಬಾರದು, ಅದೊಂದು ದೇವರ ವಿಗ್ರಹ ಇದ್ದ ಹಾಗೆ, ಯಾವುದೇ ಹೊಸ ಪ್ರಯೋಗಗಳು ವಿಗ್ರಹಕ್ಕೆ ಬಿನ್ನ ತಂದು ಅದರ ಪೂಜಾಸ್ಥಿತಿಯನ್ನು ಹಾಳು ಮಾಡುತ್ತದೆ ಎನ್ನುವ ವಾದ ಇವತ್ತಿನ ಯುಗದಲ್ಲಿ ಹಳೆಯದು ಮತ್ತು ಹಳಸಿರುವುದು.
ಶ್ಯ್.. ನಿಮ್ಮ ಬರವನಿಗೆಯಲ್ಲಿ ತುಂಬಾ ಸಕ್ಕದದ ತೂರಿಕೆಯಾಗಿದೆ. ಅವನ್ನು ಸರಿಪಡಿಸಿಕೊಲ್ಲಿ ಮೊದಲು.
ಮಹೇಶ್,
ನಿಮ್ಮ ವ್ಯಂಗ್ಯ ನೋಡಿದರೆ ಮಕ್ಕಳು ವೆವ್ವವ್ವೆವೆವೆವ್ ಅಂತ ಹೇಳಿದನ್ನು ಮತ್ತೆ ಹೇಳುವ ಪ್ರಯತ್ನ ಹಾಗೆ ಕಾಣುತ್ತದೆ. ಇದು ನಿಮಗೆ ವಾದ ಮಾಡಲು ಸರಕು ಖಾಲಿ ಆದಾಗ ಕಾಮೆಂಟ್ ಹಾಕಿದ ರೀತಿ ಇದೆ. ನೋಡಿ ಇನ್ನೋಮ್ಮೆ ಇದಕ್ಕಿಂತ ಚೆನ್ನಾಗಿ ಬರೆಯಬಹುದು, ಆಗದಿದ್ದಲ್ಲಿ ಮುಂದುವರೆಸಿ ನಿಮ್ಮ ವೆವ್ವೆವೆವ್ವೆವೆ …
ಆಯ್ತು… ನನಗೆ ಈ ಚರ್ಚೆಯಲ್ಲಿ ಆಸಕ್ತಿ ಇಲ್ಲ. ತೊಂದರೆ ಕೊಟ್ಟಿದ್ದಕ್ಕೆ ಕ್ಷಮೆಯಿರಲಿ. ವೆವ್ವೆವ್ವೆವೆವ್ವೆವ್..
ಕಿರಣ್,
ಚನ್ನಾಗಿದೆ..
ಕಿರಣ್..
ಬರಹದ ಹುರುಳು ಚನ್ನಾಗಿದೆ.. ಶಂಕರಬಟ್ಟರ ಹೊಸಗನ್ನಡದ ಬರವಣಿಗೆಯಲ್ಲಿ ಬಂದಿರುವುದು ತುಂಬಾ ಚನ್ನಾಗಿದೆ.
ನನಗೆ ಕೆಲವು ಕೇಳ್ವಿಗಳಿವೆ. ಅದನ್ನು ಬಳಿಕೆ ಕೇಳುವೆನು.
ಹೊಸಶಾಲೆ ಎಂದರೆ ಬರೀ ಅಕ್ಕರದ ಕಡಿತ ಅಶ್ಟೇ ಅಲ್ಲ,ಅದು ಪದವುಟ್ಟು, ಸಾಲುಕಟ್ಟು ಹಾಗು ಸಾಲುಗಳಿಂದಾಗುವ ಬರಹಕಟ್ಟುಗಳ ಬಗ್ಗೆಯೂ ಆರಯ್ಯು ಹಾಗು ಹೊಸನೋಟ ಬೀರುವುದು. ಈ ಸಂಗತಿಯನ್ನು ಕೆ.ವಿ.ನಾರಾಯಣ ಅವರು ಬನವಾಸಿ ಬಳಗದವರು ನಡೆಸಿದ “ನುಡಿಯರಿಮೆ ಮತ್ತು ಕಲಿಕೆ” ಆಗುಹದ ವಿಡಿಯೋ ಒಂದರಲ್ಲಿ ಹೇಳಿದ್ದಾರೆ.. ಆ ಬಗ್ಗೆ ನೀವು ಒಂದು ಬರಹವನ್ನು ಹೊತ್ತುಬಿಡುವು ಆದ ಬರೆಯಿರಿ ಎಂದು ಕೋರಿಕೆ. ಆ ಒಟ್ಟುನೋಟದಲ್ಲಿ ಕನ್ನಡ-ಹೊಸ-ಶಾಲೆ ಮೇರುಮಟ್ಟದಲ್ಲಿರುವ ಮೊಗಸು…
ನನ್ನಿ..
ಕಿರಣರವರೆ,
ನಿಮ್ಮ ಬರಹ ತುಂಬ ಚೆನ್ನಾಗಿ ಬಂದಿದೆ.
“ಈ ಬಿರುದು-ಬಹುಮಾನಗಳಿಗಿಂತ ಒಂದು ಇಡೀ ನುಡಿಜನಾಂಗವು ತಲೆಯೆತ್ತಿ ತಾನಾಡುವ ನುಡಿಯು ಕೀಳಲ್ಲ”
“ಆದರೆ ಜನಸಾಮಾನ್ಯರಿಗೆ ಮನುಷ್ಯತ್ವವನ್ನು ಅಲ್ಲಗಳೆಯದೆ ಇರುವಲ್ಲಿ ತಮಿಳು ಕನ್ನಡಕ್ಕಿಂತ ಮುಂದಿದೆ”
ನೀವು ಹೇಳಿರುವ ಈ ಮಾತುಗಳಿಗೆ ಇನ್ನಶ್ಟು ಇಂಬು ಕೊಡಲು ಮೊಗಸುತ್ತೇನೆ.
ತಮಿಳರು ’ಹಿಂದಿ ಹೇರಿಕೆ’ಯನ್ನು ಚೆನ್ನಾಗಿ ವಿರೋದಿಸಿ ಬಾರತದಲ್ಲಿ ಒಕ್ಕೂಟ(ಒಪ್ಪುಕೂಟ)ವನ್ನು ಉಳಿಸುವಲ್ಲಿ ತಮ್ಮ ಕೊಡುಗೆಯನ್ನ ಕೊಟ್ಟಿದ್ದಾರೆ. ಇದರಲ್ಲಿ ತಮಿಳರು ಕನ್ನಡಿಗರಿಗಿಂತ ಮುಂದು ಎನ್ನುವುದರಲ್ಲಿ ನನಗೆ ಯಾವ ಹಿಂಜರಿಕೆಯಿಲ್ಲ. ತಮಿಳರು ತಮ್ಮನ್ನಲ್ಲದೆ ಕನ್ನಡಿಗರನ್ನ, ತೆಲುಗರನ್ನ ಹಿಂದಿ ಹೇರಿಕೆಯಿಂದ ಕಾಪಾಡಿ ಒಕ್ಕೂಟ ವೆವಸ್ತೆಯನ್ನು ದಿಟವಾದ ಅರ್ತದಲ್ಲಿ ಬಲಗೊಳಿಸಿದ್ದಾರೆ. ಇದನ್ನ ನಾವು ಅರ್ತ ಮಾಡಿಕೊಳ್ಳಬೇಕು. ಇದಕ್ಕೆ ಅವರಲ್ಲಿರುವ ತಮಿಳು ಪ್ರಗ್ನೆಯೇ ಮತ್ತು ತಮಿಳು ಹಿಂದಿಗಿಂತ ಯಾವ ತರದಲ್ಲೂ ಕೀಳಲ್ಲ ಎಂಬ ಅರಿವು ಇರುವುದು.
ಒಕ್ಕೂಟವನ್ನು ಉಳಿಸಿ, ಬಲಗೊಳಿಸುವುದು ಮನುಶ್ಯತ್ವದ ಮತ್ತು ಮಂದಿಯಾಳ್ವಿಕೆಯ(democratic)ತತ್ವಗಳನ್ನು ಎತ್ತಿಹಿಡಿಯುವುದೇ ಆಗಿದೆ.
” ಒಬ್ಬ ಬ್ರಿಟನ್ನಿನ ಇಲ್ಲವೇ ಫ್ರಾನ್ಸಿನ ವ್ಯಕ್ತಿಯ ಕೈಯಲ್ಲಿ ನಿಮ್ಮ ಮನಸ್ಸು ಒಪ್ಪುವಂತೆ ’ಅಜಕ್ಕಳ ಗಿರೀಶ ಬಟ್ಟ’ ಎನಿಸಿಬಿಡಿ, ನೋಡೋಣ”
ಬ್ರಿಟನ್,ಪ್ರಾನ್ಸ್ ಬ್ಯಾಡ. ಡೆಲ್ಲಿಯವನೊ, ಬಿಹಾರದವನೊ ಸರಿಯಾಗಿ ’ಅಜಕ್ಕಳ’ ಅಂತ ಉಲಿಯುತ್ತಾನ?
ನನ್ನ ಹೆಸರು(ಬರತ್) ಹೊರದೇಶದವರ ಬಾಯಲ್ಲಿ ಹಲವು ರೂಪ ತಾಳಿವೆ: ಬ್ಯಾರಟ್, ಬರಾತ್, ಬೊರಾತ್ 🙂
ಈ ಬರಅ (ಬರಹ) ಓದಿದ ಮೇಲೆ ನಾನು ಕಲಿಕಾ ಕಟ್ಟಡ (ಶಾಲೆ) ದಲ್ಲಿ ಕನ್ನಡವನ್ನು ಕಲಿತಿದ್ದು ನಿರರ್ತಕ ಅಂತ ಅನಿಸಲು ಶುರುವಾಗಿದೆ. ಏನ್ಮಾಡೋದು?
ಇಂತಾ ತಿಲುವಲಿಕೆಗಾರರನ್ನು ಉಟ್ಟಿಸಿದ ಬಾರತದ ಅಮ್ಮ, ಮನ್ನಿಸಿ ಕನ್ನಡಮ್ಮ ನಿಜಕ್ಕೂ ದೊಡ್ಡವಳಾಗಿದ್ದಾಳೆ!
ಮಹೇಶ ಪ್ರಸಾದ ನೀರ್ಕಜೆಯವರೆ,
ತಾವು ಈ ಬರಹದಲ್ಲಿ ಬಂದಿರುವ ವಿಶಯಗಳನ್ನು ಓದಿ, ಅರಿತು ತಮ್ಮ ವಾದವನ್ನು ಮಂಡಿಸಿ ಒಂದು ಒಳ್ಳೆಯ ಚರ್ಚೆಯಲ್ಲಿ ಪಾಲ್ಗೊಳ್ಳಿ.
-ಬರತ್
ನನ್ನ ವಾದ ನಿಲುಮೆಯಲ್ಲೇ ಬೇರೆ ಕಡೆ ಬರೆದಿದ್ದೇನೆ. ಅಜಕ್ಕಳ ಗಿರೀಶ ಭಟ್ಟರ ವಾದಕ್ಕೆ ನನ್ನದು ಸಹಮತವಿದೆ. ಹಾಗಂತ ಶಂಕರ ಭಟ್ಟರ ವಿರೋಧಿ ಅಂತಲ್ಲ. ಅವರು ಏನು ಹೇಳಿದ್ದಾರೋ ತಿಳಿಯದು. ಕನ್ನಡ ಈಗ ಹೇಗೆ ಇದೆಯೋ ಅದನ್ನು ಬದಲಾಯಿಸಬೇಕೆಂದು (ಈ ಲೇಖನದಲ್ಲಿ ಚಿತ್ರ ವಿಚಿತ್ರವಾಗಿ ಬರೆದಿದ್ದಾರಲ್ಲ, ಹಾಗೆ) ಅವರು ಹೇಳಿದ್ದರೆ ಅದಕ್ಕೆ ನನ್ನ ವಿರೋಧವಿದೆ. ಅಗತ್ಯವಿಲ್ಲದ ಸಂಸ್ಕೃತ/ಇಂಗ್ಲಿಷ್ ಪದಗಳ ಬಳಕೆ ಕಡಿಮೆ ಮಾಡಲು ಮಾತ್ರ ನನ್ನ ಸಹಮತ.
ಮಹೇಶ ಪ್ರಸಾದ ನೀರ್ಕಜೆಯವರೆ,
“ಅವರು ಏನು ಹೇಳಿದ್ದಾರೋ ತಿಳಿಯದು ”
ಹಾಗಾದರೆ ಶಂಕರಬಟ್ಟರು ಬರೆದಿರುವ ಹೊತ್ತೆಗೆಗಳನ್ನು ಮೊದಲು ಓದಿ. ಯಾಕಂದರೆ ಈ ಬರಹವನ್ನು ಸರಿಯಾಗಿ ಅರಿತುಕೊಳ್ಳಬೇಕಾದರೆ ನಿಮಗೆ ಆ ಓದು ಬೇಕು. ನೀವು ಶಂಕರಬಟ್ಟರ ಹೊತ್ತೆಗೆಗಳನ್ನು ಓದದೆ ಅದರ ಬಗ್ಗೇನೆ(ಸೊಲ್ಲರಿಮೆ/ವ್ಯಾಕರಣದ)ಇರುವ ಒಂದು ಬರಹದ ಬಗ್ಗೆ ’ನಗೆ’ದಾಟಿಯಲ್ಲಿ ಕಮೆಂಟು ಹಾಕುವುದು ಎಶ್ಟು ಸರಿ ? ಇದನ್ನ ನಿಮಗೇ ನೀವು ಕೇಳಿಕೊಳ್ಳಬೇಕಾಗುತ್ತದೆ
-ಬರತ್
ಮಹೇಶ ಪ್ರಸಾದ್ ಅವರೇ,
ವಿಷಯದ ಬಗ್ಗೆ ತಿಳಿದಿಲ್ಲ ಎನ್ನೋದು ನೀವೇ ಒಪ್ಪಿಕೊಂಡಿದ್ದೀರಾ.
ವಿಷಯದ ಬಗ್ಗೆ ತಿಳಿಯಲು ನೀವು ಪ್ರಯತ್ನ ಪಡಿ. ತಿಳಿದ ಮೇಲೆ ನೀವು ಚರ್ಚೆಯಲ್ಲಿ ಪಾಲ್ಗೊಳ್ಳಿ.
ಅಲ್ಲೀವರೆಗೂ, ಚರ್ಚೆಯಲ್ಲಿ ಬಂದು ನಿಮ್ಮ ಸಮಯ ಹಾಳು ಮಾಡಬೇಡಿ.
ಹೌದು ಗುರು, ನೀನ್ ಹೇಳೋದು ದಿಟ. ನಿನ್ನ ಹುಟ್ಟಿಸಿದ ಬಾರತದ ಅಮ್ಮ ದಡ್ಡ ಆಗಿದ್ದಾಳೆ,
ತೊಂದ್ರೆ ಇಲ್ಲ. ನಂಗೆ ನನ್ನ ದಡ್ಡ ಅಮ್ಮನೇ ಪ್ರೀತಿ. ನಿಮ್ಮಂಗೆ ಅಂದ ಇಲ್ಲ ಅಂತ ಅಮ್ಮನನ್ನೇ ಬದಲಾಯಿಸುವ ಬುಧ್ದಿ ನನಗಿಲ್ಲ.
nilume
ee mahEsh avara comments aLisi. iMthaa vyaMgya charsheya bhaaga alla taane?
ತಮ್ಮ ಕಡೆಯವರು ನಿಲುಮೆಲಿ ಬೇರೆ ಕಡೆ ಬರೆದಿರುವ ವ್ಯಂಗ್ಯ, ಸುಳ್ಳುಗಳನ್ನು ಏನು ಮಾಡಬೇಕು ಗುರುವೇ?
ಇರಲಿ. ಹಳೇ ವಿಷಯ ಕೆದಕಲು ಹೋಗುವುದಿಲ್ಲ. ಈಗೀಗ ಒಳ್ಳೆ ಚರ್ಚೆಯಾಗುತ್ತಿದೆ. ನನ್ನ ಮಾತನ್ನು ಹಿಂತೆಗೆದುಕೊಳ್ಳುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ.
namma kaDe nimma kaDe Enilla mahesh, naavellaa nimma kaDEne… ellara guri oMdE. bhinna daari aShTe. nanna comment hurt maaDiddare sorry.
ಇಲ್ಲಿ ಕಾಮೆಂಟ್ ಗಳನ್ನು ನೋಡಿ ನನಗನ್ನಿಸಿದ್ದು, ಎಲ್ಲರೂ ಸಂಸ್ಕೃತ ವನ್ನ ವಿರೋದಿಸಲು ಕನ್ನಡದ ಬದಲಾವಣೆ ಬಯಸುತ್ತಿರುವುದು !!!!!
ಹೀಗೆ ಈ ಈರ್ಷೆ ಇಟ್ಟುಕೊಂಡು ಮುಂದಡಿಯಿಟ್ಟರೆ ಖಂಡಿತವಾಗೂ ಕನ್ನಡಕ್ಕೆ ನಷ್ಟ ಆಗುತ್ತದೆ. ಯಾವಾಗಲೂ ಬದಲಾವಣೆ ಇನ್ನೊಂದನ್ನು ವಿರೋಧಿಸುವುದಕ್ಕಾಗಿ ಬರಬಾರದು ….ಅದು ಸ್ವ ಉದ್ದಾರದ ಉದ್ದೇಶ ಮಾತ್ರ ಹೊಂದಿರಬೇಕು ಆಗ ಮಾತ್ರ ಆ ಬದಲಾವಣೆ ಬೆಳವಣಿಗೆಗೆ ಸಹಕಾರಿ ಆಗುತ್ತದೆ.
ಆದರೂ ಸಂಸ್ಕ್ಹೃತದ ಬಗ್ಗೆ ಯಾಕೆ ಇಷ್ಟೊಂದು ದ್ವೇಷ ಗೊತ್ತಾಗಲಿಲ್ಲ !!!! ಅದೇನು ದ್ರೋಹ ಮಾಡಿದೆಯೋ ಇವರಿಗೆ? ದೇವರೇ ಬಲ್ಲ !!! ದ್ವೇಷಿಸುವವರಿಗೆ ಅಂತೂ ಖಂಡಿತ ಗೊತ್ತಿಲ್ಲ ಅಂತ ಖಡಾ ಖಂಡಿತ ವಾಗಿ ಹೇಳಬಲ್ಲೆ !!!!!
ಶಾಂತಿ ಅವರೇ,
ಈ ಬರಹದಲ್ಲಿ ನಿಮಗೆ ‘ಸಂಸ್ಕೃತ ದ್ವೇಷ’ ಎಲ್ಲಿ ಕಾಣಿಸಿತೋ ಗೊತ್ತಿಲ್ಲ.
ಇನ್ನೊಂದು ಬರಹದಲ್ಲೂ ನಿಮ್ಮ ಕಾಮೆಂಟುಗಳನ್ನು ನೋಡಿದ್ದೇನೆ. ಹಾಗಾಗಿ ನನಗನಿಸಿದ್ದು, ನೀವು ನುಡಿಯರಿಮೆಯ ಬಗ್ಗೆ ಹೆಚ್ಚು ತಿಳಿದುಕೊಂಡಿಲ್ಲ ಎಂಬುದು.
ನುಡಿಯರಿಗರು ಅಧ್ಯಯನದ ಮೂಲಕ ಕಂಡುಕೊಂಡು ಸೂಚಿಸಿರೋ ಸುದಾರಣೆಗಳು ಒಂದು ಸಮುದಾಯಕ್ಕೆ ಹೇಗೆ ಒಳಿತಾಗುತ್ತವೆ ಎಂಬ ಚರ್ಚೆ ಇದಾಗಿದೆ.
ಇದಕ್ಕೆ, ಇನ್ನೊಂದು ಭಾಷೆಯ ದ್ವೇಷ ಎಂಬ ಹಣೆಪಟ್ಟ ಕಟ್ಟುವ ಮುಂಚೆ, ನುಡಿಯರಿಗರ ಬಗ್ಗೆ, ಮತ್ತವರ ಕೆಲಸದ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದು ಒಳಿತು.
ಧನ್ಯವಾದಗಳು,
ಪ್ರಿಯಾಂಕ್
“ಸಂಸ್ಕೃತ ದ್ವೇಷ” ಇಲ್ಲದಿದ್ದರೆ ಸಂಸ್ಕೃತ ಮಾದರಿಯಲ್ಲಿರುವ ಪದಗಳನ್ನು ಯಾಕೆ ಬದಲಾಯಿಸಬೇಕು? ಭಾಷಾ ವಿಜ್ನಾನಿಗಳು ಅನ್ನೋದು ಬಿಟ್ಟು ಈ “ನುಡಿಯರಿಗರು” ಏಕೆ? ರಸ್ತೆಯಲ್ಲಿ ಹೋಗೋ ಕನ್ನಡಿಗನನ್ನ ಈ ಎರಡು ಶಬ್ದಗಳನ್ನು ಕೇಳಿ ನೋಡಿ. ಯಾವುದು ಅರ್ಥ ಆಗುತ್ತೆ ಅಂತ. ಎಲ್ಲರಿಗೂ ಅರ್ಥ ಆಗುವ ಸರಳ ನುಡಿ ಬೇಕು ಅನ್ನುವವರೇ ಈವರೆಗೆ ಯಾರೂ ಕಂಡು ಕೇಳಿಲ್ಲದ ಪದಗಳನ್ನು ಹೇರುವುದು ಯಾಕೆ? ಅದೂ ಅಧ್ಯಯನದ ಹೆಸರಿನಲ್ಲಿ?
ಈ ಮೊದಲೇ ಅರಿಯದೇ ತಪ್ಪು ಕನ್ನಡ ಕಲಿತ ನನ್ನಂಥವರಿಗೆ ನಿಮ್ಮ ಹೊಸ ಕನ್ನಡ ಕಲಿಸುವ ಕೆಲಸ ಯಾರು ಮಾಡುತ್ತಾರೆ? ಅದಕ್ಕೆ ಎಷ್ಟು ದುಡ್ಡು ದಂಡವಾಗಬೇಕು?
ಸ್ವಾಮಿ ಮಹೇಶ ಪ್ರಸಾದ ನೀರ್ಕಜೆಯವರೆ,
ನುಡಿ ,ಅರಿವು, ಇಗ(ಹಾವಾಡಿಗ,ಲೆಕ್ಕಿಗ, ಗಾಣಿಗ) ಈ ಪದಗಳು ನಿಮಗೆ ಗೊತ್ತಿಲ್ಲವೆ? ಇದನ್ನ ಹೊಸದಾಗಿ ಕಲಿಸಬೇಕೆ? ಈ ಮೇಲಿನ ಪದಗಳು ಕನ್ನಡವಲ್ಲವೆ?
ಕನ್ನಡದ ಪದಗಳನ್ನೇ ಬಳಸಿದರೆ ಸಂಸ್ಕ್ರುತದ ಹಗೆ ಹೇಗಾಗುತ್ತದೆ?
> ನುಡಿ ,ಅರಿವು, ಇಗ(ಹಾವಾಡಿಗ,ಲೆಕ್ಕಿಗ, ಗಾಣಿಗ) ಈ ಪದಗಳು ನಿಮಗೆ ಗೊತ್ತಿಲ್ಲವೆ?
ಭಾಷಾ ವಿಜ್ಞಾನಿ ಎಂದರೇನು ತಪ್ಪು?
ಸಾಮಾನ್ಯರಿಗೂ ’ವಿಜ್ಞಾನಿ’ ಪದದ ಪರಿಚಯವಿದೆಯಲ್ಲವೆ?
ನರೇಂದ್ರರೆ,
“ಭಾಷಾ ವಿಜ್ಞಾನಿ ಎಂದರೇನು ತಪ್ಪು?..”
ಯಾರು ಹೇಳಿದ್ದು ತಪ್ಪು ಅಂತ? ಆದರೆ ಆ ಪದ ಹೆಚ್ಚು ಕನ್ನಡಿಗರ ಬಾಯಲ್ಲಿ ಅದು ’ಬಾಶಾವಿಗ್ನಾನಿ’ಯಾಗುತ್ತದೆ. ಹಾಗಾಗಿ ಅದನ್ನ ಹಾಗೆ ಬರೆದರೇನು ತಪ್ಪು?
“ಭಾಷಾ ವಿಜ್ಞಾನಿ”, ’ನುಡಿಯರಿಗ’ ಎರಡೂ ಪದಗಳನ್ನ ಜನರ ಮುಂದಿಡಿ. ಕಿರಣ್ ಹೇಳಿದ ಹಾಗೆ ಕೊನೆಗೆ ಜನರೇ ಯಾವುದು ಬೇಕು ಅದನ್ನ ತೆಗೆದುಕೊಳ್ಳುತ್ತಾರೆ.
ಅದು ಬಿಟ್ಟು ಮಹೇಶ ಪ್ರಸಾದ ನೀರ್ಕಜೆಯವರು ಹೇಳಿದ ಹಾಗೆ ’ನುಡಿಯರಿಗ’ ಪದವನ್ನ ಬಳಸಲೇಬಾರದು ಅದು ಸಂಸ್ಕ್ರುತ ವಿರೋದಿ ಅನ್ನುವುದರಲ್ಲಿ ಏನಾದರೂ ಅರ್ತ ಇದಿಯ?
-ಬರತ್
> “ಭಾಷಾ ವಿಜ್ಞಾನಿ”, ’ನುಡಿಯರಿಗ’ ಎರಡೂ ಪದಗಳನ್ನ ಜನರ ಮುಂದಿಡಿ. ಕಿರಣ್ ಹೇಳಿದ ಹಾಗೆ ಕೊನೆಗೆ ಜನರೇ ಯಾವುದು ಬೇಕು ಅದನ್ನ ತೆಗೆದುಕೊಳ್ಳುತ್ತಾರೆ.
ಒಪ್ಪಿದೆ.
> ಅದು ಬಿಟ್ಟು ಮಹೇಶ ಪ್ರಸಾದ ನೀರ್ಕಜೆಯವರು ಹೇಳಿದ ಹಾಗೆ ’ನುಡಿಯರಿಗ’ ಪದವನ್ನ ಬಳಸಲೇಬಾರದು
> ಅದು ಸಂಸ್ಕ್ರುತ ವಿರೋದಿ ಅನ್ನುವುದರಲ್ಲಿ ಏನಾದರೂ ಅರ್ತ ಇದಿಯ?
ಮಹೇಶ ಪ್ರಸಾದ್ ಅವರು ಆ ರೀತಿ ಹೇಳಿದ್ದು ನನಗೆಲ್ಲೂ ಕಾಣಿಸುತ್ತಿಲ್ಲ.
“ಭಾಷಾ ವಿಜ್ಞಾನಿ” ಎನ್ನುವ ಪದ ಸಂಸ್ಕೃತ ಮೂಲದ್ದಾದ್ದರಿಂದ ಅದರ ಬದಲು “ನುಡಿಯರಿಗ” ಪದವನ್ನು ನೀವು ಹುಟ್ಟುಹಾಕುತ್ತಿರುವಿರಿ;
ಕೇವಲ “ಸಂಸ್ಕೃತ ಮೂಲ” ಎನ್ನುವ ಕಾರಣಕ್ಕಾಗಿ ಸಾಮಾನ್ಯವಾಗಿ ಉಪಯೋಗಿಸುವ, ಎಲ್ಲರಿಗೂ ಅರ್ಥವಾಗುವ ಪದವನ್ನು ಬಿಟ್ಟು,
ಹೊಸ ಪದವನ್ನು ಹುಟ್ಟುಹಾಕುವುದು ಸರಿಯಲ್ಲ ಎನ್ನುವುದು ಅವರು ಮಾತಿನ ಅರ್ಥ, ಎಂದು ನನಗನ್ನಿಸುತ್ತದೆ.
ಅವರಿಗೆ ಆ ರೀತಿಯ ಭಾವನೆ ಬಂದಿದ್ದರೆ ಅದರಲ್ಲಿ ಅವರ ತಪ್ಪೇನೂ ಇಲ್ಲ ಅಲ್ಲವೆ? ಅದನ್ನು ನೀವೇಕೆ ನಿವಾರಿಸಬಾರದು?
ಈ ಹಿಂದೆ ನಡೆದ ಚರ್ಚೆಗಳಲ್ಲಿ ಬಂದ ಅನೇಕ ಕಾಮೆಂಟುಗಳು, ಈ ರೀತಿಯ ಭಾವನೆಯನ್ನು ಮೂಡಿಸಿವೆ.
ಇದನ್ನೆ ಮತ್ತೆ ಹೇಳ್ತಾ ಇದೀನಿ
ನೀರ್ಕಜೆಯವರ ಕಾಮೆಂಟ್ ನೋಡಿ
“ಸಂಸ್ಕೃತ ದ್ವೇಷ” ಇಲ್ಲದಿದ್ದರೆ ಸಂಸ್ಕೃತ ಮಾದರಿಯಲ್ಲಿರುವ ಪದಗಳನ್ನು ಯಾಕೆ ಬದಲಾಯಿಸಬೇಕು? ಭಾಷಾ ವಿಜ್ನಾನಿಗಳು ಅನ್ನೋದು ಬಿಟ್ಟು ಈ “ನುಡಿಯರಿಗರು” ಏಕೆ?”
ನುಡಿಯರಿಗ, ಬಾಶಾವಿಗ್ನಾನಿ ವಿರೋದೀ ಪದಗಳಲ್ಲ. ಎರಡೂ ಇರಬಹುದು. ಆದರೆ ಹೆಚ್ಚು ಯಾವುದು ಸುಲಬವಾಗಿರುತ್ತೊ/ಸರಿಯಿರುತ್ತೊ ಅದನ ಜನ ಒಪ್ಕೊತಾರೆ.
ಈಗ ಕನ್ನಡದಲ್ಲಿ ನೀರು ಎಂಬ ಪದ ಇದ್ದರೂ ’ಜಲ’ ಎಂಬ ಪದವನ್ನ ಕನ್ನಡ ಬರಹಗಳಲ್ಲಿ ಬಳಸಿಲ್ಲವೆ. ಹಾಗಂತ ನಾವು ದಿನ ’ನೀರು’ ಅಂತ ಅನ್ನುವುದನ್ನ ಬಿಟ್ಟಿದ್ದೀವ್ಯೆ. ಹಾಗೆ
ನುಡಿಯರಿಗೆ, ಬಾಶಾವಿಗ್ನಾನಿ ಯಾವುದು ಬೇಕೊ ಜನ ಇಟ್ಕೊತಾರೆ. ಆದರೆ ’ನುಡಿಯರಿಗ’ ಪದ ಬ್ಯಾಡಲೇ ಬೇಡ ಅನ್ನೋದು ಸರಿಯೆ? ಇದು ಕನ್ನಡ ದ್ವೇಶ ಅಂತ ಹೇಳಬಹುದಲ್ಲವೆ?
“ನುಡಿಯರಿಗ” ಬಳಸಲೇಬಾರದೆಂದು ನಾನು ಹೇಳಿಲ್ಲ. ನಾನು ಹೇಳದ್ದನ್ನು ನನ್ನ ಬಾಯಿಗೆ ದಯವಿಟ್ಟು ತುರುಕಿಸಬೇಡಿರಿ. ಬೇಕಿದ್ದವರು ಬಳಸಲಿ. ಆದರೆ ಇಂತಹ ಪದಗಳನ್ನು “ಭಾಷಾ ವಿಜ್ನಾನಿ” ಯಂತಹ ಪದಗಳಿಗೆ ಬದಲಾಗಿ(ಪರ್ಯಾಯವಾಗಿ ಅಲ್ಲ) ತಾವುಗಳು ಬಳಸುವಂತೆ ತೋರುತ್ತಿದೆ. ಹಾಗಿದ್ದಲ್ಲಿ ಮಾತ್ರ ನನ್ನ ವಿರೋಧ.
ಮಹೇಶ ಪ್ರಸಾದ ನೀರ್ಕಜೆ,
ನಿಮ್ಮ ಬಾತ್ ಠೀಕ್ ಇದೆ. ನಮಗೆ ಎಲ್ಲ ಭಾಷಾದ ಶಬ್ದಗಳ ಜರೂರತ್ ಇದೆ. ನಮ್ಮ ಬೋಲಿಗೆ ಎಶ್ಟು ಹೆಚ್ಚು ಹೆಚ್ಚು ಶಬ್ಧ ಬಂದರೂ ಅಶ್ಟು ಅಚ್ಛ ಆಗುತ್ತದೆ.
ನನಗೆ ಜಬಾನ್ ಪಂಡಿತ್, ಭಾಷಾ ವಿಜ್ಞಾನಿ, ನುಡಿಯರಿಗ ಯಾವುದು ಬಳಸಿದರೂ ಅದು ಚಲನಾ ಇರಬೇಕು.
ಒಂದು ವೇಳೆ.. ನನಗೆ ಸಂಸ್ಕ್ರುತದ “ಬಾಶಾ ವಿಗ್ನಾನಿ” ಬೇಡವೇ ಬೇಡ, ಏಕೆಂದರೆ ಕನ್ನಡಕ್ಕೂ ಸಂಸ್ಕ್ರುತಕ್ಕೂ ಯಾವ ನುಡಿಯರಿಗಯಂತೆ ನಂಟಿಲ್ಲ ಎಂದು ಒಂದು ಗುಂಪು ಹೇಳಿದರೆ, ಅದನ್ನು ಹೇಗೆ ಅಲ್ಲ ಗಳೆಯುವಿರಿ.
ಸಂಸ್ಕ್ರುತ ಯಾಕೆ ವಿಶೇಶ? “ಭಾಷಾ ವಿಜ್ಞಾನಿ” ಇರಲಿ ಎಂದಾದರೇ “ಜಬಾನ್ ಸಯಿನ್ಟಿಸ್ಟ್” ಕೂಡ ಕನ್ನಡ ಪದನೆರಿಕೆಯಲ್ಲಿ ಇರಲಿ.. ಹಾಗೇ “ಲಿಂಗವಿಸ್ಟ್’ ಎಂಬ ಪದವೂ ಬೇಕು.
ಸಂಸ್ಕ್ರುತ ಒಂದಕ್ಕೆ ಏನು ವಿಶೇಶ? ನಮಗೆ ಸಂಸ್ಕ್ರುತ, ಪಾರಸೀ, ಇಂಗ್ಲಿಶು ಎಲ್ಲ ಸಮ.. ಆಗು ಆದರಣೀಯ..
ವಿಜ್ಞಾನಿ – ಈ ಪದವನ್ನು ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಬಳಕೆಯಾಗಿದೆ.
ಕನ್ನಡದ ಎಲ್ಲ ನಿಘಂಟುಗಳಲ್ಲೂ ಇದು ಸ್ಥಾನ ಪಡೆದಿದೆ. ಇದರ ಮೂಲವನ್ನೇ ಮರೆಯುವಷ್ಟರ ಮಟ್ಟಿಗೆ ಇದು ಕನ್ನಡದ ಪದವಾಗಿಬಿಟ್ಟಿದೆ.
“ಜಬಾನ್ ಸಯಿನ್ಟಿಸ್ಟ್”, “ಲಿಂಗವಿಸ್ಟ್” ಪದಗಳನ್ನು ಕನ್ನಡದಲ್ಲಿ ನಾವೆಂದೂ ಬಳಸಿಲ್ಲ. ಕನ್ನಡದ ಯಾವ ನಿಘಂಟುಗಳಲ್ಲೂ ಹುಡುಕಿದರೂ ಈ ಪದಗಳು ದೊರಕುವುದಿಲ್ಲ.
> ಸಂಸ್ಕ್ರುತ ಒಂದಕ್ಕೆ ಏನು ವಿಶೇಶ
ವಿಜ್ಞಾನಿ ಪದವನ್ನು ಸಂಸ್ಕೃತದ ಪದ ಎಂಬ ಕಾರಣಕ್ಕೆ ಉಪಯೋಗಿಸಬೇಕು ಎಂದು ಯಾರೂ ಹೇಳುತ್ತಿಲ್ಲ.
ಪೂರ್ವಾಗ್ರಹಪೀಡಿತವಾಗಿದ್ದರೆ ಮಾತ್ರ ಇವೆಲ್ಲಾ ಪ್ರಶ್ನೆಗಳು ಉದ್ಭವಿಸುತ್ತವೆ.
> ಒಂದು ವೇಳೆ.. ನನಗೆ ಸಂಸ್ಕ್ರುತದ “ಬಾಶಾ ವಿಗ್ನಾನಿ” ಬೇಡವೇ ಬೇಡ, ಏಕೆಂದರೆ ಕನ್ನಡಕ್ಕೂ ಸಂಸ್ಕ್ರುತಕ್ಕೂ
> ಯಾವ ನುಡಿಯರಿಗಯಂತೆ ನಂಟಿಲ್ಲ ಎಂದು ಒಂದು ಗುಂಪು ಹೇಳಿದರೆ
ಇದಕ್ಕೇ ವಿತ್ತಂಡವಾದ ಎಂದು ಹೇಳುವುದು.
ಶುಭಶ್ರೀಯವರು, ಕಿರಣ್ ಅವರು ತಮ್ಮ ಚರ್ಚೆಯುದ್ದಕ್ಕೂ ಕನ್ನಡದ ಸರಳೀಕರಣ ಎಂಬ ವಾದವನ್ನೇ ಮುಂದಿಡುತ್ತಾ ಬಂದಿದ್ದಾರೆ ಮತ್ತು ಅದು ಒಪ್ಪಿಗೆಯಾಗುವ ವಿಷಯವೇ.
ಸಂಸ್ಕೃತ ಮೂಲವೆಂಬ ಕಾರಣಕ್ಕೆ ಯಾವ ಪದಗಳನ್ನೂ ಬಿಡಬೇಕೆಂದಿಲ್ಲವೆಂಬುದನ್ನೂ ತಿಳಿಸಿದ್ದಾರೆ.
ಇದೀಗ ಮಾಯ್ಸ ಅವರ ವಾದ ನೋಡಿ. “ಸಂಸ್ಕೃತ ಬೇಡ” ಎನ್ನುವುದೇ ಅವರ ವಾದದ ತಿರುಳಾಗಿದೆ. ಅದಕ್ಕಾಗಿ ಕನ್ನಡ ಬದಲಾಗಬೇಕು ಎನ್ನುವುದಲ್ಲವೇ ಅವರ ಮಾತಿನ ಸಾರಾಂಶ?
ಸರಿಯಾಗಿ ಓದಿರಿ…
ನಾನು ಸಂಸ್ಕ್ತುತ ಬೇಡ ಅಂತ ಹೇಳಿಲ್ಲ… ಸಂಸ್ಕ್ರುತ ಒಪ್ಪುವುದಾದರೆ, ಪಾರಸೀ, ಇಂಗ್ಲೀಶು, ಹಿಂದಿ ಯಾಕೆ ಬೇಡ ಎನ್ನು ಪ್ರಶ್ನೆ ಬರುವುದು.
“ಜಬಾನ್ ಪಂಡಿತ್” ಎಂದು ಹಿಂದಿಯವರು ಹೇಳುವರು.
ಹಿಂದಿಯಲ್ಲಿ “ಹಾವಾಯಿ ಅಡ್ಡ” ಎಂಬು ಇಂಡಿಯದೇಶದ ಪ್ರತಿಯೊಂದು ಹಾವಾಯಿ ಅಡ್ಡ/ವಿಮಾನ ನಿಲ್ದಾಣದಲ್ಲೂ ಕೇಳಿಬರುವ ಪದ. ಅದಕ್ಕೆ ಕನ್ನಡ ಪದನೆರಿಕೆಯಲ್ಲಿ “ಹವಾಯಿ ಅಡ್ಡ” ಎಂಬ ಪದವನ್ನು ಕನ್ನಡಪದ ಎಂದು ಸೇರಿಸಿ ಎಂಬ ಮಾತು ಬಂದರೆ ಏನು ಮಾಡೋಣ? ಆಗ ನಮಗೆ ಸಂಸ್ಕ್ರುತ ಓಕೆ, ಹಿಂದಿ ಬೇಡ ಅಂತ ಹೇಳಿದರೇ? ಅವರೂ ಹಿಂದಿ ಹೇಗೆ ವಿಶೇಶ ಎಂದು ಕೇಳುವರು..
ಸಂಸ್ಕ್ರುತವೂ ಇರಲಿ, ಹಿಂದಿಯೂ ಇರಲಿ, ಇಂಗ್ಲೀಶು ಇರಲಿ, ಕನ್ನಡಕ್ಕೆ ಚೀನಿ, ಜಪಾನಿ, ಎಲ್ಲಾ ನುಡಿಗಳ ಪದಬರಲಿ.. ಬರೀ ಸಂಸ್ಕ್ರುತಕ್ಕೆ ಏನು ವಿಶೇಶ?
ನಮಗೆ ಎಲ್ಲ ನುಡಿಗಳ ಸಾಥ್ನ ಚಾಹ್ ಇರಬೇಕು.. ಎಂಬುದು ನನ್ನ ಮನದ ಬಾತ್.
> ಬರೀ ಸಂಸ್ಕ್ರುತಕ್ಕೆ ಏನು ವಿಶೇಶ?
ಇಲ್ಲಿ ಸಂಸ್ಕೃತದ ಪ್ರಶ್ನೆ ಎಲ್ಲಿಂದ ಬಂತು? ಯಾರು ಸಂಸ್ಕೃತ ವಿಶೇಷ ಎಂದದ್ದು?
ಇದು ನಿಮ್ಮ ಮನಸ್ಸಿನ ಊಹೆಯಲ್ಲವೇ?
ನಾವಿಲ್ಲಿ ಚರ್ಚಿಸುತ್ತಿರುವುದು, ಕನ್ನಡದಲ್ಲಿ ಈಗಾಗಲೇ ಬಳಕೆಯಲ್ಲಿರುವ ಪದಗಳ ಕುರಿತಾಗಿ.
ನಾವೇನೂ ಹೊಸದಾಗಿ ಸಂಸ್ಕೃತದಿಂದ ಪದಗಳನ್ನು ಕನ್ನಡಕ್ಕೆ ಆಮದು ಮಾಡುವ ಕುರಿತಾಗಿ ಮಾತನಾಡುತ್ತಿಲ್ಲವಲ್ಲಾ?
ಹಾಗಿದ್ದ ಮೇಲೆ, ನಿಮ್ಮ ಪ್ರಶ್ನೆ “ಅದಕ್ಕೆ ಕನ್ನಡ ಪದನೆರಿಕೆಯಲ್ಲಿ “ಹವಾಯಿ ಅಡ್ಡ” ಎಂಬ ಪದವನ್ನು ಕನ್ನಡಪದ ಎಂದು ಸೇರಿಸಿ ಎಂಬ ಮಾತು ಬಂದರೆ ಏನು ಮಾಡೋಣ?”
ಇಲ್ಲಿ ಅಪ್ರಸ್ತುತವಲ್ಲವೇ?
ಮೊದಲಿಗೆ ನಿಮ್ಮ ಮನಸ್ಸಿನಲ್ಲಿರುವ “ಸಂಸ್ಕೃತ ಮೂಲದ ಪದಗಳು” ಎಂಬುದನ್ನು ತೆಗೆದೆಸಿಯಿರಿ.
ಕನ್ನಡದಲ್ಲಿರುವ ಪದಗಳು ಯಾವ ಮೂಲದ್ದೇ ಆಗಿರಲಿ, ಅದರಿಂದ ತೊಂದರೆಯೇನು?
ಎಲ್ಲರಿಗೂ ಉಪಯೋಗಿಸಲು ಸರಳವಾಗಿದ್ದರಾಯಿತು, ಅದಲ್ಲವೇ ಇಲ್ಲಿನ ಚರ್ಚೆಯ ಸಾರಾಂಶ?
ಅರೇ.. ನರೇಂದ್ರ
ಸಂಸ್ಕ್ರುತ ಖಾಸ್ ಅಲ್ಲ ಅಂದ ಮೇಲೆ.. ಹಿಂದಿ ಯಾಕೆ ಬೇಡ ನಿಮಗೆ? ಹಿಂದಿ ನಮ್ಮ ದೇಶದ ರಾಜ್ ಭಾಷಾ! ನಮ್ ದೇಶದ ಬಡಾ ಹಿಸ್ಸಾ ಹಿಂದಿ ಮಾತಾಡುವುದು. ಮತ್ತು ಹಿಂದಿ ಸಿನಿಮ ನೋಡಿ ನಮಗೆಲ್ಲ ಹಿಂದಿ ಪದಗಳು ಪರಿಚಿತ್ ಇವೆ.
ಹಿಂದಿ ದ್ವೇಷ ಯಾಕೆ ನರೇಂದ್ರ? ಹಿಂದಿ ಉತ್ತರ ಭಾರತೀಯ ಭಾಷಾ ಎಂದು ನೀವು ಪ್ರಾಂತೀಯತಾ ಮಾಡ್ತೀರಾ?
ಅರೇ.. ಶರ್ಮಿಂದಗೀ.. ಇದೆ..
ಬರತ್.. ನಾನು ಮರೆತು ನಿಮಗೆ ಹೇಳಬೇಕಿದ್ದ ಅನಿಸಿಕೆಯನ್ನು ನರೇಂದ್ರ ಅವರಿಗೆ ಬರೆದೆ..
ನಿಮಗೆ ಸಂಸ್ಕ್ರುತ ಬಾಶಾ ವಿಗ್ನಾನಿ ಒಪ್ಪೋದಾರೆ? ಇಂಗ್ಲಿಶಿನ ಲಿಂಗ್ವಿಸ್ಟ್ ಏನು ಮಾಡಿದೆ? ನಾನು ಓದಿರೋದೇ ಲಿಂಗ್ವಿಸ್ಟ್ ಮೊದಲು.. ನನಗೆ ನಿಮ್ಮ ಬಾಶಾ ವಿಗ್ನಾನಿ, ನುಡಿಯರಿಗ ಎಲ್ಲ ಹೊಸತು.. ನಾನು ಇಲ್ಲಿಯ ವರೆಗೂ ಲರ್ನ್ ಮಾಡಿ ಲಿಂಗ್ವಿಸ್ಟ್, ಲಿಂಗ್ವಿಸ್ಟಿಕ್ಸ್, ಲ್ಯಾಂಗ್ವೇಜ್ ಪದಗಳೆಲ್ಲ ಯೂಸ್ಲೆಸ್ಸಾ?
🙂
ಇದರ ಮತಲಬ್ ಏನು?
ತಮಗೆ ಸಂಸ್ಕ್ರುತ ಚಾಲ್ತಿ ಆಗುವುದು? ಹಿಂದಿ, ಇಂಗ್ಲೀಶ ಯಾಕೆ ಬೇಡ.
ವರ್ಲ್ಡಲ್ಲಿ ಇಂಗ್ಲೀಶು ಹಿಂದಿ ಮಾತಾಡೋದು ಕರೋಡ್ ಕರೋಡ್ ಇದ್ದಾರೆ. ಸಂಸ್ಕ್ರುತ ಮಾತಾಡೋರು ಬರೀ ಕೆಲವು ಲ್ಯಾಕ್ಗಳು…
ನಿಮ್ಮ ಇಂಗ್ಲೀಶು ಹೇಟ್ರೆಡ್, ಹಿಂದಿ ನಫರತ್ ನ ಪೀಚ್ಛೇ ಏನಿದೆ?
> ನಿಮ್ಮ ಇಂಗ್ಲೀಶು ಹೇಟ್ರೆಡ್, ಹಿಂದಿ ನಫರತ್ ನ ಪೀಚ್ಛೇ ಏನಿದೆ?
ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ ಎಂದು ಇದಕ್ಕೇ ಹೇಳುವುದು.
ಇಲ್ಲಿ ನೀವು “ಸಂಸ್ಕೃತ ವಿರೋಧಿ” ಎಂದು ಹೇಳುವುದಕ್ಕೆ ಯಾವ ಸಂಶೋಧನೆಯನ್ನೂ ಮಾಡಬೇಕಾಗಿಲ್ಲ.
ಆದರೆ, ನಿಮ್ಮ ಯಾವ ಸಂಶೋಧನೆಯಿಂದ “ಇಂಗ್ಲೀಶು ಹೇಟ್ರೆಡ್, ಹಿಂದಿ ನಫರತ್” ಇವೆಲ್ಲಾ ಕಂಡು ಬಂದಿದೆಯೋ ತಿಳಿಯುತ್ತಿಲ್ಲ.
ನೀವು ಇಲ್ಲಿಯವರೆಗೂ ರಾಜಕಾರಣಿಗಳಂತೆ ಯಾವುದೇ ಪುರಾವೆಗಳನ್ನೂ ನೀಡದೆ “ಇಂಗ್ಲೀಶು ಹೇಟ್ರೆಡ್, ಹಿಂದಿ ನಫರತ್” ಇತ್ಯಾದಿ ಹರಟುತ್ತಿದ್ದೀರಿ.
ನೀವು ಅವುಗಳಿಗೆ ಪುರಾವೆ ನೀಡಲಾಗದಿದ್ದರೆ, ರಾಜಕಾರಣಿಗಳ ಮಾತಿಗಿರುವ ಕಿಮ್ಮತ್ತೇ ನಿಮ್ಮ ಮಾತಿಗೂ ದೊರೆಯುತ್ತದೆ ಎಂಬುದನ್ನು ನೆನಪಿನಲ್ಲಿಡಿ.
ಮಾಯ್ಸ,
೯೦% ಕನ್ನಡ,
೧೦% ಯಾವುದ್ ಬೇಕೊ (ಸಕ್ಕದ,ಇಂಗ್ಲಿಶ್, ಹಿಂದಿ….) ಅದನ್ನ ಹಾಕಿಕೊಳ್ಳಿ.
-ಬರತ್
ಮಹೇಶ್ ಪ್ರಸಾದ್ ಅವರೇ,
ನಿಮ್ಮ ಮನದಾಳದ ಪ್ರಶ್ನೆಗಳನ್ನು ಕೇಳಿದ್ದಕ್ಕೆ ನನ್ನಿ.
ಇವಕ್ಕೆ ನನ್ನ ಉತ್ತರ ಹೀಗಿದೆ. ಉತ್ತರ ಒಮ್ಮೆ ಓದಿ, ನಿಮಗೆ ಗೊಂದಲವಿದ್ದರೆ ಖಂಡಿತ ತಿಳಿಸಿ, ಚರ್ಚೆ ಮಾಡೋಣ.
೧. ಯಾವುದೇ ಭಾಷೆಯನ್ನು ದ್ವೇಷಿಸುವುದು ಸಾಧ್ಯವಿಲ್ಲ ಎಂಬುದೇ ನನ್ನ ನಂಬಿಕೆಯಾಗಿದೆ.
೨. ಸಂಸ್ಕೃತ ಬೇರಿನ ಪದಗಳು ಕನ್ನಡಕ್ಕೆ ಹಲವು ಬಂದಿವೆ. ಕೆಲವು ದಿನನಿತ್ಯದ ಆಡುನುಡಿಗೂ ಬಂದಿವೆ. ಉದಾ: ಸುಲಭ, ಆನಂದ.
ಅವುಗಳನ್ನು ತೆಗೆದು ಹಾಕಬೇಕು ಅನ್ನೋ ಮನಸ್ಥಿತಿ ನನ್ನದಲ್ಲ. ಅವುಗಳು ಬಳಕೆಯಲ್ಲೇ ಮುಂದುವರೆಯಲಿ.
೩. ‘ನುಡಿಯರಿಗ’ , ‘ಕಲಿಕೆಯರಿಗ’ ಇವುಗಳು ‘ಭಾಷಾ ವಿಜ್ನ್ಯಾನಿ, ಶಿಕ್ಷಣ ತಜ್ನ್ಯ’ ಪದಗಳದ್ದೆ ಅರ್ಥ ಹೊಂದಿರುವ ಕನ್ನಡ ಬೇರಿನ ಪದಗಳು. ಕನ್ನಡದಲ್ಲೂ ಇದು ಸಾಧ್ಯ ಎಂದು ತೋರಿಸುತ್ತಿವೆ.
ಮುಂದಿನ ದಿನಗಳಿಗೆ ಕನ್ನಡವನ್ನು ಸಜ್ಜುಗೊಳಿಸಬೇಕಾದಾಗ, ಮುಂದಿನ ದಿನಗಳಲ್ಲಿ ಇನ್ನೂ ಬೇರೆ ಬೇರೆ ರೀತಿಯ ಕನ್ನಡ ಪದಗಳನ್ನು ಹುಟ್ಟು ಹಾಕಬೇಕಾಗುತ್ತದೆ. ಆಗಲೂ ಸಂಸ್ಕೃತದ ಪದಗಳನ್ನು ಬಳಸಿ, ಅವು ಕನ್ನಡಿಗರಿಗೆ ಅರ್ಥವಾಗುತ್ತವೋ ಇಲ್ಲವೋ ಎಂಬುದನ್ನೂ ಗಮನಿಸದೇ, ಅವನ್ನೇ ಕನ್ನಡಕ್ಕೂ ಅಳವಡಿಸೋದು ‘ಕಲಿಯುವ’ ಮಕ್ಕಳಿಗೆ ತೊಂದರೆಯೇ ಆಗುತ್ತದೆ. ‘ಕಲಿತವರಿಗೂ’ ಅರ್ಥವಾಗದ ಪದಗಳ ಬಳಕೆ ನಾವು ನೋಡಬಹುದು.
ಈಗಾಗಲೇ ಇಂತಹ ಪ್ರಯೋಗ ಆಗಿರೋದರ ಬಗ್ಗೆ ಕೆಲವು ಉದಾಹರಣೆಗಳನ್ನು ಕೊಡಬಹುದು. ದ್ಯುತಿ ಸಂಶ್ಲೇಷಣ ಕ್ರಿಯೆ, ಏಕಪದೋಕ್ತಿ, ವ್ಯುತ್ಕ್ರಮ, ಸಂಕಲನ, ವ್ಯವಕಲನ ಇತ್ಯಾದಿ.
೪. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು, ಈ ಹೊರೆಯನ್ನು ಹೊತ್ತು ಕಷ್ಟ ಪಡುತ್ತಿದ್ದಾರೆ. ಅವರಿಗೆ ಅರ್ಥವಾಗುವ ಪದಗಳನ್ನು ಹುಟ್ಟು ಹಾಕಿಸಬಾರದೇಕೆ ಎಂಬ ಪ್ರಶ್ನೆ ಇಟ್ಟವರಿಗೆ “ಅದೆಲ್ಲಾ ಕನ್ನಡದಲ್ಲಿ ಆಗಲ್ಲ ರೀ” ಅನ್ನೋ ಉತ್ತರ ಸಿಕ್ಕಿದೆ. ಕನ್ನಡದಲ್ಲಿ ಸಾಧ್ಯವಿಲ್ಲ ಅಂತೇನಿಲ್ಲ, ಹುಟ್ಟು ಹಾಕಲು ಬರಬೇಕಷ್ಟೇ ಎಂಬುದನ್ನು ‘ನುಡಿಯರಿಗ’, ‘ಕಲಿಕೆಯರಿಗ’ ಪದಗಳು ತೋರಿಸುತ್ತಿವೆ.
೫. ಸಂಕಲನ – ಕೂಡುವುದು
ವ್ಯವಕಲನ – ಕಳೆಯುವುದು
ವ್ಯುತ್ಕ್ರಮ – ತಲೆಕೆಳಗು, ಇತ್ಯಾದಿ ಪದಗಳನ್ನು ಬಳಸುವುದರಿಂದ ಮಕ್ಕಳ ಕಲಿಕೆ ಅಷ್ಟರ ಮಟ್ಟಿಗೆ ಸುಲಭ ಮಾಡಿದಂತಾಗುವುದಿಲ್ಲವೇ !
೬. ಹಾಗಂತ ಎಲ್ಲಾ ಸಂಸ್ಕೃತ ಬೇರಿನ ಪದಗಳನ್ನು ತೆಗೆದು ಹಾಕಬೇಕಾಗಿಲ್ಲ. ಆಡುನುಡಿಗೆ ಈಗಾಗಲೇ ಬಂದಿರುವ ಸಂಸ್ಕೃತ ಬೇರಿನ ಪದಗಳನ್ನು ಬಳಸಿಕೊಳ್ಳೋದು ಒಳ್ಳೆಯದು.
ಯಾರೂ ಕಂಡು ಕೇಳರಿಯದ ಪದಗಳನ್ನು ಹೇರೋದು ಯಾಕೆ ಎಂಬ ಪ್ರಶ್ನೆ ನೀವು ಎತ್ತಿದ್ದೀರ.
ಯಾವುದೇ ಪದಗಳನ್ನು ಜನರ ಆಡುನುಡಿಗೆ ತುರುಕಲು ಒಬ್ಬಿಬ್ಬರ ಕೈಯಲ್ಲಿ ಸಾಧ್ಯವಿಲ್ಲ – ಕಿರಣ್ ಇದನ್ನೇ ಹೇಳಿದ್ದಾರೆ.
ಹಾಗೆ ಸಾಧ್ಯವಿದ್ದಿದ್ದರೆ, ಇವತ್ತಿನ ದಿನ ಪಟ್ಯ ಪುಸ್ತಕಗಳಲ್ಲಿರೋ ಎಷ್ಟೋ ಸಂಸ್ಕೃತ ಬೇರಿನ ಪದಗಳು ಆಡುನುಡಿಗೆ ಬಂದುಬಿಡುತ್ತಿದ್ದವು.
ಹಾಗಾಗಿ, ಯಾವುದೇ ಪದವನ್ನು ನುಡಿಯರಿಗರು ಕಾಯಿನ್ ಮಾಡಿದರೆ, ಅದನ್ನು ಸಮಾಜವೇ ಆಡುನುಡಿಗೆ ತಂದುಕೊಳ್ಳಬೇಕು. ಸಮಾಜಕ್ಕೆ ಆ ಪದವು ಅರ್ಥವಾಗದಿದ್ದರೆ, ಅದರ ಬಳಕೆ ಮುಂದುವರೆಯೊಲ್ಲ.
ನಿಮಗೆ ಕಳವಳ ಬೇಡ.
> ದ್ಯುತಿ ಸಂಶ್ಲೇಷಣ ಕ್ರಿಯೆ, ಏಕಪದೋಕ್ತಿ, ವ್ಯುತ್ಕ್ರಮ, ಸಂಕಲನ, ವ್ಯವಕಲನ ಇತ್ಯಾದಿ
> ಸಂಕಲನ – ಕೂಡುವುದು
> ವ್ಯವಕಲನ – ಕಳೆಯುವುದು
> ವ್ಯುತ್ಕ್ರಮ – ತಲೆಕೆಳಗು, ಇತ್ಯಾದಿ ಪದಗಳನ್ನು ಬಳಸುವುದರಿಂದ ಮಕ್ಕಳ ಕಲಿಕೆ ಅಷ್ಟರ ಮಟ್ಟಿಗೆ ಸುಲಭ ಮಾಡಿದಂತಾಗುವುದಿಲ್ಲವೇ
ಖಂಡಿತ ಇದನ್ನು ಮಾಡಬೇಕು. ಕಠಿಣವಾದ ಪದಗಳ ಬದಲು ಸರಳವಾದ ಪದಗಳಿದ್ದಲ್ಲಿ ಉಪಯೋಗಿಸೋಣ.
ಈಗಿರುವ ಪದಗಳು ಯಾವ ಮೂಲದ್ದೇ ಇರಲಿ, ಅದು ಕಷ್ಟವಾಗಿದ್ದರೆ ಅದಕ್ಕೆ ಪರ್ಯಾಯ ಪದ ಹುಡುಕೋಣ ಇಲ್ಲವೇ ಹುಟ್ಟುಹಾಕೋಣ.
ಹಾಗೆ ಮಾಡುವಾಗ, ಹೊಸ ಪದ ಮತ್ತಷ್ಟು ಕಷ್ಟವಾಗಿರಬಾರದೆಂಬ ಕಡೆ ಗಮನವಿರಬೇಕು.
ಆದರೆ, ಕೇವಲ ಸಂಸ್ಕೃತದಿಂದ ಬಂದ ಪದವೆಂಬ ಒಂದೇ ಕಾರಣಕ್ಕೆ ಪದಗಳನ್ನು ಬದಲಾಯಿಸುವುದಿದ್ದರೆ ಅದಕ್ಕೆ ನನ್ನ ಸಮರ್ಥನೆಯಿಲ್ಲ.
ಮತ್ತು ಈ ಕೆಲಸವನ್ನು, ಕನ್ನಡ ಅಕ್ಷರ ಮಾಲೆಯನ್ನು ಬದಲಿಸದೆಯೇ ಮಾಡಬಹುದು.
ಕನ್ನಡ ಅಕ್ಷರಮಾಲೆ ಬದಲಾವಣೆಯಿಂದ ಏನು ಸಾಧಿಸಿದಂತಾಗುತ್ತದೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ.
ನರೇಂದ್ರ ಕುಮಾರ್ ಅವರೇ,
ಪದಗಳ ಬಗ್ಗೆ ನಿಮಗೆ ಒಪ್ಪಿತವಿದೆ ಎಂದು ತಿಳಿಯಿತು.
ಲಿಪಿ ಸುದಾರಣೆಯಿಂದ ಆಗಬಹುದಾದ ಲಾಬಗಳ ಬಗ್ಗೆ ನಿಮ್ಮ ಜೊತೆ ಇನ್ನೊಂದು ಬರಹದಲ್ಲಿ ಮಾತನಾಡಿದ್ದೇನೆ.
ನಿಮಗೆ ಅದು convincing ಅನ್ನಿಸಿಲ್ಲ. ಒಂದೆರಡು ಮಾತಿನಲ್ಲೇ ಒಪ್ಪುವಂತಹ ವಿಷಯವೂ ಇದಲ್ಲ ಎಂದು ನನಗನ್ನಿಸಿದೆ.
ನಿಮಗೆ ಈ ಬಗ್ಗೆ ಹೆಚ್ಚು ತಿಳಿಯಲು ಆಸಕ್ತಿ ಇದ್ದರೆ, ಶಂಕರ ಭಟ್ಟರು ಬರೆದಿರುವ ಪುಸ್ತಕಗಳನ್ನು ಓದಿ.
—
ಪ್ರಿಯಾಂಕ್
ನಿಮ್ಮ ಉತ್ತರ ಹೆಚ್ಚು ಸಮಂಜಸವಾಗಿದೆ. ನನ್ನಂಥವರಿಗೆ ಅರ್ಥ ಆಗುವಂತಿದೆ. 🙂 ಧನ್ಯವಾದ.
ನಾನು ಹೇಳುತ್ತಿರುವುದೂ ನೀವು ಕಾಮೆಂಟಿಸುರುವುದೂ, ಗಿರೀಶ ಭಟ್ಟರು ಹೇಳುತ್ತಿರುವುದೂ ಹೆಚ್ಚು ಕಮ್ಮಿ ಒಂದೇ ಇದೆ. ಇಲ್ಲಿ ಭಿನ್ನತೆ ಎಲ್ಲಿದೆ ಎಂದೇ ತಿಳಿಯುತ್ತಿಲ್ಲ. ಬಹುಷಹ ನೀವು ಹೇಳಿದ್ದಕ್ಕೂ ಲೇಖನದ ಸಾರಕ್ಕೂ ಭಿನ್ನತೆಯಿರಬೇಕು. ಎಲ್ಲಾ ಗೊಂದಲಮಯವಾಗಿದೆ. ಅದಕ್ಕೇ ಆ ರೀತಿ ಕಾಮೆಂಟಿಸಿದೆ. ತಪ್ಪು ತಿಳಿಯಬೇಡಿರಿ.
@ಪ್ರಿಯಾಂಕ್,
‘ಹ’ ಕಾರ ಉಚ್ಚರಿಸಲು ಬರುವುದಿಲ್ಲ ಎಂದಾದಲ್ಲಿ ಅವರಿಗೆ ಉಚ್ಚರಿಸಲು ಕಲಿಸಬೇಕೆ ವಿನಃ ‘ಹ-ಕಾರ’ವನ್ನೇ ಕಿತ್ತೊಗೆದರೆ ಆಗುತ್ತದೆಯೇ? ಪ್ರಯತ್ನ ಪಟ್ಟರೆ ಎಲ್ಲವೂ ಸಾದ್ಯ ಎಲ್ಲರಿಗೂ. ಕಲಿಯುವ ಮನಸ್ಸಿರಬೇಕು ಅಸ್ಟೇ. ಯಾವುದೇ ಪದ ಅಥವಾ ಅಕ್ಷರ ಉಚ್ಚರಿಸಲು ಕಷ್ಟ ಹೇಗಾಗುತ್ತದೆ? ಒಂದೋ ಆತನಲ್ಲಿ ಏನೋ ಊನವಿರಬೇಕು ಅಥವಾ (ಮುಖ್ಯವಾಗಿ) ಮನಸ್ಸಿಲ್ಲದಿರಬೇಕು ಅಲ್ಲವೇ ? ಉಚ್ಚರಿಸಲು ಕಷ್ಟ ಹಾಗಾಗಿ ಆ ಪದ ಅಥವಾ ಅಕ್ಷರ ಬೇಡ ಅನ್ನೋ ವಾದ ಒಪ್ಪತಕ್ಕುದಲ್ಲ . ಯಾವುದೇ ಪದ ಅಥವಾ ಅಕ್ಷರ ,ಪದೆ ಪದೆ ಬಳಸಿದಾಗ ಮಾತ್ರ ನಮ್ಮ ನಾಲಗೆ ಹೊರಳುತ್ತದೆ(ಉಚ್ಚರಿಸಲು ಸಾದ್ಯ) ಹೊರತು, ಆ ಪದವನ್ನೇ ತೆಗೆದು ಹಾಕಿದರೆ ನಮ್ಮ ನಾಲಗೆ ಮತ್ತು ಮೆದುಳು ಇನ್ನೂ ಹೆಚ್ಚು ತುಕ್ಕು ಹಿಡಿಯುವುದರಲ್ಲಿ ಸ೦ಶಯವಿಲ್ಲ !!’ ಅ ಕಾರ ‘ ಬದಲಾಗಿ ‘ಹ ಕಾರ ‘ ಉಚ್ಚಾರಣೆ ಮಾಡಿದಾಗ ಅದನ್ನು ಹೀಯಾಳಿಸುವ ಬದಲು ತಿದ್ದುವ ಕೆಲಸ ವಾದಾಗ ಮಾತ್ರ ನಮ್ಮ ಸಮಾಜ ಮತ್ತು ಭಾಷೆ ಬೆಳೆಯಲು ಸಾದ್ಯ ಹೊರತು ಅಕ್ಷರ ,ಪದ ಗಳನ್ನು ತೆಗೆದು ಹಾಕುವುದರಿಂದಲ್ಲ !!
ಮತ್ತೆ ಕನ್ನಡದ ಪದಗಳನ್ನು ಉಚ್ಚರಿಸೋಣ ಅನ್ನೋದು ಸರಿ!!! ಹಾಗಂತ ನೀವೇ ಹೇಳಿದಂತೆ ಸಂಸ್ಕೃತ ಮೂಲದ ಕಷ್ಟ ಶಭ್ದ ಬೇಡ ಅಂದರೆ ಏನರ್ಥ ಸಾರ್ ? ಮತ್ತೆ ಈ ಚರ್ಚೆಯ ಎಲ್ಲಾ ಕಾಮ್ಮೆಂಟು ಗಳಲ್ಲಿ ನೋಡಿ ಭಾವಾರ್ಥ ಅಥವಾ ನೇರ ಅರ್ಥ ಸಂಸ್ಕೃತ ವಿರೋಧ ಅಂತಾನೆ ಅಲ್ಲವೇ? ಯಾಕೆಂದರೆ ಎಲ್ಲರೂ ತಪ್ಪಾಗಿ ತಿಳಿದಿರೋದು ಅದನ್ನೇ ಸರಿ ಎಂದು ನಂಬಿರೋದು ಮಾತ್ರ ಸಂಸ್ಕೃತ ಒಂದು ಬ್ರಾಹ್ಮಣರ ಭಾಷೆ, ಕೇಳ ವರ್ಗದವರ ಭಾಷೆ ಅಂತ., ತಪ್ಪಾಗಿರೋದು ಇಲ್ಲೇ !!!
ಭಾಷೆಯನ್ನ ಜಾತಿ ಅಥವಾ ವರ್ಗದ ಜೊತೆ ತಳಕು ಹಾಕ ಹೊರಟಿರೋದು ಕಣ್ರೀ !!! ಭಾಷೆ ಅದೆಲ್ಲವನ್ನ ಮೀರಿದ್ದು ಎಂದು ಅರ್ಥೈಸಿಕೊಂಡರೆ ಇಂತಹ ವಿಕೃತಿಯ ಸಂದರ್ಭವೇ ಇರೋದಿಲ್ಲ ಕಣ್ರೀ !!!
ಅದೇ ಈ ಚರ್ಚೆಯಲ್ಲೇ ನೋಡಿ .. ಎಲ್ಲರೂ ಹೇಳಿದ್ದು ಕಷ್ಟದ(ಉಚ್ಚರಿಸಲು) ಶಬ್ದ ಬೇಡ ಅಂತ ಹೊರತು ಕೆಟ್ಟ ಶಭ್ದ ತೆಗೆಯುವ ಯೋಚನೆಯೇ ಬಂದಿಲ್ಲ !!!! ಅದೇ ಕೆಟ್ಟ ಶಭ್ದಗಳನ್ನೇ ಧಾರಾಳವಾಗಿ ಉಪಯೋಗ ಮಾಡಿಕೊಂಡಿದ್ದಾರೆ ನೋಡಿ(ಅದೂ ಬೇರೆ ಭಾಷೆಯಿಂದ ಎರವಲು ಪಡೆದು ಕನ್ನಡೀಕರಣ ಗೊಳಿಸಿ ಅದನ್ನ ಅರ್ಥ ಸಮೇತ ವಿವರಿಸಿ!! ) !!!
ನಾ ಇನ್ನೆನ ಹೇಳಲಿ ? ನಮ್ಮ ಜನಕ್ಕೆ ಅದೇ ಬೇಕು ..ಅದರಿಂದ ನಮ್ಮ ಮುಂದಿನ ಪೀಳಿಗೆ ಅದನ್ನೇ ಮುಂದುವರಿಸುತ್ತದೆ ನಮ್ಮನ್ನ ನೋಡಿ ಅಸ್ಟೇ !!! ಆಮೇಲೆ ಭಾಷೆಯ ಮೇಲೆ ಹರಿ ಹಾಯಲು ಅದನ್ನು ತಿದ್ದಲು ಹೊರಡುತ್ತೇವೆ !! ನಮ್ಮ ನಿಮ್ಮಂತ ಹುಲು ಮಾನವರು !!!
ಇಲ್ಲೇ ಕೆಲವರು ಹೇಳಿದಂತೆ ವಿಜ್ಞಾನ ಇಷ್ಟು ಮುಂದುವರಿಯಲು ಎಸ್ಟೊಂದು ಜನ ಎಸ್ಟೊಂದು ಕಷ್ಟ ಪಟ್ಟು ಅದ್ಯಯನ ನಡೆಸಿಲ್ಲ ? ಅವರೆಲ್ಲ ಇದು ಕಷ್ಟ ಇದನ್ನು ತೆಗೆದು ಬಿಡೋಣ ಅಂತ ಯೋಚಿಸಿ ಕಾರ್ಯೋನ್ಮುಖರಾಗಿದ್ದರೆ ವಿಜ್ಞಾನದ ಗತಿ ಏನಾಗುತ್ತಿತ್ತು?
ಶಾಂತಿ ಅವರೇ,
ನಿಮ್ಮಲ್ಲಿರುವ ಪ್ರಶ್ನೆಗಳೇ, ಇಲ್ಲಿ ಹಲವಾರು ಜನರಲ್ಲಿರೋದು.
‘ಹ’ಕಾರ ಬರಲ್ಲ ಅಂದ್ರೆ ಕಲಿಸಿ, ಸಂಸ್ಕೃತದ ಪದಗಳು ಅರ್ಥವಾಗೋಲ್ಲ ಅಂದ್ರೆ ಅರ್ಥ ಮಾಡಿಸಿ ಅಂತ ಹಲವರು ಹೇಳ್ತಾರೆ.
‘ಜನರಿಗೆ ಬರಲಿಲ್ಲ ಅಂದ್ರೆ ಅದನ್ನ ಕಲಿಸೋರಿಗೆ ಬರಲ್ಲ ಎಂದೇ ಅರ್ಥ’ ಎಂದುಕೊಂಡಿದ್ದಾರೆ.
ಈ ರೀತಿಯ ಅಭಿಪ್ರಾಯ ನಮ್ಮಲ್ಲಿ ಹಲವರಲ್ಲಿದ್ದು, ಭಾಷಾ ವಿಜ್ನ್ಯಾನಿಗಳು ಈ ವಿಚಾರವಾಗಿ ಏನು ಹೇಳುತ್ತಾರೆ ಅಂತ ನೋಡಿದಾಗ ಕಂಡು ಬಂದ ಸತ್ಯದ ಬಗೆಗೆ ಇಲ್ಲಿ ಚರ್ಚೆ ನಡೆಯುತ್ತಿರೋದು.
ಒಂದು ಸಮುದಾಯದಲ್ಲಿರುವ ಉಲಿಗಳು ಆ ಸಮುದಾಯದಲ್ಲಿ ಹುಟ್ಟಿದ ಮಕ್ಕಳಿಗೂ ತಾನಾಗೇ ಬರುತ್ತದೆ.
ಕೆಲ ಉಲಿಗಳು, ಆ ಸಮುದಾಯದಲ್ಲಿ ಇಲ್ಲದ ಕಾರಣ ಸಮುದಾಯದಲ್ಲಿನ ಮಕ್ಕಳಿಗೆ ಬರೋದಿಲ್ಲ. ಆಗ, ಅಲ್ಲಿ ಆ ಉಲಿ ಬಿದ್ದು ಹೋಯಿತೆಂದೇ ತಿಳಿಯಬಹುದು.
ಉದಾ: ಕನ್ನಡದಲ್ಲಿದ್ದ ‘ರಳ’ ಉಲಿ ಈಗ ಇಲ್ಲ, ಬಿದ್ದು ಹೋಗಿದೆ. ಅದನ್ನು ಉಲಿಯಲು ನೀವು ಯಾವುದೇ ಮಲಯಾಳಂ ಭಾಷಿಕರ ಹತ್ತಿರ ಹರಸಾಹಸ ಪಟ್ಟು ಕಲಿಯಬಹುದು, ಕಲಿಯಲು ಸಾಧ್ಯವಾಗದೇ ಇರಬಹುದು.
ಈಗ ಆ ಉಲಿಯನ್ನು ಕನ್ನಡದಲ್ಲಿ ಕೈ ಬಿಟ್ಟಿದೀವಲ್ಲ. ಅದನ್ನು ಕಲಿಸಲು ತೊಡಗಿದ್ದೆವಾ? ಅಥವಾ ಅದನ್ನು ಉಲಿಯಲು ಬಾರದವರಿಗೆ ಬೈಯುತ್ತಿದ್ದೆವಾ? ಇಲ್ಲಾ ತಾನೇ!
ಹಾಗೆಯೇ, ನೀವು ಕಿವಿಗೊಟ್ಟು ಕೇಳಿದರೆ, ಕನ್ನಡಿಗರು ಮಹಾಪ್ರಾಣವನ್ನೂ ಉಲಿಯದಿರುವುದು ನಿಮಗೆ ಕಂಡುಬರುತ್ತದೆ.
“ಅದನ್ನು ಕಷ್ಟ ಪಟ್ಟು ಕಲಿಯುವುದರಿಂದ/ಕಲಿಸುವುದರಿಂದ ಏನಾದರೂ ಒಳ್ಳೆಯದಿದೆಯಾ? ಇದ್ದರೆ ಏನು? ಕೆಟ್ಟದ್ದು ಇದೆಯಾ? ಇದ್ದರೆ ಏನು?
ಕಷ್ಟ ಪಟ್ಟು ಕಲಿಸಲು ಆಗುತ್ತದಾ?” ಈ ಎಲ್ಲಾ ಪ್ರಶ್ನೆಗಳ ಸುತ್ತವೇ ಈ ಚರ್ಚೆ. ಚರ್ಚೆಗಳಲ್ಲಿ ವೈಜ್ನ್ಯಾನಿಕವಾಗಿ ನುಡಿಯರಿಗರು ಕಂಡುಕೊಂಡ ವಿಷಯಗಳನ್ನೂ ಬಳಸಲಾಗುತ್ತಿದೆ.
ಈ ರೀತಿಯ ಡೆಮೊಕ್ರಾಟಿಕ್ ಚರ್ಚೆ ಒಳ್ಳೆಯದೇ ತಾನೇ?
ಮಹಾಪ್ರಾಣಗಳನ್ನು ಉಲಿಯಲು ಕಲಿಸದೆ ಇದ್ದರೆ, ಅವುಗಳನ್ನು ಬಿಟ್ಟರೆ, ನಮ್ಮ ಮೆದುಳು ತುಕ್ಕು ಹಿಡಿಯುತ್ತದೆ ಎಂದು ಹೇಳಿದ್ದೀರ.
ಇದು ವೈಜ್ನ್ಯಾನಿಕವಾಗಿ ಯಾವುದೇ ಆಧಾರ ಇಲ್ಲದೇ ಹೇಳಿದ ವಿಷಯ ಎಂದನಿಸುತ್ತದೆ.
ಮಹಾಪ್ರಾಣ ಉಲಿಯದ ಇಂಗ್ಲೀಶ್ ಭಾಷಿಕರ ಮೆದುಳು ಚೆನ್ನಾಗೆ ಕೆಲಸ ಮಾಡುತ್ತಿದ್ದು, ನಿಮ್ಮ ಥಿಯರಿಗೆ ವಿರುಧ್ಧ ನಿದರ್ಶನವಾಗಿದೆ.
ನೀವೇಕೆ ಕೇವಲ ಮಹಾಪ್ರಾಣದ ಸುತ್ತಲೂ ಇದ್ದೀರಿ?
ಇನ್ನು ತುಕ್ಕು ಹಿಡಿಯುವುದು ……ಸ್ವಾಮೀ ಹಿಂದೆ ಆರ್ಯಭಟ ರಂತಹ ಮೆದಾವಿಗಳನ್ನೇ ನೋಡಿ , ಈಗಿನ ವಿಜ್ಞಾನಿಗಳು ಯಂತ್ರದ ಸಹಾಯದಿಂದ ಮಾಡಿದ್ದನ್ನು ಯಂತ್ರವಿಲ್ಲದೆಯೇ ಗಣಿತದ ಮೂಲಕ ಕರಾರು ವಕ್ಕಾಗಿ ಮಾಡಿದ್ದಾರೆ ಅಂದರೆ ಭಾಷೆಯ ಉಲಿಯುವಿಕೆ ಕೂಡ ನಮ್ಮ ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ ಅಂತಷ್ಟೇ ನಾನು ಹೇಳಿದ್ದು.. ನಾಲಗೆ ಹೊರಳದವನು ಸಾಧಿಸೋಲ್ಲ ಅಂತಲ್ಲ !! ಮತ್ತೆ ಕಲಿಸಲಾಗದಿದ್ದರೆ ಕೇವಲ ಗುರು ಅಸಮರ್ಥ ಹೇಗಾಗುತ್ತದೆ? ಶಿಷ್ಯನಿಗೆ ಆಸಕ್ತಿಯೇ ಇಲ್ಲದಿದ್ದರೆ ಯಾರೇನು ಮಾಡಿದರೂ ನೀರ್ಗಲ್ಲ ಮೇಲೆ ಮಳೆ ಹೊಯ್ದಂತೆ !!!!!!
ನಿಮ್ಮ ವಾದದಂತೆ ನೋಡಿದರೆ ನಾವು ಕನ್ನಡ ಬಿಟ್ಟು ಇಂಗ್ಲಿಷ್ ಕಲಿಯಬೇಕು ಮೆದುಳು ಚೆನ್ನಾಗಿ ಕೆಲಸ ಮಾಡಲು!!!! ಯಾಕಂದ್ರೆ ಈಗಿನ ಸಂಶೋದಕರೆಲ್ಲ ಇಂಗ್ಲಿಷ್ ಹೆಚ್ಚು ಮಾತಾಡುತ್ತಾರೆ!! ಇದು ಒಪ್ಪಲಾಗದು ಅಲ್ಲವೇ? ಹಾಗಾಗಿ ಕೆಲವು ಪದ ಕಷ್ಟ ಎಂದು ತೆಗೆದು ಬಿಡೋ ಬದಲು ,ಕನ್ನಡ ವನ್ನೇ ತೆಗೆದು ಬಿಟ್ಟರೆ ? ಹಾಗಾಗುತ್ತದೆಯೇ? ಒಪ್ಪತಕ್ಕಂತಹುದಲ್ಲ ಅದು !!!!! ಇನ್ನು ಭಾಷಾ ವಿಜ್ಞಾನಿಗಳು ಏನಾದರೂ ಹೇಳಿದ್ದರೆ ಯಾವ ಸಂದರ್ಬದಲ್ಲಿ ಯಾಕೆ ಹಾಗೆ ಹೇಳಿದ್ದಾರೆ ಎಂದು ಯೋಚಿಸಬೇಕು ಸುಮ್ಮನೆ ಅವರು ಹೇಳಿದ ಶಭ್ದಾರ್ಥ ತೆಗೆದುಕೊಂಡು ಅನ್ವಯಿಸಿಕೊಂಡರೆ, ಅವರು ಪಟ್ಟ ಶ್ರಮ ನೀರಿನಲ್ಲಿ ಹೋಮ ಮಾಡಿದಂತೆ ಅಸ್ಟೇ . ನಮಗೆ ನಸ್ಟ!!!!!
ಯೋಚಿಸಿ !!!! ಚರ್ಚಿಸಿ …ಮುಖ್ಯವಾಗಿ ಎಲ್ಲಾ ದೃಷ್ಟಿ ಕೋನಗಳಿಂದ. ಇದು ನಾವು ನೀವೆಲ್ಲರೂ ಮಾಡಬೇಕಾದ ಬಹುಮುಖ್ಯ ಕೆಲಸ.
ನಾವು ಉಪಯೋಗಿಸದೆ ಬಿಟ್ಟರೆ ಕಷ್ಟದ ಶಭ್ಧಗಳು ಮಾತ್ರವಲ್ಲ ಸುಲಭದ ಶಬ್ಧಗಳೂ ಮರೆಯಾಗಿ ಬಿಡುತ್ತವೆ. ಮಹಾಪ್ರಾಣ ಗಳು ಮಾತ್ರವಲ್ಲ ಎಲ್ಲವೂ ಮರೆಯಾಗಿ ಬಿಡುತ್ತವೆ.
ಧನ್ಯವಾದ ಗಳು .
ಸುಮಾರು ಮೂವತ್ತು ವರ್ಷ ಭಾಷಾ ವಿಜ್ಞಾನಿಯಾಗಿ ಕೆಲಸ ಮಾಡಿದ ಶಂಕರ ಬಟ್ಟರಿಗೆ ಶಾಂತಿಯವರು ಕೊಟ್ಟ ಸಲಹೆ ಸರಿಯಾಗಿಯೇ ಇದೆ!
ಅವರು ಮೂವತ್ತು ವರುಷ ಎಲ್ಲಾ ಕೋನಗಳಿಂದ ಯೋಚಿಸಿಲ್ಲ ! ಇನ್ನೊಂದು ಮೂವತ್ತು ವರ್ಷ ಎಲ್ಲಾ ಕೋನಗಳಲ್ಲಿ ಯೋಚಿಸುವುದನ್ನು ಕಲಿಯಬೇಕು!
ಋ ಕಾರ ರು ಕಾರ ಒಂದೇ ರೀತಿಯಲ್ಲಿ ಉಲಿಯಲ್ಪಡುತ್ತವೆ. ಎಲ್ಲಿ ಋ ಮತ್ತು ಎಲ್ಲಿ ರು ಬಳಸಬೇಕೆಂಬುದಕ್ಕೆ ಒಂದು thumb rule ಇದೆಯೇ? ಎಷ್ಟು ಶಬ್ದಗಳನ್ನ ಅಂ<ತ ನೆನಪಿಟ್ಟುಕೊಳ್ಲುವುದು? ಅದರ ಬದಲು ;’ರು’ ಬಳಸಲು ಸ್ವಾತಂತ್ರ ಕೊಟ್ಟರೆ ಎಲದಲರಿಗೂ ಅನುಕೂಲವಲ್ಲವೇ? ಈಗಿರುವ ಸಮಯದಲ್ಲಿ ವಿಷಯಕ್ಕಿಂತ ಮೊದಲು ಭಾಷೆಯನ್ನು ಅರಿತುಕೊಂಡು ಮುಂದುವರೆಯಬೇಕಾಗಿದೆ. ಭಾಷೆಯೇ ಮೊದಲ ತೊಡಕಾದರೆ ವಿಷಯ ಕಲಿಯುವುದೆಂತು?
ಭಾಷೆ ತೊಡಕಾಗದಂತೆ ಮಾರ್ಪಡಿಸುವುದು ಒಳ್ಳೆಯದು. ಅ ಕಾರ ’ಹ’ಕಾರ ಕಲಿಸಿಕೊಂದು ನಾಲಗೆ ತಿದ್ದುವುದಕ್ಕಿಂತ ವಿಷಯದ ಮೂಲಕ ಮೆದುಳನ್ನೇ ತಿದ್ದುವುದು ಒಳ್ಲೆಯದು.
ಹ ಕಾರ ಕನ್ನದ ದ ಅಕ್ಕರ ವಲ್ಲ. ಹಾಗಾಗಿ ಬಿಟ್ಟರೆ ತಪ್ಪೇನಿಲ್ಲ. ಜಪಾನೀಸ ಭಾಷೆಯಲ್ಲಿ ’ವ’ ಕಾರ ವಿಲ್ಲ. ಅದೆನೂ ತೊಡಕಲ್ಲ
@ಶ್ರೀಹರ್ಷ,
ಬೇರೆಯವರಿಗೆ ಬೊದನೆ ಮಾಡುವ ನೀವು ಮಾಡುತ್ತಿರುವುದೇನು? ಬೇರೆಯವರಿಗೆ ಹೇಳುತ್ತೀರಿ ಬೇಕಾದ್ದನ್ನು ತೆಗೆದು ವಾದಿಸುತ್ತೀರಿ ಎಂದು!! ನೀವು, ನಾನು , ನಮ್ಮ ನಿಮ೦ಥವರಿಗೆ ಎಂದು ಹೇಳಿದ್ದನ್ನು ಶಂಕರ ಭಟ್ಟರಿಗೆ ಹೇಳಿದ್ದೆಂದು ಹೇಳಿ ಅದ್ಬುತ ಪ್ರೌಢಿಮೆ ಮೆರೆದಿದ್ದೀರಿ !!!!! ಕಲಾಕಾರರು ಕಣ್ರೀ ನೀವು !!! ಇದನ್ನೇ ನಾನು ಹೇಳಿದ್ದು ಪೂರ್ತಿ ವಾಕ್ಯದ ಒಂದು ಶಭ್ಧ (ತನಗೆ ಬೇಕಾದದ್ದು ವಾದದಲ್ಲಿ ಜರೆಯಲು ) ಹೆಕ್ಕಿ ತೆಗೆದು ಅದರ ಅರ್ಥವನ್ನ ತನ್ನದೇ ಮಾನದಂಡದಲ್ಲಿ ಕಲ್ಪಿಸಿ , ಇದಮಿತ್ಥಂ ಅಂತ ಹೇಳೋದು ಅಂತ !!!!
ಮೊದಲು ನಿಮ್ಮ ಯೋಚನಾ ವಿಧಾನವನ್ನು ತಿದ್ದಿಕೊಳ್ಳಿ. ಆಮೇಲೆ ಕನ್ನಡವನ್ನ ತಿದ್ದಬಹುದು !!!
ಇನ್ನು ಇದರಲ್ಲೂ ಒಂದೊಂದೇ ಶಭ್ಧ ಹೆಕ್ಕಿ ತೆಗೆದು ಅದರ ಅರ್ಥವನ್ನೇ ಸಮೀಕರಿಸಿ, ಅದನ್ನು ಎಲ್ಲೆಲ್ಲೋ ಪೋಣಿಸಿ ..ಶಾಂತಿ ಯವರು ಇದನ್ನೇ ಹೇಳಿದ್ದು ಅನ್ನಬೇಡಿ !!!!
ಧನ್ಯವಾದ
<>
ನಾನು ಏನು ಬೋಧನೆ ಮಾಡಿದ್ದೇನೆ ದಯವಿಟ್ಟು ತಿಳಿಸೋಣವಾಗಲಿ.
<>
ಇದು ಎಲ್ಲರಿಗೂ ಗೊತ್ತಿರುವ ವಿಷಯ. ಹೊಸದಿದ್ದರೆ ಹೇಳಿ 😉
ಶಂಕರ ಬಟ್ಟರು ಸ್ಪಷ್ಟವಾಗಿ ಕನ್ನಡ ಬರಹವನ್ನು ಸರಿಪಡಿಸೋಣ ಹೊತ್ತಗೆಯಲ್ಲಿ ಹೊಸ ಶಾಲೆಯ ಬಗ್ಗೆ ಹೇಳಿದ್ದಾರೆ. ಅವರು ಹೇಳಿದ್ದನ್ನೆ ಇಲ್ಲಿ ಅವರ ಪರವಾದವರು ಹೇಳುತ್ತಿದ್ದಾರೆ.
ಯೋಚನಾವಿಧಾನದಲ್ಲಿ ಎಲ್ಲಿ ತಪ್ಪಿದೆ ಎಂದು ದಯವಿಟ್ಟು ತಿಳಿಸಿ. ತಮ್ಮನ್ನು ಗುರುಸಮಾನರಾಗಿ ತಿಳಿದು ಕಲಿತುಕೊಳ್ಲುತ್ತೇನೆ. ಈವನ ಪೂರ್ತ ಕನ್ನಡಿಗರಿಗೆ ಕನ್ನಡವೇ ಅಲ್ಲದ ಹ ಕಾರ ಋ ಕಾರ ಕಲಿಸುತ್ತಾ ಕೂರುವದರಲ್ಲಿ ಯಾವ ಪುರುಷಾರ್ಥವಿದೆ ಎಂದು ತಾವು ನನಗೆ ದಾರಿ ತೋರಿಸಬೇಕು.
ಹಾಗೆಯೇ ಕನ್ನಡ ಪದಗಳಲ್ಲಿ ಬಳಕೆಯಾಗದ ಮಹಾಪ್ರಾಣಗಳನ್ನು ಏಕೆ ಶತಾಯಗತಾಯ ಕಲಿಸಲೇಬೇಕು ಎಂದು ದಯವಿಟ್ಟು ತಿಳಿಸಿ.
ಆರ್ಯಭಟ \ನಿಗೆ ಸಕ್ಕದ ಗೊತ್ತಿತ್ತು ಹಾಗಾಗಿ ನಾವು ಬುದ್ದಿವಂತರಾಗಬೇಕಾದರೆ ಸಕ್ಕದಕ್ಕೆ ಕನ್ನಡ ಹೊಂದಿಸಿಕೊಳ್ಳಬೇಕು ಎಂಬ ಅವೈಜ್ಞಾನಿಕ ವಾದ ಮಾಡುವುದಿಲ್ಲವೆಂಬ ನಂಬಿಕೆಯೊಂದಿಗೆ ತಮ್ಮ ಉತ್ತರಕ್ಕೆ ಕಾಯುತ್ತಿರುತ್ತೇನೆ.
ಶಾಂತಿ ಅವರೇ,
ಭಾಷೆಯ ಉಲಿಯುವಿಕೆಗೂ ಬುಧ್ಧಿಮಟ್ಟಕ್ಕೂ ಸಂಬಂಧ ಇದೆ ಎಂಬುದನ್ನು ನೀವು ಹೇಳ್ತಿದೀರಿ.
ಆರ್ಯಭಟರ ಉದಾಹರಣೆ ಅದೇ ನಿಟ್ಟಿನಲ್ಲಿ ತೆಗೆದುಕೊಂಡಿದೀರಿ ಎಂದು ಭಾವಿಸುತ್ತೇನೆ.
ಇದಕ್ಕೆ ಯಾವುದೇ ವೈಜ್ನ್ಯಾನಿಕ ಪುರಾವೆಗಳಿಲ್ಲ ಎಂದು ನಾನು ನಂಬಿದ್ದೇನೆ. ನಿಮ್ಮ ಬಳಿ ಇದ್ದರೆ ಹಂಚಿಕೊಳ್ಳಿ.
ಮೇಡಂ..
ಮೆದಾವಿ ನಹಿ. ಮೇಧಾವಿ (ಮಹಾಪ್ರಾಣದ ಗಲತೀ ಇರಲಿ.. ಹ್ರಸ್ವಸ್ವರ ಮಾಡಿ ಬಿಟ್ರೀ..)
ಸಂದರ್ಬದಲ್ಲಿ ಅಯ್ಯೋ ಶಿವ ಶಿವ ಸಂದರ್ಭ ಅದು.. ದೋಷ!
“ಶಭ್ದಾರ್ಥ ಅಲ್ಲ ಶಬ್ದಾರ್ಥ”.. ಮಹಾಪ್ರಾಣದ confusion.
“ಶಭ್ಧಗಳು, ಶಬ್ಧಗಳೂ” ಏನಿದು ಒಂದು ಪದದ ಎರೆಡೆರಡು ಸ್ಪೆಲ್ಲಿಂಗು?
ಶಾಂತಿ ಬೆಹನ್.. ನಿಮ್ಮ ಬಾತ್ ಠೀಕ್ ಇದೆ. ಕನ್ನಡದಾಗೆ ಸಬ್ ಬಾಷಾ ಪದ ಬರಲಿ..
ಪಾಪ ತುಂಬಾ ಜಲ್ದಿ ಜಲ್ದಿ ಟಿಪ್ಪಣಿ ಬರೆಯಕ್ಕೆ ಹೋಗಿ ನಿಮಗಾ ಹಡಬಡೀ ಆಗ್ಯಾದ.. ಜ್ಸರ ಸಾವಾಧಾನ್ ಸಾವಕಾಶ್ ಬರೀರಿ…
ನಿಮ್ಮ್ ಬಹಸ್ ಮಸ್ತ್ ಇದೆ.
ಶುಖ್ರಿಯಾ!
ನೋಡಿ ನಾನ್ ದೇಹಾತೀ, ನಿಮ್ಮ ಹಂಗಾ ಪಡೀಲಿಖಾ ಇಲ್ಲ..
ಭಾಷಾ ನ ಬಾಷಾ ಅಂತ ಬರೆದಿ.
ಇಂಗ್ಲೀಶ್ ಮನೆಮಾತಾದವರು ಮಹಾಪ್ರಾಣ ಉಲಿಯಲ್ಲ ಅಂತ ನಾನು ಹೇಳಿದ್ದೆ.
ಗೆಳೆಯರೊಬ್ಬರು ಇಂಗ್ಲೀಷರು ಉಲಿಯಬಲ್ಲರು/ಉಲಿಯುತ್ತಾರೆ ಎಂಬುದು ತೋರಿಸಿಕೊಟ್ಟಿದಾರೆ.
ನಾನು ಇಲ್ಲಿ ಕೊಟ್ಟ ಉದಾಹರಣೆ ತಪ್ಪಾಗಿದೆ.
ಶಾಂತಿ ಅವರೇ,
ಮಹಾಪ್ರಾಣ ಉಲಿಯುವಿಕೆಗೂ ಬುಧ್ಧಿಮಟ್ಟಕ್ಕೂ ತಳುಕು ಹಾಕೋಕೆ ನನಗೆ ಇನ್ನೂ ಪುರಾವೆ ದೊರೆತಿಲ್ಲ.
ನಿಮಗೆ ಸಿಕ್ಕರೆ ಹಂಚಿಕೊಳ್ಳಿ.
ಇಲ್ರೀ ಶಾಂತಿ ಬೆಹೆನ್..
ನಿಮ್ಮ ದೂಸರ ಬರಹದಾಗಿನ ಟಿಪ್ಪಣಿ ದೇಖಿಸಿ, ನಾನು ಕನ್ನಡದಲ್ಲಿ ಸಬ್ ಭಾಷಾ ಶಬ್ದ ಬರಲಿ ಅನ್ನೋವ ಆದೆನು.
ಸಂಸ್ಕೃತ್ ಇರಲಿ, ಹಿಂದಿ ಬರಲಿ, ಇಂಗ್ಲೀಶ್ ಸೇರಲಿ.. ನಮ್ಮ ಕನ್ನಡ ಬೋಲಿ ಬಡಾ ಆಗಲಿ..
ನಿಮ್ಮ ಮಾತು ಠೀಕ್ ಇದೆ ನೋಡಿ..
ಏಹಸಾನ್ಮಂದ್..
…
ಕಿರಣ್, ಅಜಕ್ಕಳ ಗಿರೀಶ ಭಟ್ಟರ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗಿಂತ ಭಿನ್ನ ರೀತಿಯಲ್ಲಿದೆ ನಿಮ್ಮ ತರ್ಕ.
ಸಾಕಷ್ಟು ಸಂಗತಿಗಳು ಒಪ್ಪುವಂತಹ ರೀತಿಯಲ್ಲೂ ಇದೆ.
ಆದರೂ ಕೆಲವು ವಿಷಯಗಳ ಕುರಿತಾಗಿ ನನ್ನ ಭಿನ್ನಮತವಿದೆ.
ನೀವು ಪ್ರಶ್ನೆಗಳನ್ನು ಸ್ವಾಗತಿಸುವಿರಿ, ಪ್ರಶ್ನಿಸಿದವರ ಮೇಲೆ ಹಾರಾಡುವುದಿಲ್ಲ, ತರ್ಕಬದ್ಧವಾದುದನ್ನು ಒಪ್ಪುವಿರಿ ಎಂದು ಭಾವಿಸಿ ನನ್ನ ಪ್ರತಿಕ್ರಿಯೆಗಳನ್ನು ಬರೆಯುತ್ತಿರುವೆ.
> ಇದರ ಬದಲಾಗಿ ಜನರು ಉಲಿದಿದ್ದನ್ನು ಕಣ್ಗೊತ್ತಿಗೊಂಡು ಸರಿಯೆಂದು ಒಪ್ಪಿಕೊಳ್ಳುವುದೇ ನುಡಿಯರಿಗರಿಗೂ ಹುಲುಜನರಿಗೂ ಒಪ್ಪುವಂತದ್ದು, ಅದೇ ವೈಗ್ನಾನಿಕತೆಯು
ಇದು ಒಪ್ಪತಕ್ಕ ಮಾತಲ್ಲ. ಪ್ರತಿಯೊಂದು ಭಾಷೆಯಲ್ಲೂ ಪದಗಳನ್ನು ಯಾವ ರೀತಿ ಉಚ್ಚರಿಸಬೇಕೆಂದು ಇರುತ್ತದೆ.
ಉದಾಹರಣೆಗೆ ಇಂಗ್ಲಿಷಿನ Rendezvous ಎಂಬ ಪದವನ್ನೇ ತೆಗೆದುಕೊಳ್ಳಿ (ಈ ಪದವನ್ನೇ ಏಕೆ ತೆಗೆದುಕೊಂಡೆನೆಂದರೆ, ಇದನ್ನು ಹಲವು ರೀತಿ ಉಚ್ಚರಿಸಬಹುದು). ಅದನ್ನು ಹೇಗೆ ಉಚ್ಚರಿಸಬೇಕೆಂದೂ ಇಂಗ್ಲಿಷಿನ ನಿಘಂಟಿನಲ್ಲಿ ದಾಖಲಾಗಿದೆ.
ನೀವು ಇಂಗ್ಲಿಷಿನಲ್ಲಿ ಮಾತನಾಡುವಾಗ Rendezvous ಪದವನ್ನು ಆ ಭಾಷೆಯಲ್ಲಿ ತಿಳಿಸಿದಂತೆಯೇ ಉಚ್ಚರಿಸಬೇಕು.
ಇಲ್ಲದಿದ್ದರೆ ನಿಮ್ಮೊಡನೆ ಮಾತನಾಡುತ್ತಿರುವವನಿಗೆ ಅದು ತಿಳಿಯುವುದಿಲ್ಲ. ಮುಂದಿರುವವನಿಗೆ ತಿಳಿಯದಿದ್ದರೆ, ಸಂವಹನ ಅಲ್ಲಿ ನಿಂತ ಹಾಗೇ ಅಲ್ಲವೆ?
ಭಾಷೆ ಇರುವುದೇ ನಿಯಮಗಳ ಮೇಲೆ – ಉಚ್ಚಾರಣೆಗೂ ನಿಯಮವಿರಬೇಕು.
ಹಾಗಿಲ್ಲದೆ, ಎಲ್ಲರೂ ಎಲ್ಲ ಪದಗಳನ್ನೂ ತಮಗಿಷ್ಟ ಬಂದಂತೆ ಉಚ್ಚರಿಸತೊಡಗಿದರೆ, ಅದನ್ನು ಭಾಷೆ ಎಂದು ಕರೆಯಲಾಗುತ್ತದೆಯೇ?
> ಆದರೆ ಜನಸಾಮಾನ್ಯರಿಗೆ ಮನುಷ್ಯತ್ವವನ್ನು ಅಲ್ಲಗಳೆಯದೆ ಇರುವಲ್ಲಿ ತಮಿಳು ಕನ್ನಡಕ್ಕಿಂತ ಮುಂದಿದೆ. ಹೌದು, ಕನ್ನಡನಾಡಿನಲ್ಲೇನು ಅಮೇರಿಕದಲ್ಲಿ ನಡೆದಂತೆ ನೆತ್ತರ
> ಚೆಲ್ಲಾಟ ನಡೆದಿಲ್ಲ, ಆದರೆ ಅದರ ಬದಲಾಗಿ ಸಮಾಜದಲ್ಲಿ ಮತ್ತು ಅದರ ಗುರುತೆನ್ನಬಹುದಾದ ನುಡಿ-ಬರಹಗಳಲ್ಲಿ ಮೇಲು-ಕೀಳುಗಳು ಏರ್ಪಟ್ಟು ಪ್ರತಿದಿನವೂ ಕನ್ನಡಿಗರ
> ಮನುಷ್ಯತ್ವವನ್ನೇ ಅಲ್ಲಗಳೆದು ಕಾಡುತ್ತಿವೆ, ಅಶ್ಟೆ.
ಈ ರೀತಿಯ ಮೇಲು-ಕೀಳು ಇರುವುದು ಭಾಷೆಯ ಕಾರಣದಿಂದಲ್ಲ. ಭಾಷೆಯನ್ನು ಬದಲಾಯಿಸಿದ ಕೂಡಲೇ ಇದು ಸರಿಹೋಗುವುದೂ ಇಲ್ಲ.
ಮೇಲು-ಕೀಳು ಭಾವನೆ ಇರುವುದು ಮನುಷ್ಯರ ಮನಸ್ಸಿನ ಒಳಗೆ. ಅದನ್ನು ಬದಲಾಯಿಸದೆ ಭಾಷೆಯನ್ನು ಮಾತ್ರ ಬದಲಾಯಿಸಿದರೆ, ಮೇಲು-ಕೀಳು ಭಾವನೆ ಹೋಗುವುದಿಲ್ಲ.
ಈ ರೀತಿಯ ತಾರತಮ್ಯ ಭಾವನೆಗಳು ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ.
ಅಮೆರಿಕದಲ್ಲೂ ಕಪ್ಪು ಜನರನ್ನು ಕೀಳಾಗಿ ಕಾಣಲಾಯಿತು. ಅವರ ಭಾಷೆಯಲ್ಲಿ ನಾವು ಕನ್ನಡದಲಿರುವ ಕಷ್ಟಗಳಾವುದನ್ನೂ ಕಾಣುವುದಿಲ್ಲ.
ಇಂಗ್ಲಿಷಿನಲ್ಲಿ ಕೇವಲ ೨೬ ಅಕ್ಷರಗಳಿವೆ. ಹೀಗಿದ್ದೂ ಈ ರೀತಿಯ ತಾರತಮ್ಯಕ್ಕೆ ಕಾರಣವೇನು?
ಇಂದು ಈ ರೀತಿಯ ತಾರತಮ್ಯ ಅಮೆರಿಕದಲ್ಲಿ ಕಡಿಮೆಯಾಗಿದೆ. ಆ ಜನ ತಮ್ಮ ಅಧ್ಯಕ್ಷನನ್ನಾಗಿ ಕಪ್ಪು ಜನಾಂಗಕ್ಕೆ ಸೇರಿದವನನ್ನೇ ಆರಿಸಿದ್ದಾರೆ.
ಒಟ್ಟಿನಲ್ಲಿ ಅಲ್ಲಿ ಬದಲಾವಣೆ ಕಣ್ಣಿಗೆ ಕಾಣಿಸುತ್ತದೆ. ಈ ರೀತಿಯ ಬದಲಾವಣೆ ತರಲು ಅವರು ತಮ್ಮ ಭಾಷೆಯನ್ನೇನೂ ಸುಧಾರಿಸಲಿಲ್ಲವಲ್ಲ?
ತಾರತಮ್ಯ ಭಾವನೆಗಳು ಹೋಗಬೇಕು, ಎಲ್ಲರೂ ಸಮಾನವಾಗಿರುವ ಸಮಾಜ ರಚನೆಯಾಗಬೇಕು.
ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ, ಇದನ್ನು ಸಾಧಿಸಲು ಭಾಷೆಯ ಬದಲಾವಣೆಯಿಂದ ಸಾಧ್ಯ ಎನ್ನುವುದು ನನಗೆ ಒಪ್ಪಿಗೆಯಾಗುತ್ತಿಲ್ಲ.
ಇಷ್ಟು ಸುಲಭದಲ್ಲಿ ಇದು ಸಾಧ್ಯವಾಗುತ್ತದೆ ಎಂದಾದರೆ, ಕನ್ನಡವನ್ನೂ ಪೂರ್ಣವಾಗಿ ಬದಲಾಯಿಸಿಬಿಡೋಣ.
ನಾನಿಲ್ಲಿ ಕೇವಲ ಶಂಕರಭಟ್ಟರು ಬರೆದರೆಂಬ ಕಾರಣಕ್ಕೆ ವಿರೋಧವನ್ನೋ ಅಥವಾ ಅಜಕ್ಕಳರು ಬರೆದರೆಂಬ ಕಾರಣಕ್ಕೆ ಸಮರ್ಥನೆಯನ್ನೋ ಮಾಡುತ್ತಿಲ್ಲ.
ಅವರಿಬ್ಬರೂ ನನಗೆ ಪರಿಚಯವಿಲ್ಲ. ಹಾಗೆ ನೋಡಿದರೆ, ಇಲ್ಲಿನ ಚರ್ಚೆಯಲ್ಲಿ ಭಾಗವಹಿಸುತ್ತಿರುವ ಯಾರೊಬ್ಬರೂ ನನಗೆ ಪರಿಚಯಸ್ಥರಲ್ಲ.
ಹೀಗಾಗಿ, ಕುರುಡಾಗಿ ಯಾವುದನ್ನೂ ನಾನು ಸಮರ್ಥಿಸುತ್ತಿಲ್ಲ ಅಥವಾ ವಿರೋಧಿಸುತ್ತಿಲ್ಲ.
ಮುಂದೆ ನನ್ನ ಪ್ರತಿಕ್ರಿಯೆಗೆ ಬರುವ ಕಾಮೆಂಟುಗಳನ್ನು ಗಮನದಲ್ಲಿಟ್ಟುಕೊಂಡು ಈ ಮುನ್ನುಡಿಯನ್ನು ಬರೆಯಬೇಕಾಯಿತಷ್ಟೆ.
ಹಿಂದಿನ ಚರ್ಚೆಗಳಿಂದ ಪೂರ್ವಾಗ್ರಹಕ್ಕೊಳಗಾಗದೇ ಪ್ರತಿಕ್ರಿಯಿಸಿದರೆ ಉತ್ತಮವಾಗಿರುತ್ತದೆ ಎಂದೂ ತಿಳಿಸಲಿಚ್ಚಿಸುವೆ.
ನರೇಂದ್ರ ಕುಮಾರ್ ಅವರೇ,
ಒಳ್ಳೆಯ ಪ್ರಶ್ನೆಗಳನ್ನೇ ಎತ್ತಿದ್ದೀರಿ.
ನಿಮ್ಮ ಪ್ರಶ್ನೆಗಳಿಗೆ ನಾನು ಉತ್ತರಿಸಬಯಸುತ್ತೇನೆ.
ಪ್ರತಿಯೊಬ್ಬರೂ ತಮ್ಮ ತಮ್ಮದೇ ರೀತಿಯಲ್ಲಿ ಮಾತನಾಡತೊಡಗಿದರೆ, ತೊಂದರೆಯೇ ಆಗುತ್ತದಲ್ಲವೇ ಎಂದು ನೀವು ಕೇಳಿದ್ದೀರಾ.
ಹೌದು. ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ಮಾತನಾಡಿದರೆ ಅದು ತೊಂದರೆಯೇ.
ಆದರೆ, ಹಾಗಾಗದಂತೆ ಅದನ್ನು ಸಮಾಜವೇ ನಿಭಾಯಿಸುತ್ತದೆ. ಬೆಳೆಯುವ ಮಗುವು, ತನ್ನ ಸುತ್ತಲಿನ ಮಾತುಗಳನ್ನು ಆಲಿಸಿ ಮಾತು ಕಲೆಯೋದರಿಂದ, ಸ್ವಾಭಾವಿಕವಾಗಿ ಎಲ್ಲರಂತೆಯೇ ಮಾತನಾಡುತ್ತದೆ.
ಕಿರಣ್ ಅವರು ಇಲ್ಲಿ ಹೇಳುತ್ತಿರೋದು ಒಂದು ಸಮುದಾಯವನ್ನೇ ಗಮನದಲ್ಲಿಟ್ಟುಕೊಂಡು.
ಒಂದು ಸಮುದಾಯದಲ್ಲಿ ಯಾವ ಭಾಷೆ ಆಡಲಾಗುತ್ತಿದೆಯೋ ಅದೇ ಸರಿ ಎಂದು ಒಪ್ಪಿಕೊಳ್ಳುವ ಮನಸ್ಥಿತಿ ಬೇಕಾಗಿದೆ.
ಆಲೋಚಿಸಿ ನೋಡಿ.
ಮೇಲು-ಕೀಳು ಮೂಡುವಲ್ಲಿ ಭಾಷೆಯ ಪಾತ್ರ ಇಲ್ಲ ಎಂದು ನೀವು ಹೇಳಿದ್ದೀರ.
ಕೆಲವು ಉದಾಹರಣೆಗಳನ್ನು ನಿಮ್ಮ ಮುಂದಿಟ್ಟು, ಆ ಬಗ್ಗೆ ನೀವು ಆಲೋಚಿಸಿ ಎಂದು ಕೇಳಿಕೊಳ್ಳಬಲ್ಲೆನಷ್ಟೇ.
ತನ್ನ ಊರಿನಲ್ಲೇ ‘ಹ’ಕಾರ ಕೇಳದ ಮಗು, ತನ್ನ ನುಡಿಯಲ್ಲೂ ‘ಹ’ಕಾರ ಬಿಟ್ಟಿರುತ್ತದೆ. ಅದಕ್ಕೆ ಕನ್ನಡವೇ ಬರೋಲ್ಲ ಎನ್ನೋದು ಆ ಮಗುವಲ್ಲಿ ಕೀಳರಿಮೆ ಹುಟ್ಟು ಹಾಕಿದಂತೆ ತಾನೇ?
ಹ್ಯುಮಾನಿಟೀಸ್ ಬಗ್ಗೆ ತಿಳಿದವರಲ್ಲಿ ಈ ಮಾತು ಹೇಳಿ ನೋಡಿ, ಒಬ್ಬರ ನುಡಿಯನ್ನು ಆಡಿಕೊಳ್ಳುವುದು, ನುಡಿ ಚೆನ್ನಾಗಿಲ್ಲ ಎನ್ನುವುದು, ನುಡಿ ಸರಿಯಲ್ಲ ಎನ್ನೋದು, ‘ರೇಷಿಯಲ್ ಬಿಹೇವಿಯರ್’ ಎಂದೇ ಬಣ್ಣಿಸುತ್ತಾರೆ.
ಮಹಾಪ್ರಾಣ ಉಲಿಯಲಾರದ ಮಕ್ಕಳು, ಶಾಲೆಯಲ್ಲಿ ಅದೆಷ್ಟು ಬಾರಿ ಬೈಸಿಕೊಂಡಿರ್ತಾರೋ ದೇವರೇ ಬಲ್ಲ. ಅವರಲ್ಲಿ, ತಮ್ಮ ನುಡಿಯ ಬಗ್ಗೆ, ತಮ್ಮ ನಾಲಗೆಯ ಬಗ್ಗೆ ಕೀಳರಿಮೆ ಹುಟ್ಟು ಹಾಕಿದಂತೆ ತಾನೇ?
ಈ ವಿಚಾರವಾಗಿ ನಾನು ಮೇಷ್ಟ್ರುಗಳನ್ನು ದೂರುವುದಿಲ್ಲ. ಬದಲಾಗಿ, ಈ ವ್ಯವಸ್ಥೆ ನಿರ್ಮಾಣವಾಗಿದೆ, ಅದನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸಿದರೆ ಒಳ್ಳೆಯ ವ್ಯವಸ್ಥೆ ತಾನಾಗೇ ಮೂಡುತ್ತದೆ ಎಂಬ ನಂಬಿಕೆ ನನ್ನದು.
ಇದೇ ವಿಷಯದಲ್ಲಿ ಮೂಡಿ ಬಂದಿದ್ದ ಈ ಬ್ಲಾಗನ್ನೊಮ್ಮೆ ನೋಡಿ: http://enguru.blogspot.com/2008/11/blog-post.html
> ಮಹಾಪ್ರಾಣ ಉಲಿಯಲಾರದ ಮಕ್ಕಳು, ಶಾಲೆಯಲ್ಲಿ ಅದೆಷ್ಟು ಬಾರಿ ಬೈಸಿಕೊಂಡಿರ್ತಾರೋ ದೇವರೇ ಬಲ್ಲ. ಅವರಲ್ಲಿ, ತಮ್ಮ ನುಡಿಯ ಬಗ್ಗೆ, ತಮ್ಮ ನಾಲಗೆಯ ಬಗ್ಗೆ ಕೀಳರಿಮೆ
> ಹುಟ್ಟು ಹಾಕಿದಂತೆ ತಾನೇ?
ಒಪ್ಪಿದೆ. ಆದರೆ, ಕೇವಲ ಮಹಾಪ್ರಾಣ ಉಲಿಯುವುದಕ್ಕಷ್ಟೇ ಇದು ಸೀಮಿತವಾಗಿರುವುದಿಲ್ಲವಲ್ಲ?
ನಾವು ಹುಟ್ಟು ಹಾಕುವ ಹೊಸ ಪದಗಳನ್ನು ಉಚ್ಚರಿಸಲಾಗದಿದ್ದಾಗಲೂ ಇದೇ ರೀತಿಯ ಬೈಗುಳ ಇದ್ದೇ ಇರುತ್ತದೆಯಲ್ಲವೆ?
ಉದಾಹರಣೆಗೆ, ಅಚ್ಚಕನ್ನಡದ ಪದ “ಚಿಕ್ಕಪ್ಪ” – ಇದನ್ನು ಸಾಕಷ್ಟು ಮಕ್ಕಳು “ಚಿಪ್ಪಕ್ಕ” ಎನ್ನುತ್ತಾರೆ. ಹೊರನೋಟಕ್ಕೆ ಇದೇನೂ ಕಠಿಣ ಪದವಲ್ಲ. ಈಗ ಈ ಸಮಸ್ಯೆಯನ್ನು ಪರಿಹರಿಸಲು ಹೊಸ ಪದವನ್ನು ಹುಟ್ಟುಹಾಕುವುದೋ ಅಥವಾ ಮಗುವಿಗೆ ಸರಿಯಾಗಿ ಉಚ್ಚರಿಸುವಂತೆ ಕಲಿಸುವುದೋ?
ನನಗನ್ನಿಸುವುದು, ಈ ಸಮಸ್ಯೆಯನ್ನು ಸರಿ ಪಡಿಸಲು, ನಾವು ಕಲಿಸುವ ರೀತಿಯನ್ನು ಬದಲಿಸಬೇಕು.
ಕೀಳರಿಮೆ ಬರದ ರೀತಿಯಲ್ಲಿ ತಿಳಿಸಿ ಹೇಳುವ ಶಿಕ್ಷಕರನ್ನು ತಯಾರಿಸಬೇಕು. ಕೇವಲ ಬೈಯ್ಯುವುದರಿಂದ ತಿದ್ದಲಾಗುವುದಿಲ್ಲ ಎನ್ನುವುದು ಶಿಕ್ಷಕರಿಗೆ ಮನವರಿಕೆಯಾಗಬೇಕು.
ಇಲ್ಲದಿದ್ದರೆ ಕೇವಲ ಪದಗಳ ಬದಲಾವಣೆಯಿಂದ ಬೈಗುಳನ್ನೂ ಮತ್ತು ತತ್ಪರಿಣಾಮವಾಗಿ ಉಂಟಾಗುವ ಕೀಳರಿಮೆಯನ್ನೂ ಹೋಗಲಾಡಿಸಲಾಗುವುದಿಲ್ಲ.
ನರೇಂದ್ರ ಕುಮಾರ್ ಅವರೇ,
ಹೊಸದಾಗಿ ಹುಟ್ಟು ಹಾಕುವ ಪದಗಳು, ಆದಷ್ಟು ಆಡುನುಡಿಗೆ ಹತ್ತಿರ ಇರಬೇಕು.
ಆಗ, ಈ ತೊಂದರೆಗಳು ಬರುವುದಿಲ್ಲ. (ಸಾಧ್ಯವಾದಲ್ಲಿ) ಆಡುನುಡಿಯಲ್ಲಿ ಇರುವ ಪದಗಳ ಬಳಕೆ ಮಾಡುವುದೇ ಹೆಚ್ಚು ಸೂಕ್ತ.
ಚಿಪ್ಪಕ್ಕ ಎನ್ನುವ ಮಗು ಸ್ವಲ್ಪ ದಿನಗಳಲ್ಲೇ, ತನ್ನ ಪರಿಸರದಲ್ಲಿ ‘ಚಿಕ್ಕಪ್ಪ’ ಎನ್ನುವುದು ಕೇಳಿ, ಅದನ್ನು ಬಳಸಲು ತೊಡಗುತ್ತದೆ.
ಇದು ನಿಮ್ಮ ಅನುಭವಕ್ಕೂ ಬಂದಿರಬಹುದು.
ನೀವು ಕಿವಿಗೊಟ್ಟು ಕೇಳಿದರೆ ನಿಮಗೆ ತಿಳಿಯುವುದು, ಕನ್ನಡಿಗರು ತಮ್ಮ ಮಾತಿನಲ್ಲಿ ಮಹಾಪ್ರಾಣ ಹೇಳುವುದೇ ಇಲ್ಲ ಎಂದು. ಅವರು ಮಾತಾಡುತ್ತಿರುವುದನ್ನೇ ಒಪ್ಪಿಕೊಳ್ಳುವ ಮನಸ್ಥಿತಿ ಸಾಕು.
ಕನ್ನಡಿಗರೆಲ್ಲರ ಬಾಯಲ್ಲಿ ಮಹಾಪ್ರಾಣ ಹೊರಡಿಸಲು ಹರಸಾಹಸ ಪಡಬೇಕಿಲ್ಲ, ನನಗನ್ನಿಸೋದು ಅದು ಸಾಧ್ಯವೂ ಇಲ್ಲ ಎಂದು.
ಮಕ್ಕಳ ಕಲಿಯುವ ಸಾಮರ್ಥ್ಯದ ಬಗ್ಗೆ ನಾನೊಂದು ವಿಷಯ ಗಮಮಿಸಿದ್ದೇನೆ. ನಾನು ಕಲಿಯುತ್ತಿದ್ದ ಸಮಯದಲ್ಲಿ ನನ್ನ ತರಗತಿಯಲ್ಲಿ ಕಲಿಯುತ್ತಿದ್ದ ಬಡಕುಟುಂಬದ ಕೆಲವು ಮಕ್ಕಳು ’ಹ’ ಕಾರ ಉಚ್ಚರಿಸಲು ಕಷ್ಟಪಡುವುದನ್ನು ನೋಡಿದ್ದೇನೆ. ಮೂಲತಹ ಮನೆಯಲ್ಲಿ ತುಳು ಮಾತನಾಡುತ್ತಿದ್ದ ಮಕ್ಕಳಿಗೆ ಈ ಸಮಸ್ಯೆ ಇದ್ದಿತ್ತು. ಯಾಕೆಂದರೆ ತುಳುವಿನಲ್ಲಿ ’ಹ’ ಕಾರದ ಬಳಕೆ ಇಲ್ಲ. ಅದಕ್ಕಾಗಿ ಅವರು ಬೈಗುಳ ತಿಂದಿದ್ದೂ ಹೌದು. ಈಗ ಅನಿಸುತ್ತಿದೆ ಅಧ್ಯಾಪಕರುಗಳು ಹಾಗೆ ಬೈಯಬಾರದಿತ್ತು ಎಂದು. ಆದರೆ ನಾನು ಹೇಳ ಹೊರಟಿರುವುದು ಅದಲ್ಲ. ನಾನು ನೋಡುತ್ತಿರುವಂತೆ ಈಗಿನ ಮಕ್ಕಳಿಗೆ ಈ ಸಮಸ್ಯೆ ಬಹಳ ಕಡಿಮೆ ಇದೆ. ಬಡ ಕುಟುಂಬದ ಮಕ್ಕಳೂ ಈಗ ಹಕಾರ ಇತ್ಯಾದಿಗಳನ್ನು ಚೆನ್ನಾಗಿ ಉಚ್ಚರಿಸಬಲ್ಲರು. ಇದಕ್ಕೆ ಕಾರಣ ಸಮಾಜ ಈಗ ಬೇರೆ ಭಾಷೆಗಳಿಗೆ ಹೆಚ್ಚು ತೆರೆದುಕೊಂಡಿದೆ. ಅದು ಸಾಧ್ಯವಾದದ್ದು ಪತ್ರಿಕೆ ಮತ್ತು ಟಿವಿ ಮಾಧ್ಯಮಗಳ ಮೂಲಕ. ಹಾಗಾಗಿ ಉಚ್ಚಾರಣೆ ಸಮಸ್ಯೆ ಮಕ್ಕಳ ಊನತೆ ಆಗಿರಲಾರದು ಅನ್ನುವುದು ತಿಳಿಯುತ್ತದೆ. ಸಮಸ್ಯೆಯಿರುವುದು ಕಲಿಸುವ ರೀತಿಯಲ್ಲಿ. ಕಲಿಸುವ ಜನರಿಗೆ ಕಲಿಕೆಯ ಮೂಲಭೂತ ತಿಳುವಳಿಕೆ ಇಲ್ಲದಲ್ಲಿ ಈ ಸಮಸ್ಯೆ. ಕಷ್ಟಕರವಾದ ಪದಗಳಿಗೆ ಪರ್ಯಾಯ ಹುಡುಕುವುದೇನೋ ಸರಿ, ಆದರೆ ಅದು ಕಲಿಕಾ ರೀತಿಯ ಒಂದು ಭಾಗವಾಗಿರಬೇಕೇ (Strategy) ಹೊರತಾಗಿ ಭಾಷೆಯ ರಚನೆಯನ್ನೇ ಬದಲಾಯಿಸುವ ಮಟ್ಟಕ್ಕೆ ಬೆಳೆಯಬಾರದು ಅಲ್ಲವೇ?
ಮಹೇಶ್ ಪ್ರಸಾದ್ ಅವರೇ,
ಈ ವಿಚಾರವಾಗಿ ಅಷ್ಟು ತಿಳಿದವನಲ್ಲ ಎಂದು ನೀವು ಮೊದಲು ಒಪ್ಪಿಕೊಂಡಿದ್ರಿ.
ತಿಳಿಯುವ ಪ್ರಯತ್ನ ಮಾಡಿ ಎಂದು ನಾನು ಹೇಳಿದ್ದೆ. ಇರಲಿ.
ನೀವು ಮುಂದಿಟ್ಟಿರುವ ಪ್ರಶ್ನೆಗಳು ಮತ್ತು ತೀರ್ಪುಗಳ ಬಗ್ಗೆ ನನ್ನ ಕೆಲವು ಮಾತುಗಳು ನಿಮ್ಮೊಂದಿಗೆ ಹಂಚಿಕೊಳ್ತೀನಿ.
‘ಹ’ಕಾರವನ್ನು ಉಲಿಯಬಲ್ಲ ಮತ್ತು ಉಲಿಯಲಾರದ ಕನ್ನಡಿಗರು ಇದ್ದಾರೆ. ನೀವು ಕರ್ನಾಟಕದ ಯಾವೆಲ್ಲಾ ಭಾಗಗಳಿಗೆ ಹೋಗಿ ಬಂದಿದ್ದೀರೋ ಗೊತ್ತಿಲ್ಲ, ಆದರೆ, ಹಲವು ಭಾಗಗಳಲ್ಲಿ ‘ಹ’ಕಾರ ಬಿದ್ದು ಹೋಗಿರೋದು ನೀವು ನೋಡಬಹುದು.
ಇದರಲ್ಲಿ, ಬಡ ಮಕ್ಕಳು, ಶ್ರೀಮಂತರ ಮಕ್ಕಳು ಎಂಬ ವಿಂಗಡಣೆ ಏನಿಲ್ಲ. ಆ ಭಾಗದ ಹೆಚ್ಚಿನ ಜನರ ಮಾತಲ್ಲಿ ‘ಹ’ಕಾರ ಬಿದ್ದು ಹೋಗಿದೆ. ನುಡಿಯರಿಗರೂ ಇದನ್ನೇ ಸಮರ್ಥಿಸುತ್ತಾರೆ.
ಇನ್ನೂ ಹಲವು ಭಾಗಗಳಲ್ಲಿ ‘ಹ’ಕಾರ ಉಳಿದುಕೊಂಡಿದೆ.
ಪರಿಸರದಲ್ಲಿಲ್ಲದ ಉಲಿ ಕಲಿಯುವುದು ಕಷ್ಟ. ಇದಕ್ಕೆ ನಾನು ‘ರಳ’ದ ಉದಾಹರಣೆ ಕೊಟ್ಟಿದ್ದೇನೆ – ಇದು ಏನಂದು ಗೊತ್ತಾಗದಿದ್ದರೆ ತಿಳಿಸಿ. ಇನ್ನೊಮ್ಮೆ ವಿವರಿಸ್ತೀನಿ.
ಪ್ರಶ್ನೆ ಇರುವುದು, ಇಲ್ಲದ ಉಲಿಗಳನ್ನು ಕಲಿಸುತ್ತಾ ಕೂರಬೇಕಾ? ಅಥವಾ, ಇದ್ದ ಉಲಿಗಳನ್ನು ಬಳಸಿಕೊಂಡೆ ನಮ್ಮ ಜನರ ಕಲಿಕೆ ಚೆನ್ನಾಗಿ ರೂಪಿಸಬೇಕಾ?
ಇಲ್ಲದ ಉಲಿಗಳನ್ನು ಕಲಿಸಲು ಪ್ರಯತ್ನ ಪಡುವುದು, ಆ ಹೊರೆಯನ್ನು ನಮ್ಮ ನುಡಿಯ ಬರಹದಲ್ಲಿ ಇಟ್ಟುಕೊಳ್ಳೋದು, ಉಲಿಯಲು ಬಾರದವರನ್ನು ಜರಿಯೋದು, ಇದರಿಂದಾಗುವ ತೊಂದರೆಗಳ ಬಗ್ಗೆ ಈಗಾಗಲೇ ಮಾತುಗಳಾಗಿವೆ.
ನೀವು ಅವುಗಳನ್ನು ಓದಿ ಅರಿತುಕೊಂಡಿದ್ದೀರ ಎಂದು ನಂಬಿದ್ದೇನೆ.
ಇದ್ದ ಉಲಿಗಳನ್ನು ಬಳಸಿಕೊಂಡೆ ನಮ್ಮ ಜನರ ಕಲಿಕೆ ರೂಪಿಸೋದರಿಂದ, ಏನು ಲಾಭಗಳು ಎಂಬ ಬಗ್ಗೆಯೂ ಮಾತುಗಳಾಗಿವೆ.
ನಿಮಗೆ ಇದರಲ್ಲಿ ಗೊಂದಲವಿದ್ದರೆ ತಿಳಿಸಿ, ಚರ್ಚೆ ಮಾಡೋಣ.
ಕನ್ನಡಿಗರು ತಮ್ಮ ಮಾತಿನಲ್ಲಿ ಮಹಾಪ್ರಾಣ ಹೇಳುವುದೇ ಇಲ್ಲ ಎನ್ನುವುದು ಮೊದಲನೇ ತಪ್ಪು. ಮಾತಿನಲ್ಲಿ ಹೇಳುವುದಿಲ್ಲ ಎಂದ ಮಾತ್ರಕ್ಕೆ ಬರಹದಲ್ಲಿ ಇರಬಾರದು ಎನ್ನುವುದು ಎರಡನೇ ತಪ್ಪು.
ಮೊದಲ ತಪ್ಪಿಗೆ ಸಾಕ್ಷಿ :
“ಭಾರ”, “ಖರೆ”, “ಬರ್ಲಿಕ್ ಹತ್ತಾನ”, “ಭಾಳ” ಮುಂತಾದ ಅಚ್ಚ ಹಳ್ಳಿ ಕನ್ನಡದ ಬಳಕೆಗಳು ಮಹಾಪ್ರಾಣಗಳೇ ಆಗಿವೆ ಅಲ್ಲವೇ?
ಇನ್ನು ಎರಡನೆಯದು. ಬರಹದಲ್ಲಿ ಯಾವತ್ತಿದ್ದರೂ ನುಡಿಗಿಂತ ಕಡಿಮೆ ಸ್ವಾತಂತ್ರ್ಯ ಇರುತ್ತದೆ. ಉದಾಹರಣೆಗೆ ಮಾತನಾಡುವಾಗ “ಬಾಶೆ” ಎಂದರೂ “ಭಾಷೆ” ಎಂದರೂ ಏನೂ ವ್ಯತ್ಯಾಸವಾಗುವುದಿಲ್ಲ. ಆದರೆ ಮಾತಿನ ಏರಿಳಿತಗಳಲ್ಲಿ ಒಂದು ರೀತಿಯ ಸಂಜ್ನೆ ಇರುತ್ತದೆ. ಅದನ್ನು ಬರಹದಲ್ಲಿ ಬರೆಯಲಾಗದು. ಅದಕ್ಕಾಗಿಯೇ ಬರಹದಲ್ಲಿ ಮಾತಿಗಿಂತ ಹೆಚ್ಚು specific ಆಗಿರುವ ಅಗತ್ಯತೆ ಇರುತ್ತದೆ. ಹಾಗಿದ್ದಲ್ಲಿ ಮಾತ್ರ ಅರ್ಥ ವ್ಯತ್ಯಾಸ ಆಗುವುದನ್ನು ತಪ್ಪಿಸಬಹುದು.
ಇನ್ನೊಂದು ಉದಾಹರಣೆಗೆ “ಕ್ಷಮೆ” ಮತ್ತು “ಶಮೆ” ತೆಗೆದುಕೊಳ್ಳಿ. ಮಾತಿನಲ್ಲಿ ಇವೆರಡಕ್ಕೂ ಹೆಚ್ಚು ವ್ಯತ್ಯಾಸ ಇಲ್ಲ. ಅಲ್ಲದೆ ಮಾತಿನ ಹರಿವಿನಲ್ಲಿ ಕ್ಷಮೆ ಎಂದು ಹೇಳಿದ್ದೋ ಅಥವಾ ಶಮೆ ಎಂದಿದ್ದೋ ಅರ್ಥವಾಗುತ್ತದೆ. ಆದರೆ ಬರಹದಲ್ಲಿ ಕ್ಷಮೆ ಬದಲಾಗಿ ಶಮೆ ಬಳಸಿದರೆ ಏನಾದೀತು? ಯೋಚಿಸಿ. ಹಾಗಾಗಿ ಆಡು ಮಾತಿನಂತೆಯೇ ಬರಹ ಇರಬೇಕು ಎನ್ನುವುದು ವೈಜ್ನಾನಿಕ ಅಂತ ನನಗನಿಸುವುದಿಲ್ಲ. ಆಡು ಮಾತಿನಲ್ಲಿ ಬಹಳಷ್ಟು ಅಕ್ಷರಗಳನ್ನು ನುಂಗುತ್ತೇವೆ. ಹಾಗಂತ ಬರಹದಲ್ಲೂ ಅವನ್ನು ನುಂಗಿದರೆ ನಮ್ಮ ಕನ್ನಡ ಭಾಷೆ ನುಂಗಣ್ಣರ ಭಾಷೆಯಾದೀತು. ಈ ಬಗ್ಗೆ ಎಚ್ಚರವಿರಬೇಕು. ನಾನು ಮೇಲೆ ಹೇಳಿದ ತುಳುವರ ಮಕ್ಕಳ ’ಹ’ ಕಾರ ಉಚ್ಚರಣೆ ಸಮಸ್ಯೆಯನ್ನು ಪುನಹ ಅವಲೋಕಿಸುವುದಾದರೆ ಬಹಳಷ್ಟು ಮಕ್ಕಳಿಗೆ ’ಹ’ ಕಾರ ಉಚ್ಚಾರಣೆ ಬರದಿದ್ದರೂ ಅವರಿಗೆ ಬರಹದಲ್ಲಿ ಎಲ್ಲಿ ’ಹ’ ಬಳಸಬೇಕು, ಎಲ್ಲಿ ’ಅ’ ಬಳಸಬೇಕೆಂದು ತಿಳಿದಿರುತ್ತದೆ! ನುಡಿ ಮತ್ತು ಬರಹದಲ್ಲಿನ ವ್ಯತ್ಯಾಸ ಆ ಸಣ್ಣ ಮಕ್ಕಳಲ್ಲೂ ಕಾಣಬಹುದು.
ಮಹೇಶ್,
>>ಕನ್ನಡಿಗರು ತಮ್ಮ ಮಾತಿನಲ್ಲಿ ಮಹಾಪ್ರಾಣ ಹೇಳುವುದೇ ಇಲ್ಲಾ ಎನ್ನುವುದು ಮೊದಲನೇ ತಪ್ಪು..
ಇದು ಅರ್ದ ಸರಿ, ಯಾಕೆಂದರೆ ನನಗೆ ತಿಳಿದಿರುವ ಮಟ್ಟಿಗೆ ಮರಾಠಿ ಬಾಶೆ ಪ್ರಬಾವ ಹೊಂದಿರುವ ಪ್ರದೇಶದಲ್ಲಿ ಮಾತ್ರ ಮಹಾಪ್ರಾಣದ ಬಳಕೆಯನ್ನು ನಾವು ಕಾಣಬಹುದು. ಉದಾ: ಮುಂಬೈ ಕರ್ನಾಟಕ ಬಾಗದಲ್ಲಿ ಮಾತ್ರ ನಾವು ಕಾಣುತ್ತೇವೆ. ಹೈದ್ರಬಾದ ಕರ್ನಾಟಕಕ್ಕೆ ಬಂದರೆ ಭಾರ–ವಜ್ಜಿ, ಖರೆ — ಕರೆ, ಬರ್ಲಿಕ್ ಹತ್ತಾನ — ಬರಾಕುಂತಾನ, ಬರ್ಲಿಕುಂತಾನ, ಭಾಳ –ಜಗ್ಗು ಹೀಗೆ ನೀವು ಕೊಟ್ಟಿರುವ ಪದಗಳಿಗೆ ಅಲ್ಲಿ ಉಪಯೋಗಿಸುವ ಪದಗಳನ್ನು ಉದಾಹರಿಸಿದ್ದೇನೆ. ಇಲ್ಲಿ ಮಹಾಪ್ರಾಣದ ಪ್ರಬಾವ ಕಡಿಮೆ.
>>ಮಾತಿನಲ್ಲಿ ಹೇಳುವುದಿಲ್ಲ ಎಂದ ಮಾತ್ರಕ್ಕೆ ಬರಹದಲ್ಲಿ ಇರಬಾರದು ಎನ್ನುವುದು ಎರಡನೇ ತಪ್ಪು..
ಇದರ ಅರ್ತ ಆಗಲಿಲ್ಲ. ಹೇಳದನ್ನ ಬೆರೆದರೆ ಆಗುವ ಉಪಯೋಗವಾದರೂ ಏನು?? ದಯವಿಟ್ಟು ತಿಳಿಸಿ.
ನಿಮ್ಮ ಎರಡನೆಯ ವಾದದಲ್ಲಿ ಮುಕ್ಯವಾಗಿ ಕಂಡಿದ್ದು ಹೇಳಿದಂತೆ ಬರೆಯಬಾರದು ಎಂದು. ಹೇಳಿದಂತೆ ಬರೆದರೆ ಅದು ಅವೈಜ್ನಾನಿಕವೇ?? ನಾವು ಬಳಸುವ ನಾಮಪದಗಳು ಅತವಾ ಕ್ರಿಯಾಪದಗಳು ಸಂದರ್ಬಕ್ಕೆ ತಕ್ಕಂತೆ ಅರ್ತ ಪಡೆದುಕೊಳ್ಳುತ್ತವೆ.
ಮಹೇಶ್ ಪ್ರಸಾದ್ ಅವರೇ,
ಬರಹಕ್ಕೆ ಕಟ್ಟಳೆಗಳು ಹೆಚ್ಚಾಗಿ ಬೇಕು, ನುಡಿಗೆ ಅಷ್ಟಾಗಿ ಬೇಡ ಎಂಬುದು ನಿಮ್ಮ ನಿಲುವು.
ಬರಹ ಮತ್ತು ನುಡಿ ಎರಡೂ ಬೇರೆ ಎಂಬುದನ್ನು ನೀವು ಅರಿತಿದ್ದೀರ ಎಂದು ತಿಳಿಯುತ್ತದೆ.
ಆದರೆ, ನಿಮ್ಮ ಹಿಂದಿನ ಕಾಮೆಂಟಿನಲ್ಲಿ ‘ಭಾಷೆಯ ರಚನೆಯನ್ನೇ ಬದಲಾಯಿಸೋ ಮಟ್ಟಕ್ಕೆ ಬೆಳೆಯಬಾರದು’ ಎಂದಿದ್ದೀರ. ಇಲ್ಲಿ ನೀವು ನುಡಿಯ ಬಗ್ಗೆ ಮಾತನಾಡುತ್ತಿದ್ರಿ ಎಂಬುದಾಗಿ ಮೇಲ್ನೋಟಕ್ಕೆ ಕಾಣುತ್ತಿದೆ.
ನುಡಿಯ ರಚನೆಯನ್ನು ಬದಲಾಯಿಸುವುದು ಯಾರೊಬ್ಬನಿಂದಲೂ ಸಾಧ್ಯವಿಲ್ಲ. ಬರಹದ ರಚನೆ ಬಗ್ಗೆ ತಾನೇ ಈ ಚರ್ಚೆ ನಡೆಯುತ್ತಿರೋದು !
ನಿಮಗೆ ಗೊಂದಲವಿದ್ದಲ್ಲಿ ತಿಳಿಸಿ.
ನೀವು ಮಹಾಪ್ರಾಣ ಕೆಲ ಭಾಗದ ಕನ್ನಡಿಗರ ಮಾತಿನಲ್ಲಿ ಇದೆ ಎಂಬುದನ್ನೂ ಹೇಳಿದ್ದೀರಿ. ಹೌದು. ಇದೆ.
ಶಂಕರ ಭಟ್ಟರೂ ಇದನ್ನು ತಿಳಿದಿದ್ದಾರೆ ಎಂದು ಅವರ ಪುಸ್ತಕ ಓದಿದರೆ ತಿಳಿಯುತ್ತೆ.
ಉತ್ತರ ಕರ್ನಾಟಕದ ಕೆಲವು ಭಾಗದಲ್ಲಿ ಬಳಕೆಯಲ್ಲಿರುವ ಮಹಾಪ್ರಾಣಗಳಿಗೆ ಕರ್ನಾಟಕದ ಎಲ್ಲಾ ಭಾಗದ ಜನರೂ ಮಹಾಪ್ರಾಣ ಕಲಿಯಬೇಕು ಎಂಬ ನಿಲುವು ನಿಮ್ಮದಾಗಿದೆ.
“ಇಲ್ಲದಿದ್ದರೆ, ಮಹಾಪ್ರಾಣ ಉಲಿಯುವ ಮಂದಿಗೆ ಕಲಿಕೆ ಕಷ್ಟವಾಗಲ್ವಾ” ಎಂಬುದೂ ಈ ಉದಾಹರಣೆ ಕೊಡುವ ಜನರ ಪ್ರಶ್ನೆಯಾಗಿರುತ್ತದೆ.
ಸ್ವಲ್ಪ ಜನರಿಗೆ ಕಷ್ಟ ಎಂಬುದು ನಿಮ್ಮ ಗಮನಕ್ಕೆ ಬರುತ್ತಿರುವಾಗ, (ಹೆಚ್ಚಿನ) ಉಲಿಯದ ಜನರಿಗೆ ಕಷ್ಟ ಎಂಬುದು ತಮ್ಮ ಗಮನಕ್ಕೆ ಯಾಕೆ ಬಾರದೇ ಹೋಯಿತು?
ಮಹಾಪ್ರಾಣಗಳನ್ನು ಮೊದಲ ತರಗತಿಯಲ್ಲೇ ಕಲಿಸಿ ಮಕ್ಕಳನ್ನು ಗೊಂದಲಕ್ಕೀಡು ಮಾಡದೇ, ಅವರಿಗೆ ಅಡಿಪಾಯ ಗಟ್ಟಿಯಾಗಿ ಬಿದ್ದ ನಂತರ ಮಹಾಪ್ರಾಣಗಳ ಪರಿಚಯ ಮಾಡಬಹುದು ಎಂಬುದನ್ನು ಶಂಕರ ಭಟ್ಟರೂ ಹೇಳುತ್ತಾರೆ.
ಹಳೆಗನ್ನಡದ ‘ರಳ’, ‘ಕುಳ’ಗಳ ಪರಿಚಯ ೮ನೇ ತರಗತಿಯಲ್ಲಿ ಮಾಡುತ್ತಿರುವಂತೆ. ಇದು ಯಾಕೆ ಲಾಭದಾಯಕ ಎಂದು ನಾನು ಮುಂಚಿನ ಚರ್ಚೆಯಲ್ಲೂ ಹೇಳಿದ್ದೇನೆ. ತಾವು ಓದಿದ್ದೀರಿ ಎಂದು ನಂಬಿದ್ದೇನೆ.
ಬರಹವು ನುಡಿಯನ್ನು ಹಿಂಬಾಲಿಸಬೇಕು ಎಂಬುದನ್ನು ವೈಜ್ನ್ಯಾನಿಕವಾಗಿ ನುಡಿಯ ಬಗ್ಗೆ ಅರಿತ ನುಡಿಯರಿಗರೆಲ್ಲರೂ ಹೇಳುವ ಮಾತು.
ಆದರೆ, ಈ ವಿಚಾರವಾಗಿ ಹೆಚ್ಚು ತಿಳಿವು ಇರದ ನೀವು ನುಡಿಯರಿಗರ ಮಾತನ್ನು ‘ವೈಜ್ನ್ಯಾನಿಕವಲ್ಲ’ ಎಂದು ಕರೆಯುತ್ತಿದ್ದೀರ.
ಮೇಲಾಗಿ, ಬರಹದ ಬಗ್ಗೆ ನೀವು ಮುಂದಿಟ್ಟ ಕೆಲವು ಪ್ರಶ್ನೆಗಳು ಸಹಜವಾಗಿ ಮೂಡುವಂತ ಪ್ರಶ್ನೆಗಳೇ.
ನೀವು ಹೇಳಿದಂತೆ ಬರಹಕ್ಕೆ ಒಂದು ಕಟ್ಟಳೆ ಇರಬೇಕು. ಅದನ್ನೇ ‘ಎಲ್ಲರಕನ್ನಡ’ ಎಂದು ಶಂಕರ ಭಟ್ಟರು ಕರೆಯುತ್ತಾರೆ.
‘ಎಲ್ಲರಕನ್ನಡ’ ಬರಹವು ಎಲ್ಲರ ನುಡಿಗೆ/ಮಾತಿಗೆ ಆದಷ್ಟು ಹತ್ತಿರವಿರಬೇಕು, ಮತ್ತು ನೀವು ಹೇಳಿದಂತ ಕೆಲವು ಗೊಂದಲಗಳಿಗೆ ಅದರಲ್ಲಿ ಉತ್ತರವಿರಬೇಕು.
ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಕೆಲಸ ನಡೆಯಬೇಕಾಗಿದೆ. Standardization ಕೆಲಸ ಎಂದು ಇದನ್ನು ಕರೆಯಬಹುದು.
ನಿಮ್ಮಲ್ಲಿದ್ದ ಗೊಂದಲಗಳಿಗೆ ನನ್ನ ಮಾತುಗಳಲ್ಲಿ ಸಾಕಷ್ಟು ಉತ್ತರ ದೊರಕಿದೆ ಎಂದು ನಂಬಿದ್ದೇನೆ.
ನಾನಾಗಲೇ ಹೇಳಿದಂತೆ, ಇಲ್ಲಿ ಯಾರೂ ಸಂಸ್ಕೃತವನ್ನು ಸಮರ್ಥಿಸುತ್ತಿಲ್ಲ.
ಸಂಸ್ಕೃತದಿಂದ ಬಂದದ್ದೆಂಬ ಕಾರಣಕ್ಕೆ ಪದಗಳಿರಬೇಕೆಂದೂ ಯಾರೂ ಹೇಳುತ್ತಿಲ್ಲ.
ಸಂಸ್ಕೃತದಿಂದ ಬಂದದ್ದೆಂಬ ಕಾರಣಕ್ಕೆ ಪದಗಳನ್ನು ತೆಗೆಯಬೇಕೆಂದು ಹೇಳುತ್ತಿರುವುದು ನೀವೊಬ್ಬರೇ!
ನಿಮ್ಮ ಪ್ರಶ್ನೆಗೆ ನೀವೇ ಉತ್ತರಿಸಿಕೊಳ್ಳಬೇಕು.
ಇಷ್ಟು ಹೊತ್ತೂ ಈ ಚರ್ಚೆಗೆ ಅಪ್ರಸ್ತುತವಾದ ಸಂಸ್ಕೃತವನ್ನು ತಂದು ಮಾತನಾಡುತ್ತಿದ್ದಿರಿ; ಇದೀಗ ಹಿಂದಿ ತರುತ್ತಿರುವಿರಿ.
ಮತ್ತು “ಹಿಂದಿ ದ್ವೇಷ ಯಾಕೆ ನರೇಂದ್ರ?” ಎಂದು ಪ್ರಶ್ನಿಸುವ ಮೂಲಕ ನಾನೇನೋ ಹಿಂದಿ ಧ್ವೇಷಿ ಎನ್ನುವಂತೆ ಮಾತನಾಡುತ್ತಿರುವಿರಿ.
ನಾನು ಹಿಂದಿ ಬೇಡ ಎಂಬ ಒಂದು ಸಾಲನ್ನಾದರೂ ತೋರಿಸಿ ಮತ್ತು ಅದೇ ರೀತಿ ಸಂಸ್ಕೃತ ಮಾತ್ರ ಬೇಕು ಎಂದದ್ದನ್ನೂ ತೋರಿಸಿ.
ನಿಮಗೆ ಅರ್ಥಪೂರ್ಣ ಚರ್ಚೆಯಲ್ಲಿ ಆಸಕ್ತಿಯಿಲ್ಲವೆನಿಸುತ್ತಿದೆ. ಹೀಗಾಗಿ, ಸಂಬಂಧವಿರದ ವಿಷಯಗಳನ್ನು ಚರ್ಚೆಗೆ ತರುತ್ತಿರುವಿರಿ ಮತ್ತು ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸದೇ ಜಾರಿಕೊಳ್ಳುತ್ತೀರಿ.
ನಿಮಗೆ ನಿಜಕ್ಕೂ ನಿಮ್ಮ ಹಿಂದಿನ ಮಾತುಗಳು ಸರಿಯಾಗಿದೆ ಎಂದನ್ನಿಸಿದ್ದರೆ, ಅರ್ಥಪೂರ್ಣ ಚರ್ಚೆಯಲ್ಲಿ ನಂಬಿಕೆಯಿದ್ದರೆ, ನನ್ನ ಪ್ರಶ್ನೆಗೆ:
“ನಾನು ಹಿಂದಿ ಬೇಡ ಎಂಬ ಒಂದು ಸಾಲನ್ನಾದರೂ ತೋರಿಸಿ ಮತ್ತು ಅದೇ ರೀತಿ ಸಂಸ್ಕೃತ ಮಾತ್ರ ಬೇಕು ಎಂದದ್ದನ್ನೂ ತೋರಿಸಿ?”
ಉತ್ತರಿಸಿ. ಇದಕ್ಕೆ ಉತ್ತರ ಸಿಗದಿದ್ದರೆ, ನೀವು ಬರೆದ “ಹಿಂದಿ ದ್ವೇಷ ಯಾಕೆ ನರೇಂದ್ರ?” ಕಾಮೆಂಟಿನ ಉದ್ದೇಶವನ್ನು ವಿವರಿಸಿ.
ಅರೇ ಭಾಯ್ ನರೇಂದ್ರಜೀ..
ಯಾಕೆ ಗುಸ್ಸಾ? ನಾನು ಹೇಳೋದನ್ನ ಸಾವಧಾನ್ ಆಗಿ ಕೇಳಿಸಿಕೊಳ್ಳಿ..
ಸಂಸ್ಕ್ರುತ ಖಾಸ್ ಇಲ್ಲ ಅಂತ ನೀವು ಹೇಳಿದ್ರಿ. ನಂಗೆ ಸಂಸ್ಕ್ರುತದಿಂದ ಈಗಾಗಲೇ ಇರೋ ಪದ ಅಂದ್ರೆ ಏನು? ಅಠವೀ ಶತಾಬ್ದಿಯಲ್ಲಿ ಬರೆದ ಕನ್ನಡದ ಕವಿರಾಜಮಾರ್ಗದಲ್ಲಿ ಅನೇಕ್ ಸಂಸ್ಕ್ರುತ ಪದಗಳಿವೆ. ಅವರಲ್ಲಿ ನನಗೆ ಎಶ್ಟೊಂದು ಗೊತ್ತಿಲ್ಲ. ನಿಮಗೆ ಗೊತ್ತಿದೆ.. ಅದಕ್ಕೆ ನಿಮಗೆ ಸಂಸ್ಕ್ರುತ ಇದ್ದ ಚಲ್ತಾ ಇದೆ. ನನಗೆ ಅದು ತುಂಬಾ ಕಠಿಣ್. ನನ್ ಚೈಸೇ ಲೋಗ್ಗಳಿಗೂ ಅನುಕೂಲ್ ಆಗಲಿ.. ಅದಕ್ಕೆ ಹಿಂದಿ ಪದಗಳನ್ನು ಸೇರಿಸೋಣ ಅಂತ..
ಇಲ್ಲಿ ನಿಮ್ಮ ನಜರ್ ತನ್ನಿ..
“ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ
ಅದರೊಳಗಂ ಕಿಸುವೊಳಲಾ ವಿದಿತ ಮಹಾ ಕೋಪಣ ನಗರದಾ ಪುಲಿಗೆರೆಯಾ
ಸಧಭಿಮಸ್ತುತಮಪ್ಪೊಂಕುಂದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್”
ಅದು ಕವಿರಾಜಮಾರ್ಗ ಕಿತಾಬ್ನ ಒಂದ ಪದ್ಯಕಾಂಡ್. ಇಲ್ಲಿ ವಿಶೇಷಂ ಅಂದರೆ ಖಾಸ್ ಎಂದು ಅಲ್ಲವಂತೆ. ಅಲ್ಲಿ ವಿಶೇಷಂ ಅಂದ್ರೆ ಜಗಹ/ಸ್ಥಳ್ ಅಂತ ಅಂತೆ. ಹಾಗೆ ಸಧಭಿಮಸ್ತುತ ಅಂತ ಒಂದು ಸಂಸ್ಕೃತ್ ಶಬ್ದ ಬಂದಿದೆ. ಅದು ನನಗೆ ಸಮಜ್ ಆಗಲಿಲ್ಲ. ಆ ಸಧಭಿಮಸ್ತುತ ಸಂಸ್ಕೃತ್ ಶಬ್ದ ನೋಡಿ ಎಶ್ಟು ಪುರಾನ ಇದೆ. ಅದನ್ನೂ ನೀವು ಎಲ್ಲಾ ಕಡೆ ಬಳಸಿದ್ರೆ.. ನನ್ ಜೈಸೇ ಲೋಗ್ಗಳಿಗೆ ಹೇಗೆ ಜಮಜ್ ಆಗುತ್ತದೆ?
ಹಿಂದಿನಿಂದಲೂ ಇತ್ತು ಈಗಲೂ ಇರಲಿ ಎಂಬುದು ಒಂದು ಅಚ್ಛಾ ಕಾರಣ ಆದರೆ, ಪುರಾನ ಕನ್ನಡದಲ್ಲಿ ಇರುವ ಸಧಭಿಮಸ್ತುತ, ವಿದಿತ, ಈ ತರಹದ ಶಬ್ದಗಳು ನಮಗೆ ತುರುಕುವುದು ಅಚ್ಛ ಇಲ್ಲ.. ಅದಕ್ಕೆ ನಮಗೆ ಹಿಂದೀ ಮೂಲದ ಆದತ್ ಇರುವ ಶಬ್ಧಗಳ ಇಸ್ತಮಾಲ್ ಮಾಡಕ್ಕೆ ಕನ್ನಡ ಪದನೆರಿಕೆಗೆ ಸೇರಿಸಲುಬಿಡಿ.
ನೀವು ಯಾಕೆ ಇದಕ್ಕೆ ವಿರೋಧ್ ಇದ್ದೀರಿ? ಹಿಂದಿ ಶಬ್ದಗಳು ಈಗಾಗಲೇ ಇರುವ ಕನ್ನಡ ಶಬ್ದಕೋಶ್ ಅಲ್ಲಿ ಇಲ್ಲ, ಎಂದು ಅದರ ಇಸ್ತಾಮಾಲ್ ಬೇಡ ಅನ್ನುವಿರಿ. ನೀವು ಕೇವಲ್ ಪುರಾನ ಶಬ್ದ ಇರಲೀ ಅಂದಿದ್ದೀರಿ.. ಇದು ಅಚ್ಚ ಬಾತ್ ಅಲ್ಲ. ಅದೇ ಯಾಕೆ ನಿಮಗೆ ಹೊಸತಾಗಿ ಹಿಂದಿ ಶಬ್ದ ಸೇರಿಸುವುದಕ್ಕೆ ಸರ್ಮಥನ್ ಕೊಡಲ್ಲ?
ಮೂರನೇ ದರ್ಜೆ ಸಿನಿಮಾ ಡೈಲಾಗು.. ಬರೆದವರ ಬುಧ್ಧಿಮಟ್ಟವನ್ನು ತೋರಿಸುತ್ತದೆ ಅಷ್ಟೆ.
🙂
ಹಸನಾ ಸೇಹತ್ಗೆ ಗುಡ್..
ಪ್ಲೀಸ್ ಸ್ಮೈಲ್ ಮಾಡಿ.. ಹಾಗೂ ಹೆಲ್ತೀ ಆಗಿ ಜೀವಿಸಿ.
ಸಾಹೇಬ್..
ನೀವು ಮಹಾನ್ ಇದ್ದೀರಿ. ನಾನ್ ತೋ ಒಬ್ಬ ಸಾಮಾನ್ಯ ದೇಹಾತೀ ಅದೀನಿ.. ನಿಮಗಾ ನಿಮ್ ಬುದ್ಧಿಮಟ್ಟು ಹೆಂಗೆ ಇರ್ತದ?
ನೋಡ್ರಲಾ. ನಿಮಗೂ ದರ್ಜಾ, ಡೈಲಾಗು ಅಂತ ಇಂಗ್ಲೀಶ್, ಹಿಂದೀ ಶಬ್ದಗಳು ಪಸಂದ್ ಇವೆ..
ಎಶ್ಟು ಮಸ್ತೀ ಇದೆ ಹಿಂಗೆ ಮಿಲಾಕರ್ ಬಾತ್ ಕರಿಸೋದರಲ್ಲಿ.. ಅಲ್ವಾ?
ಕ್ಯಾ ಬಾತ್ ಹೈ..ಜೀ ಹುಜೂರ್!
> ಹಾಗೆ ಸಧಭಿಮಸ್ತುತ ಅಂತ ಒಂದು ಸಂಸ್ಕೃತ್ ಶಬ್ದ ಬಂದಿದೆ.
ನಿಮಗೆ ಪದ ಅರ್ಥವಾಗುತ್ತಿಲ್ಲ ಎನ್ನುವುದು ಸಮಸ್ಯೆಯೋ ಅಥವಾ ಅದರ ಮೂಲ ಸಂಸ್ಕೃತದ್ದು ಎನ್ನುವ ಚಿಂತೆಯೋ ತಿಳಿಯುತ್ತಿಲ್ಲ?
ನಿಮಗೆ ಅರ್ಥವಾಗದ ಪದಗಳಿದ್ದರೆ, ಅದೇ ರೀತಿ ಹೇಳಿದರಾಯಿತು. ಅದು ಬಿಟ್ಟು, ಅದೊಂದು ಸಂಸ್ಕೃತ ಶಬ್ದ ಎನ್ನುವುದೇಕೆ?
ವ್ಯಕ್ತಿಯೊಬ್ಬನೊಡನೆ ಮಾತನಾಡುವಾಗ “ಅವನೊಬ್ಬ ಮುಸಲ್ಮಾನ”, “ಅವನೊಬ್ಬ ಬ್ರಾಹ್ಮಣ”, “ಅವನೊಬ್ಬ ಕುರುಬ” ಇತ್ಯಾದಿ ಪೂರ್ವಾಗ್ರಹಗಳನ್ನಿಟ್ಟುಕೊಂಡು
ಮಾತನಾಡುವಂತಿದೆ ನಿಮ್ಮ ಮಾತಿನ ಧಾಟಿ.
> ಈ ತರಹದ ಶಬ್ದಗಳು ನಮಗೆ ತುರುಕುವುದು ಅಚ್ಛ ಇಲ್ಲ
ಇಲ್ಲಿ ಯಾರೂ ಯಾವುದನ್ನೂ ತುರುಕುತ್ತಿಲ್ಲವಲ್ಲಾ? ನಿಮಗೇಕೆ ಹಾಗನ್ನಿಸುತ್ತಿದೆ.
ಕವಿರಾಜಮಾರ್ಗದಲ್ಲಿರುವ ಕನ್ನಡ ಪದ ಈಗಾಗಲೇ ಇರುವ ಪದ ಎನ್ನುವುದು ವಾಸ್ತವಸ್ಥಿತಿ. ಅದು ತುರುಕುವುದು ಹೇಗಾಯಿತು?
> ಅದೇ ಯಾಕೆ ನಿಮಗೆ ಹೊಸತಾಗಿ ಹಿಂದಿ ಶಬ್ದ ಸೇರಿಸುವುದಕ್ಕೆ ಸರ್ಮಥನ್ ಕೊಡಲ್ಲ?
ನೀವೀಗ ಹಿಂದಿ ಪದವನ್ನೋ, ಇಂಗ್ಲಿಷ್ ಪದವನ್ನೋ ಸೇರಿಸಬೇಕೆಂದು ಸಲಹೆ ನೀಡುತ್ತಿರುವಿರಿ.
ಅದಕ್ಕೆ ಪರ್ಯಾಯ ಕನ್ನಡದಲ್ಲಿಲ್ಲದಿದ್ದರೆ, ಆ ಪದಗಳನ್ನು ಸೇರಿಸೋಣ. ಅದರಲ್ಲಿ ತಪ್ಪೇನಿದೆ?
ಪರ್ಯಾಯ ಕನ್ನಡ ಪದಗಳಿದ್ದರೂ, ಹೆಚ್ಚಿನ ಜನ ಬಳಸುವ ಹಿಂದಿ/ಇಂಗ್ಲಿಷ್ ಪದಗಳಾಗಿದ್ದರೆ ಸೇರಿಸೋಣ. ಅದರಲ್ಲೂ ತಪ್ಪೇನಿಲ್ಲ.
ಇಲ್ಲಿ ಪದಗಳನ್ನು ಸೇರಿಸುವಾಗ ಅದರ ಮೂಲ ಭಾಷೆಯ ಪ್ರಶ್ನೆಯೇ ಬರುವುದಿಲ್ಲ. ಅಗತ್ಯದ ಪ್ರಶ್ನೆ ಬರುತ್ತದಷ್ಟೇ.
> ನೀವು ಯಾಕೆ ಇದಕ್ಕೆ ವಿರೋಧ್ ಇದ್ದೀರಿ?
ನಾನು ಯಾವುದನ್ನು ವಿರೋಧಿಸುತ್ತಿದ್ದೇನೆ? ನೀವೇ ಇಲ್ಲದ್ದನ್ನು ಕಲ್ಪಿಸಿಕೊಂಡು ಹಾಗನ್ನುತ್ತಿದ್ದೀರಷ್ಟೇ.
ನಾನಾಗಲೇ ಕೇಳಿದಂತೆ, ನಿಮ್ಮ ಮಾತನ್ನು ಸಮರ್ಥಿಸಲು ಒಂದು ಉದಾಹರಣೆಯನ್ನಾದರೂ (ನಾನು ಹಿಂದಿಯನ್ನೋ ಅಥವಾ ಇನ್ನಾವುದೋ ಭಾಷೆಯ ಪದವೆಂಬ ಕಾರಣಕ್ಕೆ) ತೋರಿಸಿ.
ಅದಿಲ್ಲದೆ ನಿಮ್ಮ ಮಾತನ್ನೇ ಮುಂದುವರೆಸುತ್ತಿದ್ದರೆ ಅದಕ್ಕೆ ಹರಟೆ ಎನ್ನುತ್ತಾರೆಯೇ ಹೊರತು, ಚರ್ಚೆ ಎನ್ನುವುದಿಲ್ಲ. ನನಗೆ ಈ ರೀತಿಯ ಹರಟೆಯಲ್ಲಿ ಆಸಕ್ತಿಯಿಲ್ಲ.
> ಹಿಂದಿನಿಂದಲೂ ಇತ್ತು ಈಗಲೂ ಇರಲಿ ಎಂಬುದು ಒಂದು ಅಚ್ಛಾ ಕಾರಣ ಆದರೆ, ಪುರಾನ ಕನ್ನಡದಲ್ಲಿ ಇರುವ ಸಧಭಿಮಸ್ತುತ, ವಿದಿತ,
> ಈ ತರಹದ ಶಬ್ದಗಳು ನಮಗೆ ತುರುಕುವುದು ಅಚ್ಛ ಇಲ್ಲ.
ಇದಕ್ಕೆ ತುರುಕುವುದು ಎನ್ನುತ್ತಾರೇನು? ಈಗಾಗಲೇ ಇರುವುದು ತುರುಕುವುದು ಹೇಗಾಗುತ್ತದೆ!?
ಪ್ರಾಯಶಃ ನಿಮ್ಮ “ತುರುಕು” ಪದದ ಅರ್ಥ ನನಗೆ ತಿಳಿಯುತ್ತಿಲ್ಲ ಎನಿಸುತ್ತದೆ!
ಇರಲಿ. ವಿಷಯ ಕನ್ನಡ ಸಾಹಿತ್ಯದಲ್ಲಿ ರುವ “ಸಧಭಿಮಸ್ತುತ, ವಿದಿತ” ಮುಂತಾದ ಅನೇಕಾನೇಕ ಪುರಾತನ ಪದಗಳು – ಇಂದು ಅವು ಆಡುನುಡಿಯಲ್ಲಿ ಇಲ್ಲ.
ಬಳಕೆಯಲ್ಲಿಲ್ಲದ ಪದಗಳು ಸಹಜವಾಗಿ ಹೋಗಿಬಿಡುತ್ತವೆ. ಅದಕ್ಕೇಕೆ ದುಃಖ?
ಆ ಪದಗಳಿಗೆ ಪರ್ಯಾಯವಾದ ಸರಳ ಪದಗಳು ಉಪಯೋಗಕ್ಕೆ ಬಂದಿರುತ್ತವೆ. ಅವನ್ನು ಉಪಯೋಗಿಸೋಣ.
ಕನ್ನಡ ಸಾಹಿತ್ಯದಲ್ಲಿದೆ ಎನ್ನುವ ಒಂದೇ ಕಾರಣಕ್ಕೆ ಉಪಯೋಗಿಸಬೇಕು ಎಂದೇನಿಲ್ಲ.
ನಿಮ್ಮ ಇಡೀ ಕಾಮೆಂಟ್‌ನ ಹಿನ್ನೆಲೆ “ವಿಜ್ಞಾನ” ಪದಕ್ಕೆ ಕುರಿತಾದದ್ದು ಅಲ್ಲವೇ?
ಇದು ಸಂಸ್ಕೃತ ಮೂಲದ ಪದ ಎನ್ನುವುದು ನಿಮ್ಮ ಅಭಿಮತ.
ಅದು ಸಂಸ್ಕೃತ ಮೂಲದ್ದು ಇರಬಹುದು. ಇದ್ದರೆ, ಅದರಿಂದ ಸಮಸ್ಯೆಯೇನು?
ಅದು ಕನ್ನಡ ಸಾಹಿತ್ಯದಲ್ಲೂ ಬಳಕೆಯಾಗಿದೆ. ಜೊತೆಗೆ ಇಂದಿಗೂ ಆಡುನುಡಿಯಲ್ಲಿ ಬಳಕೆಯಲ್ಲಿದೆ.
ಅದನ್ನು ಹೊಸದಾಗಿ ಯಾರೂ “ತುರುಕು”ತ್ತಿಲ್ಲ.
ಪ್ರಾಯಶಃ ನಿಮಗೆ “ಸಂಸ್ಕೃತ”ದ ಕುರಿತಾದ ಪೂರ್ವಾಗ್ರಹವಿರುವುದರಿಂದಾಗಿ, ಆ ಪದ (ಮತ್ತು ಆ ರೀತಿಯ ಇನ್ನಿತರ ಪದಗಳು) ಬೇಡವೆನಿಸುತ್ತಿದೆ.
ಆ ಕಾರಣಕ್ಕಾಗಿ “ತುರುಕು”ವುದು ಇತ್ಯಾದಿ ಸಬೂಬು ನೀಡುತ್ತಿರುವಿರಷ್ಟೇ!
ಸರ್ಕಾರ್..
ನಿಮ್ಮ ಬಡಾ ದಿಲ್ ನನಗೆ ಪತಾ ಇದೆ. ಬಿನಾ ಕಾರನ್ ಗುಸ್ಸಾ ಯಾಕೆ? ಶಾಂತ್ ಇರಿ.
ನನ್ನ ಬಾತ್ ಏನೂ ಅಂದ್ರಾ.. ಹಿಂದಿ ಶಬ್ದಗಳು ಬಹುತ್ ಆಸಾನ್ ಇವೆ. ಇಂಗ್ಲೀಶ್ ಪದಗಳೂ ಕೂಡ ಹೆಚ್ಚಿನ ಪೀಪಲ್ಗೆ ಗೊತ್ತಿದೆ. ಈಗಾಗಲೇ ಫೇಮಿಲಿಯರ್ ಇವೆ. ಅದಕ್ಕೆ ಅವನ್ನೇ ಹೆಚ್ಚು ಯೂಸ್ ಮಾಡೋಣ ಎಂದು.
ನಿಮ್ಮ ದೋಸ್ತ್ ಮಹೇಶ ಜಲಕಜೆ ಅವರು ಕ್ಯೂ ಇಷ್ಟೊಂದು ಗುಸ್ಸಾ ಮಾಡಿಕೊಂಡಿದ್ದಾರೆ?…
ನಾನು ನನ್ ಬಾತ್ ನಿಮ್ಮ ಸಾಮನೇ ಇಟ್ಟಿದ್ದು.. ನನ್ನ ಒಪೀನಿಯನ್ ಹೇಳಕ್ಕಶ್ಟೆ. ನಾನೇ ಆಲ್ವೇಸ್ ಠೀಕ್ ಎಂದು ಅಲ್ಲ.
ನಿಮ್ದೂಕಿಗೆ ಪಾಗಲ್ ಆಗಿದೆಯಾ ಅಂತ ಏಕ್ ಬಾರ್ ಫಿರ್ ಸೇ ಟೇಸ್ಟ್ ಕರ್ವಾಯಿಯೇ.. LoL ಇನ್ನಾದರೂ ಈ ಹಿಂದಿ ರೋಗ ಬಿಟ್ಟುಬಿಡಿ.
ಮಹೇಶ ಪರ್ಶಾದ್ ಜಲಕಜೆ…
ನಾನು ನಿಮ್ಮನ್ನು ಯದಿ ಪಾಗಲ್, ದೀವಾನ, ಸಂಸ್ಕೃತ ಐಲ, ತಿಕ್ಕಲ, ಅಂಡೆಪಿರ್ಕಿ, ಹೀಗೆಲ್ಲ ಗಾಲಿಗಳನ್ನು ಕೊಟ್ಟೆನೇ?
ಮರ್ಯಾದೆಯ ಸೀಮೇ ಯಾಕೆ ಲಾಂಘಿಸುವಿರಿ. ನಿಮಗೂ ಸಂಸ್ಕೃತರೋಗ ಬಿಟ್ಟುಬಿಡಿ ಎಂದು ನಾನು ನಿಮ್ಮ ಹಾಗೆ ಅಧಿಕಪ್ರಸಂಗ ತೋರಿಸುವುದಿಲ್ಲ.
ನಿಮಗೆ ಹಾಗು ನಿಮ್ಮ ದೋಸ್ತ್ ನರೇಂದ್ರ ಅವರಿಗೆ ನಿಮ್ಮ ಅನುಕೂಲಕ್ಕೆ ಹೇಗೆ ಸಂಸ್ಕೃತದ ಶಬ್ದಗಳ ಕನ್ನಡದಲ್ಲಿ ರಹಿಸಲೋ.. ಹಾಗೆ ನನಗೆ ಇಂಗ್ಲೀಶು ಹಾಗು ಹಿಂದಿಪದಗಳು ಇಸ್ತಮಾಲ್ ಬೇಕು…
ಚೇ.. ನಿಮ್ಮಂತಹ ಬಡಾ ಆದಮಿಯಿಂದ ಇಂತಹ ಘಟಿಯಾ ಟಿಪ್ಪಣಿ expect ಮಾಡಿರಲಿಲ್ಲ..
ಎಂತಹ ಹಿಂದಿದುಶಮನಿ.. ಹಿಂದಿ ಮಾತಾಡೋರನ್ನೆಲ್ಲ ಪಾಗಲ್ ಎಂದುಬಿಟ್ಟರು.
ಇದರ ಬಾದ್…
ದೇಖಿಸಿ, ನಮ್ಮ ಎಲ್ಲಿರಿಗೂ “ಸಾರೇ ಜಹಾನ್ ಸೇ ಅಚ್ಛಾ” ಗಾನ ಪತಾ ಇದೆ. ಅದರಲ್ಲಿ ಎಶ್ಟೊಂದು ಮೀಠೀ ಮೀಠೀ ಶಬ್ದಗಳಿವೆ. ಅವನ್ನೂ ಕನ್ನಡದಲ್ಲಿ ಇಸ್ತಮಾಲ್ ಮಾಡೋಣು ಎಂದು..
ಈ ಒಂದು ಶಾಯರೀ ನೋಡಿ.. ಎಶ್ಟು ಖೂಬ್ಸೂರತ್ ಇದೆ.
ಗುಲ್ ಇಂದ ಗುಲ್ ಗೆ
ಬಮರ್ ಹಾರಿ ಹೋದ ಹಾಗೇ
ಪ್ರೇಮೀ ಪ್ರೀತಮ್ ರ ತನುಮನ್
ದೂದ್ ಮತ್ತು ಶಹದ್ ಗಳು ಮಿಲನ್.
ವಾ ವಾ@
ಏನ್ ನರೇಂದ್ರ ಭಾಯ್..
ಹಿಂದು ಮುಸ್ಲಿಂ ಕುರುಬ ಅಂದ ಜಾತಿ ಮಾತು ತೆಗಿದು ಬಿಟ್ರೀ.. ನಾವೆಲ್ಲ “ಸಾರೇ ಜಹಾನ್ ಸೇ ಅಚ್ಛಾ” ಗಾನದ ಹಂಗಾ ಒಂದೇ “ಹಿಂದೀ ಹೇ ಹಮ್.. ವಸತ್ ಹಿಂದೂಸ್ತಾನ್ ಹಮಾರ”..
ಛೇ ಛೇ.. ಏನ್ ಭಾಯ್.. ಇಶ್ಟು ಛೂಠೀ ನಜ್ಸರ್ ನಿಮ್ಮದು. ನಿಮ್ಮಂತಹ ಬಡಾ ಆಧಮೀ ಹಿಂಗಾ ಬರೆಯೋದು..
ನನಗೆ ನಿಮ್ಮ ಹಲವು ಪದಗಳು ಸಮಝ್ ಆಗ್ತಾ ಇಲ್ಲ.. ಇದು ಯಾವ ಪೂರಬ್ ಗ್ರಹ್? ಶನಿಯಾ ಕೇತುವಾ?
ನರೇಂದ್ರಜೀ ಸಾಹೇಬ್..
ನೀವು ಹಿಮಾಲಯ್ ತರಹ, ಬಡಾ ಆದಮೀ ಇದ್ದೀರಿ. ನಾನ್ ಆ ಬರತ್ ನಾಮ್ ದ ಇದಾರಲ್ಲ ಅವರಿಗೆ ಹೇಳಿದ್ದು.. ನಿಮ್ ಸಾಥ್ ಈ ತರಹದ ಗುಫ್ತಗೂ, ನನ್ನ ಬಸ್ ನ ಬಾತ್ ಅಲ್ಲ.
ನಿಲುಮೆಯಲ್ಲಿ ಏನಿದು ತಲೆಹರಟೆ?
ಇದೂ ಕೂಡ “ಸಂಪಾದಕೀಯ” ಬ್ಲಾಗ್ ತರಹ ಹೇಸಿಗೆ ಹುಟ್ಟಿಸುವತ್ತ ಸಾಗುತ್ತಿದೆಯೇ?(ಕೇವಲ ಕಮೆಂಟು ಗಳನ್ನು ಗಮನ ದಲ್ಲಿಟ್ಟು) ಅಲ್ಲಿ ಹೀಗೆಯೇ ಹುಚ್ಚಾಬಟ್ಟೆ ಕಾಮೆಂಟ್ ಗಳು ಬರುತ್ತವೆ.
ನಿಲುಮೆಗೆ ಬರುವುದೇ ನಾವು ಇಲ್ಲಿನ ಒಳ್ಳೆಯ ಲೇಖನ ಓದಲು ,ಅದರಿಂದ ನಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು .ಅದು ಬಿಟ್ಟು ಹುಚ್ಚಾಬಟ್ಟೆ ಕಾಮ್ಮೆಂಟ್ಗಳನ್ನು ಓದಿ ಮುಜುಗರ ಪಟ್ಟುಕೊಳ್ಳಲು ಅಲ್ಲ !!!!
ನೇರವಾಗಿ ಮಾಯ್ಸರಿಗೆ …… ನಿಮ್ಮ ಹಿಂದಿನ ಕಾಮೆಂಟ್ ಓದಿದ ನನಗೆ ,,ನಿಮ್ಮಿಂದ ಇದನ್ನು ಊಹಿಸಿರಲಿಲ್ಲ ಅನ್ನೋದಕ್ಕೆ ಬೇಸರವಾಗುತ್ತಿದೆ.ಆದರೂ ಹೇಳುತ್ತೇನೆ ನಿಮ್ಮಂತಹ ವಿದ್ಯಾವಂತರಿಗೆ ತಕ್ಕುದಾದ ಕಮೆಂಟುಗಳು ಇದಲ್ಲ. ನಿಲುಮೆಯಂತಹ ಬ್ಲಾಗ್ ನಲ್ಲಿ ನಾನು ಬಯಸಿದ್ದೂ ಖಂಡಿತ ಇಂತಹುದಲ್ಲ !!! ಮಾಯ್ಸ ಮುಂದಾದರೂ ಒಳ್ಳ್ಲೆಯ ಕಾಮೆಂಟ್ ಬರೆಯುತ್ತೀರಿ ನಿಮ್ಮ ವಿದ್ಯಾವಂತತೆಯನ್ನು ತೋರ್ಪಡಿಸುತ್ತೀರಿ ಅಂತ ಆಶಿಸುತ್ತೇನೆ.
(ಇಂತಹ ಅಭಿಪ್ರಾಯ ಈ ಕಮೆಂಟು ಗಳನ್ನು ಓದಿದ ಎಲ್ಲರಲ್ಲೂ ಬಂದಿರಬಹುದೆಂದು ಊಹಿಸುತ್ತೇನೆ )
ಇಂತಿ ನಿಲುಮೆಯ ಅಭಿಮಾನಿ.
ಅರೇ ‘ನಿಲುಮೆಯ ಅಭಿಮಾನಿ’,
ಯಾಕ್ರೀ ದೋಸ್ತ್.. ಹಿಂಗ ಬ್ಯಾಸರ ಮಾಡಿಕೊಂಡೀರಿ ನನ್ ಮ್ಯಾಲ? ನಾನ್ ನನ್ ಯೇನ್ ಬೇಕು ಅಂತ ಇಲ್ಲಿರೋ ಬಡಾ ಮಂದಿ ಮುಂದಾ ನನ್ ಬಾತ್ ಇಟ್ಟೀನಿ.. ನೀವು ನಿಮ್ ಬಾತ್ ಸಾಮನೇ ಮಾಡ್ರಲಾ!
ಹಿಂದಿ ಶಬ್ದ ಇಸ್ತಮಾಲ್ ಮಾಡಿದ್ರ ನಿಮಗೆ ಹೇಸಗೀ ಆಗ್ತಯ್ತೀ..!
ನೀವ್ ಯಾರ್ರೀ? ನನಗಾ ನೀವ್ known ಅದೀರೇನು?..
ಮಾಫೀ ಭಾಯ್..!
ಮಾನ್ಯ ಕಿರಣ್ ಅವರೆ< ನೀವು ಅಮೆರಿಕದಲ್ಲಿ ಯುರೋಪಿನವರು ಮಾಡಿದ ಕೆಲಸಗಳ ಮೂಲಕ ತಮಿಳು ಯಾವುದರಲ್ಲಿ ಮುಂದಿದೆ ಅಂತ ಹೇಳುತ್ತಾ ಅಲ್ಲಿ ಸಮಾನತೆ ಇತ್ಯಾದಿ ಬಗ್ಗೆ ಹೇಳಿದ್ದೀರಿ. ಆ ನಿಟ್ಟಿನಲ್ಲಿ ನೋಡಿದರೆ ಜನಸಾಮಾನ್ಯರಿಗೆ ಮನುಷ್ಯತ್ವವನ್ನು ಅಲ್ಲಗಳೇಯದೆ ಇರುವುದರಲ್ಲಿ ಕೇರಳ ರಾಜ್ಯವು ತಮಿಳುನಾಡಿಗಿಂತ ಮುಂದಿಲ್ಲವೇ? ಅಲ್ಲಿ ಕನ್ನಡಕ್ಕಿಂತ ಹೆಚ್ಚು ಅಕ್ಕರಗಳಿಲ್ಲವೆ? ಕನ್ನಡಕ್ಕಿಂತ ಎಷ್ಟೋ ಹೆಚ್ಚು ಸಂಸ್ಕೃತಮೂಲದ ಪದಗಳಿಲ್ಲವೇ?
Yen agtidhe illi … tum sab jana en discussion maadlik hattidiri? Namge anusthide eega urdu ge beku kannada dalli. enu antiri bhai log?
Yen agtidhe illi … tum sab jana en discussion maadlik hattidiri? Namge anusthide eega urdu ge beku kannada dalli. enu antiri bhai log?
ಭಾಯ್..
ನನ್ ಸಾಥೀ ನೀ.. ಹಿಂದುಸ್ತಾನಿ ಜ್ಸುಬಾ ಸಕ್ಕತ್ ಮೀಠೀ ಇದೆ. ಅದರಿಂದ ಕನ್ನಡಕ್ಕೆ ಉರ್ದು ಅಲ್ಫಾಜ್ಸ್ ಬರಲಿ..
ಶುಖ್ರಿಯಾ!
ಎಲ್ಲರಿಗೂ ನಮಸ್ಕಾರ. ಚರ್ಚೆಯಲ್ಲಿ ಬರಹದ ವಿಶಯಕ್ಕೆ ಸಂಬಂದಿಸಿದ ಕೆಲವು ಪ್ರಶ್ನೆಗಳನ್ನು ಕಂಡೆ. ಅವುಗಳಿಗೆ ಉತ್ತರವಾಗಿ ಒಂದು ಬರಹವನ್ನು ಬರೆದು ’ನಿಲುಮೆ’ಗೆ ಪ್ರಕಟಣೆಗೆ ಸದ್ಯದಲ್ಲೇ ಒಪ್ಪಿಸಲಿದ್ದೇನೆ. ನಾನೀಗ ಕೆಲಸದ ಮೇಲೆ ಪುಣೆಗೆ ಬಂದಿರುವುದರಿಂದ ತುಸು ತಡವಾಗುತ್ತದೆ, ದಯವಿಟ್ಟು ಮನ್ನಿಸಿ.
ಅಲ್ಲದೆ, ಇತ್ತೀಚೆಗೆ, ನನಗೆ ಮಿಂಬಲೆಯು ಮಾತನಾಡುವುದರ ವೇಗವನ್ನು ಹೆಚ್ಚಿಸಿ ನಮ್ಮ ಬಾಯ್ಗಳಲ್ಲಿ ಸರಿಯಾಗಿ ಯೋಚಿಸಿ ಆಡಿದಾಗ ಬಾರದ ಮಾತುಗಳನ್ನು ಆಡಿಸುತ್ತಿದೆ ಎಂಬ ಅನುಬವವಾಗುತ್ತಿದೆ. ಬುದ್ದಿ-ಮನಸ್ಸುಗಳು ಮಾತನ್ನು ಮೊದಲೇ ಕಟ್ಟಿ ಆಮೇಲೆ ಅದು ಸೊಲ್ಲಾಗಿ ಬಾಯಿಂದ ಬರುವ ಏರ್ಪಾಡು ಹಾಳಾದರೆ ಮಾತೂ ಕೆಡುತ್ತದೆ, ಬುದ್ದಿ-ಮನಸ್ಸುಗಳೂ ಕೆಡುತ್ತವೆ. ಆದುದರಿಂದಲೂ ತುಸು ಸಮಯವನ್ನು ಕೊಡಿ, ಎಲ್ಲ ಪ್ರಶ್ನೆಗಳನ್ನು ನನಗೆ ಆಗುವಮಟ್ಟಿಗೆ ಉತ್ತರಿಸುತ್ತೇನೆ.
ಆ ಸಮಯದಲ್ಲಿ ಈವೊಂದು ಕನ್ನಡಿಸಿದ ಸಂಸ್ಕ್ರುತದ ಶ್ಲೋಕವನ್ನು ಇಲ್ಲಿ ’ಹಾಗೇ ಸುಮ್ಮನೆ’ ಬರೆಯಲು ಆಸೆ. ಈ ಶ್ಲೋಕದ ಅರ್ತವನ್ನು ಚರ್ಚೆಗಳಲ್ಲಿ ಆಗಾಗ ನೆನಪಿಸಿಕೊಳ್ಳುವುದು ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತದೆ ಎಂದು ನನ್ನ ಅನಿಸಿಕೆ:
ಜೊತೆಯಲಿ ಕಾಯಲಿ ಜೊತೆಯಲಿ ಸಾಕಲಿ
ಜೊತೆಯಲಿ ಬಲವನು ಕಟ್ಟುವಂತಾಗಲಿ
ನಮ್ಮಯ ಕಲಿಕೆಯು ಎಲ್ಲವ ಬೆಳಗಲಿ
ನಡುವಲಿ ಎಂದೂ ಹಗೆತನ ಬರದಿರಲಿsss
ಓಂ. ನೆಮ್ಮದಿ. ನೆಮ್ಮದಿ. ನೆಮ್ಮದಿ
ಸಕ್ಕತ್..
ಭಾಷೆಯೂ, ಅಕ್ಷರ ಕಲಿಕೆಯೂ.. ನಮ್ಮ ರಾಜ್ಯದ 2011 ಜನಗಣತಿಯ ಅಂಕಿ-ಅಂಶಗಳು ‘ವಾದಿಗ’ರಿಗೆ ಹೊಸ ಹೊಳಹುಗಳನ್ನು ಕೊಡಬಹುದು!
ಜಿಲ್ಲೆ ಲಿಂಗ ಅನುಪಾತ ಸಾಕ್ಷರತೆ ಜನದಟ್ಟಣೆ
(ಪ್ರತಿ ಸಾವಿರ ಪುರುಷರಿಗೆ) ಪ್ರಮಾಣ (ಪ್ರತಿ ಚ.ಕಿ.ಮೀಗೆ)
ಉಡುಪಿ 1,093 86.29 304
ಕೊಡಗು 1,019 82.52 135
ದಕ್ಷಿಣಕನ್ನಡ 1,018 88.62 457
ಹಾಸನ 1,005 75.89 261
ಚಿಕ್ಕಮಗಳೂರು 1,005 79.24 158
ಶಿವಮೊಗ್ಗ 995 80.50 207
ರಾಯಚೂರು 992 60.46 228
ಚಾಮರಾಜನಗರ 989 61.12 200
ಮಂಡ್ಯ 989 70.14 365
ಯಾದಗಿರಿ 984 52.36 224
ಬಾಗಲಕೋಟೆ 984 69.39 288
ಕೊಪ್ಪಳ 983 67.28 250
ಮೈಸೂರು 982 72.56 437
ತುಮಕೂರು 979 74.32 253
ಗದಗ 978 75.18 229
ಬಳ್ಳಾರಿ 978 67.85 300
ಕೋಲಾರ 976 74.33 384
ರಾಮನಗರ 976 69.20 303
ಉತ್ತರ ಕನ್ನಡ 975 84.03 140
ಬೆಳಗಾವಿ 969 73.94 356
ಚಿತ್ರದುರ್ಗ 969 73.82 197
ಚಿಕ್ಕಬಳ್ಳಾಪುರ 968 70.08 298
ದಾವಣಗೆರೆ 967 76.30 329
ಧಾರವಾಡ 967 80.30 434
ಗುಲ್ಬರ್ಗ 962 65.65 233
ವಿಜಾಪುರ 954 67.20 207
ಬೀದರ್ 952 71.01 312
ಹಾವೇರಿ 951 77.60 331
ಬೆಂಗಳೂರು ಗ್ರಾ 945 78.29 441
ಬೆಂಗಳೂರು ನಗರ 908 88.48 4, 378
(ಅಂಕಿ-ಅಂಶ: ಪ್ರಜಾವಾಣಿಯಿಂದ)
ಅಂಕಿ-ಅಂಶವೆಲ್ಲ ಕೂಡಿಕೊಂಡು ಬಿಟ್ಟಿದೆ. ಕ್ಷಮಿಸಿ.
ಓದುವ ರೀತಿ..
ಜಿಲ್ಲೆ / ಲಿಂಗ ಅನುಪಾತ (ಪ್ರತಿ ಸಾವಿರ ಪುರುಷರಿಗೆ)/ ಸಾಕ್ಷರತೆ ಶೆಕಡಾವಾರು / ಜನದಟ್ಟಣೆ ಪ್ರಮಾಣ (ಪ್ರತಿ ಚ.ಕಿ.ಮೀಗೆ)
ಉಡುಪಿ / 1,093 / 86.29 / 304
ಯಾಕೆ? ಇಲ್ಲಿ ನೋಡಿ ನರೇಂದ್ರ ಅವರ ಸಾಲು
“ನಿಮಗೆ ಪದ ಅರ್ಥವಾಗುತ್ತಿಲ್ಲ ಎನ್ನುವುದು ಸಮಸ್ಯೆಯೋ ಅಥವಾ ಅದರ ಮೂಲ ಸಂಸ್ಕೃತದ್ದು ಎನ್ನುವ ಚಿಂತೆಯೋ ತಿಳಿಯುತ್ತಿಲ್ಲ?”
ಇಲ್ಲಿ ಅರ್ಥ, ಸಮಸ್ಯಾ, ಮೂಲ, ಸಂಸ್ಕೃತ, ಚಿಂತೇ, ಅಥವಾ , ಹನ್ನೆರಡಕ್ಕೆ ಆರು ೫೦% ಸಂಸ್ಕೃತ, ೫೦% ನೀವು ಅವರಿಗೆ ಏನೂ ಹೇಳಲ್ಲ.. ನಾನು ಹಿಂದುಸ್ತಾನಿ ಹಾಕಿ ಬರೆದ್ರಾ ಬಂದು ಕೇವಲ್ ೧೦% ಬೇರೆ ಪದ ಹಾಕಿ ಅಂತೀರಿ.. ಒಂದು ಆಂಖ್ಗೆ ಚೂನಾ ಇನ್ನೊಂದಕ್ಕೆ ಮಖ್ಖನ್!
ಇನ್ನೊಂದು ಸಾಲು ನರೇಂದ್ರ ಅವರದೇ..
“ಪ್ರಾಯಶಃ ನಿಮಗೆ “ಸಂಸ್ಕೃತ”ದ ಕುರಿತಾದ ಪೂರ್ವಾಗ್ರಹವಿರುವುದರಿಂದಾಗಿ, ಆ ಪದ (ಮತ್ತು ಆ ರೀತಿಯ ಇನ್ನಿತರ ಪದಗಳು) ಬೇಡವೆನಿಸುತ್ತಿದೆ.”
ಒಟ್ಟು ಪದಗಳು ೧೧, ಬೇರೆನುಡಿಯವು ೫, ಕನ್ನಡ ೫೦%, ಸಂಸ್ಕೃತ ೫೦%…
ಹೀಗಿರುವಾಗ… ಬಂದು ಬರೀ ಮಾಯ್ಸ, ಹಿಂದುಸ್ತಾನಿ ಸೇರಿ ಬರೆದ ಒಬ್ಬನನ್ನೇ ಗುರಿ ಮಾಡಿ ಹೇಳಿದ್ದು ಅನ್ಯಾಯ!
ಯಾಕೆ ನಿಮ್ಮಂತೋರು ಹೀಗೆ ಭೇದಭಾವ್ ಮಾಡ್ತೀರಿ?
ಮಾಯ್ಸ ಅವರೇ, ಇದಕ್ಕೆ ಹೇಳುವುದು Convoluted Logic ಅಂತ.
ನೀವು ಉದಾಹರಣೆಗೆ ತೆಗೆದುಕೊಂಡ ನನ್ನ ಸಾಲುಗಳನ್ನೇ ತೆಗೆದುಕೊಳ್ಳಿ.
ಅದರಲ್ಲಿರುವ ಯಾವ ಪದ ಕನ್ನಡ ನಿಘಂಟಿನಲ್ಲಿ ಸಿಗುವುದಿಲ್ಲ ತಿಳಿಸಿ.
ನಾನು ಉಪಯೋಗಿಸಿರುವ ಎಲ್ಲಾ ಪದಗಳು (ಸಂಸ್ಕೃತ ಮೂಲದ್ದೂ ಸೇರಿ) ಆಡುನುಡಿಗಳಾಗಿವೆ ಮತ್ತು ಸಂಸ್ಕೃತ ಮೂಲದ್ದೂ ಸಹ ಕನ್ನಡೀಕರಣ ಆಗಿದೆ.
ನಾನಿಲ್ಲಿ ಸಂಸ್ಕೃತದ್ದನ್ನು ಉಪಯೋಗಿಸಬೇಕೆಂದು ಉದ್ದೇಶಪೂರ್ವಕವಾಗಿ ಉಪಯೋಗಿಸುತ್ತಿರುವ ಪದಗಳಲ್ಲ ಅವು.
ನಾನು ಮಾತ್ರವಲ್ಲ. ಎಲ್ಲಾ ಕನ್ನಡಿಗರೂ ಉಪಯೋಗಿಸುವಂತಹ ದಿನನಿತ್ಯದ ಪದಗಳವು.
ಈಗ ನೀವು ಉಪಯೋಗಿಸುತ್ತಿರುವ ಹಿಂದುಸ್ಥಾನಿ ಪದಗಳನ್ನು ತೆಗೆದುಕೊಳ್ಳಿ.
ಅದರಲ್ಲಿ ಯಾವುದು ಕನ್ನಡ ನಿಘಂಟಿನಲ್ಲಿ ಉಲ್ಲೇಖವಾಗಿದೆ ತಿಳಿಸಿ.
ಅವು ಎಲ್ಲೋ ಕೆಲವು ಕನ್ನಡಿಗರು ಉಪಯೋಗಿಸುತ್ತಿರುವ ಆಡುನುಡಿಗಳಾಗಿರಬಹುದು.
ಆದರೆ, ಬಹುಸಂಖ್ಯಾತ ಕನ್ನಡಿಗರು ಉಪಯೋಗಿಸದ ಪದಗಳವು.
ನೀವೇ ಹೇಳಿದ Democratic ನಿಯಮದ ಪ್ರಕಾರ ಯಾವುದನ್ನು ಉಪಯೋಗಿಸಬೇಕೆಂಬುದನ್ನು ನಿಶ್ಚಯಿಸಿ.
ಶ್ರೀಮಾನ್ ನರೇಂದ್ರ ಜೀ..
ನಾನು “Convoluted Logic” ಇದನ್ನು ಕನ್ನಡ ಪದನೆರಿಕೆಯಲ್ಲಿ ಹುಡುಕಿದೆನು ಸಿಗಲಿಲ್ಲ.. ಮತ್ತೆ ನೀವೇಕೆ ಬಳಸಿದ್ದೀರಿ?
ಹಾಗೇ Democratic, ಕನ್ನಡೀಕರಣ ಇವೂ ಸಿಗಲಿಲ್ಲವಲ್ಲ..
ಮತ್ತೇ ನೀವೇಕೆ ಬಳಸಿದ್ದು? ಬದನೇಕಾಯಿ ಪಂಡಿತನ ಕತೆಯಾಯಿತು..
ಅಲ್ಲ ಜೀ, ನಮ್ಮ ವೆಂಕಟಸುಬ್ಬಯ್ಯನವರ ಕನ್ನಡದ ಪದನೆರಿಕೆಯಲ್ಲಿ ಇರುವ ಪದ “ಪೂರ್ವಗ್ರಹ” ಎಂದು ಅದನ್ನು ತಾವಿಲ್ಲ ನಲವತ್ತು ಕಡೆ ರಪ ರಪ ಎಂದು ಮೂತಿಗೆ ತಿವಿದ ಹಾಗೆ “ಪೂರ್ವಾಗ್ರಹ” ಎಂದು ಉವಾಚ ಮಾಡಿದ್ದೀರಿ. ನಾನು ದೊಡ್ಡಬುದ್ದಿಯವರು ದೋಷರಾಹಿತ್ಯಪ್ರವೀಣರು ತಪ್ಪು ಬರೆದಿರುವುದಿಲ್ಲ ಎಂದು ಹೋಗಿ ಮೂರು ಪದನೆರಿಕೆ/ನಿಘಂಟುಗಳನ್ನು ನೋಡಿ, ಗೊಂದಲಗೊಂಡು ನಿಮಗೆ “ಸ್ವಾಮಿ ಏನಿದು ಗ್ರಹ್? ಶನಿಯಾ, ರಾಹುವಾ?” ಎಂದು ಕೇಳಿದ್ದು..
ನಿಮ್ಮ ತರ್ಕ ಸಮವಾಗಿದೆ ಎಂದು ಎಲ್ಲರೂ ಒಪ್ಪಿಕೊಳ್ಳುವರು ಎಂದು ನೀವೇ ೧೦೧ ಸಲ ಶ್ರೀ ಶ್ರೀ ಹೇಳಿದಂತೆ ಹೇಳಿಕೊಂಡಿದ್ದೀರಿ.. ಏನೋ.. ಹಡಬಡೀ ಇದೆ ಇಲ್ಲ..
ರಾಮ ರಾಮ!
ನಾನು “Convoluted Logic”, Democratic, ಕನ್ನಡೀಕರಣ, “ಪೂರ್ವಾಗ್ರಹ” ಇವನ್ನೆಲ್ಲಾ ಕನ್ನಡ ಪದಗಳೆಂದು ಎಲ್ಲಿ ಹೇಳಿದೆ?
ಮತ್ತು ಅವನ್ನು ಕನ್ನಡಕ್ಕೆ ಸೇರಿಸಬೇಕೆಂದಾಗಲೀ, ತುರುಕಬೇಕೆಂದಾಗಲೀ ಯಾರನ್ನೂ ಒತ್ತಾಯಿಸುತ್ತಿಲ್ಲವಲ್ಲಾ?
ನೀವು ತಾನೇ ಹಿಂದುಸ್ಥಾನಿ ಪದಗಳನ್ನು ಕನ್ನಡಕ್ಕೆ ತುರುಕಬೇಕೆಂದು ವಾದಿಸುತ್ತಿರುವುದು?
> ಬದನೇಕಾಯಿ ಪಂಡಿತನ ಕತೆಯಾಯಿತು
ನನಗೆ ಈ ಕಥೆ ತಿಳಿದಿಲ್ಲ. ತಿಳಿಸಿ ಉಪಕಾರ ಮಾಡಬೇಕು.
> ಅಲ್ಲ ಜೀ, ನಮ್ಮ ವೆಂಕಟಸುಬ್ಬಯ್ಯನವರ ಕನ್ನಡದ ಪದನೆರಿಕೆಯಲ್ಲಿ ಇರುವ ಪದ “ಪೂರ್ವಗ್ರಹ” ಎಂದು ಅದನ್ನು ತಾವಿಲ್ಲ
> ನಲವತ್ತು ಕಡೆ ರಪ ರಪ ಎಂದು ಮೂತಿಗೆ ತಿವಿದ ಹಾಗೆ “ಪೂರ್ವಾಗ್ರಹ”
ಆ ಪದವನ್ನು ನಾನು ತಪ್ಪಾಗಿ ಬಳಸಿದ್ದನ್ನು ತಿಳಿಸಿಕೊಟ್ಟದ್ದಕ್ಕೆ ಧನ್ಯವಾದಗಳು. ನಿಮ್ಮೊಡನೆ ನಡೆಸಿದ ಇಷ್ಟು ದಿನಗಳ ಚರ್ಚೆಯಲ್ಲಿ ಒಂದಾದರೂ ಉಪಯೋಗವಾಯಿತಲ್ಲಾ ಎಂದು ಸಂತೋಷವಾಗುತ್ತಿದೆ.
ನಿಮ್ಮ ವಾದ, ತರ್ಕಗಳು ಯಾರಿಗೆ ಅರ್ಥವಾಗುತ್ತಿದೆಯೋ ತಿಳಿದಿಲ್ಲ. ನನಗಂತೂ ನೀವೇನು ಹೇಳಲು ಹೊರಟಿರುವಿರಿ ಎನ್ನುವುದು ಅರ್ಥವಾಗುತ್ತಿಲ್ಲ.
ನರೇಂದ್ರ ಜೀ..
ನೀವೇ ತಾನೇ ಹೇಳಿದ್ದು ಹೀಗೇ..
>>>>”ಅದರಲ್ಲಿರುವ ಯಾವ ಪದ ಕನ್ನಡ ನಿಘಂಟಿನಲ್ಲಿ ಸಿಗುವುದಿಲ್ಲ ತಿಳಿಸಿ.”
ನಾನು ನಿಮ್ಮ ಆಜ್ಞಾಪಾಲಕನಾಗಿ ಹೀಗೆ ಬರೆದೆ..
>>>>”ನಾನು “Convoluted Logic” ಇದನ್ನು ಕನ್ನಡ ಪದನೆರಿಕೆಯಲ್ಲಿ ಹುಡುಕಿದೆನು ಸಿಗಲಿಲ್ಲ.. ಮತ್ತೆ ನೀವೇಕೆ ಬಳಸಿದ್ದೀರಿ?
ಹಾಗೇ Democratic, ಕನ್ನಡೀಕರಣ ಇವೂ ಸಿಗಲಿಲ್ಲವಲ್ಲ..”
ಇದರಾಗೇ ನನ್ನ ಗಲತಿ ಏನು?
>>>>>”ಬದನೇಕಾಯಿ ಪಂಡಿತನ ಕತೆಯಾಯಿತು”
>>>>>ನಿಮ್ಮ ವಾದ, ತರ್ಕಗಳು ಯಾರಿಗೆ ಅರ್ಥವಾಗುತ್ತಿದೆಯೋ ತಿಳಿದಿಲ್ಲ. ನನಗಂತೂ ನೀವೇನು ಹೇಳಲು ಹೊರಟಿರುವಿರಿ ಎನ್ನುವುದು ಅರ್ಥವಾಗುತ್ತಿಲ್ಲ.
ಬದನೇಕಾಯಿ ಹುಜ್ಸೂರ್.. Brinjal, Eggplant, aubergine, ವಾಂಗಿ, ವಾರ್ತಾಕ, ವೃಂತಫಲ, ವೃಂತಾಕ, ಬೈಂಗನ್..
ಬೈಂಗನ್ ಭರ್ತ ತಿಂದಿಲ್ವ?
> ನೀವೇ ತಾನೇ ಹೇಳಿದ್ದು ಹೀಗೇ..
>>>>”ಅದರಲ್ಲಿರುವ ಯಾವ ಪದ ಕನ್ನಡ ನಿಘಂಟಿನಲ್ಲಿ ಸಿಗುವುದಿಲ್ಲ ತಿಳಿಸಿ.”
> ನಾನು ನಿಮ್ಮ ಆಜ್ಞಾಪಾಲಕನಾಗಿ ಹೀಗೆ ಬರೆದೆ..
ಸ್ವಾಮೀ ನಾನು ಯಾವ ವಾಕ್ಯಗಳ ಕುರಿತಾಗಿ ಮಾತನಾಡುತ್ತಿದ್ದೆ ಎಂಬುದನ್ನು ತಿಳಿದು ಮಾತನಾಡಿ.
ನೀವೇ ನನ್ನ ೨ ವಾಕ್ಯಗಳನ್ನು ತೆಗೆದುಕೊಂಡು ಅವುಗಳಲ್ಲಿರುವ ಸಂಸ್ಕೃತ ಪದಗಳೆಷ್ಟು, ಕನ್ನಡ ಪದಗಳೆಷ್ಟು ಎಂದು ಎಣಿಸುತ್ತಿದ್ದಿರಿ.
ನಾನು ಆ ವಾಕ್ಯಗಳ ಕುರಿತು ಮಾತನಾಡುತ್ತಿದ್ದೆ.
ನೀವು ಆ ವಾಕ್ಯವನ್ನು ಮರೆತುಬಿಟ್ಟಿರಿ (ಜಾಣ ಮರೆವು), ನಿಮಗೆ ಬೇಕಾದ ಇನ್ಯಾವುದೋ ವಾಕ್ಯವನ್ನು ತೆಗೆದು ಮಾತನಾಡತೊಡಗಿದಿರಿ.
ಒಟ್ಟಿನಲ್ಲಿ ವಾಸ್ತವವನ್ನು ನೀವು ಒಪ್ಪಿಕೊಳ್ಳಬಾರದೆಂದು ನಿರ್ಧರಿಸಿರುವಿರಿ.
ಮಾಯ್ಸ,
ನಿಮಗೊಬ್ಬರಿಗೆ ಹೇಳಿದ್ದಲ್ಲ.. ಎಲ್ಲರಿಗೂ(ನರೇಂದ್ರ, ಜಲಕಜೆನೂ ಸೇರಿಸಿ)
೯೦% ಕನ್ನಡ,
೧೦% ಯಾವುದ್ ಬೇಕೊ (ಸಕ್ಕದ,ಇಂಗ್ಲಿಶ್, ಹಿಂದಿ….) ಅದನ್ನ ಹಾಕಿಕೊಳ್ಳಿ.
-ಬರತ್
ಬರತ್..
ನೀವು ಮಾಡಿದ ಭೇದ್‌ಭಾವ್‌ದ ಪೀಚ್ಛೇ ಸಲುವು ಏನು?
ನನಗಿಂತ ಪೆಹಲೇ ನರೇಂದ್ರ ಅನಿಸಿಕೆ ಬರೆದಿದ್ದರು. ಅವರಿಗೆ ಬರೆಯದೇ ನನ್ನನ್ನೇ ಕುರಿತು, ಹೆಸರಿಡಿದು ಕರೆದು, ಪಾಲುಕೊಟ್ಟಿದ್ದು.. ನನಗೆ ಎಶ್ಟು ನೋವು ಮಾಡಿದೆ ಗೊತ್ತಾ?
ಭರತ್,
ಇಲ್ಲಿ ಒಂದು ವಿಷಯ ಗಮನಿಸಬೇಕು.
ಕನ್ನಡದಲ್ಲಿ ಮಧ್ಯೆ ಇಂಗ್ಲಿಷ್ ಇಲ್ಲವೇ ಹಿಂದಿ ಪದಗಳನ್ನು ಬಳಸುವಾಗ, ಅವು ಕನ್ನಡದ ಪದಗಳಲ್ಲ ಎಂಬುದು ನಮಗೆ ತಿಳಿದಿರುತ್ತದೆ.
ಪ್ರಾಯಶಃ ಆ ಸಮಯದಲ್ಲಿ ಕೂಡಲೇ ಅದಕ್ಕೆ ಪರ್ಯಾಯ ಕನ್ನಡ ಪದ ಹೊಳೆಯದಿರಬಹುದು.
ಆದರೂ, ಅವು ಕನ್ನಡ ಪದಗಳಲ್ಲ ಎಂದು ಹೇಳಲು ಕಷ್ಟವೇನಿಲ್ಲ.
ಆದರೆ, ಸಂಸ್ಕೃತದಿಂದ ಕನ್ನಡಕ್ಕೆ ಬಂದು ಸೇರಿ ಹೋಗಿರುವ ಪದಗಳ ಕುರಿತಾಗಿ ಇದನ್ನೇ ಹೇಳಲಾಗುವುದಿಲ್ಲ.
ಅವು ಕನ್ನಡವಲ್ಲವೆಂದು ತಿಳಿದುಕೊಳ್ಳುವುದೇ ಕಷ್ಟವೆನ್ನುವಷ್ಟರ ಮಟ್ಟಿಗೆ ಅವು ಕನ್ನಡಕ್ಕೆ ಸೇರಿ ಹೋಗಿವೆ.
ನಾವೇನೂ ಉದ್ದೇಶಪೂರ್ವಕವಾಗಿ ಅವನ್ನು ಕನ್ನಡಕ್ಕೆ ಸೇರಿಸುವುದಿಲ್ಲ.
ಅಂತವನ್ನು ಕನ್ನಡವೆಂದೇ ಪರಿಗಣಿಸಬೇಕು.
ಮಹಾರಾಜ್ ನರೇಂದ್ರ ಜೀ…
ಅರ್ಜಿ, ಕಾಗದ, ಕಾನೂನು, ಇಲಾಖೆ, ಫಿರಂಗಿ, ಆಸ್ಪತ್ರೆ, ಟಿಕೇಟು, ಸಡನ್ನು, ಬಸ್ಸು, ಕಾರು, ಲೋಟ, ಮಸೂದೆ, ಸಬೀತು, ಖಾಲಿ, ಪಕೋಡ, ಲಫಂಗ, ಗಾಡಿ, ಡಿಕ್ಕಿ, ಬಿಸ್ಕತ್ತು, ರುಪಾಯಿ, ಟೀಪಾಯಿ, ಪ್ಯಾಂಟು, ಬದಲು, ಬದಲಾಯಿತು, ಜಮಾಯಿತು, ಜಮಾ ಮಾಡು, ಖಾತೆ, ಎಕ್ಕ, ಸುಲ್ತಾನ್ ಬೀಡಿ, ದವಲತ್ತು, ದೌಲು, ಇವೆಲ್ಲ ಹಳ್ಳಿ ಹಳ್ಳಿ ಮುಕ್ಕಂಗೂ ಗೊತ್ತು ಇವು ಕನ್ನಡವೂ ಅಲ್ಲ ಸಂಸ್ಕೃತವೂ ಅಲ್ಲ .. ಎಲ್ಲ ಹಿಂದುಸ್ತಾನಿ, ಉರ್ದು ಲಫ್‌ಜ್ಸ್!
ಬರತ್ ಸಾಹೇಬ್..
ಈಗ ಲೆಕ್ಕ..
>>>>>>ಇಲ್ಲಿ ಒಂದು ವಿಷಯ ಗಮನಿಸಬೇಕು.
೪ ರಲ್ಲಿ ೧, ಕನ್ನಡವಲ್ಲದ್ದು ೨೫%
>>>>>ಕನ್ನಡದಲ್ಲಿ ಮಧ್ಯೆ ಇಂಗ್ಲಿಷ್ ಇಲ್ಲವೇ ಹಿಂದಿ >>>>>ಪದಗಳನ್ನು ಬಳಸುವಾಗ, ಅವು ಕನ್ನಡದ ಪದಗಳಲ್ಲ >>>>>ಎಂಬುದು ನಮಗೆ ತಿಳಿದಿರುತ್ತದೆ.
೧೨ ರಲ್ಲಿ ೨, ಕನ್ನಡವಲ್ಲದ್ದು ೧೬%
>>>>>ಪ್ರಾಯಶಃ ಆ ಸಮಯದಲ್ಲಿ ಕೂಡಲೇ ಅದಕ್ಕೆ >>>>>ಪರ್ಯಾಯ ಕನ್ನಡ ಪದ ಹೊಳೆಯದಿರಬಹುದು.
>>>>>ಆದರೂ, ಅವು ಕನ್ನಡ ಪದಗಳಲ್ಲ ಎಂದು ಹೇಳಲು >>>>>ಕಷ್ಟವೇನಿಲ್ಲ.
೧೨ ರಲ್ಲಿ ೪, ಕನ್ನಡವಲ್ಲದ್ದು ೩೦%
>>>>>ಆದರೆ, ಸಂಸ್ಕೃತದಿಂದ ಕನ್ನಡಕ್ಕೆ ಬಂದು ಸೇರಿ >>>>>ಹೋಗಿರುವ ಪದಗಳ ಕುರಿತಾಗಿ ಇದನ್ನೇ >>>>>ಹೇಳಲಾಗುವುದಿಲ್ಲ.
೧೦ರಲ್ಲಿ ೧, ಕನ್ನಡವಲ್ಲದ್ದು ೧% ( ಶಭಾಷ್ )
>>>>>ಅವು ಕನ್ನಡವಲ್ಲವೆಂದು ತಿಳಿದುಕೊಳ್ಳುವುದೇ >>>>>ಕಷ್ಟವೆನ್ನುವಷ್ಟರ ಮಟ್ಟಿಗೆ ಅವು ಕನ್ನಡಕ್ಕೆ ಸೇರಿ >>>>>ಹೋಗಿವೆ.
೯ ರಲ್ಲಿ ೨, ಕನ್ನಡವಲ್ಲದ್ದು ೨೦%
>>>>>ನಾವೇನೂ ಉದ್ದೇಶಪೂರ್ವಕವಾಗಿ ಅವನ್ನು ಕನ್ನಡಕ್ಕೆ >>>>>ಸೇರಿಸುವುದಿಲ್ಲ.
>>>>>ಅಂತವನ್ನು ಕನ್ನಡವೆಂದೇ ಪರಿಗಣಿಸಬೇಕು.
೮ ರಲ್ಲಿ ೩, ಕನ್ನಡವಲ್ಲದ್ದು ೩೭%
ಇದು ಏನು? ನರೇಂದ್ರ ಅವರಿಗೆ ಯಾಕೆ ಖಾಸ್ ಮಂಜೂರು?
ಬರತ್..
ಇದಕ್ಕೆ ನಿಮ್ ಬಾತ್ ಏನು?
ಯಾಕೆ ಚುಪ್ ಇದ್ದೀರಿ? ಜ್ಸರ ಹೇಳಿ.
ಮಾಯ್ಸ,
ಅವ್ದು, ಅವರದು ಸಂಸ್ಕ್ರುತ ಬರಹ, ಕನ್ನಡ ಬರಹ ಅನ್ನಕ್ಕೆ ತಕ್ಕ್ದುದಲ್ಲ.
-ಬರತ್
ನರೇಂದ್ರ,
“ಅವು ಕನ್ನಡವಲ್ಲವೆಂದು ತಿಳಿದುಕೊಳ್ಳುವುದೇ ಕಷ್ಟವೆನ್ನುವಷ್ಟರ ಮಟ್ಟಿಗೆ ಅವು ಕನ್ನಡಕ್ಕೆ ಸೇರಿ ಹೋಗಿವೆ”
ಸಕ್ಕದದ ಬಗ್ಗೆ ಮೇಲೆ ನೀವು ಹೇಳಿರುವುದು ತಪ್ಪು,
ಕನ್ನಡ ಸಕ್ಕದ ಹೊಂದುವುದಿಲ್ಲ ಅಂತ ಕನ್ನಡದ ಕಬ್ಬಿಗರಾದ ಶ್ರೀವಿಜಯ, ನಯಸೇನ ಮತ್ತು ಆಂಡಯ್ಯ ಹೇಳಿದ್ದಾರೆ
ಕವಿರಾಜಮಾರ್ಗ ಬಿಡಿ-೧ , ೫೮ ನೇ ಪದ್ಯ
ತಱಿಸಂದಾ ಸಕ್ಕದಮುಮ
ನಱಿಯದೆ ಕನ್ನಡಮುಮಂ ಸಮಾಸೋಕ್ತಿಗಳೊಳ್
ಕುಱಿತು ಬೆರೆಸಿದೊಡೆ ವಿರಸಂ
ಮಱುಗುವ ಪಾಲ್ಗಳೆಯ ಪನಿಗಳಂ ಬೆರೆಸಿದವೋಲ್
ಅಂದರೆ ಕುದಿಯುವ ಹಾಲಿಗೆ ಮಜ್ಜಿಗೆ ಹನಿಗಳ ಬೆರಸಿದರೆ ಹೇಗಾಗುತ್ತದೆಯೊ ಹಾಗೆ ಕನ್ನಡಕ್ಕೆ ಸಂಸ್ಕ್ರುತ ಬೆರೆಸಿದರೆ ಹಾಗುತ್ತದೆ.
-ಬರತ್
“ಬೆರಸಿದರೆ ಹಾಗುತ್ತದೆ” ಅಲ್ಲ ಬೆರಸಿದರೆ ಆಗುತ್ತದೆ. 🙂
… 🙂 🙂
ಭಾಷಾ ವಿಜ್ಞಾನಿ ಎಂದು ಸಂಸ್ಕೃತ ಪದ ಹೇಳಲಿಕ್ಕೆ ಕಷ್ಟ ಆಗುತ್ತೆ ಎನ್ನುವ ವಾಕ್ಯದಿಂದ ಇಶ್ಟೆಲ್ಲ ಚರ್ಚೆ ಆಗ್ತಿದೆ. ಆದ್ರ ನುಡಿಯರಿಗ (ಮುಂದೆ ನುಡಿಯರ್ಗ) ಕಷ್ಟ ಆಗಲ್ವ?
ಈಜು ಬಾರದ ಪಂಡಿತನ ಕಥೆಯಾಯ್ತು ಇದು.
ನನ್ ಅಪ್ಪಣೆಯ ಮೇರೆಗೆ ನಡೆಯಬೇಕೆಂದು ಬಯಸುವವರ ಕಾಮೆಂಟುಗಳನ್ನು ನೋಡ್ಕೊಳ್ಳಿ. ಗುಲಗಂಜಿಗೆ ತನ್ನ ಕಪ್ಪು ಕಾಣಿಸಲ್ವಂತೆ ಪಾಪ.
🙂 ಸಕ್ಕತ್ ವ್ಯಾಕರಣ ನಿಮ್ಮದು.. ಭೇಷ..
ಆಮೇಲೆ..
ಮೋಹನ್ ಸಕ್ಕತ್..
ee madivanthike mattu nimmantha arebenda madakegale kaarana kannadakke ee sthiti baralu kaarana. haudu tamma vya vya vya kaaranakkintha melu enantheera
ಹೌದ್ ಸಾರ್, ಹುಚ್ಚರ ಜೊತೆ ಕುಣಿಯಲಾರೆ ನಾನು.
ಸಕ್ಕತ್ ವಿದ್ವತ್ಪೂರ್ಣರೂ ನೀವು.. ಸಕ್ಕತ್ತಾಗಿ ಮಾತಾಡ್ತೀರ!
ಕನ್ನಡದ ಬಗ್ಗೆ ಒಳ್ಳೆ ಚರ್ಚೆ ನಡೀತಾ ಇದೆ. ಆಫೀಸಲ್ಲಿ wordpress ಬ್ಲಾಕಾಗಿರೋದ್ರಿಂದ ಇಲ್ಲಿವರ್ಗೂ ನೋಡಿರಲಿಲ್ಲ.
>>ಅವರು ಹೇಳುವಂತೆ ನಿಜಕ್ಕೂ ಆವೊಂದು ’ಕತ್ತರಿ’ ವರಸೆಯನ್ನು ಶಂಕರಬಟ್ಟರೇ ಶುರುಮಾಡಿರುವುದು, ಮತ್ತು ಅವರ ಹಿಂಬಾಲಕರು ಕಡಿಮೆಯೆನ್ನುವುದೂ ನಿಜ
>>ಕತ್ತರಿ ಅನ್ನೋ ಪ್ರಯೋಗ ಎಷ್ಟು ಸರಿನೋ ಗೊತ್ತಿಲ್ಲ. ಆದರೆ ಈ ಪ್ರಯತ್ನಗಳು ಬಿ ಎಂ ಶ್ರೀ ಕಾಲದಿಂದಲೇ ಶುರುವಾಗಿವೆ. ಸಾಕ್ಷಿಗೆ ‘ಕನ್ನಡ ಬಾವುಟ” ನೋಡಿ.
ಬರಹ ದೊಡ್ಡದಿದೆ. ಟೈಮ್ ಮಾಡಿಕೊಂಡಿ ಓದಬೇಕು!!!, ಚರ್ಚೆ ಮುಂದುವರೆಯಲಿ!
“ಆಫೀಸಲ್ಲಿ wordpress ಬ್ಲಾಕಾಗಿರೋದ್ರಿಂದ ಇಲ್ಲಿವರ್ಗೂ ನೋಡಿರಲಿಲ್ಲ.”
ಅಂತರ್ಜಾಲ ಸಾಮ್ರಾಜ್ಯದ ಖ್ಯಾತ ಕನ್ನಡ ನುಡಿಗಾರರಾಗಿರುವ ತಮ್ಮ ಅನುಪಸ್ಥಿತಿ ನಮ್ಮನ್ನು ಬಹುವಾಗಿ ಕಾಡುತ್ತಿತ್ತು ಮಹಾಪ್ರಭು.
” ಚರ್ಚೆ ಮುಂದುವರೆಯಲಿ! ”
ತಮ್ಮ ಅಪ್ಪಣೆಯಂತೆಯೇ ಆಗಲಿ ಮಹಾಪ್ರಭು. ತಮ್ಮ ಆಜ್ನೆಯನ್ನು ತಲೆಬಾಗಿ ಪಾಲಿಸುತ್ತೇವೆ. ತಾವು ಆಗಾಗ ಬಿಡುವು ಮಾಡಿಕೊಂಡು, ಚರ್ಚೆ ನೋಡಿ ತಮ್ಮ ಆಜ್ಞೆಯನ್ನು ನವೀಕರಿಸಿ ಹೋಗಬೇಕಾಗಿ ತಮ್ಮಲ್ಲಿ ವಿನಮ್ರ ವಿನಂತಿ.
ಗುರುಗಳೇ…ಅದು ಆಜ್ಞೆಯಲ್ಲ. ಆಸಕ್ತಿ. ನಿಮ್ಮಂತ ತಿಳಿದವರು ಚರ್ಚೆ ಮಾಡಿದರೆ ನಾವು ಆಸಕ್ತಿ ವಹಿಸಿ ಓದುತ್ತೇವೆ ಅನ್ನೋದು ಅದರ ಅರ್ಥ. ಕ್ವೋಪ ಬೇಡ ಸಾಮಿ ನಮ್ಮಂತ ಪಾಮರರ ಮೇಲೆ.
ಕನ್ನಡದ ಈಗಿರುವ ಬರವಣಿಗೆಯೇ ಸರಿಯಾದದ್ದು ಅಂತಾ ನನ್ನ ಅನಿಸಿಕೆ ಆದರೆ ಕನ್ನಡದ್ದೇ ಪದಗಳ ಹುಡುಕಾಟ,ಬಳಕೆ ವಿಷಯದಲ್ಲಿ ಶ್ರೀ ಶಂಕರ ಭಟ್ ಅವರ ನಿಲುವು ತುಂಬಾ ಸಮಂಜವಾದದ್ದು.
ಶ್ರೀ ಕಿರಣ್ ಅವರ ಕನ್ನಡ ಮತ್ತು ಅಮೇರಿಕಾ ಹೋಲಿಕೆ ಅಷ್ಟೊಂದು ಸರಿಯಾದುದಲ್ಲ ಅಂತಾ ಅನಿಸುತ್ತೆ.
ತಮಿಳು ಮುಂದಿದೆ (?) ಅಂತಾದರೆ ಅದಕ್ಕೆ ಕಾರಣ ತಮಿಳಿಗರಲ್ಲಿರುವ ಭಾಷಾಭಿಮಾನವೇ ಹೊರತು ಆ ಭಾಷೆಯ ರಚನೆ/ಪರಿಕಲ್ಪನೆಯಿಂದಾಗಿಯಲ್ಲ.
ಕನ್ನಡ ಭಾಷೆ (ಹಳೆ ಮತ್ತು ಹೊಸ) ಮತ್ತು ಲಿಪಿ/ಬರವಣಿಗೆಗೆ (ಈಗಿರುವ) ಯಾವ ಭಾಷೆಯು ಸಾಟಿಯಲ್ಲ.
ವಂದನೆಗಳು,
ಪ್ರಶಾಂತ ಸೊರಟೂರ
>>>ಆದರೆ ಜನಸಾಮಾನ್ಯರಿಗೆ ಮನುಷ್ಯತ್ವವನ್ನು ಅಲ್ಲಗಳೆಯದೆ ಇರುವಲ್ಲಿ ತಮಿಳು ಕನ್ನಡಕ್ಕಿಂತ ಮುಂದಿದೆ. ಹೌದು, ಕನ್ನಡನಾಡಿನಲ್ಲೇನು ಅಮೇರಿಕದಲ್ಲಿ ನಡೆದಂತೆ ನೆತ್ತರ ಚೆಲ್ಲಾಟ ನಡೆದಿಲ್ಲ, ಆದರೆ ಅದರ ಬದಲಾಗಿ ಸಮಾಜದಲ್ಲಿ ಮತ್ತು ಅದರ ಗುರುತೆನ್ನಬಹುದಾದ ನುಡಿ-ಬರಹಗಳಲ್ಲಿ ಮೇಲು-ಕೀಳುಗಳು ಏರ್ಪಟ್ಟು ಪ್ರತಿದಿನವೂ ಕನ್ನಡಿಗರ ಮನುಷ್ಯತ್ವವನ್ನೇ ಅಲ್ಲಗಳೆದು ಕಾಡುತ್ತಿವೆ, ಅಶ್ಟೆ.
ಇವು ಇಂಟರೆಸ್ಟಿಂಗ್ ಸಾಲುಗಳು. ಒಂದು ಹಂತದವರ್ಗೆ ಒಪ್ಪಬಹುದು., ಅಂತಹ ಪ್ರಯತ್ನಗಳು ಆಗಾಗ್ಗೆ ಅಲ್ಲಲ್ಲಿ ನಡೆದರೂ ಅವನ್ನು ಈ ‘ಸಂಸ್ಕೃತ ಮೇಲಿರಿಮೆ-ಕನ್ನಡ ಕೀಳಿರಿಮೆ’ ಮುಚ್ಚಿ ಮಣ್ಣು ಮಾಡಿವೆ!
https://nilume.wordpress.com/2011/06/16/%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%95%e0%b2%b2%e0%b2%bf%e0%b2%95%e0%b3%86%e0%b2%af-%e0%b2%86%e0%b2%b8%e0%b2%95%e0%b3%8d%e0%b2%a4%e0%b2%b0%e0%b2%bf%e0%b2%97%e0%b3%86/