ವಿಷಯದ ವಿವರಗಳಿಗೆ ದಾಟಿರಿ

Archive for

5
ಆಗಸ್ಟ್

ಸಂಸ್ಕೃತಿ ಸಂಕಥನ – ೪

– ರಮಾನಂದ ಐನಕೈ

ಧರ್ಮದ ಮೈಮೇಲೆ – ರಿಲಿಜನ್ನಿನ ಅಂಗಿ 

 ವಿಪರ್ಯಾಸ ನೋಡಿ. ಒಂದು ಕಡೆ ‘ಹಿಂದೂ ಧರ್ಮ’ ಅನ್ನುತ್ತೇವೆ. ಇನ್ನೊಂದು ಕಡೆ ಅದನ್ನೇ ‘ಹಿಂದೂ ರಿಲಿಜನ್’ ಅನ್ನುತ್ತೇವೆ. ಯಾವುದೇ ಭಾರತೀಯರನ್ನು ಕೇಳಿದರೆ ಇವೆರಡರ ನಡುವೆ ವ್ಯತ್ಯಾಸವೇ ಇಲ್ಲ ಎಂದು ಆತ್ಮವಿಶ್ವಾಸದಿಂದ ಪ್ರತಿಪಾದಿಸುತ್ತಾರೆ. ಇವೆರಡರ ವ್ಯತ್ಯಾಸ ತಿಳಿಯದಿದ್ದದ್ದೇ ಭಾರತೀಯರ ಮುಖ್ಯ ಮಾನಸಿಕ ತೊಂದರೆ. ಹಾಗಾಗೇ ನಿತ್ಯ ಗೊಂದಲದಲ್ಲಿ ಒದ್ದಾಡುತ್ತೇವೆ.

‘ರಾಜಕೀಯದಲ್ಲಿ ಧರ್ಮ ಇರಬಾರದು’, ‘ಸಾಹಿತ್ಯದಲ್ಲಿ ಧರ್ಮ ಬರಬಾರದು’, ‘ಕೋಮು ಗಲಭೆಗೆ ಧರ್ಮ ಕಾರಣ’ – ಇತ್ಯಾದಿ ಹೇಳಿಕೆ ಕೇಳಿದಾಗ ನಮಗೆ ಪುನಃ ಗೊಂದಲ. ಏಕೆಂದರೆ ಈ ಹೇಳಿಕೆಯನ್ನು ತೇಲಿ ಬಿಡುವವರು ಬುದ್ಧಿಜೀವಿಗಳು. ಅವರು ರಿಲಿಜನ್ ಎಂಬ ಪರಿಕಲ್ಪನೆಯ ಮೇಲೆ ಪ್ರಜ್ಞಾಪೂರ್ವಕವಾಗಿ ವಾದಿಸುತ್ತಾರೆ. ಆದರೆ ನಾವು ಸಾಮಾನ್ಯ ನಾಗರಿಕರು ಧರ್ಮ ಎಂಬ ಅರ್ಥದ ನೆಲೆಯಲ್ಲಿ ಅದನ್ನು ಗ್ರಹಿಸುತ್ತೇವೆ. ಹಾಗಾಗಿ ಎಲ್ಲವೂ ನಮ್ಮ ಮನಸ್ಸಿಗೆ ಅರ್ಧಸತ್ಯ ಅನಿಸುತ್ತದೆ. ಧರ್ಮ ಬೇಡ ಅಂದರೆ ಪ್ರತಿಯೊಂದಕ್ಕೂ ಅದರದ್ದೇ ಆದ ಕರ್ತವ್ಯ ಬೇಡವೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಂದರೆ ಧರ್ಮ ಹಾಗೂ ರಿಲಿಜನ್ ಮಧ್ಯೆ ವ್ಯತ್ಯಾಸ ಇರಲೇಬೇಕೆಂಬುದು ನಮ್ಮ ಗೃಹಿಕೆಗೆ ಸೂಚಿಸುತ್ತದೆ. ಎರಡೂ ಒಂದೇ ಆಗಿದ್ದರೆ ಈ ರೀತಿ ಗೊಂದಲ ಏಕೆ ಸೃಷ್ಟಿಯಾಗುತ್ತದೆ? ಇದೇ ಅರ್ಥವಾಗದ ಒಗಟು.

ಮತ್ತಷ್ಟು ಓದು »

3
ಆಗಸ್ಟ್

ಅಲಾಲ್ ಟಪಾಲ್…!

ಪವನ್ ಪಾರುಪತ್ತೇದಾರ

ನಮ್ಮಪ್ಪ ನನ್ನ ಹಾಗೆ ಕರೆಯೋದ್ರಲ್ಲು ಒಂದು ಅರ್ಥ ಇತ್ತು ಕಾರಣ ಇತ್ತು. ಏಳುತ್ತಾ ಇದ್ದದ್ದು ೯ ಘಂಟೆ ಎದ್ದು ಹಲ್ಲು ತಿಕ್ಕೋ ಅಷ್ಟರಲ್ಲಿ ಅಮ್ಮ ಕಾಫೀ ಕೊಡುತಿದ್ದರು, ನಂತರ ಸ್ನಾನ ಮುಗಿಸಿ ತಿಂಡಿ. ಅಷ್ಟರಲ್ಲಿ ೧೧ ಘಂಟೆ ಆಗಿರೋದು. ಇನ್ನು ಆಗ ಕಂಪ್ಯೂಟರ್ ಮುಂದೆ facebook, orkut, ಅ ಸಂಘ, ಈ ಕೂಟ, ಇನ್ಯಾವುದೋ ಬಳಗ ಅಂತ ಚಾಟಿಂಗ್ ಮಾಡುತ್ತಾ ಕೂತರೆ ಮಧ್ಯಾಹ್ನ ೨ ಘಂಟೆ ಆಗುವುದೇ ಗೊತ್ತಾಗುವುದಿಲ್ಲ. ಅಷ್ಟರಲ್ಲಿ ದೇವಸ್ಥಾನಕ್ಕೆ ಹೋಗಿದ್ದ ಅಪ್ಪ ಮನೆಗೆ ಬರುತ್ತಾರೆ. ಊಟ ಮಾಡಲು ಎಲ್ಲರು ಕೂತು ಊಟ ಮುಗಿಸಿ ನಂತರ ಮತ್ತೆ online ಹೋದರೆ ಮತ್ತೆ ಸಮಯದ ಅರಿವೇ ಇರುವುದಿಲ್ಲ.

ಸಂಜೆ ೬ ಘಂಟೆ ಹೊತ್ತಿಗೆ ಹಸು ಮನೆಯಲ್ಲಿನ ಸಗಣಿ ಕಸ clean ಮಾಡಿ, ಮತ್ತೆ ಒಂದು ರೌಂಡ್ ಕಾಫೀ ಕುಡಿದು ಹೊರಟರೆ ಮತ್ತೆ ಮನೆ ಸೇರುತಿದ್ದಿದ್ದು 10 ಘಂಟೆಗೆ. ಸ್ನೇಹಿತರ ಜೊತೆ ಅಡ್ಡ, ಕಾಡು ಹರಟೆ, ಮನೆಗೆ ಬಂದೊಡನೆ ಊಟ ಮಾಡಿ ಮತ್ತೆ online 12 ರ ತನಕ ಚಾಟಿಂಗ್ ನಂತರ ನಿದ್ದೆ. ಈ ರೀತಿಯ ದಿನಚರಿ ಇರುವ ಯಾವ ಮಗನನ್ನಾದರೂ ಅಲಾಲ್ ಟಪಾಲ್ ಅನ್ನದೆ ಮುದ್ದು ಮಾಡೋದಕ್ಕ ಸಾಧ್ಯ??

ಹೌದು ನಾನು ಅಲಾಲ್ ಟಪಾಲೇ, ಅಲೆದು ಅಲೆದು ನಂತರ ಅದರ ಗುರಿಯನ್ನು ಸೇರುವ ಟಪಾಲಿನ ಮೇಲೆ ಒಂದು ವಿಳಾಸ ಇರುತ್ತದೆ. ಹಾಗೆ ನನ್ನ ಈ ಬದುಕಿನ ವಿಳಾಸ ನಾನೆ ಬರೆದುಕೊಂಡಿರುವಂತೆ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ಆಗಬೇಕೆಂದು. ಆದರೆ ವಿಧಿ ಅದನ್ನು ಸರ್ಟಿಫಿಕೇಟ್ ಗಷ್ಟೇ ಸೀಮಿತಗೊಳಿಸಿದೆ. campus ಇಂಟರ್ವ್ಯೂ ಗೆ ಬಂದ ಕಂಪನಿಗಳೆಲ್ಲ software ಗಳೆ, ನಾನು ಅದ್ರಲ್ಲಿ ಸೆಲೆಕ್ಟ್ ಆಗೋವಷ್ಟು ಬುದ್ಧಿವಂತ ಆಗಿರಲಿಲ್ಲ ಅನ್ಸುತ್ತೆ. ಯಾವ ಕಂಪನಿಯವರು ನನ್ನ ಸೆಲೆಕ್ಟ್ ಮಾಡಿಲ್ಲ.

ಮತ್ತಷ್ಟು ಓದು »

3
ಆಗಸ್ಟ್

ನಮಗೆ ದುಡ್ಡಿನ ಬೆಲೆ ಗೊತ್ತಿದ್ಯಾ?

-ಪ್ರಶಸ್ತಿ. ಪಿ,ಶಿವಮೊಗ್ಗ

ಇಸ್ತ್ರಿಯಂಗಡಿಗೆ ಹೋಗಿದ್ದೆ.. ಅಲ್ಲಿ ಅವ ಹೇಳ್ತಾ ಇದ್ದ. ೧ ಚೀಲ ಇದ್ದಿಲಿಗೆ ೧೫೦೦ ರೂಪಯಿ. ಒಂದು ವರ್ಷನೂ ಬರಲ್ಲ ಈ ಇಸ್ತ್ರಿ ಪೆಟ್ಟಿಗೆ, ಅದ್ಕೆ ೪೦೦೦ ರೂಪಾಯಿ. ಬಟ್ಟೆಗೆ ೩ ರೂ ಕೇಳಿದ್ರೆ ನೀವು ಹಿಂದೆ ಮುಂದೆ ನೋಡ್ತೀರ. ಜೀವನ ಕಷ್ಟಾಪ್ಪ. ಅವನು ಹೇಳೋದು ಕೇಳ್ದಾಗ ಅನುಸ್ತು.. ” ನಮಗೆ ದುಡ್ಡಿನ ಬೆಲೆ ಗೊತ್ತಿದ್ಯಾ” ಅಂತ.

ಅಪ್ಪನೋ ಅಮ್ಮನೋ ಬೇಕಾದಗ ದುಡ್ಡು ಕೊಟ್ಟಿರ್ತಾರೆ. ಬ್ಯಾಂಕ್ ಸಾಲ ಮಾಡಿ ಓದೋ ಹಲ ಗೆಳೆಯರಿಗೂ A.T.M ಇಂದ ದುಡ್ಡು ಬೇಕಂದಾಗ ಸಿಗುತ್ತೆ ಅನ್ನೋ ಭರವಸೆ ಇರುತ್ತೆ. ಅದ್ರ ಹಿಂದೆ ನಮ್ಮ ತಂದೆ/ತಾಯಿ ಶ್ರಮ ಎಷ್ಟಿರುತ್ತೆ ಅಂತ ಎಂದಾದ್ರು ಯೋಚ್ನೆ ಮಾಡಿರ್ತೀವಾ? ಪ್ರತೀ ಪೈಸೆ ಹಿಂದೆನೂ ಎಷ್ಟು ಶ್ರಮ ಅಡಗಿರುತ್ತೆ ಅಂತ ಯೋಚ್ನೆ ಮಾಡ್ತೀವಾ?

ಖರ್ಚು ಮಾಡೋದು ತಪ್ಪು ಅಂತ ನಾ ಹೇಳ್ತಿಲ್ಲ. ಆದ್ರೆ ನಾವು ಖರ್ಚು ಮಾಡ್ತಿರೋ ಪ್ರತೀ ರೂಪಾಯಿ ಬೆಲೆ ನಮಗೆ ಗೊತ್ತಾ ಅನ್ನೋ ಸಂದೇಹ ಸುಮಾರು ಸಲ ಕಾಡುತ್ತೆ. ದುಡ್ಡು ಕೊಟ್ಟು ತಂಗಡಿರ್ತೀವಿ. ಸ್ವಲ್ಪ ಉಪ್ಪೋ , ಖಾರಾನೋ ಜಾಸ್ತಿ ಆಯ್ತು ಅಂದ್ರೆ ಹಾಗೆ ದಂಡ ಮಾಡ್ತೀವಿ.. ಮನೇನಲ್ಲೂ ಎಷ್ಟೋ ಸಲ ತಿಂಡಿ ತಿನ್ನದೇ ಜಗಳ ಮಾಡ್ಕೊಂಡು ಹೊರಟು ಬಂದಿರ್ತೀವಿ.. ದುಡ್ಡಿರುತ್ತಲ್ಲಾ.. ಕೊಟ್ರೆ ಬೇರೆದು, ಒಳ್ಳೇದು ಸಿಗುತ್ತೆ ಅನ್ನೋ ಭಾವನೆ ಅಲ್ವಾ?. . ಆದ್ರೆ ನಮಗೆ ಬೇಜಾರು ಮಾಡ್ಬಾರ್ದು ಅಂತ ಸುಮ್ಮನಿರೋ ಅಪ್ಪ-ಅಮ್ಮ, ದುಡ್ಡು ಕೊಟ್ಟಿದೀವಿ ಅಂತ ಸುಮ್ಮನಿರೋ ಹೋಟಲಿನವರು.. ಹೀಗೆ ಏನು ಕಾಣ್ತಿದೆಯೋ ಆದರ ಹಿಂದಿನ ವಾಸ್ತವ ಅರಿಯೋಕೆ ಪ್ರಯತ್ನನೇ ಮಾಡಲ್ಲ ಅಲ್ವಾ? ನೀರು ತರ ಖರ್ಚು ಮಾಡ್ತಿರೋ ದುಡ್ಡಿನ ಬೆಲೆ ಬಗ್ಗೆ ಒಂದಿನನಾದ್ರೂ ತಲೆ ಕೆಡ್ಸ್ಕಂಡಿರ್ತೀವಾ?

ಮತ್ತಷ್ಟು ಓದು »

2
ಆಗಸ್ಟ್

ಸಂತಾನಹೀನತೆಯ ಕಾರಣ ಶೋಧಿಸುತ್ತ….

– ವಿಷ್ಣುಪ್ರಿಯ
(ಯೋನಿಯ ಮೂಲಕ ಪ್ರವೇಶಿಸುವಂಥ ವೀರ್ಯವು ಗರ್ಭನಾಳವನ್ನು ಹಾದು, ಗರ್ಭಕೋಶವನ್ನು ಸೇರಿ ಅಲ್ಲಿರುವ ಅಂಡಾಣುವಿನೊಂದಿಗೆ ಮಿಲನವಾಗಬೇಕು. ಅಂದರೆ ಗರ್ಭವತಿಯಾಗಬೇಕೆಂದರೆ ಎರಡು ಮಿಲನಗಳಾಗಬೇಕು- ಒಂದು ಸ್ತ್ರೀ-ಪುರುಷ ಮಿಲನ, ಇನ್ನೊಂದು ಈ ಮಿಲನದ ಬಳಿಕದ ಅಂಡಾಣು-ವೀರ್ಯಾಣು ಮಿಲನ. ದೇಹದಲ್ಲಿರುವಂಥ ಪ್ರತಿರಕ್ಷಣಾ ವ್ಯವಸ್ಥೆ (ಇಮ್ಯೂನ್ ಸಿಸ್ಟಮ್) ವೀರ್ಯದ ಚಲನೆಯನ್ನು ತಡೆಯುವುದಕ್ಕೆ ಪ್ರಯತ್ನಿಸುತ್ತದೆ. ಆದರೆ ವೀರ್ಯಕ್ಕೆ ಹೊದಿಕೆಯಂತೆ (ಕೋಟ್ನಂತೆ) ಇರುವ ಪ್ರೋಟೀನ್ ಡಿಇಎಫ್ ಬಿ 126 ಈ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸೀಳಿಕೊಂಡು ಮುಂದಕ್ಕೆ ಚಲಿಸಿ ಅಂಡಾಣುವಿನೊಂದಿಗೆ ಮಿಲನವಾಗುತ್ತದೆ. ಒಂದು ವೇಳೆ ವೀಯಾಣುವಿನಲ್ಲಿ ಈ ಪ್ರೋಟೀನ್ ಹೊದಿಕೆ ಇಲ್ಲದೇ ಹೋದರೆ?  )
`ಮಕ್ಕಳಿರಲವ್ವ ಮನೆತುಂಬ’ ಎಂದರು ಹಿರಿಯರು. ಸುಮ್ಮನೇ ಹೇಳಿರುತ್ತಾರೆಯೇ? ಈ ಬಯಕೆಯ ಹಿಂದೊಂದು ವಾಸ್ತವವಿದೆ. ಮಕ್ಕಳು ಮನೆಯಲ್ಲಿದ್ದರೆ ಅದೆಷ್ಟೋ ನೋವುಗಳು ತಮ್ಮಷ್ಟಕ್ಕೇ ಶಮನಗೊಳ್ಳುತ್ತವೆ.ಮಗುವಿನ ಕಿಲಕಲ ನಗು, ಅದರ ಅಳು, ರಂಪಾಟ, ಅದರ ಚೇಷ್ಟೆಗಳು, ಆಟಗಳು… ಮಗುವಿನ ಒಂದೊಂದು ಕ್ಷಣದಲ್ಲೂ ಬೆರೆತುಕೊಂದಡರೆ ದೊಡ್ಡವರೂ ಕೂಡಾ ಮಕ್ಕಳೇ ಆಗುತ್ತಾರೆ! ಆ ಕಂದಮ್ಮಗಳೊಂದಿಗೆ ತಾವೂ ತೊದಲುನುಡಿಯಲ್ಲಿ ಮಾತನಾಡುತ್ತಾರೆ. ಮಕ್ಕಳೊಂದಿಗೆ ಕಳೆಯುವ ಆ ಕ್ಷಣಗಳನ್ನು ಪದಗಳಲ್ಲಿ ವರ್ಣಿಸುವುದು ಕಷ್ಟವೇನೋ? ಮುದ್ದಾದ ಮಕ್ಕಳನ್ನು ಕಂಡಾಗ ಭಾವುಕರಾಗದವರು ಯಾರಿದ್ದಾರೆ? ಇಂಥದ್ದೇ ಒಂದು ಮುದ್ದು ಕಂದ ನನಗೂ ಇರಬೇಕು… ಹಾಗಂತ ಹೆಂಗಸರೂ ಬಯಸುತ್ತಾರೆ, ಪುರುಷರೂ ಕೂಡಾ! ಬಯಕೆಗಳು ಎಲ್ಲಾ ಕಾಲದಲ್ಲೂ ಈಡೇರುವುದಿಲ್ಲ. ಸಂತಾನ ಪಡೆಯುವುದು ಸುಲಭದ ವಿಚಾರವೂ ಅಲ್ಲ. ಸ್ತ್ರೀ-ಪುರುಷ ಮಿಲನಗೊಂಡರೆ ಸಾಕು ಸಂತಾನವಾಗದೇ ಏನು ಎಂಬ ಪ್ರಶ್ನೆಗಳು ಸಹಜ. ಮಿಲನವೊಂದಷ್ಟೇ ಸಂತಾನದ ವಿಚಾರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದಲ್ಲ.

ಮತ್ತಷ್ಟು ಓದು »

1
ಆಗಸ್ಟ್

ದೆಹಲಿಯೇ ಬೆಂಗಳೂರಿಗೆ ಬಂತು ಮತ್ತು ಅದೇ ಸರಿಯಾದದ್ದು !

-ವಸಂತ್ ಶೆಟ್ಟಿ
ಕಳೆದ ಒಂದು ವಾರದಿಂದ ಕರ್ನಾಟಕದಲ್ಲಿ ನಡೆದಿರೋ ರಾಜಕೀಯ ಬಿಕ್ಕಟ್ಟು ಇನ್ನೇನು ಮುಗಿಬಹುದು ಅನ್ನೋ ಹಂತಕ್ಕೆ ಬಂದಿದೆ. ಕಳೆದ ಒಂದು ವಾರದಿಂದ ನಡೆದಿರೋ ವಿದ್ಯಮಾನವನ್ನು ಗಮನಿಸಿದರೆ ಕರ್ನಾಟಕದ ರಾಜಕೀಯ ಒಂದು ದೊಡ್ಡ ಬದಲಾವಣೆಯ ಘಟ್ಟದಲ್ಲಿದೆ ಅನ್ನಬಹುದು. ಯಾಕೆ ಹಾಗಂದೆ ಅಂತ ಕೇಳಿದ್ರೆ ನನ್ನ ಅನಿಸಿಕೆ ಇಂತಿದೆ:

ಕಳೆದ 60 ವರ್ಷದಿಂದಲೂ ನಾವು ನೋಡಿರುವುದು ಏನೆಂದರೆ ಕರ್ನಾಟಕದ ರಾಜಕೀಯ ನಾಯಕರು ಒಂದು ಸಣ್ಣ ವಿಷಯಕ್ಕೂ ದೆಹಲಿಗೆ ಹೋಗಿ ಅಲ್ಲಿನ ದೊರೆಗಳ ಮುಂದೆ ಕೈ ಕಟ್ಟಿಕೊಂಡು ನಿಂತು, “ಅಪ್ಪಣೆ ಮಹಾಪ್ರಭು” ಅಂತ ನಿಂತುಕೊಳ್ಳೊರು. ಅವರು ಕೊಟ್ಟ ಆಜ್ಞೆನಾ ಪ್ರಸಾದ ಅಂಬಂತೆ ಕಣ್ಣಿಗೊತ್ತಿಕೊಂಡು ವಾಪಸ್ ಬರೋರು. “ನಮ್ದು ನ್ಯಾಶನಲ್ ಪಾರ್ಟಿ ರೀ, ನಾವು ಶಿಸ್ತಿನ ಸಿಪಾಯಿಗಳು ರೀ,,ಹೈಕಮಾಂಡ್ ಮಾಡಿದ ಆಜ್ಞೆ ನಾವ್ ಮೀರುವುದುಂಟೇನು” ಎಂದು ತಮ್ಮ ಗುಲಾಮಗಿರಿಯನ್ನೇ ಖುಷಿಯಾಗಿ ಸಮರ್ಥಿಸಿಕೊಳ್ಳೊರು. ಆದರೆ ಮೊಟ್ಟ ಮೊದಲ ಬಾರಿಗೆ ದೆಹಲಿಯ ಮೂರು ಮತ್ತೊಂದು ನಿವೃತ್ತ ನಾಯಕರಿಗೆ ಸೆಡ್ಡು ಹೊಡೆದು ದೆಹಲಿಯೇ ಬೆಂಗಳೂರಿಗೆ ಬರುವಂತೆ ಮಾಡಿದ್ದು, ಎರಡು ದಿನವಾದರೂ ಅವರಿಗೆ toughest ಫೈಟ್ ಕೊಟ್ಟಿದ್ದು, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದಿಂದ ಕೇಂದ್ರವಿರಬೇಕು, ಬಾಟಮ್ ಅಪ್ ಆಪ್ರೋಚ್ ಇರಬೇಕು ಅನ್ನುವ ಸಂದೇಶವನ್ನು ಕೊಟ್ಟ ಕಾರಣಕ್ಕೆ ಯಡಿಯೂರಪ್ಪನವರನ್ನು ಮೆಚ್ಚದಿರಲು ಆಗದು. ಮತ್ತಷ್ಟು ಓದು »
1
ಆಗಸ್ಟ್

ಕಥೆಯಾದಳು ಹುಡುಗಿ!

– ಚಿತ್ರ ಸಂತೋಷ್

ವೇಶ್ಯಾವಾಟಿಕೆ ಎನ್ನುವುದು ಗಂಡಸು ಸೃಷ್ಟಿಸುವ ಸಮಸ್ಯೆ ಎಂದವನು ಚಾಣಕ್ಯ. ಆದರೆ, ನನಗನಿಸಿದ ಮಟ್ಟಿಗೆ ಇದು ಸಮಾಜವೇ ಸೃಷ್ಟಿಸುವ ಸಮಸ್ಯೆ. ಉತ್ತರ ಕರ್ನಾಟಕದ ಕೆಲಭಾಗಳಲ್ಲಿ ಈಗಲೂ ಹೆಣ್ಣನ್ನು ವೇಶ್ಯಾವಾಟಿಕೆಗೆ ತಳ್ಳುವ ಕೆಟ್ಟಪದ್ಧತಿ ಚಾಲ್ತಿಯಲ್ಲಿದೆ. ಇಲ್ಲಿ ಯಾವ ಕಾನೂನುಗಳೂ ಕೆಲಸಮಾಡುತ್ತಿಲ್ಲ.

ನನಗೆ ೨೨ ವರ್ಷ. ನಾವು ಐವರು ಹೆಣ್ಣುಮಕ್ಳು. ಮನೆಯಲ್ಲಿ ಬಡತನ. ನಮ್ಮ ಮದುವೆ ಕುರಿತು ಯೋಚನೆ ಮಾಡಿ ಮಾಡಿ ಅಪ್ಪಹಾಸಿಗೆ ಡಿದಿದ್ದ. ನಾನೇ ದೊಡ್ಡವಳು. ನನ್ನ ಕೊನೆಯ ತಂಗಿಯ ಹುಟ್ಟುವಾಗಲೇ ಹೆರಿಗೆಯಲ್ಲಿ ತೊಂದರೆಯಾಗಿ ಅಮ್ಮ ಸಾವನ್ನಪ್ಪಿದ್ದಳು.  ನಾನು ದೊಡ್ಡವಳಾಗಿದ್ದರಿಂದ ನನಗೆ ಸಣ್ಣ ವಯಸ್ಸಿನಲ್ಲೇ ಒಬ್ಬ ಮುದುಕನ ಜೊತೆ ಅಪ್ಪ ಮದುವೆ ಮಾಡಿದ್ದ. ಆದರೆ, ಅವನಿಗೆ ಆಗಲೇ ಮೂರು ಮಂದಿ ಪತ್ನಿಯರಿದ್ದರು. ಮರಳಿ ಮನೆಗೆ ಬಂದೆ. ಕೆಲಸ ಹುಡುಕುವುದು ಅನಿವಾರ್ಯವಾಯಿತು. ನಮ್ಮೂರಿನ ಅಂಕಲ್ ಒಬ್ರು ಕೆಲಸ ಕೊಡಿಸುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಅಪ್ಪನಿಗೂ ಹೇಳದೆ ಅವನನ್ನು ನಂಬಿ ಮುಂಬೈಗೆ ತೆರಳಿದೆ.

ಮತ್ತಷ್ಟು ಓದು »