ಪವನ್ ಪರುಪತ್ತೇದಾರ್
ಸುತ್ತಲೂ ದೊಡ್ಡದಾಗಿ ನೆರೆದಿದ್ದ ವಿದ್ಯಾರ್ಥಿ ಸಮೂಹ, ಅಲ್ಲಲ್ಲಿ ಒಬ್ಬಬ್ಬರು ಒಂದೊಂದು ಆಟ ಅಡುತಿದ್ದರು. ಕೆಲವರು ಬಾಕ್ಸ್ ಟೆನ್ನಿಸ್, ಕೆಲವರು ಲೆಗ್ ಕ್ರಿಕೆಟ್, ಕೆಲವರು ಹೈ ಜಂಪ್ ಮತ್ತೆ ಕೆಲವರು ಕಬ್ಬಡ್ಡಿ, ಇನ್ನೊಂದು ಬದಿಯಲ್ಲಿ ಕೆಲವು ವಿದ್ಯಾರ್ಥಿಗಳು ನೆನ್ನೆ ಕೊಟ್ಟ ಹೋಂ ವರ್ಕ್ ಮನೆಯಲ್ಲಿ ಮಾಡಿಲ್ಲದಿದ್ದರಿಂದ ಸ್ನೇಹಿತರ ಬಳಿ ಪಡೆದು ಆತುರಾತುರವಾಗಿ ಗೀಚುತಿದ್ದರು.
ಅಲ್ಲೇ ಒಂದು ಮೂಲೆಯಲ್ಲಿ ಪ್ರವೀಣ ಗೆತನ್ನೇ ನೋಡುತ್ತಾ ನಿಂತಿದ್ದ. ತನ್ನ ಸ್ನೇಹಿತರೆಲ್ಲ ಒಂದಲ್ಲ ಒಂದು ಆಟ ಅಡುತಿದ್ದರು ಪ್ರವಿಣನಿಗೆ ಅ ಕಡೆ ಗಮನ ಬಂದಿಲ್ಲ, ಅವನ ಗಮನ ಏನಿದ್ದರು ಸಂಪೂರ್ಣ ಗೇಟಿನ ಕಡೆಯೇ ಕೆಂದ್ರಿಕ್ರುತವಗಿತ್ತು. ಇದ್ದಕ್ಕಿದ್ದಂತೆ PT ಮೇಷ್ಟ್ರು ಜೋರಾಗಿ ಪೀಪಿ ಊದಿದರು. ಆಡುತಿದ್ದ ಮಕ್ಕಳೆಲ್ಲರೂ ಓಡೋಡಿ ಬಂದು ಸಾಲುಗಳಲ್ಲಿ ನಿಂತರು. ಹೋಂ ವರ್ಕ್ ಮದುತಿದ್ದವರೆಲ್ಲ ಘಾಬರಿ ಘಾಬರಿಯಾಗಿ ಪುಸ್ತಕಗಳನ್ನು ಹೇಗೆ ಬರೆಯುತಿದ್ದರೋ ಹಾಗೇ ಬ್ಯಾಗ್ ಗೆ ತುಂಬಿಸಿಕೊಂಡು ಬಂದು ಸಾಲಲ್ಲಿ ನಿಂತರು. ಪ್ರವೀಣ ಗೇಟನ್ನು ನೋಡುತ್ತಲೇ ಮುಖ ಚಿಕ್ಕದು ಮಾಡಿಕೊಂಡು ಬೇಸರವಾಗಿ ಭಾರವಾದ ಹೆಜ್ಜೆ ಇಡುತ್ತಾ ಬಂದು ಸಾಲಿನ ಮುಂಭಾಗದಲ್ಲಿ ಪ್ರಾರ್ಥನೆ ಹೇಳಿಕೊಡುವ ಜಾಗದಲ್ಲಿ ನಿಂತನು. ಅಷ್ಟರಲ್ಲೇ ಬಜಾಜ್ ಸ್ಕೂಟರ್ ಒಂದು ಬಂದು ಗೇಟಿನ ಹೊರಗಡೆ ನಿಂತಿತು. ಭಾರವಾದ ಬ್ಯಾಗ್ ಹೊತ್ತ ಹುಡುಗಿ ತನ್ನ ತಂದೆಗೆ ಟಾಟಾ ಮಾಡುತ್ತ ಗೇಟ್ ಒಳಗೆ ಬಂದು ಓಡೋಡಿ ಪ್ರಾರ್ಥನೆಯ ಜಾಗಕ್ಕೆ ಬರುತಿದ್ದಳು, ಪ್ರವಿಣನ ಬಾಡಿದ್ದ ಮುಖ ಚಿಗುರಿ ಮನ ಆತ್ಮ ವಿಶ್ವಾಸದಿಂದ ತುಳುಕಾಡಿತು. ಬ್ಯಾಗ್ ಪಕ್ಕ ಇಟ್ಟು ಅ ಹುಡುಗಿಯು ಬಂದು ಪ್ರವಿಣನ ಪಕ್ಕ ನಿಂತಳು. ಪ್ರವೀಣ ಯಾಕೆ ಕಾವ್ಯ ಇವತ್ತು ಲೇಟ್ ಅಂದ, ಅಮ್ಮ ಬಾಕ್ಸ್ ಕೊಡೋದು ಲೇಟ್ ಮಾಡಿದ್ರು ಅನ್ನೋ ಮಾಮೂಲಿ ಉತ್ತರವನ್ನೇ ಅವಳು ಕೊಟ್ಟಳು. ಸ್ವಾಮಿ ದೇವನೇ ಲೋಕ ಪಾಲನೆ ಎಂದು ಪ್ರಾರ್ಥನೆ ಮಡಿ ಎಲ್ಲರು ತಮ್ಮ ತಮ್ಮ ತರಗತಿಗಳಿಗೆ ಸೇರಿಕೊಂಡರು…
ಪ್ರವೀಣ ಮತ್ತು ಕಾವ್ಯ ಇಬ್ಬರು ಒಂದೇ ತರಗತಿಯವರು, ಹತ್ತನೇ ತರಗತಿ. ಕಾವ್ಯಳ ತಂದೆ ಕೇಂದ್ರ ಸರ್ಕಾರದ ಉದ್ಯೋಗಿ ಆಗಾಗ ವರ್ಗಾವಣೆ ಆಗುವುದರಿಂದ ಸಧ್ಯಕ್ಕೆ ಈ ಊರಿನ ವಾಸ್ತವ್ಯ. ಪ್ರವಿಣನದು ಇದೆ ಊರು ಅವರಪ್ಪ ಯಾವುದೊ ಖಾಸಗಿ ಕಂಪನಿ ಯ ಉದ್ಯೋಗಿ. ಪ್ರವೀಣ ಮತ್ತು ಕಾವ್ಯ ಇಬ್ಬರು ಕ್ಲಾಸ್ ಲೀಡರ್ ಗಳು ಸಹ. ತರಗತಿ ಕಡೆಯಿಂದ ಯಾವುದೇ ಕಾರ್ಯಕ್ರಮ ಆಯೋಜಿಸ ಬೇಕಿದ್ದರೆ, ಸರಸ್ವತಿ ಪೂಜೆ ಮುಂತಾದ ಕಾರ್ಯಕ್ರಮಗಳಲ್ಲಿ ಇವರಿಬ್ಬರದೇ ಹೆಚ್ಚಿನ ಓಡಾಟ. ಇನ್ನು ಓದಿನ ವಿಷಯಕ್ಕೆ ಬಂದರೆ ಪ್ರವೀಣ ಮತ್ತು ಕಾವ್ಯ ಇಬ್ಬರು ಯಾವಾಗಲು ಮುಂದು ಇವರಿಬ್ಬರ ನಡುವೆಯೇ ಹೆಚ್ಚಿನ ಪೈಪೋಟಿ ಯಾವಾಗಲು. ಒಂದೊಂದು ಮಾರ್ಕಿನಲಿ ಇಬ್ಬರಲ್ಲಿ ಒಬ್ಬರು ಮುಂದಿರುತಿದ್ದರು. ಇಬ್ಬರ ಮನೆಗಳು ಸುಮಾರು ದುರವಿದ್ದರು ಪ್ರವೀಣ ತನ್ನ ಹೀರೋ ಸೈಕಲ್ ನಲ್ಲಿ ಕಾವ್ಯಳ ಮನೆ ತನಕ ಹೋಗಿ ಆಟವಾಡುತಿದ್ದ ಅವಳ ಜೊತೆ.
ಶಾಲೆಯಲ್ಲಿ ಒಂದು ದಿನ ಚಿತ್ರ ಕಲೆಯ ಹೋಂ ವರ್ಕ್ ಕೊಟ್ಟಿದ್ದರು. ಅ ಚಿತ್ರ ಕಲೆಯ ಮೇಡಂ ಗೆ ಮೂಗಿನ ಮೇಲೆ ಕೋಪ, ಪ್ರವೀಣ ಅ ದಿನವೇ ಹೊಸ ಚಿತ್ರ ಕಲೆಯ ಪುಸ್ತಕವನ್ನು ಇಟ್ಟು ಹೋಂ ವರ್ಕ್ ಮಾಡಿ ತಂದಿದ್ದ. ಕಾವ್ಯ ಮರೆತು ಬಂದು ಬಿಟ್ಟಿದ್ದಳು. ಸರತಿಯಂತೆ ಎಲ್ಲರು ತಮ್ಮ ಹೋಂ ವರ್ಕ್ ಅನ್ನು ಎದ್ದು ಹೋಗಿ ಎಲ್ಲ ಮಕ್ಕಳು ತೋರಿಸುತಿದ್ದರು. ಪ್ರವೀಣ ಹಗೆ ಒಮ್ಮೆ ಕಾವ್ಯಳನ್ನು ನೋಡಿದ. ಕಾವ್ಯ ಹೆದರಿ ಏನು ಮಾಡುವುದೆಂದು ತೋಚದೆ ಪೆಚ್ಚು ಮೊರೆ ಹಾಕಿ ಕುಳಿತಿದ್ದಳು. ಪ್ರವಿಣನ ಪಕ್ಕದ ಬೆಂಚು ಆಗಿದ್ದರಿಂದ ಅವಳ ನೋವು ಪ್ರವಿಣನಿಗೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಕಾವ್ಯಳನ್ನು ಕರೆದು ತನ್ನ ಪುಸ್ತಕವನ್ನು ಕೊಟ್ಟು ತೋರಿಸು ಅಂದ. ಕಾವ್ಯ ನೀನೇನು ಮಾಡುತ್ತಿಯ ಅಂದಾಗ ಇದು ಹೊಸ ಪುಸ್ತಕ ನಾನು ಹಳೆ ಪುಸ್ತಕದಲ್ಲೊಮ್ಮೆ ಬರೆದಿದ್ದೇನೆ ಎಂದು ಹೇಳಿದ. ಕಾವ್ಯಳ ಸರದಿ ಬಂದಾಗ ಪ್ರವೀಣ ಬರೆದಿದ್ದ ಹೋಂ ವರ್ಕ್ ತೋರಿಸಿದಳು. ನಂತರ ಸ್ವಲ್ಪ ಹೊತ್ತಿಗೆ ಪ್ರವಿಣನ ಸರದಿ ಬಂತು. ಆದರೆ ಪ್ರವೀಣ ಮೇಡಂ ಹತ್ತಿರ ಪುಸ್ತಕ ಮರೆತು ಬಂದಿರುವುದಾಗಿ ಹೇಳಿದ. ಚಿತ್ರ ಕಲೆಯ ಟೀಚರ್ ಗೆ ಕೋಪ ಮೂಗಿನ ಮೇಲಿದ್ದಿದ್ದು ನೆತ್ತಿಗೆ ಬಂದು, ಪ್ರವೀಣನಿಗೆ ಬೆತ್ತದ ರುಚಿ ತೋರಿಸಿದರು.ಶಾಲೆ ಮುಗಿದ ಮೇಲೆ ಪ್ರವೀಣನಿಗೆ ಕಾವ್ಯ sorry ಕೇಳಿದಳು. ಅದಕ್ಕೆ ಪ್ರವೀಣ ನಾ ಆಗಿದ್ದಕ್ಕೆ ಅ ಬೆತ್ತದ ಏಟು ತಡೆದೆ, ನಿನ್ನ ಕೈಲಿ ಸಾಧ್ಯವಾಗುತಿತ್ತ ಕಾವ್ಯ ಅಂದ. ಅದಕ್ಕೆ ಕಾವ್ಯ ಅಯ್ಯೋ ಹೌದಪ್ಪ thank you so much ಅಂತ ಸ್ವಲ್ಪೇ ಸ್ವಲ್ಪ ನಕ್ಕಳು ಅವಳ ಅ ನಗುವಿನಲ್ಲಿ ಪ್ರವಿಣನ ನೋವು ಆ ಕ್ಷಣಕ್ಕೆ ಅವನಿಗೆ ಹಿತವಾಗೆ ಅನಿಸುತಿತ್ತು…
ಮಾರನೇ ದಿನ ಶಾಲೆಗೆ ಪ್ರವೀಣ ಬಂದಿರಲಿಲ್ಲ, ಸ್ನೇಹಿತರೆಲ್ಲ ಗುಸು ಗುಸು ಎನ್ನುತಿದ್ದರು, ನಂತರ ತಿಳಿದ ವಿಷಯ ಏನಂದರೆ ಪ್ರವೀಣನಿಗೆ ಜ್ವರ ಬಂದಿದೆ ಎಂದು. ಕೆಲವರು ಚಿತ್ರ ಕಲೆಯ ಮೇಡಂ ಹೊಡೆದ ಏಟು ತಿಂದೆ ಅವನಿಗೆ ಜ್ವರ ಬಂದಿರಬಹುದು ಎಂದು ಮಾತನಾಡಿಕೊಳ್ಳುತಿದ್ದರು. ಇವೆಲ್ಲ ಕೇಳಿದ ಕಾವ್ಯಳಿಗೆ ನನ್ನಿಂದಲೇ ಪಾಪ ಪ್ರವಿಣನಿಗೆ ಜ್ವರ ಬಂದಿದೆ ಎನಿಸಿಬಿಟ್ಟಿತ್ತು. ಸಂಜೆ ಶಾಲೆ ಮುಗಿದೊಡನೆ ಸೀದ ಪ್ರವಿಣನ ಮನೆಗೆ ಹೋದಳು. ಮನೆಯಲ್ಲಿ ಎಲ್ಲರನ್ನು ಮಾತನಾಡಿಸಿ, ಪ್ರವಿಣನನ್ನು ನೋಡಿ ಏನಾಯ್ತೋ ಅಂದಳು. ಪ್ರವೀಣ viral infection ಅಂತೆ ಡಾಕ್ಟರ injection ಕೊಟ್ಟಿದ್ದಾರೆ ಆದಷ್ಟು ಬೇಗ ಸರಿ ಹೋಗುತ್ತೇನೆ. ಇನ್ನು 3 ದಿನ ಶಾಲೆಗೆ ಬರುವುದಿಲ್ಲ ಅಂದ. ಅದಕ್ಕೆ ಕಾವ್ಯ ನೀನು ಏನು ಯೋಚನೆ ಮಾಡಬೇಡ ನಿನ್ನ ಎಲ್ಲ nOtes ನಾನು update ಮಾಡಿಕೊಡ್ತೀನಿ ಅಂತ ಅವತ್ತು ಶಾಲೆಲಿ ಬರೆಸಿದ ಎಲ್ಲ notes ಗಳನ್ನೂ ಪ್ರವಿಣನ ಪುಸ್ತಕಕ್ಕೆ copy ಮಾಡಿದಳು. ಇದೇ ರೀತಿ ಮುಂದಿನ ಮೂರೂ ದಿನಗಳು ನಡೆದವು. ಪ್ರವಿಣನ ಜ್ವರ ವಾಸಿಯಾಗಿತ್ತು. ಶಾಲೆಗ ಬಂದ ಪ್ರವಿಣನಿಗೆ ಇನ್ನು ಖುಷಿಯಾಗುವ ವಿಷಯಗಳು ಕೇಳಿಬಂತು. ಅವನ ಸ್ನೇಹಿತರೆಲ್ಲ ಲೋ ಕಾವ್ಯ ಪ್ರವಿಣನ ಮನೆಗೆ ಹೋಗಿ notes ಎಲ್ಲ ಬರೆದು ಕೊಟ್ಟಳಂತೆ. ಅವರಿಬ್ಬರ ಮಧ್ಯೆ ಏನೋ ಇದೆ ಕಣ್ರೋ ಅಂತ ಮಾತನಾಡಿಕೊಳ್ಳುತಿದ್ದರು. ಪ್ರವೀಣ ಸಹ ಇರಬಹುದು, ಅದಕ್ಕೆ ತಾನೆ ತನಗೆ ಅಷ್ಟು ಸಹಾಯ ಮಾಡಿದಳು ಎಂದು ಒಳಗೊಳಗೇ ಸಂತೋಷಗೊಂಡ…ಪರೀಕ್ಷೆ ಹತ್ತಿರ ಬಂತು. SSLC ಪರೀಕ್ಷೆ public exam ಅದ್ದರಿಂದ ಎಲ್ಲರು ಕಷ್ಟ ಪಟ್ಟು ಓದತೊಡಗಿದರು. ಪ್ರವೀಣ ಮತ್ತು ಕಾವ್ಯ ಸಹ ಜೊತೆಯಲ್ಲಿ combined ಸ್ಟಡೀಸ್ ಮಾಡಿದರು. ಪರೀಕ್ಷೆ ಸಹ ಇಬ್ಬರು ಚೆನ್ನಾಗೆ ಬರೆದರು. ಪ್ರವೀಣ ಕಾವ್ಯಳಿಗೆ ತನಗಿಂತ ಹೆಚ್ಚು ಅಂಕ ಬರಲಿ ಅಂತ ತನಗೆ ಗೊತ್ತಿದ್ದರು ಒಂದೆರಡು ಅಂಕಗಳನ್ನು ಬಿಟ್ಟು ಬರುತಿದ್ದ. ನಂತರ ಫಲಿತಾಂಶ ಸಹ ಬಂದಿತು. ಆದರು ಪ್ರವಿಣನಿಗೆ 10 ಅಂಕ ಹೆಚ್ಚೇ ಬಂದಿತ್ತು. ಆದರೆ ಕಾವ್ಯ ತಂದೆಗೆ ಅದೇ ಸಮಯದಲ್ಲಿ ಬೇರೆಯ ಊರಿಗೆ transfer ಆಗಿತ್ತು. ಪ್ರವೀಣ ನನ್ನು ಇ ವಿಷಯ ಬಹಳಷ್ಟು ಕಾಡಿತು. ತಮ್ಮ ಊರಿನ ಕಾಲೇಜ್ ಗೆ ಸೇರಿಸಿ ಅವಳನ್ನ ಅಂತ ಅವರಪ್ಪನನ್ನು ಕೇಳಿದ. ಆದರೆ ಬಹ ದೂರಕ್ಕೆ transfer ಅದ್ದರಿಂದ ಕಾವ್ಯ ತಂದೆ ಒಪ್ಪಲಿಲ್ಲ. ಪ್ರವಿಣನ ಮೊದಲ ಪ್ರೇಮ ಗೀತೆ ಪಲ್ಲವಿ ಚರಣಗಳ ದಾಟಿ ಮತ್ತೊಮ್ಮೆ ಕೊನೆಯ ಪಲ್ಲವಿ ಬಳಿಗೆ ಬಂದಿತ್ತು. ಬಸ್ಸಿನ ಬಳಿ ಹೋಗಿ ಟಾಟಾ ಮಾಡುವಾಗ ಅವನ ಕಣ್ಣಿನಲ್ಲಿ. ಅವನಿಗೇ ಗೊತ್ತಿಲ್ಲದಂತೆ ಕಣ್ಣೀರು ಸುರಿಯುತಿತ್ತು.
ಇಷ್ಟೆಲ್ಲಾ ನಡೆಯುತಿದ್ದರೆ, ಹಿಂದಿನಿಂದ ಯಾರೋ ಬೆನ್ನಿಗೆ ತಿವಿದು ಲೇ ಮಗ ಅಕ್ಷತೆ ಕಾಳು ಹಾಕೋ ಅಂದಹಾಗಾಯಿತು. ಆಗಲು ಕಣ್ಣಲಿ ಸ್ವಲ್ಪ ನೀರು ತುಂಬಿತ್ತು. ಅಕ್ಷತೆ ಹಾಕಿದ ನಂತರ ಊಟ ಮುಗಿಸಿ ಛತ್ರದಿಂದ ಹೊರಬಂದ ಪ್ರವೀಣ ಒಮ್ಮೆ ತಿರುಗಿ ಛತ್ರದ ಕಡೆ ನೋಡಿದ. ಅಲ್ಲಿ ದೊಡ್ಡದಾದ ಹೂಗಳಿಂದ ಸಿಂಗಾರವಾದ ಒಂದು ಆಕೃತಿ ಮಾಡಿದ್ದರು. ಅದರಲ್ಲಿ ಹೀಗೆ ಬರೆದಿತ್ತು
“ನಿಮಗೆ ಸುಸ್ವಾಗತ ಕಾವ್ಯ weds ಪ್ರದೀಪ್ “
*****************************************************************************
ಕೃಪೆಚಿತ್ರ: theglass.com
suppperrrrrrrrr pavan 🙂
thanku so much appu 🙂
ಅದ್ಬುತ ಇ ನಿಮ್ಮ ಸು೦ದರವಾದ ಕಾವ್ಯ
bahala dhanyavada abhi
ಅದ್ಬುತ ..ಉಪಯೋಗಿಸಿರುವ ಪದಗಳು ಅರ್ಥಗರ್ಭಿತ ….ಎಷ್ಟೋ ಹುಡುಗ..ಹುಡುಗಿಯರ ಜೀವನದಲ್ಲಿ ನಡೆದಿರುತ್ತದೆ…ಅದು ಮರೆಯಲಾಗದ ಘಟನೆಯಾಗೆ ಉಳಿಯುತ್ತದೆ ….
ಧನ್ಯವಾದಗಳು ನಮ್ರತಾ
ಆಯ್ದುಕೊಂಡ ವಸ್ತುವಿಷಯ ಚೆನ್ನಾಗಿದೆ. ಇದು ಹೀಗೆ ಇಲ್ಲಿರುವ ತಪ್ಪುಗಳನ್ನು ಮುಂದುವರೆಸುವುದು ಬೇಡ. ಹೇಗೆಂದರೆ , ಕೆಲವು ಇಂಗ್ಲೀಷ್ ವಾಕ್ಯ ಮತ್ತು ಶಬ್ಧಗಳನ್ನು ಕಡಿಮೆ ಮಾಡಬೇಕು ಅಂತ ಸಲಹೆ ಕೊಡುತ್ತಿದ್ದೇನೆ. ತಪ್ಪಿದ್ದರೆ ಕ್ಷಮಿಸಬೇಕು. ಹಿಡಿತ ಸಾಧಿಸುವುದು ಅಂದರೆ, ತಪ್ಪುಗಳನ್ನು ತಿದ್ದಿಕೊಂಡು ಪರಿಪೂರ್ಣರಾಗಬೇಕು. ಅ ತಾಕತ್ತು ನಿಮಗಿದೆ. ಶುಭವಾಗಲಿ.
ಧನ್ಯವಾದ ರವಿ ಅಣ್ಣ, ಕ್ಷಮಿಸಿ ಅಂತ ಯಾಕೆ ಹೇಳ್ತಿರ?? ನಿಮ್ಮ ಸಲಹೆನ ನಾನು ಅಳವಡಿಸೋಕೆ ಪ್ರಯತ್ನಿಸುತ್ತೇನೆ
hmmmmm….. nice one sir… tumba chanagide.