ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 23, 2011

19

ಕುರುಡಾಗದಿರು ಭಾರತೀಯ ನಿನ್ನ ಕಣ್ಣುಗಳಿರುವ ತನಕ..

‍ನಿಲುಮೆ ಮೂಲಕ

ಅಶ್ವಿನ್ ಎಸ್ ಅಮೀನ್

ಕೋಮುವಾದ, ಜಾತಿವಾದ,  ಇವುಗಳ ನಡುವಿನ ಸಂಘರ್ಷಗಳು ಯಾವ ದೇಶದಲ್ಲಿ ಎಷ್ಟರವರೆಗೆ ಇರುತ್ತವೆಯೋ ಅಲ್ಲಿಯ ತನಕ ಆ ದೇಶದ ಬೆಳವಣಿಗೆ ಕುಂಠಿತವಾಗಿ ಸಾಗುತ್ತದೆ. ಅದರಲ್ಲೂ ಆಳುವ ಸರಕಾರಗಳು ನಡೆಸುವ ಒಂದು ಸಮುದಾಯದವರ ಓಲೈಕೆ ಅದು ಅಲ್ಪಸಂಖ್ಯಾತರನ್ನಾಗಲೀ, ಬಹುಸಂಖ್ಯಾತರನ್ನಾಗಲೀ ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.

ನಮ್ಮೀ ಭಾರತ ಇದೆಲ್ಲ ಸಮಸ್ಯೆಗಳಿಂದ ಹೊರತಾಗಿಲ್ಲ.. ಬಹುಶಃ ಈ ತರಹದ ಕೋಮು ವಿಂಗಡಣೆ, ಜಾತಿ ವಿಂಗಡಣೆ ರಾಜಕೀಯ ಭಾರತದಲ್ಲಿ ಬಿಟ್ಟರೆ ಬೇರೆಲ್ಲೂ ಕಾಣಸಿಗದು..! ತಾಜಾ ಉದಾಹರಣೆಯಾಗಿ ಕೇಂದ್ರದ NAC ಸಿದ್ದಪಡಿಸಿದ ಕೋಮು ಸಂಘರ್ಷ ನಿಯಂತ್ರಣಾ ಕಾಯಿದೆಯ ಕರಡು ರೂಪದಲ್ಲೊಮ್ಮೆ ಕಣ್ಣಾಡಿಸಿ. ಇಲ್ಲಿ ಕಾಣಸಿಗುವುದು ಅಲ್ಪ ಸಂಖ್ಯಾತ, ಬಹು ಸಂಖ್ಯಾತ, ಪರಿಶಿಷ್ಟ ವರ್ಗ – ಪಂಗಡಗಳೆಂಬ ವಿಂಗಡಣಾ ರಾಜಕೀಯ.
ಕೋಮು ಸಂಘರ್ಷಗಳಲ್ಲಿ ತಪ್ಪಿತಸ್ಥರಾದವರಿಗೆ ಎಲ್ಲರಿಗೂ ಶಿಕ್ಷೆಯಾಗುವುದಾದರೆ ಈ ಕೋಮು ಸಂಘರ್ಷ ನಿಯಂತ್ರಣ ಕಾಯಿದೆ ಸ್ವಾಗತಾರ್ಹವಾಗುತಿತ್ತು. ಇಡೀ ಭಾರತಕ್ಕೆ ಭಾರತವೇ NAC ಯ ಮುಖ್ಯಸ್ಥೆ ಸೋನಿಯಾ ಗಾಂದಿಯವರನ್ನು ಅಭಿನಂದನೆಗಳಿಂದ ಮುಳುಗೇಳಿಸುತ್ತಿತ್ತು. ಆದರೆ ಹಾಗಾಗಲಿಲ್ಲ..! ಕಾರಣ ಇಲ್ಲಿ ಕೇವಲ ಬಹುಸಂಖ್ಯಾತರಿಗಷ್ಟೇ ಶಿಕ್ಷೆ.. ಅಲ್ಪಸಂಖ್ಯಾತರು ಯಾವುದೇ ಗಲಬೆಗಳಲ್ಲಿ ಪಾಲ್ಗೊಂಡರೂ ಈ ಕಾಯಿದೆಯಡಿ ಶಿಕ್ಷೆಯಿಲ್ಲ. ಅದರಲ್ಲೂ ಬೆಂಕಿಗೆ ತುಪ್ಪ ಸುರಿದಂತೆ ಬಹುಸಂಖ್ಯಾತ ಹಿಂದೂ ಧರ್ಮದಿಂದ ಪರಿಶಿಷ್ಟ ವರ್ಗ-ಪಂಗಡಗಳನ್ನು ಬೇರ್ಪಡಿಸಿರುವುದು..! ಪರಿಶಿಷ್ಟ ವರ್ಗ-ಪಂಗಡಗಳಿಗೆ ಸೌಲಭ್ಯ ಕಲ್ಪಿಸಿರುವುದು ಒಳ್ಳೆಯದೇ ಆಗಿದೆ. ಆದರೆ ಇಲ್ಲಿ ಭಾರತದ ಮೂಲ ಧರ್ಮವಾದ ಸನಾತನ ಹಿಂದೂ ಧರ್ಮವನ್ನು ಒಡೆಯುವ ಷಡ್ಯಂತ್ರ ಅಡಗಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು.
ಇನ್ನು ಬಹುಸಂಖ್ಯಾತರ ಪರ ಎಂದು ಗುರುತಿಸಿಕೊಳ್ಳುತ್ತಿರುವ ಬಿಜೆಪಿ ತಾನೇನು ಕಡಿಮೆಯಿಲ್ಲ. ತಾನು ಹಿಂದೂಗಳ ಪರ ಎಂದು ಹೇಳಿಕೊಂಡು, ದೇಶದ ಅತೀ ಸೂಕ್ಷ್ಮ ವಿಷಯಗಳಾದ ಅಯೋಧ್ಯೆ, ಕಾಶ್ಮೀರ ಇವುಗಳ ಮೂಲಕ ರಾಜಕೀಯವಾಗಿ ಮೇಲೇರುತ್ತ ಬಂದ ಈ ಪಕ್ಷ ಹಿಂದೂಗಳಿಗಾಗಿ ಮಾಡಿದ್ದೇನೂ ಇಲ್ಲ. ಅತ್ತ ಅಯೋಧ್ಯೆ ಮಂದಿರವು ಇಲ್ಲ, ಈಗ ಅವರಿಗೆ ಆ ವಿಷಯ ಕೂಡ ನೆನಪಾಗುತ್ತಿಲ್ಲ. ಪಿ.ವಿ.ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಅಯೋಧ್ಯೆಯ ಹಿಂದೂ ಪರ ಮಂಚ್ ಗೆ ನೀಡಿದ್ದ ಎಕರೆಗಟ್ಟಲೆ ಭೂಮಿಯನ್ನು ಕೂಡ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಅಂದಿನ ಸರಕಾರ ಅಲ್ಪಸಂಖ್ಯಾತರನ್ನು ಓಲೈಸುವ ಉದ್ದೇಶದಿಂದ ವಾಪಸು ಪಡೆದುಕೊಂಡಿತು. ಕರ್ನಾಟಕದ ವಿಷಯಕ್ಕೆ ಬಂದರೆ ಸ್ವತಃ ಬಿಜೆಪಿಯವರೇ ಹೇಳಿಕೊಳ್ಳುವಂತೆ ಹಿಂದಿನ 60  ವರ್ಷಗಳಲ್ಲಿ ಆಳ್ವಿಕೆ ನಡೆಸಿದ ಕಾಂಗ್ರೆಸ್ಸ್ ಸರಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ನೀಡಿದ್ದು ಕೇವಲ 30 ರಿಂದ  60  ಕೋಟಿ. ಆದರೆ ಬಿಜೆಪಿ ಸರಕಾರ ಕೇವಲ ಮೂರೇ ಮೂರು ವರ್ಷಗಳಲ್ಲಿ ಅಲ್ಪಸಂಖ್ಯಾತರಿಗೆ ೩೦೦-೪೦೦ ಕೋಟಿ ನೀಡಿದೆ..!! ಬಹುಶಃ ಇದನ್ನು ನೋಡಿದ ಮೇಲೆ ಹಿಂದೂಗಳಿಗೆ ಬಿಜೆಪಿಗಿಂತ ಕಾಂಗ್ರೆಸ್ಸೇ Better ಅನಿಸದಿರದು. ಆದರೆ ಇಲ್ಲಿ ಹೇಳಬೇಕಾಗಿರುವ ವಿಷಯ ಈ ತರಹದ ಸಮುದಾಯ ಓಲೈಕೆ ಅಗತ್ಯವೇ.. ಒಂದು ಸಮುದಾಯಕ್ಕೆ ಮಾತಿನ ಭರವಸೆಯ ಓಲೈಕೆ, ಮತ್ತೊಂದು ಸಮುದಾಯಕ್ಕೆ ನಿಜವಾದ ಫಲದ ಓಲೈಕೆ.. ಇದರಿಂದ ದೇಶಕ್ಕೆನು ಲಾಭವಿದೆ. ಕೊಡುವುದಾದರೆ ತಾರತಮ್ಯವಿಲ್ಲದೆ ಕೊಡಲಿ. ಭಾರತೀಯರಲ್ಲೇ ತಾರತಮ್ಯವೇಕೆ..?
ಇನ್ನು ಜಾತಿವಾದ..! ಧರ್ಮದ ಭದ್ರ ಬುನಾದಿಯನ್ನು ನಿಶ್ಯಬ್ದವಾಗಿ ಅಲುಗಾಡಿಸುವ ಇದು ಇಂದು ಎಲ್ಲಾ ಪಕ್ಷಗಳಿಂದ ಹಿಡಿದು, ಪ್ರತಿ ಸಂಘ ಸಂಸ್ಥೆ, ಸಂಘಟನೆಗಳಲ್ಲೂ ಬೇರೂರಿದೆ. ಈಗಿನ ರಾಜಕೀಯ ಹೆಚ್ಚು ಕಡಿಮೆ ಜಾತಿ ಸಮೀಕರಣವನ್ನೇ ಅವಲಂಬಿಸಿದೆ. ಒಬ್ಬ ಗ್ರಾಮ ಪಂಚಾಯತ್ ಸದಸ್ಯನಿಂದ ಹಿಡಿದು ರಾಜ್ಯದ ಮುಖ್ಯಮಂತ್ರಿ ಸ್ಥಾನದವರೆಗಿನ ಆಯ್ಕೆ ಜಾತಿ ಪ್ರಾಬಲ್ಯತೆಯನ್ನೇ ನೆಚ್ಚಿಕೊಳ್ಳುವಂತಾಗಿರುವುದು ವಿಪರ್ಯಾಸವೇ ಸರಿ.. ಇತ್ತೀಚೆಗಿನ ರಾಜ್ಯದ ರಾಜಕೀಯ ಬೆಳವಣಿಗೆಗಳನ್ನೇ ಗಮನಿಸಿದರೆ ಸಾಕು. ಕೇಸರಿ ಪರ ಎಂದು ಗುರ್ತಿಸಿಕೊಳ್ಳುತ್ತಿರುವ ಪಕ್ಷವೇ ಕೇಸರಿಯನ್ನು ಜಾತಿ ಸಮೀಕರಣದಿಂದ ಒಡೆಯುತ್ತಿರುವುದು ಕಂಡು ಬರುತ್ತದೆ. ಕೋಮು ಸಂಘರ್ಷ ನಿಯಂತ್ರಣ ಕಾಯಿದೆಯಡಿ ಪರಿಶಿಷ್ಟ ವರ್ಗ-ಪಂಗಡಗಳನ್ನು ಹಿಂದೂ ಧರ್ಮದಿಂದ ಬೇರ್ಪಡಿಸಿರುವುದಕ್ಕೆ ಹಿಂದೂಗಳನ್ನು ಒಡೆಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಕೇಸರಿ ಪಕ್ಷ ನಿಜವಾಗಿ ಮಾಡುವುದೇನು..? ಪರಿಶಿಷ್ಟರ ಅಭಿವೃದ್ದಿಗೆ ಏನಾದರು ಮಾಡಿದೆಯೇನು..?
ಉಳಿದಂತೆ ಹಿಂದೂ ಪರ ಸಂಘಟನೆಗಳಾದ ಆರೆಸ್ಸೆಸ್, ವಿಹಿಂಪ, ಬಜರಂಗ ದಳ, ರಾಮ ಸೇನೆ, ಹಿಂದೂ ಯುವ ಸೇನೆ, ಜಾಗರಣ ವೇದಿಕೆ ಇವೆಲ್ಲ ಹಿಂದೂಗಳ ಶ್ರೆಯೋಭಿಲಾಷೆಗಾಗಿ ಸ್ಥಾಪನೆಗೊಂಡಂತವುಗಳು. ಆದರೆ ಇವುಗಳನ್ನೂ ಜಾತೀಯತೆ ಬಿಟ್ಟಿಲ್ಲ. ಪ್ರಮುಖ ಜವಾಬ್ದಾರಿಯ ಸ್ಥಾನಗಳೆಲ್ಲವು ಮೇಲ್ವರ್ಗದವರಿಗೆ ಹೋಗುವಂತೆ ನೋಡಿಕೊಳ್ಳಲಾಗುತ್ತದೆ. ಯಾವುದೇ ಒಂದು ಹಿಂದೂ ಪರ ಸಂಘಟನೆಯಲ್ಲಿ ದಲಿತನನ್ನು ಮುಖ್ಯಸ್ಥನನ್ನಾಗಿ ಮಾಡಿದ್ದಿದೆಯೇನು..? ಹಿಂದೂ ಧರ್ಮೊದ್ಧಾರಕರೆನಿಸಿಕೊಂಡ ಈ ಸಂಘಟನೆಗಳು ದ್ವೇಷವನ್ನು ಬೆಳೆಸುತ್ತವೆಯೇ ಹೊರತು ನಮ್ಮ ಧರ್ಮದಲ್ಲಿರುವ ಒಳ್ಳೆಯತನಗಳನ್ನು, ನಮ್ಮದೇ ಹಿಂದೂಗಳನ್ನು ಪ್ರೀತಿಸುವುದನ್ನು ಕಲಿಸುವುದಿಲ್ಲ. ನಮ್ಮ ಧರ್ಮದ ಅದೆಷ್ಟೋ ಗೊತ್ತಿರದ ವಿಷಯಗಳ ಬಗ್ಗೆ ಸ್ವಧರ್ಮೀಯ ಜನರಿಗೆ ತಿಳಿ ಹೇಳುವ ಕಾರ್ಯಗಳನ್ನು ಮಾಡುವುದಿಲ್ಲ. ಹಿಂದೂ ಧರ್ಮದಲ್ಲಿ ಹಿಂದುಳಿದವರೆನಿಸಿಕೊಂಡವರ, ಪರಿಶಿಷ್ಟರೆನಿಸಿಕೊಂಡವರ ಅಭಿವೃದ್ದಿಗೆ ಶ್ರಮಿಸಿದ್ದು ಇದುವರೆಗೂ ಇಲ್ಲ. ಕೇವಲ ಸಭೆಗಳಲ್ಲಿ, ಸಮಾಜೋತ್ಸವಗಳಲ್ಲಿ, ಪತ್ರಿಕಾಗೋಷ್ಠಿಗಳಲ್ಲಿ ಜಾತೀಯತೆ ವಿರುದ್ಧ ಮಾರುದ್ದದ ಭಾಷಣ ಬಿಗಿಯುವ ಹಿಂದೂ ನಾಯಕರುಗಳು ತಮ್ಮ ಮಾತಿನ ಕಾರ್ಯ ರೂಪಕ್ಕೆ ಇಳಿದಿದ್ದಾರೆಯೇ. ಇಂದು ಭಾರತದಲ್ಲಿ ದಲಿತರ ಮತಾಂತರ, ಭೌದ್ಧ ಧರ್ಮ ಸ್ವೀಕಾರ ಇವುಗಳೆಲ್ಲ ಎಗ್ಗಿಲ್ಲದೆ ನಡೆಯುತ್ತಿದ್ದು ಇದನ್ನು ತಡೆಯುವ ಸಲುವಾಗಿ ದಲಿತರ ಹಿಂದುಳಿದವರ ಅಭಿವೃದ್ದಿಗೆ ಶ್ರಮಿಸಿದ್ದಾರೆಯೇ..?  ಇವೆಲ್ಲವನ್ನೂ ಮಾಡದೆ ದಲಿತರನ್ನು ಹಿಂದೂಗಳಿಂದ ಬೇರ್ಪಡಿಸಲಾಗುತ್ತಿದೆ ಎಂದು ಪ್ರತಿಭಟಿಸಲು ಇವರಿಗೆ ಯಾವ ಅಧಿಕಾರವಿದೆ..
ರಾಜಕೀಯವಾಗಿ ಜಾತಿ ವಿಂಗಡಣೆ, ಕೋಮು ವಿಂಗಡಣೆಗಳು ಎಂದಿಗೂ ಅಭಿವೃದ್ದಿಗೆ ಪೂರಕವಲ್ಲ. ಸ್ವಾತಂತ್ರ್ಯ ಪೂರ್ವದ ಪಕ್ಷ ಎಂಬ ಹಣೆಪಟ್ಟಿ ಹೊಂದಿರುವ ಕಾಂಗ್ರೆಸ್ಸ್ ಮುಸ್ಲಿಮರ ಓಲೈಕೆ ಮಾಡಿ ಹಿಂದೆ ಗಾಂಧೀಜಿ ಮಾಡಿದ್ದ ತಪ್ಪನ್ನೇ ಮುಂದುವರೆಸುತ್ತಿದೆ. ಇನ್ನು ಬಿಜೆಪಿಯವರದು ಬಹುಸಂಖ್ಯಾತ ಹಿಂದೂಗಳ ಓಲೈಕೆ. ಚುನಾವಣೆಗಳು ಹತ್ತಿರ ಬರುವಾಗ ಮಾತ್ರ ಅಲ್ಲಲ್ಲಿ ಹಿಂದೂ ಸಮಾಜೋತ್ಸವಗಳನ್ನು ನಡೆಸುವ ಬಿಜೆಪಿಯವರು ಉಳಿದ ಸಂದರ್ಭಗಳಲ್ಲಿ ಸಮಾಜೋತ್ಸವ ನಡೆಸುವುದಿಲ್ಲ. ಅಲ್ಲಿಗೆ ಇದು ಚುನಾವಣಾ ಗಿಮಿಕ್ ಎಂದು ಸಾಬೀತಾಗುತ್ತದೆ.. ಈ ಎರಡೂ ಕೋಮು ವಿಭಜನಾ ರಾಜಕೀಯದ ಮದ್ಯೆ ನಲುಗಿ ಹೋಗುತ್ತಿರುವುದು ಮಾತ್ರ ನಮ್ಮೀ ಭಾರತ ಮತ್ತು ಭಾರತೀಯರುಗಳಾದ ನಾವುಗಳು.! ರಾಜಕೀಯ ಪಕ್ಷಗಳು, ಸಂಘಟನೆಗಳು ಭಾರತದ ಅಭಿವೃದ್ದಿಗೆ ಹಿಡಿದ ಶಾಪಗಳಾದ ಈ ಕೋಮುವಾದ ಜಾತಿವಾದಗಳನ್ನು ಮೊದಲು ತೊಲಗಿಸಲಿ. ಹೊಸದಾಗಿ ರಾಜಕೀಯಕ್ಕೆ ಬರುವವರು ಜಾತಿರಹಿತನಾಗಿ ಬರಲಿ, ಕೇವಲ ಒಬ್ಬ ಭಾರತೀಯನಾಗಿರಲಿ ಎಂಬುದೇ ಪ್ರತಿಯೊಬ್ಬ ದೇಶಭಕ್ತ ಭಾರತೀಯನ ಅಭಿಲಾಷೆ. ನೀವೂ ಅವರಲ್ಲೊಬ್ಬರು ಎಂದುಕೊಳ್ಳುತ್ತೇನೆ..
“ವಂದೇ ಮಾತರಂ”
***********
19 ಟಿಪ್ಪಣಿಗಳು Post a comment
  1. harishathreya's avatar
    harishathreya
    ಸೆಪ್ಟೆಂ 23 2011

    ಆತ್ಮೀಯ
    ಈ ಮಸೂದೆ ಸ೦ಪೂರ್ಣವಾಗಿ ಆರ್ ಎಸ್ ಎಸ್ ಮತ್ತು ವಿಹಿ೦ಪ ಗಳನ್ನು ಹಣಿಯಲು ಹೆಣೆಯಲಾದ ಮಸೂದೆ. ಸಾರ್ವಜನಿಕವಾಗಿ ಸಮಾವೇಶಕ್ಕೂ ಅವಕಾಶ ಕೊಡಬಾರದೆ೦ದು ಮಾಡಲಾದ ಮಸೂದೆ. ವಿಹಿ೦ಪ ಮತ್ತು ಆರ್ ಎಸ್ ಎಸ್ ಗಳ೦ತೆ ನೇರವಾಗಿ ಮತ್ತು ಸಾರ್ವಜನಿಕವಾಗಿ ಯಾವ ಸ೦ಘಟನೆಯೂ ಸಮಾವೇಶ ನಡೆಸುವುದಿಲ್ಲ. ಮುಖ್ಯವಾಗಿ ಭಯೋತ್ಪಾದಕ ಮುಸ್ಲಿ೦ ಸ೦ಘಟನೆಗಳು ಮತ್ತು ಮತಾ೦ತರಿ ಕ್ರಿಶ್ಚಿಯನ್ ಸ೦ಘಟನೆಗಳು. ಕದ್ದು ಮುಚ್ಚು ಮಾಡುವ ಆ ಸ೦ಘಟನೆಗಳಿಗೆ ಪರೋಕ್ಷ ಬೆ೦ಬಲ ಕೊಡುವ ನಿಟ್ಟಿನಲ್ಲಿ ಹುಟ್ಟಿಕೊ೦ಡ ಮತ್ತು ಹಿ೦ದೂ ಸ೦ಘಟೆಗಳನ್ನು ಹಣಿಯಲು ಮಾಡಿದ ಮಸೂದೆ ಈ PREVENTION OF COMMUNAL AND TARGETED VIOLENCE (ACCESS TO JUSTICE AND REPARATIONS) BILL, 2011 ಮಸೂದೆ (ಇನ್ನೂ ಪಾಸ್ ಆಗಿಲ್ಲ)
    ಹರಿ

    ಉತ್ತರ
  2. Ashwin S Amin's avatar
    ಸೆಪ್ಟೆಂ 23 2011

    @ ಹರೀಶ್ ಆತ್ರೇಯ , ನಾನು ನನ್ನ ಲೇಖನದಲ್ಲಿ ಉಲ್ಲೇಖಿಸಿದ್ದು ಅದನ್ನೇ.. ಒಂದು ಕೋಮಿನ ವಿರುದ್ದ ಮತ್ತೊಂದು ಕೋಮನ್ನು ಎತ್ತಿ ಕಟ್ಟಿ ಓಲೈಸುವುದು ಸರಿಯಲ್ಲ ಎಂಬುದೇ ನನ್ನ ಲೇಖನದ ಸಾರಾಂಶವಾಗಿದೆ. ಅದಾಗ್ಯೂ ಈ ಹಿಂದೂ ಸಮಾಜೋತ್ಸವಗಳು ಯಾವ ಪುರುಷಾರ್ಥಕ್ಕಾಗಿ..? ಮೊದಲು ಹಿಂದೂ ಧರ್ಮದಲ್ಲಿರುವ ಜಾತಿಪದ್ದತಿಯನ್ನು ಹೋಗಲಾಡಿಸಿ ದಲಿತರೆನಿಸಿಕೊಂಡ, ಹಿಂದುಳಿದವರೆನಿಸಿಕೊಂಡವರನ್ನು ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಲಿ..! ಅದು ಬಿಟ್ಟು ಒಂದಷ್ಟು ಜನರನ್ನು ಸೇರಿಸಿ ರೋಷಾವೇಷದ ಮಾತುಗಳಿಂದ ನೆರೆದಿರುವ ಜನರ ರಕ್ತವನ್ನು ಕುದಿಯುವಂತೆ ಮಾಡುವ ಈ ಸಮಾವೇಶಗಳು, ಸಮಾವೇಶದ ಹೆಸರಲ್ಲಿ ಓಟು ಬ್ಯಾಂಕನ್ನು ಭದ್ರಪಡಿಸಿಕೊಳ್ಳುವ ಅವಕಾಶವಾದಿ ಬಿಜೆಪಿ.. ಇವೆಲ್ಲದರಿಂದ ಹಿಂದೂ ಧರ್ಮದಲ್ಲಿರುವ ಜಾತಿವಾದ ಹೊರಟು ಹೋಗುತ್ತದೆಯೇ.. ತಾಜಾ ಉದಾಹರಣೆ ಎಂಬಂತೆ ಇಂದು ಬೆಳಗ್ಗಿನ ಟಿವಿ ನ್ಯೂಸ್ ನಲ್ಲಿ ಒಂದು ಆಘಾತಕಾರಿ ಸುದ್ದಿ ನೋಡಿದೆ..!!! ಹಾಸನ ಜಿಲ್ಲೆಯ ಅರಕಲಗೂಡು ಸಿದ್ದಾಪುರದಲ್ಲಿ ದಲಿತ ಕುಟುಂಬಗಳ ಮೇಲೆ ಬಹಿಷ್ಕಾರ ಹೇರಲಾಗಿದೆ ಎಂದು.. ಬಹುಶ ಇದು ತಮಗೂ ಗೊತ್ತಿರಬಹುದು.. ಇಂತಹ ಅದೆಷ್ಟೋ ಪ್ರಕರಣಗಳು ಭಾರತದಾದ್ಯಂತ ನಡೆಯುತ್ತಿವೆ.. ಅವುಗಳಿಗೆ ಮೊದಲು ಪರಿಹಾರ ಹುಡುಕಲಿ.. ನಮ್ಮ ಹುಳುಕುಗಳನ್ನು ಮೊದಲು ಸರಿಪಡಿಸಿ ಆ ನಂತರ ಬೇರೆಯವರ ಕಡೆ ಕೈ ತೋರಿಸಲಿ..

    ಉತ್ತರ
    • Rudramuni Hiremath's avatar
      ಸೆಪ್ಟೆಂ 23 2011

      ಸ್ವಾಮಿ ನಿಮ್ಮ ಮಾತು ನಿಜವಿರಬಹುದು ಆದರೆ ಈ ನಿಟ್ಟಿನಲ್ಲಿ ಸಂಘ ಪರಿವಾರ ಅವಿರತವಾಗಿ ಶ್ರಮಿಸುತ್ತಿದೆ. ನಮ್ಮ ಓರೆಕೋರೆಗಳ ಜೋತೆಗೆ ನಾವು ಈ ಅಕ್ರಮಗಳನ್ನು ಮಟ್ಟಹಾಕಬೇಕಿದೆ.

      ಉತ್ತರ
  3. sriharsha's avatar
    sriharsha
    ಸೆಪ್ಟೆಂ 24 2011

    ಭ್ರಮನಿರಸನ ಗೊಂಡ ದೇಶಭಕ್ತನ ಪ್ರಲಾಪ! ಬಹುಷಃ ಮಾಜಿ ಆರೆಸ್ಸೆಸ್ಸಿಗರಿರಬೇಕು.

    ‘ಇಂಡಿಯಾ/ಭಾರತ’ ಅನ್ನೋ ದರಿದ್ರ ಬ್ರಾಂಡ್ ನಿಂದ ಹೊರಬರುವವರೆಗೂ ಯಾರಿಗೂ ಒಳಿತಿಲ್ಲ.
    ಚಿಲ್ಲರೆ ಸೆಂಟಿಮೆಂಟುಗಳನ್ನಿಟ್ಟುಕೊಂಡು ಕೊರಗುವುದಕ್ಕಿಂತ ಬುದ್ದಿವಂತಿಕೆಯಿಂದ ನಾಡು ಕಟ್ಟುವುದು ಒಳಿತು.

    ಉತ್ತರ
  4. Karthik K.'s avatar
    Karthik K.
    ಸೆಪ್ಟೆಂ 24 2011

    Dear sriharsha..
    “ಭಾರತ” ಎಂಬುದು ದರಿದ್ರ ಬ್ರಾಂಡ್ ಎಂದು ಉಲ್ಲೇಖಿಸಿರುವ ನೀವು ಯಾವ ದೇಶ ವಿರೋಧಿಗೂ ಕಡಿಮೆಯಿಲ್ಲವೆಂದೆನಿಸುತ್ತದೆ. ಅದೇಗೆ ಭಾರತವನ್ನು ದರಿದ್ರ ವೆಂದು ಕರೆದಿರಿ..??? ನಮ್ಮ ದೇಶ, ನಮ್ಮ ಭಾರತ ಎಂಬ ದೇಶಪ್ರೇಮದ ಸೆಂಟಿಮೆಂಟುಗಳಿಲ್ಲದೆ ದೇಶ ಕಟ್ಟಲು ಸಾಧ್ಯವೇನು..? ದೇಶದ ಬಗ್ಗೆ ಪ್ರೀತಿ ಇದ್ದರೆ ತಾನೇ ದೇಶದ ಅಭಿವೃದ್ದಿಯ, ಏಳ್ಗೆಯ ಬಗ್ಗೆ ಯೋಚಿಸಲಾಗುವುದು..! ದೇಶ ಪ್ರೇಮ ಎಂಬ ಸೆಂಟಿಮೆಂಟುಗಳಿಲ್ಲದ ನಿಮ್ಮಂತವರು ಈ ದೇಶದಲ್ಲಿ ಇರಲು ಅರ್ಹರೇ ಅಲ್ಲ ಎಂದುಕೊಳ್ಳುತ್ತೇನೆ..

    ಉತ್ತರ
  5. Ashwin S Amin's avatar
    ಸೆಪ್ಟೆಂ 24 2011

    @ ಶ್ರೀಹರ್ಷ ( ಅನಾಮಿಕ..) , ನಾನು ಮಾಜಿ ಆರೆಸ್ಸಿಗನೂ ಅಲ್ಲ, ಹಾಲಿಯೂ ಅಲ್ಲ..! ತಾವು ಅದೇಗೆ ಅಂತಹ ನಿರ್ಧಾರಕ್ಕೆ ಬಂದಿರಿ ಎಂಬುದೇ ತಿಳಿಯುತ್ತಿಲ್ಲ.. ಭಾರತವನ್ನು ದರಿದ್ರ ಎಂದು ಜರೆದಿರುವ ನೀವು ತಮ್ಮ ಮನದಲ್ಲಿ ಪೂರ್ತಿ ದೇಶ ವಿರೋಧಿ ಭಾವನೆಗಳನ್ನೇ ತುಂಬಿಕೊಂಡಿರುವಂತಿದೆ.. ದೇಶಪ್ರೇಮದ ಸೆಂಟಿಮೆಂಟುಗಳಿಲ್ಲದೆ ದೇಶ ಕಟ್ಟಲು ಸಾಧ್ಯವೇ ಇಲ್ಲ.. ಗೆಳೆಯ ಕಾರ್ತಿಕ್ ಬರೆದ ಅಭಿಪ್ರಾಯ ನಿಮ್ಮ ಮಾತುಗಳಿಗೆ ತಕ್ಕ ಉತ್ತರ ನೀಡಿರಬಹುದು ಅಲ್ಲವೇ..!

    ಉತ್ತರ
    • sriharsha's avatar
      sriharsha
      ಸೆಪ್ಟೆಂ 25 2011

      ಶ್ರೀಯುತ ಅಶ್ವಿನ್ ಅವರೇ, ನನ್ನ ನಿಜವಾದ ಹೆಸರು ಶ್ರೀಹರ್ಷ.. ನೀವಿನ್ನೂ ಬರಹದಲ್ಲಿ ಅಂಬೆಗಾಲಿಡುತ್ತಿರುವ ಮಗು…(ಸಾಕ್ಷಿ: ನಿಮ್ಮ ಬರಹದಲ್ಲಿನ ಕಚ್ಚಾತನ ಹಾಗೂ presentation ನಲ್ಲಿನ ಅಪ್ರಭುದ್ಧತೆ) ಬರವಣಿಗೆಯಲ್ಲಿ ಸಾಕಷ್ಟು ಹೆಸರಿದೆ ನನಗೆ! ನಿಲುಮೆಯ ಮಾಡರೇಟರ್ ಗಳಿಗೂ ನನ್ನ ಹಳೆಯ ಪರಿಚಯವಿದೆ. ಸೋ ನಾನು ಅನಾಮಿಕನಲ್ಲ.
      ನೀವು ಹೇಳಿದ್ದು ನಿಜ. ನಾನು ದೇಶವಿರೋಧಿ. ರಾಷ್ಟ್ರೀಯತೆಯ ವಿರೋಧಿ. ರಾಷ್ಟ್ರದ್ರೋಹಿಯಲ್ಲ! ಇಂಗ್ಲೆಂಡ್, ಅಮೇರಿಕೆಗಳಲ್ಲಿ ರಾಷ್ಟ್ರಧ್ವಜವನ್ನು ಚಡ್ಡಿಗಳನ್ನಾಗಿ ಮಾಡಿ ಹಾಕಿಕೊಳ್ಳುತ್ತಾರೆ. ನಮ್ಮ ಹಾಗೆ ಸೆಂಟಿಮೆಂಟುಗಳಿಲ್ಲ. ಆ ದೇಶಗಳು ಉದ್ಧಾರವಾಗಿಲ್ಲವೇ? ನಾನು ಈ ದೇಶದಲ್ಲಿರಬೇಕೋ ಬೇಡವೋ ಎಂದು ನಿರ್ಧಾರ ಮಾಡಬೇಕಾದವರು ತಾವಲ್ಲ. ನಾನು ನಿಯತ್ತಿಂದ ತೆರಿಗೆ ಕಟ್ಟುತ್ತೇನೆ. ಕೊಲೆ ಮಾಡಿಲ್ಲ, ಕಳ್ಳತನ ಮಾಡಿಲ್ಲ. ದುಡಿದು ತಿನ್ನುತ್ತೇನೆ. ಇಲ್ಲಿ ಹುಟ್ಟಿದವನು. ಇಲ್ಲೆ ಇರುವವನು. ದೇಶಪ್ರೇಮದ ಗುತ್ತಿಗೆ ಹಿಡಿದ ತಾವು ನನಗೆ ಹೇಳಬೇಕಾಗಿಲ್ಲ.
      ನನ್ನ ವಾದ ಇರುವುದು ಇಷ್ಟೇ! ಭಾರತ ಎಂಬ ಬ್ರಾಂಡ್ ನಮಗೆ ಬೇಕಾಗಿಲ್ಲ. ಈ ಬ್ರಾಂಡ್ ನಿಂದ ಯಾರಿಗೂ ಸುಖವಿಲ್ಲ. ಇದಕ್ಕೆ ಅರವತ್ತು ವರುಷ ನಾವು ಕಳೆದ ದೈನೇಸಿ ಸ್ಥಿತಿಯೇ ಸಾಕ್ಷಿ. ನನ್ನನ್ನು ಎರಡನೆಯ ದರ್ಜೆಯ ನಾಗರಿಕನನ್ನಾಗಿ ನೋಡುವ ಈ ದೇಶ ದರಿದ್ರವೇ! ಪ್ರತಿಯೊಬ್ಬರಿಗೂ ಕೂಳಿಕ್ಕದ ಈ ದೇಶ ಬಿಕನಾಸಿಯೇ!

      ಉತ್ತರ
      • ವಿಜಯ್ ಪೈ's avatar
        ವಿಜಯ್ ಪೈ
        ಸೆಪ್ಟೆಂ 27 2011

        ಹರ್ಷ..
        >>ನನ್ನ ವಾದ ಇರುವುದು ಇಷ್ಟೇ! ಭಾರತ ಎಂಬ ಬ್ರಾಂಡ್ ನಮಗೆ ಬೇಕಾಗಿಲ್ಲ. ಈ ಬ್ರಾಂಡ್ ನಿಂದ ಯಾರಿಗೂ ಸುಖವಿಲ್ಲ. <<
        ಏನಾದರೆ ಒಳ್ಳೆಯದೆಂದು ನಿಮ್ಮ ವಿಚಾರಗಳ ಒಂದು ಲೇಖನ ಬರೆದರೆ ನಾವು ತಿಳಿದುಕೊಳ್ಳಬಹುದಿತ್ತು..ಚರ್ಚೆ ಮಾಡಬಹುದಿತ್ತು. ನಿಮ್ಮ ಲೇಖನದ ನಿರೀಕ್ಷೆಯಲ್ಲಿ.,

        ಉತ್ತರ
      • ಗುರು's avatar
        ಗುರು
        ಸೆಪ್ಟೆಂ 28 2011

        ಹಂದಿ ಹೇಸಿಗೆ ತಿಂದೂ ಬದುಕಿದೆ ,ಜೀವಿಸುತ್ತಿದೆ,ವಂಶಾಭಿವ್ರುದ್ದಿ ಮಾಡುತ್ತಿದೆ!! ಮನುಷ್ಯರು ಯಾಕೆ ಒಳ್ಳೆಯ ಶುಚಿಯಾದ ಆಹಾರ ತಿನ್ನಬೇಕು? ಚೈನಾದವರು ಹುಳು ಹುಪ್ಪಡಿ ಎಲ್ಲವನ್ನೂ ತಿನ್ನುತ್ತಾರೆ, ನಾವು ತಿನ್ನಲಾದೀತೇ?

        ಉತ್ತರ
        • sriharsha's avatar
          sriharsha
          ಸೆಪ್ಟೆಂ 28 2011

          ತಮ್ಮ ಪರಿಚಯ ಮಾಡಿಕೊಂಡದ್ದಕ್ಕೆ ಧನ್ಯವಾದಗಳು ಗುರು..!
          ತಮಗೆ ಸರಿ ಅನ್ನಿಸದಿದ್ದರೆ ತಿನ್ನಬೇಡಿ. ಹಾಗೆಯೇ ತಮಗೆ ಇಷ್ಟವಾದರೆ ಇನ್ನೊಬ್ಬರು ತಿನ್ನಲಿ ಎಂದು ಬಯಸಬೇಡಿ/ಹೇರಬೇಡಿ.

          ಉತ್ತರ
      • maaysa's avatar
        maaysa
        ಸೆಪ್ಟೆಂ 29 2011

        ” ಪ್ರತಿಯೊಬ್ಬರಿಗೂ ಕೂಳಿಕ್ಕದ ಈ ದೇಶ ಬಿಕನಾಸಿಯೇ!”

        ಭಾರತ-ದಲ್ಲಿ ಬರೀ ೩% ಮಂದಿ ವರಮಾನ ತೆರಿಗೆ ತೆರುವಾಗ, ಇರುವ ದಂಡ ಪಿನ್ದಗಳಿಗೆ, ಅನಿಯಂತ್ರಿತ ಸಂತಾನಾಭಿವೃದ್ಧಿನಿರತರಿಗೆಲ್ಲ ಅನ್ನಾಹಾರ ಕೊಡಲು ನಮ್ಮ ದೇಶ ದುಡ್ಡಿನ ಗಿಡ ನೆಡಬೇಕು ಅಷ್ಟೇ ….

        ಈ ಆರ್ಥಿಕ ಚಿಂತನೆಗೂ ಈ ಬರಹದಲ್ಲಿ ಒಡ್ಡಿದ ಮೂಲ ಹುರುಲಿಗೂ ನಂಟು ಕೊಂಚವೂ ಕಾಣದು.

        ..

        ಕೇಂದ್ರ ಸರಕಾರದಿಂದ ಪ್ರಸ್ತಾಪಿತ “Prevention of Communal and Targeted Violence Bill ” ಅಲ್ಲಿ ಬರೀ ಭಾಷ ಅಲ್ಪಸಂಖ್ಯಾತರ ರಕ್ಷಣೆಯೂ ಇದೆ. ಇಲ್ಲಿದೇ ಓದಿ. ”

        Click to access pctvb.pdf

        “To respect, protect and fulfill the right to equality before law and equal protection of law by
        imposing duties on the Central Government and the State Governments, to exercise their
        powers in an impartial and non-discriminatory manner to prevent and control targeted
        violence, including mass violence, against Scheduled Castes, Scheduled Tribes and religious
        minorities in any State in the Union of India, and linguistic minorities in any State in the
        Union of India; to thereby uphold secular democracy; to help secure fair and equal access to
        justice and protection to these vulnerable groups through effective provisions for
        investigation, prosecution and trial of offences under the Act; to provide for restorative relief
        and reparation, including rehabilitation and compensation to all persons affected by
        communal and targeted violence; and for matters connected herewith and incidental thereto.”

        ಜಗತ್ತಿನ ಹೆಚ್ಚಿನ ದೇಶಗಳಿ ಇಂತ ಕಾನೂನುಗಳಿವೆ. ಯುರೋಪಿಯನ್ ಯುನಿಯನಲ್ಲಿ ಈ ಬಗ್ಗೆ ಹೆಚ್ಚು ಚರ್ಚೆ ನಡೆದಿದೆ.

        ಅಣ್ಣ ಹಜಾರೆಯಾ ‘ಜನ ಲೋಕ ಪಾಲ್’ ಬ್ರಿಟನ್ ಹಾಗು ಉತ್ತರ ಯೂರೋಪಿನ ದೇಶದಲ್ಲಿರುವ ಲಂಚ-ತಡೆ ಕಾನೂನಿನ ಪಾಲನೆ ತಾನೇ.!

        ಉತ್ತರ
  6. ರವಿಕುಮಾರ ಜಿ ಬಿ's avatar
    ರವಿಕುಮಾರ ಜಿ ಬಿ
    ಸೆಪ್ಟೆಂ 24 2011

    ಕಾಮಾಲೆ ಕಣ್ಣಿನವಗೆ ಜಗತ್ತೆಲ್ಲ ಹಳದಿ !!
    ಇಲ್ಲಿ ಕೆಲವರಿಗೆ ಕಾಂಗ್ರೆಸ್ಸ್ ವಿರೋದಿಯಾಗಿ ಅಥವಾ ಹಿಂದೂ ಪರ ಮಾತನಾಡಿದರೆ ಅವರು ಆರ್ ಎಸ್ ಎಸ್ ಅಥವಾ ವಿ ಹಿ೦ ಪ ಗೆ ಸೇರಿದವನು ಎಂಬ ಭಾವನೆ!! ಹಿಂದೂ ಪರ ಮಾತನಾಡಿದರೆ ಅವ ಕೋಮುವಾದಿ ! ಅದೇ ಈ ಥರ ಹಿಂದೂ ವಿರೋಧಿ (ಮುಕ್ಯವಾಗಿ ಸಮಾಜ ವಿರೋಧಿ ) ಮಸೂದೆ ಅಂಗೀಕರಿಸ ಹೊರಟರೆ ಅವ ಜಾತ್ಯಾತೀತ! ವಿಚಿತ್ರ ಜನ!

    ನಿಜವಾಗಿ ನೋಡಿದರೆ ಈ ಸೋಗಿನ ಜಾತ್ಯತೀತ ವಾದ ಆಟನ್ಕವದಕ್ಕಿಂತ ಹೆಚ್ಚೂ ಅಪಾಯಕಾರಿ .
    ಒಂದು ಕಾಲದಲ್ಲಿ ವಿರೋದಿಗಳನ್ನ ಸದೆ ಬಡಿಯಲು ತಾಲೀಬಾನನ್ನು ಸಾಕಿ ಸಲಹಿದ ಅಮೇರಿಕಾ ದ ಸ್ತಿತಿ ನೋಡಿದ ಮೇಲೂ ಬುದ್ದಿ ಬಂದಿಲ್ಲ ಅಂದ ಮೇಲೆ ಇನ್ನೇನು ಹೇಳಲು ಸಾದ್ಯ ? ” ಕೆಟ್ಟ ಮೇಲೂ ಬುದ್ದಿ ಬರಲ್ಲ?”

    ಉತ್ತರ
  7. ರವಿಕುಮಾರ ಜಿ ಬಿ's avatar
    ರವಿಕುಮಾರ ಜಿ ಬಿ
    ಸೆಪ್ಟೆಂ 24 2011

    ಕಾಮಾಲೆ ಕಣ್ಣಿನವಗೆ ಜಗತ್ತೆಲ್ಲ ಹಳದಿ !!
    ಇಲ್ಲಿ ಕೆಲವರಿಗೆ ಕಾಂಗ್ರೆಸ್ಸ್ ವಿರೋದಿಯಾಗಿ ಅಥವಾ ಹಿಂದೂ ಪರ ಮಾತನಾಡಿದರೆ ಅವರು ಆರ್ ಎಸ್ ಎಸ್ ಅಥವಾ ವಿ ಹಿ೦ ಪ ಗೆ ಸೇರಿದವನು ಎಂಬ ಭಾವನೆ!! ಹಿಂದೂ ಪರ ಮಾತನಾಡಿದರೆ ಅವ ಕೋಮುವಾದಿ ! ಅದೇ ಈ ಥರ ಹಿಂದೂ ವಿರೋಧಿ (ಮುಕ್ಯವಾಗಿ ಸಮಾಜ ವಿರೋಧಿ ) ಮಸೂದೆ ಅಂಗೀಕರಿಸ ಹೊರಟರೆ ಅವ ಜಾತ್ಯಾತೀತ! ವಿಚಿತ್ರ ಜನ!

    ನಿಜವಾಗಿ ನೋಡಿದರೆ ಈ ಸೋಗಿನ ಜಾತ್ಯತೀತ ವಾದ ಆಟನ್ಕವದಕ್ಕಿಂತ ಹೆಚ್ಚೂ ಅಪಾಯಕಾರಿ .
    ಒಂದು ಕಾಲದಲ್ಲಿ ವಿರೋದಿಗಳನ್ನ ಸದೆ ಬಡಿಯಲು ತಾಲೀಬಾನನ್ನು ಸಾಕಿ ಸಲಹಿದ ಅಮೇರಿಕಾ ದ ಸ್ತಿತಿ ನೋಡಿದ ಮೇಲೂ ಬುದ್ದಿ ಬಂದಿಲ್ಲ ಅಂದ ಮೇಲೆ ಇನ್ನೇನು ಹೇಳಲು ಸಾದ್ಯ ? ” ಕೆಟ್ಟ ಮೇಲೂ ಬುದ್ದಿ ಬರಲ್ಲ?”huh!!

    ಉತ್ತರ
  8. Ashwin S Amin's avatar
    ಸೆಪ್ಟೆಂ 24 2011

    ರವಿ ಕುಮಾರ್ ಅವರೇ..
    ನಿಮ್ಮ ಅಭಿಪ್ರಾಯದ ಮೊದಲ ಪ್ಯಾರಾ ಇಲ್ಲಿ ಅತೀ ಸೂಕ್ತವಾದುದಾಗಿದೆ.. ಸತ್ಯವನ್ನು ತೆರೆದಿಟ್ಟಿದ್ದೀರಿ.. ಭಾರತದಲ್ಲಿ ಜಾತ್ಯತೀತರಾಗಬೇಕೆಂದರೆ ಆತ ಹಿಂದೂ ವಿರೋಧಿಯಾದರೆ ಸಾಕು.. ! ಆತ ಇತರೆ ಯಾವುದೇ ಧರ್ಮವನ್ನು (ಹಿಂದೂ ಧರ್ಮ ಬಿಟ್ಟು) ಅತ್ಯುಗ್ರವಾಗಿ ಬೆಂಬಲಿಸಿದರೂ ಆತ ಕೋಮುವಾದಿ ಎಂದು ಕರೆಯಲ್ಪಪಡುವುದಿಲ್ಲ.. ಇದು ಭಾರತದಲ್ಲಿ ಕೋಮು ವಿಂಗಡಣಾ ರಾಜಕೀಯದಿಂದ ಉದ್ಭವಿಸಿದ ಪರಿಸ್ಥಿತಿ..

    ಉತ್ತರ
  9. ಬಸವಯ್ಯ's avatar
    ಬಸವಯ್ಯ
    ಆಕ್ಟೋ 2 2011

    @ ನಿಲುಮೆ
    ನನ್ನ ಕಾಮೆಂಟ್ ನ್ನು ಯಾಕೆ ತೆಗೆದು ಹಾಕಿದಿರೊ ಅರ್ಥವಾಗಲಿಲ್ಲ. ಅದರಂತೆ ಮೇಲೆ ಇದ್ದ ಇನ್ನು ಕೆಲವು ಕಾಮೆಂಟ್ ಗಳನ್ನು ತೆಗೆದುಹಾಕದ್ದು ಕೂಡ ಸರಿಯಲ್ಲ. ಇವು ಅಲ್ಲಿರಬೇಕಿತ್ತು. ಇನ್ನೂ ಆಶ್ಚರ್ಯ ಕೊಡುವುದು ತರ್ಕಬದ್ಧವಾದ ಸಮರ್ಥನೆಯಿಲ್ಲದೆ, ಬಾಯಿ ಚಟಕ್ಕೆ ದೇಶವನ್ನು ಬಿಕನಾಸಿ, ದರಿದ್ರ ಎಂದು ಕರೆದ ಕಾಮೆಂಟನ್ನು ಹಾಗೆ ಇಟ್ಟಿದ್ದೀರಿ. ಅದರ ಮುಂದಿನ ಚರ್ಚೆ ಕೂಡ ಮಹಾನುಭಾವರ ಉನ್ನತ ವಿಚಾರಗಳ ಬಗ್ಗೆ ಪರಿಚಯ ಮಾಡಿಕೊಡುವಂತಿದ್ದವು, ಅವನ್ಯಾಕೆ ತೆಗೆದು ಹಾಕಿದಿರಿ?

    ಈ ಎಲ್ಲ ಕಾಮೆಂಟುಗಳು ಅಲ್ಲಿರಬೇಕಿತ್ತು. ನಿಲುಮೆಗೆ ಬರುವವರು ಅವನ್ನು ಓದಬೇಕಿತ್ತು. ಆಗ ‘ಮಲವಿದೆ ಎಚ್ಚರ’ ಎಂಬ ಸೂಚನೆಯಾದರೂ ಮುಂದಿನ ದಿನಗಳಲ್ಲಿ ಚರ್ಚಿಸುವವರಿಗೆ ಸಿಗತ್ತಿತ್ತು!.

    ಉತ್ತರ
  10. valavi's avatar
    valavi
    ಏಪ್ರಿಲ್ 16 2014

    [[ಭಾರತದಲ್ಲಿ ಜಾತ್ಯತೀತರಾಗಬೇಕೆಂದರೆ ಆತ ಹಿಂದೂ ವಿರೋಧಿಯಾದರೆ ಸಾಕು.. ! ಆತ ಇತರೆ ಯಾವುದೇ ಧರ್ಮವನ್ನು (ಹಿಂದೂ ಧರ್ಮ ಬಿಟ್ಟು) ಅತ್ಯುಗ್ರವಾಗಿ ಬೆಂಬಲಿಸಿದರೂ ಆತ ಕೋಮುವಾದಿ ಎಂದು ಕರೆಯಲ್ಪಪಡುವುದಿಲ್ಲ.]] satyavaada helike.

    ಉತ್ತರ
    • Nagshetty Shetkar's avatar
      Nagshetty Shetkar
      ಏಪ್ರಿಲ್ 17 2014

      ಹಿಂದೂ ಧರ್ಮಲ್ಲಿ ರೂಢವಾಗಿರುವ ಅನ್ಯಾಯ, ಶೋಷಣೆ, ಪ್ರತಿಗಾಮಿತನ, ಕುರುಡು ನಂಬಿಕೆ, ಕಂದಾಚಾರ, ಸಾಮಾಜಿಕ ವಿಕೃತಿ, ಅವೈಚಾರಿಕತೆ ಮೊದಲಾದವುಗಳನ್ನು ಟೀಕಿಸುವುದು ಪ್ರತಿಭಟಿಸುವುದು ತಪ್ಪೇ? ಇದನ್ನು ಶತಮಾನಗಳ ಹಿಂದೆ ಬಸವಣ್ಣನ ನೇತೃತ್ವದಲ್ಲಿ ವಚನಕಾರರು ಆದಿಯಾಗಿ ಅನೇಕರು ಮಾಡಿದ್ದಾರಲ್ಲವೇ? ಇವರನ್ನೆಲ್ಲ ಹಿಂದೂ ವಿರೋಧಿ ಎಂಬ ಲೇಬಲ್ ಹಚ್ಚಿ ನೀವು ಸಾಧಿಸುತ್ತಿರುವುದು ಏನನ್ನು?

      ಉತ್ತರ
      • valavi's avatar
        valavi
        ಏಪ್ರಿಲ್ 17 2014

        ಉಳಿದ ಧರ್ಮಗಳಲ್ಲಿ ಕಂದಾಚಾರ , ಅನ್ಯಾಯ , ಶೋಷಣೆ, ವಿಕೃತಿ, ಕುರುಡು ನಂಬಿಕೆ, ಅವೈಚಾರಿಕತೆ ಮೊದಲಾದವು ಇಲ್ಲವೆ? ಅಂಥ ಸಂದರ್ಬಗಳಲ್ಲಿ ನಿಮ್ಮದು ಜಾಣ ಕಿವುಡು . ಮತ್ತೂ ಜಾಣ ಕುರುಡು. ಹಿಂದು ಧರ್ಮ ಬಂದಾಗ ಮಾತ್ರ ನಿಮ್ಮದು ಕೆಚ್ಚೆದೆ. ಇದರಿಂದ ನೀವು ಸಾಧಿಸುವದು ಏನನ್ನು??

        ಉತ್ತರ
        • Nagshetty Shetkar's avatar
          Nagshetty Shetkar
          ಏಪ್ರಿಲ್ 17 2014

          ನೀವು ನಿಮ್ಮ ಮನೆಯ ಕೊಳಕನ್ನು ತೆಗೆಯದೆ ಪಕ್ಕದ ಮನೆ ವಾಸನೆ ಹೊಡೆಯುತ್ತಿದೆ ಅಂತ ಅಂದರೆ ನಿಮಗೆ ಮರ್ಯಾದೆ ಇರುತ್ತದೆಯೇ ವಾಳವಿ ಅವರೇ? ಉಳಿದ ಧರ್ಮಗಳ ಲೋಪದೋಷಗಳನ್ನು ಆಯಾ ಧರ್ಮಗಳ ಪ್ರಜ್ಞಾವಂತ ಜನರು ಸರಿಪಡಿಸುತ್ತಾರೆ. ಅವರ ಉಸಾಬರಿ ನಿಮಗೇಕೆ?

          ಉತ್ತರ

Leave a reply to Nagshetty Shetkar ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments