ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 27, 2011

2

ಬಡವರ ಬದುಕಿಗೆ ‘ಅರ್ಥ’ವೇ ಇಲ್ವಾ?

‍ನಿಲುಮೆ ಮೂಲಕ

-ಮರಳಿಧರ ದೇವ್

ದಿನಕ್ಕೆ ಒಬ್ಬ ವ್ಯಕ್ತಿ ಕೇವಲ ೨೫ ರೂಪಾಯಿಗಳನ್ನು ಗಳಿಸಿದರೆ ಸಾಕಂತೆ, ಇದಕ್ಕಿಂತ ಹೆಚ್ಚಿಗೆ ಖರ್ಚು ಮಾಡುವವರು ಬಡವರಲ್ಲವಂತೆ. ಈ ರೀತಿ ಮೂರ್ಖತನದ ಹೇಳಿಕೆ ದಾಖಲು ಮಾಡಿರುವುದು ಯೋಜನಾ ಆಯೋಗ. ಒಬ್ಬ ವ್ಯಕ್ತಿಯ ದೀನದ ಖರ್ಚು ೨೫ ರೂಪಾಯಿಗಳಿಗಿಂತ ಹೆಚ್ಚಿದ್ದರೆ ಅವರು ಸರಕಾರದಿಂದ ಯಾವುದೇ ವಿಶೇಷ ಅನುದಾನ ಪಡೆಯಲು ಅರ್ಹರಲ್ಲ.

ಈ ರೀತಿಯ ವರದಿ ತಯ್ಯಾರಿಸುವವರಿಗೆ ದೇಶದ ಹಣದುಬ್ಬರದ ಹಾಗು ದೈನಂದಿನ ಖರ್ಚುಗಳಿಗೆ ಬೇಕಾಗಿರುವ ಹಣದ ಬಗ್ಗೆ ಅರಿವಿದೆಯೇ? ಇಂತಹ ಜನರು ಯೋಜನಾ ಅಯೋಗದಲ್ಲಿರೋದ್ರಿಂದಾನೆ ದೇಶದಲ್ಲಿ ಹಣದುಬ್ಬರ ಗಗನಕ್ಕೆ ಏರ್ತಾ ಇದ್ರೂ ಸರಕಾರಗಳು ಏನು ಆಗೇ ಇಲ್ಲ ಅನ್ನೋ ರೀತಿ ತೂಕಡಿಸುತ್ತಾ ಕೂತಿವೆ. ಅಲ್ಲ ಸ್ವಾಮಿ ಪ್ರತಿ ತಿಂಗಳಿಗೊಮ್ಮೆ ಪೆಟ್ರೋಲ್ ದರವನ್ನು ಮನಸೋ ಇಚ್ಚೆ ಹೆಚ್ಚಿಸಿ ಎಲ್ಲ ಪದಾರ್ಥಗಳ ಬೆಲೆಯನ್ನು ನಿಯಂತ್ರಣಕ್ಕೆ ಬಾರದೆ ಹಾಗೆ ಮಾಡಿ ಈಗ ಬರಿ ೨೫ ರೂಪಾಯಿಗಳಲ್ಲಿ ನಿಮ್ಮ ಜೀವನ ನಡೆಸಬೇಕು ಅಂತ ಆಯೋಗದ ವರದಿ ಹೇಳಿದ್ರೆ ಜನ ಸಾಮಾನ್ಯರು ಎಲ್ಲಿಗೆ ಹೋಕ್ಬೇಕು?

೨೫ ರೂಪಾಯಿಗಳಿಗಿಂತ ಜಾಸ್ತಿ ಖರ್ಚು ಮಾಡುವವ ಬಡವನಲ್ಲ ಅಂದ್ರೆ ನಮ್ಮ ದೇಶದಲ್ಲಿ ಯಾರು ಬಡವರಲ್ಲ, ಯಾಕಂದ್ರೆ ಈಗಿನ ದಿನಗಳಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಬೇಕೆಂದರೆ ೨೫ ರೂಪಾಯಿಗಳಿಗಿಂತ ಜಾಸ್ತಿ ಹಣ ಬೇಕೇ ಬೇಕು. ಓಡಾಟ ಬೀಡಿ ಜ್ವರ ಬಂದು ವೈದ್ಯರ ಹತ್ರ ಹೋದರೆ ಕನಿಷ್ಠ ೧೦೦ ರೂಪಯಿಗಳನ್ನಾದರೂ ತೆರಲೇಬೇಕು. ಅಕ್ಕಿಯ ಬೆಲೆ ೩೦ ರ ಸನಿಹ ಇದೆ ಇನ್ನು ಬೇರೆ ಪದಾರ್ಥಗಳನ್ನು ಬಳಸಿ ಬರಿ ಒಂದೊತ್ತು ಉತ ಮಾಡಿದವನು ಬಡವನಾಗಲಾರನೆ? ೨೫ ರೂಪಾಯಿಗಳಲ್ಲಿ ಜೀವನ ಸಾಗಿಸಬಹುದು ಅಂದರೆ ಸರಕಾರೀ ನೌಕರರಿಗೆ ೬ನೆ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡುವ ಅಗತ್ಯವಾದರೂ ಏನಿದೆ? ಇನ್ನು ಯಾವುದೇ ಚರ್ಚೆ ಇಲ್ಲದೆ ನಮ್ಮ ಘನ ಬಡ ಸಂಸದರ ವೇತನವನ್ನು ಮನಸೋ ಇಚ್ಛೆ ಹೆಚ್ಚಿಸುವ ಅವಶ್ಯಕತೆ ಏನಿದೆ? ಬೆಂಗಳೂರಿನಂತಹ ನಗರದಲ್ಲಿ ಸಾವಿರ ರೂಪಾಯಿ ಕೊಟ್ಟರು ಗುಡಿಸಿಲಿನಂತಹ ಮನೆ ಸಿಗುತ್ತೆ, ಸಿಮೆಎಣ್ಣೆಯ ಬೆಲೆಯೇ ೨೦ರ ಆಸುಪಾಸಿನಲ್ಲಿದೆ. ಇ ವರದಿಯನ್ನು ತಯಾರಿಸಿದ ಮಹಾಷಯರಿಗೆ ದಿನಕ್ಕೆ ೫೦ ರೂಪಾಯಿಗಳನ್ನು ಕೊಟ್ಟು ಬೆಂಗಳೂರಿನಲ್ಲಿ ಕೇವಲ ೧೫ ದಿನ ಇರೋದಕ್ಕೆ ಹೇಳಬೇಕು ಆಗ ಅವರಿಗೆ ಗೊತ್ತಾಗುತ್ತೆ ೨೫ ರೂಪಯಿನಲ್ಲಿ ಬದುಕೋದು ಎಷ್ಟು ಕಷ್ಟ ಅಂತ.

ಈ ರೀತಿಯ ವರದಿಗಳನ್ನು ಕೊಟ್ಟು ಇವರು ಯಾರನ್ನು ಮುರ್ಖರನ್ನಗಿಸೋದಕ್ಕೆ ಹೊರಟಿದ್ದಾರೆ? ಒಂದು ಕಡೆ ಸರಕಾರನೆ ಪರೋಕ್ಷವಾಗಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತೆ ಇನ್ನೊಂದು ಕಡೆ ೨೫ ರೂಪಯಿಗಳಲ್ಲಿ ಜೀವನ ನಡೆಸಿ ಅನ್ನುತ್ತೆ. ಜನಸಾಮನ್ಯರೆನು ಬಡ ಸಂಸದರ ಹಾಗೆ ೨೫ ರೂಪಾಯಿಗೆ ಸಂಸತ್ ಭವನದ ಹೋಟೆಲ್ನಲ್ಲಿ ಬಿರಿಯಾನು ತಿನ್ನೋಕ್ಕೆ ಆಗುತ್ತ? ಇನ್ನು ಮುಂದಾದರು ಈ ರೀತಿಯ ಅಸಂಬದ್ದ ವರದಿಗಳನ್ನು ನೀಡೋದು ನಿಲ್ಲಿಸಿ.
**************

zaheer-forexandlaptops.blogspot.com

2 ಟಿಪ್ಪಣಿಗಳು Post a comment
  1. Srinidhi Chadaga's avatar
    ಸೆಪ್ಟೆಂ 27 2011

    dinakke 35 galike iruva vyakthi badavanalla. saaviraru koti looti hodedavaru shrimantaralla ennuvudu namma rajakaranigala policy.

    ಉತ್ತರ
  2. ಮಾಯ್ಸ's avatar
    ಮಾಯ್ಸ
    ಸೆಪ್ಟೆಂ 30 2011

    ನೋಡಿ .. ಬಿಹಾರದಂತಹ ರಾಜ್ಯಗಳಲ್ಲಿ ದಿನಕ್ಕೆ ೩೫ ರೂ ಗೆ ಒಬ್ಬ ಮನುಷ್ಯ ಸುಮಾರಾಗಿ ಬದುಕಬಹುದು. ಆದರೆ ನಮ್ಮ ದೇಶ-ದಲ್ಲಿ ಆದಾಯ-ತೆರಿಗೆ ಯಿಂದ ಬಡತನದ ಮಟ್ಟದ ವರೆಗೂ ಇಡೀ ೧೦೦ ಕೋಟಿ ಮಂದಿಯನ್ನು ಒಟ್ಟಿಗೆ ನೋಡುವುದು ತಪ್ಪು.

    ಕರ್ನಾಟಕದಲ್ಲಿ ಬದುಕಲು ಹೆಚ್ಚು ದುಡ್ಡು ಬೇಕು ಬಿಹಾರಕ್ಕಿಂತ, ಏಕೆಂದರೆ ಇಲ್ಲಿ ‘ಬದುಕಲು ತಗಲುವ ವೆಚ್ಚ’ ಹೆಚ್ಚು.

    ಈ ಬಗೆಯ ತೀರ್ಮಾನಗಳನ್ನು ಕೇಂದ್ರಕ್ಕಿಂತ ಆ ಆ ರಾಜ್ಯಗಳು ಮಾಡುವುದು ಸರಿ ಹಾಗು ಒಳಿತು.

    ಉತ್ತರ

Leave a reply to ಮಾಯ್ಸ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments