ವಿಷಯದ ವಿವರಗಳಿಗೆ ದಾಟಿರಿ

ಜುಲೈ 6, 2012

ಕಾಡುವಂತ ಗೆಳೆಯ ಬೇಕು..

‍ನಿಲುಮೆ ಮೂಲಕ

– ಅನಿತ ನರೇಶ್ ಮಂಚಿ

ಪ್ರತಿ ಕ್ಷಣವೂ ರಚ್ಚೆ ಹಿಡಿದ ಪುಟ್ಟ ಮಗುವಿನಂತೆ ನನಗೇ ಜೋತು ಬೀಳುವ ಇವನು ಇವತ್ತು ಹೀಗೆ ತಣ್ಣಗೆ ಮಲಗುವುದು ಎಂದರೆ..
ಪಾದರಸದಂತೆ ಚುರುಕಾಗಿದ್ದವನು, ಈಗ ಕೆಲವು ದಿನಗಳಿಂದ ಯಾಕೋ ಹೀಗೇ.. ನಾನಾಗಿ ಮಾತನಾಡಿದರೆ ಬೇಕೋ ಬೇಡವೋ ಎಂಬ ಉತ್ತರ.. ಕೆಲವೊಮ್ಮೆ ಇವನೇನು ಹೇಳುತ್ತಿದ್ದಾನೆ ಎಂದು ನನಗರಿವಾಗದಂತೆ ಅಸ್ಪಷ್ಟ.. ಒಮ್ಮೊಮ್ಮೆ ಸುಮ್ಮನೆ ಕುಳಿತನೆಂದರೆ ಎಷ್ಟು ಮಾತನಾಡಿಸಿದರೂ ಮಾತನಾಡಲಾರ..  ತನ್ನಷ್ಟಕ್ಕೆ ತಾನೇ ಸರಿ ಹೋದಾನು ಎಂದು ನನ್ನದೇ ಚಿಂತೆಗಳಲ್ಲಿ ಮುಳುಗಿ ಇವನ ಬಗ್ಗೆ ಹೆಚ್ಚು ಗಮನ ನೀಡಿರಲಿಲ್ಲ.
ಇಂದು ಹತ್ತಿರವಿದ್ದವನನ್ನು ತಟ್ಟಿ ಎಬ್ಬಿಸಹೋದರೆ ಕೊರಡಿನಂತೆ ಸುಮ್ಮನೆ ಬಿದ್ದುಕೊಂಡಿದ್ದ.ನನಗೂ ಇವನ ಸಿಟ್ಟು ಸೆಡವು ನೋಡಿ ಬೇಸರವಾಗಿತ್ತು. ಕೊಂಚ ಜೋರಾಗಿ ಅಲುಗಾಡಿಸಿದೆ.ಉಹೂಂ.. ಯಾವುದೇ ರೀತಿಯ ಸ್ಪಂದನವಿಲ್ಲ..
ಕಂಡವರೆಲ್ಲ ಹೇಳುತ್ತಿದ್ದರು.. ಸಾಕೇ..  ಅದೆಷ್ಟು ಅಂತ  ಇಡೀ ದಿನ ಅವನೊಡನೆ ಇರ್ತೀಯ.. ನಿನ್ನ ಕೈ ಕೂಸಿನಂತಾಗಿದ್ದಾನೆ ಅವನು .. ಸತ್ಯ ಎಂದರೆ ನಾನೆ ಇವನ ಕೂಸಾಗಿದ್ದೆ. ನನ್ನ ನೋವು ನಲಿವು ಎಲ್ಲವೂ ಇವನೊಡನೆ ಹಂಚಿಕೊಳ್ಳುತ್ತಿದ್ದೆ.. ನನ್ನೆಲ್ಲ ಮಿಡಿತಗಳನ್ನು ಅರಿತವನಂತೆ ನಾನು ಪಿಸುನುಡಿದರೂ ಕೇಳಿಸಿಕೊಳ್ಳುತ್ತಿದ್ದ.. !!
ಛೇ.. ಏನಾಗಿದೆ ಇವನಿಗೆ.. ??ನನ್ನೆಲ್ಲವೂ ಆಗಿದ್ದವನು ಇಷ್ಟು ಸುಲಭವಾಗಿ ನನ್ನನ್ನಗಲಿ ಹೋಗುವುದೆಂದರೆ..  ನನ್ನ ಒಳಗೇನೋ ಕುಸಿದು ಬಿದ್ದ ಅನುಭವ.. ಮುಂದಕ್ಕೆ ಯೋಚಿಸಲೂ ಸಾಧ್ಯವಾಗದೇ ಬಿಕ್ಕತೊಡಗಿದೆ.
… ಅಯ್ಯೋ .. ಅದಕ್ಯಾಕಿಷ್ಟು ಅಳು.. ಎಲ್ಲಿ ನಿನ್ನ ಸಿಮ್ ತೆಗೆದು ಈ ಹೊಸ ಮೊಬೈಲಿಗೆ  ಹಾಕು.. ಆ ಓಬಿರಾಯನ ಕಾಲದ ಮೊಬೈಲನ್ನು ಎಲ್ಲಿಯಾದರೂ ಜಾಗ್ರತೆ ತೆಗೆದಿಡು.. ಮ್ಯೂಸಿಯಮ್‌ನವರಿಗೆ ಬೇಕಾದೀತು.. ಎಂದು ನನ್ನ ಕಡೆಗೊಂದು ಚಂದದ ಬಾಕ್ಸ್ ತಳ್ಳಿದರು ಇವರು..!!
Read more from ಲೇಖನಗಳು

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments