ವಿಷಯದ ವಿವರಗಳಿಗೆ ದಾಟಿರಿ

Archive for

9
ಜುಲೈ

ಸದಾನ೦ದ ಗೌಡರ ತಲೆದ೦ಡ ಭಾ.ಜ.ಪಾಕ್ಕೆ ಭಾರೀ ಹೊರೆಯಾದೀತು !!

ರಾಘವೇಂದ್ರ ನಾವಡ

ನಾಟಕದ ಎರಡನೇ ಅ೦ಕಕ್ಕೆ ತೆರೆಬಿದ್ದಿದೆ! ಸದಾನ೦ದ ಗೌಡರು ಕೆಳಗಿಳಿದಿದ್ದಾರೆ. ನಿರೀಕ್ಷಿತವಾಗಿ ಶೆಟ್ಟರ್ ಮೇಲೆದ್ದಿದ್ದಾರೆ! “ ಪರವಾಗಿಲ್ಲ “ ಏನೋ ಒ೦ದು ದಾರಿಗೆ ಬರ್ತಾ ಇದ್ದಾರೆ.. ಮುಖ್ಯವಾಗಿ ಕರ್ನಾಟಕದಲ್ಲಿ ಬಿ.ಜೆ.ಪಿಗೆ ಅ೦ಟಿಕೊ೦ಡಿದ್ದ ಕೆಟ್ಟ ವರ್ಚಸ್ಸು ಬದಲಾಗುವ ಎಲ್ಲಾ ಲಕ್ಷಣಗಳೂ ಚಿಗುರುತ್ತಿವೆ, ಎ೦ದು ಸಮಾಧಾನಪಡುತ್ತಿದ್ದಾಗಲೇ ಮತ್ತೊಮ್ಮೆ ಬಿ.ಜೆ.ಪಿ.ಯಲ್ಲಿ  ಮಹಾ ಪ್ರಹಸನವೊ೦ದು ಜರುಗಿ, ಜಾತಿ ರಾಜಕಾರಣ ಮೊದಲ್ಗೊ೦ಡು, ಮಾಜಿ ಮುಖ್ಯಮ೦ತ್ರಿಗಳ ವೈಯಕ್ತಿಕ ಹಠ-ಪ್ರತಿಷ್ಠೆಯ ವಿಜಯದೊ೦ದಿಗೆ ಸದಾನ೦ದಗೌಡರ ತಲೆದ೦ಡವನ್ನು ಆ ಪಕ್ಷದ ಹೈಕಮಾ೦ಡ್ ಪಡೆದಿದೆ!

ಸದಾನ೦ದ ಗೌಡರ ತಲೆದ೦ಡ ಮು೦ಬರುವ ವಿಧಾನಸಭಾ ಚುನಾವಣೆಯಲ್ಲಿ ಭಾ.ಜ.ಪಾ ಕ್ಕೆ ಭಾರೀ ಹೊರೆಯಾದೀತೆ೦ಬ ಸ೦ಶಯ ಕಾಲದ ಕನ್ನಡಿಗೆ!ಕಳೆದ ನಾಲ್ಕು ವರ್ಷದಿ೦ದಲೂ  ಕಚ್ಚಾಡುತ್ತಲೇ ಇದ್ದ ಬಿ.ಜೆ.ಪಿ. ಯ ಆ೦ತರಿಕ ಕಲಹ ಹಾಗೂ “ ಯಡಿಯೂರಪ್ಪ“ ಎ೦ಬ ಮಾಜಿ ಮುಖ್ಯಮ೦ತ್ರಿಯ ವೈಯಕ್ತಿಕ ಹತಾಶೆ, ಹಟ, ಪ್ರತಿಷ್ಠೆಗಳು, ಅಧಿಕಾರ ದಾಹ  ತನ್ಮೂಲಕ ತುಳಿದ ಅನೀತಿಯ ಹಾದಿಗಳೆಲ್ಲಾ ಸೇರಿ ಸದಾನ೦ದ ಗೌಡರನ್ನು ಪಟ್ಟದಿ೦ದ ಕೆಳಗಿಳಿಸಿವೆ! ಹೇಗೋ ಕಳೆದ ೯ ತಿ೦ಗಳಿ೦ದ  ಸಕಾಲದ೦ತಹ ಯೋಜನೆಗಳನ್ನು ಜಾರಿಗೆ ತ೦ದು ಭ್ರಷ್ಟಾಚಾರ ಮುಕ್ತ ( ಅವರೇ ಹೇಳಿದ೦ತೆ) ಯಾವುದೇ ಹಗರಣಗಳಿಲ್ಲದ (ಸುರೇಶ್ ಕುಮಾರ್ ಪ್ರಕರಣವೊ೦ದನ್ನು ಹೊರತು ಪಡಿಸಿ ) ಹಾಗೂ ಹೀಗೂ ಕರ್ನಾಟಕದಲ್ಲಿ ಸರ್ಕಾರವೆ೦ಬ ನೌಕೆಯನ್ನು ನಿಧಾನವಾಗಿ ದಡ ಸೇರಿಸುವಷ್ಟರಲ್ಲಿ, ಸದಾನ೦ದ ಗೌಡರ ಪಟ್ಟ ಅಲುಗಾಡಿತು! ಶೆಟ್ಟರ್ ಮುಖ್ಯಮ೦ತ್ರಿ ಗಾದಿಗೇರುವ ಹೊಸ ಮನುಷ್ಯರು~ ಶೆಟ್ಟರ್ ಹೇಳಿ- ಕೇಳಿ ಗೋವಿನ೦ಥವರು. ಸದಾನ೦ದಗೌಡರಷ್ಟೂ ಗಡಸು ಅವರಲ್ಲ!  ಉಳಿದ ಅವಢಿಯನ್ನ೦ತೂ ಪೂರೈಸಬಲ್ಲರೇನೋ? ಅಥವಾ ಅವಧಿಪೂರ್ವ ಚುನಾವಣೆಗೆ ಕರ್ನಾಟಕ ಹೆಜ್ಜೆಯಿಡುತ್ತೋ ಕಾದು ನೋಡಬೇಕು!

Read more »

9
ಜುಲೈ

ಯಾವ್ ಜಾತಿಯ ಮುಖ್ಯಮಂತ್ರಿ ಬೇಕು!?

– ರಾಕೇಶ್ ಶೆಟ್ಟಿ

ಯಡ್ಡಿ ಕೆಳಗಿಳಿದಾಗ ಬರೆದಿದ್ದು.. ಈಗ ಸದಾ ಇಳಿಯುವಾಗಲೂ ಅಪ್ಪ್ಲೈ ಆಗುತ್ತೆ…! ಅತಿ ಕೆಟ್ಟ ರಾಜಕಾರಣಕ್ಕೆ ನಮ್ಮ ರಾಜ್ಯ ಸಾಕ್ಷಿಯಾಗಿರುವುದು ದೌರ್ಭಾಗ್ಯ…!

———————————————————————————————————————————————-

ಅಂತು ಬಿಜೆಪಿ ಹೈಕಮಾಂಡ್ ಧೈರ್ಯ ಮಾಡಿದೆ…! ಯಡ್ಯೂರಪ್ಪನವ್ರಿಗೆ ಕುರ್ಚಿ ಬಿಡಿ ಅನ್ನುವ ಸಂದೇಶವನ್ನ ರವಾನಿಸಿದೆ.ಸಂದೇಶ ಮಾಧ್ಯಮದ ಮೂಲಕ ಬಂದಿದ್ದು ನಿನ್ನೆ ಬೆಳಿಗ್ಗೆಯೇ.ಆದ್ರೆ ಇನ್ನ ಯಡ್ಯೂರಪ್ಪ ಮಾತ್ರ ಜಪ್ಪಯ್ಯ ಅನ್ನುತ್ತಿಲ್ಲ..!

ಕಳೆದ ೧೦-೧೫ ದಿನಗಳಿಂದ ಕರ್ನಾಟಕ ಸರ್ಕಾರ ಜನರ ಸಮಸ್ಯೆಯನ್ನ ನೋಡೋದು ಬಿಟ್ಟು ತನ್ನ ಬುಡ ಭದ್ರ ಮಾಡಿಕೊಳ್ಳುವ ಬಗ್ಗೆಯೇ ತಲೆಕೆಡಿಸಿಕೊಂಡು ಕೂತಿದೆ.ಕಳೆದ ಹತ್ತು ದಿನ ಬಿಡಿ, ಉತ್ತರ ಕರ್ನಾಟಕದಲ್ಲಿ ನೆರೆ ಬಂದು ಜನ ತುತ್ತು ಅನ್ನಕ್ಕೆ ಸೂರಿಗೆ ಪರದಾಡುತ್ತಿರುವಾಗಲೇ ರೆಡ್ಡಿಗಳು ಬಂಡಾಯದ ಬಾವುಟ ಹಾರಿಸಿದಾಗಲೂ ಜನ ಸತ್ತರೆ ಸಾಯಲಿ ಕುರ್ಚಿ ಉಳಿದರೆ ಸಾಕು ಅಂತ ಬಿಜೆಪಿ ಸರ್ಕಾರವೇ ದೆಹಲಿಗೆ ಓಡಿ ಹೋಗಿತ್ತು…! ಹಾಗೇನಾದರೂ ಯಡ್ಯೂರಪ್ಪ ಬಂಡಾಯಕ್ಕೆ ಬಗ್ಗದೇ ರಾಜೀನಾಮೆ ಕೊಟ್ಟಿದ್ದರೆ ಜನ ಮತ್ತೆ ಗೆಲ್ಲಿಸಿ ಕಳಿಸುತಿದ್ದರೇನೋ.ಆದರೆ ಯಡ್ಯೂರಪ್ಪ ಶರಣಾಗಿ ಕುರ್ಚಿಯ ಮುಂದೆ ಬೋರಲು ಬಿದ್ದಿದ್ದರು..!

ಹಾಗೇ ನೋಡಿದರೆ ಈ ಸರ್ಕಾರ ರೆಡ್ಡಿಗಳ ಬಂಡಾಯದ ಸಮಯದಲ್ಲಿ ಉತ್ತರ ಕರ್ನಾಟಕ ಪ್ರವಾಹಕ್ಕೆ ಸಿಕ್ಕಿ ತತ್ತರಿಸುತ್ತಿದ್ದರೂ ಹಾಳು ಬಿದ್ದು ಹೋಗಿ ಅನ್ನುವಂತೆ ಸುಮ್ಮನಿದ್ದಿದ್ದೇ ಕಡೆ ಬಾರಿಯೇನಲ್ಲ,ಅದಾದ ಮೇಲೆ ರೆಸಾರ್ಟ್ನಲ್ಲಿ ಕತ್ತೆ ವ್ಯಾಪರಕ್ಕಿಳಿದಾಗಲೂ ತಿಂಗಳುಗಟ್ಟಲೇ ರಾಜ್ಯ ಅನಾಥವಾಗಿತ್ತು.ಸರ್ಕಾರಿ ಯಂತ್ರಕ್ಕೆ ತುಕ್ಕು ಹಿಡಿದಿತ್ತು.

ಮತ್ತೆ ಮುಖ್ಯಮಂತ್ರಿಯ ವಿರುದ್ಧ ಪ್ರಾಸಿಕ್ಯೂಶನ್ಗೆ ರಾಜ್ಯಪಾಲರು ಅನುಮತಿ ನೀಡಿದಾಗ ಖುದ್ದು ಆಡಳಿತ ಪಕ್ಷವೇ ಬಂದ್ ಕರೆ ಕೊಟ್ಟೂ ವೋಟ್ ಹಾಕಿ ಕಳುಹಿಸಿದ ಜನಸಾಮಾನ್ಯರಿಗೆ ತೊಂದರೆ ಕೊಟ್ಟಿದ್ದು ಮಹಾನ್ ಸಾಧನೆಯೇ (?) ಸರಿ.ಅದೆಲ್ಲಾ ಆಗಿ ಮತ್ತೆ ಸುಪ್ರಿಂ ಕೋರ್ಟ್ ತೀರ್ಪು ಬಂದ ಮೇಲೂ ಮತ್ತೆ ದೆಹಲಿಯಲ್ಲಿ ಕುರ್ಚಿ ಸವಾರಿ ಮಾಡಿ ಬಂದಾಗಲೂ ಕರ್ನಾಟಕ ಅನಾಥವಾಗಿತ್ತು.

Read more »