ವಿಷಯದ ವಿವರಗಳಿಗೆ ದಾಟಿರಿ

Archive for

18
ಜುಲೈ

ಮೊಬೈಲುಗಳಲ್ಲಿ ಕನ್ನಡದ ಬೆಂಬಲ ಬರಲಿ

-ರವಿ ಸಾವ್ಕರ್

 

HTC ಕಂಪನಿಯವರು  ತಮಿಳು, ಹಿಂದಿ ,ಮರಾಠಿ ಭಾಷೆಗಳ ಬೆಂಬಲವನ್ನು ಕೊಡುಲು ಮುಂದಾಗಿರುವ  ಸುದ್ದಿ ಬಂದಿದೆ. ಆದರೆ ಕನ್ನಡ ಭಾಷೆಯ ಬೆಂಬಲದ ಬಗೆಗೆ  ಪ್ರಸ್ತಾಪವೂ ಮಾಡಿಲ್ಲ. ಕನ್ನಡದಲ್ಲಿ ಸಹ ಮೊಬೈಲುಗಳನ್ನು ಹೊರತನ್ನಿ ಎಂದು HTC ಕಂಪನಿಯವರಿಗೆ ತಿಳಿಸಬೇಕಾಗಿದೆ.

ಅಂತರ್ಜಾಲದಲ್ಲಿ ಭಾರತೀಯ ಭಾಷೆಗಳ ಬಳಕೆ ೪೦% ಅಷ್ಟು ಹೆಚ್ಚಾಗಿದೆ ಎಂಬ ವರದಿ ಇದೆ. ಯಾಹೂ ಮೇಯ್ಲ್, gmail ಎಲ್ಲದರಲ್ಲೂ ಕನ್ನಡವೂ ಸೇರಿದಂತೆ ಹಲವಾರು ಭಾರತೀಯ ಭಾಷೆಗಳಲ್ಲಿ ಲಭ್ಯವಿರುವುದು ನೋಡಬಹುದು. Facebook ನಲ್ಲಿ ಸಹ ೯೩% ಅಷ್ಟು ಕನ್ನಡಕ್ಕೆ ನುಡಿಬದಲು ಆಗಿರುವುದನ್ನು ಗಮನಿಸಬಹುದು. ಅಷ್ಟೆ ಅಲ್ಲದೆ wiktionary ಯಲ್ಲಿ ಎರಡು ಲಕ್ಶಕ್ಕೂ ಹೆಚ್ಚು ಕನ್ನಡದ ಪದಗಳನ್ನು  ಹೊಂದಿದ್ದು, ೧೫ ನೇ ಸ್ಥಾನದಲ್ಲಿದೆ.
ಮೊಬೈಲುಗಳು ಕನ್ನಡದ ಬೆಂಬಲ ಕೊಡುವುದು ಯಾಕೆ ಮುಖ್ಯ?
ಕೆಲ ತಿಂಗಳ ಹಿಂದೆ “mobile governance’ ಗೆ ಆದ್ಯತೆ ಕೊಡಲಾಗುವುದು ಎಂಬ ಸುದ್ದಿ ಬಂದಿತ್ತು. ಮ್ಫುಂದ್ನೆ  ಬಿಲ್ಲು, ಎಲೆಕ್ಟ್ರಿಸಿಟಿ ಬಿಲ್ಲು ಗಳನ್ನು ಮೊಬೈಲುಗಳಿಂದಲೇ ಕಟ್ಟಬಹುದಾಗುತ್ತದೆ. ಗ್ಯಾಸ್ ಬುಕ್ ಮಾಡಿದಾಗ, ಏಟೀಎಂ ಗಳಿಂದ ಹಣ ತೆಗೆದಾಗ ತಕ್ಷಣವೇ ಎಸೆಂಎಸ್ ಗಳ ಮೂಲಕ ಮಾಹಿತಿ ನಮ್ಮ ಬಳಿ ಬಂದು ಸೇರುತ್ತದೆ.
ಹೀಗಿರುವಾಗ ನಾವು ಬಳಸುವ ಫೊನ್ ಗಳಲ್ಲಿ ಕನ್ನಡದ ಬೆಂಬಲವೇ ಇಲ್ಲದೇ ಹೋದಾಗ ಈ ಸೇವೆಗಳನ್ನು ಕನ್ನಡದಲ್ಲಿ ಸಹ ಕೊಡಿ ಎಂದು ಕೇಳಲು/ಕೊಡಲು ಆಗುವುದಿಲ್ಲ. ಬೆಂಗಳೂರು ಟ್ರಾಫ಼ಿಕ್ ಪೋಲಿಸ್ ನವರು ಸಹ ಕನ್ನಡದಲ್ಲಿ ರಸೀತಿ ಕೊಡಿ ಎಂದು ಕೇಳಿದಾಗ ತಾವು ಬಳಸುವ ಬ್ಲಾಕ್ಬೆರಿ ಫೊನ್ ನಲ್ಲಿ ಕನ್ನಡದ ಬೆಂಬಲ ಇಲ್ಲ, ಹಾಗಾಗಿ ಕನ್ನಡದಲ್ಲಿ ರಸೀತಿ ಕೊಡಲು ಆಗದು ಎಂದು ತಿಳಿಸಿದ್ದರು.
 ತಂತ್ರಜ್ಞಾನ ಎಷ್ಟು ಮುಂದೆ ಹೋದರೇನು , ಕನ್ನಡಿಗನಿಗೆ ಅದನ್ನು ಬಳಸಲು ಆಗದಿದ್ದರೆ ಅದರಿಂದ ಏನು ಪ್ರಯೋಜನ?
18
ಜುಲೈ

ಬಡವರ “ಕೊಳಚೆ” ಉಳಿದವರ “ಶುದ್ಧತೆ”

ಡಾ!! ಅಶೋಕ್ ಕೆ.ಆರ್

Imageಸನ್ಮಾನ್ಯ ಶ್ರೀ ಶ್ರೀ ಶ್ರೀ ಪೇಜಾವರ ಸ್ವಾಮಿಗಳಿಗೆ ಸೆಡ್ಡು ಹೊಡೆಯಲು ಮತ್ತೊಬ್ಬ ಹುಟ್ಟಿದ್ದಾನೆ. ಶ್ರೀಗಳು ಮಾಂಸಾಹಾರಿಗಳ ಪಕ್ಕ ಕುಳಿತು ಊಟ ಮಾಡಿದರೆ ಸಸ್ಯಾಹಾರಿ ಬ್ರಾಹ್ಮಣರೂ ಮಾಂಸಾಹಾರಿಗಳಾಗಿಬಿಡುತ್ತಾರೆಂದು ಗಾಬರಿಗೊಂಡಿದ್ದರು. ನಂತರ ತಮ್ಮ ಹೇಳಿಕೆಯ ಬಗ್ಗೆ ಸಮಜಾಯಿಷಿಗಳನ್ನೂ ಕೊಟ್ಟಿದ್ದರು. ಇಂದು ಕರ್ನಾಟಕ ಅನುದಾನರಹಿತ ಶಾಲೆಗಳ ಸಂಘ ಕುಸ್ಮಾದ ಅಧ್ಯಕ್ಷ ಜಿ.ಎಸ್. ಶರ್ಮರವರು ಶಿಕ್ಷಣ ಹಕ್ಕು ಕಾಯ್ದೆಯನ್ನು ವಿರೋಧಿಸುತ್ತ “ಸಮುದ್ರಕ್ಕೆ ಕೊಳಚೆ ನೀರು ಬಂದು ಸೇರಿದರೆ ಇಡೀ ಸಮುದ್ರವೇ ಕೊಳಚೆಯಾಗುತ್ತದೆ. ನೀರು ಯಾವಾಗಲೂ ಶುದ್ಧ ಆಗಿರಬೇಕು. ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಸಂಸ್ಕೃತಿ ವಿಭಿನ್ನ. ಬಡ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡ ಮರುದಿನವೇ ಉಳಿದ ಪೋಷಕರು ಬಂದು ಮಕ್ಕಳ ವರ್ಗಾವಣೆಗೆ ಪತ್ರ ಕೇಳುವ ಅಪಾಯವಿದೆ. ಆದ್ದರಿಂದ ಕುಸ್ಮಾ ಶಾಲೆಗಳಲ್ಲಿ ಆರ್.ಟಿ.ಐ ಕಾಯ್ದೆ ಅನುಷ್ಠಾನ ಸಾಧ್ಯವಿಲ್ಲ” ಎಂದು ‘ಅಮೋಘ ವಿವೇಕಭರಿತವಾದ’ ಹೇಳಿಕೆಯನ್ನಿತ್ತಿದ್ದಾರೆ. ಈ ಹಾಳು ವಿಚಾರವಂತರು, ಪ್ರಗತಿಪರರು ಈ ಹೇಳಿಕೆಗೂ ವಿರೋಧ ವ್ಯಕ್ತಪಡಿಸುತ್ತಾರಲ್ಲ! ಎಂಥ ಕೆಟ್ಟ ಮನಸ್ಥಿತಿಯವರಿರಬೇಕು ಇವರೆಲ್ಲ?!

ಒಂದಷ್ಟು ಹಿಂದೆ ಸಾಗಿ ನೋಡಿದಾಗ –
          Read more »