ವಿಷಯದ ವಿವರಗಳಿಗೆ ದಾಟಿರಿ

Archive for

16
ಜುಲೈ

ಕೇಸರೀಕರಣ: ದಾಯಾದಿಗಳ ಕಲಹ

– ಸಂತೋಷ್ ಕುಮಾರ್ ಪಿಕೆ

ಕರ್ನಾಟಕದ ಪ್ರಾಥಮಿಕ ಶಾಲಾಪಠ್ಯದಲ್ಲಿ ಹೊಸ ಪಠ್ಯಕ್ರಮವನ್ನು ಸೇರ್ಪಡೆ ಮಾಡುತ್ತಿರುವ ಕುರಿತು ಎರಡು ಬಣಗಳ ನಡುವೆ ವ್ಯಾಪಕವಾದ ಚರ್ಚೆಯಾಗುತ್ತಿರುವುದು ಒಳ್ಳೆಯ ಸಂಗತಿ. ಬಿ.ಜೆ.ಪಿಯವರು ಹೊಸಪಠ್ಯಕ್ರಮವನ್ನು ಕೇಸರೀಕರಣವೆಂದೂ ಆದರೆ ಅದು ವಿರೋಧಿ ಬಣಗಳು ತಿಳಿದುಕೊಂಡಿರುವ ರೀತಿಯದ್ದಲ್ಲ ಎಂತಲೂ ಹಾಗೂ ಅದರ ವಿರೋಧಿ ಗುಂಪು ಅದು ಕೇಸರೀಕರಣ ಪ್ರಕ್ರಿಯೆ ಎಂತಲೂ ನಿರಪಯುಕ್ತವಾದ ಚರ್ಚೆಯನ್ನು ಬಿರುಸಾಗಿ ನಡೆಸುತ್ತಿದ್ದಾರೆ. ಪ್ರಸ್ತುತ ಬರಹದಲ್ಲಿ ಆ ಚರ್ಚೆಯಲ್ಲಿ ಪಾಲ್ಗೊಂಡವರು ಬೇರೆ ಬೇರೆ ತುದಿಯಲ್ಲಿ ನಿಂತಂತೆ ಭಾಸವಾದರೂ ಇಬ್ಬರೂ ಒಂದೇ ಸೇತುವೆಯ ಮೇಲೆ ನಿಂತಿರುವುದನ್ನು ನಿದರ್ಶಿಸುವ ಪ್ರಯತ್ನವನ್ನು ಮಾಡಲಾಗುವುದು. ಮೊದಲನೆಯದಾಗಿ ಬಿ.ಜೆ.ಪಿ.ಬಣದ ವಾದದಿಂದ ಪ್ರಾರಂಭಿಸುತ್ತೇನೆ.

ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಡಗೆ ಕಾಗೇರಿಯವರು ಇತ್ತೀಚೆಗೆ ತಮ್ಮ ಲೇಖನದಲ್ಲಿ ಕೇಸರೀಕರಣದ ಕುರಿತು ಎಲ್ಲರಿಗೂ ಗೊಂದಲವಿದ್ದು, ಅದರ ಕುರಿತು ಸ್ಪಷ್ಟತೆ ಅದನ್ನು ವಿರೋಧಿಸುವ ವಿರೋಧಿಗಳಿಗಿಲ್ಲ ಎಂಬ ಮಾತನ್ನು ಹೇಳಿದ್ದಾರೆ. ನನ್ನ ಪ್ರಕಾರ, ಕೇಸರೀಕರಣದ ಕುರಿತು ಅದರ ವಿರೋಧಿಗಳಿಗಿರಲಿ, ಅದರ ಸ್ವಯಂ ಪ್ರತಿಪಾದಕರಿಗೇ ಸರಿಯಾದ ಜ್ಞಾನ ಇರುವುದು ಅನುಮಾನ. ಏಕೆಂದರೆ ಇದುವೇ ಕೇಸರೀಕರಣ ಎಂದು ಸ್ಪಷ್ಟವಾಗಿ ಹೇಳುವ ಧೈರ್ಯ ಯಾರಿಗೂ ಇದ್ದಂತಿಲ್ಲ, ಕೇವಲ ಭಗವಾಧ್ವಜ ಹಿಡಿದುಕೊಂಡು ಮಾಡುವ ಕೆಲಸಗಳು ಮಾತ್ರ ಕೇಸರೀಕರಣವಾಗುತ್ತದೆಯೇ? ಖಂಡಿತ ಇಲ್ಲ, ಏಕೆಂದರೆ ಕೇಸರೀಕರಣ ಎಂಬುದು ಒಂದು ಐಡಿಯಾಲಜಿ, ನಿದರ್ಶಿ ಷ್ಟವಾಗಿ ಇಂತಿಂತಹ ಕೆಲಸಗಳನ್ನು ಮಾಡಬೇಕು ಎಂದು ನಿರ್ದೇಶನ ನೀಡುವ ವಿಚಾರಗಳ ಗುಚ್ಚ ಅದಾಗಿದೆ. ಹಾಗೂ ಕೇಸರೀಕರಣದ ಕುರಿತು ಯಾವುದೇ ಸಿದ್ಧಾಂತ (ಥಿಯರಿ)ದ ಜ್ಞಾನಶಿಸ್ತು (ಜ್ಞಾನಶಿಸ್ತಿನ ಅಗತ್ಯ ಇಲ್ಲ ಎಂದು ಬಿ.ಜೆಪಿ ಯವರು ಭಾವಿಸಿದ್ದರೂ ಕೂಡ) ಇಲ್ಲದಿರುವುದರಿಂದ ಜನರು ತಮ್ಮ ಮನಸೋಇಚ್ಚೆ ಅರ್ಥಮಾಡಿಕೊಳ್ಳಲು ಸಾಧ್ಯವಿದೆ.

Read more »

16
ಜುಲೈ

ನಿಜವಾಗಿ ಇದು ಯಡಿಯೂರಪ್ಪನವರ ಸೋಲು!!

ರಾಘವೇಂದ್ರ ನಾವಡ

ಅ೦ತೂ ಇ೦ತು ಗೌಡರು ಶೆಟ್ಟರಿಗೆ ದಾರಿ ಬಿಟ್ಟಿದ್ದಾರೆ! ಒ೦ದು ಹ೦ತದ ಗೊ೦ದಲಗಳಿಗೆಲ್ಲಾ ಸೂಕ್ತ ಪರಿಹಾರವನ್ನು ಬಾ.ಜ.ಪಾ ಹೈಕಮಾ೦ಡ್ ಕ೦ಡುಕೊ೦ಡಿದ್ದೂ ಅಲ್ಲದೆ, ಪರಿಹಾರಗಳ ಯಥಾವತ್ ಆನುಷ್ಠಾನವೂ ಆಗಿದೆ. ಜಗದೀಶ್  ಶೆಟ್ಟರ್ ಮುಖ್ಯಮ೦ತ್ರಿಯಾಗಿದ್ದಾರೆ!

ಸ್ವಲ್ಪ ಹಿ೦ದಕ್ಕೆ ಹೋಗೋಣ: ಯಡಿಯೂರಪ್ಪನವರ ಆಧಿಕಾರಾವಧಿಯ ಆರ೦ಭದ ದಿನಗಳು. ಶೆಟ್ಟರ್ ರನ್ನು ವಿಧಾನಸಭೆಯ ಅಢ್ಯಕ್ಷ ಪದವಿಗೆ ಆಯ್ಕೆ ಮಾಡಿದಾಗ ( ಇದರ ಹಿ೦ದಿದ್ದದ್ದು ಯಡಿಯೂರಪ್ಪನವರು.. ಶೆಟ್ಟರ್ ರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಿದರೆ, ತನ್ನ ಬಲವಾದ ಪ್ರತಿಸ್ಪರ್ಧಿಯೊಬ್ಬನನ್ನು ರ೦ಗದಿ೦ದ ಆಚೆ ತಳ್ಳಿದ೦ತಾಗುತ್ತದೆ೦ಬ ಚಾಣಾಕ್ಷ ನಡೆಯನ್ನು ಆಗ ಯಡಿಯೂರಪ್ಪ ಇಟ್ಟರು!) ಭಾರೀ ಬೇಸರ ಮಾಡಿಕೊ೦ಡು, ಮನಸ್ಸಿಲ್ಲದ ಮನಸ್ಸಿನಿ೦ದ ವಿಧಾನಸಭಾ ಸ್ಪೀಕರ್ ಸ್ಥಾನವನ್ನು ಶೆಟ್ಟರ್ ಒಪ್ಪಿಕೊ೦ಡಿದ್ದರು! ಆನ೦ತರ ಮ೦ತ್ರಿಯಾಗುವವರೆಗೂ ಕಾದರು.. ಇದೀಗ ಮುಖ್ಯಮ೦ತ್ರಿಯಾಗಿದ್ದಾರೆ! ಆದರೆ ವಿಪರ್ಯಾಸ ನೋಡಿ:

ಭವಿಷ್ಯದ  ಜನನಾಯಕನಾಗಬಲ್ಲ ಛಾತಿ ಹಾಗೂ ಅದೇ ತರಹದ ವರ್ಚಸ್ಸು  ಮತ್ತು ನಡತೆಯನ್ನು ಅದರೊ೦ದಿಗೆ ತನ್ನ ರಾಜಕೀಯ ಜೀವನವನ್ನು ಮೊದಲಿನಿ೦ದಲೂ ಕಟ್ಟಿಕೊ೦ಡು ಬ೦ದವರು ಜಗದೀಶ್ ಶೆಟ್ಟರ್! ಅವರು ಎಲ್ಲಾ ಪಕ್ಷಗಳಿಗೂ ಎಲ್ಲಾ ಕೋಮುಗಳಿಗೂ ಮಾನ್ಯರು! ಅಜಾತಶತ್ರು.. ಯಾರನ್ನು ಟೀಕಿಸಿದರೂ ಶೆಟ್ಟರ್ ರನ್ನು ಟೀಕಿಸಲು ಸ್ವಲ್ಪ ಹಿ೦ದೆ-ಮು೦ದೆ ನೋಡಬೇಕಾಗುವ೦ಥ ವ್ಯಕ್ತಿತ್ವ ಶೆಟ್ಟರ್ ರವರದ್ದು! ಆದರೆ ಶೆಟ್ಟರ್ ಗೊದಗಿದ  ದಯನೀಯ ಸ್ಠಿತಿಯೆ೦ದರೆ ಜನನಾಯಕನಾಗಿ ಅಧಿಕಾರ ಹಿಡಿಯಬೇಕಾಗಿದ್ದ ನಾಯಕನೊಬ್ಬ ಇ೦ದು ಕೇವಲ ಒ೦ದು ವರ್ಗದ ನಾಯಕನಾಗಿ ಅಧಿಕಾರಕ್ಕೆ ಬ೦ದಿದ್ದಾರೆ! ಇದು ಕರ್ನಾಟಕ ಜನತೆಯ ಸೋಲೋ ಅಥವಾ ಸ್ವತ: ಶೆಟ್ಟರ್ ಸೋಲೋ?

Read more »