ವಿಷಯದ ವಿವರಗಳಿಗೆ ದಾಟಿರಿ

Archive for

12
ಜುಲೈ

ಮಿಂಚು ಸ್ನೇಹ

– ಪ್ರಶಸ್ತಿ ಪಿ. ಸಾಗರ

ಹೊಸ ನೀರು ಬಂದಾಗ ಹಳೇ ನೀರು ಕೊಚ್ಕೊಂಡು ಹೋಗೋ ತರ ಹೊಸ ಗೆಳೆಯರು ಬಂದಾಗ ಹಳಬ್ರು ಮರ್ತೋಗೋದು ತುಂಬಾ ಕಾಮನ್ನು ಅನ್ನೋ ಹಾಗೆ ಆಗ್ತಾ ಇದೆಯಲ್ಲಾ ಈಗ. ಹೈಟೆಕ್ ಜಮಾನಾದಲ್ಲಿ ತುಂಡಾಗೋ ಹೈ ಸ್ಪೀಡ್ ಸಂಬಂಧಗಳ ಮಧ್ಯೆ ಅಲ್ಲೊಂದು ಇಲ್ಲೊಂದು ಬೆಸುಗೆಗಳು ಕಾಲದೊಂದಿಗೆ ಸವೆಯದೇ ಹಾಗೇ ಉಳ್ಕಂಡು ತಾವೆಷ್ಟು ಗಟ್ಟಿ ಅನ್ನೋದ್ನ ಸಾರ್ತಾ ಇರುತ್ತೆ. ಅದೇ ತರ ಕೆಲ ನೆನಪುಗಳೂ ಸಹ. ಎಷ್ಟೋ ಸಲ ಬಸ್ಸಲ್ಲಿ, ರೈಲಲ್ಲಿ ಹೋಗಿರ್ತೀವಿ.ಈ ತರ ಒಂದೂವರೆ ಘಂಟೆ ಇಂದ , ಒಂದು ದಿನದ ಪ್ರಯಾಣದಲ್ಲಿ ಜೊತೆಯಾಗೋ ಜನರು ನಿರೀಕ್ಷಿಸದ ಸಮಯದಲ್ಲಿ ಮೂಡೋ ಮಿಂಚಂತೆ ಮಿಂಚಿ ನಮಗೇ ಅರಿವಿಲ್ಲದಂತೆ ಆ ಪ್ರಯಾಣದ ಅವಧಿಗೆ ನಮ್ಮ ಸ್ನೇಹಿತರಾಗಿ ಹಾಗೇ ಮರೆಯಾಗಿ ಬಿಡ್ತಾರೆ.ಆದರೆ ಅವರಲ್ಲಿ ಎಷ್ಟೋ ಜನರ ಮಾತುಗಳು, ನೆನಪುಗಳು ಅವರ ಹೆಸರು ಮರ್ತೋದ್ರೂ ನೆನ್ಪಲ್ಲಿ ಉಳ್ದು ಬಿಡುತ್ತೆ.ಅಂಥದೇ ಕೆಲ ನೆನಪುಗಳ ಸುತ್ತ.. ಈ ಬರಹ

ನಮ್ಮೂರು ಸಾಗರದಿಂದ ಶಿವಮೊಗ್ಗಕ್ಕೆ ಒಂದೂವರೆ ಘಂಟೆ ದೂರ .ಈಗಿನ ಬೆಂಗಳೂರಿನ ಟ್ರಾಫಿಕ್ಕಿಗೆ ಹೋಲಿಸಿದ್ರೆ ಅದು ತೀರಾ ಹೆಚ್ಚು ಹೊತ್ತಾಗ್ದೇ ಇದ್ರೂ ಆಗ ನಮಗದು ಸ್ವಲ್ಪ ಜಾಸ್ತೀನೆ ಹೊತ್ತು.ಆಗ ಹೈಸ್ಕೂಲು ದಿನಗಳು. ಬಸ್ಸಲ್ಲಿ ಮೈಮರೆತು ನಿದ್ರೆ ಮಾಡಿದ್ರೆ ಪಕ್ಕಕ್ಕಿರೋರು ದುಡ್ಡು, ಬ್ಯಾಗು ಕದ್ಕೊಂಡು ಹೋಗ್ತಾರೆ ಅಂತ ಲೆಕ್ಕ ಇಲ್ಲದ, ರೆಕ್ಕೆ ಪುಕ್ಕ ಇಲ್ಲದ ಗಾಳಿ ಸುದ್ದಿ ಕಿವಿಗೆ ಬಿದ್ದಿದ್ರ ಪರಿಣಾಮನೋ ಏನೋ ನಾವೆಂತೂ ಬಸ್ಸಲ್ಲಿ ಒಬ್ನೇ ಹೋಗ್ತಾ ಪಕ್ಕಕ್ಕೆ ಬಂದು ಕೂರೋ ಅವ್ರುನ್ನ ಮೊದಲು ಗಮನಿಸ್ತಿದ್ದೆ. ಸ್ವಲ್ಪ ದೊಡ್ಡೋರು ಅಂದ್ರೆ ನೀವೆಲ್ಲಿಗೆ ಹೋಗೋವ್ರು ಅಣ್ಣಾ, ಶಿವಮೊಗ್ಗಕ್ಕಾ ಅಂತನೋ ಏನೋ ಮಾತಿಗೆಳ್ಯೋದು.ಕೆಲೋ ಸಲ ಅವ್ರೇ ನೀವೆಲ್ಲಿಗೆ ಹೋಗೋರು ಅಂತ ಮಾತಿಗೆ ಶುರು ಮಾಡೋರು. ತೀರಾ ಬಿಗುಮಾನ ಇಲ್ದೇ ಮಾತಾಡೋರಾದ್ರೆ ಇಬ್ರಿಗೂ ಒಳ್ಳೇ ಟೈಂ ಪಾಸ್

Read more »