ವಿಷಯದ ವಿವರಗಳಿಗೆ ದಾಟಿರಿ

Archive for

28
ಜುಲೈ

ನನ್ನ ಅಜ್ಜಿ

– ಚೇತನ್ ಕೆ.ವಿ

ಬಹಳ ವರ್ಷಗಳ ನಂತರ ನಾನು ನನ್ನ ಅಜ್ಜಿ ಊರು, ಮಂಜುಗುಡ್ಡೆಗೆ ಕಾಲಿರಿಸಿದ್ದೆ. ಒಮ್ಮೆ ನನ್ನ ಬಾಲ್ಯದ ದಿನಗಳೆಲ್ಲ ಕಪ್ಪುಬಿಳಪು ಚಿತ್ರದಂತೆ ತಟ್ಟನೆ ಕಣ್ಣೆದುರು ಬಂದು ಹೋಯಿತು. ಗಲ್ಲಿ ಗಲ್ಲಿಗೆ ಕಾಲಿರಿಸಿದಂತೆ ಮತ್ತೆ ಹಳೆ ನೆನಪಿನ ಪುಟಗಳು ತಿರುವುತಿತ್ತು. ಸುತ್ತ ಇಬ್ಬನಿ ಮುಸುಕಿದ ಪ್ರದೇಶ. ಬರೇ ಏರು-ಪೇರುಗಳ ಜಾಗಗಳು ಹೆಸರಿಗೆ ತಕ್ಕಂತೆ – ಮಂಜುಗುಡ್ಡೆ. ನಾನು ಈ ಊರು ಬಿಟ್ಟು ೨೫ ವರ್ಷಗಳ ಮೇಲಾಯಿತು. ಹೈಸ್ಕೂಲ್ ಮುಗಿಸಿ ತಂದೆ-ತಾಯಿ ಜೊತೆ ಊರು ಬಿಟ್ಟವನು ಮತ್ತೆ ಈ ಕಡೆ ಬಂದವನೆ ಅಲ್ಲ.ಆದರೂ ಅಲ್ಪ ಸ್ವಲ್ಪ ಬದಲಾವಣೆ ಬಿಟ್ಟರೆ ಹೇಳಿಕೊಳ್ಳುವಂತ change ಎನೂ ತೋರಲಿಲ್ಲ,ಅದೆ ನಾನಿರುವ ಬೆಂಗಳೂರು ವರ್ಷ ವರ್ಷಕ್ಕೂ ಎಂತ ಬದಲಾವಣೆ,೧ ವರ್ಷ ಯಾವುದಾದರು ಜಾಗಕ್ಕೆ ಹೋಗದಿದ್ದರೆ  ಮತ್ತೆ ಆ ಜಾಗ ಗುರುತು ಸಿಗೋದು ಕಷ್ಟವೆ ಸರಿ ಎಂದುಕೊಂಡು ಮೂಲೆಯ ಒಂದು ಪೆಟ್ಟಿಗೆಯಂತಹ ಅಂಗಡಿ ಹೊಕ್ಕೆ.

ನನ್ನ ಅಜ್ಜ ವೆಂಕಟರಾಜಪ್ಪನ ಹೆಸರು ಹೇಳಿ ಅವರ ಮನೆಯ ವಿಳಾಸ ಕೇಳಿ,ಅವನು ತೋರಿದ ದಾರಿ ಹಿಡಿದು ಹೊರಟೆ.

ಸರಿ ಸುಮಾರು ೨೫ ವರ್ಷಗಳ ನಂತರ ತನ್ನ ಅಜ್ಜನ ಮನೆಗೆ ಹೋಗುತ್ತಿರುವ ಸಂಭ್ರಮ ಒಂದು ಕಡೆಯಾದರೆ, ಅಜ್ಜ ಅಜ್ಜಿಯ ಗುರುತೆ ಮರೆತ ಬೇಸರ ಮತ್ತೊಂದೆಡೆ. ಅಮ್ಮ ಅಜ್ಜಿಯೋಂದಿಗೆ ಜಗಳವಾಡಿ ಊರು ಬಿಡಲೇ ಬೇಕು ಎಂದು ಹಟ ಹಿಡಿದು ಪಟ್ಟಣ ಸೇರಿದ ಮೇಲೆ ಈ ಕಡೆ ಮತ್ತೆ ತಲೆ ಹಾಕಿ ಸಹ ಮಲಗಿರಲಿಲ್ಲ.ಒಬ್ಬನೆ ಮಗನನ್ನು ಕಳೆದುಕೊಂಡು ಎಷ್ಟು ದುಃಖ ಪಟ್ಟಿದ್ದರೂ ಅಜ್ಜಿ ಎಂದುಕೊಳ್ಳುತ್ತಾ ಹೆಜ್ಜೆ ಮುಂದಿಟ್ಟೆ. ದಾರಿಯಲ್ಲಿ ವಿಳಾಸ ಕೇಳುತ್ತಾ ಅಂತು ಮನೆ ಎದಿರು ಬಂದೆ. ಹಾಳು ಬಿದ್ದ ಮನೆಯಂತಿದ್ದ ಆ ಮನೆಯನ್ನೆ ಹಾಗೆ ದಿಟ್ಟಿಸಿ ನೋಡಿದೆ.ಹೆಂಚಿನ ಮನೆ,ಮುಂದಿನ ಅಂಗಳ ತುಂಬೆಲ್ಲ ಹುಲ್ಲು ಬೆಳೆದು ಎತ್ತರವಾಗಿತ್ತು.ಹಾಗೆ gateನಂತೆ ಅಡ್ಡಲಾಗಿಟ್ಟಿದ್ದ ಮರದ ದಿಣ್ಣೆ ಸರಿಸಿ ಒಳ ಹೊಕ್ಕೆ. ಮನೆಯ ಹೆಬ್ಬಾಗಿಲ ಬಳಿ ಬಂದು ನಿಲ್ಲುತಿದ್ದ ಹಾಗೆ ಹೆಬ್ಬಾಗಿಲಿಗೆ ಹತ್ತಿದ ಒರಳೆ ಕಣ್ಣಿಗೆ ರಾಚಿತು.ಒಂದು ಭಾಗ ಪೂರ ತಿಂದು ಈಗಲೊ ಅಗಲೊ ಅನ್ನುವಂತಿತ್ತು.

ಒಣಗಿದ ಗಂಟಲಲ್ಲೆ ಮೂರು ಬಾರಿ ಅಜ್ಜಿ ಎಂದು ಜೋರಾಗಿ ಕೂಗಿದ ನಂತರ ಒಳಗಿಂದ ಬೆನ್ನು ಬಾಗಿಹೋದ ಅಜ್ಜಿ ಹಣೆಯ ಮೇಲೆ ಕೈ ಇಟ್ಟು “ಯಾರೂ…..” ಎಂದು ನಡುಗುವ ಆ ದನಿಯಲ್ಲೆ ಕೇಳುತ್ತಾ ಬಂದಳು.ಅಜ್ಜಿಯನ್ನು ನೋಡಿದಕೂಡಲೆ ಇದು ನನ್ನ ಅಜ್ಜಿಯೆ ಹೌದ ಎಂದೆನ್ನಿಸಿತು. ನೇರವಾಗಿದ್ದ ಬೆನ್ನು ಮುರಿದು ಬಾಗಿ ಹೋಗಿತ್ತು, ಹಲ್ಲುಗಳೆಲ್ಲ ಉದುರಿ ಹೋಗಿ Read more »