ಲಿಮಿಟ್ಟೆ ಇಲ್ಲವ?
– ಮಧು ಚಂದ್ರ
ಒಂದು ಕಾಲ ಇತ್ತು , ದಿನ ಪತ್ರಿಕೆಯ ಮುಖ ಪುಟ ಕೇವಲ ಸಾಧಕರು ಮತ್ತು ರಾಜಕೀಯ ಬೆಳವಣಿಗೆಗಳ ಲೇಖನಗಳಿಂದ ರಾರಜಿಸುತಿತ್ತು. ದಿನ ಕಳೆದಂತೆ ನಮ್ಮ ಸುತ್ತಲಿನ ಪರಿಸರದಲ್ಲಿ ಬೆಳವಣಿಗೆಯು ಸಹ ವೇಗವನ್ನು ಪಡೆದುಕೊಂಡಿತು. ಕೇವಲ ಸಾಧಕರಿಗೆ ಮೀಸಲಾದ ಮುಖ ಪುಟದಲ್ಲಿ ಇಂದು ಬ್ರಷ್ಟ ಭ್ರಷ್ಟಚರ ಅಧಿಕಾರಿಗಳು, ಸಮಾಜ ಘಾತುಕರು , ಹಿಂಸೆ ಮತ್ತು ಆತ್ಮ ಹತ್ಯೆಗಳ ಸುದ್ದಿ ಅಲಂಕರಿಸಿವೆ. ಅದರಲ್ಲೋ ಬ್ರಷ್ಟ ಅಧಿಕಾರಿಗಳು ಬಗ್ಗೆ ಲೇಖನವಿಲ್ಲದೆ ಇದ್ದರೆ ದಿನಪತ್ರಿಕೆಯ ಮುಖಪುಟಕ್ಕೆ ಕಳೆಗುಂದುತ್ತದೆ .
ಜವಾನ , ಜಲಗಾರ, ಬಸ್ ನಿರ್ವಾಹಕನಿಂದು ಹಿಡಿದು ಅಧಿಕಾರಿಗಳು, ರಾಜಕಾರಣಿಗಳು ಬ್ರಷ್ಟಚಾರವು ಸೃಷ್ಟಿಸಿದ ಹಲವು ಮುಖಗಳು ನಮ್ಮ ರಾಜ್ಯದ ಶಾಸಕನೊಬ್ಬ ಲಂಚ ಪಡೆಯುವಾಗ ಸಿಕ್ಕಿ ಹಾಕಿಕೊಂಡದ್ದು. ನಂತರ ಅದರಿಂದ ಜಾಗೃತರಾದ ಇತರ ರಾಜಕಾರಣಿಗಳು ಲಂಚ ಪಡೆಯುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿ. ಮುಂದೆ ಲಂಚ ಪಡೆಯುವಾಗ ಬಳಸುವ ವಾಮ ಮಾರ್ಗಗಳನ್ನು ಹುಡುಕಲು ಆರಂಬಿಸಿದರು ಎನ್ನುವ ವಿಚಾರ ನಿಮಗೆಲ್ಲ ಗೊತ್ತೇ ಇದೆ.
ತಮ್ಮ ಮೇಲೆ ಎಷ್ಟೇ ಆಕ್ರಮಣವಾದರೂ ಏನೇ ಅಗಲಿ ದಿನಕೊಂದು ಭರ್ಜರಿ ಬೇಟೆಯಾಡುವುದನ್ನು ನಮ್ಮ ಲೋಕಾಯುಕ್ತ ಹುಲಿಗಳು ಎಲ್ಲಿಯೂ ನಿಲ್ಲದೆ ಮುಂದುವರೆಸಿದ್ದಾರೆ. ಒಂದು ಕಡೆ ಅಣ್ಣ ಹಜಾರೆ ಗರ್ಜಿಸುತ್ತಿದ್ದರೆ , ಇನ್ನೊದು ಕಡೆ ಅದೇ ಸರ್ಕಾರ ಅಣ್ಣ ಹಜಾರೆಯ ತಂಡದ ಮೇಲೆ ಇದ್ದ ಬದ್ದ ಆರೋಪಗಳನ್ನು ಮಾಡುತ ಅಣ್ಣನ ಹುಟ್ಟಡಗಿಸುವ ಶತಾಯಗತಾಯ ಪ್ರಯತ್ನದಲ್ಲಿ ತೊಡಗಿದೆ… .
ಒಮ್ಮೆ ಒಬ್ಬ ಬ್ರಷ್ಟ ಅಧಿಕಾರಿಯ ಮನೆಗೆ ಲೋಕಾಯುಕ್ತರು ದಾಳಿ ಮಾಡಿದರೆಂದರೆ ಮಿನಿಮಮ್ ಒಂದು ನಾಲ್ಕು ಸೈಟಿನ ದಾಖಲೆಗಳು , ಒಂದೆರಡು ಕಾರು, ಒಂದು ಹತ್ತಿಪ್ಪತು ಎಕರೆ ತೋಟದ ದಾಖಲೆಗಳು , ಒಂದು ಕೆಜಿ ಚಿನ್ನ ..ಇತ್ಯಾದಿ ಹೀಗೆ ದಾಳಿ ಸಂಧರ್ಭದಲ್ಲಿ ವಶಪಡಿಸಿಕೊಂಡ ವಸ್ತುಗಳ ಪಟ್ಟಿ ನೀಡುತ್ತಾರೆ… ಸದ್ಯಕ್ಕೆ ಇಷ್ಟು ಸಾಕು ..
ಇಂದಿನ ಟಾಪಿಕ್ ಯಾಕೆ ಬಂತೆಂದರೆ,ಇಂದು ತಮ್ಮ ಕಾರ್ಯ ಕ್ಷೇತ್ರದಲ್ಲಿ ಸ್ವಚ್ಛ ಮತ್ತು ಶುಭ್ರ ಅಧಿಕಾರ ಮಾಡಿದವರು ಬಹಳ ಕಮ್ಮಿ. ಅಂತಹ ಅಧಿಕಾರ ನಡೆಸಿ ಅವರಿಗೆಲ್ಲ ಮಾದರಿಯಾದವರು ನಮ್ಮ ಕನ್ನಡ ಕವಿಯೊಬ್ಬರು..
ಮನೆ ಬಗ್ಗೆನೇ ಹೆಚ್ಚು ಪದ್ಯಗಳನ್ನು ಬರೆದ ಮೈಸೂರು ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿ, ಅವರು ಒಮ್ಮೆ ಸರಕಾರದ ಹೌಸಿಂಗ್ ಬೋರ್ಡಿನ ಮೇಲ್ವಿಚಾರಕರಗಿದ್ದರು. ಮನೆ ಬಗ್ಗೆನೇ ಹೆಚ್ಚು ಪದ್ಯಗಳನ್ನು ಬರೆದಿದ್ದರೋ ತಮ್ಮ ಜೀವಿತ ಅವಧಿಯ ಕೊನೆಗಾಲದಲ್ಲೂ ಒಂದು ಸ್ವಂತ ಮನೆ ಇರಲಿಲ್ಲ ಅವರಿಗೆ. ನಿಮಗೆ ಗೊತ್ತ ಹೌಸಿಂಗ್ ಬೋರ್ಡಿನ ಮೇಲ್ವಿಚಾರಕ ಅಂದ ಮೇಲೆ ತಮಗೆ ಎಷ್ಟು ಬೇಕು ಅಷ್ಟು ಸೈಟ್ಗಳನ್ನೂ ತಮ್ಮ ಹೆಸರಿಗೆ ಮತ್ತು ತಮ್ಮ ಬಂದುಗಳ ಹೆಸರಲ್ಲಿ ಪಡೆದು ಕೊಂಡಿರುತ್ತಾರೆ. ಅಂತಹುದರಲ್ಲಿ ಸ್ಪಟಿಕದಷ್ಟು ಶುಭ್ರವಾದ ಅಧಿಕಾರವನ್ನು ನಡೆಸಿದರು ನಮ್ಮ ಮೈಸೂರು ಮಲ್ಲಿಗೆ ಕವಿ ..
ನಿಮ್ಮ ಮನದಲ್ಲಿ ಒಂದು ಭಾವನೆ ಸದಾ ಇರಬಹುದು , ಬ್ರಷ್ಟಚಾರ ಕೇವಲ ರಾಜಕಾರಣಿಗಳು ಮತ್ತು ಸರ್ಕಾರೀ ಅಧಿಕಾರಿಗಳಿಗೆ ಮಾತ್ರ ಸಿಮಿತ ಎಂದು.. ಇಂದು ಸ್ವಜನ ಪಕ್ಷಪಾತ ಎನ್ನುವ ಬ್ರಷ್ಟಚಾರದ ಕುಡಿ ಅತ್ತ್ಯುತ್ತಮ ನಾಗರಿಕರ ಕಾರ್ಯ ಕ್ಷೇತ್ರವಾದ ಮಾಹಿತಿ ತಂತ್ರಜ್ಞಾನಕ್ಕೋ ವ್ಯಾಪಿಸಿದೆ.
ಸ್ವಜನ ಪಕ್ಷಪಾತವನ್ನು ಬೇರು ಸಮೇತ ಕಿತ್ತು ಸುಟ್ಟು ಹಾಕಿದರೆ ಮಾತ್ರ ಎಲ್ಲರೂ ಮುಕ್ತವಾದ ವಾತಾವರಣದಲ್ಲಿ ಕೆಲಸ ಮಾಡಲು ಮಾತ್ರ ಸಾಧ್ಯ ಇಲ್ಲದಿದ್ದರೆ ಗ್ರೀಕರು , ಪರ್ಷಿಯನ್ನರು , ಮೊಘಲರು ಮತ್ತು ಆಂಗ್ಲರು ನಡೆಸಿದ ಸಂಸ್ಕೃತಿ ಪುನರಾವರ್ತನೆಯಾಗುವುದರಲ್ಲಿ ಅನುಮಾನವಿಲ್ಲ …
ಚಿತ್ರ ಕೃಪೆ : ದಿ.ಹಿಂದು




