ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 17, 2012

2

ಬಹುಮಾನ ನೋ! ಅಪಮಾನ ನೋ !!

‍ನಿಲುಮೆ ಮೂಲಕ

ಮಧುಚಂದ್ರ ಭದ್ರಾವತಿ

ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಾಗ ಕೆಲವು ಹಿರಿಯ ಕವಿಗಳನ್ನು ಮತ್ತು ಖ್ಯಾತ ವಿಮರ್ಶಕರನ್ನು ಪತ್ರಕರ್ತರು ಸಂದರ್ಶಿಸಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಲು ಕೇಳಿ ಕೊಂಡರು. ಕೆಲವರು ಕನ್ನಡಕ್ಕೆ ಸಂದ ಬಹು ದೊಡ್ಡ ಗೌರವ ಎಂದು ಹೇಳಿ ಅಭಿನಂದಿಸಿದರು. ಮತ್ತೆ ಕೆಲವರು ತಮಗೆ ಪುರಸ್ಕಾರ ಸಂದಿಲ್ಲ ಎಂದು ಅವರನ್ನು ಹಿಯಾಳಿಸಿ ” ಜ್ಞಾನಪೀಠ ಪುರಸ್ಕಾರಕ್ಕೆ ಬೆಲೆಯೇ ಇಲ್ಲ , ಯಾರು ಬೇಕಾದರೂ ಪಡೆಯ ಬಹುದು ” ತುಂಬಾ ಕೆಳ ಮಟ್ಟದಲ್ಲಿ ಮಾತನಾಡಿದರು . ಅ ಹಿರಿಯ ಕವಿಗಳ ಹೆಸರು ಬೇಡ. ಯಾಕೆಂದರೆ ಅವರ ಸಾಧನೆಯು ಕಡಿಮೆ ಏನಿಲ್ಲ.

ಇದು ಕೇವಲ ಕಂಬಾರರಿಗೆ ತಟ್ಟಿದ ಬಿಸಿಯಲ್ಲ , ಅಂದು ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಕುವೆಂಪು ಅವರು ಅದರ ಬಿಸಿಗೆ ಹೊರತಲ್ಲ. ಮತ್ತೊಬ್ಬ ಖ್ಯಾತ ಕವಿ “ನೀವು ಕುವೆಂಪುರವರನ್ನು ಕವಿ ಎಂದು ಕರೆದರೆ , ನಾನು ಸಹ ಕವಿಯಲ್ಲ ” ಎಂದು ಘಂಟಘೋಷವಾಗಿ ಸಾರಿ ಹೇಳಿದರು. ಹಾಗೆ ಕೆಲವು ನವೋದಯ ಕಾಲದ ಒಂದು ವರ್ಗದ ಕವಿಗಳು ಇದನ್ನು ಬೆಂಬಲಿಸಿ , ಕುವೆಂಪು ಅವರ ಮೇಲೆ ಹರಿಹಾಯ್ದರು,(ಅ ವರ್ಗದ ಕವಿಯೋಬ್ಬರಿಗೆ ಕೊನೆಗೂ ಜ್ಞಾನಪೀಠ ಪ್ರಶಸ್ತಿ ಸಂದಿತು ಎನ್ನುವುದು ಇಲ್ಲಿ ಉಲ್ಲೇಖಾರ್ಹ ). ಕೊನೆಗೆ ಕುವೆಂಪು ಅವರಿಗಿದ್ದ ಅಭಿಮಾನಿಗಳ ಬೆಂಬಲ ನೋಡಿ,ಅವರೆಲ್ಲರೂ ಸುಮ್ಮನಾದರು. ಇದೆ ರೀತಿಯ ಅನುಭವ ಖ್ಯಾತ ನಾಟಕಕಾರ ಗಿರೀಶ್ ಕಾರ್ನಾಡ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಕೂಡ ಬಾಯಿ ಹದಗೆಡಿಸಿಕೊಂಡ ಕವಿ ವರ್ಗವು ಇತ್ತು.

ಕವಿಗಳನ್ನು ವಿಶಾಲ ಹೃದಯಿಗಳು ಎನ್ನುತ್ತಾರೆ ಯಾವ ಸಂಧರ್ಭದಲ್ಲಿ ಎನ್ನುವುದು ಇಲ್ಲಿ ಅಪವಾದವಾಗಿ ಬಿಟ್ಟಿದೆ.

ಇದಕ್ಕೆ ಟಾಂಗ್ ಕೊಡುವ ಸಂಧರ್ಭವೊಂದು ತುಂಬಾ ಹಿಂದೆ ಜರುಗಿತ್ತು. ಇಲ್ಲಿ ಉಲ್ಲೇಖಿಸುವುದು ಉಚಿತವೆನಿಸುತ್ತದೆ.

ಬೇಡರ ಕಣ್ಣಪ್ಪ ಚಿತ್ರದ ಹಾಡು ” ಶಿವಪ್ಪ ಕಾಯೋ ತಂದೆ , ಮೂರು ಲೋಕ ಸ್ವಾಮಿ ದೇವ ” ಎಲ್ಲರಿಗು ಚಿರಪರಿಚಿತವಾದುದು. ರಾಜಣ್ಣ ಅವರು ನಾಯಕ ನಟನಾಗಿ ಚಲನ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಟ್ಟ ಚಿತ್ರ. ಅ ಚಿತ್ರದ ” ಶಿವಪ್ಪ ಕಾಯೋ ತಂದೆ , ಮೂರು ಲೋಕ ಸ್ವಾಮಿ ದೇವ ” ಹಾಡನ್ನು ಚಿತ್ರದ ನಿರ್ದೇಶಕ ಎಚ್ ಎಲ್ ನ್ ಸಿಂಹ ಅವರು ಆನೇಕಲ್ ಗ್ರಾಮದ ಕಡೆಗೆ ಹೋದಾಗ ಅಲ್ಲಿ ದನ ಕಾಯುತ್ತಿದ್ದ ನಂಜುಡಪ್ಪ ಎನ್ನುವವನು ಹಾಡುತಿದ್ದರು, ಹಾಡಿನ ಸಾಹಿತ್ಯ ತುಂಬಾ ಚೆನ್ನಾಗಿ ಇದ್ದುದರಿಂದ ನಿರ್ದೇಶಕರು ಪೂರ್ತಿ ಹಾಡನ್ನು ಬರೆಸಿಕೊಂಡು ಬೇಡರ ಕಣ್ಣಪ್ಪ ಚಿತ್ರದಲ್ಲಿ ಅಳವಡಿಸಿಕೊಂಡರು. ಮುಂದೆ ಚಿತ್ರ ಬಿಡುಗಡೆಯಾಯಿತು, ಎಲ್ಲಡೆ ಅದ್ಧುತ ಪ್ರದರ್ಶನ ಕಂಡಿತು. ಉತ್ತಮ ನಟ , ನಿರ್ದೇಶಕ, ಸಂಗೀತಕ್ಕೆ ಪ್ರಶಸ್ತಿಗಳು ಸಂದವು. ಅಂದು ಸೂಪರ್ ಹಿಟ್ ಅದ ” ಶಿವಪ್ಪ ಕಾಯೋ ತಂದೆ , ಮೂರು ಲೋಕ ಸ್ವಾಮಿ ದೇವ ” ಸಾಹಿತ್ಯ ಬರೆದ ಕವಿ ನಂಜುಡಪ್ಪನವರಿಗೆ ಅದರ ಶ್ರೇಯ ಸಲ್ಲಲಿಲ್ಲ. ಇದನ್ನು ಅರಿತ ಪತ್ರಕರ್ತರು ನಂಜುಡಪ್ಪನವರನ್ನು ಸಂದರ್ಶಿಸಿ ಕೇಳಿಯೇ ಬಿಟ್ಟರು ” ಎಲ್ಲರಿಗೂ ಪ್ರಶಸ್ತಿ ಸಿಕ್ಕಿದೆ , ನಿಮ್ಮ ಹಾಡು ಜಗತ್ ಪ್ರಸಿದ್ದವಾಗಿದೆ , ನಿಮಗೆ ಪ್ರಶಸ್ತಿ ದಕ್ಕಿಲ್ಲವೆಂದು ಬೇಜಾರು ಆಯಿತೇ “. ಅದಕ್ಕೆ ಕವಿ ನಂಜುಂಡಪ್ಪನವರು ಕೊಟ್ಟ ಉತ್ತರಕ್ಕೆ ಪತ್ರಕರ್ತರು ತೆಲೆದೊಗಿದರು.

” ಬಿಡಿ ಸ್ವಾಮಿ , ಅದಕ್ಕೆಲ್ಲ ಬೇಸರ ಯಾಕೆ , ಇವತ್ತು ನಾನು ಬರೆದ ಹಾಡನ್ನು , ಭೊಮಿ ಮೇಲಿರುವ ಬಿಕ್ಷುಕರೆಲ್ಲ ಹಾಡಿ ತಮ್ಮ ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದಾರೆ , ಇದಕ್ಕಿಂತ ದೊಡ್ಡ ಬಹುಮಾನ ಯಾವುದಿದೆ” ಎಂದರಂತೆ..

ಅಂದು ನಿಜವಾದ ಕವಿ ಸಂಸ್ಕೃತಿಯ ಅನಾವರಣವಾಗಿತ್ತು. ಇವರಿಗಿರುವ ಹೃದಯ ನಮ್ಮ ಹಿರಿಯ ಕವಿಗಳಿಗೆ ಏಕಿರಲಿಲ್ಲ , ಕೇವಲ ಕವಿತೆ ಮತ್ತು ಲೇಖನಗಳಿಗೆ ಮಾತ್ರ ಸಿಮಿತರಾದರೆ?

ಅದರಿಂದ ಉತ್ತೇಜಿತರಾಗಿ ,ಸ್ಪೂರ್ತಿ ಪಡೆದು , ಒಳ್ಳೆಯ ಮನೋಭಾವದಿಂದ ತಗೆದು ಕೊಂಡು , ಮಾಡುವ ಕೆಲಸವನ್ನು ನಿಸ್ವಾರ್ಥ ಭಾವದಿಂದ ಮಾಡಿದರೆ ಎಲ್ಲವೂ ತಾವಾಗಿ ಹುಡುಕಿ ಕೊಂಡು ಬರುತ್ತವೆ ಎನ್ನುವುದನ್ನು ಎಲ್ಲೋ ಮರೆತ ಹಾಗಿದೆ ನಮ್ಮ ಜನರು ಸಹ.

* * * * * * *

ಚಿತ್ರಕೃಪೆ :timescontent.com

2 ಟಿಪ್ಪಣಿಗಳು Post a comment
  1. Nanjunda Raju's avatar
    ಆಗಸ್ಟ್ 17 2012

    ಮಾನ್ಯರೇ ಒಳ್ಳೆಯ ಲೇಖನ. ಧನ್ಯವಾದಗಳು. ಒಬ್ಬಾ ಕವಿಯಾದರೆ ಸಾಕು. ಪ್ರಶಸ್ತಿ ಪಡೆಯುವುದೇ ಪರಮಗುರಿ ಎಂದು ಶತಾಯ ಗತಾಯ ಪ್ರಯತ್ನಿಸುತ್ತಿರುತ್ತಾರೆ. ಸೋತಾಗ ಈ ರೀತಿಯ ಟೀಕೆಗಳು ಸಹಜ ಅಲ್ಲವೇ ?

    ಉತ್ತರ
  2. Bindu's avatar
    Bindu
    ಆಗಸ್ಟ್ 26 2012

    Nanjundappananthaha rathnagaLu siguvudu halliyalle, Eko akshara gnana hecchaandanthellaa samskaravu tagguvanthe bhaasavaaguttade!!

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments