ಬರ-ಜೋಳಿಗೆ
– ಅಕುವ
ಬಾನು ನೋಡುತಿದ್ದ ಉಳುವಾತ
ಹನಿಯಾದರೂ ಉದುರಲೆಂದೆ
ಮತ್ತೆ ಬಿಡದ ಗರ
ನಾಡಿಗೆಲ್ಲಾ ಬರ !
ಹೊರಟು ನಿಂತಿಹರು ನಮ್ಮವರು
ವಿದೇಶ ಯಾತ್ರೆಗೆ
ಪ್ರಾಯಶ: ಸೊರಗಿದವರಿಗೆ ತರಲೆಂದು
ಹಸಿವಾಗದ ಮಾತ್ರೆ !
ಸರ್ಕಾರ ತಂಡ ಕಟ್ಟಿದೆ
ಇನ್ನೇನೋ ಬೆಳೆಸಲಿದೆ ಪಾದಯಾತ್ರೆ
ಗರ ಬಡಿದರೂ
ಇವರಿಗೆಲ್ಲಾ ವರ !
ಬಾರದ ಮಳೆಯಾದರೂ
ಒಮ್ಮೊಮ್ಮೆ ಸುರಿಯಬಹುದು.
ಈ ಪುಡಾರಿಗಳ ಜೋಳಿಗೆಯಂತು
ಎಂದೂ ಸೋರದು !
ಎಂದೂ ಸೋರದು !
ಚಿತ್ರ ಕೃಪೆ : ರೆಡಿಫ಼್.ಕಾಂ





“ನಿಲುಮೆ ” ಗೆ ಧನ್ಯವಾದಗಳು …….