ಈ ಸ್ವಾತಂತ್ರ್ಯಕ್ಕೆ ಅಸ್ಸಾಮಿನ ಉರಿಯ ಅರಿವುಂಟೇ?
– ಸಂತೋಶ್ ತಮ್ಮಯ್ಯ
ನೇಪಾಳದ ಹಿಂದೂ ರಾಜನನ್ನು ಪದಚ್ಯುತಗೊಳಿಸಿದಾಗ ಭಾರತದಲ್ಲಿ ಯಾವ ಕಮ್ಯುನಿಷ್ಟ್ ಕಾಮ್ರೆಡನಿಗೂ ಪೆಟ್ಟು ಬಿದ್ದಿರಲಿಲ್ಲ. ಪಾಕಿಸ್ಥಾನದ ರಿಂಕಲ್ ಕುಮಾರಿಯನ್ನು ಮತಾಂಧರು ಮತಾಂತರಿಸಿದಾಗ ಇಲ್ಲಿನ ಯಾವ ಹಿಂದುವೂ ಬೀದಿಗೆ ಇಳಿದಿರಲಿಲ್ಲ. ಅಲ್ಲೆಲ್ಲೋ ಪಾಶ್ಚಾತ್ಯ ದೇಶದಲ್ಲಿ ಗಣಪತಿ, ಲಕ್ಷ್ಮಿ, ಬ್ರಹ್ಮದೇವರನ್ನು ಹೆಂಗಸರ ಚಡ್ಡಿಗಳಲ್ಲಿ ಚಿತ್ರಿಸಿ ರಾಂಪ್‌ವಾಕ್ ಮಾಡಿದಾಗಲೂ ಹಿಂದುಗಳಾರೂ ಬಸ್ಸುಗಳಿಗೆ ಕಲ್ಲು ಬಿಸಾಡಿರಲಿಲ್ಲ. ಅದಾವುದೋ ಕೆರೆಬಿಯನ್ ದೇಶದಲ್ಲಿ ಹಿಂದುವಾದವನು ಅಧ್ಯಕ್ಷನಾಗಬಾರದು ಎಂದಾಗ ಜಗತ್ತಿನಾದ್ಯಂತ ಹಿಂದುಗಳಾರೂ ಖಂಡಿಸಲಿಲ್ಲ. ಅವೆಲ್ಲಾ ಬಿಡಿ. ಕಾಶಿ ವಿಶ್ವನಾಥನ ದರ್ಶನಕ್ಕೆ ಹೋದರೂ ಹಿಂದುಗಳಿಗೆ ಪಕ್ಕದ ಪರಮ ಅಸಹ್ಯವಾದ ಕಟ್ಟಡವೊಂದು ಸಾಮರಸ್ಯದ ಪ್ರತೀಕದಂತೆಯೇ ಕಾಣುತ್ತದೆ. ಅಯೋಧ್ಯೆಯ ರಾಮ ಇನ್ನೂ ಟೆಂಟ್ ವಾಸಿಯಾದರೂ ಬಹುತೇಕರಿಗೆ ಅದೇನೂ ಅಂಥ ಕೊರಗಿನಂತೆ ಕಾಣುವುದಿಲ್ಲ. ಯಾವ ಹಿಂದೂ ಸಂನ್ಯಾಸಿಯೂ ಮೌಲ್ವಿಗಳಂತೆ ಅಬ್ಬರಿಸುವುದಿಲ್ಲ. ಒಂದು ವೇಳೆ ಸಂನ್ಯಾಸಿ ಅಬ್ಬರಿಸಿದರೂ ಯಾರಿಗೂ ಹೆದರಿಕೆಯಾಗುವಂತೆ ಕಾಣುವುದೂ ಇಲ್ಲ.
ಅದು ಹಿಂದುವಿನ ಅತಿಯಾದ ಸಾತ್ತ್ವಿಕತೆಯೋ ಅಥವಾ ಭಂಡತನ ಮಿಶ್ರಿತ ಅತಿಯಾದ ಭಯವೋ ಎಂದು ವಿಶ್ಲೇಷಿಸುವುದು ಕಷ್ಟ. ಆದರೆ ಆತನಿಗೆ ಹಿಂದು ಎಂಬ ಕಾರಣಕ್ಕೆ ಸಿಟ್ಟು ಬರದಿರುವುದಂತೂ ಸತ್ಯ. ಮೇಲಿನ ಎಲ್ಲಾ ಸಂದರ್ಭಗಳಲ್ಲಿ ಅದು ಸಾಭೀತಾಗಿದೆ. ಬೀದಿಗಿಳಿಯಲು, ಪ್ರತಿಭಟಿಸಲು ಹಿಂದುವಿಗೆ ದಿನಕ್ಕೊಂದು ಕಾರಣವಾದರೂ ಸಿಗುತ್ತವೆ. ಆದರೆ ಅದು ನಡೆಯುವುದಿಲ್ಲ. ಏಕೆಂದರೆ ಹಿಂದುವಿಗೆ ಸಮಾಜಕ್ಕಾಗಿ ಎಂದಿಗೂ ಸಿಟ್ಟು ಬರುವುದಿಲ್ಲ.
ಸ್ವಾತಂತ್ರ್ಯ …
– ಅನಿತ ನರೇಶ್ ಮಂಚಿ
ಶತ ಶತಮಾನಗಳ ಸಂಕೋಲೆಯ ಕಿತ್ತೊಗೆಯಲು
ರಾಷ್ಟ್ರದೊಳಗೆ ಉದಿಸಿತು ಧೀಮಂತ ಕಲಿಗಣ
ಒಳಗೊಳಗೇ ತಳ ಊರಿದ ಪರದಾಸ್ಯದ
ಹಿಮ ಬಂಡೆಯ ಕರಗಿಸಲು ಮೂಡಿತದೋ ಹೊಂಗಿರಣ
ಬೆಂಕಿ ಉಗುಳುವ ಬಂದೂಕುಗಳ ಲೆಕ್ಕಿಸದೆ ಎದೆಯೊಡ್ಡಿ
ನಿಂತವು ತಾಯಿ ಭಾರತಿಯ ಧೀರ ಮಕ್ಕಳು
ಜಾತಿ ಮತಗಳ ಬದಿಗೊತ್ತಿ ಒಮ್ಮತದಿ ನಿಂದು
ಕೆಂಪ ಅಳಿಸಿ ಹಸಿರ ಹರಡುವ ಛಲ ಹೊತ್ತ ಒಕ್ಕಲು
ವಂದೇ ಮಾತರಂ ಆಯಿತು ತಾರಕ ಮಂತ್ರ
ಆಳುವವನ ಎದೆಯಲ್ಲಿ ಕುಟ್ಟುತ್ತಿತ್ತು ಭಯದ ಒನಕೆ
ಸಿಕ್ಕವರ ಸೆರೆಗೆ ತಳ್ಳಿ ಮಾಡಿದರು ಹಿಂಸಾ ನರ್ತನ
ಅದೆಷ್ಟೋ ಕೊರಳಿಗೆ ಬಿದ್ದಿತ್ತು ಹಸಿ ಸಾವಿನ ಕುಣಿಕೆ
ಅಖಂಡ ಭಾರತ ಸಂಕಲ್ಪ ದಿನದ ಔಚಿತ್ಯವೇನು…?
– ಅಶ್ವಿನ್ ಅಮೀನ್
ಆಗಸ್ಟ್ 14,ಸಂಘಪರಿವಾರಾದಿಯಾಗಿ ಕೆಲ ಸಂಘಟನೆಗಳು ‘ಅಖಂಡ ಭಾರತ ಸಂಕಲ್ಪ ದಿನ’ವೆಂದು ಆಚರಿಸುತ್ತಾರೆ. ಪ್ರಾಚೀನ ಭಾರತದ ಭಾಗಗಳಾಗಿದ್ದ ಈಗ ಸ್ವತಂತ್ರ ದೇಶಗಳಾಗಿರುವ ಇಂದಿನ ಪಾಕಿಸ್ತಾನ, ಬಾಂಗ್ಲಾ (ಹಾಗು ಇತರ) ಗಳನ್ನು ಮತ್ತೆ ಭಾರತದೊಂದಿಗೆ ಸೇರಿಸಲು ಇಂದು ಪ್ರತಿಜ್ಞೆಗೈಯಲಾಗುತ್ತದೆ. ಈ ಆಚರಣೆ ಮೇಲ್ನೋಟಕ್ಕೆ ದೇಶಭಕ್ತಿಯ ಪ್ರತೀಕವೆಂಬಂತೆ ಕಂಡರೂ ಪ್ರಸ್ತುತ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗುವ ವಿಷಯವೇ ಎಂಬ ಪ್ರಶ್ನೆ ಬರುವುದು ಸುಳ್ಳಲ್ಲ. ಧರ್ಮ ದ್ವೇಷದ ಆಧಾರದ ಮೇಲೆ ವಿಭಜನೆಯಾಗಿರುವ ಈ ದೇಶಗಳು ಮತ್ತೆ ಭಾರತದೊಂದಿಗೆ ಸೇರುವುದು ಖಂಡಿತ ಅಸಂಭವ… ಒಂದು ವೇಳೆ ಹಾಗೂ ಹೀಗೂ ಅಖಂಡ ಭಾರತ ನಿರ್ಮಾಣವಾದರೆ ಭಾರತದ ಆಂತರಿಕ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಊಹಿಸಲೇ ಕಷ್ಟವಾಗುತ್ತದೆ.
ಭಾರತ-ಪಾಕ್ ಹಾಗು ಭಾರತ-ಬಾಂಗ್ಲಾ ವಿಭಜನೆಯಾದಂದಿನಿಂದ ಇಂದಿನವರೆಗೂ ಇವೆರಡೂ ದೇಶಗಳಲ್ಲಿ ಹಿಂದೂಗಳ ಮೇಲಿನ ಹಲ್ಲೆ, ಕೊಲೆ, ಅತ್ಯಾಚಾರ, ಬಲವಂತದ ಮತಾಂತರಗಳು ನಿಂತಿಲ್ಲ.. ಅಲ್ಲಿರುವ ಬೆರಳೆಣಿಕೆಯ ಹಿಂದುಗಳಿಗೆ ರಕ್ಷಣೆಯಿಲ್ಲದಾಗಿದೆ. ಅಲ್ಲಿ ಹಿಂದೂಗಳ ಮೇಲೆ ನಡೆಯುವ ಎಲ್ಲಾ ಅತ್ಯಾಚಾರ, ಹತ್ಯಾಕಾಂಡಗಳು ಹೊರಗಿನ ಪ್ರಪಂಚಕ್ಕೆ ತಿಳಿಯುವುದಿಲ್ಲ.. ಕೆಲವೇ ಕೆಲವು ಘಟನೆಗಳು ಮಾತ್ರ ಮಾಧ್ಯಮದ ಮೂಲಕ ತಿಳಿಯುತ್ತದೆ. ಅಪ್ರಾಪ್ತ ಹಿಂದೂ ಬಾಲಕಿಯರನ್ನು ಅಪಹರಿಸಿ ಅತ್ಯಾಚಾರಗೈದು ಮುಸ್ಲಿಂ ಆಗಿ ಮತಾಂತರಿಸಲಾಗುತ್ತಿದೆ. ಹಿಂದೂ ಜನರನ್ನು ಅಟ್ಟಾಡಿಸಿಕೊಂಡು ಹತ್ಯೆಗೈಯಲಾಗುತ್ತಿದೆ. ಬಲವಂತದ ಸುನ್ನತ್-ಮತಾಂತರಗಳು ಎಗ್ಗಿಲ್ಲದೆ ನಡೆಯುತ್ತಿದೆ… ಅಲ್ಲಿನ ಹಿಂದೂ ದೇಗುಲಗಳು ಧರೆಗುರುಳುತ್ತಿವೆ, ಕೆಲ ಕಡೆ ಹಿಂದುಗಳನ್ನು ಅವರ ಮನೆಯಿಂದಲೇ ಹೊರಗಟ್ಟಲಾಗುತ್ತಿದೆ. ಈ ಎಲ್ಲಾ ಆಕ್ರಮಣಗಳಿಗೆ ಹೆದರಿ ಈಗಾಗಲೇ ಪಾಕಿಸ್ತಾನದಿಂದ ಭಾರತದತ್ತ ವಲಸೆ ಬರುತ್ತಿರುವ ಹಿಂದೂ ಕುಟುಂಬಗಳ ಬಗ್ಗೆ ಕೇಳಿರುತ್ತೀರಿ. ಪಾಪ ಅವರ ಸ್ಥಿತಿ ಅತ್ತ ಪಾಕಿಸ್ತಾನವೂ ಇಲ್ಲ ಇತ್ತ ಭಾರತವೂ ಇಲ್ಲವೆಂಬಂತಾಗಿದೆ.
ಮತ್ತಷ್ಟು ಓದು 
ಸಾಮಾನ್ಯರ ಭ್ರಷ್ಟತೆ ನಿರ್ಲ್ಯಕ್ಷಿಸಿ ಜನರ ಬಳಿಗೆ ಹೊರಟವರ ಕಥೆ…
-ಅಶೋಕ್ ಕೆ ಆರ್
ನನ್ನ ಮತ್ತು ನನ್ನಂಥವರ ನಿರೀಕ್ಷೆಯಂತೆ ಅಣ್ಣಾ ತಂಡದ ‘ಭ್ರಷ್ಟಾಚಾರ ವಿರೋಧಿ ಆಂದೋಲನ’ ಮಗ್ಗಲು ಬದಲಿಸಿ ಸುಮ್ಮನಾಗಿದೆ. ನಮ್ಮ ನಿರೀಕ್ಷೆ ಹುಸಿಗೊಳ್ಳದೆ ಅಣ್ಣಾ ತಂಡ ವಿಫಲಗೊಂಡಿದ್ದಕ್ಕೆ ಸಂತಸ ಪಡಬೇಕಾ? ಖಂಡಿತ ಇಲ್ಲ. ಅಣ್ಣಾ ತಂಡದ ಸರ್ವಾಧಿಕಾರಿ ಧೋರಣೆಯನ್ನು ಪ್ರಶ್ನಿಸಿದವರಿಗೆ ‘ಸಿನಿಕರು’ ‘ದೇಶದ್ರೋಹಿಗಳು’ ‘ಭ್ರಷ್ಟರು’ ಎಂದು ನಾನಾ ಬಿರುದಾವಳಿಗಳನ್ನು ಕೊಟ್ಟವರು ಮಳೆಗಾಳಿಗೆ ಬೆಚ್ಚನೆ ಹೊದ್ದಿ ಮಲಗಿಬಿಟ್ಟಿದ್ದಾರೇನೋ?!
ಟೀಂ ವರ್ಕಿನ ತಂಡವೇ ಸರಿಯಿರಲಿಲ್ಲ! –
ರಿಲೇ ಓಟದಲ್ಲಿ ಓಡುವ ನಾಲ್ವರ ಪಾತ್ರವೂ ಹಿರಿದು. ಒಬ್ಬನ ಓಟ ಕೊಂಚ ನಿಧಾನವಿರಬಹುದು, ಮತ್ತೊಬ್ಬ ಉಳಿದೆಲ್ಲರಿಗಿಂತ ವೇಗಿಯಿರಬಹುದು; ಕೊನೆಗೆ ಎಲ್ಲರೂ ಓಡಿದರೆ ಮಾತ್ರ ತಂಡ ಗೆಲುವು ಸಾಧಿಸಲು ಸಾಧ್ಯ. ಈ ಮೂಲಭೂತ ಅಂಶವೇ ಅಣ್ಣಾ ಹಜಾರೆ ಆರಂಭಿಸಿದ ಚಳುವಳಿಯಲ್ಲಿ ಇಲ್ಲವಾಗಿತ್ತು. ಅಣ್ಣಾ ಹಜಾರೆ, ಅರವಿಂದ್ ಕೇಜ್ರಿವಾಲಾ, ಕಿರಣ್ ಬೇಡಿಯವರ ಉದ್ದೇಶ ಸರಿಯಾಗಿತ್ತೇನೋ ಆದರೆ ನಡೆದ ಹಾದಿಯಲ್ಲಿ ಜೊತೆ ಮಾಡಿಕೊಂಡ ತಂಡ? ಎಡವಿ ಬಿದ್ದವರನ್ನು ಮೇಲೆತ್ತುವ ಗೋಜಿಗೆ ಹೋಗದೆ ನಗುತ್ತಾ ಮುಂದೆ ಸಾಗುವವರ ತಂಡ ಕಟ್ಟಿಕೊಂಡು ಚಳುವಳಿಯನ್ನು ಬೆಳೆಸಿ ಗೆಲ್ಲಲಾದೀತೇ? ಮೇಧಾವಿಗಳೆನ್ನಿಸಿಕೊಂಡವರು, ಹಲವು ಹೋರಾಟಗಳಲ್ಲಿ ಪಾಲ್ಗೊಂಡ ಜನರೇ ಇದ್ದ ಅಣ್ಣಾ ತಂಡದಲ್ಲಿ ಭ್ರಷ್ಟಾಚಾರವನ್ನು ಅರ್ಥೈಸುವ ದೃಷ್ಟಿಕೋನವೇ ಸರಿಯಿರಲಿಲ್ಲ. ರಾಜಕಾರಣಿಗಳು ಮತ್ತು ಅಧಿಕಾರವರ್ಗವಷ್ಟೇ ಭ್ರಷ್ಟರ ಕೂಟ ಎಂಬ ತೀರ್ಮಾನಕ್ಕೆ ಬಂದ ಚಳುವಳಿಯಿಂದ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ? ಸಾಮಾನ್ಯ ಜನರೂ ಭ್ರಷ್ಟಾಚಾರದ ಬಹುಮುಖ್ಯ ಭಾಗ. ಅವರು ಬದಲಾಗದೆ – ಅವರನ್ನು ಬದಲಿಸಲಾಗದೆ – ಚಳುವಳಿ ಗೆಲ್ಲಲಾಗದು ಎಂದಿವರಿಗೆ ತಿಳಿಯಲಿಲ್ಲ.
ಧೃತರಾಷ್ಟ್ರ,ದುರ್ಯೋಧನರಿಲ್ಲದೆ ದುಶ್ಯಾಸನರು ಎಲ್ಲಿಂದ ಬಂದಾರು?
– ರಾಕೇಶ್ ಶೆಟ್ಟಿ
ಮಂಗಳೂರು ಹೋಂ-ಸ್ಟೇ ಮೇಲೆ ದಾಳಿ ಮಾಡಿದವರನ್ನು ‘ಆಧುನಿಕ ದುಶ್ಯಾಸನರು’ ಅಂದಾಗ, ಸಂಸ್ಕೃತಿ ರಕ್ಷಣೆ ಹೆಸರಲ್ಲಿ ಹೆಣ್ಣುಮಕ್ಕಳ ಮೈ ಮುಟ್ಟುವುದು,ಹೊಡೆಯುವುದು ಇಂತ ವಿಕೃತಿ ಮಾಡುವವರನ್ನು ದುಶ್ಯಾಸನರೆಂದರೆ ತಪ್ಪಿಲ್ಲ ಅನ್ನಿಸುತ್ತದೆ ಅನ್ನಿಸಲೇಬೇಕು.ಆದರೆ “ಧೃತರಾಷ್ಟ್ರ,ದುರ್ಯೋಧನರಿಲ್ಲದೆ ದುಶ್ಯಾಸನರು ಎಲ್ಲಿಂದ ಬಂದಾರು?”.ಹಾಗಂತ ದೃತರಾಷ್ಟ್ರ,ದುರ್ಯೋಧನರ ನೆಪವೊಡ್ಡಿ ದುಶ್ಯಾಸನರ ನಡವಳಿಕೆಯನ್ನು ಬೆಂಬಲಿಸಬೇಕಿಲ್ಲ,ಬೆಂಬಲಿಸುವುದು ಆರೋಗ್ಯವಂತ ಸಮಾಜದ ಲಕ್ಷಣವೂ ಅಲ್ಲ. ಅಂದು ಮಹಾಭಾರತದ ತುಂಬಿದ ಸಭೆಯಲ್ಲಿ ದುಶ್ಯಾಸನ ದ್ರೌಪದಿಯ ಸೀರೆ ಎಳೆಯುವಂತೆ ಅಪ್ಪಣೆ ಕೊಟ್ಟಿದ್ದು ದುರ್ಯೋಧನ ಮತ್ತು ಅದನ್ನ ಕೇಳಿಯೂ ತೆಪ್ಪಗೆ ಕೂತಿದ್ದು ಅಪ್ಪ ಅನ್ನಿಸಿಕೊಂಡ ಧೃತರಾಷ್ಟ್ರ ಅಲ್ಲವೇ? ಆಗಲೂ ಈಗಿನಂತೆ ಎಲ್ಲ ಗೊತ್ತಿದ್ದೂ ನಮ್ಮ ಸೆಕ್ಯುಲರ್ಗಳಂತೆ ಕಂಡು ಕಾಣದಂತಿದ್ದವರು ಉಳಿದೆಲ್ಲರು.ಒಬ್ಬ ಶ್ರೀ ಕೃಷ್ಣನನ್ನು ಬಿಟ್ಟು..! ಇಂದಿನ ಭಾರತದಲ್ಲಿ ದುಶ್ಯಾಸನರನ್ನೇನೋ ಮಾಧ್ಯಮಗಳು ತೋರಿಸಿವೆ.ಆದರೆ ಧೃತರಾಷ್ಟ್ರ,ದುರ್ಯೋಧನರೆಲ್ಲಿ? ದುಶ್ಯಾಸನ ಅನ್ನುವವನ ಹೆಸರು ಈ ಪರಿ (ಕು)ಖ್ಯಾತಿ ಪಡೆಯಲು ಕಾರಣ ವಸ್ತ್ರಾಪಹರಣ ಮಾಡಲು ಹೇಳಿದ ಅವನಣ್ಣ ದುರ್ಯೋಧನನಲ್ಲವೇ? ದುರ್ಯೋಧನ,ದುಶ್ಯಾಸನರಿಗೆ ಮೌನ ಸಮ್ಮತಿ ಕೊಟ್ಟ ದ್ರುತರಾಷ್ಟ್ರನು ಸೇರಿ ಇಡಿ ಕುರು ಸಭೆಯಲ್ಲವೇ? ಹಾಗಿದ್ದರೆ ಕರಾವಳಿಯ ಮಹಾಭಾರತದಲ್ಲಿ ದುಶ್ಯಾಸನರ ಸೃಷ್ಟಿಗೆ ಕಾರಣವಾದ ದುರ್ಯೋಧನ ಯಾರು?
ಆಳುವವರ ತಲೆ ಕೆಟ್ಟರೆ ಹಾಳು ನಿರ್ಧಾರಗಳನ್ನೇ ತೆಗೆದುಕೊಳ್ಳೋದು
ರಾಘವೇಂದ್ರ ನಾವಡ
ಮೊಹಮ್ಮದ್ ಬಿನ್ ತುಘಲಕ್ ಒಬ್ಬ ವಿದ್ವಾ೦ಸ ಆದರೆ ಹುಚ್ಚ!! ಅವನ ಆಡಳಿತದಲ್ಲಿ ತೆಗೆದುಕೊ೦ಡ ರಾಜಧಾನಿ ಬದಲಾವಣೆ ಮತ್ತಿತರ ನಿರ್ಧಾರಗಳಿ೦ದ ರಾಜ್ಯ ಜನತೆಗೆ ಹಾಗೂ ಬೊಕ್ಕಸಕ್ಕೆ ಆದ ಹಾನಿ ಅಪಾರ ಅ೦ತೆಯೇಅವನನ್ನು “ ವಿರೋಧಾಭಾಸಗಳ ಮಿಶ್ರಣ“ ವೇ೦ದೇ ಇತಿಹಾಸದಲ್ಲಿ ಗುರುತಿಸಲಾಗುತ್ತದೆ!
ಈ ವರ್ಷ ಕರ್ನಾಟಕದ ಸುಮಾರು ೧೦೦ ಕ್ಕೂ ಹೆಚ್ಚು ಹಳ್ಳಿಗಳು ಬರದಲ್ಲಿ ಮುಳುಗಿವೆ. ರೈತ ತಲೆಯ ಮೇಲೆ ಕೈ ಹೊತ್ತು ಕುಳಿತ್ತಿದ್ದಾನೆ. ಕೆಲವು ಕಡೆ ಸಿಕ್ಕಾಪಟ್ಟೆ ಮಳೆ.. ಇನ್ನು ಕೆಲವು ಕಡೆ ಮಳೆನೇ ಇಲ್ಲಾ. ಸುಮಾರು ಮೂರ್ನಾಲ್ಕು ದಿನಗಳಿ೦ದ ದಿನ ಪತ್ರಿಕೆಗಳು- ದೃಶ್ಯ ಮಾಧ್ಯಮಗಳೆಲ್ಲವೂ ಕೆಲವೊ೦ದು ಕಡೆ ಸಿಕ್ಕಾಪಟ್ತೆ ಮಳೆ ಆಗುತ್ತಿರುವ, ಭದ್ರಾ, ಕಬಿನಿ, ಹಾರ೦ಗಿ , ಆಲಮಟ್ತಿ ಜಲಾಶಯಗಳೆಲ್ಲಾ ಭರ್ತಿಯಾಉತ್ತಿರುವ ವಿಚಾರಗಳನ್ನು ಬಿತ್ತರಿಸುತ್ತಿವೆ. ಆದರೆ ಈ ವರ್ಷ ವಾಡಿಕೆಗಿ೦ತಲೂ ಅರ್ಧದಷ್ಟು ಮಳೆ ಕಡಿಮೆಯಾಗಿದೆ. ನಮ್ಮಲ್ಲಿಯೇ ಇಷ್ಟೊತ್ತಿಗೆ ಸುಮಾರು ೧೦೦ ಇ೦ಚು ಮಳೆಯಾಗಿ ಬಿಡಬೇಕಿತ್ತು.. ನಮ್ಮಲ್ಲಿನ್ನೂ ಅದು ೫-೬೦ ಇ೦ಚುಗಳಲ್ಲೇ ತೆವಳಾಡುತ್ತಿದೆ! ಇನ್ನೊ೦ದು ಮಾತೇನೆ೦ದರೆ ಈ ವರ್ಷ ಮಳೆಯಾಗುವ ಸಮಯದಲ್ಲಿ ಮಳೆಯಾಗಲಿಲ್ಲ. ಮಾನ್ ಸೂನ್ ಆಗಮನ ಬಹಳ ತಡವಾಯಿತು! ಬಹಳ ತಡವಾಗಿ ಮಳೆ ತನ್ನ ಲಯ ಕ೦ಡುಕೊ೦ಡಿದೆ!
ರಾಮಲೀಲಾ ಮೈದಾನದಿಂದ, ನೇರವಾಗಿ….
-ಚಕ್ರವರ್ತಿ ಸೂಲಿಬೆಲೆ
ನಾನೀಗ ರಾಮಲೀಲಾ ಮೈದಾನದಲ್ಲಿದ್ದೇನೆ. ೭ನೇ ತಾರೀಖಿನಿಂದಲೇ ಆಂದೋಲನಕ್ಕಾಗಿ ಜನಸಾಗರ ಹರಿದುಬರತೊಡಗಿತ್ತು. ಇಂದು ಇಲ್ಲಿ ಸೇರಿರುವ ಸಂಖ್ಯೆ ನಿರೀಕ್ಷೆಗೂ ಮೀರಿದ್ದು. ರಾಮದೇವ ಬಾಬಾ ನೇತೃತ್ವದ ಈ ಆಂದೋಲನದ ಕುರಿತಂತೆ ಕೆಲವು ಒಳನೋಟಗಳು ಇಲ್ಲಿವೆ…
ಎಲ್ಲರ ಚಿತ್ತ ರಾಮಲೀಲಾ ಮೈದಾನದತ್ತ! ಹಾಗಂತ ನೋಡಿದರೆ ಅನ್ನಿಸುತ್ತಿದೆ. ಒಂಭತ್ತನೆ ತಾರೀಖಿನ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಅದಾಗಲೇ ಜನಸಾಗರ ಬಂದು ಸೇರುತ್ತಿದೆ. ಏಳನೆ ತಾರೀಖಿನ ವೇಳೆಗಾಗಲೇ ಐದಾರು ಸಾವಿರ ಕಾರ್ಯಕರ್ತರು ವೇದಿಕೆಯ ಹಿಂದೆ ಮುಂದೆ ಗಿಜಿಗುಡುತ್ತ ನಿಂತಿದ್ದರು. ತಯಾರಿಗಳು ಬಿರುಸಾಗಿ ನಡೆದಿದ್ದವು. ಕಾರ್ಯಕರ್ತರ ಹೆಸರು ನೋಂದಾಯಿಸುವುದರಿಂದ ಹಿಡಿದು ವೇದಿಕೆಯ ರಕ್ಷಣೆಯವರೆಗೆ ಕೆಲಸಗಳನ್ನು ಹಂಚಲಾಗುತ್ತಿತ್ತು. ಅಚ್ಚರಿಯೆಂದರೆ ಪ್ರತಿ ವಿಭಾಗಕ್ಕೂ ನೂರು- ನೂರೈವತ್ತು ಜನರ ತಂಡ. ಒಟ್ಟಾರೆ ಲೆಕ್ಕ ಹಾಕಿದರೆ, ಅಣ್ಣಾ ತಂಡದ ಹೋರಾಟಕ್ಕೆ ಅದೆಷ್ಟು ಜನ ಬಂದಿದ್ದರೋ ಅಷ್ಟು ಕಾರ್ಯಕರ್ತರು ಪೂರ್ವ ತಯಾರಿಗೆಂದೇ ಇಲ್ಲಿಗೆ ಬಂದಿದ್ದಾರೆ. ಬಾಬಾ ರಾಮದೇವ್‌ಜೀ ಇದನ್ನೊಂದು ಐತಿಹಾಸಿಕ ನಿರ್ಣಾಯಕ ಹೋರಾಟ ಎಂದಿದ್ದು ತಪ್ಪಲ್ಲವೇನೋ ಎಂದು ಇಲ್ಲಿನ ಜನರನ್ನು ನೋಡಿದಾಗ ಭಾಸವಾಗಿಬಿಡುತ್ತದೆ.
ಯಾವುದೇ ಹೋರಾಟ ಒಂದು ದಿನ ಅಥವಾ ಕೆಲವು ವಾರಗಳದ್ದಲ್ಲ. ಅದೊಂದು ಸುದೀರ್ಘ ಯಾತ್ರೆ. ಅದರಲ್ಲೂ ಈ ಬಗೆಯ ಕಾದಾಟಗಳಂತೂ ದಶಕಗಳಷ್ಟು ಆಳದ ಬೇರುಗಳನ್ನು ಇಳಿ ಬಿಟ್ಟುಕೊಳ್ಳಲಿಲ್ಲವೆಂದರೆ ಫಲ ನೀಡುವುದು ಕಷ್ಟ. ಸಾಮರ್ಥ್ಯ ನರ ನಾಡಿಗಳಲ್ಲಿ ಬೆರೆತುಕೊಂಡು ಹರಿಯಲಿಲ್ಲವೆಂದರೆ, ಹೋರಾಟ ದೀರ್ಘ ಕಾಲದವರೆಗೆ ಮುಂದುವರೆಯುವುದೂ ಅಷ್ಟೇ ಕಷ್ಟ. ಅದಕ್ಕೇ ಗಾಂಧೀಜಿ ವಿಶೇಷ ಅನ್ನಿಸೋದು. ಹತ್ತಿಪ್ಪತ್ತು ವರ್ಷಗಳ ಕಾಲ ಜನರ ನಾಡಿ ಹಿಡಿಹಿಡಿದು ಅಧ್ಯಯನ ಮಾಡಿ ವಿಶ್ವಾಸ ಬಲಿತಾಗ ಹೋರಾಟಕ್ಕಿಳಿಯುತ್ತಿದ್ದವರು ಅವರು. ಹಾಗೆ ಹೋರಾಟಕ್ಕಿಳಿವಾಗ ಅತ್ಯಂತ ಸಹಜ ಹಾಗೂ ಜನರಿಗೆ ಹತ್ತಿರವಾದ ವಿಚಾರಗಳನ್ನಿಟ್ಟುಕೊಂಡೇ ಕದನ ಭೂಮಿಗೆ ಬರುತ್ತಿದ್ದರು. ಹೋರಾಟ ಕಾವು ಪಡಕೊಳ್ಳುತ್ತಿತ್ತು. ಉಪ್ಪಿನ ಸತ್ಯಾಗ್ರಹ ಅಂಥದ್ದೇ ಹೋರಾಟ ತಾನೆ? ಸ್ವತಃ ಗಾಂಧೀಜಿಯ ಕಮ್ಯಾಂಡರ್ ಇನ್ ಚೀಫ್ ಪಟೇಲರು ಲೇವಡಿ ಮಾಡಿದ್ದ ಹೋರಾಟ ಅದು. ಆದರೆ ಜನರು ತೆರಿಗೆಯ ವಿರುದ್ಧ ತಿರುಗಿಬಿದ್ದರು. ಕ್ರಮೇಣ ದೊಡ್ಡ ಆಂದೋಲನವೆ ಶುರುವಾಯ್ತು. ದೇಶ ಗೆಲುವಿನತ್ತ ಹೊರಳಿತು.
ಮತ್ತಷ್ಟು ಓದು 
ಸಮಾಜ ಮತ್ತು ದೇಶಕ್ಕಾಗಿ ಸತ್ಯದೆಡೆಗಿನ ನಡೆ ಅನಿವಾರ್ಯ…
-ಮಹೇಂದ್ರ ಕುಮಾರ್
ನಾನು ಅದೆಷ್ಟು ವರ್ಷ ಸಂಘ ಸಂಘ(ಆರ್ ಎಸ್ ಎಸ್) ಎಂದು ಕೆಲಸ ಮಾಡಿದ್ದೇನೆ. ನನ್ನ ತುಂಬು ಯೌವನವನ್ನು ಸಂಘ ಹೇಳುವ ಕಾರ್ಯಗಳಿಗೆ ವಿನಿಯೋಗಿಸಿದ್ದೇನೆ. ಇಂದಿಗೂ ಅದೆಷ್ಟೋ ಯುವಕರು ಸಂಘ ಸಂಘ ಎಂದು ತಮ್ಮ ಸರ್ವಸ್ವವನ್ನೂ ಸಂಘಕ್ಕಾಗಿ ತ್ಯಾಗ ಮಾಡುತಿದ್ದಾರೆ. ಸಂಘದ ಮಾರ್ಗದರ್ಶನದಂತೆ ಬೀದಿಯಲ್ಲಿ ನಿಂತು ಹಿಂದುತ್ವ ಹಿಂದುತ್ವ ಎಂದು ಬಡಿದಾಡಿ ಜೈಲುಸೇರಿ ಸಮಾಜದಲ್ಲಿ ರೌಡಿ ಪಟ್ಟ ಕಟ್ಟಿಕೊಂಡ ಅದೆಷ್ಟೋ ಯುವಕರು ತಮ್ಮ ಜೀವನದ ಹುಡುಕಾಟದಲ್ಲಿ ತೊಳಲುತಿದ್ದಾರೆ. ಇನ್ನು ಸಂಘ ಹೇಳುವ ದೇಶಭಕ್ತಿ ಹಿಂದುತ್ವದಿಂದ ಪ್ರೇರಣೆಗೊಂಡು ಪ್ರತಿವರ್ಷ ತಮ್ಮ ದುಡಿಮೆಯ ದೊಡ್ಡ ಭಾಗವನ್ನೇ ಧಾರೆ ಎರೆಯುವ ಅದೆಷ್ಟು ದಾನಿಗಳಿದ್ದಾರೆ. ದೊಡ್ಡ ದೊಡ್ಡ ಪದವಿಯನ್ನು ಪಡೆದುಕೊಂಡು ಮದುವೆಯೂ ಆಗದೆ ಸಂಘವೇ ಜೀವನ, ಸಂಘವೇ ಸರ್ವಸ್ವ ಎಂದು ನಂಬಿಕೊಂಡು ಮುಪ್ಪಿನಕಾಲದಲ್ಲಿ ಯಾರೂ ಇಲ್ಲದ ಅನಾಥರಂತೆ ಜೀವಿಸುವ ಅದೆಷ್ಟು ಮಹಾನ್ ಚೇತನಗಳಿವೆ.
ಇನ್ನು ತಮ್ಮ ಸ್ವಂತದ ಜೀವನ ನಡೆಸುತ್ತಲೇ ಸಂಘ ಎಂದರೆ ದೇಶ, ಸಂಘ ಎಂದರೆ ಹಿಂದುತ್ವ ಎಂದು ಸಂಘವನ್ನು ಸಾಮೂಹಿಕವಾಗಿ ಬೆಂಬಲಿಸುವ ಅಷ್ಟು ಲಕ್ಷ ಮುಗ್ದ ದೇಶವಾಸಿಗಳು… ಬೇಷ್, ಸುಮಾರು ಎಂಬತ್ತೇಳು ವರ್ಷಗಳ ಅಂತರದಲ್ಲಿ ಸಂಘದ ಸಾಧನೆ ಮೆಚ್ಚುವಂತದ್ದೇ.
ಸಂಘ ವ್ಯಾಪಿಸದ ಜಾಗವಿಲ್ಲ, ಈ ದೇಶದ ಪ್ರಭಲ ಸಂಘಟನೆಯಾಗಿ ಹೊರಹೊಮ್ಮಿರುವ ಸಂಘ ಇಷ್ಟು ದೊಡ್ಡಮಟ್ಟಕ್ಕೆ ಬೆಳೆದು ನಿಲ್ಲಲು ಬಳಸಿಕೊಡಿದ್ದು ಎರಡೇ ಎರಡು ವಿಚಾರಗಳನ್ನು, ದೇಶಭಕ್ತಿ ಮತ್ತು ಹಿಂದುತ್ವ. ಅದ್ಭುತ… ಇಂದು ಈ ದೇಶದಲ್ಲಿ ಯಾವುದೇ ಕಂಪೆನಿಗಳೂ, ರಾಜಕೀಯ ಪಕ್ಷಗಳೂ ಸೇರಿದಂತೆ ಯಾರೆಂದರೆ ಯಾರೂ ಸಾಧಿಸಲಾಗದ್ದನ್ನು ಸಂಘ ಸಾಧಿಸಿದೆ. ಟಾಟಾ, ರಿಲಯನ್ಸ್ ನಂತಹಾ ಕಂಪನಿಗಳನ್ನೆಲ್ಲಾ ಒಟ್ಟುಗೂಡಿಸಿ ಅವರ ಒಟ್ಟು ಆಸ್ಥಿಯ ಮೌಲ್ಯಮಾಪನ ಮಾಡಿದರೂ ಈ ದೇಶದಲ್ಲಿ ಸಂಘ ಹೊದಿರುವ ಆಸ್ಥಿಗಿಂತ ಕಡಿಮೆಯೇ…
ಮತ್ತಷ್ಟು ಓದು 
ಹಿಂದುತ್ವ ಬೋನ್ಸಾಯ್ ಮರವಲ್ಲ, ವಿಶಾಲ ಆಲದ ಮರ
-ಚಕ್ರವರ್ತಿ ಸೂಲಿಬೆಲೆ
ದಾಳಿಗೆ ಮುನ್ನ ಎದುರಾಳಿಗಳ ಶಕ್ತಿಯನ್ನು ಅರಿತುಕೊಳ್ಳಬೇಕು. ದಾಳಿಯ ವೇಳೆ ತಲೆ ಹೋದರೂ ಸರಿ ಎಂದು ಕಾದಾಡಬೇಕು. ಕದನದ ನಂತರ ಆಗುವ ಲಾಭ ನಷ್ಟಗಳ ಅರಿವಿರಬೇಕು ಪ್ರತಿಯೊಬ್ಬ ಸೇನಾಪತಿಗೆ ಗೊತ್ತಿರಲೇಬೇಕಾದ ಅಂಶಗಳಿವು. ಇವುಗಳ ಆಧಾರದ ಮೇಲೆ ರೂಪುಗೊಂಡದ್ದೇ ಯೋಜನೆ. ಮೊದಲೇ ರೂಪಿಸಿದ ಯೋಜನೆ ಒಮ್ಮೊಮ್ಮೆ ಕೈಕೊಟ್ಟರೂ ಕೊಡಬಹುದು. ಪೂರ್ವ ತಯಾರಿಯೇ ಇಲ್ಲದೆ ಗೆದ್ದರೂ ಗೆಲ್ಲಬಹುದು. ಎಲ್ಲ ಅಪರೂಪ. ಆದರೆ, ಹಳೆಯ ನೆನಪುಗಳನ್ನು ಹಸಿರಾಗಿಸಿಕೊಂಡು, ಭವಿಷ್ಯದ ಕಷ್ಟ ನಷ್ಟಗಳನ್ನು ಆಲೋಚಿಸಿ, ವರ್ತಮಾನದಲ್ಲಿ ಕ್ರಿಯಾಶೀಲರಾಗುವವರು ಜಯಶಾಲಿಗಳಾಗುತ್ತಾರೆ. ಇಲ್ಲವಾದರೆ ತಮಗೂ ಸಮಾಜಕ್ಕೂ ತೊಂದರೆ ತಂದಿಡುತ್ತಾರೆ.
೧೮೫೭ರ ಸಂಗ್ರಾಮಕ್ಕೆ ಸುದೀರ್ಘ ತಯಾರಿ ನಡೆದಿತ್ತು. ನಾನಾ, ತಾತ್ಯಾ, ಲಕ್ಷ್ಮೀ ಬಾಯಿ, ಕುವರ ಸಿಂಗರೆಲ್ಲ ತಯಾರಾಗಿದ್ದರು. ಯಾರು, ಎಲ್ಲಿ, ಹೇಗೆ ದಾಳಿ ಮಾಡಬೇಕೆಂಬುದನ್ನೂ ರೂಪಿಸಿಯಾಗಿತ್ತು. ಎಲ್ಲ ಮುಗಿದ ಮೇಲೆ ದೇಶ ಒಪ್ಪುವ ನಾಯಕನ ಕೈಗೆ ಆಡಳಿತ ನೀಡಬೇಕೆಂದು ಬಹಾದ್ದೂರ್ ಷಾಹನೇ ಹೇಳಿದ್ದ. ಎಡವಟ್ಟು, ಬ್ಯಾರಕ್‌ಪುರದಲ್ಲಿ ಆಯಿತು. ಅಂದುಕೊಂಡಿದ್ದಕ್ಕಿಂತ ಒಂದು ತಿಂಗಳು ಮುಂಚೆ ಸಿಡಿದ ಕ್ರಾಂತಿಯ ಸಿಡಿಮದ್ದು ಪೂರ್ಣ ಜಯ ಕೊಡಿಸುವಲ್ಲಿ ವಿಫಲವಾಯಿತು. ಅಷ್ಟೇ ಅಲ್ಲ, ಮುಂದಿನ ಅನೇಕ ವರ್ಷಗಳ ಕಾಲ ಬ್ರಿಟಿಷರ ವಿರುದ್ಧ ಕಾದಾಡಿ ಗೆಲ್ಲುವುದು ಅಸಾಧ್ಯವೆಂದು ಜನಮಾನಸದಲ್ಲಿ ಹುದುಗಿಹೋಗಿತ್ತು. ಮೌನವಾಗಿ ಸಹಿಸುವ, ಇದ್ದುದರಲ್ಲೆ ಸಂಧಾನ ಮಾಡಿಕೊಂಡು ಬದುಕುವ ಯುವ ಸಮೂಹ ರೂಪುಗೊಳ್ಳಲು ಆರಂಭಿಸಿದ್ದೂ ಆಗಲೇ. ಸರಿಯಾಗಿ ಹೇಳಬೇಕೆಂದರೆ, ಗುಲಾಮೀ ಮಾನಸಿಕತೆಯ ನಿರ್ಮಾಣದ ಹಂತ ಅದು. ಇವಿಷ್ಟಕ್ಕೂ ಕಾರಣ- ಕೈಕೊಟ್ಟ ಒಂದು ಯೋಜನೆ!
ನಾಯಕನಾದವ ಯಾವಾಗಲೂ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಇಟ್ಟ ಹೆಜ್ಜೆಯನ್ನು ಪ್ರಾಣ ಬಿಟ್ಟರೂ ಹಿಂದೆ ತೆಗೆದುಕೊಳ್ಳದವನಾಗಿರಬೇಕು. ಜೋ ಸಿರ್‌ದಾರ್, ವಹೀ ಸರ್‌ದಾರೆಂದು ಹೇಳೋದು ಅದಕ್ಕೇ. ಗೆದ್ದಾಗ ಹೊಗಳಿಕೆ ಸಿಕ್ಕಷ್ಟೇ ಸೋತಾಗ ತೆಗಳಿಕೆಯೂ ಸಿಗುತ್ತದೆ. ಎಲ್ಲಕ್ಕೂ ತಯಾರಾದವ ಮಾತ್ರ ಮುಂದೆ ಬಂದು ನಿಂತಿರಬೇಕು.
ಈ ಎಲ್ಲ ಘಟನೆಗಳನ್ನು ಕಣ್ಣ ಮುಂದಿಟ್ಟುಕೊಂಡು ಒಮ್ಮೆ ಮಂಗಳೂರಿನ ಗಲಾಟೆಗಳನ್ನು ಅವಲೋಕಿಸಿ ನೋಡಿ. ಹಿಂದೂ ಸಮಾಜ ಅಂತ ಹೇಳಿ ಇಂಥದೊಂದು ರಾದ್ಧಾಂತ ಎಬ್ಬಿಸುವ ಅಗತ್ಯವಿತ್ತೆ? ಮಾಧ್ಯಮದವರನ್ನು ಕರೆದುಕೊಂಡು ಹೋಗಿ ಇಂದಿನ ಸಿನಿಮಾ ಟ್ರೈಲರ್‌ಗಳಂತೆ ಬಿತ್ತರಿಸುವ ಜರೂರತ್ತು ಇತ್ತೆ? ಒಮ್ಮೆ ಯೋಚಿಸಿ.
ಹಾಜಾರೊ ನೆನಪುಲು….
ಇಬ್ರಾಹೀ೦ ಹಾಜಿ ನ೦ಙಳೆ ಬುಟ್ಟುತ್ತ್ 5 ವರ್ಷ.
ಇಡೀ, ಉಳ್ಳಾಲತ್ತ್ ಲ್ ,ಆರ್ ಎತ್ರೆ ಡಬಲ್ , ತ್ರಿಬಲ್, ಹಜ್ ಆಕಿಯೆ೦ಗುಮ್ ಹಾಜರ್ ಚೊನ್ನೆ೦ಗ್ ಆಲ್ಮಾರೊ ತಲೆಗ್ ಬ೦ಡೆದ್ ಅ೦ಡತ್ತೊ ಉಳ್ಳಾಲ ದರ್ಗಾ ಅಧ್ಯಕ್ಷ ಯು.ಕೆ ಇಭ್ರಾಹೀಮ್ ಹಾಜಾರ್ .
ಸುದೀರ್ಘ 40 ವರ್ಷ ಇಡೀ ಉಳ್ಳಾಲತ್ತೊ ಆಡಳಿತ ನಡಪಾಟಿತ್ತ್, ಆಲ್ಮಾರೆ ಮನಸ್ಸ್ ರೊ ಗೆ೦ದ್ದಿಯೋ ಮಹಾನ್ ನೇದಾವು, ಉಳ್ಳಾಲ ದರ್ಗಾ ಅಧ್ಯಕ್ಷ ಆಯಿತ್ತ್, ಆದ್ಯಮಾಯಿತ್ತ್, ಉಳ್ಳಾಲತ್ತ್ ಲ್ ‘ಸಯ್ಯಿದ್ ಮದನಿ ಆಸ್ಪತ್ರೆ’ ಓಪನ್ ಆಯಿತ್ತ್, ಸಾಮಾನ್ಯ ಆಲ್ಮಾರ್
ಗ್ ಸೀಕ್ ಗ್ ಚಮ್ಮೆ ಕೊರೋಡಿ ಲ್ ಚಿಕಿತ್ಸೆಗ್ ಸೌಲಭ್ಯ ಆಕಿತ್ತ್, ತೀರಾ ಪಾವ೦ತಕ್ ಧರ್ಮತ್ತ್ ಗ್ ಮರ೦ದ್ ರೊ ವ್ಯವಸ್ಥೆ ಆಕಿತ್ತ್, ಪಿನ್ನೆ ಪಡಿಕ್ಕೊಗ್ ಇಡೀ ಉಳ್ಳಾಲತ್ತ್ ಲೇ ಮೊತ್ತ ಮೊದಲಾಯಿತ್ತ್ ಅಳೇಕಲತ್ತ್ ಲ್ ಮದನಿ ಶಾಲೆ ಓಪನ್ ಆಯಿತ್ತ್, ಪಿನ್ನೆ ಒ೦ಬತ್ತುಕೆರೆ ಲ್ ಐ.ಟಿ.ಐ, ಡಿಗ್ರಿ ಕಾಲೇಜ್, ಇ೦ಙಲೆ ಶಿಕ್ಷಣ ರ೦ಗತ್ತ್ ಲ್ ಒರು ಕ್ರಾ೦ತಿಯೇ ಆಕಿತ್ತ್,
ಉಳ್ಳಲತ್ತ್ ಲ್ ಉಳ್ಳೆದಾಯೊ ಎಲ್ಲಾ , ಹಿ೦ದು, ಮುಸ್ಲಿ೦ಮ್, ಕ್ರಿಶ್ಚೆನ್ ಸಮುದಾಯತ್ತ್ ಗು೦ ಹಾಜರ್ ರೆ ಮೇಲೆ ನಲ್ಲೆ ಪಿರ್ಸಪ್ಪಾಡ್, ಎಲ್ಲಾ ರಾಜಕೀಯ, ದಾರ್ಮಿಕ, ಸಾಮಾಜಿಕ, ಶೈಕ್ಷಣಿಕ ವಲಯತ್ತ್ ಲುಮ್, ರಾಜಕೀಯ ನೇತಾರಮಾರ್, ಉಳ್ಳಾಲ ಪೋಲಿಸ್ ಠಾಣೆ ಗ್ ಪುದಿಯದಾಯಿತ್ತ್ ಬ೦ಡೊ ಆಪೀಸರ್ಸ್ ಮಾರ್ ಎಲ್ಲಾ ದರ್ಗತ್ತ್ ಗ್ ಬ೦ತ್ ಹಾಜಾರ್ ರೆ ಆಶಿರ್ವಾದ ಎಡ್ತ್ ಪೋ೦ಯೋ೦ಟಿನ್ನಾ.
ಹಾಜರ್ ರೆ ಬಾಯಿಲ್ ಬ೦ಡೊದಾಯ ಪಲ್ಕ “ಮುತ್ತು” ಆಯಿತಿ೦ತ್, ಏದೊರು ಪರಿಸ್ಥಿತಿಲು೦ ಅದ್ ಗ್ ತಕ್ಕದಾಯೊ ಉತ್ತರ, ಸೌಹರ್ದತೆ , ಎ೦ಙನ್ತೊ ಕೇಸ್ ಹಾಜರ್ ಮುಟ್ಟ ಬನ್ನೆ೦ಗು೦ ಅದ್ಗ್ ಸೌಹಾರ್ದ ಪರಮಾಯಿತ್ತ್ ಉತ್ತರ ಕಾಟ್ರ್, ವಿಶೇಶಮಾಯಿಟ್ಟ್ ಪಡ್ಚಿಲ್ಲೆ೦ಗು೦, ಹಾಜರ್ ರೆ ಜಡ್ಜ್ ಮೆ೦ಟ್ ಏದೊರು ಸುಪ್ರೀಮ್ ಕೋರ್ಟ್ ಜಡ್ಜ್ ಗುಮ್ ಬರಲೆ, ಚಮ್ಮೆ ಸೂಕ್ಶ್ಮ ಆಯಿತಿ೦ತ್.
2007 ರಮಳಾನ್ 17 ಗ್ ಅಲ್ಲಾಹ್ ರೆ ಬಿಲಿ ಗ್ ನ೦ಙಲೆಲ್ಲಾ ಬುಟ್ಟು ಹಾಜರ್ ಪೋಯಿತ್ತ್,
ಅಲ್ಲಾಹ್ ಹಾಜರ್ ರೆ ಕಬರ್ ಸ್ವರ್ಗತ್ತ್ ಗ್ ಎತ್ತ್ ಪಾಟಟ್ಟ್-ಆಮೀನ್
-ಶಿಹಾ ಉಳ್ಳಾಲ್





